Tag: therapy

  • ಚಿಕಿತ್ಸೆಗೂ ಮುನ್ನ ಸಮಂತಾ ಟೆಂಪಲ್ ರನ್: ಆರೋಗ್ಯಕ್ಕಾಗಿ ನಟಿಯ ಪ್ರಾರ್ಥನೆ

    ಚಿಕಿತ್ಸೆಗೂ ಮುನ್ನ ಸಮಂತಾ ಟೆಂಪಲ್ ರನ್: ಆರೋಗ್ಯಕ್ಕಾಗಿ ನಟಿಯ ಪ್ರಾರ್ಥನೆ

    ಕ್ಷಿಣ ಭಾರತದ ಖ್ಯಾತ ನಟಿ ಸಮಂತಾ, ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗುವ ಮುನ್ನ ಹಲವು ದೇವಸ್ಥಾನಗಳಿಗೆ ಭೇಡಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ಅವರು ವೆಲ್ಲೂರಿನ ಶ್ರೀ ಲಕ್ಷ್ಮೀ ನಾರಾಯಣ ಗೋಲ್ಡನ್ ಟೆಂಪಲ್ (Sri Lakshmi Narayana Golden Temple) ಗೆ ಭೇಟಿ ನೀಡಿದ್ದಾರೆ. ಈ ಹಿಂದೆಯೇ ಅವರು ಆರೋಗ್ಯಕ್ಕಾಗಿ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

    ವೆಲ್ಲೂರಿನ (Vellore) ದೇವಸ್ಥಾನದಲ್ಲಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ತೆರಳಿದ್ದ ಸಮಂತಾ, ಆ ಪ್ರಯಾಣದ ಕುರಿತಾಗಿ ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇಷ್ಟದ ಫ್ರೆಂಡ್ಸ್ ಜೊತೆ ಇಷ್ಟದ ಹಾಡುಗಳು ಕೂಡ ಜೊತೆಯಾಗಿದ್ದವು ಎಂದು ಅವರು ಪೋಸ್ಟ್ ಮಾಡಿದ್ದಾರೆ. ಸಮಂತಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅನೇಕರು ಹಾರೈಸಿದ್ದಾರೆ. ದೇವರು ನಿಮ್ಮೊಂದಿಗೆ ಇದ್ದಾನೆ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

    ಸಮಂತಾ (Samantha), ಒಪ್ಪಿಕೊಂಡಿದ್ದ ಸಿನಿಮಾಗಳನ್ನ ಮುಗಿಸಿಕೊಟ್ಟಿದ್ದಾರೆ. ಈಗ ತಮ್ಮ ಆರೋಗ್ಯದ ಕಡೆ ಗಮನ ವಹಿಸುತ್ತಿದ್ದಾರೆ. ಡಿವೋರ್ಸ್ ನಂತರ ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ (America) ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ದೇವಸ್ಥಾನಗಳನ್ನು ಭೇಟಿ ಮಾಡಿದ ನಂತರ ಅವರು ವಿಮಾನ ಏರಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ.

    ಮೊನ್ನೆಯಷ್ಟೇ ಅವರೊಂದು ಪೋಸ್ಟ್ ಹಾಕಿದ್ದರು. ಜೊತೆಗೆ ತಮ್ಮ ಆರೋಗ್ಯ ಸುಧಾರಣೆಗೆ ಹೊಸ ಮಾದರಿಯ ಥೆರಪಿಯೊಂದನ್ನ ಮಾಡಿಸುತ್ತಿದ್ದಾರೆ. ಇದು ಆಮ್ಲಜನಕ ಥೆರಪಿಯಾಗಿದ್ದು, ಇದರ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆ ಕುರಿತು ಸಮಂತಾ ವಿವರಣೆಯನ್ನೂ ನೀಡಿದ್ದರು.

    ನಾಗಚೈತನ್ಯ (NagaChaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮಯೋಸಿಟಿಸ್ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದರು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆಯನ್ನ ನಟಿ ಎದುರಿಸುತ್ತಿದ್ದರು. ಹಾಗಾಗಿ ಸಿನಿಮಾಗೆ ಕೊಂಚ ಬ್ರೇಕ್ ನೀಡಿ, ತಮ್ಮ ಹೆಲ್ತ್ ಕಡೆ ನಟಿ ಗಮನ ಕೊಡ್ತಿದ್ದಾರೆ.

    ಹೆಚ್‌ಬಿಓಟಿ ಹೆಸರಿನ ಚಿಕಿತ್ಸೆಯನ್ನು ಸ್ಯಾಮ್ ಪಡೆದುಕೊಳ್ಳುತ್ತಿದ್ದಾರೆ. ಹೆಚ್‌ಬಿಓಟಿ ಎಂದರೆ ಹೈಪರ್‌ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ. ಈ ಚಿಕಿತ್ಸೆಯಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ವಾಸಿಯಾಗಲು ಪ್ರಾರಂಭವಾಗುತ್ತವೆ.

    ನಟಿ ಸಮಂತಾ, ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಖುಷಿ’ (Kushi)  ಸಿನಿಮಾ ಮುಗಿಸಿ ಕೊಟ್ಟಿದ್ದಾರೆ. ವರುಣ್ ಧವನ್ ಜೊತೆಗಿನ ಸಿಟಾಡೆಲ್ (Citadel) ಕೂಡ ಶೂಟಿಂಗ್ ಮುಗಿದಿದೆ. ಇಂಗ್ಲೀಷ್‌ನ ಒಂದು ಸಿನಿಮಾ, ಬಾಲಿವುಡ್ ಚಿತ್ರವೊಂದನ್ನ ನಟಿ ಓಕೆ ಎಂದಿದ್ದಾರೆ. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ಮತ್ತೆ ಸಿನಿಮಾ ಮಾಡಲಿದ್ದಾರೆ. ಅಲ್ಲಿಯವರೆಗೂ ನಟಿ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ.

    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತಾ, ದಿನಕ್ಕೊಂದು ಪೋಸ್ಟ್ ಮಾಡಿ ತಮ್ಮ ಅಂತರಾಳದ ದುಗುಡಗಳನ್ನು ಅಭಿಮಾನಿಗಳ ಮುಂಚೆ ಬಿಚ್ಚಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಸದಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗುವ ಸಮಂತಾ, ಈ ಬಾರಿ ಆರು ತಿಂಗಳ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಿನಕ್ಕೂ ಅವು ಯಾತನೆಯ ದಿನಗಳು ಎಂದಿದ್ದಾರೆ.

     

    ಆರೋಗ್ಯದ ಸಮಸ್ಯೆಯಿಂದಾಗಿ ಸಿನಿಮಾ ರಂಗಕ್ಕೆ ಒಂದು ವರ್ಷಗಳ ಕಾಲ ಗೈರಾಗಿದ್ದ ಸಮಂತಾ, ಟ್ರೀಟ್ ಮೆಂಟ್ ನಂತರ ಮತ್ತೆ ಬಂದಿದ್ದರು. ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಗಳನ್ನು ಅವರು ಮುಗಿಸಿಕೊಡಬೇಕಿತ್ತು. ಹಾಗಾಗಿ ಆರು ತಿಂಗಳ ಕಾಲ ನೋವಿನಲ್ಲೇ ಕೆಲಸ ಮಾಡಿದ್ದಾರೆ. ಇನ್ನೂ ಸಾಧ್ಯವಿಲ್ಲ ಅನಿಸಿ, ಒಂದಷ್ಟು ಪ್ರಾಜೆಕ್ಟ್ ಗಳಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ವಾಪಸ್ಸು ಮಾಡಿ ಮತ್ತೆ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ನಟಿ ಚೇತನಾ ರಾಜ್ ಸಾವು : ತೆಳ್ಳಗಾಗಿಸುವ ಚಿಕಿತ್ಸೆ ಪ್ರಾಣಕ್ಕೆ ಅಪಾಯ

    ತ್ತೀಚಿನ ದಿನಗಳಲ್ಲಿ ಬಹುತೇಕರು ಸೌಂದರ್ಯದ ಹಿಂದೆ ಬಿದ್ದು ನಾನಾ ರೀತಿಯ ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ತೆಳ್ಳಗಾಗುವ ನಿಟ್ಟಿನಲ್ಲಿ ಸಾಕಷ್ಟು ಕಲಾವಿದೆಯರು ನಾನಾ ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವೈಜ್ಞಾನಿಕವಾಗಿ ಅವುಗಳು ಸರಿಯಾದ ಕ್ರಮವಲ್ಲ ಎಂದು ಗೊತ್ತಿದ್ದರೂ, ತಾವು ನೋಡುಗರ ಮುಂದೆ  ಸುಂದರವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ಶಾರ್ಟ್ ಕಟ್ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಜೀವಕ್ಕೆ ಅಪಾಯ ಆಗುವಂತ ಚಿಕಿತ್ಸೆಗೂ ಅನೇಕರು ಮುಂದಾಗುತ್ತಾರೆ. ಇಂತಹ ಮಾರ್ಗ ಅನುಸರಿಸಿದ ಕಿರುತೆರೆ ನಟಿ ಚೇತನಾ ರಾಜ್ ಪ್ರಾಣ ಬಿಟ್ಟಿದ್ದಾರೆ.

    ಯೋಗ, ವ್ಯಾಯಾಮ, ಆಹಾರ ಕ್ರಮಗಳ ಮೂಲಕ ತೂಕ ಇಳಿಸಿಕೊಳ್ಳಲು ತುಂಬಾ ಸಮಯ ಬೇಕಾಗುವುದರಿಂದ ಚಿಕಿತ್ಸೆ ಮೂಲಕ ತೂಕ ಇಳಿಸಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಲಿಪೊಸಕ್ಷನ್ ಸೇರಿದಂತೆ ಅನೇಕ ಚಿಕಿತ್ಸೆ ವಿಧಾನಗಳ ಮೂಲಕ ವೇಟ್ ಲಾಸ್ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಿದೆ ವೈದ್ಯ ಅಂಕಿ ಅಂಶ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ವ್ಯಾಯಾಮ ಮತ್ತು ಆಹಾರ ಕ್ರಮದಿಂದ ದೇಹದ ಬೊಜ್ಜನ್ನು ಕರಗಿಸಬಹುದಾಗಿದ್ದರೂ, ಅದು ಸುಲಭವಾಗಿ ಕರಗುವುದಿಲ್ಲ ಎಂಬ ಕಾರಣಕ್ಕಾಗಿ ಲಿಪೋಸಕ್ಷನ್ ರೀತಿಯ ಚಿಕಿತ್ಸೆಗಳು ಇಂದು ಜನಪ್ರಿಯವಾಗಿವೆ. ಇಂತಹ ಚಿಕಿತ್ಸೆ ಪಡೆಯುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎನ್ನುತ್ತಾರೆ ವೈದ್ಯರು.

    ಲಿಪೊಸಕ್ಷನ್ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ನಾವು ಅಂದುಕೊಂಡಷ್ಟು ತೂಕ ಇಳಿಯುತ್ತದೆ ಎನ್ನುವುದು ತಪ್ಪು. ವ್ಯಕ್ತಿಯಿಂದ ವ್ಯಕ್ತಿಗೆ ಕೊಬ್ಬು ಕಡಿಮೆ ಆಗುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ವ್ಯಕ್ತಿಗೆ ಎಷ್ಟು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ತೂಕ ಇಳಿಸಿಕೊಳ್ಳುವಾಗಿ ಇಂತಿಷ್ಟೇ ತೂಕ ಕಡಿಮೆ ಮಾಡಬೇಕು ಎಂದು ವೈದ್ಯರನ್ನು ಪೋರ್ಸ್ ಮಾಡಬೇಡಿ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಈ ರೀತಿಯ ಚಿಕಿತ್ಸೆಯಿಂದ ಮ್ಯಾಕ್ಸಿಮಮ್, ಐದಾರು ಕೇಜಿ ತೂಕ ಕಡಿಮೆ ಮಾಡಿಸಿಕೊಳ್ಳಬಹುದು. ಇದಕ್ಕಿಂತ ಜಾಸ್ತಿ ತೂಕ ಕಡಿಮೆ ಮಾಡಿಸಿಕೊಳ್ಳಲು ಮುಂದಾದರೆ, ಅಪಾಯ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಸಾವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು. ಚಿಕಿತ್ಸೆ ಸಮಯದಲ್ಲಿ ಅಥವಾ ಚಿಕಿತ್ಸೆಯ ನಂತರವೂ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಯಶಸ್ಸಿ ಚಿಕಿತ್ಸೆ ನಂತರ ನಿರಂತರವಾಗಿ ವ್ಯಾಯಾಮ ಮತ್ತು ಆಹಾರದ ಕ್ರಮವನ್ನು ಪಾಲಿಸಲೇಬೇಕು. ಮತ್ತು ನುರಿತ ವೈದ್ಯರಿಂದಲೇ ಇಂತಹ ಚಿಕಿತ್ಸೆಯನ್ನು ಪಡೆಯಬೇಕು.

    ಇಂತಹ ಚಿಕಿತ್ಸೆಗೆ ಒಳಗಾಗುವ ಮುನ್ನ ಮಾನಸಿಕವಾಗಿ ವ್ಯಕ್ತಿಯು ಸದೃಢವಾಗಿರಬೇಕು ಮತ್ತು ಚಿಕಿತ್ಸೆಯ ಮುನ್ನ ವೈದ್ಯರು ಹೇಳಿದ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿರಬೇಕು. ಚಿಕಿತ್ಸೆಗೆ ಭಾಗಿಯಾಗುವಾಗ ಒಬ್ಬರೇ ಹೋಗಬೇಡಿ, ನಿಮ್ಮ ಕುಟುಂಬದವರಿಗೂ ಮಾಹಿತಿ ತಿಳಿಸಿ. ಮತ್ತು ಮತ್ತೊಬ್ಬ ವೈದ್ಯರ ಸಲಹೆಯನ್ನೂ ಪಡೆಯಬೇಕು.

  • ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

    ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

    ಚಾಮರಾಜನಗರ: ಆ ದಂಪತಿ ಚಿಕಿತ್ಸೆಗೆಂದು ಒಬ್ಬ ಬಾಬಾನ ಬಳಿಗೆ ತೆರಳಿದ್ದರು. ಚಿಕಿತ್ಸೆ ನೀಡಿ ಗುಣಪಡಿಸಿದ ಬಾಬಾನ ವಕ್ರದೃಷ್ಟಿ ಸುಂದರ ಸಂಸಾರದ ಮೇಲೆ ಬಿದ್ದಿತ್ತು. ಇದರಿಂದ ಸುಂದರವಾಗಿದ್ದ ಆ ಸಂಸಾರದಲ್ಲಿ ಬಿರುಗಾಳಿ ಬೀಸಿ ಮನೆಯ ಯಜಮಾನನೇ ಬಲಿಯಾಗಿದ್ದಾನೆ.

    ಮಹಮ್ಮದ್ ಅಫ್ಘನ್ ಮತ್ತು ತನ್ಜೀಯಾ ಕೌಸರ್ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸಿಗಳು. ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿಗೆ ತೆರಳಿದ್ದರು. ಇದನ್ನೂ ಓದಿ: 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

    ನಾನು ದೇವರ ಪ್ರತಿರೂಪ ಎಂದು ಹೇಳಿಕೊಂಡ ಬಾಬಾ ಥೈರಾಯ್ಡ್ ಸಮಸ್ಯೆ ಬಗೆಹರಿಸಿದ್ದ. ಬಳಿಕ ತನ್ಜೀಯಾ ಜೊತೆ ಆತನ ಒಡನಾಟ ಜಾಸ್ತಿಯಾಗಿತ್ತು. ಇದರಿಂದ ದಂಪತಿಯ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು. ಸಾಕಷ್ಟು ಬಾರಿ ಜಗಳವೂ ನಡೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ಅಫ್ಘನ್ ಗುರುವಾರ ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ ಬಾಬಾನಲ್ಲ. ಡೋಂಗಿ ಬಾಬಾನಿಂದ ಸಂಸಾರ ಹಾಳಾಗಿದೆ. ಬಾಬಾ ಖುರ್ರಂ ಪಾಷಾ ತನ್ಜೀಯಾಗೆ ಸಂಪೂರ್ಣ ಮೈಂಡ್ ವಾಷ್ ಮಾಡಿದ್ದ ಎಂಬುದು ಅಫ್ಗನ್ ಸಂಬಂಧಿಕರ ಆರೋಪ. ಬಾಬಾನ ಮಾತು ಕೇಳಿಕೊಂಡು ತನ್ಜೀಯಾ ತನ್ನ ತವರು ಮನೆ ಮೈಸೂರಿಗೆ ಹೋಗಿ ಸೇರಿಕೊಂಡಿದ್ದಳು. ಅಫ್ಘನ್ ಕರೆದರೂ ಆಕೆ ಗಂಡನ ಮನೆಗೆ ಬಂದಿರಲಿಲ್ಲ. ಇದನ್ನೂ ಓದಿ: ಮದುವೆ ಗಂಡು ಬರೋದು ತಡವಾಗಿದ್ದಕ್ಕೆ ಅದೇ ಮಂಟಪದಲ್ಲಿ ಇನ್ನೊಬ್ಬನನ್ನು ವರಿಸಿದ ವಧು

    ಇದೆಲ್ಲದರಿಂದ ಸಾಕಷ್ಟು ಮನನೊಂದಿದ್ದ ಅಫ್ಘನ್ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಖುರ್ರಂ ಪಾಷಾ, ಅಬ್ದುಲ್ ರೆಹಮಾನ್, ಮಹಮದ್ ಅಜೀಂ, ಆಯೂಬ್ ಷರೀಪ್ ಕಾರಣ ಎಂದು ಬರೆದಿದ್ದಾರೆ. ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  • ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

    – ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ್
    – ಬರದ 108 ಅಂಬುಲೆನ್ಸ್
    – ಖಾಸಗಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳ ರವಾನೆ

    ಕಾರವಾರ: ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಶಾಸಕಿ ರೂಪಾಲಿ ನಾಯ್ಕ್ ಕರೆ ತಂದರೂ ಸರ್ಕಾರಿ ಆಸ್ಪತ್ರೆ ಸಮರ್ಪಕ ಚಿಕಿತ್ಸೆ ಸಿಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

    ಇಂದು ಅಂಕೋಲಾದಿಂದ ಕಾರವಾರಕ್ಕೆ ಬರುತ್ತಿದ್ದ ಶಾಸಕರ ವಾಹನದ ಎದುರೇ ಬಿಣಗಾದ ಬಳಿ ಬೈಕ್ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಅಪಘಾತಗೊಂಡಿತ್ತು. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶಾಸಕಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಕಾದರೂ ಅಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ ಖಾಸಗಿ ಅಂಬುಲೆನ್ಸ್ ತರಿಸಿ ಕಾರವಾರದ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನ ಕರೆತಂದಿದ್ದರು.

    ಗಾಯಾಳುಗಳನ್ನ ಕರೆ ತಂದ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಆಕ್ಸಿಜನ್ ಸಹ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕಿ ಆರ್.ಎಂ.ಓ ವೆಂಕಟೇಶ್ ರವರನ್ನು ಕರೆಸಿ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು.

    ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಗಾಯಾಳುಗಳನ್ನ 108 ವಾಹನದಲ್ಲಿ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೊಗಿರುತ್ತೆ. ಅಪಘಾತಗೊಂಡರೆ ವ್ಯಕ್ತಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳು ಬರುವುದೇ ಇಲ್ಲ. ಬಂದರೂ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ. ಜೊತೆಗೆ ಹಲವು ವೈದ್ಯರು ಚಿಕಿತ್ಸೆ ನೀಡದೇ ಗೋವಾ ಅಥವಾ ಮಣಿಪಾಲಿಗೆ ಕಳುಹಿಸಿಕೊಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • 69 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – 59.06 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ

    69 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – 59.06 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ

    – ಒಂದೇ ದಿನ 964 ಮಂದಿ ಕೋವಿಡ್‍ಗೆ ಬಲಿ

    ನವದೆಹಲಿ: ಕಳೆದ ಎರಡು ವಾರಗಳಿಂದ ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರಿಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚುತ್ತಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 69 ಲಕ್ಷ ಆಗಿದ್ದರೆ, ಚೇತರಿಸಿಕೊಂಡವರ ಸಂಖ್ಯೆ 59 ಲಕ್ಷಕ್ಕೂ ಅಧಿಕವಾಗಿದೆ.

    ಕಳೆದ 24 ಗಂಟೆಯಲ್ಲಿ 70,496 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತ ಸಂಖ್ಯೆ 69,06,152ಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ 964 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    69,06,152ರ ಪೈಕಿ 8,93,592 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 59,06,070 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 24 ಗಂಟೆಯಲ್ಲಿ 964 ಮಂದಿ ಸಾವನ್ನಪ್ಪುವ ಮೂಲಕ ಕೋವಿಡ್‍ಗೆ ಇದುವರೆಗೂ 1,06,490 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಗುಣಮುಖರಾದವರ ಪ್ರಮಾಣ ಶೇ. 85.25 ತಲುಪಿದೆ. ಈ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ನಿಮ್ಮೆಲ್ಲರ ಸಹಕಾರದಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಎಷ್ಟೋ ಮಂದಿ ಸೋಂಕಿನಿಂದ ಬಚಾವ್ ಆಗಿದ್ದಾರೆ. ಇದೇ ರೀತಿಯಲ್ಲಿ ಕೆಲಸ ಮಾಡಿ. ಇನ್ನಷ್ಟು ಜನರ ಜೀವ ಉಳಿಸಿ ಎಂದು ಕೊರೊನಾ ವಾರಿಯರ್ಸ್ ಗೆ ಮನವಿ ಮಾಡಿದ್ದರು.

  • ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ: ಡಿಕೆಶಿ

    ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ: ಡಿಕೆಶಿ

    ಬೆಂಗಳೂರು: ಇನ್ನೂ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

    ಕಳೆದ ಅಗಸ್ಟ್ 25ರಂದು ಡಿಕೆ ಶಿವಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರು ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ವೈದ್ಯರ ಸಲಹೆ ಮೇರೆಗೆ ಇನ್ನೂ ಕೆಲ ದಿನಗಳು ನಾನು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದೇನೆ ಎಂದು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

    ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜಯನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಬುಧವಾರ ದಾಖಲಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ದಿನಗಳ ಕಾಲ ತಾವು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದು, ಕಾರ್ಯಕರ್ತರಾಗಲಿ, ಅಭಿಮಾನಿಗಳಾಗಲಿ ಆಸ್ಪತ್ರೆಗಾಗಲಿ ಅಥವಾ ತಮ್ಮ ನಿವಾಸಕ್ಕಾಗಲಿ ಆಗಮಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.

  • ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಬಳ್ಳಾರಿ: ಕೊರೊನಾ ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಜನರ ಉದಾಹರಣೆಗೆ ನಮಗೆ ಸಿಗುತ್ತೆ. ಆದರೆ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ರಾಜ್ಯದ ಮೊದಲ ಶತಾಯುಷಿ ಅಜ್ಜಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಬರೋಬ್ಬರಿ ನೂರು ವರ್ಷದ ಅಜ್ಜಿ ಸೋಂಕಿನಿಂದ ಗುಣಮುಖ ಆಗಿದ್ದಾರೆ. ವಿಶೇಷ ಅಂದರೆ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಮ್ಮ ಮನೆಯ ಹಿರಿಯ ಮಗನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಿರಿಯ ಮಗನ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವ ಕಾರಣ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಮನೆಯ ಉಳಿದ ನಾಲ್ವರ ಸ್ವಾಬ್ ಟೆಸ್ಟ್ ಮಾಡಿದಾಗ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು.

    ಹಿರಿಯ ಮಗನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮನೆಯ ಮಂದಿಯ ಜೊತೆಯಲ್ಲಿ ಅಜ್ಜಿಯ ಸಹ ಗುಣಮುಖ ಆಗಿದ್ದಾರೆ. 80 ವರ್ಷದ ಮೇಲ್ಪಟ್ಟ ಜನರಲ್ಲಿ ಸೋಂಕು ಕಾಣಿಸಿಕೊಂಡರೇ ಬಹಳ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಅಜ್ಜಿ ಸೋಂಕಿತರ ಭಯವನ್ನು ದೂರ ಮಾಡಿದ್ದಾರೆ. ವೈದ್ಯರ ನೀಡಿದ ಔಷಧಿ ಹಾಗೂ ಬಿಸಿ ನೀರು ಕುಡಿಯುವುದು ಇದೆಲ್ಲವನ್ನೂ ಅಜ್ಜಿ ಚಾಚು ತಪ್ಪದೆ ಪಾಲನೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಬೇಗ ಗುಣಮುಖ ಆಗಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

  • ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣೋದು ಸರಿಯಲ್ಲ: ಸುಮಲತಾ

    ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣೋದು ಸರಿಯಲ್ಲ: ಸುಮಲತಾ

    – ಸಮಾಜದ ನಿಂದನೆಗೆ ಗುರಿ ಮಾಡೋದು ಸರಿಯಲ್ಲ

    ಬೆಂಗಳೂರು: ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.

    ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಬಗ್ಗೆ ಸ್ವತಃ ಸುಮಲತಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    “ನಾನು ಕೊರೊನಾದಿಂದ ಗುಣಮುಖ ಆಗಿದ್ದೇನೆ ಎನ್ನುವ ಒಂದು ಸುದ್ದಿ ಹರಿದಾಡುತ್ತಿದೆ. ಆದರೆ ನಾನು ಸಂಪೂರ್ಣವಾಗಿ ಗುಣಮುಖವಾಗಿರುವುದು, ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷೆಯ ಬಳಿಕವೇ ತಿಳಿಯುವುದು. ಸದ್ಯಕ್ಕೆ ಔಷಧಿ ಹಾಗೂ ಸುಶ್ರುಷೆ ಮುಂದುವರಿದಿದೆ. ನಾನು ಗುಣಮುಖ ಆಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದ, ಹಾರೈಕೆಗಳಿಗೆ ಋಣಿ. ಇನ್ನು ಕೆಲವೇ ದಿನಗಳಲ್ಲಿ ಗುಣಮುಖ ಆಗುವ ಭರವಸೆ ಇದೆ” ಎಂದಿದ್ದಾರೆ.

    “ಕೊರೊನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ಕೊರೊನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಮುಖ್ಯವಾಗಿ ಸೋಂಕಿತರು ಕ್ವಾರಂಟೈನ್ ಅವಧಿಯನ್ನು ಮತ್ತು ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಹಾಗೂ ಅದು ನಮ್ಮ ಜವಾಬ್ದಾರಿ”  ಎಂದು ಸುಮಲತಾ ತಿಳಿಸಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ತಪ್ಪದೆ ಮುಖಕ್ಕೆ ಮಾಸ್ಕ್ ಧರಿಸುವುದನ್ನ ಮರಿಯಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಜುಲೈ 6 ರಂದು ಸುಮಲತಾ ಅಂಬರೀಷ್ ತಮಗೆ ಕೊರೊನಾ ಬಂದಿರುವ ಬಗ್ಗೆ ತಿಳಿಸಿದ್ದರು. “ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ನಂತರ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಪಟ್ಟಿದ್ದೇನೆ” ಎಂದು ಫೇಸ್‍ಬುಕ್ ಮೂಲಕ ತಿಳಿಸಿದ್ದರು.

  • ಬೆಂಗ್ಳೂರಿನಲ್ಲಿ ಕೊರೊನಾಗೆ 507 ಮಂದಿ ಬಲಿ- ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ತಿಳಿಸಿದ ವೈದ್ಯರು

    ಬೆಂಗ್ಳೂರಿನಲ್ಲಿ ಕೊರೊನಾಗೆ 507 ಮಂದಿ ಬಲಿ- ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ತಿಳಿಸಿದ ವೈದ್ಯರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮರಣ ನರ್ತನಕ್ಕೆ ಗುರುವಾರ 70 ಮಂದಿ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾಗೆ ಸಾವನ್ನಪ್ಪಿದ್ದವರ ಸಂಖ್ಯೆ 507ಕ್ಕೆ ಏರಿಕೆ ಆಗಿದೆ.

    ಬೆಂಗಳೂರಿನಲ್ಲಿ ಕೊರೊನಾಗೆ ದಿನೇ ದಿನೇ ಅಧಿಕ ಜನರು ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಿಕೊಳ್ಳಲು ವಿಳಂಬವಾಗುತ್ತಿರುವುದರಿಂದ ಕೆಲವರು ಸಾಯುತ್ತಿದ್ದಾರೆ. ಇನ್ನೂ ಕೆಲವರು ಈಗಾಗಲೇ ಕಿಡ್ನಿ ಸಮಸ್ಯೆ, ಹೈಪರ್ ಟೆನ್ಶನ್, ಶುಗರ್, ಕ್ಯಾನ್ಸರ್‌ನಂತಹ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಅಂತವಹರಿಗೆ ಕೊರೊನಾ ತಗುಲಿದ್ದು, ಬೇರೆ ಕಾಯಿಲೆ ಉಲ್ಬಣಗೊಂಡು ಮೃತಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಕೊರೊನಾದ ಅತಿಯಾದ ಭಯಕ್ಕೆ ಸೋಂಕಿತರು ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಹೀಗಾಗಿ ವೈದ್ಯರು, ತಜ್ಞ ವೈದ್ಯರು ಕೊರೊನಾದಿಂದ ರಕ್ಷಿಸಿಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಬೆಂಗಳೂರನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವನ್ನು ಕೂಡ ತಿಳಿಸಿದ್ದಾರೆ.

    ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡೋ ವೈದ್ಯರು ಹೇಳೋದೇನು?
    1. ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗೋದು ವಿಳಂಬವಾಗುತ್ತಿದೆ. ಅಷ್ಟರಲ್ಲಿ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿರುತ್ತೆ.
    2. ಈಗ ಸಾವನ್ನಪ್ಪಿದ ಶೇ.70 ರಷ್ಟು ಮಂದಿಗೆ ಬೇರೆ ಬೇರೆ ದೀರ್ಘಕಾಲಿಕ ಅನಾರೋಗ್ಯ ಇದೆ. ಕಿಡ್ನಿ ಸಮಸ್ಯೆ, ಹೈಪರ್ ಟೆನ್ಶನ್, ಶುಗರ್ ಕ್ಯಾನ್ಸರ್ ನಂತಹ ಕಾಯಿಲೆ ಇದ್ದವು.
    3. ಸೋಂಕಿತರಿಗೆ ಬೇರೆ ಕಾಯಿಲೆ ಇದ್ದಾಗ ಅದು ಉಲ್ಬಣಗೊಂಡು ಸಾವನ್ನಪ್ಪುತ್ತಿದ್ದಾರೆ.
    4. ಅತಿಯಾದ ಭಯಕ್ಕೆ ಹೃದಯಾಘಾತವಾಗುತ್ತಿದೆ.

    ತಜ್ಞರ ರಿಪೋರ್ಟ್ ಏನು?
    1. ಪರೀಕ್ಷಾ ವರದಿ ವಿಳಂಬ- ಪರೀಕ್ಷಾ ವರದಿ ಕೈ ಸೇರುವಷ್ಟರಲ್ಲಿ ಸೋಂಕಿತನ ಆರೋಗ್ಯ ಸಂಪೂರ್ಣ ಹದಗೆಟ್ಟಿರುತ್ತೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವು.
    2. ಬೆಡ್ ಸಿಗುತ್ತಿಲ್ಲ- ಸಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆಯಾಗುತ್ತಿದೆ. ಹೈಫ್ಲೋ ಆಕ್ಸಿಜನ್ ಬೆಡ್ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ಕಡೆ ಖಾಲಿ ಬಿದ್ದಿದರೂ ರೋಗಿಗಳಿಗೆ ಸಂವಹನವಾಗುತ್ತಿಲ್ಲ.
    3 ಐಸಿಯು ವೆಂಟಿಲೇಟರ್ ತೀರಾ ಕೊರತೆ ಇದೆ. ಇದರಿಂದ ಸಾವನ್ನಪ್ಪುತ್ತಿದ್ದಾರೆ.
    4. ಶುಚಿತ್ವದ ಕೊರತೆ- ಗಾಳಿ ಬೆಳಕು ಸ್ವಚ್ಛವಾಗಿ ಬರುತ್ತಿಲ್ಲ. ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಸಾವು.
    5. ಉಸಿರಾಟದ ತೊಂದರೆ ಇರುವ ರೋಗಿಗಳ ಸರ್ವೆಯನ್ನು ತಕ್ಷಣ ಮಾಡಬೇಕಿತ್ತು. ಅವರಿಗೆ ಟೆಸ್ಟ್ ಮಾಡಬೇಕಿತ್ತು. ಹೈರಿಸ್ಕ್ ಇರೋರಿಗೆ ಮೊದಲು ಟೆಸ್ಟ್ ಮಾಡಿಸಿದರೆ ಅನೇಕರ ಪ್ರಾಣ ಉಳಿಯಬಹುದಾಗಿತ್ತು. ಏಳು ಲಕ್ಷ ಜನ ಬೆಂಗಳೂರಿನಲ್ಲಿ ಹೈರಿಸ್ಕ್ ನಲ್ಲಿರುವವರು ಇದ್ದಾರೆ.
    6. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ನಿರಾಕರಣೆ- ಸೂಕ್ತ ಸಮಯಕ್ಕೆ ಬಾರದ ಅಂಬುಲೆನ್ಸ್ ನಿಂದ ಸಾವು ಹೆಚ್ಚಳ.

    ಬೆಂಗಳೂರು ಜನ ಮಾಡಬೇಕಾಗಿರೋದು ಏನು?
    1. ರೋಗ ನಿರೋಧಕ ಶಕ್ತಿ ಇರುವವರಲ್ಲಿ ರೋಗ ಲಕ್ಷಣ ಕಾಣಿಸುವುದು ಕಡಿಮೆ. ಆದರೆ ಅನಾರೋಗ್ಯ ಹೊಂದಿರುವವರೇ ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸೋಂಕಿನ ಅಪಾಯದಲ್ಲಿರುವವರನ್ನು ಅಂದರೆ ಕಿಡ್ನಿ ಸಮಸ್ಯೆ, ಶುಗರ್, ಹೃದ್ರೋಗ ಸಮಸ್ಯೆ, ಹೈಪರ್ ಟೆನ್ಶನ್ ಸಮಸ್ಯೆ ಇರೋರನ್ನು ಹೋಂ ಐಸೋಲೇಷನ್ ಮಾಡಿ ಸೋಂಕು ತಗಲದಂತೆ ಮಾಡಬೇಕು. ಈ ಕಾಯಿಲೆ ಇದ್ದವರು ಈ ಸಮಯದಲ್ಲಿ ಸಾಧ್ಯವಾದಷ್ಡು ಹೊರಗಡೆ ಹೋಗದೆ ಮನೆಯಲ್ಲಿಯೇ ಕ್ವಾರಂಟೈನ್ ಆದರೆ ಉತ್ತಮ.
    2. ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ. ಹೊರಗಡೆ ಅಡ್ಡಾಡದಂತೆ ಎಚ್ಚರ ವಹಿಸಿ.
    3. ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಸಾಧ್ಯವಾದಷ್ಟು ಮನೆಯೊಳಗೆ ಇರಲು ಪ್ರಯತ್ನಿಸಿ.

  • ಮೂರು ದಿನದಲ್ಲಿ ನಾಲ್ಕು ಸಾವು – ಕಾಫಿನಾಡಿಗರು ಕಂಗಾಲು

    ಮೂರು ದಿನದಲ್ಲಿ ನಾಲ್ಕು ಸಾವು – ಕಾಫಿನಾಡಿಗರು ಕಂಗಾಲು

    ಚಿಕ್ಕಮಗಳೂರು: ಸೋಮವಾರ ಎರಡು, ಮಂಗಳವಾರ ಒಂದು, ಬುಧವಾರ ಒಂದು ಎಂಬಂತೆ ಜಿಲ್ಲೆಯಲ್ಲಿ ಮೂರು ದಿನದಲ್ಲಿ ಕೊರೊನಾಗೆ ನಾಲ್ಕು ಜನ ಪ್ರಾಣ ತೆತ್ತಿದ್ದು ಜಿಲ್ಲೆಯ ಜನ ಕಂಗಾಲಾಗಿದ್ದಾರೆ.

    ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು ಜಿಲ್ಲೆಯ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯ 72 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಪ್ರಾಣ ತೆತ್ತವರ ಸಂಖ್ಯೆ ಏಳಕ್ಕೆ ಏರಿದೆ.

    ಜಿಲ್ಲೆಯಲ್ಲಿ ಪ್ರಸ್ತುತ 170 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. 170ರಲ್ಲಿ ಏಳು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಲ್ಲಿ ಮೂರೇ ದಿನಕ್ಕೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು ಜಿಲ್ಲೆಯ ಜನ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ತಮಗೆ ತಾವೇ ವಿಮರ್ಶೆ ಮಾಡಿಕೊಂಡು ಭಯದಲ್ಲಿ ಬದುಕುವಂತಾಗಿದೆ. ಜಿಲ್ಲೆಯಲ್ಲಿ ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರಲಿಲ್ಲ.

    ಆದರೆ ಮೇ 19ಕ್ಕೆ ಆರಂಭವಾದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 55 ದಿನಕ್ಕೆ 176 ಗಡಿ ತಲುಪಿದೆ. ಆ 170 ಪ್ರಕರಣಗಳಲ್ಲಿ ಏಳು ಜನ ಪ್ರಾಣ ಕಳೆದುಕೊಂಡಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಗುಣಮುಖವಾಗುತ್ತಿರುವ ಪ್ರಕರಣಗಳ ಸಂಖ್ಯೆಯು ಹೆಚ್ಚಿದೆ. ಆದರೆ ಈ ಮಧ್ಯೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.