Tag: thief

  • ಮಂತ್ರಿ ಮಾಲ್ ಸಿಬ್ಬಂದಿಯಿಂದ ಬಾಲಕನ ಮೇಲೆ ಹಲ್ಲೆ!

    ಮಂತ್ರಿ ಮಾಲ್ ಸಿಬ್ಬಂದಿಯಿಂದ ಬಾಲಕನ ಮೇಲೆ ಹಲ್ಲೆ!

    -ಗೇಮ್ ಆಡಲು ಬಂದವನನ್ನ ಕಳ್ಳ ಎಂದ ಸಿಬ್ಬಂದಿ!

    ಬೆಂಗಳೂರು: ಗೇಮ್ ಆಡಲು ಹೋದ ಬಾಲಕನ ಮೇಲೆ ಮಂತ್ರಿ ಮಾಲ್ ಸಿಬ್ಬಂದಿ ಕಳ್ಳ ಎಂದು ಆರೋಪಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.

    ವಿಜಯ್ ಕುಮಾರ್(15) ಹಲ್ಲೆಗೊಳಗಾದ ಬಾಲಕ. ಡಿಸೆಂಬರ್ 21ರ ಸಂಜೆ ವಿಜಯ್ ಕುಮಾರ್ ಮಂತ್ರಿ ಮಾಲ್‍ಗೆ ಗೇಮ್ ಆಡಲು ಹೋಗಿದ್ದು, ಮಾಲ್‍ನ 2ನೇ ಮಹಡಿಯಲ್ಲಿ ತನ್ನ ಮೊಬೈಲ್ ಚಾರ್ಜ್‍ಗೆ ಹಾಕಿ ಮೊಬೈಲ್ ಬಳಸುತ್ತಿದ್ದ. ಅದೇ ವೇಳೆ ಅದೇ ಚಾರ್ಜಿಂಗ್ ಪಾಯಿಂಟ್‍ನಲ್ಲಿ ಬೇರೆಯವರು ತಮ್ಮ ಮೊಬೈಲ್ ಫೋನ್‍ಗಳನ್ನು ಚಾರ್ಜ್ ಗೆ ಹಾಕಿದ್ದರು. ಆಗ ಅಲ್ಲಿಗೆ ಬಂದಿದ್ದ ಮಂತ್ರಿ ಮಾಲ್‍ನ ನಾಲ್ವರು ಸಿಬ್ಬಂದಿ ಬಾಲಕನ ಬಳಿ ಬಂದು ಮೊಬೈಲ್ ಕಳ್ಳತನ ಮಾಡುತ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಬಾಲಕನನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದು ದೊಣ್ಣೆ ಮತ್ತು ವೈರ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಈ ಕುರಿತು ಬಾಲಕನ ಪೋಷಕರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 20 ವರ್ಷದಲ್ಲಿ 1,500 ಬೈಕ್ ಎಗರಿಸಿದ್ದ ಕಳ್ಳ ಅರೆಸ್ಟ್

    20 ವರ್ಷದಲ್ಲಿ 1,500 ಬೈಕ್ ಎಗರಿಸಿದ್ದ ಕಳ್ಳ ಅರೆಸ್ಟ್

    – ಎಷ್ಟೇ ಪ್ರಯತ್ನ ಪಟ್ರೂ ಕಸಬು ಬಿಡೋಕೆ ಆಗ್ತೀಲ್ಲ ಅಂದ ಆರೋಪಿ

    ಗಾಂಧಿನಗರ್: 20 ವರ್ಷಗಳಲ್ಲಿ 1,500 ಬೈಕ್‍ಗಳನ್ನು ಎಗರಿಸಿದ್ದ ಮೋಸ್ಟ್ ವಾಂಟೆಡ್ ಕಳ್ಳನನ್ನು ಗುಜರಾತ್‍ನ ಗೋಧ್ರಾ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

    ಅರವಿಂದ್ ಕುಮಾರ್ ಜಯಂತಿಲಾಲ್ ವ್ಯಾಸ್ (50) ಬಂಧಿತ ಆರೋಪಿ. ಬೈಕ್ ಮೇಲೆ ಗೋಧ್ರಾ ನಗರದಲ್ಲಿ ಸುತ್ತಾಡುತ್ತಿದ್ದ ವ್ಯಾಸ್‍ನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

    ಇಲ್ಲಿಯವರೆಗೆ ಎಷ್ಟು ಬೈಕ್ ಕಳ್ಳತನ ಮಾಡಿದ್ದೀಯಾ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಯಾವುದೇ ತಪ್ಪನ್ನು ಮುಚ್ಚಿಡದೆ ವ್ಯಾಸ್ ನೀಡಿದ್ದ ಅಂಕಿ-ಸಂಖ್ಯೆ ಕೇಳಿ ಪೊಲೀಸರೇ ಒಂದು ಕ್ಷಣ ತಬ್ಬಿಬ್ಬಾಗಿದ್ದರಂತೆ. ಕಳೆದ 20 ವರ್ಷಗಳಲ್ಲಿ ನಾನು 1,500 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದೇನೆ. ಈ ಕಸಬನ್ನು ಕೈಬಿಡಲು ಪ್ರಯತ್ನಿಸಿದರೂ ಆಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾನೆ.

    ಈ ಹಿಂದೆಯು ವ್ಯಾಸ್ ಬೈಕ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದ. ಆದರೆ ದೀಪಾವಳಿ ವೇಳೆ ಬೇಲ್ ಪಡೆದು ಜೈಲಿನಿಂದ ಹೊರಬಂದಿದ್ದ. ಬಳಿಕವೂ ತನ್ನ ಕೈಚಳಕವನ್ನು ಮುಂದುವರಿಸಿದ್ದ ವ್ಯಾಸ್, ಜೈಲಿನಿಂದ ಬಂದ ಮೇಲೆ 19 ಬೈಕ್‍ಗಳನ್ನು ಕಳ್ಳತನ ಮಾಡಿದ್ದಾನೆ. ಅವುಗಳನ್ನು ವಶಕ್ಕೆ ಪಡೆದು ವ್ಯಾಸ್‍ನನ್ನು ಬಂಧಿಸಿದ್ದೇವೆ ಎಂದು ಗೋಧ್ರಾ ಡಿಎಸ್‍ಪಿ ಆರ್.ಐ.ದೇಸಾಯಿ ತಿಳಿಸಿದ್ದಾರೆ.

    ಮದ್ಯದ ಚಟಕ್ಕೆ ಒಳಗಾಗಿರುವ ವ್ಯಾಸ್‍ಗೆ ಇಬ್ಬರು ಪತ್ನಿಯರಿದ್ದಾರೆ. ಆದರೆ ಮಕ್ಕಳಾಗಿಲ್ಲ. ವಡೋದರಾ ನಗರ ವ್ಯಾಪ್ತಿಯಲ್ಲಿಯೇ ಹೆಚ್ಚಾಗಿ ವ್ಯಾಸ್ ತನ್ನ ಕೈಚಳಕ ತೋರಿಸುತ್ತಿದ್ದ. ಕದ್ದು ತಂದ ಬೈಕ್‍ಗಳನ್ನು ಬಿಚ್ಚಿ ಬಿಡಿಭಾಗಗಳನ್ನು ವ್ಯಾಸ್ ಮಾರಾಟ ಮಾಡುತ್ತಿದ್ದ ಎಂದು ದೇಸಾಯಿ ಹೇಳಿದ್ದಾರೆ.

    ಎಲ್ಲ ರೀತಿಯ ಬೈಕ್ ಗಳಿಗೆ ಬರುವಂತೆ ವಿವಿಧ ಬಗೆಯ ಕೀಗಳನ್ನು ವ್ಯಾಸ್ ಹೊಂದಿದ್ದ. ವಾಹನಗಳು ಹೆಚ್ಚಾಗಿ ನಿಲ್ಲುತ್ತಿದ್ದ ಜಾಗಕ್ಕೆ ತೆರಳಿ. ಯಾವ ವಾಹನಕ್ಕೆ ಕೀ ಸರಿಹೋಗುತ್ತದೇಯೋ ಅದನ್ನು ಎಗರಿಸುತ್ತಿದ್ದ ಎಂದು ಡಿಎಸ್‍ಪಿ ಮಾಹಿತಿ ನೀಡಿದ್ದಾರೆ.

    ಎಷ್ಟೋ ಬಾರಿ ನಾನು ಕಳ್ಳತನ ಮಾಡಬಾರದು ಅಂತ ನಿರ್ಧಾರ ಮಾಡಿದ್ದೆ. ಆದರೆ ಸಮಾಜ ಮಾತ್ರ ನನ್ನನ್ನು ಒಳ್ಳೆಯವನಾಗಿ ಇರಲು ಬಿಡುತ್ತಿಲ್ಲ. ಹೀಗಾಗಿ ನಾನು ಮತ್ತೆ ಬೈಕ್ ಕಳ್ಳತನಕ್ಕೆ ಇಳಿದುಬಿಟ್ಟೆ ಎಂದು ಬಂಧಿತ ಆರೋಪಿ ವ್ಯಾಸ್ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಡಹಗಲೇ ಟೆಕ್ಕಿ ಮನೆಯಲ್ಲಿ ಕಳ್ಳತನ!

    ಹಾಡಹಗಲೇ ಟೆಕ್ಕಿ ಮನೆಯಲ್ಲಿ ಕಳ್ಳತನ!

    ಬೆಂಗಳೂರು: ಹಾಡಹಗಲೇ ಎಂಜಿನಿಯರ್ ಒಬ್ಬರ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.

    ಆನೇಕಲ್‍ನ ಹೊಂಪಲಘಟ್ಟ ಸಮೀಪದ ಎಂಡಿಎಸ್ ಮಿಲೆನಿಯಂ ವ್ಯಾಲಿ ಲೇಔಟ್‍ನ ನಿವಾಸಿ ಸೀತಾರಾಮ್ ಎಂಬವರ ಮನೆಗೆ ಮಂಗಳವಾರ ಮಧ್ಯಾಹ್ನ ಕಳ್ಳರು ನುಗ್ಗಿ ಕೃತ್ಯ ಎಸಗಿದ್ದಾರೆ. ಸುಮಾರು 30 ಗ್ರಾಂ ಚಿನ್ನ, ಎರಡು ಬೆಳ್ಳಿಯ ವಿಗ್ರಹ, 35,000 ರೂ. ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

    ಕೋಲಾರ ಮೂಲದ ಸೀತಾರಾಮ್ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಕೆಲಸಕ್ಕೆ ತೆರಳಿದಾಗ ಮನೆ ಕಳ್ಳತನವಾಗಿದೆ. ಲೇಔಟ್‍ನಲ್ಲಿ ಕಾಂಪೌಂಡ್ ಹಾಗೂ ಸೆಕ್ಯೂರಿಟಿ ವ್ಯವಸ್ಥೆ ಇಲ್ಲ. ಹೀಗಾಗಿ ಪದೇ ಪದೇ ಮನೆ ಕಳ್ಳತವಾಗುತ್ತಿವೆ.

    ಕಳೆದ ಕೆಲವು ತಿಂಗಳಿನಲ್ಲಿ ನಡೆದ ಮೂರನೇ ಕಳ್ಳತನ ಪ್ರಕರಣ ಇದಾಗಿದೆ. ಇಷ್ಟಾದರೂ ಪೊಲೀಸರು ಹಾಗೂ ಲೇಔಟ್ ಮಾಲೀಕರು ಕ್ಯಾರೆ ಅನ್ನುತ್ತಿಲ್ಲ ಎಂದು ಲೇಔಟ್ ನಿವಾಸಿಗಳು ದೂರಿದ್ದಾರೆ. ಸೀತಾರಾಮ್ ಅವರು ಕಳ್ಳತನದ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾರ್‌ನಿಂದ 6 ಲಕ್ಷ ರೂ. ಮೌಲ್ಯದ ಮದ್ಯ ಎಗರಿಸಿದ ಕಳ್ಳರು

    ಬಾರ್‌ನಿಂದ 6 ಲಕ್ಷ ರೂ. ಮೌಲ್ಯದ ಮದ್ಯ ಎಗರಿಸಿದ ಕಳ್ಳರು

    ಮಂಡ್ಯ: ರಾತ್ರೋರಾತ್ರಿ ಎಸ್‍ಎಲ್‍ಐಎನ್ ಬಾರ್‌ನ ಬಾಗಿಲು ಒಡೆದು ಕೆಲ ದುಷ್ಕರ್ಮಿಗಳು ಸುಮಾರು 6 ಲಕ್ಷ ರೂ. ಮೌಲ್ಯದ ಮದ್ಯ ಎಗರಿಸಿದ ಘಟನೆ ಮಳವಳ್ಳಿ ತಾಲೂಕಿನ ಎಚ್.ಎಚ್.ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಎಚ್.ಎಚ್.ಕೊಪ್ಪಲು ಗ್ರಾಮದಲ್ಲಿರುವ ಎಮ್‍ಎಸ್‍ಐಎಲ್ ಸರ್ಕಾರಿ ಬಾರ್ ನಲ್ಲಿ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರ ಪರಿಶೀಲನೆ ವೇಳೆ 250 ಕೇಸ್‍ಗಳ ಸುಮಾರು 6 ಲಕ್ಷ ರೂ. ಮೌಲ್ಯದ ವಿವಿಧ ಬ್ರಾಂಡ್‍ಗಳ ಮದ್ಯವನ್ನು ಕಳ್ಳರು ಎಗರಿಸಿದ್ದಾರೆ. ಮಾಹಿತಿ ಕಲೆ ಹಾಕಿಕೊಂಡು ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಕಳ್ಳರಿಗೆ ಬಲೆ ಬೀಸಿದ್ದಾರೆ. ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಮತ್ತೆ ಕಳ್ಳರ ಕೈಚಳಕ – ನಡುರಸ್ತೆಯಲ್ಲಿ ಮೊಬೈಲ್ ಪರ್ಸ್ ಕಳ್ಳತನ ಯತ್ನ

    ಬೆಂಗ್ಳೂರಲ್ಲಿ ಮತ್ತೆ ಕಳ್ಳರ ಕೈಚಳಕ – ನಡುರಸ್ತೆಯಲ್ಲಿ ಮೊಬೈಲ್ ಪರ್ಸ್ ಕಳ್ಳತನ ಯತ್ನ

    – ಸಿಕ್ಕಿಬಿದ್ದ ಚೋರನಿಗೆ ಸಾರ್ವಜನಿಕರಿಂದ ಗೂಸಾ

    ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಹೆಚ್ಚಾಗುತ್ತಿದ್ದು, ರಸ್ತೆಯಲ್ಲಿ ಮೊಬೈಲ್ ಹಾಗೂ ಪರ್ಸ್ ಕದಿಯುತ್ತಿದ್ದ ವೇಳೆ ಕಳ್ಳ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಬಳಿ ನಡೆದಿದೆ.

    ಪ್ರಮೋದ್ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ ಕಳ್ಳ. ಈತನ ಜೊತೆ ಬೈಕಿನಲ್ಲಿ ಮೂವರು ಕಳ್ಳತನ ಮಾಡಲು ಬಂದಿದ್ದರು. ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಅನ್ನಪೂರ್ಣೇಶ್ವರಿ ನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೈಕ್‍ನಲ್ಲಿ ಬಂದ ಮೂವರು ಪ್ರದೀಪ್ ಎಂಬವರ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದರು.

    ಈ ವೇಳೆ ಪ್ರದೀಪ್ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಸಾರ್ವಜನಿಕರು ಕಳ್ಳ ಪ್ರಮೋದ್‍ನನ್ನು ಲಾಕ್ ಮಾಡಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಸಿಕ್ಕ ಆರೋಪಿಗೆ ಸಾರ್ವಜನಿಕರು ಗೂಸಾಕೊಟ್ಟು ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಡ್ಗೀರ ಹಾಸ್ಟೆಲ್‍ನಲ್ಲಿ ವಿಕೃತ ಕಾಮಿಯ ಸಂಚಾರ- ಹೆಣ್ಮಕ್ಕಳ ಬಟ್ಟೆ ಧರಿಸಿ ಸೈಕೋ ಆನಂದ

    ಹುಡ್ಗೀರ ಹಾಸ್ಟೆಲ್‍ನಲ್ಲಿ ವಿಕೃತ ಕಾಮಿಯ ಸಂಚಾರ- ಹೆಣ್ಮಕ್ಕಳ ಬಟ್ಟೆ ಧರಿಸಿ ಸೈಕೋ ಆನಂದ

    ಹಾಸನ: ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ಕಾಮುಕರು ನುಗ್ಗಿ ಅವಾಂತರ ಸೃಷ್ಟಿಸೋದು ಮಾಮೂಲಾಗಿ ಬಿಟ್ಟಿದೆ. ಈಗ ಹಾಸನದ ವಿದ್ಯಾನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಕಾಮುಕ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದಾನೆ.

    ಮುಂಜಾನೆ ಸುಮಾರು 2.40ಕ್ಕೆ ಕಳ್ಳಮಾರ್ಗದಲ್ಲಿ ಹಾಸ್ಟೆಲ್ ನ ಟೆರೇಸ್ ಪ್ರವೇಶಿಸಿ ಅಲೆದಾಡುವ ಕಾಮಿ, ಹೆಣ್ಣು ಮಕ್ಕಳ ಬಟ್ಟೆ ಧರಿಸುವುದು, ಒಳ ಉಡುಪುಗಳೊಂದಿಗೆ ವಿಕೃತ ಆನಂದ ಅನುಭವಿಸುತ್ತಾನೆ. ನಂತರ ಹಾಸ್ಟೆಲ್ ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವಿಗೂ ಯತ್ನಿಸಿದ್ದಾನೆ. ಬೈಕ್ ಸ್ಟಾರ್ಟ್ ಆಗದೇ ಇದ್ದಾಗ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮುಂಜಾನೆ ನಿವಾಸಿಗಳು ನಿದ್ರೆಗೆ ಜಾರಿದ್ದು ಕಳ್ಳ ಕಾಮುಕನ ಆಟ ಯಾರಿಗೂ ಗೊತ್ತಾಗಿಲ್ಲ ಎಂದು ವಿದ್ಯಾರ್ಥಿನಿ ಹರ್ಷಿತಾ ಹೇಳಿದ್ದಾಳೆ.

    ಹಾಸ್ಟೆಲ್ ಕಟ್ಟಡದಿಂದ ಹೊರ ಬಂದ ನಂತರ ಪಕ್ಕದ ಮನೆಯಲ್ಲಿ ನಿಲ್ಲಿಸಿದ್ದ ಹೋಂಡಾ ಶೈನ್ ಬೈಕ್ ಕಳವಿಗೆ ಯತ್ನ ಮಾಡುವ ಕಳ್ಳ, ಲಾಕ್ ಮಾಡದ ಬೈಕನ್ನು ಹೊರಗಡೆ ತೆಗೆದುಕೊಂಡು ಹೋಗುತ್ತಾನೆ. ಈ ದೃಶ್ಯವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬೈಕ್ ರಿಪೇರಿ ಇದ್ದ ಕಾರಣ ಒಂದೂವರೆ ತಿಂಗಳಿಂದ ಮನೆ ಮುಂದೆ ನಿಲ್ಲಿಸಲಾಗಿತ್ತು. ಕೊನೆಗೆ ಅದು ಸ್ಟಾರ್ಟ್ ಆಗದೇ ಇದ್ದಾಗ, ನೇತಾಜಿ ಶಾಲೆ ಪಕ್ಕದಲ್ಲೇ ಬೆಂಕಿ ಹಚ್ಚಿ ಕಳ್ಳ-ಕಾಮುಕ ಪರಾರಿಯಾಗಿದ್ದಾನೆ ಎಂದು ಬೈಕ್ ಮಾಲೀಕ ಸುನಿಲ್ ತಿಳಿಸಿದ್ದಾರೆ.

    ಇತ್ತ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಬಡಾವಣೆ ಪೊಲೀಸರು ಹಾಗೂ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಬಹುಶಃ ಅಪರಿಚಿತ ಮಾನಸಿಕ ಅಸ್ವಸ್ಥನಿರಬಹುದು. ಸದ್ಯಕ್ಕೆ ಬೈಕ್ ಕಳ್ಳತನಕ್ಕೂ ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದ್ದರಿಂದ ಆತನ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಎಸ್‍ಪಿ ಡಾ.ಪ್ರಕಾಶ್ ಗೌಡ ತಿಳಿಸಿದ್ದಾರೆ.

    2017 ಡಿಸೆಂಬರ್ 7 ರ ಮುಂಜಾನೆ ಹಾಸನ ಹೊರವಲಯದಲ್ಲಿರುವ ಪಶು ವೈದ್ಯಕೀಯ ಮಹಿಳಾ ಹಾಸ್ಟೆಲ್ ಗೆ ಕಾಮುಕನೊಬ್ಬ ನುಗ್ಗಿ ಆತಂಕ ಸೃಷ್ಟಿಸಿದ್ದನು. ಆತ ಯಾರೆಂಬುದು ಎಂಬುದು ಈವರೆಗೂ ಗೊತ್ತಾಗಿಲ್ಲ. ಈ ನಡುವೆ ಮತ್ತೊಬ್ಬ ಅಪರಿಚಿತ ಅದೇ ರೀತಿಯ ಕಾಟ ನೀಡಿರುವುದು ಸಹಜವಾಗಿ ಕಳವಳಕ್ಕೆ ಕಾರಣವಾಗಿದೆ. ಕೂಡಲೇ ಆತನನ್ನು ಬಂಧಿಸಿ ಆತಂಕ ದೂರ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇವ್ರು ಹೈಟೆಕ್ ಕಳ್ಳರು-ಗೂಗಲ್ ಮ್ಯಾಪ್ ನೋಡಿ ಕಳ್ಳತನದ ಪ್ಲಾನ್

    ಇವ್ರು ಹೈಟೆಕ್ ಕಳ್ಳರು-ಗೂಗಲ್ ಮ್ಯಾಪ್ ನೋಡಿ ಕಳ್ಳತನದ ಪ್ಲಾನ್

    ನವದೆಹಲಿ: ದಾರಿಗಾಗಿ ಜನರು ಗೂಗಲ್ ಮ್ಯಾಪ್ ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದೆಹಲಿಯಲ್ಲಿ ದೆಹಲಿಯಲ್ಲಿ ಇಬ್ಬರು ಗೂಗಲ್ ಮ್ಯಾಪ್ ನೋಡಿ ಕಳ್ಳತನಕ್ಕೆ ಕೈ ಹಾಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ಮುಶೀರ್ ಮತ್ತು ಹರ್ಷ ಗುಪ್ತ ಬಂಧಿತ ಆರೋಪಿಗಳು. ಈ ಇಬ್ಬರು ಗೂಗಲ್ ಮ್ಯಾಪ್ ನೋಡಿಯೇ ಕಳ್ಳತನದ ರೂಪುರೇಷಗಳನ್ನು ರಚಿಸುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ದೆಹಲಿಯ ಸೆಕ್ಟರ್-8ರಲ್ಲಿ ಶುಕ್ರವಾರ ಪೊಲೀಸರು ಕಳ್ಳತನ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಲು ಪ್ಲಾನ್ ಹೇಗೆ ಮಾಡಲಾಗುತ್ತಿತ್ತು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

     

    ಕಳ್ಳತನಕ್ಕೆ ಹೋಗುವ ಮೊದಲು ಗೂಗಲ್ ಮ್ಯಾಪ್ ನಿಂದ ತಮಗೆ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು. ಅಂದ್ರೆ ಯಾವ ಮಾರ್ಗದಲ್ಲಿ ಟ್ರಾಫಿಕ್ ಇದೆ. ಎಲ್ಲಿ ಜನರು ವಿರಳವಾಗಿದ್ದರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿ ಕಳ್ಳತನಕ್ಕೆ ಹೋಗುತ್ತಿದ್ದರು. ಅದೇ ರೀತಿ ಅಲ್ಲಿಂದ ತಮ್ಮ ಅಡ್ಡ ತಲುಪಲು ಇರುವ ಅಡ್ಡದಾರಿಗಳನ್ನು ಸಹ ಗೂಗಲ್ ಮ್ಯಾಪ್ ನಿಂದ ಕಂಡುಹಿಡಿಯುತ್ತಿದ್ದರು. ಇದೇ ತಂತ್ರಗಳನ್ನು ಬಳಸಿ 15 ದಿನಗಳ ಹಿಂದೆ ಶಿಕ್ಷಕಿಯೊಬ್ಬರ ಬಂಗಾರದ ಬಳೆಯನ್ನು ಕದ್ದಿದ್ದರು.

    ಕಳ್ಳರು ಕೆಂಪು ಬಣ್ಣದ ಸಾಕ್ಸ್ ಧರಿಸಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಕೆಂಪು ಬಣ್ಣ ಸಾಕ್ಸ್ ಧರಿಸಿ ಮಾಡಿದ ಕಳ್ಳತನಗಳು ಯಶಸ್ವಿಯಾಗಿವೆಯಂತೆ. ಬಂಧನಕ್ಕೊಳಗಾದಾಗ ಮುಶೀರ್ ಮತ್ತು ಹರ್ಷ ಕೆಂಪು ಸಾಕ್ಸ್ ಧರಿಸಿದ್ದರು.

    ಶುಕ್ರವಾರ ಆರೋಪಿಗಳನ್ನು ಬಂಧಿಸಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ ಎಂದು ಸೆಕ್ಟರ್ 20ರ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 73 ಪ್ರಕರಣಕ್ಕೆ ಬೇಕಾಗಿದ್ದ ಅಂತರರಾಜ್ಯ ಕಳ್ಳ ಬಂಧನ

    73 ಪ್ರಕರಣಕ್ಕೆ ಬೇಕಾಗಿದ್ದ ಅಂತರರಾಜ್ಯ ಕಳ್ಳ ಬಂಧನ

    ಬಾಗಲಕೋಟೆ: ನಟೋರಿಯಸ್ ಅಂತರರಾಜ್ಯ ಕಳ್ಳನನ್ನು ಇಳಕಲ್ ಪೊಲೀಸರು ಬಂಧಿಸಿದ್ದು, ಒಟ್ಟು 1.42 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಮಹಾರಾಷ್ಟ್ರ ಮಿರಜ್ ಜಿಲ್ಲೆಯ ಬೆಳಂಕಿ ಗ್ರಾಮದ ನಿವಾಸಿ ಲೇಮಲ್ಯಾ ಅಲಿಯಾಸ್ ಶೀನು ಬಂಧಿತ ಅಂತರರಾಜ್ಯ ಕಳ್ಳ. ಆರೋಪಿ ಲೇಮಲ್ಯಾ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಲೇಮಲ್ಯಾ ವಿರುದ್ಧ ಜಿಲ್ಲೆಯ ವಿವಿಧೆಡೆ 53 ಪ್ರಕರಣ ಸೇರಿದಂತೆ ಒಟ್ಟು 73 ಕೇಸ್‍ಗಳು ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿದ್ದವು. ಹೆಸರು ಹಾಗೂ ಐಡಿ ಕಾರ್ಡ್ ಗಳನ್ನು ಬದಲಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು, ಕಳ್ಳತನ ಮಾಡುತ್ತಿದ್ದ. ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು ಎಸ್‍ಪಿ ಸಿ.ಬಿ.ರಿಷ್ಯಂತ್ ಅವರ ನೇತೃತ್ವ ಹಾಗೂ ಡಿಎಸ್‍ಪಿ ಎಸ್.ಬಿ.ಗಿರೀಶ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಚುರುಕು ಕಾರ್ಯಾಚರಣೆ ನಡೆಸುತ್ತಿದ್ದ ತಂಡವು ಇಳಕಲ್ ಪೊಲೀಸರ ಸಹಾಯದಿಂದ ಲೇಮಲ್ಯಾನನ್ನು ಬಂಧಿಸಿದ್ದಾರೆ.

    ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ 4 ಪ್ರಕರಣಗಳನ್ನು ಭೇದಿಸಲಾಗಿದೆ. ಉಳಿದ ಪ್ರಕರಣಗಳ ಕುರಿತು ವಿಚಾರಣೆ ನಡೆಯುತ್ತಿದ್ದು, ಬಂಧಿತನಿಂದ 1,42,800 ರೂ. ಮೌಲ್ಯದ 40 ಗ್ರಾಂ ಚಿನ್ನ, 27 ಗ್ರಾಂ ಬೆಳ್ಳಿ ಆಭರಣ ಹಾಗೂ 20 ಸಾವಿರ ರೂ. ಮೌಲ್ಯದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಟ ವಿನೋದ್ ರಾಜ್ ಬಳಿಯಿಂದ ಕಳವುಗೈದ ಖದೀಮ ಅರೆಸ್ಟ್

    ನಟ ವಿನೋದ್ ರಾಜ್ ಬಳಿಯಿಂದ ಕಳವುಗೈದ ಖದೀಮ ಅರೆಸ್ಟ್

    ಬೆಂಗಳೂರು: ನಗರದ ಹೊರವಲಯದ ನೆಲಮಂಗಲದಲ್ಲಿ ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್‍ನ ಓರ್ವ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.

    ಕಳೆದ ತಿಂಗಳು ಅಭಿಮಾನಿ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್‍ರನ್ನು ಕಾರಿನಲ್ಲಿ ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿ ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು. ಈ ಗ್ಯಾಂಗ್‍ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್‍ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ.

    ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ರಾಯಲ್ ಜೀವನ ಮಾಡುತ್ತಿದ್ದ. ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು ಬ್ರ್ಯಾಂಡೆಂಡ್ ಬರೋಬ್ಬರಿ 5 ರಿಂದ 8 ಸಾವಿರ ಬೆಲೆ ಬಾಳುವಂತದ್ದಾಗಿದೆ. ಶೂಗಳು, ಗಾಗಲ್ಸ್ ಹಾಕಿಕೊಂಡು ಹೀರೋ ರೇಂಜೆ ಗೆ ಬಿಲ್ಡಪ್ ಕೊಟ್ಟು ಐಶಾರಾಮಿ ಜೀವನ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯಕ್ಕೆ ಓಜಿಕುಪ್ಪಂ ಗ್ಯಾಂಗ್‍ನ ಓರ್ವ ಅಂದರ್ ಆಗಿದ್ದು, ಮತ್ತಷ್ಟು ಖದೀಮರಿಗೆ ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದ ತಂಡ ಬಲೆ ಬೀಸಿದೆ. ಆರೋಪಿ ಬಂಧನದಿಂದ ನಟ ವಿನೋದ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮುಂದೆ ಈ ಖದೀಮರ ಗ್ಯಾಂಗ್ ಯಾರಿಗೂ ದ್ರೋಹ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಹಣ ರಿಕವರಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪುಸ್ತಕವನ್ನು ಟೇಬಲ್ ಮೇಲಿಟ್ಟು ಮೊಬೈಲ್ ಕದ್ದ ಕಳ್ಳ- ವಿಡಿಯೋ ನೋಡಿ

    ಪುಸ್ತಕವನ್ನು ಟೇಬಲ್ ಮೇಲಿಟ್ಟು ಮೊಬೈಲ್ ಕದ್ದ ಕಳ್ಳ- ವಿಡಿಯೋ ನೋಡಿ

    ಹಾಸನ: ಮಾಹಿತಿ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಮೊಬೈಲ್ ಎಗರಿಸಿದ ಘಟನೆ ಜಿಲ್ಲೆಯ ಅರಸೀಕೆರೆ ಪಟ್ಟಣದ ಸತ್ಯನಿಧಿ ಸ್ಟೋರ್‍ನಲ್ಲಿ ನಡೆದಿದೆ.

    ಹೌದು, ಅಂಗಡಿ ಮಾಲೀಕನ ಕಣ್ತಪ್ಪಿಸಿ, ಟೇಬಲ್ ಮೇಲಿದ್ದ ಮೊಬೈಲ್ ಅನ್ನು ಚಾಲಕಿ ಕಳ್ಳನೊಬ್ಬ ಎಗರಿಸಿದ್ದಾನೆ. ಬಸವರಾಜು ಎಂಬವರ ಮೊಬೈಲ್ ಕಳ್ಳತನವಾಗಿದ್ದು, ಮೊಬೈಲ್ ಕದಿಯುತ್ತಿರುವ ದೃಶ್ಯ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನಗರದ ಸತ್ಯನಿಧಿ ಮೊಬೈಲ್ ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬ, ಮಾಹಿತಿ ಕೇಳುವ ನೆಪದಲ್ಲಿ ಮಾಲೀಕನ ಗಮನ ಬೆರೆಡೆ ಸೆಳೆದಿದ್ದಾನೆ. ಬಳಿಕ ತನ್ನ ಕೈಯಲ್ಲಿದ್ದ ಪುಸ್ತಕವನ್ನು ಮೊದಲು ಟೇಬಲ್ ಮೇಲಿದ್ದ ಮೊಬೈಲ್ ಮೇಲೆ ಹಾಕಿದ್ದಾನೆ. ನಂತರ ಪುಸ್ತಕ ತೆಗೆದುಕೊಳ್ಳುವ ನೆಪಮಾಡಿ, ಮೊಬೈಲ್ ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಅಂಗಡಿ ಮಾಲೀಕ ಮೊಬೈಲ್ ಕಳುವಾಗುತ್ತಿದ್ದಂತೆ, ಸಿಸಿಟಿವಿಯನ್ನು ಪರೀಕ್ಷಿಸಿದಾಗ ಕಳ್ಳನ ಕೈಚಳಕ ಬೆಳಕಿಗೆ ಬಂದಿದೆ. ಕೂಡಲೇ ಬಸವರಾಜು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=2CaZCKlWBXk