Tag: The Legend

  • 100 ಕೋಟಿ ಕೊಟ್ರು ನಟಿಸಲ್ಲ ಎಂದು ಆ ಹೀರೋಗೆ ನಯನತಾರಾ ಹೇಳಿದ್ದೇಕೆ?

    100 ಕೋಟಿ ಕೊಟ್ರು ನಟಿಸಲ್ಲ ಎಂದು ಆ ಹೀರೋಗೆ ನಯನತಾರಾ ಹೇಳಿದ್ದೇಕೆ?

    ಮಿಳಿನ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanathara) ಅವರು ‘ಜವಾನ್’ (Jawan) ಚಿತ್ರದ ಸಕ್ಸಸ್ ನಂತರ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಆದರೂ ನಯನತಾರಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಇದರ ನಡುವೆ ಹೊಸ ವಿಚಾರವೊಂದು ನಟಿಯ ಬಗ್ಗೆ ಹರಿದಾಡುತ್ತಿದೆ. 100 ಕೋಟಿ ರೂ. ಕೊಟ್ರು ನಿಮ್ಮ ಜೊತೆ ನಟಿಸಲ್ಲ ಎಂದು ನಯನತಾರಾ ರಿಜೆಕ್ಟ್ ಮಾಡಿರುವ ಚಿತ್ರದ ಬಗ್ಗೆ ಈಗ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಯಾರು ಆ ಹೀರೋ? ಯಾವುದು ಆ ಸಿನಿಮಾ? ಇಲ್ಲಿದೆ ಮಾಹಿತಿ.

    ಕಲಾವಿದರು ಒಳ್ಳೆಯ ಕಥೆಯ ಹಿಂದೆ ಹೋಗಬೇಕು. ದುಡ್ಡಿನ ಹಿಂದೆ ಅಲ್ಲ ಅಂತ ನಯನತಾರಾ ಪ್ರೂವ್ ಮಾಡಿದ್ದಾರೆ. ಅಂದು ನಯನತಾರಾ ಒಪ್ಪಿಕೊಂಡಿದ್ರೆ 100 ಕೋಟಿ ರೂ. ಅವರ ಪಾಲಾಗುತ್ತಿತ್ತು. ಆದರೂ ಕಥೆಗೆ ಮಹತ್ವ ಕೊಟ್ಟು ಗಟ್ಟಿ ಮನಸ್ಸು ಮಾಡಿ ನಟಿ ಚಿತ್ರವೊಂದಕ್ಕೆ ನೋ ಎಂದಿದ್ದರು. ಈಗ ಮತ್ತೆ ಈ ವಿಚಾರ ಚಾಲ್ತಿಗೆ ಬಂದಿದೆ.

    2 ವರ್ಷಗಳ ಹಿಂದೆ ‘ದಿ ಲೆಜೆಂಡ್’ (The Legend) ಎಂದು ಸಿನಿಮಾ ಬಂದಿತ್ತು. ಈ ಚಿತ್ರಕ್ಕೆ ಸರವಣನ್, ನಟ ಕಮ್ ನಿರ್ಮಾಪಕರಾಗಿದ್ದರು. ನೀರಿನ ಹಾಗೇ ಚಿತ್ರಕ್ಕೆ ಹಣ ಸುರಿದಿದ್ದರು. ಪ್ರಚಾರಕ್ಕಾಗಿಯೇ ಕೋಟಿ ಕೋಟಿ ಖರ್ಚು ಮಾಡಿದ್ದರು. ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಮಕಾಡೆ ಮಲಗಿತ್ತು.

    ಚಿತ್ರದಲ್ಲಿ ತಮ್ಮೆದುರು ನಾಯಕಿಯಾಗಿ ನಟಿಸುವಂತೆ ಸರವಣನ್ ಮನವಿ ಮಾಡಿದ್ದರು. ನಯನತಾರಾ ನೋ ಎಂದಿದ್ದರು ಕೂಡ ಬಿಟ್ಟು ಬಿಡದೇ ಕಾಡಿದ್ರಂತೆ ಈ ನಟ. ಅದಕ್ಕೆ 100 ಕೋಟಿ ಕೊಟ್ರು ನಿಮ್ಮ ನಾನು ನಟಿಸಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ರಂತೆ ನಟಿ ನಯನತಾರಾ.  ಇದನ್ನೂ ಓದಿ:‘ಪುಷ್ಪ 2’ ಚಿತ್ರದ ಮೂಲಕ ಅಲ್ಲು ಅರ್ಜುನ್ ಪುತ್ರ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ

    ಬಳಿಕ ನಯನತರಾ ಬದಲು ‘ಐರಾವತ’ ಬೆಡಗಿ ಊರ್ವಶಿಗೆ ಸರವಣನ್ ಮಣೆ ಹಾಕಿದ್ದರು. ಸಿನಿಮಾಗೆ 20 ಕೋಟಿ ರೂ. ಸಂಭಾವನೆ ಪಡೆದು ಸರವಣನ್‌ಗೆ ಊರ್ವಶಿ ನಾಯಕಿಯಾಗಿ ನಟಿಸಿದ್ದರು. ವಿಪರ್ಯಾಸ ಅಂದರೆ ಹೀರೋಯಿನ್‌ಗೆ ಸಂಭಾವನೆ ಕೊಟ್ಟಷ್ಟು ಕೂಡ ಚಿತ್ರ ಗಳಿಕೆ ಕಂಡಿರಲಿಲ್ಲ. ಹಾಗಾಗಿ ನಯನತಾರಾ ಅಂದು ಮಾಡಿದ್ದು ಸರಿಯಾಗಿದೆ ಎಂದು ಲೇಡಿ ಸೂಪರ್ ಸ್ಟಾರ್‌ಗೆ ಫ್ಯಾನ್ಸ್ ಬೆಂಬಲಿಸುತ್ತಿದ್ದಾರೆ.

  • ಕನ್ನಡದಲ್ಲೂ ಬರ್ತಿದೆ ತಮಿಳಿನ ‘ದಿ ಲೆಜೆಂಡ್’ ಸಿನಿಮಾ

    ಕನ್ನಡದಲ್ಲೂ ಬರ್ತಿದೆ ತಮಿಳಿನ ‘ದಿ ಲೆಜೆಂಡ್’ ಸಿನಿಮಾ

    ಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ದಿ ಲೆಜೆಂಡ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 28ರಂದು ಸಿನಿಮಾ ರಿಲೀಸ್ ಆಗ್ತಿದ್ದು, ವರ್ಲ್ಡ್ ವೈಡ್ ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಸರವಣನ್ ಅಂಡ್ ಟೀಂ ಬೆಂಗಳೂರಿನಲ್ಲಿಯೂ ಪ್ರಚಾರ ಕಹಳೆ ಮೊಳಗಿಸಿದ್ದಾರೆ. ಸಿಲಿಕಾನ್ ಸಿಟಿಗೆ ಬಂದಿಳಿದ ಚಿತ್ರದ ನಾಯಕ ಸರವಣನ್, ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲ, ರೈ ಲಕ್ಷ್ಮಿ ಮಾಧ್ಯಮದವರೊಟ್ಟಿಗೆ ಸಿನಿಮಾದ ಬಗ್ಗೆ ಒಂದಷ್ಟು ಅನುಭವ ಹಂಚಿಕೊಂಡಿರು.

    ನಾಯಕ ಸರವಣನ್ ಮಾತನಾಡಿ, ಸಿನಿಮಾ ಮಾಡಬೇಕು ಎಂಬ ಕನಸು ಚಿಕ್ಕ ವಯಸ್ಸಿನಿಂದ ಇತ್ತು. ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಇತ್ತು. ಎಲ್ಲಾ ಸೆಟಲ್ಡ್ ಆದ ಮೇಲೆ ಸಿನಿಮಾ ಮಾಡಿದ್ದೇನೆ. ಕಳೆದ ಹದಿನೈದು ವರ್ಷದಿಂದ ನಿರ್ದೇಶಕ ಜೆ.ಡಿ.ಜೆರ್ರಿ ನನ್ನ ಜೊತೆ ಇದ್ದಾರೆ. ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದರು. ಇದನ್ನೂ ಓದಿ: ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ಕಾಫಿನಾಡು ಚಂದು!

    ರಾಜ್ಯದಲ್ಲಿ ಸಿನಿಮಾ ವಿತರಿಸ್ತಿರುವ ಹಾರಿಜನ್ ಸ್ಟುಡಿಯೋಸ್ ನ ಟೋನಿರಾಜ್, ಕನ್ನಡದಲ್ಲೂ ಸಿನಿಮಾ ಬುಕ್ಕಿಂಗ್ ಗೆ ಅವಕಾಶ ನೀಡುತ್ತೇವೆ. ಪ್ರತಿಯೊಬ್ಬರು ಸಿನಿಮಾ ನೋಡಿ ಬೆಂಬಲಿಸಿ ಎಂದರು. ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡ್ತಿರುವ ದಿ ಲೆಜೆಂಡ್ ಸಿನಿಮಾ ಜೆ.ಡಿ.ಜೆರ್ರಿ ಆಕ್ಷನ್ ಕಟ್ ಹೇಳಿದ್ದು, ಊರ್ವಶಿ ರೌಟೇಲಾ ಈ ಸಿನಿಮಾ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದು, ಸರವಣನ್ ಗೆ ಜೋಡಿಯಾಗಿ ನಟಿಸಿದ್ದಾರೆ. ನಸ್ಸಾರ್, ಪ್ರಭು, ಸುಮನ್, ವಿವೇಕ್, ಇಮ್ಮನ್ ಅಣ್ಣಾಚಿ, ಯಶಿಕಾ ಆನಂದ್ ಸೇರಿದಂತೆ ಹಲವರು ತಾರಾಬಳಗ ಚಿತ್ರದಲ್ಲಿದ್ದಾರೆ. ಹ್ಯಾರೀಸ್ ಜಯರಾಜ್ ಮ್ಯೂಸಿಕ್ ಸಿನಿಮಾಕ್ಕಿದ್ದು, ವರ್ಲ್ಡ್ ವೈಡ್ 2000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಗೆ ಬರ್ತಿದೆ.

    Live Tv
    [brid partner=56869869 player=32851 video=960834 autoplay=true]