Tag: thief

  • ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    ಲಕ್ನೋ: ತಾಯಿಯ ಪಕ್ಕದಲ್ಲಿ ಮಲಗಿದ್ದ 7 ತಿಂಗಳ ಮಗುವನ್ನು ವ್ಯಕ್ತಿಯೋರ್ವ ಅಪರಿಸಿರುವ ಘಟನೆ ಮಥುರಾ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ನಡೆದಿದೆ.

    ಈ ಘಟನೆಯ ವೀಡಿಯೋ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಎಸ್ಕೇಪ್ ಆಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ ವ್ಯಕ್ತಿ ಒಂದೆರಡು ಬಾರಿ ಸುತ್ತಲೂ ಓಡಾಡಿದ್ದಾನೆ. ನಂತರ ಮತ್ತೆ ಹಿಂದಿರುಗಿ ಬಂದು ಮಗುವನ್ನು ನಿಧನವಾಗಿ ಎತ್ತಿಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ.

    ಇದೀಗ ನಾಪತ್ತೆಯಾಗಿರುವ ಮಗುವನ್ನು ಪತ್ತೆ ಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಮಥುರಾ ಜೆಎನ್‍ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿರುವುದಾಗಿ ಮಥುರಾ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

    ಪೊಲೀಸರು ಆರೋಪಿಯ ಫೋಟೋವನ್ನು ಸಹ ಬಿಡುಗಡೆ ಮಾಡಿದ್ದು, ಆತನ ಬಗ್ಗೆ ಮಾಹಿತಿ ಗೊತ್ತಾದರೆ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಥುರಾ ಜೊತೆಗೆ ಉತ್ತರ ಪ್ರದೇಶದ ಅಲಿಗಢ್ ಮತ್ತು ಹತ್ರಾಸ್‍ನಲ್ಲಿ ರೈಲ್ವೇ ಪೊಲೀಸರ ತಂಡಗಳು ಕೂಡ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 3 ಗಂಟೆಗಳ ಕಾಲ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ವಾಪಸ್ ಕೇಳಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಮೊಬೈಲ್ ವಾಪಸ್ ಕೇಳಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಹಾಸನ: ಮೊಬೈಲ್ ವಾಪಸ್ ಕೇಳಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಆಟೋ ಚಾಲಕ ಅಶ್ವಥ್ ತೀವ್ರ ಹಲ್ಲೆಗೊಳಗಾದ ಯುವಕ. ಈತ ಬೆಂಗಳೂರಿನಲ್ಲಿ ಆಟೋ ಓಡಿಸುವಾಗ ಅಪರಿಚಿತ ವ್ಯಕ್ತಿಯಿಂದ 2 ಸಾವಿರ ರೂ.ಗೆ ಮೊಬೈಲ್ ಖರೀದಿಸಿದ್ದ. ನಂತರ ಅದೇ ಮೊಬೈಲ್‍ ಅನ್ನು ತನ್ನ ಸ್ನೇಹಿತ ಸಚಿನ್‍ಗೆ 15 ಸಾವಿರಕ್ಕೆ ಅಶ್ವಥ್ ಮಾರಾಟ ಮಾಡಿದ್ದ.

    ಆದರೆ ಮಾರಾಟ ಮಾಡಿದ ಅಪರಿಚಿತ ಯುವಕ ತಾನು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ಮೊಬೈಲ್ ಕದ್ದು ತನಗೆ ನೀಡಿದ್ದಾನೆ ಎನ್ನುವ ವಿಷಯ ಆ ನಂತರದಲ್ಲಿ ಅಶ್ವಥ್‌ಗೆ ತಿಳಿದಿದೆ. ಘಟನೆಯ ಸಂಬಂಧ ಅಪರಿಚಿತ ವ್ಯಕ್ತಿಯ ಬಳಿ ಕೇಳಲು ಆತ ಊರಿಗೆ ಹೋಗಿದ್ದ. ಇದನ್ನೂ ಓದಿ: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ: ಮಾಧುಸ್ವಾಮಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

    ಅಷ್ಟೇ ಅಲ್ಲದೇ, ಮೊಬೈಲ್ ಮಾಲೀಕ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮೊಬೈಲ್ ತಂದು ಕೊಡುವಂತೆ ಅಶ್ವಥ್‍ಗೆ ಕರೆ ಮಾಡಿದ್ದಾರೆ. ತಕ್ಷಣ ಅಶ್ವಥ್ ಮೊಬೈಲ್ ಖರೀದಿಸಿ, ಮಾರಾಟ ಮಾಡಿರುವ ವಿಚಾರವನ್ನು ಪೊಲೀಸರಿಗೆ ಹೇಳಿ ಮೊಬೈಲ್ ವಾಪಸ್ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಚಿನ್‍ಗೆ ಅಶ್ವಥ್ ಫೋನ್ ಮಾಡಿ ಹಣ ವಾಪಸ್ ನೀಡುತ್ತೇನೆ ಮೊಬೈಲ್ ವಾಪಸ್ ಕೊಡುವಂತೆ ಕೇಳಿದ್ದಾನೆ. ಆದರೆ ಸಚಿನ್ ಮೊಬೈಲ್ ಕೊಡದೆ ಸತಾಯಿಸಿದ್ದಾನೆ.

    POLICE JEEP

    ಅಶ್ವಥ್ ಪದೇ ಪದೇ ಫೋನ್ ಮಾಡುತ್ತಿದ್ದರಿಂದ ಕೋಪಗೊಂಡ ಸಚಿನ್ ಮೊಬೈಲ್ ಕೊಡುವುದಾಗಿ ಅಶ್ವಥ್‍ನನ್ನು ಚನ್ನರಾಯಪಟ್ಟಣಕ್ಕೆ ಕರೆಸಿಕೊಂಡಿದ್ದಾನೆ. ತನ್ನ ಐವರು ಸ್ನೇಹಿತರೊಂದಿಗೆ ಅಶ್ವಥ್‍ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಮುಖ ಹಾಗೂ ಕಣ್ಣಿನ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಇದನ್ನೂ ಓದಿ: ಜಮ್ಮುವಿನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಶವವಾಗಿ ಪತ್ತೆ!

    ಅಶ್ವಥ್ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ಕಣ್ಣು ಕಾಣದಂತಾಗಿದೆ. ನನ್ನ ಮೇಲೆ ವಿನಾಃಕಾರಣ ಹಲ್ಲೆ ಮಾಡಿದ್ದು ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಅಶ್ವಥ್ ಒತ್ತಾಯಿಸಿದ್ದೇನೆ. ಘಟನೆ ಸಂಬಂಧಿಸಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗೋಡಾನ್‍ನಿಂದ ಬರೋಬ್ಬರಿ 17 ಲಕ್ಷ ಮೌಲ್ಯದ ಚಾಕ್ಲೇಟ್ ಬಾರ್‌ಗಳನ್ನು ಕದ್ದ ಖದೀಮರು!

    ಗೋಡಾನ್‍ನಿಂದ ಬರೋಬ್ಬರಿ 17 ಲಕ್ಷ ಮೌಲ್ಯದ ಚಾಕ್ಲೇಟ್ ಬಾರ್‌ಗಳನ್ನು ಕದ್ದ ಖದೀಮರು!

    ಲಕ್ನೋ: ಪ್ರಸಿದ್ಧ ಬ್ರಾಂಡ್‍ನ ಸುಮಾರು 17 ಲಕ್ಷ ಮೌಲ್ಯದ ಚಾಕ್ಲೆಟ್ ಬಾರ್‍ಗಳನ್ನು ಖದೀಮರು ರಾತ್ರೋರಾತ್ರಿ ಗೋಡಾನ್‍ನಿಂದ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಲಕ್ನೋದ ಚಿನ್ ಹಾಟ್ ಪ್ರದೇಶದಲ್ಲಿ ನಡೆದಿದೆ. ಈ ಚಾಕ್ಲೆಟ್ ಗೋಡಾನ್ ಬಹುರಾಷ್ಟ್ರೀಯ ಚಾಕ್ಲೇಟ್ ವಿತರಕರಾಗಿರುವ ಉದ್ಯಮಿ ರಾಜೇಂದ್ರ ಸಿಂಗ್ ಸಿಧು ಅವರಿಗೆ ಸೇರಿದ್ದಾಗಿದೆ.

    ಕಳ್ಳರು ಸುಮಾರು 150 ಕಾರ್ಟನ್‍ (ಬಾಕ್ಸ್) ಚಾಕ್ಲೇಟ್ ಬಾರ್ ಗಳ ಜೊತೆಗೆ ಕೆಲವು ಬಿಸ್ಕೆಟ್ ಬಾಕ್ಸ್ ಗಳನ್ನು ಕೂಡ ಕದ್ದಿದ್ದಾರೆ. ಈ ಸಂಬಂಧ ಸಿಧು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ಅದರಲ್ಲಿ ತಾನು ಇತ್ತೀಚೆಗೆ ಚಿನ್‍ಹಟ್‍ನಲ್ಲಿರುವ ತಮ್ಮ ಹಳೆಯ ಮನೆಯಿಂದ ಗೋಮತಿ ನಗರದ ವಿಭೂತಿ ಖಂಡ್‍ನಲ್ಲಿರುವ ಅಪಾರ್ಟ್‍ಮೆಂಟ್‍ಗೆ ಸ್ಥಳಾಂತರಗೊಂಡಿರುವುದಾಗಿ ತಿಳಿಸಿದ್ದಾರೆ.

    ತನ್ನ ಹಳೆಯ ಮನೆಯನ್ನು ಚಾಕ್ಲೇಟ್ ವಿರತಣೆಯ ಗೋಡಾನ್ ಆಗಿ ಪರಿವರ್ತನೆ ಮಾಡಿದ್ದೇನೆ. ಮಂಗಳವಾರ ಸ್ಥಳೀಯರು ಕರೆ ಮಾಡಿ, ಗೋಡಾನ್ ಬಾಗಿಲು ಒಡೆದು ಯಾರೋ ಒಳಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆ ಕೂಡಲೇ ನಾನು ಸ್ಥಳಕ್ಕೆ ತೆರಳಿದೆ. ಈ ವೇಳೆ ಇಡೀ ಗೋಡಾನ್ ಖಾಲಿಯಾಗಿರುವುದನ್ನು ನೋಡಿ ದಂಗಾದೆ. ಇನ್ನೊಂದು ವಿಚಾರ ಅಂದ್ರೆ ಕಳ್ಳರು ಬರೀ ಚಾಕ್ಲೇಟ್ ಮಾತ್ರವಲ್ಲದೆ ಸಿಸಿಟಿವಿ ವೀಡಿಯೋ ರೆಕಾರ್ಡರ್ ಕೂಡ ಹೊತ್ತೊಯ್ದಿದ್ದಾರೆ ಎಂದು ಸಿಧು ಪೊಲೀಸರ ಬಳಿ ಹೇಳಿದ್ದಾರೆ.

    POLICE JEEP

    ಈ ಸಂಬಂಧ ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, ರಾತ್ರಿ ಒಂದು ಟ್ರಕ್ ಬಂದಿತ್ತು. ಆದರೆ ನಾವು ಸ್ಟಾಕ್ ತೆಗೆದುಕೊಂಡು ಹೋಗಲು ಟ್ರಕ್ ಬಂದಿದೆ ಅಂತ ಅಂದುಕೊಂಡಿದ್ದೆವು. ಆದರೆ ಕಳ್ಳರೇ ಟ್ರಕ್ ತಂದು ಸ್ಟಾಕ್ ಕದ್ದಿರುವುದಾಗಿ ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಕಳ್ಖರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಧುಗೆ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟ್ರ್ಯಾಕ್ಟರ್ ಕಳ್ಳನೆಂದು ತಿಳಿದು ಬಡ ತರಕಾರಿ ವ್ಯಾಪಾರಿಯನ್ನು ಕೊಂದ್ರು

    ಟ್ರ್ಯಾಕ್ಟರ್ ಕಳ್ಳನೆಂದು ತಿಳಿದು ಬಡ ತರಕಾರಿ ವ್ಯಾಪಾರಿಯನ್ನು ಕೊಂದ್ರು

    ಜೈಪುರ: ತರಕಾರಿ ವ್ಯಾಪಾರಿಯೋರ್ವನನ್ನು ಕಳ್ಳನೆಂದು ತಿಳಿದ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರಂಜಿ ಸೈನಿ(45) ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಾಗಿದ್ದನು. ಅವನನ್ನು ಅಲ್ಲಿನ ಗುಂಪೊಂದು ಕಳ್ಳ ಎಂದು ಭಾವಿಸಿದೆ.

    CRIME 2

    ಚಿರಂಜಿ ಹೋಗುತ್ತಿದ್ದಾಗ ಹತ್ತಕ್ಕೂ ಹೆಚ್ಚು ಜನರು ಆತನ ಮೇಲೆ ಹಲ್ಲೆ ನಡೆಸಿ, ಆತನನ್ನು ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಿರಂಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆಯೇನು?: ರಾಂಬಾಸ್ ಗ್ರಾಮದಲ್ಲಿ ಟ್ರ್ಯಾಕ್ಟರ್‌ನ್ನು ಕೆಲ ಕಳ್ಳರು ಕದ್ದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಸದರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಆ ಕಳ್ಳರನ್ನು ಬೆನ್ನಟ್ಟಿದ್ದಾರೆ. ಆದರೆ ಆ ಕಳ್ಳರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.

    crime

    ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ತರಕಾರಿ ವ್ಯಾಪಾರಿ ಚಿರಂಜಿಯನ್ನು ಕಳ್ಳನೆಂದು ಟ್ರ್ಯಾಕ್ಟರ್ ಮಾಲೀಕ ತಪ್ಪಾಗಿ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಹಾಗೂ ಅವರ ಕಡೆಯವರು ಆ ತರಕಾರಿ ವ್ಯಾಪಾರಿಯನ್ನು ಮನ ಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    POLICE JEEP

    ಇದೇ ಸಂದರ್ಭಕ್ಕೆ ಅಲ್ಲಿಗೆ ಪೊಲೀಸರು ಬಂದಿದ್ದು, ಆತ ಕಳ್ಳನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಮಂದಿಯಿಂದ ಅತ್ಯಾಚಾರ

    ಘಟನೆ ಸಂಬಂಧಿಸಿ ಮೃತನ ಪುತ್ರ ಯೋಗೇಶ್ ಸೈನಿ ಗೋವಿಂದಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ತಂದೆಯ ಸಾವಿಗೆ ಟ್ರ್ಯಾಕ್ಟರ್ ಮಾಲೀಕನೇ ಕಾರಣ ಎಂದು ಆರೋಪಿಸಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ

    ದೇವಸ್ಥಾನದ ಹಣ ಕದಿಯುವುದಕ್ಕೂ ಮುನ್ನ ದೇವಿ ವಿಗ್ರಹಕ್ಕೆ ನಮಸ್ಕರಿಸಿದ ಅರೆನಗ್ನ ಕಳ್ಳ

    ಭೋಪಾಲ್: ದೇವಸ್ಥಾನದಲ್ಲಿದ್ದ ಹುಂಡಿ ಹಣವನ್ನು ಕದಿಯಲು ಬಂದಿದ್ದ ಕಳ್ಳನೊಬ್ಬ ಅಪರಾಧ ಮಾಡುವುದಕ್ಕೂ ಮುನ್ನ ಗರ್ಭಗುಡಿಯನ್ನು ಪ್ರವೇಶಿಸಿ ದೇವರಿಗೆ ನಮಸ್ಕರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಧ್ಯಪ್ರದೇಶದ ಜಬಲ್‍ಪುರದ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕಳ್ಳನ ಪ್ರತಿಯೊಂದು ಕೈಚಳಕವು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    CRIME 2

    ಶರ್ಟ್ ಧರಿಸದೇ ಮುಖಕ್ಕೆ ಮುಸುಕನ್ನು ಹಾಕಿಕೊಂಡಿದ್ದ ಕಳ್ಳನೊಬ್ಬ ಕಳ್ಳತನ ಮಾಡುವುದಕ್ಕೂ ಮುನ್ನ ಗರ್ಭಗುಡಿಯನ್ನು ಪ್ರವೇಶಿಸಿ ದೇವತೆಯ ಮುಂದೆ ನಿಂತು ನಮಸ್ಕರಿಸಿದ್ದಾನೆ. ಅಷ್ಟೇ ಅಲ್ಲದೇ ಆ ದೇವಿಯ ಪ್ರತಿಮೆಯನ್ನು ನೋಡಿ ಕೆಲಕಾಲ ಆಶ್ಚರ್ಯಚಕಿತನಾಗಿ ಅಲ್ಲೇ ನಿಂತಿದ್ದಾನೆ. ಇದಾದ ಬಳಿಕ ದೇವಾಲಯದಲ್ಲಿರುವ ನಗದು ಸೇರಿದಂತೆ ಬೆಳ್ಳಿ, ಚಿನ್ನವನ್ನು ಕದ್ದಿದ್ದಾನೆ. ಇದನ್ನೂ ಓದಿ: ಆ. 15ರವರೆಗೆ ಟಿಕೆಟ್ ಬುಕ್ ಆಗಿದ್ದವರಿಗೆ ಮಾತ್ರ ತಿರುಪತಿ ದರ್ಶನ

    ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಳ್ಳನ ಕಾರ್ಯ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ಘಟನೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಸೀದಿ, ಮದರಸಾದಲ್ಲಿ ಸಂವಿಧಾನ ಓದುವ ಅಭಿಯಾನ ಆರಂಭ!

    Live Tv
    [brid partner=56869869 player=32851 video=960834 autoplay=true]

  • ರಂಗೋಲಿ ಹಾಕುತ್ತಿದ್ದ ಮಹಿಳೆ ಸರ ಕಿತ್ತೊಯ್ದ ಕಳ್ಳ

    ರಂಗೋಲಿ ಹಾಕುತ್ತಿದ್ದ ಮಹಿಳೆ ಸರ ಕಿತ್ತೊಯ್ದ ಕಳ್ಳ

    ಹಾಸನ: ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯ ಕತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಕಳ್ಳ ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ, ಅಕ್ಕಿ ಕುರುಬರ ಬೀದಿಯಲ್ಲಿ ಇಂದು ನಡೆದಿದೆ.

    ಬೆಳಗ್ಗೆ 6.30ರ ಸಮಯದಲ್ಲಿ ಸರಸ್ವತಿ ಎಂಬವರು ರಂಗೋಲಿ ಹಾಕುವಾಗ, ಕೆಲ ಹೊತ್ತು ಹೊಂಚು ಹಾಕಿಕೊಂಡು ಹೆಲ್ಮೆಟ್ ಧರಿಸಿ ಖದೀಮ ಬಂದಿದ್ದಾನೆ. ಆತನನ್ನು ನೋಡಿದ ಸರಸ್ವತಿ ಸುಮ್ಮನಾಗಿ ರಂಗೋಲಿ ಬಿಡುವುದನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಬೈಕ್‍ನಿಂದಲೇ ಕೇಕ್ ಕಟ್‌ ಮಾಡಿಸಿ – ಗೆಳೆಯರಿಗೆ ಬಿಂದಾಸ್ ಪಾರ್ಟಿ ಕೊಟ್ಟ

    ಈ ವೇಳೆ ಹಿಂದೆಯಿಂದ ಬಂದು ಏಕಾಏಕಿ ಸರಸ್ವತಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕೀಳಲು ಯತ್ನಿಸಿದ್ದಾನೆ. ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಬಿಟ್ಟಿಲ್ಲ. ಮಹಿಳೆ ಕಿರಿಚಾಡುತ್ತಿದ್ದಂತೆ ರಂಗೋಲಿಯನ್ನು ಮುಖದ ಮೇಲೆ ಎರಚಿ 40 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಬೈಕ್‍ನಲ್ಲಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ಕಳ್ಳ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಹೊಳೆನರಸೀಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕನೇ ಬಾರಿ ದೇವಾಲಯದ ಹುಂಡಿ ಒಡೆದು ಕಳ್ಳತನ – ಲಕ್ಷಾಂತರ ರೂ., ಚಿನ್ನ ಕಳೆದುಕೊಂಡ ಲಕ್ಷ್ಮೀನರಸಿಂಹಸ್ವಾಮಿ

    ನಾಲ್ಕನೇ ಬಾರಿ ದೇವಾಲಯದ ಹುಂಡಿ ಒಡೆದು ಕಳ್ಳತನ – ಲಕ್ಷಾಂತರ ರೂ., ಚಿನ್ನ ಕಳೆದುಕೊಂಡ ಲಕ್ಷ್ಮೀನರಸಿಂಹಸ್ವಾಮಿ

    ಚಿಕ್ಕಬಳ್ಳಾಪುರ: ತಾಲೂಕಿನ ಬಾರ್ಲಹಳ್ಳಿ ಗ್ರಾಮದ ಶ್ರೀ ಜಾಲಾರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಕಳ್ಳರ ಕಾಟ ಎದುರಾಗಿದೆ. ದೇವಾಲಯದಲ್ಲಿ ಸತತ ನಾಲ್ಕನೇ ಬಾರಿ ಕಳ್ಳರು ದೇವಾಲಯದ ಹುಂಡಿ ಒಡೆದು ಹಣ ಕದ್ದು ಪರಾರಿಯಾಗಿದ್ದಾರೆ.

    ಜನ ತಮ್ಮ ಕಷ್ಟಗಳನ್ನ ದೇವರು ಪರಿಹರಿಸುತ್ತಾರೆ ಎಂದು ದೇವಾಲಯಕ್ಕೆ ಹೋಗ್ತಾರೆ, ಭಕ್ತಿ ಭಾವದಿಂದ ಪೂಜೆ ಪುನಸ್ಕಾರ ಮಾಡಿ, ದೇವರಿಗೆ ಹರಕೆ ಹೊತ್ತು ಹುಂಡಿಗೆ ಕಾಣಿಕೆ ಹಾಕುತ್ತಾರೆ. ಆದ್ರೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಆ ಭಗವಂತನಿಗೆ ಕಷ್ಟಗಳು ಬಂದೊದಗಿದೆ. ಶ್ರೀ ಜಾಲಾರಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲೆ ನಿರಂತರ ಕಳ್ಳರು ದಾಳಿಮಾಡುತ್ತಿದ್ದು, ಭಕ್ತರನ್ನು ಕಾಪಾಡುವ ದೇವರಿಗೆ ರಕ್ಷಣೆ ಇಲ್ಲದಂತಾಗಿದೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಅಗಲಿ 9ನೇ ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

    ಚಿಕ್ಕಬಳ್ಳಾಪುರ ತಾಲೂಕಿನ ಬಾರ್ಲಹಳ್ಳಿ ಬಳಿಯ ಕಾಡಂಚಿನ ಬೆಟ್ಟದಲ್ಲಿ ನೆಲಸಿರುವ ಶ್ರೀ ಯೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿಕೊಂಡು ಹುಂಡಿಗೆ ಹಣ ಹಾಕ್ತಿದ್ದಾರೆ. ಆದ್ರೆ ಈ ದೇವಾಲಯವನ್ನೇ ಟಾರ್ಗೆಟ್ ಮಾಡಿರುವ ಖದೀಮರು ಒಂದಲ್ಲ ಎರಡಲ್ಲ ಸತತ 4 ಬಾರಿ ದೇವಾಲಯಕ್ಕೆ ನುಗ್ಗಿ ಹುಂಡಿ ಒಡೆದು ಹುಂಡಿಯಲ್ಲಿದ್ದ ಹಣ ಹಾಗೂ ದೇವರ ಒಡವೆಗಳನ್ನು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪತ್ತೆ!

    ಈ ಹಿಂದೆಯೂ ಸಹ ಮೂರು ಬಾರಿ ಕಳ್ಳತನ ಆಗಿ ಲಕ್ಷಾಂತರ ರೂಪಾಯಿ ಭಕ್ತರ ಕಾಣಿಕೆ ಹಣ ಕಳ್ಳರ ಪಾಲಾಗಿತ್ತು. ಪ್ರತಿ ಬಾರಿ ಕಳ್ಳರು ಕನ್ನ ಹಾಕಿದಾಗಲೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಈಗ ಇದು 4ನೇ ಬಾರಿ ದೇವಾಲಯದಲ್ಲಿ ಕಳ್ಳತನ ಆಗಿದ್ದು ಹುಂಡಿ ಒಡೆದು ಹಣ ದೋಚಿದ್ದು ಭಕ್ತರ ಬೇಸರಕ್ಕೆ ಕಾರಣವಾಗಿದೆ. ದೇವಾಲಯದ ಅಭಿವೃದ್ದಿಗೆಂದು ಜನ ದೇವರ ಕಾರ್ಯಗಳಿಗೆ ಉಪಯೋಗವಾಗಲಿ ಎಂದು ಭಕ್ತರು ಹುಂಡಿಗೆ ಹಣ ಹಾಕಿದ್ರೆ ಇದು ಕಳ್ಳರ ಪಾಲಾಗುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆ ಚಿಕ್ಕಬಳ್ಳಾಪುರ ತಾಲೂಕು ಆಡಳಿತ ಸುಪರ್ದಿಯ ದೇವಾಲಯದಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದರ ಜೊತೆಗೆ ಸೂಕ್ತ ರಕ್ಷಣಾ ಬಂದೋಬಸ್ತ್ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಭಕ್ತರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕೋಳಿ ಕಳ್ಳ – ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ರು

    ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕೋಳಿ ಕಳ್ಳ – ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ರು

    ರಾಯಚೂರು: ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದಲ್ಲಿ ಕೋಳಿಗಳನ್ನ ಕದಿಯಲು ಬಂದಿದ್ದ ಕಳ್ಳನೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಪಜೀತಿ ಅನುಭವಿಸಿದ್ದಾನೆ. ಕೋಳಿ ಕದಿಯುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕ ಕಳ್ಳನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.

    ಕೋಳಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದರಲ್ಲಿಯೂ ಕದ್ದು ತಿನ್ನುವ ಕೋಳಿಯ ರುಚಿಯೇ ಬೇರೆ ಎಂಬ ಭಾವನೆ ಕೆಲವರಲ್ಲಿದೆ. ಸಿಟಿಗಿಂತಲೂ ಹಳ್ಳಿ ಕಡೆಗಳಲ್ಲಿ ಕೋಳಿಯನ್ನು ಕದ್ದು ಅಡುಗೆ ಮಾಡಿ ತಿನ್ನುವ ಖದೀಮರು ಬಹಳಷ್ಟು ಜನ ಇದ್ದಾರೆ. ಇನ್ನೂ ಕೆಲವು ಖದೀಮರು ಹಣಕ್ಕಾಗಿ ಕೋಳಿಯನ್ನು ಕದ್ದು, ಮಾರಾಟ ಮಾಡುತ್ತಾರೆ. ಸದ್ಯ ಇಂತಹದ್ದೇ ಪ್ರಯತ್ನಕ್ಕೆ ಕೈ ಹಾಕಿದ ವ್ಯಕ್ತಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ.  ಇದನ್ನೂ ಓದಿ: ಶಿವ ಭಕ್ತರ ಮೇಲೆ ಹೂಮಳೆ ಸುರಿಸುತ್ತೀರಿ, ಮುಸ್ಲಿಮರ ಮನೆಗಳಿಗೆ ಬುಲ್ಡೋಜರ್‌ ಬಿಡ್ತೀರಿ: ಯುಪಿ ಸರ್ಕಾರದ ವಿರುದ್ಧ ಓವೈಸಿ ಕಿಡಿ

    ರಾಜಾಸಾಬ್ ಅವರ ಮನೆಯಲ್ಲಿ ಕೋಳಿ ಕಳ್ಳತನ ಮಾಡಿದ್ದ ವ್ಯಕ್ತಿ. ಸುಮಾರು 10 ಕೋಳಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ. ಮೂವರು ಕಳ್ಳರಲ್ಲಿ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು ಇನ್ನಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೊಲೆಗೆ ಕೊಲೆ ಪ್ರತಿಕಾರವಲ್ಲ – ಸರ್ಕಾರ ಹೆಣದ ರಾಜಕೀಯ ಬಿಟ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲಿ: ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ರಾತ್ರಿ ಚಿನ್ನಾಭರಣ ಕಳವು ಮಾಡ್ದ, ಬೆಳಗ್ಗೆ ಕದ್ದ ಚಿನ್ನವನ್ನು ವಾಪಸ್‌ ತಂದಿಟ್ಟು ಹೋದ

    ರಾತ್ರಿ ಚಿನ್ನಾಭರಣ ಕಳವು ಮಾಡ್ದ, ಬೆಳಗ್ಗೆ ಕದ್ದ ಚಿನ್ನವನ್ನು ವಾಪಸ್‌ ತಂದಿಟ್ಟು ಹೋದ

    ಬೆಂಗಳೂರು: ರಾತ್ರಿ ಚಿನ್ನಾಭರಣ ಕಳವು ಮಾಡಿದ್ದ ಕಳ್ಳ, ಬೆಳಗ್ಗೆ ಕದ್ದ ಚಿನ್ನವನ್ನು ವಾಪಸು ತಂದಿಟ್ಟು ಹೋದ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಬಾಗಲೂರಿನಲ್ಲಿ ಅಪರೂಪದ ಘಟನೆ ನಡೆದಿದೆ. ಜು. 14ರಂದು ಭರತ್ ಎನ್ನುವವರ ಮನೆಯಲ್ಲಿ ಕಳ್ಳನೊಬ್ಬ 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದನು. ವಿಚಾರ ತಿಳಿದ ಮನೆಯವರು ಘಟನೆಗೆ ಸಂಬಂಧಿಸಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ರಾಜ್ಯದ ಜನರಿಗೆ ಕರೆಂಟ್ ಶಾಕ್ – ಜು. 1ರಿಂದ ವಿದ್ಯುತ್ ದರ ಏರಿಕೆ

    ದೂರು ನೀಡಿದ ಮಾರನೇ ದಿನವೇ ಆ ಕಳ್ಳ ಕದ್ದ ಚಿನ್ನಾಭರಣವನ್ನು ವಾಪಸು ತಂದು ಮನೆಯ ಬಳಿ ಇಟ್ಟು ಹೋಗಿದ್ದಾನೆ. ಮನೆ ಮಾಲೀಕರು ವಾಪಸ್‌ ಇಟ್ಟು ಹೋದ ಚಿನ್ನಾಭರಣವನ್ನು ನೋಡಿ ಖುಷಿಯಾಗಿದ್ದಾರೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

    Live Tv

  • ಚೈನ್ ಕೀಳಲು ಬಿಡದಿದ್ದಕ್ಕೆ ಕೆರೆಗೆ ತಳ್ಳಿದ ಕಳ್ಳ- ಮಹಿಳೆ ಸಾವು

    ಚೈನ್ ಕೀಳಲು ಬಿಡದಿದ್ದಕ್ಕೆ ಕೆರೆಗೆ ತಳ್ಳಿದ ಕಳ್ಳ- ಮಹಿಳೆ ಸಾವು

    ಹಾಸನ: ಚೈನ್ ಕೀಳಲು ಬಿಡದಿದ್ದಕ್ಕೆ ಮಹಿಳೆಯನ್ನು ಖದೀಮನೊಬ್ಬ ಕೆರೆಗೆ ತಳ್ಳಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ನೀಲ (50) ಮೃತ ಮಹಿಳೆ. ಹಾಸನ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ಕಾಲು ದಾರಿಯಲ್ಲಿ ಮನೆಗೆ ಬರುವ ವೇಳೆ ಈ ಘಟನೆ ನಡೆದಿದೆ.

    ನೀಲ ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ನೀಲ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿತ್ತುಕೊಂಡು ಹೋಗಲು ಬಿಡದಿದ್ದಾಗ ಆತ ಪಕ್ಕದಲ್ಲಿಯೇ ಇದ್ದ ಕೆರೆಗೆ ತಳ್ಳಿದ್ದಾನೆ. ಇದನ್ನೂ ಓದಿ: ಕಾವೇರಿ ನದಿಯಲ್ಲಿ ಅಕ್ರಮ ಮರಳುಗಾರಿಕೆ- ಲಾರಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

    ಕೆರೆಗೆ ಬಿದ್ದ ನೀಲ ಅವರು ಈಜಬಾರದೆ ಮೃತಪಟ್ಟಿದ್ದಾರೆ. ಇತ್ತ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಖದೀಮನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಎಸ್‍ಪಿ ಶ್ರೀನಿವಾಸ್‍ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Live Tv