Tag: thief

  • ಅಂಗವಿಕಲ ವೃದ್ಧೆಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

    ಅಂಗವಿಕಲ ವೃದ್ಧೆಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

    ಬೆಂಗಳೂರು: ಅಂಗವಿಕಲ ವೃದ್ಧೆಯ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಹೊರವಲಯ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಾರಾಯಣಸ್ವಾಮಿ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು. ನಾರಾಯಣಸ್ವಾಮಿ ಹಾಗೂ ಮಂಜುನಾಥ್ ಬಾಗೇಪಲ್ಲಿಯವರಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಆನೇಕಲ್ ಪಟ್ಟಣದ ಮನೆಯಲ್ಲಿ ಅಂಗವಿಕಲ ಒಂಟಿ ಮಹಿಳೆ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕೈಕಾಲು ಕಟ್ಟಿ ಚಿನ್ನ, ಬೆಳ್ಳಿ ಹಾಗೂ ಒಂದು ಲಕ್ಷ ರೂ. ದೋಚಿ ಪರಾರಿಯಾಗಿದ್ದರು.

    ಈ ಪ್ರಕರಣದ ಸಂಬಂಧ ದೂರು ದಾಖಲಿಸಿಕೊಂಡ ಆನೇಕಲ್ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ, ಈ ವೇಳೆ ಆರೋಪಿಗಳು ಕಳ್ಳತನ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದು, ಬಂಧಿತ ಆರೋಪಿಗಳಿಂದ ಕದ್ದೊಯ್ದಿದ್ದ ಚಿನ್ನ, ಬೆಳ್ಳಿ ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳನ್ನು ಜೈಲಿಗೆ ಅಟ್ಟುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

  • ರೋಗಿ ನೋಡುವ ನೆಪದಲ್ಲಿ ಮೊಬೈಲ್, ಪರ್ಸ್ ಕದ್ದ

    ರೋಗಿ ನೋಡುವ ನೆಪದಲ್ಲಿ ಮೊಬೈಲ್, ಪರ್ಸ್ ಕದ್ದ

    ಬೆಂಗಳೂರು: ಆಸ್ಪತ್ರೆಯಲ್ಲಿ ರೋಗಿ ನೋಡುವ ನೆಪದಲ್ಲಿ ಬಂದ ಕಳ್ಳನೊಬ್ಬ ಮೊಬೈಲ್ ಹಾಗೂ ಪರ್ಸ್ ಎಗರಿಸಿರುವ ಘಟನೆ ನಡೆದಿದೆ.

    ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ನೆಲಮಂಗಲ ಪಟ್ಟಣದ ಲೋಹಿತ್ ನಗರದ ಪಾಷ ಅವರ ಸಂಬಂಧಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿ ನೋಡಿಕೊಳ್ಳಲು ಪಾಷ ಆಸ್ಪತ್ರೆಯಲ್ಲಿಯೇ ಇದ್ದರು.

    ಈ ವೇಳೆ ರಾತ್ರಿ ಒಂದು ಗಂಟೆ ಸುಮಾರಿಗೆ ಪಕ್ಕದ ಹಾಸಿಗೆಯಲ್ಲಿದ್ದ ರೋಗಿ ನೋಡಲು ಸಂಬಂಧಿಕರು ಬಂದಿದ್ದರು. ಅವರ ಜೊತೆಯಲ್ಲಿಯೇ ಬಂದಿದ್ದ ಚಾಲಕಿ ಕಳ್ಳ ಕರೆ ಮಾಡಲು ಪಾಷ ಅವರಿಂದ ಮೊಬೈಲ್ ತಗೊಂಡು ಹಾಗೆಯೇ ಮಾತನಾಡುತ್ತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಇದೇ ವೇಳೆ ಪಕ್ಕದ ಬೆಡ್ ರೋಗಿಯಿಂದ ಪರ್ಸ್ ಮತ್ತು ಎರಡು ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾನೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಕ್ಕೇ ಆತ್ಮಹತ್ಯೆಗೆ ಯತ್ನಿಸಿದ ಕಳ್ಳ- ಆಸ್ಪತ್ರೆಗೆ ದಾಖಲಿಸಿದ ಮಾಲೀಕ

    ಮನೆಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಕ್ಕೇ ಆತ್ಮಹತ್ಯೆಗೆ ಯತ್ನಿಸಿದ ಕಳ್ಳ- ಆಸ್ಪತ್ರೆಗೆ ದಾಖಲಿಸಿದ ಮಾಲೀಕ

    – ಆಟೋಮೆಟಿಕ್ ಡೋರ್‍ನಿಂದ ಕಳ್ಳ ಕಂಗಾಲು
    – ಹೊರಗೆ ಬರಲಾಗದೆ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಕಳ್ಳತನ ಮಾಡಲು ಹೋದ ಮನೆಯಲ್ಲೇ ಕಳ್ಳನೊಬ್ಬ ಆತ್ಮಹತ್ಯೆ ಯತ್ನಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಳ್ಳನನ್ನು ಮನೆ ಮಾಲೀಕರೇ ಆಸ್ಪತ್ರೆಗೆ ಸೇರಿಸಿದ ಅಪರೂಪದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನಗರದ ವಿಭೂತಿಪುರದಲ್ಲಿ ಘಟನೆ ನಡೆದಿದ್ದು, ಹೊಸ ವರ್ಷ ದಿನ ಮನೆ ಮಂದಿಯೆಲ್ಲ ದೇವಸ್ಥಾನಕ್ಕೆ ಹೋಗಿದ್ದಾರೆ. ಇದನ್ನು ಕಂಡ ಕಳ್ಳ ಸ್ವಸ್ತಿಕ್ ಮನೆಗೆ ನುಗ್ಗಿದ್ದಾನೆ. ಕಳ್ಳ ಮನೆಯೊಳಗೆ ಎಂಟ್ರಿಯಾಗಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಬಾಗಿಲು ತಾನಾಗಿಯೇ ಲಾಕ್ ಆಗಿದೆ. ಇದು ಕಳ್ಳ ಸ್ವಸ್ತಿಕ್ ಅರಿವಿಗೆ ಬಂದಿಲ್ಲ. ಮನೆಯೆಲ್ಲ ಜಾಲಾಡಿದ ನಂತರ ಮರಳಿ ಹೊರಗೆ ಹೊರಟಿದ್ದಾನೆ. ಆಗ ಡೋರ್ ಲಾಕ್ ಆಗಿರುವುದು ತಿಳಿದಿದೆ.

    ಆಟೋಮೆಟಿಕ್ ಡೋರ್ ಆಗಿದ್ದರಿಂದ ಕಳ್ಳ ಎಷ್ಟೇ ಪ್ರಯತ್ನಿಸಿದರೂ ತೆರೆಯಲು ಸಾಧ್ಯವಾಗಿಲ್ಲ. ಸಿಕ್ಕಿಹಾಕಿಕೊಂಡೆ ಎನ್ನುವ ಕಾರಣಕ್ಕೆ ಮನೆಯಲ್ಲಿದ್ದ ಗ್ಯಾಸ್ ಪೈಪ್ ತಗೆದು ಮನೆಗೆ ಬೆಂಕಿ ಹಾಕಿದ್ದಾನೆ. ಅಲ್ಲದೆ ಮನೆಯಲ್ಲಿದ್ದ ಫ್ಯಾನಿಗೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಮನೆ ಮಾಲೀಕರು ದೇವಸ್ಥಾನದಿಂದ ಬಂದಿದ್ದಾರೆ. ಇದನ್ನು ಕಂಡ ಮಾಲೀಕರು ಸ್ಥಳೀಯರ ಸಹಾಯ ಪಡೆದು ಬೆಂಕಿ ನಂದಿಸಿ ಒಳಗಡೆ ಹೋಗಿ ನೋಡಿದ್ದಾರೆ.

    ಮನೆ ಪೂರ್ತಿ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಆಗ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಕಳ್ಳ ಸ್ವಸ್ತಿಕ್‍ನನ್ನು ಕಂಡಿದ್ದಾರೆ. ಕೂಡಲೇ ಕಳ್ಳನನ್ನು ಮಾಲೀಕರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಘಟನೆ ಕುರಿತು ಮಾಲೀಕ ಮೋಹನ್ ಅವರು ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಕಳ್ಳ ಸ್ವಸ್ತಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಳ್ಳ ಸ್ವಸ್ತಿಕ್ ಸುಧಾರಿಸಿಕೊಂಡ ಬಳಿಕ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • 4.75 ಲಕ್ಷ ಮೌಲ್ಯದ ರೈಫಲ್ ಎಗರಿಸಿದ್ದ ಕಳ್ಳ ಅಂದರ್

    4.75 ಲಕ್ಷ ಮೌಲ್ಯದ ರೈಫಲ್ ಎಗರಿಸಿದ್ದ ಕಳ್ಳ ಅಂದರ್

    ಶಿವಮೊಗ್ಗ: ಶೂಟಿಂಗ್ ಸ್ಪರ್ಧೆಯಲ್ಲಿ ಬಳಸುವ ರೈಫಲ್ ಕಳವು ಮಾಡಿದ್ದ ಆರೋಪಿಯನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚನ್ನಗಿರಿ ತಾಲೂಕಿನ ಕೊರಟಿಕೆರೆ ಗ್ರಾಮದ ನಿವಾಸಿ ನಾಗರಾಜ್(35) ಬಂಧಿತ ಆರೋಪಿ. ಈತ ಭದ್ರಾವತಿ ತಾಲೂಕಿನ ಹನುಮಂತಪುರ ಗ್ರಾಮದಲ್ಲಿನ ತೋಟದ ಮನೆಯ ಬಾಗಿಲನ್ನು ಮುರಿದು ಅಂದಾಜು 4.75 ಲಕ್ಷ ಮೌಲ್ಯದ ರೈಫಲ್ ಕಳವು ಮಾಡಿದ್ದನು. ಈ ಬಗ್ಗೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ತನಿಖೆಗೆ ಭದ್ರಾವತಿ ಗ್ರಾಮಾಂತರ ಠಾಣೆಯ ಸಿಪಿಐ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಭೇಧಿಸಿ ಆರೋಪಿಯನ್ನು ರೈಫಲ್ ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಕಳ್ಳ ಕದ್ದ ಪೊಲೀಸ್ ಜೀಪ್ ವಿರುದ್ಧವೇ ದೂರು ದಾಖಲು

    ಕಳ್ಳ ಕದ್ದ ಪೊಲೀಸ್ ಜೀಪ್ ವಿರುದ್ಧವೇ ದೂರು ದಾಖಲು

    ಚಿಕ್ಕಮಗಳೂರು: ನನ್ನ ಕಾರಿಗೆ ಅಪಘಾತ ಮಾಡಿದ್ದು ಪೊಲೀಸ್ ಜೀಪ್, ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಜೀಪ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸೋಮವಾರ ನಗರದ ಗ್ರಾಮಾಂತರ ಠಾಣೆಯ ರಕ್ಷಾ ಪೊಲೀಸ್ ಜೀಪ್ ಡ್ರೈವರ್ ಜೀಪನ್ನ ನಿಲ್ಲಿಸಿ ಮೆಡಿಕಲ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳನೋರ್ವ ಜೀಪನ್ನು ಕದ್ದು ಪರಾರಿಯಾಗಿದ್ದ. ನಗರದಿಂದ ಐದು ಕಿ.ಮೀ. ದೂರ ಜೀಪನ್ನು ತೆಗೆದುಕೊಂಡು ಹೋಗಿ ಆಲ್ಟೋ ಕಾರಿಗೆ ಅಪಘಾತ ಮಾಡಿದ್ದ. ಹಿಂದೆ ಪೊಲೀಸರು ಫಾಲೋ ಮಾಡುತ್ತಿರುವುದನ್ನು ಗಮನಿಸಿ ಜೀಪನ್ನು ಅಲ್ಲೆ ಬಿಟ್ಟು ಕಾಡಿನೊಳಗೆ ಕಣ್ಮರೆಯಾಗಿದ್ದ.

    ಈಗ ಆಲ್ಟೋ ಕಾರಿನ ಮಾಲೀಕ ಸಖರಾಯಪಟ್ಟಣದ ಗುರುಮೂರ್ತಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಜೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ಕಾರಿಗೆ ಪೊಲೀಸ್ ಜೀಪ್ ಗುದ್ದಿದೆ. ಡ್ರೈವರ್ ಯಾರೆಂದು ಗೊತ್ತಿಲ್ಲ. ಹಾಗಾಗಿ ಪೊಲೀಸ್ ಜೀಪ್ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಅತ್ತ ಪೊಲೀಸ್ ಜೀಪ್ ಕದ್ದ ಯಾರೆಂದು ಪೊಲೀಸರಿಗೂ ಗೊತ್ತಿಲ್ಲ. ಇತ್ತ ಜೀಪ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ಬಂದಿದೆ. ಪೊಲೀಸರಿಗೆ ಈಗ ಏನು ಮಾಡುವುದು ಎಂದು ಸಂಕಷ್ಟದಲ್ಲಿ ಸಿಲುಕಿದ್ದಾರೆ.

  • ಮನೆ ಮಂದಿ ಮಲಗಿದ್ದಾಗ 20 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಖದೀಮ

    ಮನೆ ಮಂದಿ ಮಲಗಿದ್ದಾಗ 20 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಖದೀಮ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ಹೆಚ್ಚಾಗಿದ್ದು, ಇಂದು ಬೆಳಗಿನ ಜಾವ ಗಾಢ ನಿದ್ರೆಯಲ್ಲಿದ್ದಾಗ ವೈದ್ಯರೊಬ್ಬರ ನಿವಾಸಕ್ಕೆ ನುಗ್ಗಿದ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.

    ಬೀದರ್‍ನ ಬಸವ ನಗರದಲ್ಲಿರುವ ಡಾ. ರವೀಂದ್ರ ಪಾಟೀಲ್ ಅವರ ಮನೆಯಲ್ಲಿ ಇಂದು ಬೆಳಗಿನ ಜಾವ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಒಟ್ಟು 20 ಲಕ್ಷ ರೂ. ಬೆಲೆ ಬಾಳುವ 50 ತೋಲೆ ಬಂಗಾರ ಕದ್ದು ಖದೀಮ ಪರಾರಿಯಾಗಿದ್ದಾನೆ. ಮನೆಯವರು ಬೆಳಗ್ಗೆ ಎದ್ದ ತಕ್ಷಣ ವಿಷಯ ಗೊತ್ತಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಿವ್ರ ಪರಿಶೀಲನೆ ಮಾಡುತ್ತಿದ್ದಾರೆ.

    ಕಳ್ಳ ದರೋಡೆ ಮಾಡಲು ಮನೆ ಒಳಗೆ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗಾಂಧಿಗಂಜ್ ಪೊಲೀಸರು ಕಳ್ಳನಿಗಾಗಿ ಬಲೆ ಬಿಸಿದ್ದಾರೆ.

  • ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

    ಪೊಲೀಸ್ ಜೀಪ್ ಕದ್ದು ಕಾಡಿನೊಳಗೆ ಓಡಿ ಹೋದ ಕಳ್ಳ

    ಚಿಕ್ಕಮಗಳೂರು: ನಡು ಮಧ್ಯಾಹ್ನ ರಸ್ತೆ ಮಧ್ಯದಲ್ಲಿ ನಿಂತಿದ್ದ ಪೊಲೀಸ್ ಜೀಪನ್ನೇ ಕಳ್ಳನೋರ್ವ ಕದ್ದು ಅಪಘಾತ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

    ನಗರದ ಹನುಮಂತಪ್ಪ ವೃತ್ತದ ಬಳಿ ಗ್ರಾಮಾಂತರ ಠಾಣೆಯ ರಕ್ಷಾ ಗಾಡಿಯನ್ನು ನಿಲ್ಲಸಿ ಪೊಲೀಸರು ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಜೀಪ್ ಇದ್ದ ಜಾಗದಲ್ಲಿ ಇರಲಿಲ್ಲ. ಪೊಲೀಸರು ಜೀಪಿನಿಂದ ಇಳಿದು ಹೋಗ್ತಿದ್ದಂತೆ ಅದನ್ನು ಗಮನಿಸುತ್ತಿದ್ದ ಕಳ್ಳ ಜೀಪನ್ನು ತೆಗೆದುಕೊಂಡು ಪರಾರಿ ಆಗಿದ್ದಾನೆ.

    ಇದನ್ನು ಗಮನಿಸಿಸ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ನಗರದಿಂದ ಐದು ಕಿ.ಮೀ. ಸಾಗಿದ ಮೇಲೆ ಕಳ್ಳ ಪೊಲೀಸರ ಜೀಪನ್ನು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ಗಾಡಿಯ ನಿಯಂತ್ರಣ ಸಿಗದೆ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದಿದ್ದಾನೆ. ಹಿಂದೆ ಪೊಲೀಸರು ಇರುವುದನ್ನು ಗಮನಿಸಿ ಜೀಪನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿ ಪರಾರಿಯಾಗಿದ್ದಾನೆ.

    ಪೊಲೀಸರ ವಾಹನವನ್ನೇ ಕದ್ದ ಧೈರ್ಯವಂತನಿಗಾಗಿ ಗ್ರಾಮಾಂತರ ಪೊಲೀಸರು ಕಾಡಿನೊಳಗೆ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಸುಳಿವು ಸಿಕ್ಕಿಲ್ಲ.

  • ನಿಮ್ಮ ವಾಹನ ಮನೆಯ ಹೊರಗೆ ಪಾರ್ಕ್ ಮಾಡ್ತಿದ್ರೆ ಹುಷಾರ್

    ನಿಮ್ಮ ವಾಹನ ಮನೆಯ ಹೊರಗೆ ಪಾರ್ಕ್ ಮಾಡ್ತಿದ್ರೆ ಹುಷಾರ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂಥ ಕಳ್ಳರು ಇಲ್ಲ ಎನ್ನುವ ಹಾಗಿಲ್ಲ ನೋಡಿ. ಬಿಡಿ ಭಾಗಗಳನ್ನು ಸೆಕೆಂಡ್‍ನಲ್ಲಿ ಕದಿಯುವ ಖತರ್ನಾಕ್ ಕಳ್ಳರಿದ್ದಾರೆ.

    ಮನೆ ಹೊರಗೆ ನಿಲ್ಲಿಸ್ತಿದ್ದ ಕಾರ್ ಗಳ ಸಿಸ್ಟಂ, ಟೈರ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಇದೀಗ ವಾಹನಗಳ ಬ್ಯಾಟರಿಗಳನ್ನು ಕದಿಯುತ್ತಿದ್ದಾರೆ. ಮನೆಯ ಹೊರಗೆ ನಿಲ್ಲಿಸಿದ್ದ ಲಗೇಜ್ ಆಟೋದ ಬ್ಯಾಟರಿ ಕದಿಯೋ ದೃಶ್ಯ ಸಿಸಿಟಿವಿ ಸೆರೆಯಾಗಿದೆ. ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.

    ಶರಣಯ್ಯ ಎಂಬುವರು ದಿನನಿತ್ಯದಂತೆ ತಮ್ಮ ಆಟೋವನ್ನು ಮನೆಯ ಹೊರಗೆ ನಿಲ್ಲಿಸಿದ್ದರು. ಮಧ್ಯರಾತ್ರಿ ಎಂಟ್ರಿ ಕೊಟ್ಟ ಬ್ಯಾಟರಿ ಕಳ್ಳ ಬೈಕ್‍ನಲ್ಲಿ ಬಂದು ಕೈ ಚಳಕ ತೋರಿಸಿದ್ದಾನೆ. ಆಟೋದ ಲಾಕ್ ಮುರಿದು ಬಳಿಕ ಬ್ಯಾಟರಿ ಬಿಚ್ಚಿಕೊಂಡು ತನ್ನ ಬೈಕ್‍ನಲ್ಲಿ ವಾಪಸ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಬ್ಯಾಟರಿ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನೀವು ಏನಾದರೂ ವೆಹಿಕಲ್ ಹೊರಗೆ ಪಾರ್ಕ್ ಮಾಡುತ್ತಿದ್ದರೆ ಹುಷಾರಾಗಿರಿ.

  • ನೀನು ಕಂಜೂಸ್, ನನ್ನ ರಾತ್ರಿ ಹಾಳಾಯ್ತು ಎಂದು ಬರೆದಿಟ್ಟು ಪರಾರಿಯಾದ ಕಳ್ಳ

    ನೀನು ಕಂಜೂಸ್, ನನ್ನ ರಾತ್ರಿ ಹಾಳಾಯ್ತು ಎಂದು ಬರೆದಿಟ್ಟು ಪರಾರಿಯಾದ ಕಳ್ಳ

    – ಮಾಲೀಕನ ಡೈರಿಯಲ್ಲಿ ಕಳ್ಳನ ಮಾತು
    – ಕಿಟಕಿ ಒಡೆದರೂ ಪ್ರಯೋಜನವಾಗಲಿಲ್ಲ

    ಭೋಪಾಲ್: ಕಳ್ಳನೊಬ್ಬ ರಾತ್ರಿ ಪೂರ್ತಿ ಮನೆಯ ಕಿಟಕಿಯೊಡೆದು, ಕಷ್ಟಪಟ್ಟು ಒಳಗೆ ನುಗ್ಗಿದರೂ ಏನೂ ಸಿಗದ್ದಕ್ಕೆ ಬೇಸರಗೊಂಡು ಮರಳಿ ಬರುವಾಗ ಮಾಲೀಕನ ಡೈರಿಯಲ್ಲಿ ನೀನು ಕಂಜೂಸ್ ಎಂದು ಬರೆದು ಮರಳಿದ್ದಾನೆ.

    ಮಧ್ಯಪ್ರದೇಶದ ಶಾಜಾಪುರದ ಆದರ್ಶ ನಾಗೀನ್ ನಗರದಲ್ಲಿ ಘಟನೆ ನಡೆದಿದ್ದು, ಕಳ್ಳತನ ಮಾಡಲೆಂದು ಕಷ್ಟ ಪಟ್ಟು ರಾತ್ರಿ ಇಡೀ ಕಿಟಕಿ ಒಡೆದು ಕಳ್ಳ ಒಳಗೆ ನುಗ್ಗಿದ್ದಾನೆ. ಆದರೆ ಮನೆಯಲ್ಲಿ ಏನೂ ಸಿಗದ್ದನ್ನು ಕಂಡು ಬೇಸರಗೊಂಡಿದ್ದಾನೆ. ಆಗ ಮಾಲೀಕನಿಗೆ ತಿಳಿಸಲು ಅವನ ಡೈರಿಯಲ್ಲಿಯೇ ಸಾಲುಗಳನ್ನು ಬರೆದು ಮನೆಯಿಂದ ಕಾಲ್ಕಿತ್ತಿದ್ದಾನೆ.

    ಸಿಟ್ಟಿನಿಂದಲೇ ಈ ಸಾಲುಗಳನ್ನು ಬರೆದಿರುವ ಕಳ್ಳ, ಮನೆಯ ಮಾಲೀಕನಿಗೆ ಕಂಜೂಸ್ ಎಂದು ಹೇಳಿದ್ದಾನೆ. ನೀನು ತುಂಬಾ ಕಂಜೂಸ್. ಅಷ್ಟು ಕಷ್ಟ ಪಟ್ಟು ಕಿಟಕಿ ಒಡೆದರೂ ಸಹ ಪ್ರಯೋಜನವಾಗಲಿಲ್ಲ. ನನ್ನ ರಾತ್ರಿ ಹಾಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.

    ಗ್ರಾಮೀಣ ಎಂಜಿನೀಯರಿಂಗ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋನಿಯವರ ಮನೆ ಆದರ್ಶ ನಾಗೀನ್ ನಗರದಲ್ಲಿದ್ದು, ನ್ಯಾಯಾಧೀಶರ ಮನೆಯ ಹತ್ತಿರವೇ ಇದೆ. ಮಾಲೀಕ ಬೇರೆಡೆ ತೆರಳಿದಾಗ ಕಳ್ಳ ಮನೆಗೆ ನುಗ್ಗಿದ್ದಾನೆ. ಆದರೆ ಏನೂ ಸಿಗದೆ ವಾಪಾಸಾಗಿದ್ದಾನೆ.

    ಕಳ್ಳತನ ನಡೆದ ಮರುದಿನ ಸೋನಿಯವರು ತಮ್ಮ ಮನೆಗೆ ಆಗಮಿಸಿದ್ದು, ಆಗ ಕಳ್ಳ ಡೈರಿಯಲ್ಲಿ ಬರೆದಿಟ್ಟಿದ್ದ ಸಾಲನ್ನು ನೋಡಿದ್ದಾರೆ. ನಂತರ ಸೋನಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಕಬೋರ್ಡ್‍ಗಳು ತೆರದಿದ್ದು, ಬಟ್ಟೆ ಹಾಗೂ ದಿನ ಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡಿದ್ದಾರೆ. ಅಲ್ಲದೆ ಒಂದು ಸಣ್ಣ ಕಾಫೀ ಟೇಬಲ್ ಮೇಲೆ ಕಳ್ಳ ಡೈರಿಯಲ್ಲಿ ಬರೆದಿಟ್ಟಿದ್ದ ಸಾಲುಗಳನ್ನು ನೋಡಿದ್ದಾರೆ.

    ಕೆಲಸದಿಂದ ಬಂದ ನಂತರ ಸೋನಿಯರು ದೂರು ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸುಳಿವು ಪತ್ತೆ ಹಚ್ಚಲು ಅಲ್ಲಿನ ಸಿಸಿಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕಳ್ಳ ಬರೆದಿದ್ದ ಸಾಲುಗಳನ್ನು ಲಿಪಿ ತಜ್ಞರಿಗೆ ಕಳುಹಿಸಲಾಗಿದೆ ಎಂದು ಶಾಜಾಪುರದ ಕೊಟ್ವಾಲಿ ಪೊಲೀಸ್ ಠಾಣೆಯ ಎಸ್‍ಪಿ ಪಂಕಜ್ ಶ್ರೀವಾಸ್ತವ್ ಅವರು ಮಾಹಿತಿ ನೀಡಿದ್ದಾರೆ.

  • ಪೊಲೀಸರದ್ದೇ 23 ಮೊಬೈಲ್ ಎಗರಿಸಿದ್ದ ಖತರ್ನಾಕ್ ಕಳ್ಳ ಅರೆಸ್ಟ್

    ಪೊಲೀಸರದ್ದೇ 23 ಮೊಬೈಲ್ ಎಗರಿಸಿದ್ದ ಖತರ್ನಾಕ್ ಕಳ್ಳ ಅರೆಸ್ಟ್

    ಶಿವಮೊಗ್ಗ: ಪೊಲೀಸರದ್ದೇ 23 ಮೊಬೈಲ್ ಎಗರಿಸಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

    ತಮಿಳುನಾಡಿನ ತಿರುಪತ್ತೂರು ಮೂಲದ ಕಾರ್ತಿಕ್ (34) ಅಲಿಯಾಸ್ ಮಂಜ ಬಂಧಿತ ಖತರ್ನಾಕ್ ಕಳ್ಳನ. ಆರೋಪಿಯು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಪೊಲೀಸರ ಮೊಬೈಲ್‍ಗಳನ್ನು ಕದ್ದು ತಲೆಮರಿಸಿಕೊಂಡಿದ್ದ. ಶನಿವಾರ ಸಿಕ್ಕಿಬಿದ್ದ ಆರೋಪಿಯಿಂದ 13 ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಪೊಲೀಸರು ಬಂದೋಬಸ್ತ್ ಗಾಗಿ ಬಂದಿದ್ದರು. ಬಂದೋಬಸ್ತ್ ಮುಗಿಸಿ ನಗರದ ಭಾರತೀಯ ಸಮುದಾಯದ ಭವನದಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಕಾರ್ತಿಕ್ 23 ಮೊಬೈಲ್ ಕದ್ದು ಪರಾರಿಯಾಗಿದ್ದ. ಈ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನಿಗೆ ಬಲೆ ಬೀಸಿದ್ದರು.

    ಕೆಲ ಪೊಲೀಸರ ಮೊಬೈಲ್‍ಗಳನ್ನು ಟ್ರ್ಯಾಕ್ ಮಾಡಿದಾಗ ಆರೋಪಿ ಇರುವ ಜಾಗ ಪತ್ತೆಯಾಗಿತ್ತು. ಬಳಿಕ ತಂಡ ರಚಿಸಿ, ಚಲಿಸುತ್ತಿದ್ದ ರೈಲಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.