Tag: theft

  • ಚಿತ್ರದುರ್ಗ: ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗ್ತಿದ್ದ ಕಳ್ಳರ ಬಂಧನ

    ಚಿತ್ರದುರ್ಗ: ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗ್ತಿದ್ದ ಕಳ್ಳರ ಬಂಧನ

    ಚಿತ್ರದುರ್ಗ: ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರು ಯಶ್ವಸಿಯಾಗಿದ್ದಾರೆ.

    ದಾದಾಪೀರ್(27) ಮತ್ತು ಶ್ರೀನಿವಾಸ್(39) ಬಂಧಿತ ಆರೋಪಿಗಳು. ಇಬ್ಬರೂ ಇಮಾಂಪುರ ಹಾಗು ಕುರುಡಿಹಳ್ಳಿಯ ನಿವಾಸಿಗಳು. ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಕದ್ದು ಮಿಂಚಿನಂತೆ ಪರಾರಿಯಾಗುತ್ತಿದ್ದರು.

    ಇಂದು ಬೆಳಗಿನ ಜಾವ ಎಸ್ಪಿ ಅರುಣ್ ರಂಗರಾಜನ್ ನೇತೃತ್ವದಲ್ಲಿ ನಗರದ ಬಳ್ಳಾರಿ ರಸ್ತೆಯ ಹೀರೋ ಹೊಂಡ ಶೋರೂಂ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4.53 ಲಕ್ಷ ಮೌಲ್ಯದ 185 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

     

  • 2 ಸಂಸಾರ ನಿಭಾಯಿಸೋಕೆ 2ನೇ ಹೆಂಡ್ತಿ ಜೊತೆಗೂಡಿ ಕಳ್ಳತನಕ್ಕಿಳಿದ

    2 ಸಂಸಾರ ನಿಭಾಯಿಸೋಕೆ 2ನೇ ಹೆಂಡ್ತಿ ಜೊತೆಗೂಡಿ ಕಳ್ಳತನಕ್ಕಿಳಿದ

    ಹೈದರಾಬಾದ್: ಸಂಸಾರ ನಿಭಾಯಿಸೋಕೆ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ದಂಪತಿಯನ್ನು ಭಾನುವಾರದಂದು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಶ್ರೀನಿವಾಸ್ ಹಾಗೂ ರೇಣುಕಾ ಬಂಧಿತ ಆರೋಪಿಗಳು. ಶ್ರೀನಿವಾಸ್‍ಗೆ ಈ ಹಿಂದೆಯೇ ಮದುವೆಯಾಗಿದ್ದು, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆದ್ರೆ ಎರಡನೇ ಮದುವೆಯಾದ ನಂತರ ಸರಿಯಾಗಿ ಕೆಲಸ ಮಾಡದ ಕಾರಣ ಕೆಲಸ ಕಳೆದುಕೊಂಡಿದ್ದ. ನಂತರ ಜೀವನೋಪಾಯಕ್ಕಾಗಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಆದ್ರೆ ಎರಡು ಸಂಸಾರ ನಿಭಾಯಿಸಬೇಕಿದ್ದರಿಂದ ಕೂಲಿಯಿಂದ ಬರುತ್ತಿದ್ದ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಶ್ರೀನಿವಾಸ್ ಎರಡನೇ ಹೆಂಡ್ತಿ ರೇಣುಕಾ ಜೊತೆಗೂಡಿ ಕಳ್ಳತನ ಮಾಡಲು ಶುರು ಮಾಡಿದ. ಮನೆ ಬಾಡಿಗೆಗೆ ಇದೆ ಎಂದು ಎಲ್ಲಿ ಬೋರ್ಡ್ ಹಾಕಿರ್ತಾರೋ ಆ ಪ್ರದೇಶದಲ್ಲಿ ಈ ದಂಪತಿ ಕಳ್ಳತನ ಮಾಡ್ತಿದ್ರು.

    ಶ್ರೀನಿವಾಸ್ ತನ್ನ ಕೈನೆಟಿಕ್ ಹೋಂಡಾದಲ್ಲಿ ಸುತ್ತಾಡಿ ಮನೆ ಖಾಲಿಯಿದೆ ಎಂಬ ಬೋರ್ಡ್ ಗಾಗಿ ಹುಡುಕುತ್ತಿದ್ದ. ಮನೆ ಸಿಕ್ಕಿದ ನಂತರ ಹೆಂಡತಿ ರೇಣುಕಾ ಜೊತೆ ಹೋಗಿ ಮನೆಯ ಮಾಲೀಕರನ್ನ ಸಂಪರ್ಕಿಸುತ್ತಿದ್ದ. ಅವರೊಂದಿಗೆ ಮಾತನಾಡೋ ವೇಳೆ ಅದೇ ಪ್ರದೇಶದಲ್ಲಿ ಆಗ ತಾನೇ ಲಾಕ್ ಮಾಡಲಾಗುತ್ತಿದ್ದ ಮನೆಯನ್ನ ಪತ್ತೆ ಮಾಡ್ತಿದ್ರು. ನಾವು ಮತ್ತೆ ಬರ್ತೀವಿ ಅಂತ ಮನೆಯ ಮಾಲೀಕರಿಗೆ ಹೇಳಿ ಲಾಕ್ ಆಗಿರೋ ಮನೆಗೆ ಹೋಗಿ ಬೀಗ ಮುರಿದು ಕಳ್ಳತನ ಮಾಡ್ತಿದ್ರು. ಈ ಕಿಲಾಡಿ ದಂಪತಿ ಇಲ್ಲಿನ ಜುಬಿಲಿ ಹಿಲ್ಸ್, ಲಾಲಗುಡ ಹಾಗೂ ಮಲ್ಕಜ್‍ಗಿರಿಯಲ್ಲಿ ಇದೇ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಡಿಸಿಪಿ ಬಿ. ಲಿಂಬಾ ರೆಡ್ಡಿ ಹೇಳಿದ್ದಾರೆ.

    ಲಾಲಗುಡದಲ್ಲಿ 10 ದಿನಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಲಾಲಗುಡದ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರೆ ಪ್ರದೇಶಗಳ ಸುಮಾರು 100 ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ ನಂತರ ವಾಹನ ನೋಂದಣಿ ಸಂಖ್ಯೆಯ ಮೂಲಕ ಆರೋಪಿಗಳನ್ನ ಪತ್ತೆಹಚ್ಚಿದ್ದಾರೆ.

    ಆರೋಪಿಗಳಿಂದ ಪೊಲೀಸರು ಸುಮಾರು 100 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ ಹಾಗೂ ಮೊಬೈಲ್‍ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನ ಲಾಲಗುಡ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ತನಿಖೆ ಮುಂದುವರೆದಿದೆ.

  • ಸುಪ್ರಸಿದ್ಧ ಜಿಡಗಾ ಮಠದಲ್ಲಿ ಕಳ್ಳರ ಕೈ ಚಳಕ – 10 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿ ಕಳ್ಳತನ

    ಸುಪ್ರಸಿದ್ಧ ಜಿಡಗಾ ಮಠದಲ್ಲಿ ಕಳ್ಳರ ಕೈ ಚಳಕ – 10 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿ ಕಳ್ಳತನ

    ಕಲಬುರಗಿ: ಸುಪ್ರಸಿದ್ಧ ಜಿಡಗಾ ಮಠದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಜಿಡಗಾ ಗ್ರಾಮದ ಮಠದಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.

    ಮಠದ ಸಮಾಧಿ ಮಂದಿರದದಲ್ಲಿ ಅಂದಾಜು 10 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳನ್ನ ಕಳ್ಳತನ ಮಾಡಿದ್ದಾರೆ. ರಾಮೇಶ್ವರ ರಜತ ಪುತ್ಥಳಿ, ಹಣದ ಹುಂಡಿ ಮತ್ತು ಪೂಜಾ ಸಾಮಗ್ರಿ ಕಳ್ಳತನ ಮಾಡಿದ್ದಾರೆ. ಘಟನೆ ನಂತರ ಮಠ ನೋಡಿಕೊಳ್ಳುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಆ ವ್ಯಕ್ತಿಯ ಮೇಲೆ ಪೆÇಲೀಸರಿಗೆ ಅನುಮಾನಗೊಂಡು ಕಳೆದ ಮೂರು ದಿನಗಳಿಂದ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

    ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ತಮ್ಮ ಭತ್ತವನ್ನು ತಾವೇ ಕದ್ದು ಸಿಕ್ಕಿ ಬಿದ್ದ ಖದೀಮರು!

    ತಮ್ಮ ಭತ್ತವನ್ನು ತಾವೇ ಕದ್ದು ಸಿಕ್ಕಿ ಬಿದ್ದ ಖದೀಮರು!

    ರಾಯಚೂರು : 228 ಚೀಲ ಭತ್ತ ಸಮೇತ ಲಾರಿಯನ್ನ ಕದ್ದಿದ್ದ ಖದೀಮರು ಕೊನೆಗೂ ಸಿಕ್ಕುಬಿದ್ದು, ಧರ್ಮದೇಟು ತಿಂದ ಘಟನೆ ರಾಯಚೂರಿನ ಆಶಿಹಾಳ ತಾಂಡದ ಬಳಿ ನಡೆದಿದೆ.

    ಭತ್ತದ ಮಾಲೀಕರಾದ ಯಲ್ಲಪ್ಪ, ವಿರೇಶ್ ಸೇರಿ ನಾಲ್ಕು ಜನ ಲಾರಿ ಕಳ್ಳರು ಸಿಕ್ಕಿಬಿದ್ದಿದ್ದಾರೆ.

    ಯಾದಗಿರಿಯ ಸುರಪುರ ತಾಲೂಕಿನ ಸಗರದಲ್ಲಿ ಲಾರಿಗೆ ಭತ್ತವನ್ನ ತುಂಬಿ ಕೊಪ್ಪಳದ ಗಂಗಾವತಿ ಕಡೆಗೆ ಕಳುಹಿಸಲಾಗಿತ್ತು. ಲಿಂಗಸುಗೂರಿನ ಮುದಗಲ್ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಚಾಲಕ ಊಟಕ್ಕೆ ತೆರಳಿದ್ದಾಗ ಲಾರಿಯನ್ನ ಕದ್ದೊಯ್ಯಲಾಗಿತ್ತು.

    ಲಿಂಗಸುಗೂರಿನ ಆಶಿಹಾಳ ತಾಂಡ ಬಳಿ ಜಮೀನೊಂದರಲ್ಲಿ, ಕದ್ದ ಲಾರಿಯ ಭತ್ತವನ್ನ ಇನ್ನೊಂದು ಲಾರಿಗೆ ತುಂಬಿಸುತಿದ್ದಾಗ ಸಿಕ್ಕಿಬಿದ್ದ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ. ಸ್ವತಃ ತಮ್ಮ ಭತ್ತವನ್ನ ತಾವೇ ಕದ್ದು ಲಾರಿ ಮಾಲೀಕನಿಗೆ ವಂಚನೆ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

    ಘಟನೆ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • `ರೈತರ ಸಾಲಮನ್ನಾ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಕಳ್ಳತನ ಮಾಡ್ತೀವಿ’

    `ರೈತರ ಸಾಲಮನ್ನಾ ಮಾಡಿ, ಇಲ್ಲವಾದ್ರೆ ಬ್ಯಾಂಕ್ ಕಳ್ಳತನ ಮಾಡ್ತೀವಿ’

    ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತರ ಹೆಸರಲ್ಲಿ ಕಳ್ಳರಿಬ್ಬರು ಬ್ಯಾಂಕ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ನವಲಗುಂದ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಕೀಲಿಯನ್ನು ಮುರಿದು ಬ್ಯಾಂಕ್ ಒಳಗಡೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಭಯಭೀತರಾಗಿ ಕಾಲ್ಕಿತ್ತಿದ್ದಾರೆ.

    ಬ್ಯಾಂಕ್ ಮುಂಭಾಗದಲ್ಲಿ ಎರಡು ಬ್ಯಾಗ್‍ಗಳು ಪತ್ತೆಯಾಗಿವೆ. ಬ್ಯಾಗ್‍ನಲ್ಲಿ ಸುತ್ತಿಗೆ ಹಾಗೂ ಒಂದು ಭಿತ್ತಿಪತ್ರ ದೊರಕಿದ್ದು, ಅದರಲ್ಲಿ ರೈತರ ಸಾಲಮನ್ನಾ ಎಲ್ಲಿವರೆಗೂ ಮಾಡಲ್ಲ, ಅಲ್ಲಿಯವರೆಗೂ ನಾವು ಕಳ್ಳತನ ಮಾಡ್ತೀವಿ ಎಂದು ಬರೆಯಲಾಗಿದೆ.

    ಬ್ಯಾಂಕ್ ಮುಂಭಾಗದ ಒಂದು ಸಿಸಿಟಿವಿಯನ್ನು ಕದ್ದಿದ್ದು, ಇನ್ನೊಂದನ್ನು ಮುರಿದು ಹೋಗಿದ್ದಾರೆ. ಕಳ್ಳರು ರೈತರ ಹೆಸರಿನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ಹೊಸ ಗ್ಯಾಂಗ್- ರಸ್ತೇಲಿ ಮೊಬೈಲ್‍ನಲ್ಲಿ ಮಾತಾಡ್ಕೊಂಡು ಹೋಗುವವರೇ ಟಾರ್ಗೆಟ್

    ಬೆಂಗ್ಳೂರಲ್ಲಿ ಹೊಸ ಗ್ಯಾಂಗ್- ರಸ್ತೇಲಿ ಮೊಬೈಲ್‍ನಲ್ಲಿ ಮಾತಾಡ್ಕೊಂಡು ಹೋಗುವವರೇ ಟಾರ್ಗೆಟ್

    ಬೆಂಗಳೂರು: ನಗರದಲ್ಲಿ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಗ್ತಾನೇ ಇದೆ. ರಸ್ತೆಯಲ್ಲಿ ನಡೆದು ಹೋಗುವ ಗೃಹಿಣಿಯರ ಚೈನ್ ಸ್ನ್ಯಾಚ್ ಮಾಡುತ್ತಿದ್ದ ಗ್ಯಾಂಗ್ ಆಯ್ತು, ಈಗ ರಸ್ತೆಯಲ್ಲಿ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುವ ಯುವತಿಯರ ಮೊಬೈಲ್ ಕಸಿದುಕೊಂಡು ಪರಾರಿಯಗುವ ಖದೀಮರ ತಂಡವೊಂದು ತಲೆ ಎತ್ತಿದೆ.

    ಸೋಮವಾರ ಬೆಳಗ್ಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯ ಮೊಬೈಲ್ ಕಸಿದು ಕಳ್ಳನೊಬ್ಬ ಪರಾರಿಯಾಗುವ ಸಿಸಿಟಿವಿ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ಮೊಬೈಲ್ ಕಸಿದು ಶರವೇಗದಲ್ಲಿ ಪರಾರಿಯಾಗಿದ್ದಾರೆ.

    ದೃಶ್ಯದಲ್ಲಿ ಯುವತಿ ಗಾಬರಿಯಿಂದ ಓಡಿಬಂದು ಅಲ್ಲೇ ಕುಳಿತ್ತಿದ್ದ ವ್ಯಕ್ತಿಯ ಬಳಿ ತನ್ನ ಮೊಬೈಲ್ ಕಳ್ಳತನವಾದ ಬಗ್ಗೆ ಭಯದಿಂದ ಹೇಳಿಕೊಂಡಿದ್ದಾರೆ. ಶೀಘ್ರವೇ ಪೊಲೀಸರು ಈ ಕಳ್ಳರನ್ನು ಬಂಧಿಸಬೇಕಿದೆ.

    https://youtu.be/xIievQM1rPo

     

  • ಗ್ಯಾಸ್ ಕಟ್ಟರ್ ನಿಂದ ದೇವಸ್ಥಾನದ ಬಾಗಿಲು ಮುರಿದು ವಿಗ್ರಹಗಳ ಕಳವು

    ಗ್ಯಾಸ್ ಕಟ್ಟರ್ ನಿಂದ ದೇವಸ್ಥಾನದ ಬಾಗಿಲು ಮುರಿದು ವಿಗ್ರಹಗಳ ಕಳವು

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಓಬಳಪುರ ಗ್ರಾಮದಲ್ಲಿ ದೇವಸ್ಥಾನವೊಂದರ ವಿಗ್ರಹವನ್ನು ಖದೀಮರು ರಾತ್ರೋರಾತ್ರಿ ಕದ್ದೊಯ್ದ ಘಟನೆ ನಡೆದಿದೆ.

    ಗ್ರಾಮದ ಹೊರವಲಯದ ಐತಿಹಾಸಿಕ ಸಿದ್ದರಾಮೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಗ್ಯಾಸ್ ಕಟ್ಟರ್ ಬಳಸಿ ದೇವಾಲಯದ ಬಾಗಿಲು ಮುರಿದು ನಂದಿ ವಿಗ್ರಹಗಳು, ಹುಂಡಿಯಲ್ಲಿದ್ದ ಹಣ ಹಾಗೂ ಸಿ.ಸಿ.ಟಿವಿಯನ್ನ ಕಳವು ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಪರಶುರಾಮಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು

    ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ ಕಳ್ಳರು

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಹೇಮಾವತಿ ಜಲಾಶಯದ ವಸತಿ ಸಮುಚ್ಚಯದಲ್ಲಿಯ ಪೊಲೀಸರೊಬ್ಬರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.

    ಶೀಲಾ ಚಂದ್ರಶೇಖರ್ ಎಂಬವರ ಮನೆಯಲ್ಲಿ ಶುಕ್ರವಾರ ತಡರಾತ್ರಿ ಕಳ್ಳತನ ನಡೆದಿದೆ. ಶೀಲಾ ಅವರು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶೀಲಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ, ರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.

    ಮನೆಯ ಬಾಗಿಲು ಮುರಿದು ಒಳನುಗ್ಗಿರೋ ಕಳ್ಳರು ಬೀರುವಿನ ಬಾಗಿಲು ತೆರೆದು ಅದರೊಳಗಿದ್ದ ಸುಮಾರು ಒಂದು ಲಕ್ಷದ 20 ಸಾವಿರ ನಗದು ಹಣ ದೋಚಿದ್ದಾರೆ.

    ನಗದು ದೋಚಿದ ನಂತರ ಮನೆಯ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಳೆದ ವಾರ ಕೊಲೆ, ದರೋಡೆ: ಹುತಾತ್ಮ ಎಸ್‍ಐ ಬಂಡೆ ಸಂಬಂಧಿ ಮನೆ ಮೇಲೆ ಮತ್ತೆ ಕಳ್ಳರ ದಾಳಿ!

    ಕಳೆದ ವಾರ ಕೊಲೆ, ದರೋಡೆ: ಹುತಾತ್ಮ ಎಸ್‍ಐ ಬಂಡೆ ಸಂಬಂಧಿ ಮನೆ ಮೇಲೆ ಮತ್ತೆ ಕಳ್ಳರ ದಾಳಿ!

    ಕಲಬುರಗಿ: ಕಳ್ಳರ ಅಟ್ಟಹಾಸಕ್ಕೆ ಮಿತಿ ಇಲ್ಲದಂತಾಗಿದ್ದು, ಇತ್ತೀಚೆಗಷ್ಟೇ ಕೊಲೆ ಮಾಡಿ ದರೋಡೆ ಮಾಡಿಕೊಂಡು ಹೋಗಿದ್ದ ಮನೆಯಲ್ಲೇ ಈಗ ಮತ್ತೆ ಖದೀಮರು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸಿದ್ರಾಮ ಬಂಡೆ ಅವರ ಮನೆ ಬಾಗಿಲು ಮುರಿದು ಕಪಾಟಿನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಮಾಡಲಾಗಿದೆ. ಏಪ್ರಿಲ್ 28 ರಂದು ರಾತ್ರಿ ಇದೆ ಮನೆಗೆ ನುಗ್ಗಿ ಬಂಡೆಯವರ ಚಿಕ್ಕಮ್ಮ ಸೋನಾಬಾಯಿ ಬಂಡೆ (60) ಎಂಬವರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ನಂತರ ಕುಟುಂಬಸ್ಥರ ಮೇಲೂ ಮಾರಾಣಾಂತಿಕ ಹಲ್ಲೆ ಕೂಡ ನಡೆದಿತ್ತು.

    ಇದನ್ನೂ ಓದಿ: ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಚಿಕ್ಕಮ್ಮನ ಬರ್ಬರ ಹತ್ಯೆ

    ಗಾಯಗೊಂಡ ಕುಟುಂಬಸ್ಥರು ಮನೆ ಬೀಗ ಹಾಕಿಕೊಂಡು ಸೋಲಾಪುರ ಜಿಲ್ಲೆಯ ಉಮರ್ಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಮತ್ತೆ ರಾತ್ರಿ ಮನೆಗೆ ನುಗ್ಗಿದ ಕಳ್ಳರು ದುಷ್ಕೃತ್ಯ ನಡೆಸಿದ್ದಾರೆ. ಘಟನೆಯಿಂದ ಬಂಡೆ ಕುಟುಂಬ ಭಯಭೀತವಾಗಿದೆ. ಸ್ಥಳಕ್ಕೆ ಆಳಂದ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ದರೋಡೆಕೋರರ ದಾಳಿಯಲ್ಲಿ ಕೊಲೆಗೀಡಾಗಿರುವ ಸೋನಾಬಾಯಿ ಬಂಡೆ ಅವರು ಭೂಗತಪಾತಕಿ ಮುನ್ನಾನಿಂದ ಹುತಾತ್ಮರಾದ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಸಂಬಂಧಿಯಾಗಿದ್ದಾರೆ.

     

  • ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಕಳ್ಳತನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಕಳ್ಳತನ- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

    ಮಂಡ್ಯ: ಹಾರ್ಡ್‍ವೇರ್ ಅಂಗಡಿಯ ಹಿಂಬಾಗಿಲು ಮುರಿದು ಒಳ್ಳನುಗ್ಗಿ ಇಬ್ಬರು ಕಳ್ಳರು ಹಣ ದೋಚಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯಾವಳಿ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿರುವ ರಮೇಶ್ ಎಂಬವರಿಗೆ ಸೇರಿದ ಚೌಡೇಶ್ವರಿ ಗ್ಲಾಸ್ ಪ್ಲೈವುಡ್ ಆಂಡ್ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಗುರುವಾರ ರಾತ್ರಿ ಒಳ್ಳನುಗಿರುವ ಕಳ್ಳರಿಬ್ಬರು, ಕ್ಯಾಶ್‍ಬಾಕ್ಸ್ ನಲ್ಲಿದ್ದ ಸುಮಾರು ಐದು ಸಾವಿರ ರೂಪಾಯಿ ದೋಚಿದ್ದಾರೆ. ಇದಲ್ಲದೆ ಇದೇ ರಸ್ತೆಯಲ್ಲಿರುವ ಯೋಗಾನಂದ್ ಎಂಬುವರಿಗೆ ಸೇರಿದ ಹಾರ್ಡ್ ವೇರ್ ಅಂಗಡಿಯಲ್ಲಿಯೂ ಕಳ್ಳತನವಾಗಿದೆ. ಅಂಗಡಿ ಬಾಗಿಲು ಮುರಿದು ಸುಮಾರು 35 ಸಾವಿರ ರೂಪಾಯಿ ದೋಚಿದ್ದಾರೆ.

    ಸ್ಥಳಕ್ಕೆ ಕೆ.ಎಂ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಎರಡು ಕಳ್ಳತನವನ್ನು ಒಂದೇ ತಂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    https://youtu.be/DTaGHvumzq8