Tag: theft

  • 5 ಕೋಟಿಯ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ರು – ಅನ್ನ ಕೊಟ್ಟ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆ ಬಂಧನ

    5 ಕೋಟಿಯ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ರು – ಅನ್ನ ಕೊಟ್ಟ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆ ಬಂಧನ

    – ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ವಿದೇಶಕ್ಕೆ ಟ್ರಿಪ್ ಕರೆದುಕೊಂಡು ಹೋಗ್ತಿದ್ದ ಮನೆ ಮಾಲೀಕರು

    ಬೆಂಗಳೂರು: ಕೋಟ್ಯಂತರ ಮೌಲ್ಯದ ಆಸ್ತಿ ಬರೆದುಕೊಟ್ಟು ಮಗಳಂತೆ ಸಾಕಿದ್ದವರ ಮನೆಗೆ ಯುವತಿ ಕನ್ನ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಂಡ ಮನೆಗೆ ಕನ್ನ ಹಾಕಿದ ಮನೆಗೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳ ಬಂಧಿತ ಯುವತಿ. ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಚಿನ್ನ ಕಳ್ಳತನ ಮಾಡಿದ್ದಳು. ದೂರು ಆಧರಿಸಿ ತನಿಖೆ ನಡೆಸಿದ ಜೆಪಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಮನೆ ಮಾಲೀಕರಾದ ಆಶಾ ಜಾಧವ್ ತಾಯಿಗೆ ವಯಸ್ಸಾಗಿತ್ತು. ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಕೇರ್ ಟೇಕರ್ ಆಗಿ ಮಂಗಳರನ್ನು ನೇಮಿಸಿಕೊಂಡಿದ್ದರು. ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳ ಚೆನ್ನಾಗಿ ನೋಡಿಕೊಂಡಿದ್ದಳು. 58 ವಯಸ್ಸಿನ ಆಶಾ ಅವರಿಗೆ ಮಕ್ಕಳು ಇರಲಿಲ್ಲ. ಪತಿಯೂ ಮೃತಪಟ್ಟಿದ್ದರು. ಪ್ರತಿಷ್ಠಿತ ಜೆಪಿ ನಗರದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದರು.

    ಮಂಗಳಳನ್ನು ಆಶಾ ಅವರು ಮಗಳಂತೆ ಕಾಣುತ್ತಿದ್ದರು. 5 ಕೋಟಿ ಮೌಲ್ಯದ ಮನೆಯನ್ನು ಮಂಗಳ ಹೆಸರಿಗೆ ವಿಲ್ ಮಾಡಿದ್ದರು. ಕೆಲ ವರ್ಷದ ಹಿಂದೆ ಆಶಾ ಜಾಧವ್ ತಾಯಿ ಕೂಡ ಮೃತಪಟ್ಟರು. ಇದ್ದ ಆಸ್ತಿ ಏನು ಮಾಡಬೇಕು ಎಂದು ಮಂಗಳ ಹೆಸರಿಗೆ ಬರೆದಿದ್ದರು. ಮನೆಯಲ್ಲಿ ಮಂಗಳಳನ್ನ ಮಗಳಂತೆ ಕಾಣುತ್ತಿದ್ದರು. ಆದರೆ, ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಿದ್ದಿದ್ದ ಯುವತಿ, ಬಾಯ್‌ಫ್ರೆಂಡ್ಸ್ ಹಾಗೂ ಪಾರ್ಟಿ, ಪಬ್ಬು ಅಂತಾ ಸುತ್ತಾಡ್ತಿದ್ದಳು. ಅದಕ್ಕಾಗಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದಳು. ಈಕೆ ಮಾಡಿಕೊಂಡಿದ್ದ 40 ಲಕ್ಷ ಸಾಲವನ್ನು ತೀರಿಸಿದ್ದರು. ಅಲ್ಲದೇ ಒಂದೂವರೆ ಕೋಟಿಯ ಮನೆಯನ್ನು ಮಂಗಳ ಹೆಸರಿಗೆ ಬರೆದಿದ್ದರು. ಆನ್‌ಲೈನ್ ಹುಚ್ಚಿಗೆ ಮನೆ ಮಾರಿ ಮಂಗಳ ಹಣ ಕಳೆದುಕೊಂಡಿದ್ದಳು. ಆದರೂ ಆಕೆಯನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಆಶಾ ಸಾಕಿದ್ದರು.

    ಸದ್ಯ ತಾನು ವಾಸ ಇರುವ ಐದು ಕೋಟಿಯ ಮನೆ ವಿಲ್ ಕೂಡ ಮಂಗಳ ಹೆಸರಿಗೆ ಮಾಡಿದ್ದರು. ಆದರೆ, ಮತ್ತದೇ ಆನ್‌ಲೈನ್ ಬೆಟ್ಟಿಂಗ್ ಹುಚ್ಚಿಗೆ ಯುವತಿ ಬಿದ್ದಿದ್ದಳು. ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಳು. ಒರಿಜಿನಲ್ ಕೀ ಬಳಸಿ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಳು. ಬಳಿಕ ಕೀ ಗೊತ್ತಿಲ್ಲದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು. ಅಯ್ಯೋ ಕೀ ಎಲ್ಲೋ ಕಳೆದುಹೋಗಿದೆ ಎಂದು ಕೆಲ ದಿನ ಮನೆ ಮಾಲೀಕರು ಸುಮ್ಮನಿದ್ದರು. ದೀಪಾವಳಿ ಹಬ್ಬಕ್ಕೆ ಚಿನ್ನ ಹಾಕಿಕೊಳ್ಳಲು ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದಿದ್ದರು. ಈ ವೇಳೆ ಚಿನ್ನ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಮಂಗಳ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಕಳ್ಳತನ ಮಾಡಿ ಅಡಮಾನ ಇಟ್ಟಿದ್ಳು. ಆ ಹಣವನ್ನೂ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಕಳೆದಿದ್ದಳು.

    ಯಾರೋ ಅಪರಿಚಿತರು ಕಳ್ಳತನ ಮಾಡಿರಬಹುದೆಂದು ಮನೆ ಮಾಲೀಕೆ ದೂರು ನೀಡಿದ್ದರು. ಮಂಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಆದರೆ ಇದನ್ನು ಮನೆ ಮಾಲೀಕೆ ತಿರಸ್ಕರಿಸಿದರು. ಆಕೆ ಅಂತವಳಲ್ಲ ಆಕೆಯ ಮೇಲೆ ಅನುಮಾನ ಪಡಬೇಡಿ ಎಂದಿದ್ದರು. ಪೊಲೀಸರು ಮಂಗಳ ಸಿಡಿಆರ್ ಪರಿಶೀಲನೆ ನಡೆಸಿದರು. ಈ ವೇಳೆ ಚಿನ್ನ ಅಡಮಾನ ಇಟ್ಟಿದ್ದ ಮೆಸೇಜ್ ಗೊತ್ತಾಗಿದೆ. ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಾಗಲೂ ಆಕೆಯನ್ನ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು ಮನೆ ಮಾಲೀಕೆ.

    ಆದರೆ, ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಮಂಗಳಳನ್ನು ಬಂಧಿಸಿದ್ದಾರೆ. ಬಂಧಿತಳಿಂದ 450 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾಳೆ. ಸದ್ಯ ಮಂಗಳಗಾಗಿ ಬರೆದಿದ್ದ ಮನೆಯ ವಿಲ್ ಕೂಡ ಆಶಾ ಜಾಧವ್ ವಾಪಸ್ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲಾ ಮಂಗಳ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಿದ್ದರು. ಪ್ರತಿ ಬರ್ತ್ ಡೇಗೂ ಒಂದೊಂದು ದೇಶಕ್ಕೆ ಕರೆದುಕೊಂಡು ಹೋಗ್ತಿದ್ದರು. ಆಕೆಯ ಮದುವೆ ತಯಾರಿ ಕೂಡ ನಡೆಸಿದ್ದರು.‌ ಒಳ್ಳೆ ಹುಡುಗನನ್ನು ನೋಡಿ ತಾನೆ ಮದುವೆ ಮಾಡಿಸುವ ಯೋಜಿಸಿದ್ದರು. ಹೀಗಿದ್ದರೂ, ಉಂಡ ಮನೆಗೆ ಮಂಗಳ ಕನ್ನ ಹಾಕಿ ಜೈಲು ಸೇರಿದ್ದಾಳೆ.

  • ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ – 30 ಲಕ್ಷ ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್ ಅರೆಸ್ಟ್

    ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ – 30 ಲಕ್ಷ ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಪ್ರೇಯಸಿಗಾಗಿ ಕಳ್ಳತನಕ್ಕಿಳಿದು 30 ಲಕ್ಷ ರೂ. ಮೌಲ್ಯದ ಐಫೋನ್ ದೋಚಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ (Bengaluru) ವರ್ತೂರಿನಲ್ಲಿ ನಡೆದಿದೆ.

    ಬಂಧಿತರನ್ನು ದಿವಾಸ್ ಕಮಿ, ಆರೋಹನ್ ತಾಪಾ ಮತ್ತು ಅಸ್ಮಿತಾ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಐಫೋನ್ 17ನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಡೆಲಿವರಿ ಬಾಯ್ ಅರೆಸ್ಟ್

    ಪ್ರೇಯಸಿ ಅಸ್ಮಿತಾ ಗಂಡನನ್ನ ಬಿಟ್ಟು ಪ್ರಿಯತಮ ದಿವಾಸ್ ಜೊತೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿಂದ ವಾಸವಾಗಿದ್ದರು. ಕಡಿಮೆ ಸಮಯದಲ್ಲಿ ದುಪ್ಪಟ್ಟು ಹಣ ಸಂಗ್ರಹಿಸಬೇಕೆಂಬ ಆಸೆಯಿಂದ ಕಳ್ಳತನಕ್ಕಿಳಿಯುವ ಪ್ಲ್ಯಾನ್‌ ಮಾಡಿದ್ದರು. ಪ್ರಿಯತಮ ದಿವಾಸ್ ತನ್ನ ಸ್ನೇಹಿತ ಆರೋಹನ್ ತಾಪಾ ಜೊತೆ ಸೇರಿಕೊಂಡು ದೊಡ್ಡ ದೊಡ್ಡ ಮೊಬೈಲ್ ಶೋಂರೂಂಗಳಿಗೆ ಕನ್ನ ಹಾಕಲು ಯೋಜಿಸುತ್ತಾರೆ.

    24 ಗಂಟೆಯೊಳಗೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕಂಪನಿಯ ಎರಡು ಶೋರೂಂಗೆ ಕನ್ನ ಹಾಕಿದ್ದರು. ಶೋರೂಂ ಡೋರ್ ಒಡೆದು ಒಳನುಗ್ಗಿ ದುಬಾರಿ ಮೊಬೈಲ್‌ಗಳನ್ನು ದೋಚಿ, ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಹೋಗುತ್ತಿದ್ದರು. ಬಳಿಕ ಕದ್ದ ಮೊಬೈಲ್‌ಗಳನ್ನು ಪ್ರೇಯಸಿ ಅಸ್ಮಿತಾ ಮಾರಾಟ ಮಾಡುತ್ತಿದ್ದಳು.

    ಈ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 25ಕ್ಕೂ ಅಧಿಕ ಮೊಬೈಲ್ ಹಾಗೂ ಒಂದು ವಾಚ್ ವಶಕ್ಕೆ ಪಡೆಡಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ.ಇದನ್ನೂ ಓದಿ: ಗೋವಾ-ಮಾಜಾಳಿ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ; ಇಬ್ಬರು ಪೊಲೀಸರ ವಶಕ್ಕೆ

  • ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ

    ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳ

    ಬೆಂಗಳೂರು: ಮಧ್ಯರಾತ್ರಿ ಕಿಟಕಿಯಿಂದ ಕೈ ಹಾಕಿ ನಿದ್ದೆಯಲ್ಲಿದ್ದ ಮಹಿಳೆಯ ಚಿನ್ನದ ಸರವನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಕಿಟಕಿ ಮೂಲಕ ನಿದ್ದೆ ಮಾಡ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸಲಾಗಿದೆ. ಸೈಯದ್ ಅಸ್ಲಾಂ ಬಂಧಿತ ಮನೆಗಳ್ಳ. ಎರಡು ತಿಂಗಳ ಹಿಂದೆ ಸಾಯಿ ಲೇಔಟ್ ನಿವಾಸಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ ಕಿಟಕಿ ಒಳಗಿಂದ ಕೈ ಹಾಕಿ ಮಾಂಗಲ್ಯ ಸರ ಕದ್ದಿದ್ದ. ಕತ್ತಿನ ಬಳಿ ಏನೋ ಸ್ಪರ್ಶವಾದಂತಾಗಿ ಮಹಿಳೆ ಎಚ್ಚರಗೊಂಡು ನೋಡಿದಾಗ ಮಾಂಗಲ್ಯ ಸರ ಮಂಗಮಾಯವಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

    ಮಹಿಳೆ ನೀಡಿದ ದೂರು ದಾಖಲಿಸಿಕೊಂಡ ವಿದ್ಯಾರಣ್ಯಪುರಂ ಪೊಲೀಸರು ಮೈಸೂರಿನ ಸೈಯದ್ ಅಸ್ಲಾಂನನ್ನು ಬಂಧಿಸಿದ್ದಾರೆ. ಕಳ್ಳನಿಂದ 23 ಲಕ್ಷದ 126 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, ವಾಚ್, ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆಯಲ್ಲಿ ಆರೋಪಿ ಬೇರೆ ಬೇರೆ ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಕೊಟ್ಟ ಮಾಹಿತಿ ಮೇರೆಗೆ 23 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

  • ಎಕ್ಸ್‌ಪ್ರೆಸ್ ವೇಯಲ್ಲಿ ತಮಿಳುನಾಡು ಪಿಎಸ್‌ಐ ದರೋಡೆ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ಎಕ್ಸ್‌ಪ್ರೆಸ್ ವೇಯಲ್ಲಿ ತಮಿಳುನಾಡು ಪಿಎಸ್‌ಐ ದರೋಡೆ ಪ್ರಕರಣ – ಮೂವರು ಆರೋಪಿಗಳು ಅರೆಸ್ಟ್

    ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ (Bengaluru-Mysuru Expressway) ವಾಹನ ಅಡ್ಡಗಟ್ಟಿ ತಮಿಳುನಾಡು ಮೂಲದ ಪಿಎಸ್‌ಐ (Tamil Nadu PSI) ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ ಚನ್ನಪಟ್ಟಣ (Channapatna) ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸೈಯದ್ ತನ್ವೀರ್ (30), ಫೈರೋಜ್ ಪಾಷ (28), ತನ್ವೀರ್ ಪಾಷ (32) ಬಂಧಿತ ಆರೋಪಿಗಳು. ಕಳೆದ ಮಂಗಳವಾರ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇಯ ಚನ್ನಪಟ್ಟಣ ಬೈಪಾಸ್‌ನ ಲಂಬಾಣಿತಾಂಡ್ಯದ ಬಳಿ ದರೋಡೆ ಮಾಡಲಾಗಿತ್ತು. ಕಾರು ನಿಲ್ಲಿಸಿ ರೆಸ್ಟ್ ಮಾಡುತ್ತಿದ್ದ ತಮಿಳುನಾಡು ಚೀರಂಬಾಡಿ ಪೊಲೀಸ್ ಠಾಣೆ ಪಿಎಸ್‌ಐ ಶಾಜಿನ್ ದಂಪತಿಗೆ ಚಾಕು ತೋರಿಸಿದ ದರೋಡೆಕೋರರು, 16 ಗ್ರಾಂ ಚಿನ್ನದ ಸರ, 10 ಸಾವಿರ ನಗದು ಹಾಗೂ ಎರಡು ಮೊಬೈಲ್ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ ರೇಪ್‌; ಬಂಗಾಳದಲ್ಲಿ ಮತ್ತೊಂದು ಕ್ರೂರ ಘಟನೆ

    ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪಿಎಸ್‌ಐ ಶಾಜಿನ್ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ರೈತರಿಗೆ ಬಿಗ್ ಗಿಫ್ಟ್ – 35 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ

  • ರಾಯಚೂರಿನಲ್ಲಿ ನಿಲ್ಲದ ಮನೆಗಳ್ಳರ ಹಾವಳಿ – ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ನಿವಾಸಿಗಳು ಶಾಕ್‌

    ರಾಯಚೂರಿನಲ್ಲಿ ನಿಲ್ಲದ ಮನೆಗಳ್ಳರ ಹಾವಳಿ – ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ನಿವಾಸಿಗಳು ಶಾಕ್‌

    ರಾಯಚೂರು: ಬಿಸಿಲನಾಡು ರಾಯಚೂರು (Raichuru) ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ಗ್ಯಾಂಗ್‌ಗಳು ಆಕ್ಟಿವ್ ಆಗಿದ್ದು, ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

    ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮನೆಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳರ ಚಲನವಲನಗಳು ಸೆರೆಯಾಗುತ್ತಿವೆ ಹೊರತು ಕಳ್ಳತನ ಪ್ರಕರಣಗಳು ಕಡಿಮೆಯಾಗಿಲ್ಲ. ಬೇರೆ ಬೇರೆ ಗ್ಯಾಂಗ್‌ಗಳು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಆಕ್ಟಿವ್ ಆಗಿದ್ದು, ಕಳ್ಳತನಕ್ಕೆ ಯತ್ನಿಸುವ ದೃಶ್ಯಗಳು ಜನರನ್ನು ಭಯಭೀತರನ್ನಾಗಿಸಿವೆ.ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿದ್ದರಾಮಯ್ಯ

    ಕೆಲವೆಡೆ ಕಳ್ಳರ ಗ್ಯಾಂಗ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ರೆ, ಇನ್ನೂ ಕೆಲವೆಡೆ ರಾಜಾರೋಷವಾಗಿ ಓಡಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದಾರೆ. ಬೆಳಗಿನ ಜಾವದಲ್ಲಿ ಕಳ್ಳರು ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿದ್ದು, ಸಾರ್ವಜನಿಕರು ಪೊಲೀಸರಿಗೆ ರಕ್ಷಣೆಗಾಗಿ ಒತ್ತಾಯಿಸಿದ್ದಾರೆ. ರಾತ್ರಿ, ಬೆಳಗಿನ ಜಾವದಲ್ಲಿ ಹೆಚ್ಚು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ. ರೈಲು ನಿಲ್ದಾಣ, ರೈಲು ಹಳಿ ಅಕ್ಕಪಕ್ಕದ ಮನೆಗಳನ್ನ ಕಳ್ಳರು ಟಾರ್ಗೆಟ್ ಮಾಡುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.

    ರಾಯಚೂರು ನಗರ ಸೇರಿದಂತೆ ಹಲವೆಡೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳ ಕಳ್ಳರು ಪತ್ತೆಯಾಗಿಲ್ಲ. ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಿಂದಲೂ ಕಳ್ಳರ ಕಾಟ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.ಇದನ್ನೂ ಓದಿ: ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು ಪ್ರಕರಣ – ಸುಪ್ರೀಂಕೋರ್ಟ್‌ಗೆ ಪಿಐಎಲ್

  • ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಯಲ್ಲಿ ಕಳ್ಳತನ – 12 ಲಕ್ಷ ಮೌಲ್ಯದ ಚಿನ್ನ, 29 ಲಕ್ಷ ಕ್ಯಾಶ್ ಕಳವು

    ಚಾಮರಾಜನಗರ: ದಸರಾ ನೋಡಲು ಹೋಗಿದ್ದ ಉದ್ಯಮಿ ಮನೆಗೆ ಕನ್ನ ಹಾಕಿರುವ ಘಟನೆ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ದಸರಾ ಲೈಟಿಂಗ್ಸ್ ನೋಡಲು ಮೈಸೂರಿಗೆ ಕುಟುಂಬಸ್ ಹೋಗಿದ್ದರು. ಉಮೇಶ್ ಅವರು ಹೆಂಡತಿ ಸವಿತಾ ಮತ್ತು ಇಬ್ಬರು ಮಕ್ಕಳು ಮೈಸೂರು ದಸರಾ ಲೈಟಿಂಗ್ ನೋಡಲು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು.

    ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಮನೆ ಬಾಗಿಲು ಮುರಿದು ಬೀರುವಿನಲ್ಲಿದ್ದ ಸುಮಾರು 29 ಲಕ್ಷ ರೂ. ನಗದು ಮತ್ತು ಚಿನ್ನದ ತಾಳಿಸರ, ನೆಕ್ಷೇಸ್, ಬಳೆಗಳು, ಸಣ್ಣ ಚೈನ್ ಗಳು, ಓಲೆಗಳು, ಮುತ್ತಿನ ಸರ ಸೇರಿದಂತೆ ಒಟ್ಟು 300 ಗ್ರಾಂ ಚಿನ್ನಾಭರಣ (12 ಲಕ್ಷ ಮೌಲ್ಯ) ಹಾಗೂ 2 ಕೆ.ಜಿ ಬೆಳ್ಳಿ ನಾಣ್ಯ, 2 ರೇಷ್ಮೆ ಸೀರೆ ಮತ್ತು 2 ದುಬಾರಿ ವಾಚ್ ಸೇರಿದಂತೆ ಒಟ್ಟು 42.70 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Bengaluru | ಮಹಿಳೆಗೆ ಥಳಿತ ಕೇಸ್‌ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

    Bengaluru | ಮಹಿಳೆಗೆ ಥಳಿತ ಕೇಸ್‌ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಅವೆನ್ಯೂ ರಸ್ತೆಯಲ್ಲಿ (Avenue Road) ಗುರುವಾರ ಮಹಿಳೆಗೆ ಅಮಾನುಷವಾಗಿ ಥಳಿಸಿದ್ದ ಆರೋಪಿಗಳನ್ನ ಕೆ.ಆರ್.ಮಾರ್ಕೆಟ್ ಪೊಲೀಸರು (KR Market Police) ಬಂಧಿಸಿದ್ದಾರೆ.

    ಅಂಗಡಿಯ ಮಾಲೀಕ ಉಮೇದ್‌ ರಾಮ್ ಮತ್ತು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ, ಮಹೇಂದ್ರ ಶರ್ಮಾ ಬಂಧಿತ ಆರೋಪಿಗಳು. ಕಳೆದ ಶನಿವಾರ ಮಹಿಳೆಯೊಬ್ಬರು ಉಮೇದ್‌ ರಾಮ್ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದರು. ಇದನ್ನ ಗಮನದಲ್ಲಿಟ್ಟುಕೊಂಡು, ಉಮೇದ್‌ ರಾಮ್ ಭಾನುವಾರ ಕಾದು ಕೂತಿದ್ದಾನೆ. ಮಹಿಳೆ ಬರುತ್ತಿದ್ದಂತೆ ಆಕೆಯನ್ನ ಹಿಡಿದು, ಆತ ಮತ್ತು ಸಿಬ್ಬಂದಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು, ಮನಬಂದಂತೆ ಥಳಿಸಿದ್ದರು. ಮಹಿಳೆ ನೋವಿನಿಂದ ಅಂಗಲಾಚಿದರೂ ಬಿಡದ ಪಾಪಿ ಮಾಲೀಕನ ಕೃತ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಹಿಳೆ ದೂರು ಕೊಡಲು ಮುಂದಾದರೂ ಕೇರ್ ಮಾಡದ ಸಿಟಿ ಮಾರ್ಕೆಟ್ ಪೊಲೀಸರು, ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

    ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ, ಕನ್ನಡಪರ ಹೋರಾಟಗಾರರು ಮಹಿಳೆಯ ಪರವಾಗಿ ನಿಂತಿದ್ದಾರೆ. ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಡುತ್ತಿದ್ದಂತೆ ಸಿಟಿ ಮಾರ್ಕೆಟ್ ಪೊಲೀಸರು, ತರಾತುರಿಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಗುರುವಾರ ರಾತ್ರಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು

  • ಹಾವೇರಿ | 1.5 ಲಕ್ಷ ಮೌಲ್ಯದ ಬ್ರಿಜ್ಡ್ ಕಂ ಬ್ಯಾರೇಜ್ ಗೇಟ್ ಕಳ್ಳತನ – ಅನ್ನದಾತರು ಕಂಗಾಲು

    ಹಾವೇರಿ | 1.5 ಲಕ್ಷ ಮೌಲ್ಯದ ಬ್ರಿಜ್ಡ್ ಕಂ ಬ್ಯಾರೇಜ್ ಗೇಟ್ ಕಳ್ಳತನ – ಅನ್ನದಾತರು ಕಂಗಾಲು

    ಹಾವೇರಿ: ಕಳ್ಳರ ಗ್ಯಾಂಗೊಂದು ಹಾವೇರಿಯಲ್ಲಿ (Haveri) ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ 1.5 ಲಕ್ಷ ಮೌಲ್ಯದ ಬ್ಯಾರೇಜ್ ಗೇಟ್‌ಗಳನ್ನ ಮತ್ತೆ ಕಳ್ಳತನ ಮಾಡಿದೆ.

    ಇದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕೋಳೂರು ಗ್ರಾಮದ ಬಳಿ ಇರೋ ವರದಾ ನದಿಯ ಬ್ಯಾರೇಜ್. ಕಳೆದ 8 ತಿಂಗಳಿನಿಂದ ನಿರಂತರ‌ ಮಳೆಯಾಗಿದೆ. ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಬ್ರಿಜ್ಡ್ ಕಂ ಬ್ಯಾರೇಜ್‌ಗೆ ಅಳವಡಿಸಿದ್ದ ಗೇಟ್‌ಗಳನ್ನು ಗೋದಾಮಿನಲ್ಲಿ ಇಡುತ್ತಾರೆ. ಆದರೆ ಈಗ ಖದೀಮರ ಗ್ಯಾಂಗ್ ರಾತ್ರೋರಾತ್ರಿ 98 ಗೇಟ್‌ಗಳನ್ನು ಕಳ್ಳತನ ಮಾಡಿದೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಗೇಟ್‌ಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.ಇದನ್ನೂ ಓದಿ: ಜಾತಿಗಣತಿ ಸಮೀಕ್ಷೆ ತಡೆ ಕೋರಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

    ಜಿಲ್ಲೆಯಲ್ಲಿ ಐದಾರು ಬ್ರಿಜ್ಡ್ ಕಂ ಬ್ಯಾರೇಜ್‌ಗಳ ಗೇಟ್‌ಗಳನ್ನು ಕಳ್ಳತನ ಮಾಡಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಹಿಂಗಾರು ಬೆಳೆಗಳನ್ನ ಬೆಳೆಯುವುದು ಹೇಗೆ. ಕಳ್ಳತನವಾಗಿ ಎರಡು ತಿಂಗಳು ಕಳೆದರೂ ಕಳ್ಳರು ಮಾತ್ರ ಪತ್ತೆಯಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶೇಷಗಿರಿ ಗ್ರಾಮದಲ್ಲೂ ವರದಾ ನದಿ ಬ್ಯಾರೇಜ್‌ಗೆ ಅಳವಡಿಸುವ 213 ಗೇಟ್‌ಗಳನ್ನು ರಾತ್ರೋ ರಾತ್ರಿ ಕಳ್ಳತನ ಮಾಡಲಾಗಿತ್ತು. ಅಕ್ಕೂರು ,ಕೋಡಬಾಳ ಮತ್ತು ಕುಸನೂರು ಸೇರಿದಂತೆ ಹಲವು ಕಡೆಯ ಬ್ರಿಜ್ಡ್ ಕಂ ಬ್ಯಾರೇಜ್ ನ ಗೇಟ್ ಕಳ್ಳತನ ಮಾಡಿದ್ದಾರೆ. ಒಂದಾದ ನಂತರ ಒಂದು ಕಡೆ ಕಳ್ಳತನ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈವರೆಗೆ ಯಾವುದೇ ಕಳ್ಳರ ಪತ್ತೆಯಾಗಿಲ್ಲ.

    ಕಳೆದ‌ ಎಂಟು ತಿಂಗಳಿನಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಹಲವು ಕಡೆ ಬ್ಯಾರೇಜ್ ಗೇಟ್ ಕಳ್ಳತನ ಆಗಿವೆ. ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಗೋದಾಮು ಕಾಯುವ ವ್ಯಕ್ತಿಯನ್ನ ನೇಮಕ ಮಾಡಬೇಕು. ಯಾರೋ ಖದೀಮರು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ಕೂಡಲೇ ಪೊಲೀಸರು ಖದೀಮರನ್ನ ಪತ್ತೆ ಮಾಡಬೇಕು‌. ಇಲ್ಲಾವಾದರೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ ಎಂದು ರೈತರು ಹೇಳಿದ್ದಾರೆ.ಇದನ್ನೂ ಓದಿ: ಕಂದಕಕ್ಕೆ ಉರುಳಿದ ಸಾರಿಗೆ ಬಸ್‌ – 16 ಮಂದಿಗೆ ಗಾಯ

  • ಬೀದರ್ | ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಬೀದರ್ | ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಬೀದರ್: ಮನೆಯ ಬೀಗ ಮುರಿದು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ಪಟ್ಟಣದ ಬಾಲಾಜಿ ನಗರದಲ್ಲಿ ನಡೆದಿದೆ.

    ಜಾಲೇಂದರ್ ಭೀಮಣ್ಣ ಮತ್ರೆ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಳ್ಳರು ಕೈಚಳಕ ತೋರಿಸಿದ್ದಾರೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿ ಆಭರಣಗಳು ಕದ್ದು ಪರಾರಿಯಾಗಿದ್ದಾರೆ.ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ – ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್

    ಮಾಲೀಕರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ವಾಕಿಂಗ್‌ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಲಾಂಗ್‌ – ಬೆದರಿಸಿ ಸರ ಕಿತ್ತ ದರೋಡೆಕೋರರು

    ವಾಕಿಂಗ್‌ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಲಾಂಗ್‌ – ಬೆದರಿಸಿ ಸರ ಕಿತ್ತ ದರೋಡೆಕೋರರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕಿನಲ್ಲಿ (Bike) ಆಗಮಿಸಿ ಸರಗಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು ಇದೀಗ ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಸರ ಕಸಿದು ಪರಾರಿಯಾಗುತ್ತಿದ್ದಾರೆ.

    ಕೈಯಲ್ಲಿ ಲಾಂಗ್ ಹಿಡಿದು ಮಹಿಳೆಯರನ್ನು ಬೆದರಿಸಿ ಚಿನ್ನದ (Gold) ಸರ ಕಳ್ಳತನ ಮಾಡುವ ಇವರ ಕೃತ್ಯ ನೋಡಿದರೆ ಎಂಥವರಿಗೂ ಭಯ ಹುಟ್ಟುತ್ತೆ.

    ಗಿರಿನಗರ, ಕೋಣನಕುಂಟೆಯ ಆರ್‌ಬಿಐ ಲೇಔಟ್ ನಲ್ಲಿ ಲಾಂಗ್ ಹಿಡಿದು ಸರಗಳ್ಳರು ಕಳ್ಳತನ ಮಾಡಿದ್ದಾರೆ. ಶನಿವಾರ ರಾತ್ರಿ ಗಿರಿನಗರದಲ್ಲಿ ಲಾಂಗ್ ಬೀಸಿ ವರಲಕ್ಷ್ಮೀ ಎಂಬವರ ಕೈ ಬೆರಳು ತುಂಡರಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.  ಇದನ್ನೂ ಓದಿ: ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

     

    ಅದೇ ದಿನ ಕೋಣನಕುಂಟೆಯ ಆರ್‌ಬಿಐ ಲೇಔಟ್ ನಲ್ಲೂ ಲಾಂಗ್ ತೋರಿಸಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಮಹಿಳೆಯರಿಗೆ ಬೆದರಿಸಿ ಸರ ಕಸಿದು ಪರಾರಿಯಾಗಿದ್ದಾರೆ.

    ಮಹಿಳೆಗೆ ಲಾಂಗ್ ಹಿಡಿದು ಬೆದರಿಸುವ ವೀಡಿಯೊ ಲಭ್ಯವಾಗಿದ್ದು ದರೋಡೆಕೋರರ ಅಟ್ಟಹಾಸ ಭಯ ಹುಟ್ಟಿಸುವಂತಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.