Tag: thief

  • ಬ್ಯಾಗ್ ಕದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್

    ಬ್ಯಾಗ್ ಕದ್ದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್

    ಬೆಂಗಳೂರು: ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಇಂದು ಸಂಜೆ ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ಧವಾಗಿದ್ದ ಕೆ.ಎಸ್.ಆರ್.ಟಿ.ಸಿ ಎಕ್ಸ್ ಪ್ರೆಸ್ ಬಸ್‍ನ ನಿರ್ವಾಹಕಿ ಬಸ್ ನಿಲ್ದಾಣದ ಕಚೇರಿಗೆ ಎಂಟ್ರಿ ಮಾಡಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಸ್‍ನಲ್ಲಿ ಇಟ್ಟಿದ್ದ ಬ್ಯಾಗನ್ನು ಗಮನಿಸಿದ ಖದೀಮನೊಬ್ಬ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾನೆ.

    ಇದನ್ನು ಗಮಿನಿಸಿದ ಲೇಡಿ ಕಂಡಕ್ಟರ್ ಅವನನ್ನು ಹಿಂಬಾಲಿಸಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕಪಾಳಮೋಕ್ಷ ಮಾಡಿದ್ದಾರೆ. ಬ್ಯಾಗ್‍ನಲ್ಲಿ ಮೊಬೈಲ್ ಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದು, ಕಳ್ಳ ಸಂಜೆ ಶಾಲಾ ಕಾಲೇಜು ಹಾಗೂ ಕೆಲಸ ಬಿಟ್ಟ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಹೆಚ್ಚು ಜನರಿರುವುದನ್ನು ಗಮನಿಸಿ ಬ್ಯಾಗ್ ಕದ್ದು ಎಸ್ಕೇಪ್ ಆಗಲು ಮುಂದಾಗಿದ್ದಾನೆ.

    ಈ ಘಟನೆ ಆನೇಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಪತ್ನಿ ನೋಡಲು ಹೋಗ್ತಿದ್ದವನಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

    ಪತ್ನಿ ನೋಡಲು ಹೋಗ್ತಿದ್ದವನಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

    ಲಕ್ನೋ: ಗ್ರಾಮಸ್ಥರು ಅಮಾಯಕ ವ್ಯಕ್ತಿಯನ್ನು ಕಳ್ಳನೆಂದು ಅನುಮಾನಗೊಂಡು ಆತನಿಗೆ ಥಳಿಸಿ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಬಾರಾಬಂಕಿ ಬಳಿಯ ರಾಘೋಪುರ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಜಿತ್ ಕುಮಾರ್‍ನನ್ನು ತೀವ್ರಗಾಯಗೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

    ನಡೆದಿದ್ದೇನು?
    ತಿಂದೋಲಾ ಗ್ರಾಮದ ನಿವಾಸಿ ಸುಜಿತ್ ಕುಮಾರ್ ಶುಕ್ರವಾರ ಪತ್ನಿಯನ್ನು ನೋಡಲೆಂದು ತನ್ನ ಅತ್ತೆ ಮನೆಗೆ ತೆರಳುತ್ತಿದ್ದನು. ಈ ವೇಳೆ ರಾತ್ರಿ ನಾಯಿಗಳು ಸುಜಿತ್ ಕುಮಾರ್‌ನನ್ನು ಓಡಿಸಿಕೊಂಡು ಬಂದಿವೆ. ಇದರಿಂದ ಭಯಗೊಂಡ ಸುಜೀತ್ ನಾಯಿಗಳಿಂದ ತಪ್ಪಿಸಿಕೊಳ್ಳಲು ಅಲ್ಲೆ ಸಮೀಪವಿದ್ದ ಮನೆಗೆ ಓಡಿ ಹೋಗಿ ಅವಿತುಕೊಂಡಿದ್ದಾನೆ. ಈ ವೇಳೆ ಮನೆಯವರು ಈತನನ್ನು ಕಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ. ತಕ್ಷಣ ನೆರೆಹೊರೆಯವರು ಸೇರಿಕೊಂಡು ಸುಜಿತ್ ಕುಮಾರ್‌ನನ್ನು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಎಸ್‍ಪಿ ಆಕಾಶ್ ಟೊಮಾರ್ ತಿಳಿಸಿದ್ದಾರೆ

    ಸುಮಾರು ಐದಾರು ಜನರು ನನ್ನ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಮ್ಮ ತಂದೆ ಘಟನೆ ನಡೆದ ಸ್ಥಳಕ್ಕೆ ಹೋದಾಗ ಗ್ರಾಮಸ್ಥರು ಹಲ್ಲೆ ಮಾಡುತ್ತಿರುವುದನ್ನು ನಿಲ್ಲಿಸಿ. ಪತಿಯನ್ನು ಕಾಪಾಡಿ ತಕ್ಷಣ ಲಕ್ನೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುಜಿತ್ ಪತ್ನಿ ಹೇಳಿದ್ದಾರೆ.

    ಈ ಕುರಿತು ಸುಜಿತ್ ಕುಮಾರ್ ಪತ್ನಿ ಪೂನಂ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಅನ್ವಯ ನಾವು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಈ ಪ್ರಕರಣ ಸಂಬಂಧ ಉಮೇಶ್ ಯಾದವ್ ಮತ್ತು ಶ್ರವಣ್ ಯಾದವ್ ಇಬ್ಬರನ್ನು ಬಂಧಿಸಿದ್ದೇವೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮನೆಗಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ – ಸ್ಥಳೀಯರಿಂದ ಗೂಸ

    ಮನೆಗಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ – ಸ್ಥಳೀಯರಿಂದ ಗೂಸ

    ಯಾದಗಿರಿ: ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳನನ್ನು, ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ ಇಂದು ನಡೆದಿದೆ.

    ಹಾಡಹಗಲೇ ನಗರದ ಹೊಸಹಳ್ಳಿ ಕ್ರಾಸಿನ ಹನುಮಂತ ದೇವಾಲಯದ ಬಳಿಯ, ಮನೆಯೊಂದರಲ್ಲಿ ಕಳ್ಳನೊಬ್ಬ ಆಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ. ಈ ವೇಳೆ ಕಳ್ಳ ಸ್ಥಳೀಯರ ಕಣ್ಣಿಗೆ ಬಿದ್ದಿದ್ದಾನೆ.

    ಕಳ್ಳನ ಚಲನವಲನ ಕಂಡು ಅನುಮಾನಗೊಂಡ ಸ್ಥಳೀಯರು, ಹಿಡಿದು ಥಳಿಸಿದಾಗ ಮನೆ ಕಳ್ಳತನ ವಿಚಾರವನ್ನು ಕಳ್ಳ ಬಾಯಿ ಬಿಟ್ಟಿದ್ದಾನೆ. ಇನ್ನೂ ಸಿಕ್ಕ ಕಳ್ಳನನ್ನು ಮನಬಂದಂತೆ ಥಳಿಸಿದ ಸ್ಥಳೀಯರು ನಂತರ ಆತನನ್ನು ನಗರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳನನ್ನು ವಿಚಾರಣೆ ನಡೆಸುತ್ತಿದ್ದಾರೆ.

  • ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಬೆಂಗಳೂರು: ಸಾಮೂಹಿಕ ವಿವಾಹ ನೆರವೇರುತ್ತಿದ್ದ ಸಂದರ್ಭದಲ್ಲಿ ಗಟ್ಟಿಮೇಳದ ವೇಳೆ ತಾಳಿ ನಾಪತ್ತೆಯಾಗಿ, ವಧು-ವರರು ಗಲಿಬಿಲಿಯಾದ ಘಟನೆ ನೆಲಮಂಗಲ ಸಮೀಪದ ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದಿದೆ.

    ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಶುಭಕಾರ್ಯ ನಡೆಯುತ್ತಿತ್ತು. ಈ ಶುಭಸಮಾರಂಭದಲ್ಲಿ ಅಡಮಾರನಹಳ್ಳಿ ಗ್ರಾಮಸ್ಥರು 15 ಜೋಡಿಗಳ ಮದುವೆ ಮಾಡಿಸುತ್ತಿದ್ದರು. ಆದರೆ ಈ ಖುಷಿ ನಡುವೆ ಕಳ್ಳನೊಬ್ಬ ತಾಳಿಯನ್ನೇ ಕದ್ದು ಪರಾರಿ ಆಗಿದ್ದಾನೆ.

    ಕಳೆದ ನಾಲ್ಕು ವರ್ಷದಿಂದ ಗ್ರಾಮಸ್ಥರು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಹಿಂದೆಂದು ಈ ರೀತಿ ಆಗಿರಲಿಲ್ಲ. ಆದರೆ ಮದುವೆ ಸಮಾರಂಭದಲ್ಲಿ ಎಲ್ಲರೂ ಬ್ಯುಸಿಯಾಗಿರುವಾಗ ಕ್ಷಣಾರ್ಧದಲ್ಲಿ ತಾಳಿ ಕದ್ದು ಕಲ್ಯಾಣ ಮಂಟಪದಿಂದ ಕಳ್ಳ ನಾಪತ್ತೆಯಾಗಿದ್ದಾನೆ. ಚಾಲಕಿ ಕಳ್ಳ ತನ್ನ ಕೈಚಳಕ ತೋರಿದ್ದು, ಶುಭ ಸಮಾರಂಭದಲ್ಲಿ ಹೀಗಾಯ್ತಲ್ಲಾ ಎಂದು ಕುಟುಂಬಸ್ಥರು ಹಾಗೂ ಸ್ಥಳದಲ್ಲಿದ್ದವರು ತಳಮಳಗೊಂಡಿದ್ದಾರೆ.

    ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಕುಖ್ಯಾತ ಮನೆಗಳ್ಳರ ಬಂಧನ – 33 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

    ಕುಖ್ಯಾತ ಮನೆಗಳ್ಳರ ಬಂಧನ – 33 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

    ರಾಯಚೂರು: ಮನೆಯಲ್ಲಿ ಯಾರು ಇಲ್ಲ ಎಂಬುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಿಲಾಡಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

    ಅಬ್ದುಲ್ ರೆಹಮಾನ್ ಮತ್ತು ಚಾಂದ್ ಪಾಷಾ ಬಂಧಿತ ಆರೋಪ. ಮತ್ತೊಬ್ಬ ಕಳ್ಳ ತಲೆಮರೆಸಿಕೊಂಡಿದ್ದು ಪೊಲೀಸರು ಅವನಿಗೆ ಬಲೆ ಬಿಸಿದ್ದಾರೆ.

    ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬೀಗ ಮುರಿದು ಮನೆಯನ್ನು ದೋಚುತ್ತಿದ್ದ ಕಳ್ಳರನ್ನು ಸಿಂಧನೂರು ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 33 ಲಕ್ಷ ರೂ ಮೌಲ್ಯದ 110 ಗ್ರಾಂ ಚಿನ್ನ, 260 ಗ್ರಾಂ ಬೆಳ್ಳಿ ಮತ್ತು 60 ಸಾವಿರ ರೂ. ನಗದನ್ನು ಪೊಲೀಸರು ಜಪ್ತಿಮಾಡಿದ್ದಾರೆ.

  • ಬ್ಯಾಂಕ್‍ನಿಂದ ಡ್ರಾ ಮಾಡಿ ಹೊರಬರ್ತಿದ್ದಂತೆಯೇ 15 ಲಕ್ಷ ರೂ. ದೋಚಿದ್ರು!

    ಬ್ಯಾಂಕ್‍ನಿಂದ ಡ್ರಾ ಮಾಡಿ ಹೊರಬರ್ತಿದ್ದಂತೆಯೇ 15 ಲಕ್ಷ ರೂ. ದೋಚಿದ್ರು!

    ವಿಜಯಪುರ: ವ್ಯಾಪಾರಿಯ ಗಮನವನ್ನು ಬೇರೆ ಕಡೆ ಸೆಳೆದ ಕಳ್ಳರು 15 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ವಿಜಯಪುರ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದೆ.

    ನಗರದ ನಿವಾಸಿ ಕುಣಾಲ ಪೋರವಾಲ ಹಣ ಕಳೆದುಕೊಂಡ ವ್ಯಾಪಾರಿ. ಕುಣಾಲ ಅವರು ಆಗ ತಾನೇ ಕೆನರಾ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಹೊರ ಬಂದಿದ್ದರು. ಇದನ್ನು ನೋಡಿ ಕುಣಾಲ ಅವರ ಬಳಿಗೆ ಬಂದ ಕಳ್ಳರು, ಸ್ಕೂಟರ್ ಕೆಳಗೆ ಹಣ ಬಿದ್ದಿದೆ ಎಂದು ಹೇಳಿದ್ದಾರೆ. ಕುಣಾಲ ಪೋರವಾಲ ಅವರು ಕೆಳಗೆ ನೋಡುತ್ತಿದ್ದಂತೆಯೇ ಕಳ್ಳರು ಹಣದ ಬ್ಯಾಗ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

    ಕುಣಾಲ ಪೋರವಾಲ ಅವರು ಬೇಳೆಕಾಳು ವ್ಯಾಪಾರಿಯಾಗಿದ್ದು, ತಮ್ಮ ವ್ಯವಹಾರಕ್ಕಾಗಿ 15 ಲಕ್ಷ ರೂ. ವನ್ನು ಬ್ಯಾಂಕ್‍ನಿಂದ ಪಡೆದಿದ್ದರು. ಆದರೆ ಇದೀಗ ಆ ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

    ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

    ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

    ಬೆಂಗಳೂರು: ನಕಲಿ ಕೀಗಳನ್ನ ಮಾಡಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಾಲಾಜಿ ಪ್ರಕಾಶ್ ಬಂಧಿತ ಮನೆಗಳ್ಳ. ಈತ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಡೌಟ್ ಬರದ ರೀತಿಯಲ್ಲಿ ತನ್ನ ಕೈಚಳ ತೋರಿ ಪರಾರಿಯಾಗುತ್ತಿದ್ದನು. ಈತನು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‍ಗಳನ್ನೇ ಟಾರ್ಗೆಟ್ ಮಾಡುತ್ತಿದ್ದನು. ಕಳ್ಳತನ ಕೇಸ್‍ನಲ್ಲಿ ಒಂದು ಬಾರಿ ಜೈಲಿಗೂ ಹೋಗಿದ್ದನು. ಅಲ್ಲಿಂದ ಬಂದ ಮೇಲೆ ಮತ್ತೆ ಕೆಜಿ, ಕೆಜಿ ಚಿನ್ನಾಭರಣ ದೋಚಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಕಳ್ಳತನ ಹೇಗೆ ಮಾಡುತ್ತಿದ್ದ:
    ಬಾಡಿಗೆ ಪಡೆಯುವ ರೀತಿಯಲ್ಲಿ ಅಪಾರ್ಟ್ ಮೆಂಟ್‍ಗೆ ಹೋಗುತ್ತಿದ್ದನು. ಆಗ ಅಲ್ಲಿನ ಮನೆಯ ಕೀ ಫೋಟೋ ಕ್ಲಿಕ್ಕಿಸಿಕೊಂಡು ಬಂದು ನಕಲಿ ಕೀ ತಯಾರು ಮಾಡಿಕೊಳ್ಳುತ್ತಿದ್ದನು. ನಂತರ ಅಪಾರ್ಟ್ ಮೆಂಟ್‍ನ ಅದೇ ಮನೆಗೆ ಹೋಗಿ ಯಾರೂ ಇಲ್ಲದ ವೇಳೆ ನೋಡಿಕೊಂಡು ನಕಲಿ ಕೀ ಬಳಸಿ ಕಳ್ಳತನ ಮಾಡಿಕೊಂಡು ಬರುತ್ತಿದ್ದನು.

    ನಕಲಿ ಕೀ ಬಳಸಿ ಈತ ಆಗ್ನೇಯ ವಿಭಾಗದ ಕೋರಮಂಗಲ, ಮೈಕೋಲೇಔಟ್, ಸುದ್ಗಂಟೆ ಪಾಳ್ಯ, ಸೇರಿ ಹಲವೆಡೆ ತಮ್ಮ ಕೈಚಳಕ ತೋರಿದ್ದಾನೆ. ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ಲಕ್ಷ ಬೆಲೆಬಾಳುವ ಬರೋಬ್ಬರಿ 1 ಕೆ.ಜಿ 260 ಗ್ರಾಂ ಚಿನ್ನಾಭರಣ ಕದ್ದಿದ್ದನು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಹೇಳಿದ್ದಾರೆ.

    ಸದ್ಯ ಆರೋಪಿಯಿಂದ ಪೊಲೀಸರು ಬರೋಬ್ಬರಿ ಒಂದು ಕಾಲು ಕೆ.ಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಸಾವಿರಕ್ಕೂ ಹೆಚ್ಚು ನಕಲಿ ಕೀಗಳು ಮತ್ತು ಕೀ ಮೆಕರ್ ವಶಪಡಿಕೊಂಡಿದ್ದಾರೆ. ಆರೋಪಿ ಪ್ರಕಾಶ್ ಬಂಧನದ ಬಳಿಕ ಎಂಟು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

  • ಕುಖ್ಯಾತ ಕಳ್ಳ ಅಂದರ್ – 33 ಲಕ್ಷ ರೂ. ಮೌಲ್ಯದ 9 ಕ್ಯಾಮೆರಾ ವಶ

    ಕುಖ್ಯಾತ ಕಳ್ಳ ಅಂದರ್ – 33 ಲಕ್ಷ ರೂ. ಮೌಲ್ಯದ 9 ಕ್ಯಾಮೆರಾ ವಶ

    ಬೆಂಗಳೂರು: ಯಾವ ಮನೆಗೂ ಕನ್ನ ಹಾಕದೆ ಕೂತಲ್ಲೆ ಲಕ್ಷಗಟ್ಟಲೇ ಹಣ ಲೂಟಿ ಹೊಡೆಯುತ್ತಿದ್ದು, ಜೂಜಿಗೆ ಪಾಗಲ್ ಆಗಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಅಶ್ವಕ್ ಖಾನ್ ಬಂಧಿತ ಆರೋಪಿ. ಈತ ಆನ್‍ಲೈನ್‍ನಲ್ಲಿ ಬೆಲೆಬಾಳುವ ಕ್ಯಾಮೆರಾಗಳನ್ನ ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಖರ್ತನಾಕ್ ಕಳ್ಳ. ಈತ ಜಸ್ಟ್ ಡಯಲ್‍ನ ಮೂಲಕ ಆನ್‍ಲೈನ್‍ನಲ್ಲಿ ಕ್ಯಾಮೆರಾಗಳನ್ನ ಬಾಡಿಗೆಗೆ ನೀಡುವ ಸ್ಟುಡಿಯೋದವರ ನಂಬರ್ ಪಡೆದುಕೊಂಡಿದ್ದನು. ನಂತರ ನಕಲಿ ಅಡ್ರೆಸ್‍ಪ್ರೂಫ್ ನೀಡಿ ಕ್ಯಾಮೆರಾಗಳನ್ನ ಬಾಡಿಗೆಗೆ ಪಡಿಯುತ್ತಿದ್ದನು. ಆದರೆ ಅದನ್ನ ಹಿಂದಿರುಗಿಸದೇ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗುತ್ತಿದ್ದ. ಸದ್ಯ ಆರೋಪಿಯನ್ನ ಬಂಧಿಸಿ ಸುಮಾರು 33 ಲಕ್ಷ ಬೆಲೆಬಾಳುವ 9 ಕ್ಯಾಮೆರಾಗಳನ್ನ ವಶಪಡಿಸಿಕೊಳ್ಳುವಲ್ಲಿ ಹೈಗ್ರೌಂಡ್ಸ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮೋಸ ಹೋಗಿದ್ದ ಮನೋಹರ್ ಹೇಳಿದ್ದಾರೆ.

    ಬೆಲೆಬಾಳುವ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಆರೋಪಿ ಅವುಗಳನ್ನ ಅರ್ಧಬೆಲೆಗೆ ಒಎಲ್‍ಎಕ್ಸ್ ನಲ್ಲಿ ಮಾರಾಟ ಮಾಡಿ ಹಣ ಪಡಿಯುತ್ತಿದ್ದ. ದ್ವಿತೀಯ ಪಿಯುಸಿ ಫೇಲ್ ಆಗಿದ್ದ ಈತ ಯಾವುದೇ ಕೆಲಸ ಕಾರ್ಯ ಮಾಡದೇ ಜೂಜಿಗೆ ದಾಸನಾಗಿದ್ದನು. ಕ್ಯಾಮೆರಾ ಮಾರಾಟ ಮಾಡಿ ಬಂದ ಹಣದಲ್ಲಿ ಬೆಂಗಳೂರಿನಿಂದ ಮುಂಬೈಗೆ ಫ್ಲೈಟ್‍ನಲ್ಲಿ ತೆರಳಿ ಜೂಜಾಡಿ ಬಂದ ಹಣದಲ್ಲಿ ಮಜಾ ಉಡಾಯಿಸುತ್ತಿದ್ದನು. ಜೂಜಾಡಲು ಹಣವಿಲ್ಲದ್ದಕ್ಕೆ ಈ ಕಾರ್ಯಕ್ಕೆ ಇಳಿದೆ ಅಂತ ವಿಚಾರಣೆ ವೇಳೆ ಬಾಯುಬಿಟ್ಟಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ದೇವರಾಜು ತಿಳಿಸಿದ್ದಾರೆ.

    ಸದ್ಯ ಬಂಧಿತ ಆರೋಪಿ ವಿರುದ್ಧ ಹೈಗ್ರೌಂಡ್ಸ್, ವಿಜಯನಗರ, ಬನಶಂಕರಿ, ಜಯನಗರ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 7 ವಂಚನೆ ಪ್ರಕರಣಗಳು ಬಯಲಾಗಿದೆ. ಪೊಲೀಸರು ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

    ಬಾಯಿ ಬಿಡಿಸಲು ಕಳ್ಳನಿಗೆ ಹಾವು ಬಿಟ್ಟ ಪೊಲೀಸರು – ವಿಡಿಯೋ ವೈರಲ್

    ಜಕಾರ್ತಾ: ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ.

    ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಪೊಲೀಸರು ಹಾವನ್ನು ಬಿಟ್ಟು ವಿಭಿನ್ನವಾಗಿ ಕಳ್ಳನಿಂದ ಸತ್ಯ ಹೇಳಿಸಲು ಮಾಡಿದ್ದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಮೊಬೈಲ್ ಕಳ್ಳತನದ ಆರೋಪದಲ್ಲಿ ಒಬ್ಬಾತ ಬಂಧನಕ್ಕೆ ಒಳಗಾಗಿದ್ದ. ಬಂಧನಕ್ಕೆ ಒಳಗಾಗಿದ್ದ ಆತ ವಿಚಾರಣೆ ವೇಳೆ ಸರಿಯಾದ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಬಾಯಿ ಬಿಡಿಸಲು ಪೊಲೀಸರು ಆತನ ಎರಡು ಕೈಗಳನ್ನು ಕಟ್ಟಿ ಹಾಕಿ ಅವನ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ. ಇದರಿಂದ ಕಳ್ಳ ಭಯದಿಂದ ಕುಳಿತಿದ್ದ. ಬಳಿಕ ಅಧಿಕಾರಿಯೊಬ್ಬರು ಬಂದು ಹಾವಿನ ಬಾಲ ಹಿಡಿದು ಕಳ್ಳನ ಬಾಯಿ ಹತ್ತಿರ ತೆಗೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಇದರಿಂದ ಭಯಗೊಂಡ ಕಳ್ಳ ಚೀರಾಡಿದ್ದಾನೆ.

    ಅಷ್ಟಕ್ಕೂ ಸುಮ್ಮನಾಗದ ಪೊಲೀಸರ ಹಾವಿನ ಎಡೆಯನ್ನು ಹಿಡಿದುಕೊಂಡು ಕಳ್ಳನ ಮುಖದ ಬಳಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳ ತುಂಬಾ ಭಯಪಟ್ಟು ಕೂಗಾಡಿ, ಒದ್ದಾಡಿದ್ದಾನೆ. ಆದರೆ ಪೊಲೀಸ್ ಅಧಿಕಾರಿ ಮಾತ್ರ ನಗುತ್ತಾ ಮನರಂಜನೆ ರೀತಿಯಲ್ಲಿ ಕಳ್ಳನಿಗೆ ಹಿಂಸೆ ಕೊಟ್ಟಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ಕೇಳಿಬಂದಿದೆ. ಬಳಿಕ ಇಂಡೋನೇಷ್ಯಾದ ಪೊಲೀಸರು ನೆಟ್ಟಿಗರ ಬಳಿ ಕ್ಷಮೆ ಯಾಚಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಪಪುವಾ ಪೊಲೀಸ್ ವಕ್ತಾರರು, ಅಧಿಕಾರಿಗಳಿಗೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಸಹ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋಜು, ಮಸ್ತಿಗಾಗಿ ಹೈಟೆಕ್ ಕಳ್ಳತನ – ಹಾಸನದಲ್ಲಿ ತಾಂಝೇನಿಯಾ ವಿದ್ಯಾರ್ಥಿ ಅರೆಸ್ಟ್

    ಮೋಜು, ಮಸ್ತಿಗಾಗಿ ಹೈಟೆಕ್ ಕಳ್ಳತನ – ಹಾಸನದಲ್ಲಿ ತಾಂಝೇನಿಯಾ ವಿದ್ಯಾರ್ಥಿ ಅರೆಸ್ಟ್

    – ಮೈಕ್ರೋ ಕ್ಯಾಮ್ ಬಳಸಿ ಎಟಿಎಂನ ಮಾಹಿತಿ ಕದಿಯುತ್ತಿದ್ದ ವಿದೇಶಿ ಕಳ್ಳ

    ಹಾಸನ: ವಿದೇಶದಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳು ಮೋಜಿನ ಜೀವನಕ್ಕೆ ಹೇಗೆ ಹೈಟೆಕ್ ಕಳ್ಳತನ ಮಾಡುವ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ನಮ್ಮ ಮುಂದಿದೆ. ಹೌದು ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ಎಟಿಎಂ ಒಂದರಲ್ಲಿ ಕಾರ್ಡ್‍ಗಳ ಮಾಹಿತಿ ಕದಿಯುವ ಕದೀಮನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಟಿಎಂ ಬಳಕೆದಾರರೆ ಎಚ್ಚರ ಎಚ್ಚರ ಎನ್ನುವಂತಿದೆ ಇವನ ಹೈಟೆಕ್ ಕಳ್ಳತನ.

    ತಾಂಝೇನಿಯಾ ಮೂಲದ ಮೈಸೂರಿನ ಮಹಾರಾಜ ಕಾಲೇಜಿನ ಬಿಕಾಂ ವಿದ್ಯಾರ್ಥಿ ಆಂಡ್ರ್ಯೂ ರೆನಾಟಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಮ್ಮನೆ ತನ್ನ ಪಾಡಿಗೆ ಓದಿಕೊಂಡಿದ್ದರೆ, ಶಿಕ್ಷಣದ ಬಳಿ ತನ್ನ ದೇಶ ಸೇರಿಕೊಳ್ಳುತ್ತಿದ್ದ. ಹುಡುಗಿಯರ ಚಟಕ್ಕೆ ಬಿದ್ದ ಆಂಡ್ರೂಗೆ ಹಣದ ಕೊರತೆ ಉಂಟಾಗಿತ್ತು. ಎಟಿಎಂನಿಂದ ಹಣ ಕದಿಯುವುದು ಹೇಗೆ ಎಂಬುದನ್ನು ಯುಟ್ಯೂಬ್ ನಲ್ಲಿ ಹುಡುಕಾಡಿ ಕೊನೆಗೆ ಒಂದು ಹೈಟೆಕ್ ಕಳ್ಳತನದ ಪ್ಲಾನ್ ಮಾಡಿದ್ದ.

    ಏನದು ಪ್ಲಾನ್?
    ಅದೂ ಕೂಡ ಹೆಚ್ಚು ಕಷ್ಟವೂ ಪಡದ ಕಳ್ಳತನ. ಸಿಸಿಟಿವಿಯಲ್ಲಿ ಸೆರೆಯಾದರೂ ಪರವಾಗಿಲ್ಲ ಅಲ್ಲಿ ಕಳ್ಳತನದ ಸುಳಿವು ಸಿಗಲ್ಲ. ಆ ರೀತಿ ಕಳ್ಳತನ ಮಾಡೋದರಲ್ಲಿ ಎಕ್ಸಪರ್ಟ್ ಆಗಿದ್ದನು. ಎಟಿಎಂನ ಕೀಬೋರ್ಡ್ ಇರುವ ಸ್ಥಳದಲ್ಲಿ ಒಂದು ಮೈಕ್ರೋ ಕ್ಯಾಮರಾ, ಕಾರ್ಡ್ ಸ್ವೈಪ್ ಮಾಡುವ ಸ್ಥಳದಲ್ಲಿ ಒಂದು ಸ್ಕ್ಯಾನರ್ ಡಿವೈಸ್, ಇಷ್ಟೆ ಇವನ ಬಂಡವಾಳ. ವಾರಕ್ಕೊಮ್ಮೆ ಅಲ್ಲಿಗೆ ಬಂದು ಅದರಲ್ಲಿರೋ ಮೆಮೋರಿ ಕಾರ್ಡ್ ತೆಗೆದುಕೊಂಡು ಹೋಗಿ, ಗ್ರಾಹಕರ ಎಟಿಎಂ ಕಾರ್ಡ್ ಮಾಹಿತಿ ಬಳಸಿ ಬೇಕಾದಾಗ ತನ್ನ ಮೋಜಿಗೆ ಹಣ ತೆಗೆದುಕೊಳ್ಳುತ್ತಿದ್ದನು. ಯಾರಿಗೂ ಅನುಮಾನವೂ ಬಾರದಂತೆ ಮೂರು ತಿಂಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ.

    ಆಂಡ್ರೂ ಎಟಿಎಂನಿಂದ ಹಣ ಕದಿಯಲು ಯು ಟ್ಯೂಬ್‍ನಿಂದ ಮಾಹಿತಿ ಸಂಗ್ರಹಿಸಿ, ಕಳ್ಳತನಕ್ಕೆ ಬೇಕಾದ ಮೈಕ್ರೋ ಕ್ಯಾಮರಾ, ಚಿಪ್‍ಗಳು, ಡಿವೈಸ್‍ಗಳನ್ನ ಚೈನಾದಿಂದ ತರೆಸಿಕೊಂಡಿದ್ದನು. ಮೈಸೂರಿನಲ್ಲಿ ಕೆನರಾ ಬ್ಯಾಂಕ್‍ನ ಎಟಿಎಂಗಳಲ್ಲಿ ಸಾಕಷ್ಟು ಹಣ ಕದ್ದಿದ್ದನು. ಒಂದೇ ಕಡೆ ಕದ್ದಲ್ಲಿ ಅನುಮಾನ ಬರುತ್ತೆ ಅನ್ನೋ ಕಾರಣಕ್ಕೆ ಬೇರೆ ನಗರಗಳಲ್ಲಿ ಕೃತ್ಯ ಎಸಗುತ್ತಿದ್ದನು. ಅಂತೆಯೇ ಹೊಳೇನರಸೀಪುರದ ಎಟಿಎಂನಲ್ಲಿ ಗ್ರಾಹಕರ ಹಣ ಲಪಟಾಯಿಸಿದ್ದ. ಈ ಬಗ್ಗೆ ದೂರು ಬಂದು ತನಿಖೆ ನಡೆಸಿದಾಗ ಎಟಿಎಂನಲ್ಲಿ ರಹಸ್ಯ ಡಿವೈಸ್ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಖತರ್ನಾಕ್ ಹೈಟೆಕ್ ಫಾರಿನ್ ಕಳ್ಳ ಸಿಕ್ಕಿಬಿದ್ದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv