Tag: thief

  • ನಟೋರಿಯಸ್ ಗ್ಯಾಂಗ್‍ಸ್ಟಾರ್ ಸೆರೆ ಹಿಡಿದ ನಯನತಾರಾ!

    ನಟೋರಿಯಸ್ ಗ್ಯಾಂಗ್‍ಸ್ಟಾರ್ ಸೆರೆ ಹಿಡಿದ ನಯನತಾರಾ!

    ಪಾಟ್ನಾ: ಪೊಲೀಸರು ತುಂಬಾ ಬುದ್ಧಿವಂತಿಕೆಯಿಂದ ದಕ್ಷಿಣ ಭಾರತದ ಪ್ರಸಿದ್ಧ ನಟಿ ನಯನತಾರಾ ಫೋಟೋ ಬಳಸಿ ನಟೋರಿಯಸ್ ಗ್ಯಾಂಗ್‍ಸ್ಟಾರ್ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿ ಮಹಮ್ಮದ್ ಹಸ್‍ನೈನ್ ನಯನತಾರಾ ಫೋಟೋ ನೋಡಿ ಬಲೆಗೆ ಬಿದ್ದ ಕಳ್ಳ. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ನಯನತಾರಾ ಅವರಂತೆ ಫೋಸ್ ಕೊಟ್ಟು ಗ್ಯಾಂಗ್‍ಸ್ಟರ್ ನನ್ನು ಚಾಣಾಕ್ಷತೆಯಿಂದ ಬಂಧಿಸಿದ್ದಾರೆ.

    ಬಿಹಾರದ ದರ್ಬಾಂಗ್ ಜಿಲ್ಲೆಯ ಬಿಜೆಪಿ ನಾಯಕ ಸಂಜಯ್ ಕುಮಾರ್ ಮಹಾಟೋ ಮೊಬೈಲ್ ಅನ್ನು ಮೊಹಮ್ಮದ್ ಹಸ್‍ನೈನ್ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಬಿಜೆಪಿ ನಾಯಕ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿ ಮಧುಬಾಲಾ ದೇವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೊಬೈಲ್‍ನ ಡೇಟಾ ರೆಕಾರ್ಡ್ ಮಾಡಿ ಟ್ರೇಸ್ ಮಾಡಿದಾಗ ಆತ ಇನ್ನೂ ಫೋನ್ ಬಳಸುತ್ತಿರುವ ಸಂಗತಿ ತಿಳಿಯಿತು.

    ಪ್ರೀತಿಸಿ ಬಂಧಿಸಿದ್ರು: ಪೊಲೀಸರು ಆತನನ್ನು ಬಂಧಿಸಲು ಹೋದಾಗ ಹಲವು ಬಾರಿ ಆತ ತಪ್ಪಿಸಿಕೊಂಡ ಹೋಗಿದ್ದ. ಆದ್ದರಿಂದ ಮಧುಬಾಲಾ ಆರೋಪಿ ಬಂಧನಕ್ಕೆ ಹೊಸ ಪ್ಲ್ಯಾನ್ ಮಾಡಿದ್ದರು. ಅಂತೆಯೇ ಅವರು ಯುವತಿಯಂತೆ ಆತನನ್ನು ಪ್ರೀತಿಸುವ ನಾಟಕವಾಡಿದರು. ಆದರೆ ಕಳ್ಳ ಮೊದಲು ನಂಬಿರಲಿಲ್ಲ. ಬಳಿಕ ಫೋಟೋ ಕಳಿಸುವಂತೆ ಹೇಳಿದ್ದಾನೆ. ಅದಕ್ಕೆ ಮಧುಬಾಲಾ ಅವರು ಬುದ್ಧಿವಂತಿಕೆಯಿಂದ ನಯನತಾರಾ ಫೋಟೋವನ್ನು ಕಳುಹಿಸಿದ್ದಾರೆ.

    ಮೊಹಮ್ಮದ್ ನಟಿಯ ಫೋಟೋ ನೋಡಿ ಮರುಳಾಗಿ ಭೇಟಿ ಮಾಡಲು ಒಪ್ಪಿಕೊಂಡು ಸ್ಥಳವನ್ನು ತಾನೇ ಹೇಳಿದ್ದಾನೆ. ಈತ ಹೇಳಿದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಾಮಾನ್ಯ ವ್ಯಕ್ತಿಗಳಂತೆ ಆತ ಬರುವುದಕ್ಕೂ ಮೊದಲೇ ಹೋಗಿದ್ದರು. ಮಧುಬಾಲಾ ಅವರು ಮುಖಕ್ಕೆ ಮುಸುಕು ಹಾಕಿಕೊಂಡು ಆತನ ಬಳಿಗೆ ಹೋಗಿದ್ದಾರೆ. ಕೂಡಲೇ ಬಂದಿರುವ ಯುವತಿ ನನ್ನ ಸ್ನೇಹಿತೆ ಎಂದು ಮಾತನಾಡಿಸಲು ಹೋದಾಗ ಅಲ್ಲೇ ಇದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮೊಬೈಲ್ ತಮ್ಮ ವಶಕ್ಕೆ ಪಡೆದು ಬಿಜೆಪಿ ನಾಯಕರಿಗೆ ಒಪ್ಪಿಸಿದ್ದಾರೆ. ಬುದ್ಧಿವಂತಿಕೆಯಿಂದ ಕಳ್ಳನನ್ನು ಬಂಧಿಸಿದ್ದಕ್ಕೆ ಮಧುಬಾಲಾ ದೇವಿಗೆ ಬಿಹಾರ ಪೊಲೀಸ್ ಇಲಾಖೆ ಬಹುಮಾನವನ್ನು ನೀಡಿ ಗೌರವಿಸಿದೆ.

  • ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಪ್ಪಲಿ ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

    ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಪ್ಪಲಿ ಕದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

    ಬೆಂಗಳೂರು: ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಇನ್ಪೆಕ್ಷನ್ ಆಗಬಾರದು ಎನ್ನುವ ನಿಟ್ಟಿನಲ್ಲಿ ಐಸಿಯುಗೆ ಹೋಗುವಾಗ ವೈದ್ಯರಿಂದ ಹಿಡಿದು ರೋಗಿಯ ಎಟೆಂಡರ್ ವರೆಗೂ ಚಪ್ಪಲಿ, ಶೂಗಳನ್ನು ಬಿಟ್ಟು ಹೋಗಬೇಕು.

    ಇದನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳನೊಬ್ಬ ಆಸ್ಪತ್ರೆಯಲ್ಲಿ ಚಪ್ಪಲಿ, ಶೂಗಳನ್ನು ಕಳ್ಳತನ ಮಾಡಲು ಶುರುಮಾಡಿಕೊಂಡಿದ್ದನು. ಕದ್ದ ಮಾಲನ್ನು ಆಸ್ಪತ್ರೆಯ ಕೂಗಳತೆಯಲ್ಲಿರೋ ನೈಟ್ ಬಾಟ ಎಂದೇ ಫೇಮಸ್ ಆಗಿರೋ ಸೆಕೆಂಡ್ ಹ್ಯಾಂಡ್ ಚಪ್ಪಲಿ, ಶೂಗಳನ್ನು ಮಾರಾಟ ಮಾಡೋ ಫುಟ್ ಪಾತ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದನು.

    ಕಳೆದ ಎರಡು ತಿಂಗಳಿಂದ ಆಸ್ಪತ್ರೆಯ ಸಿಬ್ಬಂದಿಗೆ ಇದು ದೊಡ್ಡ ತಲೆ ನೋವಾಗಿತ್ತು. ವೈದ್ಯರ ಕಾಸ್ಟ್ಲೀ ಶೂಗಳು, ರೋಗಿಯನ್ನು ನೋಡಲು ಬರುವವರ ಚಪ್ಪಲಿ, ಶೂಗಳು ಪ್ರತಿನಿತ್ಯ ಮಾಯವಾಗುತ್ತಿತ್ತು. ಹೇಗಾದರೂ ಮಾಡಿ ಆ ಕಳ್ಳನನ್ನು ಹಿಡಿಯಲೇಬೇಕು ಎಂದು ಆಸ್ಪತ್ರೆಯ ಸೆಕ್ಯುರಿಟಿಗಳು ನಿರ್ಧರಿಸಿದ್ದರು.

    ಆದರೆ ಗುರುವಾರ ಆ ಕಳ್ಳನ ನಸೀಬು ಕೈ ಕೊಟ್ಟಿತ್ತು. ರೋಗಿಯ ಸಂಬಂಧಿಕರ ರೀತಿ ಆಸ್ಪತ್ರೆಗೆ ಬರಿಗಾಲಲ್ಲಿ ಬಂದು ಒಳ್ಳೆಯ ಚಪ್ಪಲಿಯನ್ನು ಹಾಕಿಕೊಂಡು ಎಸ್ಕೇಪ್ ಆಗುತ್ತಿದ್ದ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಿಡಿದು ಜಾಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂದಹಾಗೆ ಈ ಚಪ್ಪಲಿ, ಶೂಗಳು ಕಳ್ಳತನ ಆಗುತ್ತಿದ್ದದ್ದು ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ.

    ನೇಪ್ರೊ ನ್ಯೂರಾಲಜಿ ಬ್ಲಾಕ್ ನಲ್ಲಿ ಐಸಿಯುವಿಗೆ ಹೋಗೋ ಡಾಕ್ಟರ್ ಗಳು, ರೋಗಿಯ ಕಡೆಯವರು ಚಪ್ಪಲಿ, ಶೂಗಳನ್ನು ಶೂ ಸ್ಟಾಂಡ್ ನಲ್ಲಿ ಬಿಟ್ಟು ಹೋಗುತ್ತಾರೆ. ಕಳೆದ 2 ತಿಂಗಳಿಂದ ಪ್ರತಿನಿತ್ಯ ಎರಡು ಜೊತೆ ಚಪ್ಪಲಿ ಅಥವಾ ಶೂಗಳ ಕಳ್ಳತನ ಮಾಡುತ್ತಿದ್ದ ಈತ ಇಂದು ಪೊಲೀಸರ ಅಥಿತಿಯಾಗಿದ್ದಾನೆ.

     

  • ವೈದ್ಯರಂತೆ ವೇಷ ಧರಿಸಿ ಮಕ್ಕಳನ್ನ ಕದಿಯಲು ಬಂದಿದ್ದ ಖತರ್ನಾಕ್ ಕಳ್ಳಿ ಸಿಕ್ಕಿಬಿದ್ಳು

    ವೈದ್ಯರಂತೆ ವೇಷ ಧರಿಸಿ ಮಕ್ಕಳನ್ನ ಕದಿಯಲು ಬಂದಿದ್ದ ಖತರ್ನಾಕ್ ಕಳ್ಳಿ ಸಿಕ್ಕಿಬಿದ್ಳು

    ಕಲಬುರಗಿ: ವೈದ್ಯರಂತೆ ವೇಷ ಹಾಕಿಕೊಂಡು ಕಳ್ಳಿಯೊಬ್ಬಳು ಮಕ್ಕಳನ್ನ ಕದಿಯಲು ಬಂದಿದ್ದ ಘಟನೆ ಕಲಬುರಗಿಯ ಎಚ್‍ಕೆಇ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.

     

    ಯುವತಿ ಮಾರುವೇಷ ಧರಿಸಿ 5 ದಿನಗಳಿಂದ ಆಸ್ಪತ್ರೆಯಲ್ಲಿ ಸುತ್ತಾಡುತ್ತಿದ್ದಳು. ವೈದ್ಯರಂತೆ ಕೋಟ್ ಧರಿಸಿ ಮಕ್ಕಳ ಕಳ್ಳತನಕ್ಕೆ ಬಂದಿದ್ದಳು. ಸದ್ಯ ಆಸ್ಪತ್ರೆಯ ಸಿಬ್ಬಂದಿ ಚಾಲಕಿ ಕಳ್ಳಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಎಂಬಿ ನಗರ ಠಾಣೆ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದಿದ್ದಾರೆ.

  • ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

    ಕಳ್ಳತನ ಮಾಡಿದ್ದ ಕಾರಿನಲ್ಲೇ ಎಟಿಎಂ ಮೆಷಿನ್ ಹೊತ್ತೊಯ್ದ ಖದೀಮರು

    ಜೈಪುರ: ಸಾಮಾನ್ಯವಾಗಿ ಕಳ್ಳರು ಎಟಿಎಂಗೆ ಹೋಗಿ ಹಣವನ್ನು ಕದ್ದು ಪರಾರಿಯಾಗುತ್ತಾರೆ. ಆದರೆ ಇಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಮೆಷಿನನ್ನೇ ಕದ್ದಿದ್ದಲ್ಲದೇ ಕಳ್ಳತನ ಮಾಡಿದ್ದ ಕಾರಿನಲ್ಲೇ ಅದನ್ನ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರ ಸಮೀಪದ ಬಂಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಪೊಲೀಸರ ಪ್ರಕಾರ, ಮಾಸ್ಕ್ ಧರಿಸಿದ್ದ ಐವರು ಯುವಕರು ನೈನ್ವಾ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಟಿಮ್ ಗೆ ಹೋಗಿದ್ದಾರೆ. ಮೊದಲು ಕರೆಂಟ್ ವೈರ್‍ಗಳನ್ನು ಕಟ್ ಮಾಡಿದ್ದಾರೆ. ನಂತರ ಎಟಿಎಂ ಮಷಿನ್ ಬೇರ್ಪಡಿಸಿ ಹೊರಗಡೆ ನಿಲ್ಲಿಸಿದ್ದ ವಾಹನದಲ್ಲಿ ಇಟ್ಟಿದ್ದಾರೆ. ಈ ವಾಹನವನ್ನ ಕೂಡ ಅದೇ ಪ್ರದೇಶದಲ್ಲಿ ಕಳ್ಳತನ ಮಾಡಿ ತಂದಿದ್ದರು. ನಂತರ ಎಟಿಎಂ ಮೆಷಿನ್ ಇಟ್ಟುಕೊಂಡು ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದರಿಂದ ಯಾರೊಬ್ಬರ ಗುರುತು ಕೂಡ ಪತ್ತೆಯಾಗಲಿಲ್ಲ. ನೈನ್ವಾ ರಸ್ತೆಯ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜಿಸಿರಲಿಲ್ಲ. ಆದ ಕಾರಣ ಕಳ್ಳರು ಇದೇ ಎಟಿಎಂ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬ್ಯಾಂಕ್ ಉದ್ಯಮಿಯೊಬ್ಬರು ಮುಂಜಾನೆ ವಾಕ್ ಮಾಡಲು ಬಂದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ತಕ್ಷಣ ಅವರು ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಎಟಿಎಂನಲ್ಲಿ ಸುಮಾರು 5 ಲಕ್ಷ ರೂ. ಹಣವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

  • ಮೆಟ್ರೊ ನಿಲ್ದಾಣಗಳಲ್ಲಿ ನೀವು ಬೈಕ್ ನಿಲ್ಲಿಸಿ ಕೆಲ್ಸಕ್ಕೆ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಮೆಟ್ರೊ ನಿಲ್ದಾಣಗಳಲ್ಲಿ ನೀವು ಬೈಕ್ ನಿಲ್ಲಿಸಿ ಕೆಲ್ಸಕ್ಕೆ ಹೋಗ್ತೀರಾ? ಹಾಗಾದ್ರೆ ಈ ಸುದ್ದಿ ಓದ್ಲೇಬೇಕು

    ಬೆಂಗಳೂರು: ಮೆಟ್ರೊ ನಿಲ್ದಾಣಗಳಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ನಿವಾಸಿಯಾಗಿರುವ ಮುಬಾರಕ್ ಎಂಬ ವ್ಯಕ್ತಿಯೇ ಬಂಧಿತ ಬೈಕ್ ಕಳ್ಳನಾಗಿದ್ದು, ಬೈಕ್ ಕಳ್ಳತನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ 10ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಆರೋಪಿ ಮುಬಾರಕ್ ಮೆಟ್ರೋ ನಿಲ್ದಾಣಗಳಲ್ಲದೇ ನಗರದ ವಿವಿಧ ಪ್ರದೇಶಗಳಲ್ಲಿ ಮಾಸ್ಟರ್ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ. ನಂತರ ಕದ್ದ ಬೈಕ್‍ಗಳನ್ನು ದಾಸರಹಳ್ಳಿ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗುತ್ತಿದ್ದ. ಮರು ದಿನ ಸ್ಥಳಕ್ಕೆ ಬರುತ್ತಿದ್ದ ಆತನ ಬಾಸ್ ಯುವರಾಜ್ ಎಂಬಾತ ಬೈಕ್ ತೆಗೆದುಕೊಂಡು ಹೋಗುತ್ತಿದ್ದ.

    ಕದ್ದ ಬೈಕ್‍ಗಳನ್ನು ನಗರದಲ್ಲಿ ಮಾರಾಟ ಮಾಡಿದರೆ ಸಿಕ್ಕಿ ಬೀಳುವ ಅವಕಾಶಗಳು ಹೆಚ್ಚಾಗಿರುವುದರಿಂದ ಅವುಗಳನ್ನು ಗ್ರಾಮೀಣ ಭಾಗದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಅಲ್ಲದೇ ಕದ್ದ ಬೈಕ್ ಚಾಸಿ ನಂಬರ್ ನೋಡಿ ನಕಲಿ ದಾಖಲೆಗಳನ್ನು ತಯಾರಿಸಿ ಕಡಿಮೆ ಬೆಲೆಗೆ ಮಾರುತ್ತಿದ್ದರು. ಆರೋಪಿ ಮುಬಾರಕ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಂದರ್ಭಿಕ ಚಿತ್ರ

     

  • ಬೈಕಿನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಳ್ಳತನ

    ಬೈಕಿನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕಳ್ಳತನ

    ನೆಲಮಂಗಲ: ಬೆಳ್ಳಂಬೆಳಗ್ಗೆ ಮಹಿಳೆಯ ಮಾಂಗಲ್ಯ ಸರವನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಪಟ್ಟಣದ ಗಜಾರಿಯ ಲೇಔಟ್ ನಲ್ಲಿ ನಡೆದಿದೆ.

    ಸತ್ಯಭಾಮ ಎಂಬುವರು ಎಂದಿನಂತೆ ಬೆಳಿಗ್ಗೆ 6.30ರ ವೇಳೆಗೆ ಮನೆಯ ಮುಂದೆ ಹೂ ಬಿಡಿಸಿಲು ಬಂದಿದ್ದಾರೆ. ಇದನ್ನು ಕಾಯುತಿದ್ದ ಕಳ್ಳರು ಫ್ಯಾಷನ್ ಪ್ಲಸ್ ಬೈಕಿನಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದಿದ್ದಾರೆ.

    ಆದರೆ ಅದೃಷ್ಟವಶಾತ್ ಮಾಂಗಲ್ಯ ಸರ ಅರ್ಧ ಮಾತ್ರ ಕಳ್ಳರ ಪಾಲಾಗಿದ್ದು, ಕಳ್ಳರು ಬೈಕಿನಲ್ಲಿ ಬಂದು ಸರ ಕಸಿದ ನಂತರ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಘಟನಾ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • 10 ರೂ. ಬೀಳಿಸಿ 2 ಲಕ್ಷ ರೂ. ದೋಚಿದ ಕಳ್ಳರು

    10 ರೂ. ಬೀಳಿಸಿ 2 ಲಕ್ಷ ರೂ. ದೋಚಿದ ಕಳ್ಳರು

    ಬೆಂಗಳೂರು: ನಗರದ ಬ್ಯಾಂಕೊಂದರಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು 2 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಅತ್ತಬೆಲೆಯಲ್ಲಿ ನಡೆದಿದೆ.

    ವೃತ್ತಿಯಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿರುವ ಏಡುಕೊಂಡಲ ಎಂಬವರೇ ಹಣ ಕಳೆದುಕೊಂಡ ವ್ಯಕ್ತಿ. ಇವರು ಇಂದು ಬೆಳ್ಳಗೆ 10.30 ರ ಸಮಯದಲ್ಲಿ ಅತ್ತಿಬೆಲೆಯ ಸಿಂಡಿಕೇಟ್ ಬ್ಯಾಂಕ್‍ಗೆ ಆಗಮಿಸಿ ಕೆಲಸಗಾರರಿಗೆ ಬಟವಾಡೆ ಮಾಡುವ ಸಲುವಾಗಿ ಹಣ ಡ್ರಾ ಮಾಡಿದ್ದಾರೆ.

    ಏಡುಕೊಂಡಲ ಅವರು ಹಣ ಡ್ರಾ ಮಾಡಿಕೊಂಡು ಬ್ಯಾಂಕ್‍ನಿಂದ ಹೊರಬಂದ ಬಳಿಕ ಹಣವಿದ್ದ ಬ್ಯಾಗನ್ನು ತಮ್ಮ ಪಲ್ಸರ್ ಬೈಕ್ ನಲ್ಲಿ ಇಟ್ಟಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ 10 ರೂ. ಮುಖ ಬೆಲೆಯ ನಾಲ್ಕು ನೋಟುಗಳನ್ನು ಕೆಳಕ್ಕೆ ಬೀಳಿಸಿ ತೆಗೆದುಕೊಳ್ಳುವಂತೆ ತಿಳಿಸಿದ್ದಾನೆ. ಆರೋಪಿಯ ಮಾತು ನಂಬಿ ಕೆಳಗೆ ಬಿದ್ದಿದ್ದ ನೋಟುಗಳನ್ನು ತೆಗೆದುಕೊಳ್ಳಲು ನೋಡುವಷ್ಟರಲ್ಲಿ ಬೈಕ್ ನಲ್ಲಿಟ್ಟಿದ್ದ 2 ಲಕ್ಷ ಹಣವನ್ನು ಕಳ್ಳರು ಲಪಟಾಯಿಸಿದ್ದಾರೆ.

    ಇದನ್ನೂ ಓದಿ: ಹಣ ಬಿದ್ದಿದೆ ಅಂತಾ ಕಾರಿನಿಂದ ಇಳಿಸ್ತಾರೆ- ಕಾರಿನಲ್ಲಿಯ ಬ್ಯಾಗ್ ತಗೊಂಡು ಎಸ್ಕೇಪ್ ಆಗ್ತಾರೆ

    ಘಟನೆ ನಡೆದ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತಾದರೂ ಈ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಕಳ್ಳರ ಕೈಚಳಕದ ದೃಶ್ಯ ಸೆರೆಯಾಗಿಲ್ಲ. ಅಲ್ಲದೇ ಈ ಬ್ಯಾಂಕ್ ಮುಂಭಾಗದಲ್ಲಿ ಪ್ರತಿ ಶನಿವಾರ ಇಂತಹ ಘಟನೆಗಳು ನಡೆಯುತ್ತಿದ್ದು, ಕಳೆದ ವಾರ ಇದೇ ರೀತಿ 5 ಲಕ್ಷ ರೂ. ಹಣ ಕಳವು ಮಾಡಲಾಗಿತ್ತು.

    ಘಟನೆಯ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    https://www.youtube.com/watch?v=_9mutYZrmUg

  • ಕಾರು, ಜೀಪ್ ಕದಿಯುತ್ತಿದ್ದ ಕಳ್ಳನನ್ನು ಮರಕ್ಕೆ ಕಟ್ಟಿ ಬಿತ್ತು ಸಖತ್ ಗೂಸಾ

    ಕಾರು, ಜೀಪ್ ಕದಿಯುತ್ತಿದ್ದ ಕಳ್ಳನನ್ನು ಮರಕ್ಕೆ ಕಟ್ಟಿ ಬಿತ್ತು ಸಖತ್ ಗೂಸಾ

    ವಿಜಯಪುರ: ಹಲವಾರು ದಿನಗಳಿಂದ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಕಳ್ಳತನ ಮಾಡುತ್ತಿದ್ದ ಯುವಕನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

    ಮುದ್ದೇಬಿಹಾಳ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಸಿಕಂದರ್ ನಾಯ್ಕೋಡಿ ಎಂಬ ಯುವಕ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಕಾರು, ಜೀಪ್ ಸೇರಿದಂತೆ ಇತರೆ ವಾಹನಗಳಲ್ಲಿನ ಸಾಮಗ್ರಿಗಳನ್ನು ಕದಿಯುತ್ತಿದ್ದ.

    ಹೀಗಾಗಿ ರವಿವಾರ ಅದೇ ರೀತಿ ಕದಿಯಲು ಬಂದಾಗ ರೆಡ್ ಹ್ಯಾಂಡ್ ಆಗಿ ಸಿಕಂದರ್ ಸ್ಥಳೀಯರಿಗೆ ಸಿಕ್ಕಿದ್ದಾನೆ. ಆಗ ಸ್ಥಳೀಯರು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಮುದ್ದೇಬಿಹಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ

    ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ

    ಮೈಸೂರು: ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದವನು ಸುಸೂತ್ರವಾಗಿ ದೇವಸ್ಥಾನದ ಗೇಟ್ ಮುರಿದು ಒಳಹೋಗಿ ದೇವಸ್ಥಾನದಲ್ಲಿದ್ದ ಬಂಗಾರ, ಹುಂಡಿಯ ದುಡ್ಡು ಏನ್ನನ್ನೂ ಕದಿಯದೆ ಭಯದಿಂದ ಹೊರಬಂದಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ.

    ಶನಿ ದೇವರ ದೇವಸ್ಥಾನದಲ್ಲಿ ಕಳ್ಳ ಹೆದರಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೈಸೂರಿನ ದಟ್ಟಗಳ್ಳಿಯಲ್ಲಿನ ಶನಿ ದೇವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶನಿ ದೇವರ ದೇವಸ್ಥಾನ ಕಳ್ಳತನಕ್ಕೆ ಕಳ್ಳ ನುಗ್ಗಿದ್ದು, ದೇವಸ್ಥಾನದ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮುರಿದು ಒಳಪ್ರವೇಶಿಸಿದ್ದಾನೆ. ನಂತರ ಗಾಬರಿಯಿಂದ ಬರಿಗೈಯಲ್ಲಿ ಹೊರಬಂದಿದ್ದಾನೆ. ಶನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ದೇವಸ್ಥಾನದ ಗೇಟ್ ಮುರಿದು ಒಳಗೆ ಹೋದವನು ಏನೂ ಕಳ್ಳತನ ಮಾಡದೆ ಬರಿಗೈಯಲ್ಲಿ ವಾಪಸ್ ಬಂದುರುವುದು ಸ್ಪಷ್ಟವಾಗಿದೆ. ಹಿಂದೆ ಎರಡು ಬಾರಿ ಈ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಕುವೆಂಪುನಗರ ಪೊಲೀಸರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ದೂರು ನೀಡಿದ್ದಾರೆ.

  • ಬೆಂಗಳೂರು ರೈಲಿನಲ್ಲಿ ಬೆಡ್‍ಶೀಟ್ ಕದಿಯುತ್ತಿದ್ದ ವ್ಯಕ್ತಿ ಅರೆಸ್ಟ್

    ಬೆಂಗಳೂರು ರೈಲಿನಲ್ಲಿ ಬೆಡ್‍ಶೀಟ್ ಕದಿಯುತ್ತಿದ್ದ ವ್ಯಕ್ತಿ ಅರೆಸ್ಟ್

    ಬೆಂಗಳೂರು: ರೈಲಿನ ಎಸಿ ಕೋಚ್‍ನಲ್ಲಿದ್ದ ಬೆಡ್‍ಶೀಟ್‍ಗಳನ್ನು ಕದ್ದು ಕೊಂಡ್ಯೊಯುತ್ತಿದ್ದ ಕಳ್ಳನನ್ನು ಬಂಧಿಸಿರುವ ಘಟನೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

    ಬುಧವಾರ ಮುಂಜಾನೆ 7 ಘಂಟೆಗೆ ನಗರದ ರೈಲ್ವೇ ನಿಲ್ದಾಣ ಪ್ಲಾಟ್ ಫಾರಂ 1ಕ್ಕೆ ಆಗಮಿಸಿದ ಕರ್ನಾಟಕ ಎಕ್ಸ್ ಪ್ರೆಸ್ (ಬೆಂಗಳೂರು-ನವದೆಹಲಿ) ರೈಲಿನ ಬಿ-01 ಎಸಿ ಕೋಚ್‍ನಲ್ಲಿದ್ದ ಬೆಡ್‍ಶೀಟ್‍ಗಳನ್ನು ಕಂಠ ಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಯತ್ನಿಸಿದ್ದಾನೆ.

    ಈ ವೇಳೆ ಈತ ಬೆಡ್‍ಶೀಟ್ ಗಂಟನ್ನು ಹೆಗಲ ಮೇಲೆ ಇಟ್ಟುಕೊಂಡು ಸಾಗುತ್ತಿದ್ದನ್ನು ಪ್ರಯಾಣಿಕ ಮಹಮ್ಮದ್ ಅಲಿ ಎಂಬವರು ಗಮನಿಸಿ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಮದ್ಯ ಸೇವಿಸಿರುವುದು ತಿಳಿದ ಅವರು ಅನುಮಾನಗೊಂಡು ಕರ್ತವ್ಯದಲ್ಲಿದ್ದ ರೈಲ್ವೇ ರಕ್ಷಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

    ರೈಲ್ವೇ ಪ್ರಯಾಣದ ನಂತರ ಬೆಡ್‍ಶೀಟ್‍ಗಳನ್ನು ಸ್ವಚ್ಛ ಮಾಡಲು ರೈಲ್ವೇ ಸ್ವಚ್ಛತಾ ಸಿಬ್ಬಂದಿ ಅದನ್ನು ಒಂದೆಡೆ ಸಂಗ್ರಹಿಸಿದ್ದರು. ಈ ವೇಳೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಈತ ಬೆಡ್‍ಶೀಟ್‍ಗಳನ್ನು ಕದ್ದು ಪರಾರಿಯಾಗಲು ಯತ್ನಿಸಿ ಪೋಲಿಸರ ಅತಿಥಿಯಾಗಿದ್ದಾನೆ.