Tag: theatre

  • ಪೇಟಾ ಚಿತ್ರದ ಕ್ರೇಜ್‍- ಥಿಯೇಟರ್ ಹೊರಗೆ ಮದ್ವೆಯಾದ ಜೋಡಿ

    ಪೇಟಾ ಚಿತ್ರದ ಕ್ರೇಜ್‍- ಥಿಯೇಟರ್ ಹೊರಗೆ ಮದ್ವೆಯಾದ ಜೋಡಿ

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಪೇಟಾ’ ಸಿನಿಮಾದ ಕ್ರೇಜ್‍ನಿಂದ ಥಿಯೇಟರ್ ಹೊರಗೆ ಜೋಡಿ ಮದುವೆಯಾದ ಅಪರೂಪದ ಕ್ಷಣವೊಂದು ಚೆನ್ನೈನಲ್ಲಿ ನಡೆದಿದೆ.

    ರಜನಿಕಾಂತ್ ಅಭಿಮಾನಿಗಳಾಗಿರುವ ಅನ್‍ಬರಸುರ್ ಹಾಗೂ ಕಾಮಾಕ್ಷಿ ರಾಯಪೇಟೆಯಲ್ಲಿರುವ ವುಡ್‍ಲ್ಯಾಂಡ್ ಚಿತ್ರಮಂದಿರದ ಹೊರಗೆ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗಾಗಿಯೇ ಚಿತ್ರಮಂದಿರದ ಹೊರಗೆ ಒಂದು ವೇದಿಕೆಯನ್ನು ಕೂಡ ನಿರ್ಮಿಸಲಾಗಿತ್ತು.

    ಅನ್‍ಬರಸುರ್ ಹಾಗೂ ಕಾಮಾಕ್ಷಿ ಮದುವೆ ಬಳಿಕ ಚಿತ್ರ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಿಗೆ ಊಟವನ್ನು ಸಹ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಸಿನಿಮಾ ಶುರುವಾಗುವ ಮೊದಲೇ ಅನ್‍ಬರಸುರ್, ಕಾಮಾಕ್ಷಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ. ಬಳಿಕ ಅದೇ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.

    ಪೇಟಾ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟ ವಿಜಯ್ ಸೇತುಪತಿ, ಸಸಿಕುಮಾರ್, ಸಿಮ್ರಾನ್, ತ್ರಿಷಾ, ಮಹೇಂದ್ರನ್, ಬಾಬಿ ಸಿಂಹ ಹಾಗೂ ಗುರು ಸೋಮಸುಂದರಂ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಸಿನಿಮಾ ನೋಡುವಾಗ ಕುಸಿದು ಬಿದ್ದ ಸಜ್ಜಾ- ಓರ್ವನಿಗೆ ಗಾಯ

    ಕೆಜಿಎಫ್ ಸಿನಿಮಾ ನೋಡುವಾಗ ಕುಸಿದು ಬಿದ್ದ ಸಜ್ಜಾ- ಓರ್ವನಿಗೆ ಗಾಯ

    ಕೋಲಾರ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ನೋಡುವ ವೇಳೆ ಚಿತ್ರಮಂದಿರದ ಸಜ್ಜಾ ಕುಸಿದು ಬಿದ್ದ ಪರಿಣಾಮ ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ.

    ಜಿಲ್ಲೆಯ ಬಂಗಾರಪೇಟೆ ಪಟ್ಟಣದ ವಿಜಯ ಚಿತ್ರಮಂದಿರದಲ್ಲಿ ಈ ಘಟನೆ ಜರುಗಿದ್ದು, ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಭತ್ಯಪ್ಪ(35) ಗಾಯಗೊಂಡಿದ್ದಾರೆ.

    ಇಂದು ಎಲ್ಲೆಡೆ ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದು, ಬಂಗಾರಪೇಟೆಯಲ್ಲಿ ಸಿನಿಮಾ ನೋಡುತ್ತಿದ್ದ ಸಂದರ್ಭದಲ್ಲಿ ಯಶ್ ಅಭಿಮಾನಿ ಭತ್ಯಪ್ಪ ಮೇಲೆ ಸರ್ಜಾ ಕುಸಿದ ಪರಿಣಾಮ ತಲೆಗೆ ಗಾಯವಾಗಿದೆ. ಗಾಯಗೊಂಡ ಭತ್ಯಪ್ಪ ಅವರನ್ನು ಬಂಗಾರಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಂಜಾದ ಮತ್ತಿನಲ್ಲಿ ಚಾಲನೆ- ಚಿತ್ರಮಂದಿರದೊಳಗೆ ನುಗ್ಗಿದ ಕಾರು!

    ಗಾಂಜಾದ ಮತ್ತಿನಲ್ಲಿ ಚಾಲನೆ- ಚಿತ್ರಮಂದಿರದೊಳಗೆ ನುಗ್ಗಿದ ಕಾರು!

    ಕೋಲಾರ: ಗಾಂಜಾ ಹೊಡೆದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅತೀ ವೇಗವಾಗಿ ಚಲಾಯಿಸಿದ ಪರಿಣಾಮ ಕಾರು ಚಿತ್ರಮಂದಿರದೊಳಗೆ ನುಗ್ಗಿ ಬಾರಿ ಅನಾಹುತವೊಂದು ತಪ್ಪಿರುವ ಘಟನೆ ಕೋಲಾರ ನಗರದಲ್ಲಿಂದು ನಡೆದಿದೆ.

    ಕೋಲಾರ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಗಾಂಜಾ ಹೊಡೆದ ಮತ್ತಿನಲ್ಲಿ ಚಾಲಕ ಕಾರು ಚಲಾಯಿಸಿದ್ದಾನೆ. ಪರಿಣಾಮ ನಿಯಂತ್ರಣ ಸಿಗದೇ ಅತಿ ವೇಗವಾಗಿ ಇಂಡಿಕಾ ವಿ-2 ಕಾರು ನಾರಾಯಣಿ ಚಿತ್ರ ಮಂದಿರಕ್ಕೆ ನುಗ್ಗಿದೆ. ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ.

    ಚಿತ್ರಮಂದಿರದ ಮುಂಭಾಗ ಜನ ನಿಬಿಡಪ್ರದೇಶವಾಗಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಗಾಯಗೊಂಡ ಇಬ್ಬರನ್ನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಮರಾಜನಗರ, ದಾವಣಗೆರೆ ಜಿಲ್ಲೆಯಾದ್ಯಂತ ‘ಕಾಳಾ’ ರದ್ದು!

    ಚಾಮರಾಜನಗರ, ದಾವಣಗೆರೆ ಜಿಲ್ಲೆಯಾದ್ಯಂತ ‘ಕಾಳಾ’ ರದ್ದು!

    ಚಾಮರಾಜನಗರ/ದಾವಣಗೆರೆ: ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಗಡಿನಾಡು ಚಾಮರಾಜನಗರ ಜಿಲ್ಲೆಯಾದ್ಯಂತ ರಜಿನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಯಾಗಿಲ್ಲ.

    ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಚಾಮರಾಜನಗರ ಸೇರಿದಂತೆ ತಾಲೂಕಿನ ಯಾವುದೇ ಚಿತ್ರ ಮಂದಿರಗಳಲ್ಲಿ ಕಾಳಾ ಚಿತ್ರ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೇ ಜಿಲ್ಲೆಯ ಯಾವುದೇ ಚಿತ್ರಮಂದಿರಗಳಲ್ಲಿ ಬೇರೆ ತಮಿಳು ಚಿತ್ರಗಳು ಸಹ ಪ್ರದರ್ಶನಗೊಳ್ಳುತ್ತಿಲ್ಲ.

    ಹೀಗಾಗಿ ಜಿಲ್ಲೆಯ ಎಲ್ಲಾ ಚಿತ್ರ ಮಂದಿರಗಳಲ್ಲಿ ಕನ್ನಡ ಮತ್ತು ತೆಲಗು ಚಿತ್ರಗಳೇ ಪ್ರದರ್ಶನಗೊಳ್ಳುತ್ತಿವೆ. ಚಾಮರಾಜನಗರ ಜಿಲ್ಲಾ ಕೇಂದ್ರದ ಸಿಂಹ ಮೂವೀ ಪ್ಯಾರಡೇಸ್, ಬಸವೇಶ್ವರ, ಭ್ರಮರಾಂಭ ಗುರುರಾಘವೇಂದ್ರ ಮತ್ತು ಸಿದ್ದಾರ್ಥ ಚಿತ್ರ ಮಂದಿಗಳಲ್ಲಿ ಕನ್ನಡ ಚಿತ್ರಗಳೇ ಪ್ರದರ್ಶನಗೊಳ್ಳುತ್ತಿವೆ.

    ದಾವಣಗೆರೆಯಲ್ಲೂ ಕೂಡ ರಜನಿಕಾಂತ್ ಅಭಿನಯದ ಕಾಳಾ ಚಿತ್ರ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಥಿಯೇಟರ್ ಮಾಲೀಕರು ಕನ್ನಡಪರ ಸಂಘಟನೆಗಳ ಮನವಿ ಸ್ಪಂದಿಸಿದ್ದಾರೆ. ದಾವಣಗೆರೆಯ 2 ಚಿತ್ರಮಂದಿರಗಲ್ಲಿ ಕಾಳಾ ಚಿತ್ರ ಬಿಡುಗಡೆಗೆ ಕಾಲ ನಿಗದಿಯಾಗಿತ್ತು.

    ಕಳೆದ ಒಂದು ವಾರದಿಂದ ಕರುನಾಡ ಸೇವಕರು ಮತ್ತು ಇತರೆ ಕನ್ನಡ ಪರ ಸಂಘಟನೆಗಳು ಥಿಯೇಟರ್ ಮಾಲೀಕರಿಗೆ ಮನವಿ ಮಾಡಿತ್ತು. ಒಂದು ವೇಳೆ ಬಿಡುಗಡೆ ಮಾಡಿದರೆ ಪರಿಣಾಮ ಎದುರಿಸಬೇಕಾಗತ್ತೆ ಎನ್ನುವ ಎಚ್ಚರಿಕೆ ನೀಡಿದ್ದರು. ಹಾಗಾಗಿ ಥಿಯೇಟರ್ ಮಾಲೀಕರು ಚಿತ್ರ ಬಿಡುಗಡೆ ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರಿನಲ್ಲಿರುವ ಕಾವೇರಿ, ನಟರಾಜ, ಸಂಪಿಗೆ, ಪೂರ್ಣಿಮಾ ಚಿತ್ರಮಂದಿರದಲ್ಲಿ ರಾತ್ರಿ ಪ್ರದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಡೀ ಚಿತ್ರಮಂದಿರಗಳ ಮುಂದೆ ಕಾವಲು ನಿಂತು ಸಿನಿಮಾ ರಿಲೀಸ್‍ಗೆ ಬ್ರೇಕ್ ಹಾಕಿದ್ದಾರೆ. ಇಂದು ನಗರದಲ್ಲಿ ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಫಸ್ಟ್ ಶೋ ರದ್ದಾಗಿದೆ.

  • ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

    ಸಿನಿಮಾ ಥಿಯೇಟರ್ ಗೇಟ್ ಹಾರಿದ ನಟ ಸೂರ್ಯ

    ಹೈದರಾಬಾದ್: ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ತಮ್ಮ ‘ಗ್ಯಾಂಗ್’ ಚಿತ್ರದ ಪ್ರಮೋಷನ್ ವೇಳೆ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಥಿಯೇಟರ್ ಗೇಟ್ ಹಾರಿದ್ದಾರೆ.

    ಕಳೆದ ವಾರ ಬಿಡುಗಡೆಯಾಗಿರುವ ಸೂರ್ಯ ಅವರ `ಗ್ಯಾಂಗ್’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು. ತಮಿಳು, ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆಯಾಗಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್‍ಗೆ ಮಂಗಳವಾರ ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಗೆ ಸೂರ್ಯ ತೆರಳಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಗ್ಯಾಂಗ್ ಚಿತ್ರದ ಬಗ್ಗೆ ಮಾತನಾಡಿ ಧನ್ಯವಾದ ತಿಳಿಸಿದ್ರು.

    ಆದರೆ ತಮ್ಮ ನೆಚ್ಚಿನ ನಟ ಬಂದ ಸುದ್ದಿ ತಿಳಿದ ಜನರು ಅವರನ್ನು ನೋಡಲು ಚಿತ್ರ ಮಂದಿರದ ಬಳಿ ಜಮಾಯಿಸಿದ್ದರು. ಹೀಗಾಗಿ ಸಕ್ಸಸ್ ಮೀಟ್ ಮುಗಿಸಿ ಸೂರ್ಯ ಥಿಯೇಟರ್‍ನಿಂದ ತೆರಳಲು ಆಗದೇ ಕಷ್ಟ ಪಟ್ಟಿದ್ದಾರೆ. ಅಭಿಮಾನಿಗಳಿಂದ ಪಾರಾಗಲು ಯತ್ನಿಸಿದ ಸೂರ್ಯ, ಬಂದ್ ಆಗಿದ್ದ ಗೇಟ್ ಹಾರಿ, ತಮ್ಮ ಕಾರಿನ ಬಳಿ ಬಂದು ಅಲ್ಲಿಂದ ಹೋಗಿದ್ದಾರೆ. ನಟ ಸೂರ್ಯ ಚಿತ್ರ ಮಂದಿರದ ಗೇಟ್ ಹಾರುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಅಭಿಮಾನಿಗಳು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗ್ಯಾಂಗ್ ಚಿತ್ರದಲ್ಲಿ ಸೂರ್ಯ ಅವರ ಜೊತೆ ಕೀರ್ತಿ ಸುರೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಹುಬಲಿ ಖ್ಯಾತಿಯ ರಮ್ಯಾಕೃಷ್ಣ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.youtube.com/watch?v=GFtOm2JrV2Y

  • ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಭೇಟಿ

    ಚಿಕ್ಕಬಳ್ಳಾಪುರ: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೋಮವಾರ ತಮ್ಮ ಹೊಚ್ಚ ಹೊಸ ಮಫ್ತಿ ಸಿನಿಮಾದ ಪ್ರಮೋಷನ್ ಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು.

    ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಶ್ರೀಮುರುಳಿ ಹಾಗೂ ನಟ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಸೋಮವಾರ ಸಂಜೆ ನಟ ಶ್ರೀಮುರುಳಿ ಚಲನಚಿತ್ರಮಂದಿರಕ್ಕೆ ಭೇಟಿ ಕೊಟ್ಟು ಆಭಿಮಾನಿಗಳ ಜೊತೆ ಮಾತುಕತೆ ನಡೆಸಿದರು.

    ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಶ್ರೀಮುರುಳಿಗೆ ಅಭಿಮಾನಿಗಳು ಆದರದ ಸ್ವಾಗತ ಕೋರಿ ಹೂಮಾಲೆ ಹಾಕಿ ಬರಮಾಡಿಕೊಂಡರು. ಇದೇ ವೇಳೆ ನಟ ಶ್ರೀಮುರುಳಿ ಅಭಿಮಾನಿಗಳ ಜೊತೆ ಸೆಲ್ಫೀ ತೆಗೆದುಕೊಂಡು ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ಈ ವೇಳೆ ಮಾತನಾಡಿದ ಶ್ರೀ ಮುರುಳಿ, ಮಫ್ತಿ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಯಶಸ್ಸು ಅಭಿಮಾನಿಗಳಿಗೆ ಸಲ್ಲಬೇಕು ಎಂದು ಹೇಳಿದರು.

  • ಥಿಯೇಟರ್ ನಲ್ಲಿ ಸಿನಿಮಾ ನೋಡುವಾಗ ಯುವತಿಗೆ ಲೈಂಗಿಕ ಕಿರುಕುಳ ನೀಡಿದ CRPF ಯೋಧ

    ಥಿಯೇಟರ್ ನಲ್ಲಿ ಸಿನಿಮಾ ನೋಡುವಾಗ ಯುವತಿಗೆ ಲೈಂಗಿಕ ಕಿರುಕುಳ ನೀಡಿದ CRPF ಯೋಧ

    ಶಿವಮೊಗ್ಗ: ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಣೆ ಮಾಡುವಾಗ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಸಿಆರ್ ಪಿಎಫ್ ಯೋಧನಿಗೆ ಪ್ರೇಕ್ಷಕರು ಧರ್ಮದೇಟು ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ರವಿ ಬಿ. ಎಂಬಾತನೇ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಯೋಧ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ `ಭರ್ಜರಿ’ ಸಿನಿಮಾ ವೀಕ್ಷಣೆ ಮಾಡುವಾಗ ಈ ಘಟನೆ ನಡೆದಿದೆ. ಯುವತಿ ತನ್ನ ಇಡೀ ಕುಟುಂಬದ ಸಮೇತ ಸಿನಿಮಾ ವೀಕ್ಷಣೆಗೆ ಬಂದಿದ್ದರು. ಪಕ್ಕದ ಸೀಟಿನಲ್ಲಿಯೇ ರವಿ ಕುಳಿತಿದ್ದಾನೆ.

    ಪದೇ ಪದೇ ಯುವತಿಗೆ ಕಿರುಕುಳ ನೀಡಿದ್ದರಿಂದ ಆಕೆಯ ಕುಟುಂದವರು ಹಾಗೂ ಅಕ್ಕಪಕ್ಕದ ಪ್ರೇಕ್ಷಕರು ಸೇರಿ ಯೋಧನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿ, ಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ವಿಚಾರಣೆ ವೇಳೆ ಮಾತನಾಡಿದ ಯೋಧ ರವಿ ಯುವತಿ ಮೇಲೆ ಲೈಂಗಿಕ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ.

  • ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!

    ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!

    ಹೈದರಾಬಾದ್: ಥಿಯೇಟರ್ ನಲ್ಲಿ ಸಿನಿಮಾಗೂ ಮುಂಚೆ ಪ್ರಸಾರ ಮಾಡಲಾದ ರಾಷ್ಟ್ರಗೀತೆಯ ಸಂದರ್ಭದಲ್ಲಿ ಎದ್ದು ನಿಲ್ಲದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ರಾಜೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.

    ಜಮ್ಮು-ಕಾಶ್ಮೀರದ ಬಾರಮುಲ್ಲಾ ನಿವಾಸಿಗಳಾದ ಜಮೀಲ್ ಗುಲ್, ಓಮರ್ ಫೈಜ್ ಲುನೀ ಮತ್ತು ಮುದಾಸಿರ್ ಶಬ್ಬೀರ್ ಬಂಧಿತ ವಿದ್ಯಾರ್ಥಿಗಳಾಗಿದ್ದು, ಇವರು ಸದ್ಯ ಚೆವೆಲ್ಲಾದಲ್ಲಿರೋ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ.

    ಈ ಮೂವರು ಯುವಕರು ಸಿನಿಪಾಲಿಸ್ ಮಂತ್ರ ಮಾಲ್ ನಲ್ಲಿ ಮಧ್ಯಾಹ್ನ 3.50ಕ್ಕೆ ಆರಂಭವಾಗುವ ಹಿಂದಿ ಸಿನಿಮಾ `ಬರೇಲಿ ಕಿ ಬರ್ಫಿ’ ನೋಡಲು ಬಂದಿದ್ದರು ಅಂತ ಶಮ್ಶಾಬಾದ್ ವಲಯದ ಉಪ ಆಯುಕ್ತ ಪಿವಿ ಪದ್ಮಜಾ ಹೇಳಿದ್ದಾರೆ.

    ಅಂದು ಸಂಜೆ ಥಿಯೇಟರ್ ಮ್ಯಾನೇಜ್‍ಮೆಂಟ್‍ನವರು ಈ ಬಗ್ಗೆ ದೂರು ನೀಡಿದ್ದರು. ಬಳಿಕ ಮೂವರು ವಿದ್ಯಾರ್ಥಿಗಳ ವಿರುದ್ಧ ರಾಷ್ಟ್ರ ಗೌರವಕ್ಕೆ ಅವಮಾನ ನಿಯಂತ್ರಣ ಕಾಯ್ದೆಯ ಸೆಕ್ಷನ್ 2ರ ಅಡಿ ರಾಜೇಂದ್ರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಥಿಯೇಟರ್ ನಲ್ಲಿ ಯಾವುದೇ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಬೇಕೆಂಬುದು ಸುಪ್ರೀಂ ಕೋರ್ಟ್ ಆದೇಶವಾಗಿದೆ.