Tag: theater

  • ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    ಕಾವೇರಿ ನದಿ ನೀರು ಹೋರಾಟಕ್ಕೆ ಸಂಬಂಧಿಸಿದಂತೆ ಇಂದು ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ (Cauvery Protest) ಮಂಡ್ಯ ಥಿಯೇಟರ್ (theater) ಮಾಲೀಕರು ಕೂಡ ಬೆಂಬಲ ಸೂಚಿಸಿದ್ದಾರೆ. ಚಿತ್ರಮಂದಿರಗಳನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಇಳಿದಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡಿದರೆ, ರಾಜ್ಯಾದ್ಯಂತ ಚಿತ್ರಮಂದಿರಗಳು ಕೂಡ ಬಂದ್ ಆಗಲಿವೆ.

    ಸ್ಯಾಂಡಲ್ ವುಡ್ ನಟ ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯ (Mandya) ಭಾಗದ ರೈತರ ಪರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರೆ, ನಟ ಅಭಿಷೇಕ್ ಅಂಬರೀಶ್ (Abhishek Ambarish) ನೇರವಾಗಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

    ಕಾವೇರಿ (Cauvery) ಹೋರಾಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಂಬರೀಶ್ ಅವರು ತಮ್ಮ ಕೇಂದ್ರ ಮಂತ್ರಿ ಸ್ಥಾನವನ್ನೇ ತ್ಯಜಿಸಿದ್ದರು. ನಂತರ ಮಂಡ್ಯದ ಎಂಪಿ ಆಗಿರುವ ನಟಿ ಸುಮಲತಾ ಅಂಬರೀಶ್ ಕೂಡ ಹಲವು ದಿನಗಳಿಂದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೀಗ ಅವರ ಪುತ್ರ ಅಭಿಷೇಕ್ ಕೂಡ ನೇರವಾಗಿ ಹೋರಾಟಕ್ಕೆ ಇಳಿಸಿದ್ದಾರೆ.

    ನಟ, ಯುವರಾಜಕಾರಣಿ ನಟ ನಿಖಿಲ್ ಕುಮಾರ್, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿರೋ ನಿಖಿಲ್, ‘ಕಾವೇರಿ ಕನ್ನಡಿಗರ ಹಕ್ಕು. ಕಾವೇರಿ ಕನ್ನಡಿಗರ ಜೀವನಾಡಿ, ಈ ವಿಷಯದಲ್ಲಿ ಅನ್ಯಾಯ ಸಹಿಸುವುದಿಲ್ಲ ಹಾಗೂ ರಾಜಿ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

     

    ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಡುತ್ತಿರುವ ಕಪಟ ನಾಟಕ ಸಾಕು. ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಮಳೆ ಕೈಕೊಟ್ಟಿದೆ. ಜಲಾಶಯಗಳು ಬರಿದಾಗಿವೆ. ಆದರೂ ತಮಿಳುನಾಡಿಗೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ನೀರು ಹರಿಸಿದ್ದು ಅಕ್ಷಮ್ಯ. ಬ್ರಿಟೀಷರ ಕಾಲದಲ್ಲಿಯೇ ಶುರುವಾದ ಅನ್ಯಾಯದ ಪರಂಪರೆಯನ್ನು ನಮ್ಮ ರಾಜ್ಯ ಸರಕಾರವೇ ಮುಂದುವರಿಸಿದೆ ಎಂದು ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಥಿಯೇಟರ್ ಮುಂದೆ ಯುವತಿಗೆ ನಿಂದನೆ: ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ

    ಥಿಯೇಟರ್ ಮುಂದೆ ಯುವತಿಗೆ ನಿಂದನೆ: ಕ್ಷಮೆ ಕೇಳಿದ ರಾಜ್ ಬಿ ಶೆಟ್ಟಿ

    ಟೋಬಿ (Toby) ಸಿನಿಮಾ ಚೆನ್ನಾಗಿಲ್ಲ ಎಂದು ಯುವತಿಯೊಬ್ಬಳು ಥಿಯೇಟರ್ (Theatre) ಮುಂದೆ ಹೇಳಿದ ಕಾರಣಕ್ಕಾಗಿ ಯುವಕನೊಬ್ಬ ಆ ಹುಡುಗಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಆ ಹುಡುಗಿ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಕ್ಕಾಗಿ ಥಿಯೇಟರ್ ನಿಂದ ಆಚೆ ಹೊರಡು ಎಂದು ಬೆದರಿಸಿದ್ದ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು.

    ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಿತ್ರದ ಕಥೆ ಬರೆದ ಟಿ.ಕೆ. ದಯಾನಂದ್ ಕ್ಷಮೆ ಯಾಚಿಸಿದ್ದರು. ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ದಯಾನಂದ್, ಆ ಹುಡುಗ ತಮ್ಮ ತಂಡದವನು ಅಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ತಂಡದ ಪರವಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದರು. ಇದೀಗ ರಾಜ್ ಬಿ ಶೆಟ್ಟಿ (Raj B Shetty) ಕೂಡ ಕ್ಷಮೆ ಕೇಳಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅತ್ಯುತ್ತಮ ನಟ ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಮತ್ತು ಕೀರ್ತಿ ಸನನ್

    ಸಿನಿಮಾ ಕೂಡ ವಿಮರ್ಶೆ ಮಾಡುವ ಮಾಧ್ಯಮ. ಸಾವಿರಾರು ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳು ಕೂಡ ಕೆಲವರಿಗೆ ಇಷ್ಟವಾಗಿರುವುದಿಲ್ಲ. ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಹಕ್ಕು ಇದೆ. ಯಾರನ್ನೂ ನಿಂದಿಸಬಾರದು. ಆ ಯುವತಿಗೆ ಬೈದ ಹುಡುಗ ನಮ್ಮ ತಂಡದವನು ಅಲ್ಲ. ಆದರೂ, ನಾನು ಮನಸಾರೆ ಆ ಹುಡುಗಿಗೆ ಕ್ಷಮೆ ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

     

    ಟೋಬಿ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಹಲವರು ಹಲವು ರೀತಿಯಲ್ಲಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ಇಂಥದ್ದೊಂದು ಘಟನೆ ನಡೆದು, ಚಿತ್ರತಂಡವನ್ನು ಮುಜುಗರಕ್ಕೀಡು ಮಾಡಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ನಿಷೇಧ

    ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ನಿಷೇಧ

    ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಸರ್ಕಾರವು ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ಯನ್ನು (The Kerala Story) ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಈ ವಿವಾದಾತ್ಮಕ ಚಿತ್ರದ ಪದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶ ಹೊರಡಿಸಿದ್ದಾರೆ.

    ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರವು ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: The Kerala Story ಬಂದ್ಮೇಲೆ ಇಸ್ಲಾಂಗೆ 32 ಸಾವಿರ ಮಹಿಳೆಯರ ಮತಾಂತರ – ಗಂಭೀರ ಆರೋಪ

    MAMATHA BANERJEE

    ಕಾಶ್ಮೀರ ಫೈಲ್ಸ್ ಎಂಬುದು ಒಂದು ಪ್ರದೇಶವನ್ನು ಅವಮಾನಿಸುತ್ತದೆ. ಅಂತೆಯೇ ದಿ ಕೇರಳ ಸ್ಟೋರಿ ಚಲನಚಿತ್ರವು ತಿರುಚಿದ ಕಥೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲನಚಿತ್ರ ನಿರ್ಮಾಪಕ ವಿಪುಲ್ ಶಾ, ಅವರು ಹಾಗೆ ಮಾಡಿದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿ ಹೋರಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾಯಿಮರಿ ಹಿಡ್ಕೊಂಡು ವರ್ಕೌಟ್ ಮಾಡಿದ ಮಮತಾ ಬ್ಯಾನರ್ಜಿ

    ಪಶ್ಚಿಮ ಬಂಗಾಳದ ಯಾವುದೇ ಥಿಯೇಟರ್‌ನಲ್ಲಿ (Theater) ಚಿತ್ರ ಪ್ರದರ್ಶನ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅದೇ ರೀತಿ ತಮಿಳುನಾಡಿನಲ್ಲಿಯೂ (Tamil Nadu) ಈ ಚಿತ್ರಪದರ್ಶನ ಮಾಡದಂತೆ ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ವಿವಾದದ ನಡುವೆಯೂ 35 ಕೋಟಿ ರೂಪಾಯಿ ಬಾಚಿದ ದಿ ಕೇರಳ ಸ್ಟೋರಿ

    ಶುಕ್ರವಾರ ತೆರೆಗೆ ಬಂದ ಈ ಸಿನೆಮಾ ಸಾಕಷ್ಟು ವಾದ-ವಿವಾದಗಳನ್ನು ಹುಟ್ಟಿಹಾಕುತ್ತಿದೆ. ದೇಶದ ಹಲವೆಡೆ ಈ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಈ ಚಿತ್ರದ ಕುರಿತು ಪ್ರತಿಭಟನೆಗಳು ನಡೆಯುತ್ತಿದೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ತಮಿಳು ನಾಡಿನಲ್ಲಿ ಪ್ರದರ್ಶನವಿಲ್ಲ

  • ಚಿತ್ರಮಂದಿರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ: ಸಚಿವ ಆರ್.ಅಶೋಕ್

    ಚಿತ್ರಮಂದಿರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ: ಸಚಿವ ಆರ್.ಅಶೋಕ್

    ಕೊರೊನಾ ಭೀತಿ ಮತ್ತೆ ಶುರುವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಒಂದಷ್ಟು ಕಠಿಣ ಕ್ರಮಗಳನ್ನು ತಗೆದುಕೊಂಡಿದ್ದು, ಚಿತ್ರಮಂದಿರಗಳಿಗೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ‘ಚಿತ್ರಮಂದಿರಕ್ಕೆ ಹೋಗುವವರು ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಹಾಕಿಕೊಳ್ಳದೇ ಚಿತ್ರಮಂದಿರಕ್ಕೆ ಬಂದರೆ, ಅವರಿಗೆ ಪ್ರವೇಶ ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ.

    ದೇಶಾದ್ಯಂತ ಮತ್ತೆ ಕೊರೊನಾ ಹಾವಳಿ ಶುರುವಾಗಿದೆ. ಈಗಿನಿಂದಲೇ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ರಾಜ್ಯ ಸರಕಾರ ತಗೆದುಕೊಳ್ಳಲಾಗುತ್ತಿದೆ. ತಜ್ಞರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ. ಕೇವಲ ಚಿತ್ರಮಂದಿರಗಳಿಗೆ ಮಾತ್ರವಲ್ಲ, ಹೊಸ ವರ್ಷಕ್ಕೂ ಒಂದು ಮಾರ್ಗಸೂಚಿ ಬಿಡುಗಡೆ ಆಗಿದ್ದು, ಸಭೆ ಸಮಾರಂಭದಲ್ಲೂ ಮಾಸ್ಕ್ ಹಾಕುವಂತೆ ಸೂಚಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ

    ಶಾಲಾ ಕಾಲೇಜುಗಳಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಮಕ್ಕಳು ಬರಬೇಕು ಎಂದು ಸೂಚಿಸಿದೆ. ನ್ಯೂ ಇಯರ್ ಪಾರ್ಟಿಯನ್ನು ಮಧ್ಯರಾತ್ರಿ ಒಂದು ಗಂಟೆ ಒಳಗೆ ಮುಗಿಸಬೇಕು ಎಂದು ಹೇಳಲಾಗಿದ್ದು, ಒಂದು ಗಂಟೆ ಒಳಗೆ ಸಂಭ್ರಮವನ್ನು ಮುಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ 18 ಚಿತ್ರಗಳು ಬಿಡುಗಡೆ: ಸಿನಿಮಾ ಸುನಾಮಿಗೆ ಪ್ರೇಕ್ಷಕರೇ ತತ್ತರ

    ನಾಳೆ 18 ಚಿತ್ರಗಳು ಬಿಡುಗಡೆ: ಸಿನಿಮಾ ಸುನಾಮಿಗೆ ಪ್ರೇಕ್ಷಕರೇ ತತ್ತರ

    ವಾರಕ್ಕೆ ಹೆಚ್ಚೆಂದರೆ ಐದಾರು ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಅದೂ ಕೂಡ ಆರೋಗ್ಯಕರವಾದದ್ದು ಅಲ್ಲ. ಈ ಪ್ರಮಾಣದಲ್ಲಿ ಚಿತ್ರಗಳು ರಿಲೀಸ್ ಆದರೆ, ಥಿಯೇಟರ್ ಸಮಸ್ಯೆಯ ಜೊತೆ ಪ್ರೇಕ್ಷಕರಿಗೆ ಕಿರಿಕಿರಿ ಆಗುವುದು ಸಹಜ. ರಿಲೀಸ್ ಆದ ಅಷ್ಟೂ ಚಿತ್ರಗಳು ಚೆನ್ನಾಗಿದ್ದರೆ, ಪ್ರೇಕ್ಷಕರು ಹಣವನ್ನು ಒಂದೇ ಕಾಲಕ್ಕೆ ತರೋದು ಹೇಗೆ? ಇಂತಹ ನೂರಾರು ಪ್ರಶ್ನೆಗಳ ನಡುವೆಯೇ ನಾಳೆ ಕರ್ನಾಟಕದಲ್ಲಿ 18 ಚಿತ್ರಗಳು ಬಿಡುಗಡೆ ಆಗುತ್ತಿವೆ.

    ಈ 18 ಚಿತ್ರಗಳ ಪೈಕಿ ಕನ್ನಡದಲ್ಲೇ 10 ಸಿನಿಮಾಗಳು ಇರುವುದು ಮತ್ತಷ್ಟು ಗಾಬರಿ ಪಡೆಸುವಂತಹ ವಿಷಯ. ವಿಜಯಾನಂದ, ಬಾಂಡ್ ರವಿ, ಡಾ.56, ನಾನೇ ರಾಕ್ಷಸ, ದ್ವಿಪಾತ್ರ, ಸುನಾಮಿ 143, ಕ್ಷೇಮಗಿರಿಯಲ್ಲಿ ಕರ್ನಾಟಕ, ಪ್ರಾಯಶಃ, ಮೈಸೂರು ಡೈರೀಸ್, ಪಂಖುರಿ ಹೀಗೆ ಕನ್ನಡದ ಹತ್ತು ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಇವುಗಳ ಜೊತೆಗೆ ಇನ್ನೂ ಎಂಟು ಚಿತ್ರಗಳು ಪರಭಾಷೆಯ ಚಿತ್ರಗಳಾಗಿವೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ಸಲಾಂ ವೆಂಕಿ, ನಾಯಿ ಶೇಖರ್ ರಿಟರ್ನ್ಸ್, ಗುರ್ತುಂದ ಶೀಲಕಾಲಂ, ವರಲಾರು ಮುಕ್ಕಿಯಂ, ಪಂಚತಂತ್ರಂ, ಮುಖಚಿತ್ರಂ ಸೇರಿದಂತೆ ಹಲವು ಪರಭಾಷಾ ಚಿತ್ರಗಳು ಕೂಡ ಈ ವಾರ ಕನ್ನಡದಲ್ಲಿ ರಿಲೀಸ್ ಆಗುತ್ತಿದ್ದು, ಅಷ್ಟೂ ಥಿಯೇಟರ್ ಗಳಲ್ಲೂ ಪ್ರದರ್ಶನಕ್ಕೆ ಸಿದ್ಧವಾಗಿವೆ. ಕೆಲವರಿಗೆ ಹೆಚ್ಚು ಚಿತ್ರಮಂದಿರಗಳು ಸಿಕ್ಕರೆ, ಇನ್ನೂ ಕೆಲವರು ಥಿಯೇಟರ್ ಗಾಗಿ ಗುದ್ದಾಟ ಕೂಡ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಅಪ್ಪು ಅಭಿಮಾನಿಗಳು – ಗಂಧದಗುಡಿ ಸಿನಿಮಾ ಕೆಲಕಾಲ ಸ್ಥಗಿತ

    ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಅಪ್ಪು ಅಭಿಮಾನಿಗಳು – ಗಂಧದಗುಡಿ ಸಿನಿಮಾ ಕೆಲಕಾಲ ಸ್ಥಗಿತ

    ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಗಂಧದಗುಡಿ (Gandhad Gudi) ಚಿತ್ರ ಪ್ರದರ್ಶನದ ವೇಳೆ ಅಭಿಮಾನಿಗಳು ಥಿಯೇಟರ್ (Theater) ಒಳಗಡೆ ಪಟಾಕಿ (Fireworks) ಸಿಡಿಸಿದ ಪರಿಣಾಮ ಚಿತ್ರ ಪ್ರದರ್ಶನ ಕೆಲ ಕಾಲ ಸ್ಥಗಿತಗೊಂಡಿದ್ದ ಘಟನೆ ಇಂದು ಚಿಕ್ಕಮಗಳೂರಿನ (ನಾಗಲಕ್ಷ್ಮೀ ಥಿಯೇಟರ್‌ನಲ್ಲಿ ನಡೆದಿದೆ.

    ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆಯೇ ಚಿತ್ರ ತೆರೆಕಂಡರೂ ಜಿಲ್ಲೆಯಲ್ಲಿ ಪ್ರದರ್ಶನವಾಗಿದ್ದು ಮಾತ್ರ ಮಧ್ಯಾಹ್ನ 12 ಗಂಟೆ ವೇಳೆಗೆ. ಬೆಳಗ್ಗೆಯಿಂದಲೂ ಥಿಯೇಟರ್ ಮುಂದೆ ಅಪ್ಪುನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಸಿನಿಮಾ ಆರಂಭವಾಗುತ್ತಿದ್ದಂತೆಯೇ ತೆರೆ ಮೇಲೆ ಅಜಾತಶತ್ರು ಅಪ್ಪುನನ್ನು ನೋಡಿ, ಕೂಗಾಡಿ, ಶಿಳ್ಳೆ ಹೊಡೆದು, ಥಿಯೇಟರ್ ಒಳಗಡೆಯೇ ಪಟಾಕಿಯನ್ನೂ ಸಿಡಿಸಿದ್ದಾರೆ.

    ಈ ವೇಳೆ ಕೆಲ ಅಭಿಮಾನಿಗಳು ಹೂವಿನ ಕುಂಡ, ಪಟಾಕಿಯನ್ನು ಹಚ್ಚಿದ್ದಾರೆ. ಇದರಿಂದ ಥಿಯೇಟರ್ ಒಳಗಡೆ ದಟ್ಟ ಹೊಗೆ ತುಂಬಿಕೊಂಡಿತ್ತು. ಪರಿಣಾಮ ಥಿಯೇಟರ್ ಮಾಲೀಕರು ಕೆಲ ಕಾಲ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು. ಪಟಾಕಿಯ ಹೊಗೆ ಕಡಿಮೆಯಾದ ಬಳಿಕ ಪುನಃ ಚಿತ್ರವನ್ನು ಆರಂಭಿಸಿದ್ದಾರೆ. ಸಿನಿಮಾ ನಿಲ್ಲಿಸಿ ಬಂದ ಥಿಯೇಟರ್ ಮಾಲೀಕರು ಯಾರು ಕೂಡಾ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಇದಕ್ಕೂ ಮುನ್ನ ಪುನೀತ್‌ನನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯೇ ಥಿಯೇಟರ್ ಬಳಿ ಬಂದಿದ್ದ ಅಭಿಮಾನಿಗಳು ಥಿಯೇಟರ್‌ಗೆ ಹೂವಿನ ಹಾರ ಹಾಕಿದ್ದರು. ಅಪ್ಪು ಕಟೌಟ್‌ಗೂ ವಿವಿಧ ರೀತಿಯ ಬಣ್ಣ-ಬಣ್ಣದ ಹೂವುಗಳನ್ನು ಹಾಕಿ ಅಲಂಕರಿಸಿ, ಹಾಲಿನ ಅಭಿಷೇಕವನ್ನೂ ಮಾಡಿದ್ದರು. ಫಸ್ಟ್ ಶೋ ನೋಡಿದ ಅಭಿಮಾನಿಗಳಲ್ಲಿ ಹೆಚ್ಚಿನವರು ಕಾಲೇಜು ಹುಡುಗರೇ ಇದ್ದರು. ಇದನ್ನೂ ಓದಿ: ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಸಿ.ಟಿ ರವಿ ಮಸ್ತ್ ಸ್ಟೆಪ್

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ವೀಕ್ಷಿಸಿ, ಆಚೆ ಬರುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

    ‘ಕಾಂತಾರ’ ವೀಕ್ಷಿಸಿ, ಆಚೆ ಬರುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

    ಕಾಂತಾರ (Kantara) ಸಿನಿಮಾ ವೀಕ್ಷಿಸಿ, ಚಿತ್ರಮಂದಿರದಿಂದ (Theater) ಹೊರಗೆ ಬರುತ್ತಿದ್ದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ನಿಧನರಾದ ಘಟನೆ ಮಂಡ್ಯ (Mandya) ಜಿಲ್ಲೆ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನಡೆದಿದೆ. ನಾಗಮಂಗಲ ತಾಲ್ಲೂಕಿನ ಸಾರೆಮೇಗಲಕೊಪ್ಪ ನಿವಾಸಿ, ರಾಜಶೇಖರ್ (Rajashekhar ಕಾಂತಾರ ಸಿನಿಮಾ ವೀಕ್ಷಿಸಲು ವೆಂಕಟೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದ್ದರು.

    ಖುಷಿಯಾಗಿಯೇ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದ 45ರ ವಯಸ್ಸಿನ ರಾಜಶೇಖರ್, ಥಿಯೇಟರ್ ನಿಂದ ಆಚೆ ಬರುವಾಗ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಯೇ ಕುಸಿದು ಕೂತಿದ್ದಾರೆ. ತೀವ್ರ ಹೃದಯಾಘಾತವಾಗಿ (Heart Attack) ನಿಧನರಾಗಿದ್ದಾರೆ (Death) ಎನ್ನಲಾಗುತ್ತಿದೆ. ಈ ಕುರಿತಂತೆ ನಾಗಮಂಗಲ (Nagamangala) ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ರಾಜಶೇಖರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಖುಷಿಯಿಂದಲೇ ಸಿನಿಮಾ ನೋಡಲು ಹೋಗಿದ್ದ ಕುಟುಂಬದ ಸದಸ್ಯನನ್ನು ಈ ರೀತಿ ಕಳೆದುಕೊಳ್ಳುತ್ತೇವೆ ಎಂದು ಅಂದುಕೊಂಡಿರಲಿಲ್ಲ ಎಂದು ಸದಸ್ಯರು ಗೋಳಾಡುತ್ತಿದ್ದ ಸನ್ನಿವೇಶ, ಹೃದಯ ಹಿಂಡುವಂತಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

    ಕಿಚ್ಚ ಸುದೀಪ್  ನಟನೆಯ ವಿಕ್ರಾಂತ್ ರೋಣ ಸಿನಿಮಾ ನಾಳೆ ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ದಾಖಲೆಯ ರೀತಿಯಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ ವಿಶ್ವದಾದ್ಯಂತ ಅಂದಾಜು 9500 ಶೋಗಳು ಮತ್ತು 2500 ಸ್ಕ್ರೀನ್ ಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಒಟ್ಟು 50 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗುತ್ತಿದೆ.

    ನಾಳೆಯಿಂದ ಪ್ರದರ್ಶನಗೊಳ್ಳುತ್ತಿರುವ ವಿಕ್ರಾಂತ್ ರೋಣ ಸಿನಿಮಾ, ಮೊದಲ ದಿನ ಯಾವೆಲ್ಲ ರಾಜ್ಯದಲ್ಲಿ ಎಷ್ಟು ಸ್ಕ್ರೀನ್ ಮತ್ತು ಶೋಗಳು ನಡೆಯಲಿವೆ ಎನ್ನುವ ಅಂದಾಜು ಇಲ್ಲಿದೆ. ಕರ್ನಾಟಕದಲ್ಲಿ ಒಟ್ಟು 390 ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, 2500 ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು ಒಂದರಲ್ಲೇ 110 ಸ್ಕ್ರೀನ್ ಮತ್ತು 1200 ಶೋಗಳು ನಡೆಯಲಿವೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ಆಂಧ್ರ ಮತ್ತು ತೆಲಂಗಾಣದಲ್ಲೂ ವಿಕ್ರಾಂತ್ ರೋಣ ಹಿಂದೆ ಬಿದ್ದಿಲ್ಲ. ಅಂದಾಜು 350ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 1400 ಶೋಗಳು ನಡೆಯಲಿವೆ. ತಮಿಳುನಾಡಿನಲ್ಲಿ 250 ಸ್ಕ್ರೀನ್ ಗಳಲ್ಲಿ 1000 ಶೋಗಳು ಅರೇಂಜ್ ಆಗಿವೆ ಎನ್ನುವ ಅಂದಾಜಿದೆ. ಕೇರಳದಲ್ಲಿ 110 ಸ್ಕ್ರೀನ್ ಗಳಲ್ಲಿ 600 ಶೋಗಳು ನಡೆಯುತ್ತಿವೆ. ಉತ್ತರ ಭಾರತದಲ್ಲಿ ಒಟ್ಟು ಸ್ಕ್ರೀನ್ ಗಳ ಸಂಖ್ಯೆ 690 ಎಂದು ಅಂದಾಜಿಸಲಾಗಿದ್ದು, 2800 ಶೋಗಳು ಅಲ್ಲಿ ನಡೆಯಲಿವೆ.

    ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ವಿಕ್ರಾಂತ್ ರೋಣ ಛಾಪು ಮೂಡಿಸಲು ಸಜ್ಜಾಗಿದೆ. ಅಂದಾಜು 50ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, 600 ಸ್ಕ್ರೀನ್ ಗಳಲ್ಲಿ 1500 ಶೋಗಳನ್ನು ಆಯೋಜನೆ ಮಾಡಿದ್ದಾರೆ ನಿರ್ಮಾಪಕರು. ಇದು ಮೊದಲ ದಿನದ ಅಂದಾಜು ಸ್ಕ್ರೀನ್ಸ್ ಮತ್ತು ಶೋಗಳು ಆಗಿದ್ದು, ನಾಳೆ ಇದರ ಚಿತ್ರಣ ಮತ್ತಷ್ಟು ಬದಲಾಗಬಹುದು. ಇನ್ನಷ್ಟು ಚಿತ್ರಮಂದಿರಗಳಲ್ಲೂ ಸಿನಿಮಾ ರಿಲೀಸ್ ಆಗಬಹುದು.

    Live Tv
    [brid partner=56869869 player=32851 video=960834 autoplay=true]

  • ಪ್ರದರ್ಶನ ನಿಲ್ಲಿಸಲಿದೆಯಾ ಮೈಸೂರು ಒಲಂಪಿಯಾ ಥಿಯೇಟರ್

    ಪ್ರದರ್ಶನ ನಿಲ್ಲಿಸಲಿದೆಯಾ ಮೈಸೂರು ಒಲಂಪಿಯಾ ಥಿಯೇಟರ್

    ಮೈಸೂರಿನ ಹಳೆಯ ಚಿತ್ರಮಂದಿರವೊಂದು ಪ್ರದರ್ಶನ ನಿಲ್ಲಿಸುವ ಮೂಲಕ ನೋಡುಗರನ್ನು ಭಾವುಕ ದಂಡೆಗೆ ನಿಲ್ಲಿಸಿದೆ. ಮೈಸೂರಿನ ಗಾಂಧಿ ವೃತ್ತದ ಬಳಿ ಇರುವ ಈ ಒಲಂಪಿಯಾ ಚಿತ್ರಮಂದಿರವು ಸತತ 73 ವರ್ಷಗಳ ಕಾಲ ಪ್ರದರ್ಶನ ಮಾಡಿ, ಇದೀಗ ಇತಿಹಾಸದ ಪುಟ ಸೇರುತ್ತಿದೆ. ಈ ಮೂಲಕ ಮೈಸೂರಿನ ಮತ್ತೊಂದು ಚಿತ್ರಮಂದಿರ ಬಂದ್ ಆಗಲಿದೆ. ಇದನ್ನೂ ಓದಿ : ಓಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’

    ಪ್ರೇಕ್ಷಕರ ಕೊರತೆ ಮತ್ತು ಕೋವಿಡ್ ಕಾರಣದಿಂದಾಗಿ ತಮ್ಮ ಸಿನಿಮಾ ಮಂದಿರವನ್ನು ಮುಚ್ಚುತ್ತಿರುವುದಾಗಿ ಮಾಲೀಕರು ಹೇಳಿದ್ದು ಸುದ್ದಿಯಾಗಿದೆ. ಕೊರೊನಾ ನಂತರ ಕರ್ನಾಟಕದ ಅನೇಕ ಚಿತ್ರಮಂದಿರಗಳು ಬಾಗಿಲು ಹಾಕಿದ್ದು, ಚಿತ್ರ ವಿತರಕರಿಗೆ ಇದು ಭಾರೀ ತಲೆನೋವಾಗಿ ಪರಿಣಮಿಸಿದೆ. ಕೊರೊನಾ ಮತ್ತು ಪ್ರೇಕ್ಷಕರ ಕೊರೆಯಿಂದಾಗಿ ನಷ್ಟ ಮಾಡಿಕೊಳ್ಳುವುದಕ್ಕಿಂತ ಥಿಯೇಟರ್ ಮುಚ್ಚುವುದೇ ಸರಿಯಾದದ್ದು ಎಂದಿದ್ದಾರಂತೆ ಮಾಲೀಕರು. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಮೈಸೂರಿನಲ್ಲಿ 25ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಇತ್ತೀಚೆಗಷ್ಟೇ ಮೈಸೂರಿನ ಪ್ರಖ್ಯಾತ ಚಿತ್ರಮಂದಿರಗಳಾದ ಶಾಂತಲಾ, ಲಕ್ಷ್ಮೀ ಮತ್ತು ಸರಸ್ವತಿ ಥಿಯೇಟರ್ಸ್ ಕೂಡ ಮುಚ್ಚಿವೆ. ಸದ್ಯ ಮೈಸೂರಿನಲ್ಲಿ ಉಳಿದಿರುವ ಥಿಯೇಟರ್ ಸಂಖ್ಯೆ ಕೇವಲ ಹತ್ತು ಮಾತ್ರ ಎನ್ನಲಾಗುತ್ತಿದೆ. ಪ್ರಮುಖ ಚಿತ್ರಮಂದಿರಗಳಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಹಾಕಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಚಿತ್ರ ನಿರ್ಮಾಪಕರಿಗೆ ಆತಂಕ ಶುರುವಾಗಿದೆ.  ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಮೈಸೂರು ಭಾಗದಲ್ಲಿ ಅತೀ ಹೆಚ್ಚು ಹಣ ತಂದು ಕೊಡುವ ಚಿತ್ರಮಂದಿರಗಳೇ ಬಂದ್ ಆದರೆ, ನಿರ್ಮಾಪಕನಿಗೆ ಭಾರೀ ನಷ್ಟವಾಗಲಿದೆ. ಹಾಗಾಗಿ ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೇ ಒಂದಷ್ಟು ಕಾರ್ಯಗಳು ನಡೆಯಬೇಕು ಎನ್ನುತ್ತಾರೆ ವಿತರಕರು.

  • ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ – ತಿಂಗಳ ಬಳಿಕ ಆರೋಪಿ ಅರೆಸ್ಟ್

    ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ – ತಿಂಗಳ ಬಳಿಕ ಆರೋಪಿ ಅರೆಸ್ಟ್

    ಹಾವೇರಿ: ಸಿಎಂ ತವರು ಕ್ಷೇತ್ರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಅಲ್ಲಿ ಗುಂಡಿನ ಸದ್ದು ಮೊಳಗಿತ್ತು. ಪ್ರಕರಣದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿತ್ರಮಂದಿರದಲ್ಲಿ ಫೈರಿಂಗ್ ಮಾಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ.

    ಅದು ಏಪ್ರಿಲ್ 19, ಸಮಯ ರಾತ್ರಿ ಸುಮಾರು 10 ಗಂಟೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್ 2 ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ತಾಲೂಕಿನ ಮುಗಳಿ ಗ್ರಾಮದ ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಗೆ ಒಳಗಾಗಿದ್ದ ಯುವಕ ರಕ್ತಸಿಕ್ತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.

    ತಕ್ಷಣವೇ ಗಾಯಾಳಿಗೆ ಶಿಗ್ಗಾಂವಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಲೂ ವಸಂತ್ ಕುಮಾರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆಗೆ ಇಳಿದಿದ್ದರು.

    ಚಿತ್ರಮಂದಿರದಲ್ಲಿ ಕತ್ತಲು ಕಳೆದು ಬೆಳಕು ಹಚ್ಚುವುದರೊಳಗೆ ಗುಂಡು ಹಾರಿಸಿದ್ದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಹೀಗಾಗಿ ಆರೋಪಿಯನ್ನು ಗುರುತಿಸುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಆದರೂ ತನಿಖೆಗೆ ಇಳಿದಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ್ ಅಲಿಯಾಸ್ ಸಂತೋಷ್ ಅಲಿಯಾಸ್ ಮಲ್ಲಿಕ್ ಪಾಟೀಲ್ ಎಂದು ಗುರುತು ಪತ್ತೆ ಮಾಡಿದರು. ಆದರೆ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದಂತೆ ಗೋವಾ, ಮಹಾರಾಷ್ಟ್ರ ಎಂಬಂತೆ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಆರೋಪಿಯ ಹೆಡೆಮುರಿ ಕಟ್ಟಲೇಬೇಕು ಎಂದು ಆತನ ಬೆನ್ನು ಬಿದ್ದಿದ್ದ ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ, ಕೊನೆಗೂ ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್: ಮಂಡ್ಯ ಫ್ಯಾನ್ಸ್ ಪ್ರೀತಿಗೆ ಧನ್ಯವಾದ ತಿಳಿಸಿದ ಸನ್ನಿ

    ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಗುರುವಾರ(ಮೇ 19) ಬೆಳ್ಳಂಬೆಳಗ್ಗೆ ಕಾರವಾರ ಜಿಲ್ಲೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಗನ್, ಹದಿನೈದು ಜೀವಂತ ಗುಂಡುಗಳು, ಎರಡು ಖಾಲಿ ಕೋಕಾ, ಒಂದು ಸ್ಕೂಟಿ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಘಟನೆ ಬಳಿಕ ಮಂಜುನಾಥ್‌ಗೆ ಪರಾರಿಯಾಗಲು ನೆರವು ನೀಡಿದ್ದ ಬಂಕಾಪುರ ಪಟ್ಟಣದ ನಿವಾಸಿ ಇಸ್ಮಾಯಿಲ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತ್ರಿಶೂಲ ದೀಕ್ಷೆ, ತರಬೇತಿ ಪ್ರಕರಣ – ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಟಿಸಿ ಪಡೆದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

    ಚಿತ್ರಮಂದಿರದಲ್ಲಿ ಗಾಯಗೊಂಡಿದ್ದ ವಸಂತ್ ಕುಮಾರ್ ಹಾಗೂ ಆತನ ಸ್ನೇಹಿತರು ಚಿತ್ರವೀಕ್ಷಣೆ ವೇಳೆ ಅವರು ಕುಳಿತಿದ್ದ ಮುಂದಿನ ಸೀಟು ಖಾಲಿ ಇತ್ತು. ಖಾಲಿ ಸೀಟಿನ ಮೇಲೆ ಕಾಲಿಟ್ಟು ಕುಳಿತಿದ್ದ ಅವರಿಗೆ ಆರೋಪಿ ಮಂಜುನಾಥ್ ತಾಕೀತು ಮಾಡಿದ್ದ. ಆಗ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಆರೋಪಿ ಮಂಜುನಾಥ್ ಕೆಲವು ನಿಮಿಷಗಳ ಕಾಲ ಚಿತ್ರಮಂದಿರದಿಂದ ಹೊರಗೆ ಹೋಗಿ ಮತ್ತೆ ಒಳಗೆ ಬಂದು ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಿ ಪರಾಯಾಗಿದ್ದ. ಘಟನೆಯಲ್ಲಿ ವಸಂತ್ ಕುಮಾರ್ ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಾಯಗಳಾಗಿದ್ದವು. ಶೂಟೌಟ್ ಪ್ರಕರಣದ ಆರೋಪಿ ಬಂಧನದಿಂದ ಶಿಗ್ಗಾಂವಿ ಪಟ್ಟಣ ಹಾಗೂ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.