Tag: Theater Open

  • ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಪಿತೃಪಕ್ಷದಲ್ಲಿ ಥಿಯೇಟರ್ ಓಪನ್ ಮಾಡಲ್ಲ – ಉಡುಪಿ ಚಿತ್ರಮಂದಿರ ಮಾಲೀಕರ ತೀರ್ಮಾನ

    ಉಡುಪಿ: ರಾಜ್ಯಾದ್ಯಂತ ಅಕ್ಟೋಬರ್ 1ರಿಂದ ಥಿಯೇಟರ್‌ಗಳು ಓಪನ್ ಆಗಿ ಚಿತ್ರಗಳು ಪ್ರದರ್ಶನಕಾಣಲಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇನ್ನೊಂದು ವಾರ ಚಿತ್ರಮಂದಿರ ಓಪನ್ ಆಗಲ್ಲ. ಪಿತೃಪಕ್ಷ ಇರುವುದರಿಂದ ಥಿಯೇಟರ್‌ಗಳನ್ನು ಮತ್ತೆ ಓಪನ್ ಮಾಡಲು ಆಡಳಿತ ಮಂಡಳಿ ಒಪ್ಪುತ್ತಿಲ್ಲ.

    ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು ಯಾವುದೇ ಚಿತ್ರಮಂದಿರಗಳನ್ನು ಓಪನ್ ಮಾಡದೆ ಇರಲು ತೀರ್ಮಾನಿಸಲಾಗಿದೆ. ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಆರಂಭವಾಗಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಒಂದು ವಾರದ ನಂತರ ಓಪನ್ ಮಾಡಲು ತೀರ್ಮಾನಿಸಲಾಗಿದೆ. ಉಡುಪಿಯ ಕಲ್ಪನಾ, ಅಲಂಕಾರ, ಆಶೀರ್ವಾದ್ ಸೇರಿದಂತೆ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಥಿಯೇಟರ್‌ಗಳು ಅಕ್ಟೋಬರ್ ಎಂಟರ ನಂತರ ತೆರೆದುಕೊಳ್ಳಲಿವೆ. ಇದನ್ನೂ ಓದಿ: ಸಾರಿ ಮಮ್ಮಿ, ಪಪ್ಪಾ – ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ: ಸೌಜನ್ಯ ಡೆತ್‍ನೋಟ್

    ಅಕ್ಟೋಬರ್ ಮೊದಲ ವಾರದಲ್ಲಿ ಪಿತೃಪಕ್ಷ ಇರುವುದರಿಂದ ಶುಭ ಕಾರ್ಯಗಳನ್ನು ಪಿತೃಪಕ್ಷದಲ್ಲಿ ಮಾಡೋದಿಲ್ಲ. 8 ನೇ ತಾರೀಖಿನಿಂದ ಥಿಯೇಟರ್‌ಗಳು ಓಪನ್ ಮಾಡಬೇಕು ಅಂದ್ರೆ ಸುಮಾರು 30 ಸಾವಿರ ರೂಪಾಯಿ ಖರ್ಚು ಇದೆ. 5 ತಿಂಗಳಿಂದ ಥಿಯೇಟರ್ ಬಂದ್ ಇರುವುದರಿಂದ ಸೀಟುಗಳು ಕಾರ್ಪೆಟ್ ಗಳು, ಹಾಲ್, ಜಗಲಿ ಸ್ಕ್ರೀನ್ ಸೇರಿದಂತೆ ಥಿಯೇಟರ್‌ರೊಳಗೆ ಸಂಪೂರ್ಣ ಶುಚಿತ್ವ ಮಾಡಬೇಕಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭ 11 ತಿಂಗಳು ಥಿಯೇಟರ್ ಓಪನ್ ಆಗಿರಲಿಲ್ಲ ಈ ಸಂದರ್ಭದಲ್ಲಿ ಎಲ್ಲಾ ಚಿತ್ರಮಂದಿರಗಳಿಗೆ 40 ಸಾವಿರ ರುಪಾಯಿ ಖರ್ಚಾಗಿತ್ತು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್

    ಅಕ್ಟೋಬರ್ 1ಕ್ಕೆ ಯಾವುದು ದೊಡ್ಡ ಬಜೆಟ್‍ನ ಚಿತ್ರಗಳು, ದೊಡ್ಡ ಸ್ಟಾರ್ ಕಾಸ್ಟ ಚಿತ್ರಗಳು ರಿಲೀಸ್ ಇಲ್ಲ. ಪಿತೃಪಕ್ಷ ಈಗ ನಡೆಯುತ್ತಿದೆ. ಮಹಾಲಯ ಅಮಾವಾಸ್ಯೆ ನಂತರ ಒಳ್ಳೆ ದಿನಗಳು ಇರುವುದರಿಂದ ಆನಂತರ ಥಿಯೇಟರ್‌ಗಳನ್ನು ಓಪನ್ ಮಾಡುತ್ತೇವೆ. ಅನಾದಿಕಾಲದಿಂದ ಜನ ನಂಬಿಕೊಂಡು ಬಂದಿರುವುದರಿಂದ ದಿನಗಳು ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ಯಾವುದೇ ಸಮಸ್ಯೆಗಳು ಆಗದಿರಲಿ, ಒಳ್ಳೆ ಬ್ಯುಸಿನೆಸ್ ಆಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿ.ಎಸ್ ಹೊಳ್ಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.