Tag: The-Villan

  • ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ‘ದಿ-ವಿಲನ್’ ಚಿತ್ರ ನೋಡಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಕಿಚ್ಚ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ‘ದಿ-ವಿಲನ್’ ಚಿತ್ರ ವಿಶ್ವದ್ಯಾಂತ ಯಶಸ್ಸು ಕಾಣುತ್ತಿದೆ. ಸದ್ಯ ಕಿಚ್ಚ ಸುದೀಪ್ ದಿ-ವಿಲನ್ ಚಿತ್ರ ವೀಕ್ಷಿಸಿದ ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದಿದ್ದಾರೆ.

    ಕಿಚ್ಚ ಸುದೀಪ್ ದಿ-ವಿಲನ್ ಸಿನಿಮಾ ನೋಡಿದ ಅಭಿಮಾನಿಗಳಿಗೆ ತಮ್ಮ ಗೂಗಲ್ ಪ್ಲಸ್ ಪತ್ರವನ್ನು ಬರೆದು ಟ್ವಿಟ್ಟರಿನಲ್ಲಿ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ನನ್ನ ಎಲ್ಲ ಅಭಿಮಾನಿ ಸ್ನೇಹಿತರೇ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ. ಇದು ನೀವೆಲ್ಲರೂ “ದಿ ವಿಲನ್” ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.

    ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲೆಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನ್ನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ. ನಿಮ್ಮ ಕಿಚ್ಚ ಎಂದು ಬರೆದಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟಿಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ

    ಬೆಂಗಳೂರು: ವಿಶ್ವಾದ್ಯಂತ ಸದ್ದು ಮಾಡುತ್ತಿರುವ ‘ದಿ-ವಿಲನ್’ ಚಿತ್ರದ ಕಿಚ್ಚ ಸುದೀಪ್ ಕಟೌಟ್‍ಗೆ ಅಭಿಮಾನಿಗಳು ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದಾರೆ.

    ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಲಮಂಗಲದ ವಲಯದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

    ಅಭಿಮಾನಿಗಳ ಈ ವರ್ತನೆ ನೋಡಿ ಶಿವಣ್ಣ ಹಾಗೂ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾ ತಾರಕಕ್ಕೇರುತ್ತಿದ್ದೀಯಾ ಎಂಬ ಪ್ರಶ್ನೆ ಶುರುವಾಗಿದೆ. ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ಸಮರದ ಸಂಭ್ರಮ ಇದೇನಾ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಅಭಿಮಾನಿಗಳು ತಾಲಿಬಾನ್ ರೀತಿಯಲ್ಲಿ ಕೌರ್ಯ ಮೆರೆದಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸದ್ಯ ದಿ ವಿಲನ್ ಚಿತ್ರ ನೋಡಲು ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಹೌಸ್‍ಫುಲ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿದ್ದು, ಚಿತ್ರ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಸಿನಿಮಾ ನೋಡಲು ಬಂದವ್ರಿಗೆ ಪೊಲೀಸರೇ `ವಿಲನ್’ ಗಳಾದ್ರು!

    ಶಿವಮೊಗ್ಗ: ಕಿಚ್ಚ ಸುದೀಪ್ ಹಾಗೂ ಟಗರು ಶಿವಣ್ಣ ಅಭಿನಯದ `ದಿ ವಿಲನ್’ ಸಿನಿಮಾಕ್ಕೆ ಪ್ರದರ್ಶನಕ್ಕೆ ಚುನಾವಣಾ ನೀತಿ ಸಂಹಿತೆಯೇ ವಿಲನ್ ಆದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ.

    ಇಲ್ಲಿನ ಲಕ್ಷ್ಮೀ ಟಾಕೀಸ್ ನಲ್ಲಿ ವಿಲನ್ ಚಿತ್ರದ ಮಧ್ಯರಾತ್ರಿ ಪ್ರದರ್ಶನ ನಿಗದಿ ಆಗಿತ್ತು. ಅಭಿಮಾನಿ ಸಂಘದವರಿಗೆ ಟಿಕೆಟ್ ನೀಡುವ ಭರವಸೆಯನ್ನೂ ಟಾಕೀಸ್ ನವರು ನೀಡಿದ್ದರು. ಆದರೆ, ಈ ಪ್ರದರ್ಶನಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯದಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.

    ಹೀಗಾಗಿ ಅದೂವರೆಗೂ ಮಧ್ಯರಾತ್ರಿಯೇ ಅಭಿಮಾನದ ನಟರ ಸಿನೆಮಾ ನೋಡುವ ಉಮೇದಿನಲ್ಲಿದ್ದ ಅಭಿಮಾನಿಗಳು ಆಕ್ರೋಶಗೊಂಡರು. ಅದೂವರೆಗೂ ಕಟೌಟ್ ಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು, ಕರ್ಪೂರ ಹಚ್ಚಿ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಪೊಲೀಸರೂ ವಿಲನ್ ಗಳಾದರು. ಎಲ್ಲರನ್ನೂ ಹೊರ ಕಳಿಸಿ, ಗೇಟು ಮುಚ್ಚಿಸಿದರು. ತೀವ್ರ ನಿರಾಸೆಯಲ್ಲಿ ಅಭಿಮಾನಿಗಳು ಹಿಂತಿರುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

    ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

    ಬೆಂಗಳೂರು: ಸ್ಯಾಂಡಲ್ ವುಡ್ ನ ದಿಗ್ಗಜರುಗಳಾದ ಶಿವಣ್ಣ ಹಾಗೂ ಸುದೀಪ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಅನೇಕ ಮಂದಿ ನನ್ನ ವಿರುದ್ಧ ಮಾತನಾಡಿದ್ರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಇಂದು ನಾನು ದಿ ವಿಲನ್ ಸಿನಿಮಾ ಮಾಡಿದ್ದೇನೆ. ಒಟ್ಟಿನಲ್ಲಿ ಕಾಲೆಳೆಯುವವರು ಇದ್ರೇನೆ ನಾವು ಬೆಳೆಸಲು ಸಾಧ್ಯ ಅಂತ ನಿರ್ದೇಶಕ ಪ್ರೇಮ್ ಹೇಳಿದ್ರು.

    ತನ್ನ ಸಿನಿಮಾ ಪ್ರಚಾರದ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಬರೀ ಪ್ರಚಾರ ಅಲ್ಲ. ಅದರಿಂದ ಸಮಾಜಕ್ಕೆ ಉಪಯೋಗವಾಗಲಿ ಎಂಬುದೇ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ದಿ ವಿಲನ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಪ್ರಚಾರದಿಂದ ಬಂದದ್ರಲ್ಲಿ ಒಂದು ಪರ್ಸೆಂಟ್ ಹಣವನ್ನು ನಾವು ನಿರ್ದೇಶಕರ ಸಂಘಕ್ಕೆ ಕೊಡುತ್ತಿದ್ದೇವೆ ಅಂತ ಅವರು ಹೇಳಿದ್ರು.

    ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಹಲವು ಜನ ಮಾತನಾಡಿದ್ದರು. ಈದು ಸಿನಿಮಾ ಆಗತ್ತಾ? ಇವರು ಸಿನಿಮಾ ಮಾಡ್ತಾರಾ? ಇದು ಸ್ಕ್ರೀನ್ ಗೆ ಬರುತ್ತಾ ಅಂತೆಲ್ಲಾ ಪ್ರಶ್ನೆಗಳು ಹರಿದಾಡುತ್ತಿದ್ದವು. ಆದ್ರೆ ಇವೆಲ್ಲ ಪ್ರಶ್ನೆಗಳನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡೆ. ನಾನು ಮೊದಲಿನಿಂದಲೂ ಮಾಡು ಇಲ್ಲವೇ ಮಡಿ ಅನ್ನೋ ಗುಣದವನು. ಹೀಗಾಗಿ ಬೇರೆ ಭಾಷೆಯವರು ಮಾಡಿದಾಗ ನಾವು ಯಾಕೆ ಮಾಡಬಾರದೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಕಾರಣದಿಂದಾಗಿ ಇಬ್ಬರೂ ನಟರ ಬಳಿ ಈ ಕುರಿತು ಮಾತನಾಡಿದ್ದೇನೆ. ಇಬ್ಬರೂ ನಟರೂ ಕೂಡ ನನಗೆ ಸಹಕರಿಸಿದ್ರು. ಹೀಗೆ ಎಲ್ಲರೂ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದೆವು. ಅಂದು ಯಾರು ಆಗಲ್ಲ ಅಂದ್ರೋ, ಇಂದು ಅವರೇ ಪಬ್ಲಿಸಿಟಿ ಕೊಡಲು ಆರಂಭಿಸಿದ್ದಾರೆ ಅಂತ ನಕ್ಕರು. ಇದನ್ನೂ ಓದಿ: ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಸುದೀಪ್ ಹಾಗೂ ಶಿವಣ್ಣ ಇಬ್ಬರೂ ಸಿನಿಮಾ ಸೆಟ್ ಗೆ ಬಂದಾಗ ಮಕ್ಕಳಂತೆ ನಡೆದುಕೊಳ್ಳುತ್ತಾರೆ. ಹೊರಗಡೆ ಜನ ಏನೂ ಬೇಕಾದ್ರೂ ಹೇಳಲಿ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆದ್ರೆ ನನ್ನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಒಳ್ಳೆಯ ಹಾಗೂ ಅದ್ಭುತ ನಟರು. ಒಟ್ಟಿನಲ್ಲಿ ಇಬ್ಬರೂ ಒಳ್ಳೆಯ ರೀತಿಯಲ್ಲಿ ಅಭಿನಯಿಸಿ ದಿ ವಿಲನ್ ಚಿತ್ರಕ್ಕೆ ಸಹಕರಿಸಿದ್ದಾರೆ ಅಂದ್ರು.

    ನಾನು ಮೊದಲಿನಿಂದಲೂ ಸಿನಿಮಾದಲ್ಲಿ ಹೊಸತನವನ್ನು ಹುಡುಕುತ್ತಿರುತ್ತೇನೆ. ಅದನ್ನೇ ಕೆಲವರು ಗಿಮಿಕ್, ಸ್ವಮೇಕ್ ಅಂತೆಲ್ಲಾ ಹೇಳುತ್ತಿರುತ್ತಾರೆ. ಅವರು ಅಂದುಕೊಳ್ಳಲಿ. ಆದ್ರೆ ಜನರಿಗೆ ಈ ವಿಷಯ ಇದೆ ಅನ್ನೋದನ್ನು ಮನದಟ್ಟು ಮಾಡುವುದು ನನ್ನ ಉದ್ದೇಶವಾಗಿರುತ್ತದೆ. ಹೀಗಾಗಿ ಆ ಮಟ್ಟಕ್ಕೆ ನಾನು ಪ್ರಯತ್ನಿಸುತ್ತೇನೆ. ಒಂದು ಸಲ ಸಿನಿಮಾ ನೋಡಬೇಕೆನ್ನುವ ಮನಸ್ಸು ಪ್ರತಿಯೊಬ್ಬನಿಗೂ ಬರಬೇಕು. ಅದಕ್ಕೆ ನಾನು ಶ್ರಮಿಸುತ್ತೇನೆ ಅಂತ ಹೇಳಿದ್ರು. ಇದನ್ನೂ ಓದಿ: ‘ದಿ ವಿಲನ್’ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ರಿಲೀಸ್

    ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಸಿನಿಮಾ ಸೆನ್ಸಾರ್ ಗೆ ಹೋಗಿದೆ. ಹೀಗಾಗಿ ಅಲ್ಲಿ ಏನಾದ್ರೂ ಕರೆಕ್ಷನ್ ಗಳಿದ್ದಲ್ಲಿ ಅದನ್ನು ಸರಿಪಡಿಸಲು 10-12 ದಿನಗಳು ಬೇಕೆ ಬೇಕಾಗುತ್ತದೆ. ಚಿತ್ರದಲ್ಲಿ ಗ್ರಾಫಿಕ್ಸ್ ತುಂಬಾ ಇದೆ. ಆಗಸ್ಟ್ 24ರಂದು ಬಿಡುಗಡೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೇವೆ. ಒಟ್ಟಿನಲ್ಲಿ ಬರುವ ವಾರ ಸೆನ್ಸಾರ್ ಆಗುತ್ತದೆ. ಹೀಗಾಗಿ ಬರುವ ವಾರವೇ ಚಿತ್ರ ಬಿಡುಗಡೆ ದಿನವನ್ನು ಘೋಷಿಸುವುದಾಗಿ ಹೇಳಿದ್ರು. ಒಟ್ಟಿನಲ್ಲಿ ಚಿತ್ರದಲ್ಲಿ ನಮಗೆ ಪ್ರತಿಯೊಬ್ಬರು ಸಹಾಯ ಮಾಡುವ ಮೂಲಕ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ದಿ- ವಿಲನ್ ಚಿತ್ರದ ಮತ್ತೊಂದು ಹಾಡು ರಿಲೀಸ್- ಅಭಿಮಾನಿಗಳಿಗೆ ಕಿಕ್ ನೀಡ್ತಿದೆ ಈ ಸಾಂಗ್!

    ದಿ- ವಿಲನ್ ಚಿತ್ರದ ಮತ್ತೊಂದು ಹಾಡು ರಿಲೀಸ್- ಅಭಿಮಾನಿಗಳಿಗೆ ಕಿಕ್ ನೀಡ್ತಿದೆ ಈ ಸಾಂಗ್!

    ಬೆಂಗಳೂರು: ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ದಿ-ವಿಲನ್’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಆಗಿದೆ.

    `ನಾನ್ ಸೈಲೆಂಟಾಗಿದ್ರೆ ರಾಮ, ವೈಲೆಂಟ್ ಆದ್ರೆ ರಾವಣ’ ಅನ್ನೋ ಲಿರಿಕ್ಸ್ ನಿಂದ ಶುರುವಾಗುವ ಈ ಸಾಂಗ್, ಶಿವರಾಜ್‍ಕುಮಾರ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ಜೋಗಿ ಪ್ರೇಮ್ ಸಾಹಿತ್ಯವಿರುವ ಈ ಹಾಡಿಗೆ ಅರ್ಜುನ್ ಜನ್ಯ ಕ್ಯಾಚಿ ಟ್ಯೂನ್ ಹಾಕಿಕೊಟ್ಟಿದ್ದಾರೆ.

    ಬಿಡುಗಡೆಯಾದ ಈ ಹಾಡಿನಲ್ಲಿ ಡಾ. ರಾಜ್‍ಕುಮಾರ್ ಅವರ ‘ಟಿಕ್ ಟಿಕ್’ ಹಾಡಿನ ಕೆಲವು ಸಾಲುಗಳನ್ನು ಬಳಸಿಕೊಂಡಿದ್ದಾರೆ. ಕೈಲಾಶ್ ಕೇರ್, ಜೋಗಿ ಪ್ರೇಮ್ ಹಾಗೂ ವಿಜಯ್ ಪ್ರಕಾಶ್ ಮೂವರು ಈ ಹಾಡಿಗೆ ಧ್ವನಿಯಾಗಿದ್ದಾರೆ.

    ಇತ್ತೀಚೆಗೆ ದಿ-ವಿಲನ್ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿತ್ತು. `ಮಚ್ಚು ಗಿಚ್ಚು ಹಿಡಿದವನಲ್ಲ, ಆದ್ರೂ ಹವಾ ಇಟ್ಟವನಲ್ಲ, ಕೋಟೆ ಕಟ್ಟಿ ಮೆರೆದವನಲ್ಲ ಆದ್ರೂ ರಾಜ್ಯ ಆಳುತ್ತವನಲ್ಲ’ ಎಂದು ಸಾಗುವ ಈ ಹಾಡು ಜೋಗಿ ಪ್ರೇಮ್ ಲೇಖನದಲ್ಲಿ ಮೂಡಿ ಬಂದಿತ್ತು. ಶಂಕರ್ ಮಹಾದೇವನ್ ಕಂಠ ಸಿರಿಯಲ್ಲಿ ಮೂಡಿ ಬಂದಿರುವ ವಿಲನ್ ಟೈಟಲ್ ಟ್ರ್ಯಾಕ್ ಕೇಳುಗರಿಗೆ ಸಖತ್ ಕಿಕ್ ನೀಡಿತ್ತು.

    ಮೊದಲನೇ ಹಾಡು ರಿಲೀಸ್ ಆದ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂ ಪಡೆದುಕೊಂಡಿತ್ತು. ಈ ಹಾಡಿನಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರು ಇರ್ತಾರಾ ಇಲ್ಲವೋ ಅನ್ನೋದನ್ನ ಪ್ರೇಮ್ ಸಸ್ಪೆನ್ಸ್ ಆಗಿಟ್ಟಿದ್ದರು. ಆದರೆ ರಿಲೀಸ್ ಆಗಿರುವ ಲಿರಿಕಲ್ ವಿಡಿಯೋದಲ್ಲಿ ಶಿವಣ್ಣ ಹಾಗೂ ಸುದೀಪ್ ಇಬ್ಬರು ಇರುವ ಮೇಕಿಂಗ್‍ನ ಬಳಸಿಕೊಂಡಿದ್ದಾರೆ.

    https://www.youtube.com/watch?v=UCTB_MEXw2c

  • ಕನ್ನಡದಲ್ಲಿ ವಿಲನ್ ದಾಖಲೆ – ಸುದೀಪ್, ಶಿವಣ್ಣನಿಗೆ ವಿಶೇಷ ಧನ್ಯವಾದ ತಿಳಿಸಿದ್ರು ಪ್ರೇಮ್!

    ಕನ್ನಡದಲ್ಲಿ ವಿಲನ್ ದಾಖಲೆ – ಸುದೀಪ್, ಶಿವಣ್ಣನಿಗೆ ವಿಶೇಷ ಧನ್ಯವಾದ ತಿಳಿಸಿದ್ರು ಪ್ರೇಮ್!

    ಬೆಂಗಳೂರು: ಬಹುನಿರೀಕ್ಷಿತ `ದಿ ವಿಲನ್’ ಚಿತ್ರದ 2 ಟೀಸರ್ ರಿಲೀಸ್ ಆಗಿದ್ದು ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿದೆ.

    ದಿ ವಿಲನ್ ಟೀಸರ್ ಬಿಡುಗಡೆಯಾದ ಒಂದು ದಿನ ನಂತರ ಪ್ರೇಮ್ ಯ್ಯೂಟ್ಯೂಬ್ ಸ್ಕ್ರೀನ್ ಶಾಟ್ ತೆಗೆದು ಅದನ್ನು ಸಾಮಜಿಕ ಜಾಲತಾಣದಲ್ಲಿ ಹಾಕಿ ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

    ದಿ ವಿಲನ್ ತನ್ನ ಮೊದಲೇ ದಿನವೇ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆಯನ್ನು ಸೃಷ್ಟಿ ಮಾಡಿದೆ. ಯ್ಯೂಟ್ಯೂಬ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 10 ಲಕ್ಷ ವ್ಯೂ ತಲುಪಿದೆ. ಎರಡು ಟೀಸರ್ 10 ಲಕ್ಷ ಹಾಗೂ 15 ಲಕ್ಷ ತಲುಪಿದೆ. ಡಾರ್ಲಿಂಗ್ ಸುದೀಪ್ ಹಾಗೂ ಶಿವಣ್ಣಗೆ ಧನ್ಯವಾದಗಳು ಹಾಗೂ ಎಲ್ಲ ವೀಕ್ಷಕರಿಗೂ ಧನ್ಯವಾದಗಳು. ನೀವು ನನ್ನ ಈ ದಿನವನ್ನು ವಿಶೇಷ ಮಾಡಿದ್ದೀರಿ. ಆಡಿಯೋ ಅತೀ ಶೀಘ್ರದಲ್ಲೇ ಬರಲಿದೆ ಎಂದು ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಅನೆಬಂತೊಂದಾನೆ ಅನ್ನುವ ಧ್ವನಿಯಲ್ಲಿ ಕಿಚ್ಚ ಡೈಲಾಗ್ ಅಬ್ಬರಿಸಿ ಬೊಬ್ಬಿರೆದ್ರೆ, ಶಿವರಾಜ್‍ಕುಮಾರ್ ನಾನ್ ಸೈಲೆಂಟಾಗಿದ್ರೆ ರಾಮಾ, ವೈಲೆಂಟಾದ್ರೆ ರಾವಣ ಎಂಬುದಾಗಿ ಡೈಲಾಗ್ ಹೊಡೆದಿದ್ದಾರೆ. ನಿರ್ದೇಶಕ ಪ್ರೇಮ್ ಇಬ್ಬರ ಪಾತ್ರದಲ್ಲೂ ಸಖತ್ ಕ್ಯೂರಿಯಾಸಿಟಿ ಸೃಷ್ಟಿಸಿದ್ದಾರೆ.

    ದಿ ವಿಲನ್ ಟೀಸರ್ ಅರ್ಧಗಂಟೆಯಲ್ಲೇ ಲಕ್ಷ ವೀವರ್ಸ್ ದಾಟಿತ್ತು. ಗಂಟೆ ಗಂಟೆಗೂ ವೀವ್ಸ್ ದ್ವಿಗುಣಗೊಳ್ಳುತ್ತಲೇ ಇತ್ತು. ಅಂದಹಾಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ನಗರದ ಜಿ ಟಿ ಮಾಲ್‍ನಲ್ಲಿ `ದಿ ವಿಲನ್’ ಚಿತ್ರದ ಎರಡೂ ಟೀಸರ್ ಅಧಿಕೃತವಾಗಿ ರಿಲೀಸ್ ಮಾಡಿದ್ದರು.

    `ದಿ ವಿಲನ್’ ಚಿತ್ರಕ್ಕೆ ಟೈಮೆಕ್ಸ್ ವಾಚ್ ಕಂಪೆನಿ ಪ್ರಾಯೋಜಕತ್ವ ನೀಡಿದೆ. ದಕ್ಷಿಣ ಭಾರತದಲ್ಲೇ ಕನ್ನಡ ಚಿತ್ರಕ್ಕೆ ಮೊದಲ ಬಾರಿಗ ಪ್ರಾಯೋಜಕತ್ವ ನೀಡಿದೆ. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರಿಗೆ ಟೈಮೆಕ್ಸ್ ಕಂಪೆನಿ ಮಾಲೀಕರು ವಾಚ್ ಕಟ್ಟಿದರು. ಅಲ್ಲದೇ `ದಿ ವಿಲನ್’ ಡೈರಿ ಡೇ ಐಸ್ ಕ್ರೀಂ ಬಿಡುಗಡೆ ಮಾಡಿದರು.

  • ದಿ-ವಿಲನ್ ಚಿತ್ರದಲ್ಲಿ ವಿಲನ್ ಯಾರೆಂದು ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ!

    ದಿ-ವಿಲನ್ ಚಿತ್ರದಲ್ಲಿ ವಿಲನ್ ಯಾರೆಂದು ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ!

    ಬೆಂಗಳೂರು: `ದಿ ವಿಲನ್’ ಚಿತ್ರದ ಶೂಟಿಂಗ್ ಶುರುವಾದಾಗಿನಿಂದ ಚಿತ್ರದಲ್ಲಿ ವಿಲನ್ ಯಾರೂ ಎಂಬುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಪರೋಕ್ಷವಾಗಿ ಉತ್ತರಿಸಿದ್ದಾರೆ.

    ಇಷ್ಟು ದಿನ ಗುಟ್ಟಾಗಿದ್ದ, ನಿಮ್ಮೆಲ್ಲರ ತಲೆಯಲ್ಲಿ ಕೊರೆಯುತ್ತಿದ್ದ ಒಂದು ಪ್ರಶ್ನೆಗೆ ಪರೋಕ್ಷವಾಗಿ ಉತ್ತರ ನೀಡುವ ಮೂಲಕ `ದಿ-ವಿಲನ್’ ಸಿನಿಮಾದಲ್ಲಿ ಸುದೀಪ್ ಹಾಗೂ ಶಿವಣ್ಣ ಇವರಿಬ್ಬರಲ್ಲಿ ವಿಲನ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

     

    ಡಾ. ರಾಜ್‍ಕುಮರ್ ಹುಟ್ಟುಹಬ್ಬದ ದಿನದಂದು ದಿ-ವಿಲನ್ ಸಿನಿಮಾ ಕುರಿತಾಗಿ ಎದುರಾದ ಪ್ರಶ್ನೆಗೆ ‘ನಾನು ಎಷ್ಟು ದಿನ ಒಳ್ಳೆಯವನಾಗಿರಲಿ. ಆದ್ರೆ ಒಮ್ಮೆಯಾದರು ವಿಲನ್ ಆಗುತ್ತೀನಿ’ ಎಂದಿದ್ದಾರೆ. ದಿ ವಿಲನ್ ಸಿನಿಮಾದಲ್ಲಿ ಇವರೇ ನಿಜವಾದ ವಿಲನಾ? ಉತ್ತರಕ್ಕಾಗಿ ಸಿನಿಮಾ ರಿಲೀಸ್ ಆಗೋವರೆಗೂ ಕಾಯಬೇಕು.

    ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಬಾಹುಬಲಿ ಸೀಕ್ವೆಲ್ ರಿಲೀಸ್ ಆದಮೇಲೆ. ಆದರೆ ದಿ-ವಿಲನ್ ಸಿನಿಮಾದಲ್ಲಿ ವಿಲನ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ರಿಲೀಸ್‍ಗೂ ಮುನ್ನವೇ ಸಿಕ್ಕಿದೆ. ಹಾಗಂತ ಶಿವಣ್ಣನೇ ವಿಲನ್ ಎಂದು ತೀರ್ಮಾನ ಮಾಡುವ ಹಾಗಿಲ್ಲ. ಯಾಕೆಂದರೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಶಿವರಾಜ್‍ಕುಮಾರ್ ಉತ್ತರಿಸಿದ್ದಾರೆ.

  • ವಿಷ್ಣು ಸ್ಮಾರಕದಲ್ಲಿ ದಿ-ವಿಲನ್ ಕಿಚ್ಚನ ಎಂಟ್ರಿ ಸಾಂಗ್!

    ವಿಷ್ಣು ಸ್ಮಾರಕದಲ್ಲಿ ದಿ-ವಿಲನ್ ಕಿಚ್ಚನ ಎಂಟ್ರಿ ಸಾಂಗ್!

    ಬೆಂಗಳೂರು: `ದಿ- ವಿಲನ್’ ಚಿತ್ರದ ಚಿತ್ರೀಕರಣ ಶುರುವಾದಾಗಿಂದ ಸಿನಿಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಇಂಟ್ರಡಕ್ಷನ್ ಸಾಂಗ್‍ಗೆ ವಿಷ್ಣು ಸ್ಮಾರಕದ ಬಳಿ ಚಿತ್ರಿಕರಿಸಲಾಗಿದ್ದು, ಈಗ ಆ ಶೂಟಿಂಗ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ದಿ-ವಿಲನ್’ ಚಿತ್ರದ ಎಲ್ಲಾ ಸಂಗತಿಗಳು ಒಂದೊಂದಾಗಿ ಹೊರಬರುತ್ತಿದ್ದು, ಇದೀಗ ಕಿಚ್ಚ ಸುದೀಪ್ ಅವರ ಇಂಟ್ರಡಕ್ಷನ್ ಸಾಂಗ್ ಅನ್ನು ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಚಿತ್ರೀಕರಿಸಲಾಗಿರುವ ವಿಷಯ ತಿಳಿದುಬಂದಿದೆ. ಕಿಚ್ಚ ಸುದೀಪ್ ಶೂಟಿಂಗ್ ವೇಳೆ ಸ್ಮಾರಕದ ಬಳಿ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ನಿರ್ದೇಶಕ ಪ್ರೇಮ್, ಕಿಚ್ಚನ ಇಂಟ್ರಡಕ್ಷನ್ ಸಾಂಗ್ ವಿಶೇಷವಾಗಿರಲು ವಿಷ್ಣು ಸ್ಮಾರಕದ ಬಳಿ ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು, ದಿ-ವಿಲನ್ ಚಿತ್ರದಲ್ಲಿ ತಮ್ಮ ನೆಚ್ಚಿನ ನಟನನ್ನು ಸ್ಮರಣೆ ಮಾಡಿದ್ದರೂ ಯಾವುದೇ ಅಚ್ಚರಿ ಪಡಬೇಕಾಗಿಲ್ಲ.

    ಸದ್ಯ ದಿ-ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಮಾತಿನ ಭಾಗ ಮುಗಿದಿದ್ದು, ಶಿವಣ್ಣ ತಮ್ಮ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮಲ್ಟಿಸ್ಟಾರ್ ಫಿಲಂ ಆಗಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  • ಕಾಶಿನಾಥ್ ನಿಧನ – ‘ದಿ ವಿಲನ್’ ಶೂಟಿಂಗ್ ಸ್ಥಗಿತ

    ಕಾಶಿನಾಥ್ ನಿಧನ – ‘ದಿ ವಿಲನ್’ ಶೂಟಿಂಗ್ ಸ್ಥಗಿತ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

    ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ. ಕಾಶಿನಾಥ್ ಸಾವಿನ ಸುದ್ದಿ ಕೇಳಿ ಸಿನಿರಂಗ ಹಾಗೂ ರಾಜಕೀಯ ರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು, ‘ದಿ-ವಿಲನ್’ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

    ಕಾಶಿನಾಥ್ ರವರಿಗೆ ದಿ-ವಿಲನ್ ಚಿತ್ರತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದೇವೆ. ನೀವು ನಮ್ಮಿಂದ ಯಾವತ್ತೂ ದೂರವಾಗೋದಿಲ್ಲ ಎಂದು ದಿ- ವಿಲನ್ ಚಿತ್ರತಂಡ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

    ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ಉಪೇಂದ್ರ, ಶಿವರಾಜ್‍ಕುಮಾರ್, ಸುದೀಪ್, ತರುಣ್ ಸುಧೀರ್, ವಿ. ಮನೋಹರ್, ಬಿಗ್‍ಬಾಸ್ ಪ್ರಥಮ್, ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದಿದ್ದಾರೆ. ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

  • ಪ್ರೇಮ್ ಅಡ್ಡದಲ್ಲಿ ಶಿವಣ್ಣ, ಕಿಚ್ಚನ ಕಾಳಗ ಶುರು- ನಿಜವಾದ ‘ವಿಲನ್’ ಯಾರು?

    ಪ್ರೇಮ್ ಅಡ್ಡದಲ್ಲಿ ಶಿವಣ್ಣ, ಕಿಚ್ಚನ ಕಾಳಗ ಶುರು- ನಿಜವಾದ ‘ವಿಲನ್’ ಯಾರು?

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಟ್ಟುಸಿರೋ ‘ದಿ-ವಿಲನ್’ ಚಿತ್ರ ಅಭಿಮಾನಿಗಳ ಮನದಲ್ಲಿ ಹಲ್‍ಚಲ್ ಎಬ್ಬಿಸಿದೆ. ಕರಿಯ, ಎಕ್ಸ್‍ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ಏನ್ ಮಾಡುತ್ತಾರೆ ಎನ್ನುವ ಕುತೂಹಲ ಆಕಾಶ ಮುಟ್ಟಿದೆ.

    ದಿನೇ ದಿನೇ ಒಂದಿಲ್ಲೊಂದು ಸೆನ್ಸೆಷನಲ್ ಸಮಾಚಾರ ‘ದಿ-ವಿಲನ್’ ತಂಡದಿಂದ ಹೊರಬರುತ್ತಿದೆ. ಬೆಂಗಳೂರು, ಚಿಕ್ಕಮಗಳೂರು, ಉತ್ತರ ಕರ್ನಾಟಕ ಹಾಗೂ ಲಂಡನ್‍ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದು ಈಗ ಕೊನೆಯ ಹಂತದ ಶೂಟಿಂಗ್‍ಗೆ ಚಿತ್ರತಂಡ ಅಣಿಯಾಗಿದೆ. ಆ ಕೊನೆಯ ಹಂತದ ರೋಚಕ ಚಿತ್ರೀಕರಣವೇ ವಿಲನ್ಸ್ ಕಾಳಗ ಎಂದು ಹೇಳಲಾಗಿದೆ.

    `ದಿ-ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ನಲ್ಲಿ ಶಿವಣ್ಣ ಹಾಗೂ ಸುದೀಪ್ ನಡುವೆ ಕಾಳಗದ ದೃಶ್ಯವಿದೆ. ಈ ಸೀನ್‍ಗಾಗಿ ಅದ್ಧೂರಿಯಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿದೆ.

    ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾರಥ್ಯದಲ್ಲಿ ಈ ಫೈಟಿಂಗ್ ಸೀನ್ ಶೂಟಿಂಗ್ ನಡೆಯುತ್ತಿದೆ. ಡಿಫರೆಂಟ್ ಆಗಿ ವಿಲನ್‍ಗಳು ಈ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದು, ಅಸಲಿ ವಿಲನ್ ಯಾರು ಎನ್ನುವುದನ್ನು ಈ ದೃಶ್ಯ ಸಾಬೀತು ಮಾಡಲಿದೆ.

    ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಬರೋಬ್ಬರಿ 6 ಭಾಷೆಯಲ್ಲಿ `ದಿ-ವಿಲನ್’ ಮೂಡಿಬರುತ್ತಿದೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಚಿತ್ರತಂಡ ಮಗ್ನವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕುತೂಹಲ ಮೂಡಿಸುವ ಟೀಸರ್ ಪ್ರೇಕ್ಷಕರ ಮುಂದೆ ಇಡಲಿದ್ದಾರೆ.