Tag: the police

  • ಶಟರ್ ಮುರಿದು ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಶಟರ್ ಮುರಿದು ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಬಳ್ಳಾರಿ: ಮನೆ ಹಾಗೂ ಅಂಗಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾರನಾಳ ಗ್ರಾಮದ 31 ವರ್ಷದ ಗಂಗಾಧರ್ ಹಾಗೂ 33 ವರ್ಷದ ಗಜೇಂದ್ರ ಬಂಧಿತ ಆರೋಪಿಗಳು. ಕಳೆದ ಮೂರು ದಿನಗಳ ಹಿಂದೆ ಬಳ್ಳಾರಿ ನಗರದ ಕೌಲ್‍ಬಜಾರ್‍ನ ಅಮ್ಮ ಸೂಪರ್ ಬಜಾರ್‌ನ ಶೆಟರ್ ಮುರಿದು ಕಳ್ಳತನ ಮಾಡಿದ್ದರು. ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಐನಾತಿ ಕಳ್ಳರು, ಕಳ್ಳತನ ಮಾಡಿದ ಬಳಿಕ ಸಿಸಿಟಿವಿಯ ಡಿವಿಆರ್ ಕದ್ದು ಪರಾರಿಯಾಗಿದ್ದರು. ಇದನ್ನೂ ಓದಿ: ಹಿಂದಿಯಲ್ಲಿ ಮಾತನಾಡುವವರು ಪಾನಿಪೂರಿ ಮಾರುತ್ತಿದ್ದಾರೆ: ಪೊನ್ಮುಡಿ

    ಈ ಸಂಬಂಧ ಸೂಪರ್ ಮಾರ್ಕೆಟ್ ಮಾಲೀಕರಾದ ಡ್ಯಾನಿಯಲ್ ಅವರು ಕೌಲ್‍ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇಬ್ಬರು ಆರೋಪಗಳನ್ನು ಬಂಧಸಿದ್ದಾರೆ. ಬಳಿಕ ಈ ಇಬ್ಬರು ಕಳ್ಳರನ್ನು ವಿಚಾರಣೆ ನಡೆಸಿದಾಗ ಬಳ್ಳಾರಿ ನಗರದಲ್ಲಿ ಎರಡು ಕಳ್ಳತನ ಮಾಡಿದ್ದು, ಬೆಂಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆ ಇವರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಇದೀಗ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

  • ಹಣಕ್ಕಾಗಿ ಚಾಕುವಿನಿಂದ ಇರಿದು ಯುವಕ ತನ್ನ ಸ್ನೇಹಿತನನ್ನೇ ಕೊಂದ!

    ಹಣಕ್ಕಾಗಿ ಚಾಕುವಿನಿಂದ ಇರಿದು ಯುವಕ ತನ್ನ ಸ್ನೇಹಿತನನ್ನೇ ಕೊಂದ!

    – ಬಾತ್‍ರೂಂನಲ್ಲೇ ಶವ ಸುಡಲು ಯತ್ನ

    ಹೈದರಾಬಾದ್: ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಮಾತಿದೆ. ಈ ಹಣದ ಮೇಲಿನ ಮೋಹ ಮಿತಿ ಮೀರಿದಾಗ ಎಲ್ಲವೂ ಕೈ ತಪ್ಪಿ ಹೋಗುತ್ತೆ ಅನ್ನೋದಕ್ಕೆ ಸಾಕ್ಷಿ ಈ ಕೊಲೆ. ಇದೇ ವಿಚಾರಕ್ಕೆ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.

    ನಾಗಪವನ್ ಹಾಗೂ ನಾಗಸಾಯಿ ಇಬ್ಬರೂ ಗೆಳೆಯರಾಗಿದ್ದರು. ನವೆಂಬರ್ 24 ರಂದು ಇಬ್ಬರ ನಡುವೆ ಖರ್ಚಿನ ವಿಚಾರವಾಗಿ ಜಗಳವಾಗಿತ್ತು. ಮಾತಿಗೆ ಮಾತು ಬೆಳೆದು ಕೋಪಗೊಂಡ ನಾಗಪವನ್, ನಾಗಸಾಯಿಯ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದಿದ್ದಾನೆ. ಪರಿಣಾಮ ನಾಗಸಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಡಿಸೆಂಬರ್ 3 ರಂದು ಸಂಜೆ ಮತ್ತೋರ್ವ ಸ್ನೇಹಿತನೊಂದಿಗೆ ಬಂದು ಸೇರಿ ಶವದ ಮೇಲೆ ಹೊದಿಕೆ ಹಾಕಿ ಬಾತ್‍ರೂಮ್‍ನಲ್ಲಿ ಸುಡಲು ಪ್ರಯತ್ನಿಸಿದ್ದಾನೆ. ಆದರೆ ಈ ಮಧ್ಯೆ ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರು ಬಂದು ಏನಿಷ್ಟು ವಾಸನೆ ಎಂದು ಕೇಳಿದಾಗ ಹಂದಿ ಸಾವನ್ನಪ್ಪಿದ್ದು ಎಂದು ಸ್ಥಳೀಯರಿಗೆ ಹೇಳಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

    ಇಬ್ಬರ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಅನುಮಾನಗೊಂಡು ರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದ ಬಳಿಕ ಡಿಎಸ್‍ಪಿ ಎಟಿವಿ ರವಿಕುಮಾರ್ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಯುವಕರು ದುಶ್ಚಟಗಳನ್ನು ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು ಆದಷ್ಟು ಬೇಗ ನಾಗಪವನ್ ಮತ್ತು ಆತನ ಸ್ನೇಹಿತನನ್ನು ಪತ್ತೆ ಹಚ್ಚುತ್ತೇವೆ ಎಂದು ರವಿಕುಮಾರ್ ಹೇಳಿದ್ದಾರೆ.