Tag: the villain

  • ಕಿಸ್ ಜೋಡಿಯ ಜೊತೆ ಹೆಜ್ಜೆ ಹಾಕಿದರು ಹ್ಯಾಟ್ರಿಕ್ ಹೀರೋ!

    ಕಿಸ್ ಜೋಡಿಯ ಜೊತೆ ಹೆಜ್ಜೆ ಹಾಕಿದರು ಹ್ಯಾಟ್ರಿಕ್ ಹೀರೋ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ತಮ್ಮ ಬಾಗದ ಕೆಲ ಭಾಗಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮಿನರ್ವ ಮಿಲ್ಸ್ ಆಸುಪಾಸಲ್ಲಿಯೇ ಈ ಚಿತ್ರೀಕರಣ ನಡೆದಿದೆ. ಇದೇ ಸಂದರ್ಭದಲ್ಲಿ ಅಲ್ಲೇ ಬಾಜಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸುತ್ತಿದ್ದ ಎಪಿ ಅರ್ಜುನ್ ನಿದೇಶನದ ಕಿಸ್ ಸೆಟ್ಟಿಗೆ ಭೇಟಿ ನೀಡಿರೋ ಶಿವಣ್ಣ ನಾಯಕ ನಾಯಕಿಯ ಜೊತೆ ಹೆಜ್ಜೆ ಹಾಕಿ ಉತ್ಸಾಹ ತುಂಬಿದ್ದಾರೆ!

    ಎ.ಪಿ. ಅರ್ಜುನ್ ನಾಯಕ ನಾಯಕಿಯ ಹಾಡೊಂದನ್ನು ಮಿನರ್ವ ಮಿಲ್ಸ್ ಪರಿಸರದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಅದೇ ಹೊತ್ತಿಗೆ ವಿಲನ್ ನಿರ್ದೇಶಕ ಪ್ರೇಮ್ ಅದರ ಇನ್ನೊಂದು ಮಗ್ಗುಲಲ್ಲಿ ಶಿವಣ್ಣನ ದೃಶ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದರು. ಈ ನಡುವೆ ವಿರಾಮದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರಿಗೆ ಪಕ್ಕದಲ್ಲಿಯೇ ಕಿಸ್ ಚಿತ್ರದ ಚಿತ್ರೀಕರಣ ನಡೆಯುತ್ತಿರೋ ಸಂಗತಿ ತಿಳಿದಿದೆ.

    ತಕ್ಷಣವೇ ಶಿವಣ್ಣ ರೆಸ್ಟ್ ಮೂಡನ್ನು ಕ್ಯಾನ್ಸಲ್ ಮಾಡಿಕೊಂಡು ಸೀದಾ ಕಿಸ್ ಸೆಟ್ಟಿಗೆ ತೆರಳಿದ್ದಾರೆ. ಅದು ನಿಜಕ್ಕೂ ಎಪಿ ಅರ್ಜುನ್ ಮತ್ತವರ ತಂಡಕ್ಕೆ ನಂಬಲಸಾಧ್ಯವಾದ ಸರ್‍ಪ್ರೈಸ್. ಹಾಗೆ ಬಂದ ಶಿವಣ್ಣ ಕಿಸ್ ಚಿತ್ರದ ಹೀರೋ ಮತ್ತು ತಂಡದೊಂದಿಗೆ ಹೆಜ್ಜೆ ಹಾಕಿದ್ದಾರೆ. ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸಿದ್ದಾರೆ.

    ಇದರಿಂದ ನಿರ್ದೇಶಕ ಎ ಪಿ ಅರ್ಜುನ್ ಖುಷಿಯಾಗಿದ್ದಾರೆ. ಅರ್ಜುನ್ ಕೂಡಾ ಶಿವರಾಜ್ ಕುಮಾರ್ ಅವರ ಅಭಿಮಾನಿಯಂತೆ. ಯಾವ ಸೂಚನೆಯೂ ಇಲ್ಲದೆ ಏಕಾಏಕಿ ತಮ್ಮ ಚಿತ್ರೀಕರಣದ ಸೆಟ್ ನಲ್ಲಿ ಶಿವಣ್ಣನನ್ನು ನೋಡಿ ಅವರು ಥ್ರಿಲ್ ಆಗಿದ್ದಾರೆ. ಯುವ ತಂಡಕ್ಕೆ ತಾವಾಗಿಯೇ ಬಂದು ಸಾಥ್ ನೀಡಿ ಹುರುಪು ನೀಡಿದ ಶಿವರಾಜ್ ಕುಮಾರ್ ಅವರ ಸರಳ ನಡವಳಿಕೆ ನಿಜಕ್ಕೂ ಮಾದರಿ.

  • ಈ ವಾರ ಬರಲಿದೆ ವಿಲನ್ ಟೀಸರ್!

    ಈ ವಾರ ಬರಲಿದೆ ವಿಲನ್ ಟೀಸರ್!

    – ಟೀಸರ್ ಬಿಡುಗಡೆ ಸಮಾರಂಭಕ್ಕೆ 500 ರೂ. ಟಿಕೆಟ್!

    ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸಿರೋ ಕಾರಣಕ್ಕೇ ಎಲ್ಲರ ಗಮನ ಸೆಳೆದಿದ್ದ ಚಿತ್ರ ದಿ ವಿಲನ್. ಆದರೆ ನಿರ್ದೇಶಕ ಪ್ರೇಮ್ ಅದೇಕೋ ಮಾಮೂಲಿನಂತೆ ಈ ಚಿತ್ರದ ಕೆಲಸ ಕಾರ್ಯಗಳನ್ನು ನಿಧಾನ ಮಾಡಿದ್ದರೂ ಆರಂಭಿಕ ಕ್ಯೂರಿಯಾಸಿಟಿಯನ್ನೇ ಕಾಯ್ದುಕೊಂಡಿರೋದು ಈ ಚಿತ್ರದ ವಿಶೇಷ!

    ಯಾಕೆ ಇನ್ನೂ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ ಎಂಬಂಥಾ ಪ್ರಶ್ನೆಗಳ ಹೊರತಾಗಿ ಮತ್ಯಾವ ಸದ್ದೂ ಇರದಿದ್ದ ಈ ಚಿತ್ರದ ಕಡೆಯಿಂದ ಹೊಸಾ ಸುದ್ದಿಯೊಂದು ಹೊರ ಬಿದ್ದಿದೆ. ನಿರ್ದೇಶಕ ಪ್ರೇಮ್ ಅವರು ಇದೇ ತಿಂಗಳ 28ರಂದು ವಿಶೇಷವಾದೊಂದು ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಪೋಸ್ಟರ್‍ಗಳಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರುಗಳ ನ್ಯೂ ಲುಕ್ ಅಭಿಮಾನಗಳನ್ನು ಸೆಳೆದುಕೊಂಡಿತ್ತು. ತಡವಾದರೂ ಏನೋ ಕಮಾಲ್ ಮಾಡೋ ಪ್ರೇಮ್ ಈಗ ಬಿಡುಗಡೆಯಾಗಲಿರೋ ಟೀಸರ್‍ನಲ್ಲಿಯೂ ಹೊಸತೇನನ್ನೋ ಇಟ್ಟಿರುತ್ತಾರೆಂಬ ವಿಶ್ವಾಸ ಪ್ರೇಕ್ಷಕರಲ್ಲಿ ಇದ್ದೇ ಇದೆ. ಈ ಟೀಸರ್ ಬಿಡುಗಡೆಯ ವಿಚಾರದಲ್ಲಿಯೂ ಪ್ರೇಮ್ ವಿಶೇಷವಾದೊಂದು ವಿಚಾರ ಜಾಹೀರು ಮಾಡಿದ್ದಾರೆ. ಮೊದಲ ಸಲ ಟೀಸರ್ ಬಿಡುಗಡೆ ಸಮಾರಂಭಕ್ಕೆ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಅದರ ಬೆಲೆ 500 ರೂಪಾಯಿಯಂತೆ. ಚಿತ್ರ ನಿರ್ದೇಶಕರಲ್ಲಿ ಅನೇಕರು ಸಂಕಷ್ಟದಲ್ಲಿರುತ್ತಾರಾದ್ದರಿಂದ ಈ ಟಿಕೇಟಿನ ಕಾಸನ್ನು ಅಂಥವರ ಕಷ್ಟಗಳಿಗೆ ಸಹಾಯವಾಗುವಂತೆ ವಿನಿಯೋಗಿಸಲು ಪ್ರೇಮ್ ನಿರ್ಧರಿಸಿದ್ದಾರೆ. ಈ ಟೀಸರ್ ಅನಾವರಣ ಕಾರ್ಯಕ್ರಮ ಜೂ.28ರಂದು ಸಂಜೆ 7 ಘಂಟೆಗೆ ಮಾಗಡಿ ರಸ್ತೆಯ ಜಿಟಿ ವಲ್ರ್ಡ್ ಮಾಲ್‍ನಲ್ಲಿ ನಡೆಯಲಿದೆ.

    ಇದೇ ಹೊತ್ತಿನಲ್ಲಿ ಬಾಕಿ ಉಳಿದಿರುವ ಚಿತ್ರೀಕರಣವನ್ನೂ ಕಂಪ್ಲೀಟು ಮಾಡಿಕೊಳ್ಳಲೂ ತಯಾರಿ ಆರಂಭಿಸಿದ್ದಾರಂತೆ. ಇದೇ ವೇಗದಲ್ಲಿ ಪ್ರೇಮ್ ಮುಂದುವರೆದರೆ ಇನ್ನು ಕೆಲ ದಿನಗಳಲ್ಲಿಯೇ ಈ ಚಿತ್ರ ತೆರೆ ಕಾಣುವ ದಿನಾಂಕವೂ ನಿಗದಿಯಾಗಬಹುದು.

  • ಪ್ರೇಮ್ ಬಳಸಿದ ಪದಕ್ಕೆ ನಿರ್ದೇಶಕ ಎ.ಆರ್.ಬಾಬು ಅಸಮಾಧಾನ

    ಪ್ರೇಮ್ ಬಳಸಿದ ಪದಕ್ಕೆ ನಿರ್ದೇಶಕ ಎ.ಆರ್.ಬಾಬು ಅಸಮಾಧಾನ

    ಬೆಂಗಳೂರು: ದಿ ವಿಲನ್ ಸಿನಿಮಾ ಸಾರಥಿ ಪ್ರೇಮ್ ವಿರುದ್ಧ ಹಿರಿಯ ನಿರ್ದೇಶಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದಿ ವಿಲನ್ ಚಿತ್ರದ ಹಾಡೊಂದು ವಿವಾದವಾಗಿದ್ದರಿಂದ ನಿರ್ದೇಶಕ ಪ್ರೇಮ್, ಫೇಸ್‍ಬುಕ್‍ನಲ್ಲಿ ಲೈವ್ ಬಂದು ಸ್ಪಷ್ಟನೆ ನೀಡುವ ವೇಳೆ ಕೆಲ ನಿರ್ದೇಶಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಟಿ ಮಾಲ್‍ನಲ್ಲಿ ವಿಲನ್ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೆಕ್ಷಕರಿಗೆ 500 ರೂ. ಟಿಕೆಟ್ ದರವನ್ನು ನಿಗದಿ ಮಾಡಿದ್ದೇವೆ. ಅಲ್ಲಿ ಸಂಗ್ರಹವಾದ ಆ ಹಣವನ್ನು ಹಿರಿಯ ನಿರ್ದೇಶಕರ ಕುಟುಂಬಕ್ಕೆ ಅಲ್ಲೆ ನೀಡಲಾಗುವುದು ಅಂತಾ ತಿಳಿಸಿದ್ದರು. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?

    ಈ ವೇಳೆ ತಮ್ಮ ಮಾತಿನಲ್ಲಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ನಿರ್ದೇಶಕರು ಎ.ಟಿ.ರಘು, ಎ.ಆರ್.ಬಾಬು ಸೇರಿದಂತೆ ಹಲವರು ನಿರ್ಗತಿಕರಾಗಿದ್ದಾರೆ ಎಂದು ಹೇಳಿದ್ದರು. ನಿರ್ದೇಶಕರಿಗೆ ನಿರ್ಗತಿಕರು ಎಂಬ ಪದ ಬಳಸಿದ್ದಕ್ಕೆ ಎ.ಆರ್.ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಂದನವನದ ಹಿರಿಯ ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿರೋದು ನಿಜ. ಆದ್ರೆ ಪ್ರೇಮ್ ನಿರ್ಗತಿಕರು ಎಂಬ ಪದ ಬಳಸಿರೋದು ತಪ್ಪು. ನಿರ್ಗತಿಕರು ಅಂದ್ರೆ ಯಾರು ಇಲ್ಲದವರರು ಎಂದರ್ಥವಾಗುತ್ತದೆ ಎಂದು ಬಾಬು ಹೇಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಬಾಸ್ ಅಂದ್ರೂ ಖುಷಿನೇ, ಯಶ್ ಬಾಸ್ ಅಂದ್ರೂ ಸಂತೋಷನೇ – ಅವರವರ ಮನೆಗೆ ಅವರೇ ಬಾಸ್ ಎಂದ ಸೆಂಚುರಿ ಸ್ಟಾರ್ ಶಿವಣ್ಣ

    https://www.facebook.com/prems.picttures/videos/1803728239684112/

  • ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

    ವಿಲನ್ ಶೂಟಿಂಗ್ ಫ್ರೀ ಟೈಮ್‍ನಲ್ಲಿ ಶಿವಣ್ಣ ಏನು ಮಾಡ್ತಿದ್ದಾರೆ: ವಿಡಿಯೋ ನೋಡಿ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ದಿ-ವಿಲನ್ ಚಿತ್ರತಂಡದೊಂದಿಗೆ ಲಂಡನ್‍ನಲ್ಲಿ ಬಿಡುಬಿಟ್ಟಿದ್ದಾರೆ.

    ತಮ್ಮ ಶೂಟಿಂಗ್‍ನ ಬಿಡುವಿನ ಸಮಯದಲ್ಲಿ ಪಾರಿವಾಳಗಳಿಗೆ ಕಾಳು ತಿನ್ನಿಸುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯದಲ್ಲಿ ಸಖತ್ ವೈರಲ್ ಆಗಿದೆ.

    ಲಂಡನ್‍ನ ಡನ್‍ನ ಟವರ್ ಬಿಡ್ಜ್ ನ ಬಳಿ ಬಂದು ಕುಳಿತುಕೊಂಡು ಪಾರಿವಾಳಗಳಿಗೆ ಶಿವಣ್ಣ ಕಾಳು ಹಾಕಿದಿದ್ದಾರೆ. ಶೂಟಿಂಗ್‍ನಲ್ಲಿ ಕಿಚ್ಚ ಸುದೀಪ್, ಆ್ಯಮಿ ಜಾಕ್ಸನ್ ಅವರು ದಿ-ವಿಲನ್ ಚಿತ್ರತಂಡದೊಟ್ಟಿಗೆ ಇದ್ದಾರೆ.

    https://youtu.be/2dxaunNSKfQ

  • ಬಿರುಗಾಳಿಗೆ ಸಿಲುಕಿದ `ದಿ ವಿಲನ್’ ಚಿತ್ರತಂಡ- ವಿಡಿಯೋ ನೋಡಿ

    ಬಿರುಗಾಳಿಗೆ ಸಿಲುಕಿದ `ದಿ ವಿಲನ್’ ಚಿತ್ರತಂಡ- ವಿಡಿಯೋ ನೋಡಿ

    ಬೆಳಗಾವಿ: ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು, ಅದೃಷ್ಟವಷಾತ್ ಚಿತ್ರತಂಡ ಅಪಾಯದಿಂದ ಪಾರಾಗಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಎಂಬಲ್ಲಿ ದಿ ವಿಲನ್ ಚಿತ್ರತಂಡ ಕೆಲ ದಿನಗಳಿಂದ ಚಿತ್ರೀಕರಣಕ್ಕಾಗಿ ಬೀಡು ಬಿಟ್ಟಿತ್ತು. ಮಂಗಳವಾರ ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಏಕಾಏಕಿ ಬಿರುಗಾಳಿ ಎದ್ದಿತ್ತು. ಸುಮಾರು 15 ರಿಂದ 20 ನಿಮಿಷಗಳ ಕಾಲ ಚಿತ್ರತಂಡ ಬಿರುಗಾಳಿ ರಭಸಕ್ಕೆ ನಲುಗಿ ಹೋಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

    ಶಿವಣ್ಣ- ಸುದೀಪ್ ಕಾಂಬಿನೇಷನ್‍ನ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅಭಿನಯದ ಸ್ಟಂಟ್ ಭಾಗವನ್ನ ಚಿತ್ರೀಕರಿಸಲಾಗುತ್ತಿತ್ತು. ಬಿರುಗಾಳಿ ಬೀಸಿದಾಗ ಅಭಿಮಾನಿಗಳು ರಕ್ಷಣೆಗೆ ಮುಂದಾದ್ರು. ಈ ವೇಳೆ ಗಾಳಿಯಲ್ಲಿ ತೂರಿ ಬಂದ ಕಲ್ಲುಗಳಿಂದ ಕೆಲವರಿಗೆ ಸಣ್ಣ ಗಾಯಗಳಾಗಿವೆ ಎಂದು ಹೇಳಲಾಗಿದೆ.

    ಬಿರುಗಾಳಿಯಿಂದ ಚಿತ್ರದ ಸೆಟ್ ಗೆ ಹಾನಿಯುಂಟಾಗಿದೆ. ಶೂಟಿಂಗ್ ಗೆ ಬಳಸಲಾಗಿದ್ದ ಅನೇಕ ಉಪಕರಣಗಳು ಹಾಗೂ ವಸ್ತುಗಳು ಬಿರುಗಾಳಿಯಲ್ಲಿ ಹಾರಿ ಹೋಗಿವೆ. ಆದರೂ ಇಂದು ಪುನಃ ಅದೇ ಜಾಗದಲ್ಲಿ ಚಿತ್ರತಂಡ ಶೂಟಿಂಗ್ ಮಾಡಲಿದೆ.

    https://youtu.be/pjabMChe2sU

     

  • ದಿ ವಿಲನ್ ಫಸ್ಟ್ ಲುಕ್ ರಿಲೀಸ್, ಬೆಂಗಳೂರಿನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್

    ದಿ ವಿಲನ್ ಫಸ್ಟ್ ಲುಕ್ ರಿಲೀಸ್, ಬೆಂಗಳೂರಿನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‍ನಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಹೊಸ ಹೇರ್ ಸ್ಟೈಲ್ ಮತ್ತು ಡಿಫರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ದಿ ವಿಲನ್ ಪೋಸ್ಟರ್ ಸ್ಯಾಂಡಲ್‍ವುಡ್ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಸಂಜೆ7 ಗಂಟೆಯಿಂದ  ಟ್ಟಿಟ್ಟರ್‍ನಲ್ಲಿ ಬೆಂಗಳೂರಿನ ಟ್ರೆಂಡ್ ಲಿಸ್ಟ್ ನಲ್ಲಿ “ದಿ ವಿಲನ್” ನಂಬರ್ ಒನ್ ಸ್ಥಾನದಲ್ಲಿತ್ತು.

    ಈ ಹಿಂದೆಯೇ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಫೋಟೋ ಶೂಟ್ ಮಾಡಿಸಿಟ್ಟುಕೊಂಡಿದ್ದ ಪ್ರೇಮ್, ಇಂದು ಇವರಿಬ್ಬರ ಮತ್ತು ಚಿತ್ರದ ಮೊದಲು ಲುಕ್ ಬಿಡುಗಡೆ ಮಾಡಿದ್ದಾರೆ.”ದಿ ವಿಲನ್’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ, ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ.

    ಒಂದೂವರೆ ತಿಂಗಳ ಹಿಂದೆಯೇ, ಶಿವರಾಜ್ ಕುಮಾರ್ ಅವರ ಫೋಟೋ ಶೂಟ್ ಮಾಡಿದ್ದ ಪ್ರೇಮ್ ಹೆಬ್ಬುಲಿ ಚಿತ್ರ ಬಿಡುಗಡೆಯಾದ ಬಳಿಕ ಸುದೀಪ್ ಅವರ ಫೋಟೋ ಶೂಟ್ ನಡೆಸಿದ್ದರು.

    ಶಿವರಾಜ್ ಕುಮಾರ್ ಅವರ ನಾಯಕಿಯಾಗಿ ಶ್ರುತಿ ಹರಿಹರನ್ ಆಯ್ಕೆಯಾಗಿದ್ದರೆ, ಸುದೀಪ್ ಜೋಡಿಗೆ ಹುಡುಕಾಟ ಆರಂಭವಾಗಿದೆ. ಆ್ಯಮಿ ಜಾಕ್ಸನ್, ತಮನ್ನಾ ಭಾಟಿಯಾ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿದ್ದು, ಈ ಪೈಕಿ ಯಾರು ಅಂತಿಮವಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ತನ್ವಿ ಫಿಲಂಸ್‍ನಡಿ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ.