Tag: thief

  • ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ

    ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತವಾಗಿದ್ದು, ನಟೋರಿಯಸ್ ಸರಗಳ್ಳನ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

    ಶಾಕೀರ್ ಗುಂಡೇಟು ತಿಂದ ಸರಗಳ್ಳ. ಚಂದ್ರಲೇಔಟ್ ಪಿಎಸ್‍ಐ ಸಂತೋಷ್ ನಾಯ್ಕ್, ಶಾಕೀರ್ ಎಡಗಾಲಿಗೆ ಗುಂಡು ಹಾರಿಸುವ ಮೂಲಕ ಆತನ ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಈ ಆರೋಪಿ ಪಶ್ಚಿಮ ವಲಯದ ಪೊಲೀಸರ ಪಾಲಿಗೆ ಸಿಂಹಸ್ವಪ್ನವಾಗಿದ್ದನು.

    ದೂರದ ಉತ್ತರ ಪ್ರದೇಶದ ಮುಜಾಫರ್ ನಗರದಿಂದ ಶಾಕೀರ್ ಮತ್ತು ಮಹಮ್ಮದ್ ಡ್ಯಾನಿಶ್ ಬಂದಿದ್ದರು. ಇವರು ನಗರದ ಚಂದ್ರಲೇಔಟ್, ಸಿದ್ದಾಪುರ, ರಾಜಾಜಿನಗರದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಇಬ್ಬರ ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು.

    ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾರೆ. ಆದರೆ ಈ ವೇಳೆ ಆರೋಪಿ ಶಾಕೀರ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾನೆ. ನಂತರ ಆತ್ಮ ರಕ್ಷಣೆಗಾಗಿ ಆರೋಪಿ ಶಾಕೀರ್ ಕಾಲಿಗೆ ಶೂಟೌಟ್ ಮಾಡಿದ್ದಾರೆ ಎಂದು ಡಿಸಿಪಿ ರವಿಚನ್ನಣ್ಣನವರ್ ಹೇಳಿದ್ದಾರೆ.

    ಸದ್ಯ ಆರೋಪಿ ಶಾಕೀರ್ ಹುಸೇನ್ ಹಾಗೂ ಆರೋಪಿಯಿಂದ ಗಾಯಗೊಂಡಿರುವ ಎಎಸ್‍ಐ ಕಾಳೇಗೌಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳತನಗೈದು ಪರಾರಿಯಾಗುವ ವೇಳೆ ಸಿಸಿಟಿವಿ ಕ್ಯಾಮೆರಾ ಮುಂದೆ ಕಳ್ಳನ ಡ್ಯಾನ್ಸ್!

    ಕಳ್ಳತನಗೈದು ಪರಾರಿಯಾಗುವ ವೇಳೆ ಸಿಸಿಟಿವಿ ಕ್ಯಾಮೆರಾ ಮುಂದೆ ಕಳ್ಳನ ಡ್ಯಾನ್ಸ್!

    ಗಾಂಧಿನಗರ: ಕಳ್ಳರ ಗುಂಪೊಂದು ಕಳ್ಳತನ ಮಾಡಿ ಪರಾರಿಯಾಗುವ ವೇಳೆ ತಂಡದಲ್ಲಿಯ ಕಳ್ಳನೊಬ್ಬ ಸಿಸಿಟಿವಿ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

    ಶನಿವಾರ ರಾತ್ರಿ ಗಾಂಧಿ ನಗರ ಜಿಲ್ಲೆಯ ಸರಗಾಸನ ಎಂಬಲ್ಲಿ ಈ ಘಟನೆ ನಡೆದಿದೆ. ಕಳ್ಳರ ಗುಂಪಿನಲ್ಲಿದ್ದ ಓರ್ವ ಬೆಡ್ ಶೀಟ್ ಹೊದ್ದುಕೊಂಡು ಡ್ಯಾನ್ಸ್ ಮಾಡಿ ಪರಾರಿಯಾಗಿದ್ದಾನೆ. ಶನಿವಾರ ಅಪಾರ್ಟ್ ಮೆಂಟ್ ಗೆ ನುಗ್ಗಿದ ಮೂವರು ಕಳ್ಳರು ಎರಡು ಫ್ಲ್ಯಾಟ್ ನಲ್ಲಿ ಕೈಚಳಕ ತೋರಿಸಿದ್ದಾರೆ. ಕಳ್ಳತನದ ಬಳಿಕ ಕಳ್ಳರು ಓಡಿ ಹೋಗುವ ದೃಶ್ಯಗಳು ಕಟ್ಟಡದ ಪ್ರವೇಶ ದ್ವಾರದ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಅರವಿಂದ್ ಪಟೇಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು 1.81 ಲಕ್ಷ ರೂ. ದೋಚಿದ್ದಾರೆ. ನಂತರ ಅದೇ ಕಟ್ಟಡದ ಕಲ್ಪನಾ ಶುಕ್ಲಾ ಎಂಬ ಮಹಿಳೆ ಮನೆಗೆ ನುಗ್ಗಿ 61 ಸಾವಿರ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಕಟ್ಟಡದಿಂದ ಹೊರ ಹೋಗುತ್ತಿರುವಾಗ ಗುಂಪಿನಲ್ಲಿದ್ದ ಕಳ್ಳನೊಬ್ಬ ಸಿಸಿಟಿವಿ ಡ್ಯಾನ್ಸ್ ಮಾಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

  • 3 ಗಂಟೆಯಲ್ಲಿ ಮೊಬೈಲ್ ಪತ್ತೆ- ಮತ್ತೊಮ್ಮೆ ಬೆಂಗ್ಳೂರು ಪೊಲೀಸರಿಗೆ ಶಹಬ್ಬಾಸ್‍ಗಿರಿ!

    3 ಗಂಟೆಯಲ್ಲಿ ಮೊಬೈಲ್ ಪತ್ತೆ- ಮತ್ತೊಮ್ಮೆ ಬೆಂಗ್ಳೂರು ಪೊಲೀಸರಿಗೆ ಶಹಬ್ಬಾಸ್‍ಗಿರಿ!

    ಬೆಂಗಳೂರು: ಕಳೆದು ಹೋದ ಮೂರೇ ಘಂಟೆಯಲ್ಲಿ ಮೊಬೈಲ್ ಅನ್ನು ಪತ್ತೆ ಮಾಡಿ ಅದನ್ನು ಯುವತಿಯರು ತಲುಪಿಸುವ ಮೂಲಕ ನಗರದ ಪೊಲೀಸರು ಮತ್ತೊಮ್ಮೆ ಶಹಬ್ಬಾಸ್‍ಗಿರಿ ಪಡೆದುಕೊಂಡಿದ್ದಾರೆ.

    ಯುವತಿಯರಾದ ಆಕಾಂಕ್ಷ ಹಾಗೂ ಶೃತಿ ಮನೆಗೆ ಹೋಗಲು ಸೆಪ್ಟೆಂಬರ್ 29 ರಂದು ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ಮನೆಗೆ ತೆರಳಿದಾಗ ಮೊಬೈಲ್ ಕ್ಯಾಬಿನಲ್ಲೇ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಕ್ಯಾಬ್ ಅವರಿಗೆ ಮಾಹಿತಿ ನೀಡಿದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡ್ರೈವರ್ ನನ್ನು ಕೇಳಿದರೆ ನಂತರ ಬುಕ್ ಮಾಡಿದ ಪ್ರಯಾಣಿಕರು ಮೊಬೈಲ್ ತೆಗೆದುಕೊಂಡು ಹೋಗಿರಬಹುದು ಎಂದು ಹೇಳಿದ್ದಾನೆ.

    ಕ್ಯಾಬ್ ಸಂಸ್ಥೆಯಿಂದ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 2 ರಂದು ಯುವತಿಯರಿಬ್ಬರು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಉಬರ್ ಕ್ಯಾಬ್ ಡ್ರೈವರ್‌ನನ್ನು ಠಾಣೆಗೆ ಕರೆಸಿದ್ದಾರೆ. ಖುದ್ದು ಯುವತಿಯರ ಮುಂದೆಯೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ತನ್ನ ಬಳಿಯೇ ಇದೆ ಎಂದು ಉಬರ್ ಡ್ರೈವರ್ ತಪ್ಪನ್ನು ಒಪ್ಪಿಕೊಂಡು ಮೊಬೈಲನ್ನು ಹಿಂದಿರುಗಿಸಿದ್ದಾನೆ.

    ನಡೆದ ಈ ಎಲ್ಲ ಘಟನೆಯನ್ನು ಅಶೋಕ್ ಎಂಬವರು ಫೇಸ್‍ಬುಕ್ ನಲ್ಲಿ, ಪೊಲೀಸರಲ್ಲಿ ಎಲ್ಲ ಪೊಲೀಸರು ಕೆಟ್ಟವರಲ್ಲ. ಎಲ್ಲ ಪೊಲೀಸರು ಭ್ರಷ್ಟರಲ್ಲ. ಕೇವಲ ಮೂರೇ ಗಂಟೆಯಲ್ಲಿ ಮೊಬೈಲ್ ಹುಡುಕಿ ಕೊಟ್ಟಿದ್ದಕ್ಕೆ ಬೆಂಗಳೂರಿನ ಸಿಟಿ ಪೋಲಿಸರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಈ ಘಟನೆಯಿಂದಾಗಿ ನಮಗೆ ಆತ್ಮವಿಶ್ವಾಸ ಮತ್ತು ಪೊಲೀಸರ ಮೇಲೆ ಒಳ್ಳೆಯ ಭಾವನೆ ಮೂಡಿದೆ. ಸಹಾಯಕ್ಕಾಗಿ ನಾವು ಯಾವುದೇ ಸಮಯದಲ್ಲಿ ಅವರ ಬಳಿ ಹೋಗಬಹುದು ಎಂದು ಎಂದು ಅಶೋಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬಾಗಿಲಿನ ಬೀಗಕ್ಕೆ ಫೆವಿಕ್ವಿಕ್ ಹಾಕಿ ಹಾಡಹಗಲೇ 25 ಲಕ್ಷ ದೋಚಿದ!- ವಿಡಿಯೋ ನೋಡಿ

    ಬಾಗಿಲಿನ ಬೀಗಕ್ಕೆ ಫೆವಿಕ್ವಿಕ್ ಹಾಕಿ ಹಾಡಹಗಲೇ 25 ಲಕ್ಷ ದೋಚಿದ!- ವಿಡಿಯೋ ನೋಡಿ

    ಬೆಳಗಾವಿ: ಮಾಲೀಕನ ಗಮನ ಬೇರೆಡೆ ಸೆಳೆದು ಹಾಡಹಗಲೇ ಚಿನ್ನದಂಗಡಿಗೆ ಕನ್ನ ಹಾಕಿರುವ ಘಟನೆ ಬೆಳಗಾವಿಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

    ಮಾಲೀಕ ಆನಂದಪಟ್ಟಣ ಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಗಂಡಿಗೆ ಎರಡು ಬಾಗಿಲುಗಳಿದ್ದು, ಆನಂದ ಅಂಗಡಿಯ ಮುಖ್ಯ ಬಾಗಿಲನ್ನು ತೆರೆದಿದ್ದಾರೆ. ಬಳಿಕ ಇನ್ನೊಂದು ಬಾಗಿಲ ಬೀಗ ತೆಗೆಯಲು ಕೀಲಿ ಕೈಯನ್ನು ತೆಗೆದುಕೊಂಡು ಹೋದ ವೇಳೆ ಅಂಗಡಿ ಒಳಗೆ ಬಂದ ಕಳ್ಳ ಚೇರ್ ಮೇಲೆ ಇಟ್ಟಿದ್ದ 25 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಬ್ಯಾಗ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಹಣ ದೋಚುವ ಮುನ್ನ ಕಳ್ಳ ಇನ್ನೊಂದು ಬಾಗಿಲ ಬೀಗ ಬೇಗ ಓಪನ್ ಆಗಬಾರದೆಂದು ಫೆವಿಕ್ವಿಕ್ ಹಾಕಿದ್ದನು. ಕಳ್ಳನ ಕೈಚಳಕದ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.

    ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಈ ಘಟನೆ ಸಂಬಂಧಪಟ್ಟಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=-aGpe5Gv4LI

  • ರಸ್ತೆ ರಸ್ತೆ ಸುತ್ತಾಡ್ತಾರೆ.. ಯಾರೂ ಇಲ್ಲಾಂದ್ರೆ ಪೆಟ್ರೋಲ್ ಕದೀತಾರೆ..!

    ರಸ್ತೆ ರಸ್ತೆ ಸುತ್ತಾಡ್ತಾರೆ.. ಯಾರೂ ಇಲ್ಲಾಂದ್ರೆ ಪೆಟ್ರೋಲ್ ಕದೀತಾರೆ..!

    ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಗಳಿಂದ ಕಳ್ಳರು ಪೆಟ್ರೋಲ್ ಕದಿಯುತ್ತಿದ್ದ ಘಟನೆ ನಗರದ ವಿಜಯನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ.

    ಮನೆ ಮುಂದೆ ನಿಲ್ಲಿಸಿರುವ ಬೈಕ್, ಕಾರುಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು, ರಾತ್ರಿಯಾಗುತ್ತಿದಂತೆಯೇ ಬೈಕ್ ನಲ್ಲಿ ಬಂದು ತಮ್ಮ ಕರಾಮತ್ತು ತೋರಿಸಲು ಮುಂದಾಗಿದ್ದಾರೆ. ಕ್ಯಾನ್ ಹಿಡಿದು ಎಂಟ್ರಿ ಕೊಡುವ ಕಳ್ಳರು ಕಾರಿನ ಬಳಿ ತೆರಳಿ ಪೆಟ್ರೋಲ್ ಕದಿಯಲು ಮುಂದಾಗಿದ್ದಾರೆ. ಸದ್ಯ ಕಾರಿನಲ್ಲಿ ಪೆಟ್ರೋಲ್ ಕದಿಯುವ ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಗಸ್ಟ್ 9 ರ ರಾತ್ರಿಯೂ ವಿಜಯನಗರದ ಕ್ಲಬ್ ರಸ್ತೆಯಲ್ಲಿ ಬೈಕ್ ನಲ್ಲಿ ಎಂಟ್ರಿ ಕೊಟ್ಟಿದ್ದ ಕಳ್ಳರು, ಕಾರ್ ನಿಂದ ಪೆಟ್ರೋಲ್ ಕದಿಯಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಎಚ್ಚರಗೊಂಡಿದ್ದಾರೆ. ಪರಿಣಾಮ ಕಳ್ಳರು ತಾವು ಬಂದ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

    ಕಳ್ಳತನ ಮಾಡುವ ಮೊದಲು ಪ್ರತಿ ರಸ್ತೆಯನ್ನು ಸುತ್ತಾಡುವ ಕಳ್ಳರು, ಪ್ರತಿ ಮನೆಯ ಮುಂದೆ ನಿಲ್ಲಿಸಿರುವ ವಾಹನಗಳನ್ನು ಪರಿಶೀಲಿಸುತ್ತಾರೆ. ಬಳಿಕ ಬಂದು ಕೃತ್ಯ ಎಸಗುತ್ತಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಈ ಕುರಿತು ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಳ್ಳರು ಬಿಟ್ಟು ಹೋದ ಬೈಕ್‍ನ ಮಾಹಿತಿ ಹಾಗೂ ಸಿಸಿಟಿವಿಯಲ್ಲಿ ದೃಶ್ಯವಾಳಿಗಳನ್ನು ಆಧರಿಸಿ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ತಡರಾತ್ರಿ ಮನೆಗೆ ನುಗ್ಗಿ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಎಗರಿಸಿದ!

    ತಡರಾತ್ರಿ ಮನೆಗೆ ನುಗ್ಗಿ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಎಗರಿಸಿದ!

    ಮೈಸೂರು: ರಸ್ತೆಯಲ್ಲಿ ಹೋಗುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುವ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಕಳ್ಳನೊಬ್ಬ ತಡರಾತ್ರಿ ಮನೆಗೆ ನುಗ್ಗಿ ಗೃಹಿಣಿಯ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾನೆ.

    ನಂಜನಗೂಡು ತಾಲೂಕಿನ ಕೋಡಿ ನರಸೀಪುರ ಗ್ರಾಮದ ನಂದಿನಿ ಮಾಂಗಲ್ಯ ಸರ ಕಳೆದುಕೊಂಡವರು. ಶುಕ್ರವಾರ (ನಿನ್ನೆ) ತಡರಾತ್ರಿ ಮನೆಗೆ ನುಗ್ಗಿದ್ದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ನಂದಿನಿ ಅವರ ಪತಿ ಬಸಂತ್ ಕುಮಾರ್ ರಾತ್ರಿ ಪಾಳಿ ಕೆಲಸಕ್ಕೆ ಹೋಗಿದ್ದರು.

    ಈ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನು ಮುರಿದು ಒಳ ಬಂದ ಕಳ್ಳ, ನಂದಿನಿ ಬಾಯಿಯನ್ನು ಬಲವಂತವಾಗಿ ಮುಚ್ಚಿಸಿದ್ದಾನೆ. ಬಳಿಕ 1.2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಜಾಗ ಖಾಲಿ ಮಾಡಿದ್ದಾನೆ.

    ಕೂಡಲೇ ನಂದಿನಿ ಕಿರಿಚಾಡಿದ್ದರಿಂದ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಆಕೆಯ ಬಾವ ನಾರಾಯಣ ಮೂರ್ತಿ ಹೊರಬಂದ್ರು. ಆದರೆ ಅವರು ನೋಡುವಷ್ಟರಲ್ಲಿ ಸರಗಳ್ಳ ಸ್ಥಳದಿಂದ ಕಾಲ್ಕಿತ್ತಿದ್ದನು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಸ್ಪೆಕ್ಟರ್‌ ಶಿವಮೂರ್ತಿ, ದೊಡ್ಡ ಕವಲಂದೆ ಠಾಣೆ ಪಿಎಸ್‍ಐ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಬೆಂಗಳೂರು: ನಗರದಲ್ಲಿ ಸರಗಳ್ಳತನ ಹೆಚ್ಚುತ್ತಿದ್ದು, ಸರಗಳ್ಳನನ್ನು ಚೇಸ್ ಮಾಡಿ ಯುವಕನೊಬ್ಬ ಸೆರೆ ಹಿಡಿದಿರುವ ಘಟನೆ ಕುಮಾರಸ್ವಾಮಿ ಲೇಔಟ್ ನ ದೇವರಕೆರೆಯಲ್ಲಿ ನಡೆದಿದೆ.

    ಆರೋಪಿ ಚೇತನ್ ಶ್ವೇತಾ ಅವರ ಸುಮಾರು 70 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು. ಬಳಿಕ ಯುವಕ ಶರತ್ ಆರೋಪಿಯನ್ನು ಚೇಸ್ ಮಾಡಿ ಹಿಡಿದು ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ವಿವರ:
    ಗುರುವಾರ ಶ್ವೇತಾ ಅವರ ಬರ್ತ್ ಡೇ ಇತ್ತು. ಆದ್ದರಿಂದ ಹುಟ್ಟುಹಬ್ಬವನ್ನು ಮುಗಿಸಿ ಮನೆ ಮುಂದೆ ಸಂಬಂಧಿಕರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಆರೋಪಿ ವಾಕಿಂಗ್ ಮಾಡುವ ರೀತಿ ಶ್ವೇತಾ ಅವರ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಆಗ ಶ್ವೇತಾ ಕೂಗಿಕೊಂಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಶರತ್ ಸರಗಳ್ಳತನವನ್ನು ಗಮನಿಸಿ ತನ್ನ ಬೈಕಿನಲ್ಲಿ ಚೇಸ್ ಮಾಡಿಕೊಂಡು ಹೋಗಿದ್ದಾರೆ. ಶರತ್ ಸುಮಾರು 2 ಕಿ.ಮೀ ವರೆಗೆ ಆರೋಪಿಯನ್ನು ಚೇಸ್ ಮಾಡಿದ್ದಾರೆ.

    ಕೊನೆಗೆ ನಗರದ ಇಸ್ರೋ ಲೇಔಟ್ ನಲ್ಲಿ ಶರತ್ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕ ಶರತ್ ಸಾಹಸದಿಂದ ಮತ್ತೆ ಶ್ವೇತಾ ಅವರಿಗೆ ಮರಳಿ ಅವರ 70 ಗ್ರಾಂ ಸರ ಸಿಕ್ಕಿದೆ.

  • ಬೆಂಗಳೂರಿನ ಪಿ.ಜಿ. ನಿವಾಸಿಗಳೇ ಹುಷಾರ್!

    ಬೆಂಗಳೂರಿನ ಪಿ.ಜಿ. ನಿವಾಸಿಗಳೇ ಹುಷಾರ್!

    ಬೆಂಗಳೂರು: ಖತರ್ನಾಕ್ ಕಳ್ಳನೊಬ್ಬ ಹಾಡಹಗಲೇ ಪಿಜಿಗೆ ನುಗ್ಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಆದ ಘಟನೆ ಆರ್ ಆರ್ ನಗರದಲ್ಲಿ ನಡೆದಿದೆ.

    ಶಿವಮೊಗ್ಗ ಮೂಲದ ಯಶುರಾಜು ಎಂಬಾತನೇ ಕಳ್ಳ ಎಂದು ಗುರುತಿಸಲಾಗಿದೆ. ಜುಲೈ 10ರಂದು ಕಳ್ಳತನ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉತ್ತರಹಳ್ಳಿ ಮುಖ್ಯರಸ್ತೆ ಚನ್ನಸಂದ್ರದಲ್ಲಿರುವ ಚೈತು ಪಿಜಿ ಯಲ್ಲಿ ಖತರ್ನಾಕ್ ಕಳ್ಳನೊಬ್ಬ ಹಾಡಗಲೇ ಪಿಜಿಗೆ ನುಗ್ಗಿ ಇಡೀ ರೂಂಗಳನ್ನು ಜಾಲಾಡುತ್ತಾನೆ. ನಂತರ ವಾಲ್ ರೋಬ್ ಲಾಕ್ ಹೊಡೆದು, ಕೈಗೆ ಸಿಗುವ ಬೆಲೆ ಬಾಳುವ ವಸ್ತುಗಳನ್ನು ಮತ್ತು ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ವಾಚ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಸಂಪೂರ್ಣವಾಗಿ ಪಿಜಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಈ ಘಟನೆ ಕುರಿತು ಆರ್ ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

  • ಕಳ್ಳನಂತೆ ಮಧ್ಯರಾತ್ರಿ ಪ್ರೇಯಸಿ ಮನೆಗೆ ನುಗ್ಗಿದವನಿಗೆ ಕಂಕಣ ಭಾಗ್ಯ ಕೂಡಿ ಬಂತು!

    ಕಳ್ಳನಂತೆ ಮಧ್ಯರಾತ್ರಿ ಪ್ರೇಯಸಿ ಮನೆಗೆ ನುಗ್ಗಿದವನಿಗೆ ಕಂಕಣ ಭಾಗ್ಯ ಕೂಡಿ ಬಂತು!

    ಪಾಟ್ನಾ: ಯುವಕನೊಬ್ಬ ಮಧ್ಯರಾತ್ರಿ ತನ್ನ ಪ್ರೇಯಸಿ ಮನೆಗೆ ಕಳ್ಳನಂತೆ ಪ್ರವೇಶಿಸಿದ್ದಾನೆ. ಆದರೆ ಸಿಕ್ಕಿಬಿದ್ದ ಆತನಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

    ಈ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ವಿಶಾಲ್ ಸಿಂಗ್ ಕಳ್ಳನಂತೆ ಪ್ರೇಮಿ ಮನೆಗೆ ನುಗ್ಗಿದ ಪ್ರಿಯತಮ. ಆರ್ಮಿಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶಾಲ್ ಸಿಂಗ್ ಮೂಲತಃ ತಿಲೌತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಾರಾಜ್ ಗಂಜ್ ಗ್ರಾಮದವರು. ಇವರು ನೆರೆಯ ಗ್ರಾಮದ ತಮ್ಮ ಸಂಬಂಧಿಯಾದ ಲಕ್ಷ್ಮಿನಾ ಕುಮಾರಿಯುನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು.

    ಇತ್ತೀಚೆಗೆ ವಿಶಾಲ್ ರಜೆಯ ಮೇರೆಗೆ ಮನೆಗೆ ಬಂದಿದ್ದಾರೆ. ಯುವತಿಯ ಮನೆಯವರು ಮನೆಯ ಮೇಲ್ಛಾಣಿಯ ಮೇಲೆ ಮಲಗುತ್ತಾರೆ ಎಂದು ತಿಳಿದುಕೊಂಡು ಪ್ರೇಯಸಿಯನ್ನು ನೋಡಲು ಮಧ್ಯರಾತ್ರಿ ಮನೆಗೆ ಹೋಗಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರೊಬ್ಬರು ಎಚ್ಚರಗೊಂಡು ಕಳ್ಳ ಮನೆಯೊಳಗೆ ನುಗ್ಗಿದ್ದಾನೆ ಎಂದು ಕೂಗಿ ಎಲ್ಲರನ್ನೂ ಎಚ್ಚರಿಸಿ ಕೊನೆಗೆ ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ.

    ಗ್ರಾಮಸ್ಥರೆಲ್ಲರೂ ಸೇರಿ ವಿಶಾಲ್ ಗೆ ಥಳಿಸಲು ಮುಂದಾಗಿದ್ದಾರೆ. ಆಗ ಪ್ರೇಮಿಗಳಿಬ್ಬರು ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಬಳಿಕ ವಿಶಾಲ್ ಹಿಡಿದಿರುವ ಬಗ್ಗೆ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ವಿಶಾಲ್ ಕುಟುಂಬದವರು ಸ್ಥಳಕ್ಕೆ ಬಂದಿದ್ದಾರೆ. ಆಗ ವಿಶಾಲ್ ಅಜ್ಜ ಪಂಚ ಯಾದವ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಎರಡೂ ಹಳ್ಳಿಯವರನ್ನು ಸೇರಿಸಿ ಮಾತನಾಡಿದ್ದಾರೆ. ವರದಕ್ಷಿಣೆ ತೆಗೆದುಕೊಳ್ಳದೆ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬಳಿಕ ಇಬ್ಬರು ಗ್ರಾಮಸ್ಥರು, ಹಿರಿಯರು ಕುಳಿತು ಮಾತನಾಡಿ ಮದುವೆಗೆ ಒಪ್ಪಿಕೊಂಡಿದ್ದಾರೆ.

    ಹಿರಿಯರು ನಿಶ್ಚಯಿಸಿರುವಂತೆ ಗುರುವಾರ ಬೆಳಿಗ್ಗೆಯೇ ಇಬ್ಬರಿಗೂ ಹಿಂದೂ ಧರ್ಮದಂತೆ ನೂರಾರು ಜನರು ಮುಂದೆ ಮದುವೆ ಮಾಡಿಸಿದ್ದಾರೆ. ಇಬ್ಬರು ಪ್ರಾಪ್ತ ವಯಸ್ಕರಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡಿಸಿದ್ದಾರೆ. ನಾವು ಯಾವ ರೀತಿಯ ಕ್ರಮತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಇವರಿಬ್ಬರ ಮದುವೆಗೆ ಪೊಲೀಸರು ಆಗಮಿಸಿ ಶುಭ ಹಾರೈಸಿ ಹೋಗಿದ್ದಾರೆ.

  • ಕಳ್ಳತನಕ್ಕೂ ಮುಂಚೆ ಕಳ್ಳನ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಕಳ್ಳತನಕ್ಕೂ ಮುಂಚೆ ಕಳ್ಳನ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ನವದೆಹಲಿ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡುವಾಗ ಹತ್ತಿರದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸುವುದು ಸಾಮಾನ್ಯ, ಆದರೆ ದೆಹಲಿಯ ವಾಣಿಜ್ಯಮಳಿಗೆಗಳ ಕಳ್ಳತನಕ್ಕೆ ಬಂದ ಕಳ್ಳನೊಬ್ಬ ಸಿಸಿಟಿವಿ ಕಡೆ ಮುಖ ಮಾಡಿ ಸಖತ್ ಡ್ಯಾನ್ಸ್ ಮಾಡಿದ್ದಾನೆ. ಇವನ ಈ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಸಿಸಿಟಿವಿ ದೃಶ್ಯದ ಪ್ರಕಾರ ಘಟನೆ ಜುಲೈ 10 ರ ಬೆಳಗಿನ ಜಾವದಂದು ನಡೆದಿದ್ದು, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವಿಡಿಯೋ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಕಳ್ಳರು ದೆಹಲಿಯ ವಾಣಿಜ್ಯ ಪ್ರದೇಶಗಳಲ್ಲಿರುವ ಅಂಗಡಿಯ ಶಟರ್‍ಗಳನ್ನು ಕಿತ್ತು, ದರೋಡೆ ಮಾಡಿದ್ದಾರೆ. ಈ ವೇಳೆ ಕಳ್ಳತನಕ್ಕೂ ಮುಂಚೆ ಕಳ್ಳನೊಬ್ಬ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು, ಮಸ್ತ್ ಡ್ಯಾನ್ಸ್ ಸ್ಟೆಪ್ ಹಾಕಿದ್ದಾನೆ.

    ಘಟನೆ ಕುರಿತು ಸಿಸಿಟಿಯ ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ, ಕಳ್ಳನ ಡ್ಯಾನ್ಸ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಪೊಲೀಸರು ಆರೋಪಿಗಳನ್ನು ಗುರುತು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರು ಅದೇ ದಿನ ರಾತ್ರಿ ಸುಮಾರು 4 ಅಂಗಡಿಗಳಿಗೆ ಕನ್ನ ಹಾಕಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಅಪಹರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.