Tag: the rise of ashoka

  • ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    ಭಿನಯ ಚತುರ ಸತೀಶ್ ನೀನಾಸಂ (Satish Ninasam) ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ (The Rise of Ashoka), ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕವೇ ಕುತೂಹಲ ಹೆಚ್ಚಿಸಿದೆ. ಚಿತ್ರದಿಂದ ಈಗ ಹೊಸ ಅಪ್ ಡೇಟ್ ಸಿಕ್ಕಿದೆ. ದಿ ರೈಸ್ ಆಫ್ ಅಶೋಕ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.

    ಶ್ರೀರಂಗಪಟ್ಟಣ, ನಂಜನಗೂಡು, ಗುಂಡ್ಲುಪೇಟೆ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರತಂಡ ಬಹಳ ಅದ್ಧೂರಿಯಾಗಿ ಶೂಟಿಂಗ್ ಮಾಡಿದೆ. ಸತೀಶ್ ನೀನಾಸಂ ದಿ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ಕ್ರಾಂತಿಕಾರಿ ಯುವಕನ ಪಾತ್ರ ಪೋಷಣೆ ಮಾಡಿದ್ದಾರೆ. 70ರ ದಶಕದಲ್ಲಿ ನಡೆಯುವ ಕಥೆಯು ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಕುರಿತು ಬೆಳಕು ಚೆಲ್ಲಲಿದೆ. ಇದನ್ನೂ ಓದಿ: ಅಲ್ಲು ಹೊಸ ಸಿನಿಮಾ ಡ್ಯೂನ್‌ ಕಾಪಿ? – ಕಿಡಿ ಕಿಡಿ ಕ್ಲಾರಿಟಿ ಕೊಟ್ಟ ಅಟ್ಲೀ

    ದಿ ರೈಸ್ ಆಫ್ ಅಶೋಕ ಚಿತ್ರದಲ್ಲಿ ಸತೀಶ್ ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ (Sapthami Gowda) ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರಿಯಾ ಹಾಗೂ ಯಶ್ ಶೆಟ್ಟಿ, ಡ ಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ.

    ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ‘ಅಶೋಕ ಬ್ಲೇಡ್’ ಸಿನಿಮಾ ನಿಂತೇ ಹೋಯಿತು ಎಂದು ಸುದ್ದಿ ಹರಡಿತ್ತು. ಆದರೆ ನಟ ಸತೀಶ್ ನೀನಾಸಂ ಅವರು ‘ದಿ ರೈಸ್ ಆಫ್ ಅಶೋಕ’ ಹೆಸರಿನಲ್ಲಿ ಆ ಪ್ರಾಜೆಕ್ಟ್​ ಅನ್ನು ಮತ್ತೆ ಕೈಗೆತ್ತಿಕೊಂಡು ಯಶಸ್ವಿಯಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಾಗಲೇ ರಿಲೀಸ್ ಆದ ಪೋಸ್ಟರ್ ನಲ್ಲಿ ಮಚ್ಚು ಹಿಡಿದು ತುಂಬ ರಗಡ್ ಆದಂತಹ ಲುಕ್​ನಲ್ಲಿ ನೀನಾಸಂ ಸತೀಶ್ ಅವರು ಕಾಣಿಸಿಕೊಂಡಿದ್ದಾರೆ‌. ಅವರ ಸಿನಿಕರಿಯರನ ಅತಿದೊಡ್ಡ ಬಜೆಟ್ ಚಿತ್ರವಾಗಿರುವ ದಿ ರೈಸ್ ಆಫ್ ಅಶೋಕ ಸತೀಶ್ ವೃತ್ತಿ ಬದುಕಿಗೆ ಹೊಸ ಆಯಾಮಾ ನೀಡಲಿದೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

    ಅಂದ್ಹಾಗೆ ಈ ಸಿನಿಮಾವನ್ನು ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್‌ನ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ನೀನಾಸಂ ಸತೀಶ್ ಕೂಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.

    ದಿ ರೈಸ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಲವಿತ್ ಕ್ಯಾಮೆರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನ, ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ , ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಇದನ್ನೂ ಓದಿ: ಫಿನಿಕ್ಸ್ ಶೂಟಿಂಗ್ ವೇಳೆ ಅವಘಡ – ಪೆಟ್ರೋಲ್ ಬಾಂಬ್ ಎಸೆತಕ್ಕೆ ಭಾಸ್ಕರ್ ಶೆಟ್ಟಿಗೆ ಗಾಯ

  • ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

    ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

    ‘ಕಾಂ ತಾರ’ (ಕಾಂತಾರ) ಬೆಡಗಿ ಸಪ್ತಮಿ ಗೌಡ (ಸಪ್ತಮಿ ಗೌಡ) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಸಿನಿಮಾಗೆ ಸಪ್ತಮಿ ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಳ್ಳಿ ಹುಡುಗಿಯ ಗೆಟಪ್‌ನಲ್ಲಿ ನಟಿ ಕಾಣಿಸಿಕೊಂಡಿರುವ ಲುಕ್ ಈಗ ರಿವೀಲ್ ಆಗಿದೆ. ‘ದಿ ರೈಸ್ ಆಫ್ ಅಶೋಕ’ (ದಿ ರೈಸ್ ಆಫ್ ಅಶೋಕ) ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.

    ಸದಾ ಹೊಸ ಬಗೆಯ ಪಾತ್ರಗಳಿಗೆ ಒತ್ತು ಕೊಡೋ ಸಪ್ತಮಿ ಇದೀಗ ಸತೀಶ್ ನೀನಾಸಂಗೆ (ಸತೀಶ್ ನೀನಾಸಂ) ಜೊತೆಯಾಗಿದ್ದಾರೆ. ‘ದಿ ರೈಸ್ ಆಫ್ ಅಶೋಕ’ ಸಿನಿಮಾಗೆ ನಾಯಕಿಯಾಗಿದ್ದಾರೆ. ಪೋಸ್ಟರ್ ಜೊತೆ ನಿನ್ನ ಪ್ರತಿಯೊಂದು ಹೆಜ್ಜೆಯ ಚಿತ್ರದಲ್ಲೂ ನನ್ನ ಪಾಲಿರಲಿ. ಒಂದು ನಿಂದಾದರೆ, ಮತ್ತೊಂದು ನನ್ನದು ಎಂದು ರೊಮ್ಯಾಂಟಿಕ್ ಆಗಿ ಅಡಿಬರಹ ನೀಡಿದ್ದಾರೆ. ಪೋಸ್ಟರ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    ಈ ಪೋಸ್ಟ್ ಅನ್ನು Instagram ನಲ್ಲಿ ವೀಕ್ಷಿಸಿ

     

    🧿ಸಪ್ತಮಿ ಗೌಡ (@sapthami_gowda) ಹಂಚಿಕೊಂಡ ಪೋಸ್ಟ್

    ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಸಪ್ತಮಿ ಹಳ್ಳಿ ಹುಡುಗಿಯ ಗೆಟಪ್‌ನಲ್ಲಿದ್ದಾರೆ. ಲಂಗ ದಾವಣಿ ಹಾಕಿಕೊಂಡು ಸೈಕಲ್ ಮೇಲೆ ಕುಳಿತಿದ್ದಾರೆ. ಸೈಕಲ್ ಹಿಂದೆ ಹೂವಿನ ಬುಟ್ಟಿ ಇಡಲಾಗಿದೆ. ಅಂಬಿಕಾ ಎಂಬ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಹನಿ ಸಿಂಗ್ ಕಾನ್ಸರ್ಟ್‌ನಲ್ಲಿ ರಾಕಿಂಗ್ ಸ್ಟಾರ್- ಕನ್ನಡದಲ್ಲಿ ಹಾಡುವಂತೆ ಯಶ್ ಕಂಡೀಷನ್

    ಮೊದಲ ಬಾರಿಗೆ ಸತೀಶ್ ನೀನಾಸಂಗೆ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ನಿರ್ದೇಶಕ ವಿನೋದ್ದೊಂಡಾಳೆ ನಿಧನದ ಬಳಿಕ ಈ ಚಿತ್ರವನ್ನು ಮನು ಎಂಬುವವರು ನಿರ್ದೇಶಿಸುತ್ತಿದ್ದಾರೆ. ನಟ ಸತೀಶ್ ನೀನಾಸಂ ನಿರ್ಮಾಣದ ಹೊಣೆ ಹೊತ್ತಿದ್ದಾರೆ.