ನವದೆಹಲಿ: ಕಳ್ಳನೊಬ್ಬ (Thief) ಲ್ಯಾಪ್ ಟಾಪ್ ಕದ್ದು, ಲ್ಯಾಪ್‍ಟಾಪ್‍ನಲ್ಲಿದ್ದ (Laptop) ಮಾಲೀಕನ ಇಮೇಲ್ ಐಡಿಯ ಮೂಲಕ ಕಳ್ಳತನ ಮಾಡಿರುವುದಕ್ಕೆ ಕ್ಷಮೆಯಾಚಿಸಿ ಮಾಲೀಕನಿಗೆ ಮೇಲ್ (Email) ಮಾಡಿರುವ ಘಟನೆ ನಡೆದಿದೆ.
ಝ್ವಾಲಿ ಟಿಕ್ಸೋ ಎಂಬಾತ ಈ ಇಮೇಲ್‍ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟ್ವೀಟ್ ಮಾಡಿದ್ದಾರೆ. ಕಳ್ಳನೊಬ್ಬ ನನ್ನ ಲ್ಯಾಪ್‍ಟಾಪ್‍ನ್ನು ಹಿಂದಿನ ರಾತ್ರಿ ಕಳವು ಮಾಡಿದ್ದ. ಆದರೆ ನನ್ನ ಇಮೇಲ್‍ನ್ನು ಬಳಸಿ ನನಗೆ ಮೇಲ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾನೆ.
ನೀವು ಕೆಲಸದಲ್ಲಿ ಬ್ಯುಸಿರುವುದನ್ನು ನಾನು ಗಮನಿಸಿದ್ದೆ. ಆ ಸಂದರ್ಭದಲ್ಲಿ ನಾನು ನಿಮ್ಮ ಲ್ಯಾಪ್‍ಟಾಪ್‍ನ್ನು ಕದ್ದೆ. ನಿಮಗೆ ಅಗತ್ಯವಿರುವ ಯಾವುದೇ ಫೈಲ್‍ಗಳಿದ್ದರೆ ದಯವಿಟ್ಟು ಸೋಮವಾರ 12 ಗಂಟೆಗೆ ಮೊದಲು ನನ್ನನ್ನು ಎಚ್ಚರಿಸಿ. ನಾನು ಆ ಫೈಲ್‍ನ್ನು ನಿಮಗೆ ಕಳುಹಿಸುತ್ತೇನೆ. ಏಕೆಂದರೆ ಈಗಾಗಲೇ ನಾನು ಲ್ಯಾಪ್‍ಟಾಪ್‍ನ್ನು ಮಾರಾಟ ಮಾಡಲು ಗ್ರಾಹಕನನ್ನು ಹುಡುಕಿದ್ದೇನೆ ಎಂದು ಬರೆದ ಆ ಕಳ್ಳ, ಲ್ಯಾಪ್‍ಟಾಪ್ ಕದ್ದಿರುವುದಕ್ಕೆ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾನೆ.
ಬೆಂಗಳೂರು: ಉಳ್ಳವರ ಮನೆಗೆ ಕನ್ನ ಹಾಕೋದು. ಕದ್ದ ಮಾಲಲ್ಲಿ ಮಂದಿರ, ಚರ್ಚ್‍ಗಳ ಹುಂಡಿಗೆ ಹಣ ಹಾಕೋದು. ಭಿಕ್ಷುಕರಿಗೆ ದಾನ ಧರ್ಮ ಮಾಡ್ತಿದ್ದ ಮಾಡರ್ನ್ ಕಳ್ಳನನ್ನು (Thief) ಬೆಂಗಳೂರಿನ (Bengaluru) ಮಡಿವಾಳ ಪೊಲೀಸರು (Police) ಬಂಧಿಸಿದ್ದಾರೆ.
ಜಾನ್ ಮೆಲ್ವಿನ್ ಅಲಿಯಾಸ್ ಮಾಡರ್ನ ರಾಬಿನ್‍ವುಡ್ ಬಂಧಿತ ವ್ಯಕ್ತಿ. ರಾಬಿನ್‍ವುಡ್ ಶೈಲಿಯಲ್ಲೇ ದೋಚಿದ ವಸ್ತುಗಳನ್ನು ಬಡ ಬಗ್ಗರಿಗೆ ಈತನೂ ದಾನ ಮಾಡುತ್ತಿದ್ದ. ಮಡಿವಾಳ ಲಿಮಿಟ್ಸ್‌ನಲ್ಲಿ ಕಾಂಟ್ರ್ಯಾಕ್ಟರ್ ಒಬ್ಬರ ಮನೆಗೆ ಕನ್ನ ಹಾಕಿ 8 ಲಕ್ಷ ನಗದು 2 ಲಕ್ಷದ ಚಿನ್ನಾಭರಣ ದೋಚಿದ್ದ. ಇದನ್ನೂ ಓದಿ: ಮಳವಳ್ಳಿ ಬಾಲಕಿಯ ರೇಪ್ & ಮರ್ಡರ್- ಆರೋಪಿ ವಿರುದ್ಧ 638 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
1990ರಿಂದಲೇ ಕಳ್ಳತನ ವೃತ್ತಿ ಮಾಡ್ಕೊಂಡಿದ್ದ ಈತನ ಮೇಲೆ 50ಕ್ಕೂ ಹೆಚ್ಚು ಕೇಸ್‍ಗಳಿವೆ. ಕದ್ದ ಹಣದಲ್ಲಿ ಸ್ವಲ್ಪ ಹಣವನ್ನು ದೇವಸ್ಥಾನ ಮತ್ತು ಚರ್ಚ್‍ಗಳ ಹುಂಡಿಗೆ ಹಾಕುತ್ತಿದ್ದ. ಭಿಕ್ಷುಕರಿಗೆ ನೀಡುತ್ತಿದ್ದ. ಸ್ವಂತ ನೆಲೆ ಇಲ್ಲದೆ ಫೋನ್ ಬಳಸದೆ, ಒಬ್ಬಂಟಿಯಾಗೇ ಮನೆಗಳಿಗೆ ಕನ್ನ ಹಾಕುವ ಈ ರಾಬಿನ್‍ವುಡ್‌ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮತ್ತೆ ರಾಬಿನ್‍ವುಡ್ ವಿರುದ್ಧ ಮೂರು ಕೇಸ್‌ಗಳು ದಾಖಲಾಗಿವೆ. ಇದನ್ನೂ ಓದಿ: ಬಿಜೆಪಿ ಗುಜರಾತ್‌ನ್ನು ಕಳೆದುಕೊಳ್ಳುತ್ತಿರುವುದೇ ವಾಟ್ಸಪ್ ಸ್ಥಗಿತಕ್ಕೆ ಕಾರಣ: ಎಎಪಿ ಶಾಸಕ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕಳ್ಳ ಮನೆಗೆ ನುಗ್ಗಿದ್ರೆ ಚಿನ್ನಾಭರಣ, ನಗದು ಅಥವಾ ಕೆಲ ವಸ್ತುಗಳನ್ನು ದೋಚೋದು ಕಾಮನ್. ಆದರೆ ಇಲ್ಲೊಬ್ಬ ಕಳ್ಳ (Thief) ಕಳ್ಳತನಕ್ಕೆಂದು ಬಂದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಇಂದಿರಾನಗರದಲ್ಲಿ ನಡೆದಿದೆ.
ದಿಲೀಪ್ ಬಹದ್ದೂರ್ ಮೃತ ವ್ಯಕ್ತಿ. ಈತ ಟೆಕ್ಕಿ (Software Engineer) ಫ್ಯಾಮಿಲಿಯೊಂದು ಯೂರೋಪ್ ಪ್ರವಾಸ ಹೋಗಿದ್ದಾಗ ಅವರ ಮನೆಗೆ ಹೋಗಿದ್ದ. ಅಲ್ಲೇ ಮುಂಜಾನೆಯಿಂದ ಸಂಜೆವರೆಗೂ ವಾಸ್ತವ್ಯ ಹೂಡಿದ್ದ. ಅಷ್ಟೇ ಅಲ್ಲದೇ ಬಾತ್ ರೂಮ್‍ನಲ್ಲಿ ಸ್ನಾನ ಮಾಡಿ ಇಡೀ ಮನೆಯನ್ನು ಸರ್ಚ್ ಮಾಡಿದ್ದಾನೆ. ಆದರೆ ಸಂಜೆ ಆಗುತ್ತಿದ್ದಂತೆ ಯುರೋಪ್ ಟ್ರಿಪ್ ಮುಗಿಸಿ ಟೆಕ್ಕಿ ಫ್ಯಾಮಿಲಿ ಮನೆಗೆ ಮರಳಿದ್ದಾರೆ. ಇದನ್ನೂ ಓದಿ: ಟೊಮೆಟೊ ಟೆಂಪೋ ಪಲ್ಟಿ- 300 ಬಾಕ್ಸ್ ಮಣ್ಣು ಪಾಲು
ಮನೆಯವರು ಮನೆಗೆ ಎಂಟ್ರಿ ಆಗುತ್ತಿದ್ದಂತೆ ದೇವರ ಕೋಣೆ ಮುಂದೆ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡು ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿಲೀಪ್ ಬಹದ್ದೂರ್ 2006ರಲ್ಲಿ ಜೀವನ್ ಭೀಮಾನಗರದಲ್ಲಿ ಕಳ್ಳತನ ಕೃತ್ಯದಲ್ಲಿ ಬಂಧಿಯಾಗಿದ್ದ. ಸದ್ಯ ಘಟನೆ ಕುರಿತು ಇಂದಿರಾನಗರ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೈವಗಳು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ ಅನ್ನೋದು ಸಿನಿಮಾದ ಸಂದೇಶ: ವೀರೇಂದ್ರ ಹೆಗ್ಗಡೆ
Live Tv
[brid partner=56869869 player=32851 video=960834 autoplay=true]
ಕಾರವಾರ: ಮಾಸ್ಟರ್ ಮೈಂಡ್ ಮೂಲಕ ಕಳ್ಳರ ಹೆಡೆಮುರಿ ಕಟ್ಟುವ ಪೊಲೀಸರಿದ್ದಾರೆ. ಆದರೆ ಇಲ್ಲೊಬ್ಬ ಕಳ್ಳ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಘಟನೆ ಭಟ್ಕಳ ಪಟ್ಟಣದಲ್ಲಿ ನಡೆದಿದೆ.
ಭಟ್ಕಳ ಪಟ್ಟಣದ ಕೋಟೇಶ್ವರ ರಸ್ತೆಯ ಮಂಜು ಕೊರಗರ ಎನ್ನುವ ಕಳ್ಳನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಳ್ಳನ ಮನೆಯಲ್ಲಿ 25 ಸೈಕಲ್, 3 ಬೈಕ್ ಜಪ್ತಿ ಮಾಡಿದ್ದಾರೆ. ಈತನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರಿಗೆ, ಬಟ್ಟೆ ಬದಲಿಸಿ ಬರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಪೊಲೀಸರು ಆತನಿಗೆ ಬಟ್ಟೆ ಬದಲಿಸಲು ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಯಾಮಾರಿಸಿ ಮನೆಯಿಂದ ಆತ ಪರಾರಿಯಾಗಿದ್ದಾನೆ. ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಭೂಕಂಪ – ಬೆಚ್ಚಿಬಿದ್ದ ಜನತೆ
ಭಟ್ಕಳ ಪಟ್ಟಣದಲ್ಲಿ ಕೆಲ ದಿನಗಳಿಂದ ಸೈಕಲ್, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಭಟ್ಕಳ ಪೊಲೀಸರು ಆತ ಕದ್ದ ಸೈಕಲ್, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸೈಕಲ್, ಬೈಕ್ ಕಳೆದುಕೊಂಡವರು ಸ್ಥಳಕ್ಕೆ ಆಗಮಿಸಿ ತಮ್ಮ ವಾಹನಗಳನ್ನು ಕೊಡುವಂತೆ ಪೊಲೀಸರಲ್ಲಿ ವಿನಂತಿ ಮಾಡಿದರು.
ಚಂಡೀಗಢ: ಮಕ್ಕಳ ಕಳ್ಳನೆಂದು ಭಾವಿಸಿ ಭಿಕ್ಷುಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚಂಡೀಗಢದ (Chhattisgarh) ದುರ್ಗ್‍ನಲ್ಲಿ ( Durg) ನಡೆದಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಿಕ್ಷುಕನಿಗೆ ಥಳಿಸಿದ ಮೂವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 34 (ಏಕೋದ್ದೇಶವನ್ನು ಮುಂದುವರಿಸಲು ಅನೇಕ ವ್ಯಕ್ತಿಗಳು ಮಾಡಿದ ಕೃತ್ಯಗಳು), 294 (ಅಶ್ಲೀಲ ಕೃತ್ಯಗಳು ಮತ್ತು ಅಶ್ಲೀಲ ಪದಗಳನ್ನು ಬಳಸುವುದು), 506 (ಆಪರಾಧಿಕ ಭಯೋತ್ಪಾದನೆಗೆ ದಂಡನೆ) ಮತ್ತು 323 (ಸ್ವಯಿಚ್ಛೆಯಿಂದ ಗಾಯವನ್ನುಂಟು ಮಾಡಿದ್ದಕ್ಕೆ ದಂಡನೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಬಳಿಕ ಭಿಕ್ಷುಕನನ್ನು ಸ್ಥಳೀಯ ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಇನ್ನೂ ಭಿಕ್ಷುಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಆತನನ್ನು ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಆತನ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಜೊತೆ ಅನೈತಿಕ ಸಂಬಂಧ – ಪಿಡಿಓ ಕೊಲೆ ಮಾಡಿದ `ಶೀಲವಂತ’ರು
ಲಕ್ನೋ: ಸರಣಿ ಮೊಬೈಲ್ ಫೋನ್ ಕದ್ದಿದ್ದ ಕಳ್ಳ ಪರಾರಿಯಾಗಲು ಯತ್ನಿಸಿದ್ದರಿಂದ ಆತನ ಕಾಲಿಗೆ ಎನ್‍ಕೌಂಟರ್ ವೇಳೆ ನೋಯ್ಡಾ ಪೊಲೀಸರು ಗುಂಡು ಹಾರಿಸಿದ್ದಾರೆ.
ಇದೀಗ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಬಳಿಯಿದ್ದ ದ್ವಿಚಕ್ರ ವಾಹನ ಮತ್ತು ಮೂರು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆತನ ಸಹಚರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಫರಿದಾಬಾದ್-ನೋಯ್ಡಾ-ಘಾಜಿಯಾಬಾದ್ ಎಕ್ಸ್ಪ್ರೆಸ್‍ವೇನಲ್ಲಿ (Faridabad-Noida-Ghaziabad Expressway) ತಪಾಸಣೆ ನಡೆಸುತ್ತಿದ್ದ ವೇಳೆ ಮೂರು ಸ್ಮಾರ್ಟ್‌ಫೋನ್‍ಗಳನ್ನು ಕದ್ದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ಹೇಳಿದ್ದಾರೆ. ಇದನ್ನೂ ಓದಿ: ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ
ನೋಯ್ಡಾ ಸೆಕ್ಟರ್ (Noida) 113 ಪೊಲೀಸ್ ಠಾಣೆಯ ಅಧಿಕಾರಿಗಳು ತಡರಾತ್ರಿ ತಪಾಸಣೆ ಕಾರ್ಯಾಚರಣೆ ನಡೆಸುತ್ತಿದ್ದಾಗ, ವ್ಯಕ್ತಿ ಓಡಿಹೋಗಲು ಯತ್ನಿಸಿದ್ದಾನೆ. ಆದರೆ ಆತನನ್ನು ಹಿಂಬಾಲಿಸಿದ್ದಕ್ಕೆ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ಹಿನ್ನೆಲೆ ನಾವು ಆತನ ಮೇಲೆ ಫೈರಿಂಗ್ ನಡೆಸಿದೆವು. ಈ ವೇಳೆ ಆರೋಪಿ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ.
ಈ ಸಂಬಂಧ ವಿಚಾರಣೆ ವೇಳೆ ಆರೋಪಿ ತಾವು ಮೊದಲ ಬಾರಿ ಮೊಬೈಲ್ ಫೋನ್ ಕದಿಯುತ್ತಿಲ್ಲ, ದೆಹಲಿ-ಎನ್‍ಸಿಆರ್‌ನಲ್ಲಿ ಬಹಳ ಸಮಯದಿಂದ ಕಳ್ಳತನ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆತನ ವಿರುದ್ಧ ದೆಹಲಿ-ಎನ್‍ಸಿಆರ್‌ನಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೀದರ್: ಕಳ್ಳರನ್ನು ಹಿಡಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಬಹುಮಾನ ಹಾಗೂ ಸನ್ಮಾನ ಮಾಡುವುದಾಗಿ ಗ್ರಾಮ ಪಂಚಾಯಿತಿಯೊಂದು ಘೋಷಿಸಿದೆ. ದಸರಾ ಸೇರಿದಂತೆ ಪಮುಖ ಹಬ್ಬಗಳು ಬಂದಾಗ ಕಳ್ಳರು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಕೃತ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದೆ. ಹೀಗಾಗಿ ಕಳ್ಳರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಹಾಗೂ ಸನ್ಮಾನ ಎಂಬ ವಿಚಿತ್ರ ಘೋಷಣೆ ಮಾಡಿದೆ.
ಹೌದು, ಬೀದರ್ ತಾಲೂಕಿನ ಚಿಕ್ಕಪೇಟೆ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವಿದ್ಯುತ್ ವೈರ್‍ನ್ನು ಕಿಡಿಗೇಡಿಗಳು ಉದೇಶಪೂರ್ವಕವಾಗಿ ಪದೇ, ಪದೇ ಕಟ್ ಮಾಡುತ್ತಿದ್ದಾರೆ. ಯಾರೋ ಕಿಡಿಗೇಡಿ ಕಳ್ಳರು ಉದ್ದೇಶ ಪೂರ್ವಕವಾಗಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ವೈರ್ ಕಟ್ ಮಾಡುತ್ತಿರುವುದರಿಂದ ಕೃತಕವಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಪದೇ ಪದೇ ಈ ರೀತಿ ಕಿಡಿಗೇಡಿಗಳು ಮಾಡುತ್ತಿರುವುದರಿಂದ ಬೇಸತ್ತ ಮರಕಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕಳ್ಳರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.
ರಾತ್ರೋರಾತ್ರಿ ವಿದ್ಯುತ್ ವೈರ್ ಕಟ್ ಮಾಡಿ ಕಳ್ಳತನ ಮಾಡುತ್ತಿರುವ ಕಳ್ಳರನ್ನು ಸಾರ್ವಜನರಿಗೆ ಹಿಡಿದು ಕೊಟ್ಟರೆ ಗ್ರಾಮ ಪಂಚಾಯಿತಿಯಿಂದ 1 ಸಾವಿರ ಹಾಗೂ ಗ್ರಾಮಸ್ಥರಿಂದ 2 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇದೇ ಮೊಲದ ಬಾರಿಗೆ ಕಳ್ಳರನ್ನು ಹಿಡಿಯಲು ಗ್ರಾಪಂ ಹಾಗೂ ಗ್ರಾಮಸ್ಥರು ಬಹುಮಾನ ಘೋಷಣೆ ಮಾಡಿದ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹಬ್ಬದ ದಿನಗಳಲ್ಲಿ ಯಾರೋ ಕಿಡಿಗೇಡಿಗಳು ಹಲವು ತಿಂಗಳಿಂದ ಪದೇ ಪದೇ ಉದ್ದೇಶ ಪೂರ್ವಕವಾಗಿ ಕಳ್ಳತನ ಮಾಡುತ್ತಿದ್ದಾರೆ. ಹೀಗಾಗಿ ಬೇಸತ್ತು ನಾವು ಸಾರ್ವಜನಿಕರ ಸಹಾಯದಿಂದ ಕಳ್ಳರನ್ನು ಹಿಡಿಯಲು ಬಹುಮಾನ ಹಾಗೂ ಸನ್ಮಾನ ಘೋಷಣೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯತಿ ಪಿಡಿಓ ಹೇಳಿದ್ದಾರೆ.
ಕಿಡಿಗೇಡಿ ಕಳ್ಳರು ಕೇವಲ 10 ತಿಂಗಳಲ್ಲಿ ಬರೋಬ್ಬರಿ 6 ರಿಂದ 7 ಬಾರಿ ಕುಡಿಯುವ ನೀರಿನ ವಿದ್ಯುತ್ ಸಂಪರ್ಕದ ವೈರ್ ಅನ್ನು ಕಟ್ ಮಾಡಿದ್ದಾರೆ. ಪ್ರತಿ ಬಾರಿ ವಿದ್ಯೂತ್ ವೈರ್ ಕಟ್ ಮಾಡಿದಾಗ ಅದನ್ನು ದುರಸ್ಥಿ ಮಾಡಲು ಗ್ರಾ.ಪಂ.ಯಿಂದ 15 ರಿಂದ 20 ಸಾವಿರ ಹಣ ಖರ್ಚಾಗುತ್ತಿದೆ. ಜೊತೆಗೆ ಹಬ್ಬದ ದಿನಗಳಲ್ಲಿ ಚಿಕ್ಕಪೇಟೆ ಗ್ರಾಮಕ್ಕೆ ನೀರಿನ ಸಮಸ್ಯೆಯಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕತ್ತಾರೆ. ಹೀಗಾಗೀ ಕಿಡಿಗೇಡಿ ಕಳ್ಳರಿಂದ ಬೇಸತ್ತ ಗ್ರಾ.ಪಂ. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಲೇ ಹಲವು ಬಾರಿ ಬೀದರ್ ಗ್ರಾಮೀಣ ಠಾಣೆ ಹಾಗೂ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಅಗ್ಗದ ವೈರ್ ಕಟ್ ಮಾಡಿ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಾ ಗ್ರಾಪಂಗೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ.
ಉದ್ದೇಶಪೂರ್ವಕವಾಗಿ ಕಳ್ಳತನ ಮಾಡುವ ವ್ಯಕ್ತಿಗಳನ್ನು ಹುಡುಕಿ ಕೊಟ್ಟವರಿಗೆ ಬಹುಮಾನ, ಸನ್ಮಾನ ಹಾಗೂ ಅಂಥವರ ಹೆಸರನ್ನು ಗೌಪ್ಯವಾಗಿ ಹಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಪಂಯವರು ಒಂದು ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಆದರೆ ನಾವು 2 ಸಾವಿರ ಬಹುಮಾನ ಘೋಷಣೆ ಮಾಡುತ್ತೇವೆ. ರಾಜಕೀಯ ದುರುದ್ದೇಶದಿಂದ ಈ ರೀತಿ ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನೂ ಓದಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ: ಮೋಹನ್ ಭಾಗವತ್ ಪ್ರಶ್ನೆ
ದಸರಾ ಹಬ್ಬ ಸೇರಿದಂತೆ ಪ್ರಮುಖ ಹಬ್ಬಗಳಲ್ಲಿ ಉದ್ದೇಶಪೂರ್ವಕವಾಗಿ ವೈರ್ ಕಟ್ ಮಾಡಿ ಗ್ರಾಮಸ್ಥರನ್ನು ಸಮಸ್ಯೆಗೆ ದುಡುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ಬೇಸತ್ತು ಕಳ್ಳರನ್ನ ಹಿಡಿದುಕೊಟ್ಟ ಸಾರ್ವಜನಿಕರಿಗೆ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಬಹುಮಾನ ಹಾಗೂ ಸನ್ಮಾನ ಘೋಷಣೆ ಮಾಡಿದ್ದು ಡಿಫರೆಂಟ್ ಐಡಿಯಾವಾಗಿದೆ. ಬಹುಮಾನ ಘೋಷಣೆ ಬೆನ್ನಲ್ಲೆ ಸಾರ್ವಜನಿಕರು ಕಳ್ಳರಿಗಾಗಿ ಬಲೆ ಬಿಸಿ ಸಮಸ್ಯೆಗೆ ಬ್ರೇಕ್ ಹಾಕತ್ತಾರಾ ಎಂದು ನಾವು ನೀವು ಕಾದೂ ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಚಿಕ್ಕೋಡಿ: ಮನೆ ಕಾಯಲೆಂದು ಎರಡು ನಾಯಿ ಸಾಕಿದ್ದರೂ ಸಹ ಹಾಡಹಗಲೇ ಮನೆ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ನಡೆದಿದೆ.
ನಾಲ್ಕು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ (Robbery) ಮಾಡಲಾಗಿದೆ. ಕೋರೆ ನಗರದ ರಂಜಿತ್ ಶಿಂಧೆ (Ranjit Shinde) ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದು, ಮನೆಯಲ್ಲಿದ್ದ 12 ತೊಲೆ ಬಂಗಾರ, 60 ಸಾವಿರ ನಗದು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸ್ಟೇಟಸ್‍ನಲ್ಲಿ ಹಾಕಿದ್ದ ತಾಯಿ ಫೋಟೋ ದುರ್ಬಳಕೆ – ಕ್ಲಾಸ್‍ರೂಂನಲ್ಲಿ ಲೆಕ್ಚರರ್ ಎದುರೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು
ಮನೆ ಬಾಗಿಲಿಗೆ ಒಂದು ನಾಯಿ ಕಟ್ಟಿದ್ದ ಮಾಲೀಕ ರಂಜಿತ್ ಮನೆಯೊಳಗಿದ್ದ ಮತ್ತೊಂದು ನಾಯಿಯನ್ನು ಬಲೆಯಲ್ಲಿ ಹಾಕಿಕಟ್ಟಿದ್ದ. ಮನೆ ಕಾಯಲೆಂದೇ ಎರಡು ನಾಯಿ ಸಾಕಿದ್ದರೂ ಸಹ ಕಳ್ಳತನವಾಗಿದ್ದರ ಬಗ್ಗೆ ಮಾಲೀಕ ನೋವು ವ್ಯಕ್ತಪಡಿಸಿದ್ದಾರೆ. ಇದೀಗ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ – ಸಾಲ ನೀಡದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ
Live Tv
[brid partner=56869869 player=32851 video=960834 autoplay=true]
ಪಾಟ್ನಾ: ರೈಲ್ವೆ(Train) ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದು ಕಳ್ಳನೋರ್ವ(Thief) 10 ಕಿ.ಮೀವರೆಗೂ ಜೋತಾಡುತ್ತಾ, ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಫಜೀತಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ರೈಲು ಬೇಗುಸರಾಯ್‍ನಿಂದ(Begusarai) ಖಗರಿಯಾಗೆ (Khagaria) ಹೊರಟಿತ್ತು. ಈ ಮಧ್ಯೆ ಸಾಹೇಬ್‍ಪುರ ಕಮಲ್ (Sahebpur Kamal) ನಿಲ್ದಾಣದ ಬಳಿ ವ್ಯಕ್ತಿ ತನ್ನ ಕೈಯನ್ನು ಕಿಟಕಿ ಒಳಗೆ ಹಾಕಿ ಪ್ರಯಾಣಿಕನ ಮೊಬೈಲ್(Mobile) ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕ ಆತನ ಕೈ ಹಿಡಿದುಕೊಂಡಿದ್ದಾನೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಆಗ ಕಳ್ಳ ದಯವಿಟ್ಟು ನನ್ನ ಕೈ ಬಿಡಿ ಎಂದು ಅಳುತ್ತಾ ಬೇಡಿಕೊಂಡಿದ್ದಾನೆ. ಆದರೂ ಪ್ರಯಾಣಿಕ ಆತನ ಕೈ ಬಿಡದೇ ಸತಾಯಿಸಿದ್ದಾನೆ. ಹೀಗಾಗಿ 10 ಕಿ.ಮೀವರೆಗೂ(10 kilometers) ಕಿಟಕಿ ಬಳಿ ತೂಗಾಡುತ್ತಾ, ಜೋತಾಡುತ್ತಾ ಕಳ್ಳ ಬಿಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾನೆ.
ಕೊನೆಗೆ 10 ಕಿಲೋಮೀಟರ್‌ಗಳವರೆಗೂ ಹೀಗೆ ಸಾಗಿ ನಂತರ ರೈಲು ಖಗಾರಿಯಾಕ್ಕೆ ಹೋಗುತ್ತಿದ್ದ ವೇಳೆ ಆತನ ಕೈ ಬಿಟ್ಟಿದ್ದಾರೆ. ಕೈ ಬಿಟ್ಟ ಕೂಡಲೇ ಕಳ್ಳ ದಿಕ್ಕಾಪಾಲಾಗಿ ಓಡಿಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು(Police) ಯಾವುದಾದರೂ ಕ್ರಮ ಕೈಗೊಂಡಿದ್ದಾರೆಯೋ ಇಲ್ಲವೋ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಕಾರು – ಮಹಿಳಾ ಟೆಕ್ಕಿಗಳಿಬ್ಬರ ದುರ್ಮರಣ
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಕಳ್ಳ ಎಂದು ಅನುಮಾನಿಸಿ ಅಮಾಯಕ ಯುವಕನನ್ನು ಪೊಲೀಸರು ಕರೆದೊಯ್ದು ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರದಲ್ಲಿ(ChamarajaNagar) ನಡೆದಿದೆ.
ನಂಜನಗೂಡು ತಾಲೂಕಿನ ಕೋಣನಪಾಳ್ಯ ಗ್ರಾಮದ ದಿಲೀಪ್ ಹಲ್ಲೆಗೊಳಗಾದ ಯುವಕ. ಈತನನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಚಿನ್ನದ ಕಳ್ಳ(Thief) ಎಂದು ಭಾವಿಸಿ ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಳ್ಳತನ ಮಾಡಿರುವ ವ್ಯಕ್ತಿ ಧರಿಸಿರುವ ಶರ್ಟ್ ತರಹವೇ ನಿನ್ನ ಶರ್ಟ್(Shirt) ಇದೆ. ಹೀಗಾಗಿ ನೀನೇ ಕಳ್ಳತನ ಮಾಡಿದ್ದೀಯಾ. ನಿಜ ಒಪ್ಪಿಕೋ ಎಂದು ಹೇಳಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಯುವಕ ಎಷ್ಟೇ ಬೇಡಿಕೊಂಡರು ಪೊಲೀಸರಿಗೆ ಕರುಣೆಯೇ ಬಂದಿಲ್ಲ. ಆತನ ಮೇಲೆ ಎಷ್ಟೆಲ್ಲಾ ಕ್ರೌರ್ಯ ಮೆರೆಯಬಹುದೋ ಅಷ್ಟನ್ನು ಮಾಡಿದ್ದಾರೆ. ಕೊನೆಗೆ ಪೊಲೀಸರ ಹಿಂಸೆ ತಾಳಲಾರದೇ ನಾನೇ ಕಳ್ಳತನ ಮಾಡಿದ್ದೇನೆ. ಕಳ್ಳತನ ಮಾಡಿದ ಚಿನ್ನವನ್ನು ಮನೆಯಲ್ಲಿಟ್ಟಿದ್ದೇನೆ ಎಂದು ಹೇಳಿದ್ದಾನೆ. ಆಗ ದಿಲೀಪ್‌ನನ್ನು ಆತನ ಸ್ವಗ್ರಾಮಕ್ಕೆ ಪೊಲೀಸರು ಕರೆತಂದಾಗ ಆತ ಗ್ರಾಮದವರ ಎದುರು ತಾನು ಕಳ್ಳತನ ಮಾಡಿಲ್ಲ. ಪೊಲೀಸರು ಬಲವಂತದಿಂದ ಹೇಳಿಸಿದರು ಎಂದು ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಾಗ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ದಿಲೀಪ್ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪೋಷಕರು ಹೇಳುವ ಪ್ರಕಾರ ದಿಲೀಪ್ ಖಾಸಗಿ ಸಂಘಗಳು ನೀಡುವ ಸಾಲದ ಹಣವನ್ನು ವಸೂಲಿ ಮಾಡುವ ಕೆಲಸ ಮಾಡಿಕೊಂಡಿದ್ದ. ಆದರೆ ಏಕಾಏಕಿ ಪೊಲೀಸರು ಈತನ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ. ಅಲ್ಲದೇ ಮೈಮೇಲೆಲ್ಲಾ ಬಾಸುಂಡೆ ಬರುವ ರೀತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈತನಿಗೆ ಏನಾದರೂ ಹೆಚ್ಚು ಕಡಿಮೆಯಾದ್ರೆ ಆತನ ಜೀವಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡುತ್ತಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಹಗರಣ ಸದನದಲ್ಲಿ ಬಿಚ್ಚಿಡುತ್ತೇನೆ: ಕುಮಾರಸ್ವಾಮಿ
ಒಟ್ಟಾರೆ ಪೊಲೀಸರು(Police) ವಿಚಾರಣೆ ಮಾಡದೇ ಅಮಾಯಕ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ ಹಿಗ್ಗಾಮುಗ್ಗಾ ಥಳಿಸಿರುವುದು ಅವರ ಕ್ರೌರ್ಯವನ್ನು ಎತ್ತೆ ತೋರಿಸುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕಾದ ಪೊಲೀಸರೇ ತಪ್ಪು ಮಾಡಿರುವುದು ನಿಜಕ್ಕೂ ದುರಂತ. ಇದನ್ನೂ ಓದಿ:ಲೋಕಾಯುಕ್ತ ಅಬ್ಬರ ಶುರು – ಮೊದಲ ದಾಳಿಯಲ್ಲೇ BBMP ಜಂಟಿ ಆಯುಕ್ತ ಅರೆಸ್ಟ್
Live Tv
[brid partner=56869869 player=32851 video=960834 autoplay=true]