Tag: The Sky is Pink

  • ಲೀಕ್ ಆಯ್ತು ಫರ್ಹಾನ್-ಪ್ರಿಯಾಂಕ ಬೆಡ್‍ರೂಮ್ ಹಾಟ್ ಕ್ಲಿಪ್

    ಲೀಕ್ ಆಯ್ತು ಫರ್ಹಾನ್-ಪ್ರಿಯಾಂಕ ಬೆಡ್‍ರೂಮ್ ಹಾಟ್ ಕ್ಲಿಪ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್, ನಿಕ್ ಮಡದಿ ಪ್ರಿಯಾಂಕ ಚೋಪ್ರಾ ನಟನೆಯ ‘ದ ಸ್ಕೈ ಇಸ್ ಪಿಂಕ್’ ಇದೇ ವಾರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜೊತೆಯಾಗಿ ನಟಿಸಿರುವ ಫರ್ಹಾನ್ ಅಖ್ತರ್ ನಟಿಸಿದ್ದು, ಇಬ್ಬರ ರೊಮ್ಯಾಂಟಿಕ್ ಹಾಟ್ ಕ್ಲಿಪ್ ಲೀಕ್ ಆಗಿದೆ.

    ಲೀಕ್ ಆಗಿರುವ ವಿಡಿಯೋ ಸಿನಿಮಾ ಶೂಟಿಂಗ್ ವೇಳೆಯದ್ದು ಎನ್ನಲಾಗಿದ್ದು, ಚಿತ್ರದಲ್ಲಿ ಈ ಕ್ಲಿಪ್ ಕಟ್ ಮಾಡಲಾಗಿದ ಎಂದು ವರದಿಯಾಗಿದೆ. ಬೆಡ್ ರೂಮಿನೊಳಗೆ ಜೋಡಿ ಒಳಉಡುಪಿನಲ್ಲಿರುವ ವಿಡಿಯೋ ಇದಾಗಿದ್ದು, ಪ್ರಿಯಾಂಕ ನೀವು ತಪ್ಪಾಗಿ ನನ್ನ ಒಳ ಉಡುಪು ಧರಿಸಿದ್ದೀರಿ ಎಂದು ಫರ್ಹಾನ್ ಗೆ ಹೇಳುತ್ತಾರೆ. ಈ ವಿಡಿಯೋವನ್ನು ಚಿತ್ರದ ಪ್ರೋಮೋ ಸಹ ಎಂದು ಹೇಳಲಾಗುತ್ತಿದೆ.

    ಮದುವೆ ಬಳಿಕ ಪ್ರಿಯಾಂಕ ನಟನೆಯ ಮೊದಲ ಚಿತ್ರ ಇದಾಗಿದ್ದು, ನೈಜ ಘಟನೆಯಾಧರಿತ ಸಿನಿಮಾವಾಗಿದೆ. ದ ಸ್ಕೈ ಇಸ್ ಪಿಂಕ್ ಸಿನಿಮಾ ವಿಭಿನ್ನ ಕಥೆ ಎಂದು ಬಿಡುಗಡೆಗೊಂಡಿರುವ ಟ್ರೈಲರ್ ಮತ್ತು ಹಾಡುಗಳು ಹೇಳುತ್ತಿವೆ. ಮದುವೆಗೂ ಮುನ್ನ ಪತಿಯ ಮನೆಯ ಬರುವ ಪ್ರಿಯಾಂಕ, ಸಂಸಾರದಲ್ಲಿ ವೈಮನಸ್ಸಿನಿಂದ ಪತಿಯಿಂದ ದೂರವಾಗ್ತಾಳೆ. ಮತ್ತೆ ಮಗಳಿಗಾಗಿ ಯಾವ ಕಾರಣಕ್ಕಾಗಿ ಜೋಡಿ ಒಂದಾಗುತ್ತೆ ಸಣ್ಣ ಪ್ರಶ್ನೆಯೊಂದು ಟ್ರೈಲರ್ ಹುಟ್ಟುಹಾಕಿದೆ. ಈಗಾಗಲೇ ಬಣ್ಣದ ಲೋಕಕ್ಕೆ ವಿದಾಯ ಹೇಳಿರುವ ದಂಗಲ್ ಗರ್ಲ್ ಖ್ಯಾತಿಯ ಯುವ ನಟಿ, ಝೈರಾ ವಾಸೀಂ ನಟನೆಯ ಕೊನೆಯ ಚಿತ್ರ ಇದಾಗಿದೆ.

    ದ ಸ್ಕೈ ಇಸ್ ಪಿಂಕ್ ಹಲವು ಹೊಸತನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಇದೇ ಅಕ್ಟೋಬರ್ 11ರಂದು ಚಿತ್ರಮಂದಿರಗಳಿಗೆ ಬರಲಿದೆ. ಈಗ ಹಾಟ್ ಕ್ಲಿಪ್ ಮೂಲಕ ದ ಸ್ಕೈ ಇಸ್ ಪಿಂಕ್ ನೋಡಲು ಪಡ್ಡೆ ಹೈಕಳು ತುದಿಗಾಲಿನಲ್ಲಿ ನಿಂತಿದ್ದಾರೆ.

    https://www.instagram.com/p/B3TXU8bJ-lW/

  • ಪೊಲೀಸರ ಕೈಗೆ ಸಿಕ್ಕಿ ಬಿದ್ದ ದೇಸಿ ಗರ್ಲ್- 7 ವರ್ಷ ಶಿಕ್ಷೆ

    ಪೊಲೀಸರ ಕೈಗೆ ಸಿಕ್ಕಿ ಬಿದ್ದ ದೇಸಿ ಗರ್ಲ್- 7 ವರ್ಷ ಶಿಕ್ಷೆ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಸದಾ ಸಾಮಾಜಿಕ ಜಾಲತಾಣಗಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದರು. ಇದೀಗ ಮಹಾರಾಷ್ಟ್ರ ಪೊಲೀಸರ ಕೈಗೆ ಪ್ರಿಯಾಂಕ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಪೊಲೀಸರು ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

    ಹೌದು.. ನಟಿ ಪ್ರಿಯಾಂಕಾ ಅವರಿಗೆ ಪೊಲೀಸರು ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ ಹೇಳಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ. ಬದಲಿಗೆ ಪೊಲೀಸರು ಅವರ ಸಿನಿಮಾ ನೋಡಿ ಹೇಳಿದ್ದಾರೆ. ಅಸಲಿಗೆ ಏನಾಯಿತೆಂದರೆ ಪ್ರಿಯಾಂಕ ಅಭಿನಯದ ‘ಸ್ಕೈ ಈಸ್ ಪಿಂಕ್’ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.

    ಸಾಕಷ್ಟು ಕುತೂಹಲ ಮೂಡಿಸಿರುವ ಈ ಟ್ರೈಲರ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸೆಗಾಗಿ, ಸದ್ಯದಲ್ಲೇ ನಾವು ಬ್ಯಾಂಕ್ ದರೋಡೆ ಮಾಡೋಣ ಎಂದು ಪ್ರಿಯಾಂಕ ಫರಾನ್ ಅಖ್ತರ್‍ಗೆ ಹೇಳುವ ದೃಶ್ಯವಿದೆ. ಈ ಒಂದು ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋ ವೈರಲ್ ಆಗುತ್ತಿದೆ.

    ಈ ಫೋಟೋವನ್ನು ನೋಡಿದ ಮಹಾರಾಷ್ಟ್ರ ಪೊಲೀಸರು ಈ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ “ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ 7 ವರ್ಷ ಶಿಕ್ಷೆ ಹಾಗೂ ದಂಡವನ್ನು ಕಟ್ಟಬೇಕು” ಎಂದು ಟ್ವೀಟ್ ಮಾಡಿ ಪ್ರಿಯಾಂಕ ಅವರ ಕಾಲೆಳೆದಿದ್ದಾರೆ. ಇತ್ತ ಪ್ರಿಯಾಂಕಾ ಅವರು ಕೂಡ ಪೊಲೀಸರ ಟ್ವೀಟ್ ನೋಡಿ, “ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇವೆ. ಆದ್ದರಿಂದ ನಾನು ಪ್ಲಾನ್ ಬಿ ಆಕ್ಟಿವೇಟ್ ಮಾಡುವ ಸಮಯ” ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಸಿನಿಮಾದಲ್ಲಿ ಪ್ರಿಯಾಂಕ ಜೊತೆಗೆ ಫರಾನ್ ಅಖ್ತರ್ ಹಾಗೂ ಝೈರಾ ವಾಸಿಂ ನಟಿಸಿದ್ದಾರೆ. ಪೊಲೀಸರು ಮತ್ತು ಪ್ರಿಯಾಂಕಾ ಅವರ ಟ್ವೀಟ್‍ಗಳನ್ನು ನೋಡಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.