Tag: The Kerala Story

  • ಕೋಮುವಾದ ಹರಡಲು ಯತ್ನಿಸಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್

    ಕೋಮುವಾದ ಹರಡಲು ಯತ್ನಿಸಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್

    – ʻದಿ ಕೇರಳ ಸ್ಟೋರಿʼ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ; ಕೇರಳ ಸಿಎಂ ಖಂಡನೆ

    ತಿರುವನಂತಪುರ: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಇಡೀ ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿದ್ದ ʻದಿ ಕೇರಳ ಸ್ಟೋರಿʼ (The Kerala Story) ಸಿನಿಮಾದ ಸುದಿತ್ತೋ ಸೇನ್ ಅವರಿಗೆ ʻಅತ್ಯುತ್ತಮ ನಿರ್ದೇಶಕ ಪ್ರಶಸ್ತಿʼ ಹಾಗೂ ʻBest Cinematographyʼ ಪ್ರಶಸ್ತಿ ನೀಡಿರುವುದಕ್ಕೆ ಕೇರಳದ ಸಿಎಂ ಪಿಣರಾಯಿ ವಿಜಯನ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಈ ಕುರಿತು ಮಾತನಾಡಿರುವ ವಿಜಯನ್‌ (Pinarayi Vijayan), ಕೋಮುವಾದ ಪ್ರಚೋದಿಸಲು ಹಾಗೂ ಕೇರಳಕ್ಕೆ ಅವಹೇಳನ ಮಾಡಲು ಯತ್ನಿಸಿದ್ದ ಸಿನಿಮಾವನ್ನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಸಿನಿಮಾ ರಂಗವನ್ನ ತೀರ್ಪುಗಾರರು ಅವಮಾನಿಸಿದ್ದಾರೆ ಕೆಂಡಾಮಂಡಲವಾಗಿದ್ದಾರೆ. ಇದನ್ನೂ ಓದಿ: Operation Akhal | ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ

    ‘ದಿ ಕೇರಳ ಸ್ಟೋರಿ’ ಸಿನಿಮಾ 2023ರಲ್ಲಿ ತೆರೆಕಂಡಿತ್ತು. ರಾಜ್ಯದ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ, ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂದು ಚಿತ್ರದ ಟೀಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಚಿತ್ರದ ಬೆನ್ನಲ್ಲೇ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ದೇಶಾದ್ಯಂತ ವಿವಾದದ ಅಲೆ ಕೂಡ ಎದ್ದಿತ್ತು. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

    ಯಾರ‍್ಯಾರಿಗೆ ಪ್ರಶಸ್ತಿ?
    ಅತ್ಯುತ್ತಮ ನಟ: ಶಾರುಖ್ ಖಾನ್, ವಿಕ್ರಾಂತ್ ಮಾಸ್ಸೆ
    ಅತ್ಯುತ್ತಮ ನಟಿ: ರಾಣಿ ಮುಖರ್ಜಿ
    ‌ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ಜವಾನ್
    ಅತ್ಯುತ್ತಮ ಹಿನ್ನೆಲೆ ಗಾಯಕ: ಬೇಬಿ
    ಅತ್ಯುತ್ತಮ ಪೋಷಕ ನಟಿ: ಉಲ್ಲೊಜೊಕ್ಕು (ಊರ್ವಶಿ), ವಶ್ (ಜಾನಕಿ)
    ಅತ್ಯುತ್ತಮ ಪೋಷಕ ನಟ: ಪೂಕಲಂ (ವಿಜಯರಾಘವನ್),
    ಪಾರ್ಕಿಂಗ್ (ಮುತ್ತುಪೆಟ್ಟೈ)

    ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾಗಳಿವು
    ಅನಿಮಲ್ (ಮರು-ರೆಕಾರ್ಡಿಂಗ್ ಮಿಕ್ಸರ್) – ಎಂಆರ್ ರಾಧಾಕೃಷ್ಣನ್
    ತೆಲುಗು ಚಿತ್ರ: ಭಗವಂತ ಕೇಸರಿ
    ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್
    ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ
    ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
    ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ
    ಮಲಯಾಳಂ ಚಿತ್ರ: ಉಲ್ಲೋಜೋಕ್ಕು
    ಕನ್ನಡ ಚಿತ್ರ: ಕಂದೀಲು: ಭರವಸೆಯ ಕಿರಣ
    ಅತ್ಯುತ್ತಮ ಹಿಂದಿ ಚಿತ್ರ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ, ಗುಜರಾತಿ ಚಿತ್ರ: ವಾಶ್
    ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್
    ಅತ್ಯುತ್ತಮ ಅಸ್ಸಾಮಿ ಚಿತ್ರ: ರಂಗತಪು 1982
    ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
    ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
    ಅತ್ಯುತ್ತಮ ಸಾಹಿತ್ಯ: ಬಳಗಂ
    ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)- ಹಾಡುಗಳು
    ಅತ್ಯುತ್ತಮ ಮೇಕಪ್, ಕಾಸ್ಟ್ಯೂಮ್ ಡಿಸೈನರ್: ಸ್ಯಾಮ್ ಬಹದ್ದೂರ್
    ಅತ್ಯುತ್ತಮ ನಿರ್ಮಾಣ ವಿನ್ಯಾಸಕಾರ: 2018- ಎವೆರಿವನ್‌ ಇಸ್‌ ಎ ಹೀರೋ (ಮಲಯಾಳಂ)
    ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ) ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಮಲ್
    ಅತ್ಯುತ್ತಮ ಛಾಯಾಗ್ರಹಣ: ಕೇರಳ ಕಥೆ (ಹಿಂದಿ)

    ನಾನ್ ಫೀಚರ್ ಫಿಲ್ಮ್ ವಿಭಾಗ
    ನೇಕಲ್ – ಮಲಯಾಳಂ
    ದಿ ಸೀ ಆ್ಯಂಡ್‌ ಸೆವೆನ್‌ ವಿಲೇಜಸ್‌ – ಒಡಿಸ್ಸಿ
    ಸನ್‌ಫ್ಲವರ್‌ ವೇರ್ ದ ಫಸ್ಟ್ ಒನ್ಸ್ ಟು ನೊ – ಚಿದಾನಂದ ನಾಯ್ಕ್ (ಸ್ಕ್ರಿಪ್ಟ್ ರೈಟರ್)

  • ‘ದಿ ಕೇರಳ ಸ್ಟೋರಿ’ ನಾನು ನೋಡಿದ ಬೆಸ್ಟ್ ಸಿನಿಮಾ ಎಂದ ಆರ್‌ಜಿವಿ

    ‘ದಿ ಕೇರಳ ಸ್ಟೋರಿ’ ನಾನು ನೋಡಿದ ಬೆಸ್ಟ್ ಸಿನಿಮಾ ಎಂದ ಆರ್‌ಜಿವಿ

    ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ (Ram Gopal Varma) ಇದೀಗ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಗ್ಗೆ ಹಾಡಿಹೊಗಳಿದ್ದಾರೆ. ಇದೀಗ ನೀಡಿದ ಸಂದರ್ಶನವೊಂದರಲ್ಲಿ ‘ದಿ ಕೇರಳ ಸ್ಟೋರಿ’ ನಾನು ನೋಡಿದ ಬೆಸ್ಟ್ ಸಿನಿಮಾಗಳಲ್ಲಿ ಒಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವಯನಾಡಿನ ದುರಂತಕ್ಕೆ ಮಿಡಿದ ಅಲ್ಲು ಅರ್ಜುನ್- ಸಂತ್ರಸ್ತರಿಗೆ 25 ಲಕ್ಷ ದೇಣಿಗೆ ನೀಡಿದ ನಟ

    ಆರ್‌ಜಿವಿ ಮಾತನಾಡಿ, ಬಹಳ ಹಿಂದೆ ಎ.ಆರ್ ರೆಹಮಾನ್ ಹೇಳಿದ್ದ ವಿಷಯವನ್ನ ಇದೀಗ ಹಂಚಿಕೊಂಡಿದ್ದು, ವರ್ಷದ ಸೂಪರ್ ಹಿಟ್ ಟ್ಯೂನ್ ಆಗಲಿದೆ ಎಂದು ಕೆಲಸ ಮಾಡಿರೋದನ್ನು ಜನ ನಿರ್ಲಕ್ಷಿಸುತ್ತಾರೆ. ಅದನ್ನು ಜನರು ಕೆಟ್ಟದ್ದು ಎಂದು ಕೂಡ ಹೇಳುವುದಿಲ್ಲ. ಇದನ್ನು ಸಾಬೀತುಪಡಿಸಲು ಹಲವಾರು ಉದಾಹರಣೆಗಳಿವೆ. ನನ್ನ ಎಲ್ಲಾ ಚಿತ್ರಗಳು ಹಿಟ್ ಆಗಿದ್ದು, ಆಕಸ್ಮಿಕ. ನನ್ನ ಫ್ಲಾಪ್‌ಗಳು ಉದ್ದೇಶಪೂರ್ವಕವಾಗಿ ಆಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಿ ಮೊಮ್ಮಗಳು

    ಬಳಿಕ ಇದನ್ನು ಉದಾಹರಣೆಯೊಂದಿಗೆ ವಿವರಿಸಿ, ‘ದಿ ಕೇರಳ ಸ್ಟೋರಿ’ (The Kerala Story) ನಾನು ನೋಡಿದ ಬೆಸ್ಟ್ ಚಿತ್ರಗಳಲ್ಲಿ ಒಂದಾಗಿದೆ. ಆದರೆ ಅದೇ ತಂಡ ಮತ್ತೊಂದು ಸಿನಿಮಾ ಮಾಡಿ ಪ್ಲಾಪ್ ಆಯ್ತು ಎಂದು ತಿಳಿದು ಆಘಾತವಾಯಿತು ಎಂದರು. ಈ ಸಿನಿಮಾ ಬಗ್ಗೆ ನನಗೆ ಬಹಳ ಖುಷಿಯಿದೆ. ನಾನು ಈ ಚಿತ್ರದ ನಿರ್ದೇಶಕ, ನಿರ್ಮಾಪಕನ ಜೊತೆ ಮಾತನಾಡಿದೆ. ಅದಾ ಶರ್ಮಾ (Adah Sharma) ಜೊತೆ ಕೂಡ ಮಾತನಾಡಿದೆ. ನಂತರ, ಮುಂದಿನ ಚಿತ್ರ  ‘ಬಸ್ತರ್: ದಿ ನಕ್ಸಲ್ ಸ್ಟೋರಿ’ ಬಂದಿತ್ತು. ರಿಲೀಸ್ ಆಗಿ ಹೋಗಿದ್ದೆ ನನಗೆ ತಿಳಿಯಲಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ.

  • ಸುಶಾಂತ್ ಮನೆಗೆ ನಟಿ ಶಿಫ್ಟ್- ಪಾಸಿಟಿವ್ ವೈಬ್ ಇದೆ ಎಂದ ಅದಾ ಶರ್ಮಾ

    ಸುಶಾಂತ್ ಮನೆಗೆ ನಟಿ ಶಿಫ್ಟ್- ಪಾಸಿಟಿವ್ ವೈಬ್ ಇದೆ ಎಂದ ಅದಾ ಶರ್ಮಾ

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನರಾಗಿ 4 ವರ್ಷಗಳು ಕಳೆದಿವೆ. ನಟ ವಾಸಿಸುತಿದ್ದ ಮುಂಬೈ ಅಪಾರ್ಟ್ಮೆಂಟ್ ಬಗ್ಗೆ ಸಾಕಷ್ಟು ನೆಗೆಟಿವ್ ವಿಚಾರಗಳು ಹಬ್ಬಿತ್ತು. ಆದರೆ ಯಾವುದಕ್ಕೂ ಕ್ಯಾರೆ ಎನ್ನದೇ ಸುಶಾಂತ್‌ ಮನೆಯಲ್ಲಿ ಅದಾ ಖರೀದಿಸಿದ್ದರು. ಕೆಲಸದ ನಡುವೆ ಈ ಮನೆಗೆ ಬರಲು ಆಗಿರಲಿಲ್ಲ. ಇದೀಗ ನಟನ ಮನೆಗೆ ಅದಾ ಶರ್ಮಾ (Adah Sharma) ಶಿಫ್ಟ್ ಆಗಿದ್ದಾರೆ. ನಟನ ಮನೆಯಲ್ಲಿ ವಾಸವಾಗಿರುವ ಅನುಭವವನನ್ನು ನಟಿ ಬಿಚ್ಚಿಟ್ಟಿದ್ದಾರೆ.

    ಸುಶಾಂತ್ ಮನೆಯನ್ನು ಖರೀದಿ ಮಾಡುವುದು ಬೇಡ ಎಂದು ಅನೇಕರು ಹೇಳಿದ್ದರಂತೆ. ಯಾರ ಮಾತಿಗೂ ನಟಿ ಕಿವಿ ಕೊಡದೇ ಇತ್ತೀಚೆಗೆ ಶಿಫ್ಟ್ ಆಗಿದ್ದಾರೆ. ಸುಶಾಂತ್ ನಿಧನರಾದ ಈ ಮನೆಯಲ್ಲಿ ಭಯ ಆಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಆ ರೀತಿ ಏನು ಆಗಲಿಲ್ಲ. ಈ ಮನೆಯಲ್ಲಿ ಪಾಸಿಟಿವ್ ವೈಬ್ ಅನುಭವ ಆಗಿದೆ ಎಂದು ಖುಷಿಯಿಂದ ಸಂದರ್ಶನದಲ್ಲಿ ನಟಿ ಮಾತನಾಡಿದ್ದಾರೆ.

    ಇನ್ನೂ ಸುಶಾಂತ್ ಮನೆಗೆ ಅದಾ ಶರ್ಮಾ ಹೊಸ ರೂಪ ಕೊಟ್ಟಿದ್ದಾರೆ. ಇದೀಗ ಸ್ಟೈಲ್‌ಗೆ ತಕ್ಕಂತೆ ಮನೆಗೆ ಹೊಸ ವಿನ್ಯಾಸ ಮಾಡಿಸಿದ್ದಾರೆ. ಮನೆಯ ಕೆಳಗಿನ ಫ್ಲೋರ್‌ನಲ್ಲಿ ದೇವಸ್ಥಾನ ಮತ್ತು ಡ್ಯಾನ್ಸ್‌ ರೂಮ್‌ ಸೇರಿದಂತೆ ಹಲವು ಬದಲಾವಣೆಗಳನ್ನು ಅವರ ಅಭಿರುಚಿಗೆ ತಕ್ಕಂತೆ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ರವೀನಾ ಟಂಡನ್ ಮರ್ಡರ್ ಆಗಿರುತ್ತಿತ್ತು: ಕಂಗನಾ ಶಾಕಿಂಗ್ ಹೇಳಿಕೆ

    2023ರಲ್ಲಿ ನಟಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಸಕ್ಸಸ್ ಕಂಡಿದೆ. ಈ ಚಿತ್ರದ ನಂತರ ನಟಿಗೆ ಬೇಡಿಗೆ ಹೆಚ್ಚಾಗಿದೆ. ಮತ್ತಷ್ಟು ಬಾಲಿವುಡ್ ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ. ಅಂದಹಾಗೆ, ನಟಿ ಅದಾ ಅವರು ಕನ್ನಡದ ‘ರಣವಿಕ್ರಮ’ (Ranavikrama) ಸಿನಿಮಾದಲ್ಲಿ ನಟಿಸಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  • ಮಾಯವಾಯ್ತು ‘ದಿ ಕೇರಳ ಸ್ಟೋರಿ’ ನಿರ್ದೇಶಕನ ನೋವು

    ಮಾಯವಾಯ್ತು ‘ದಿ ಕೇರಳ ಸ್ಟೋರಿ’ ನಿರ್ದೇಶಕನ ನೋವು

    ಭಾರೀ ವಿವಾದದ ನಡುವೆಯೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾವನ್ನು ಓಟಿಟಿಯವರು ಕೇಳುತ್ತಿಲ್ಲ ಎನ್ನುವ ಸುದ್ದಿ ಹರಿದಾಡಿತ್ತು. ಸಿನಿಮಾ ಭರ್ಜರಿ ಕಲೆಕ್ಷನ್ (Collection) ಮಾಡುವಾಗಲೇ ಬಹುತೇಕ ಓಟಿಟಿಯವರು ಸಿನಿಮಾ ಟೀಮ್ ಹಿಂದೆ ಬೀಳುತ್ತಾರೆ. ಆದರೆ, ದಿ ಕೇರಳ ಸ್ಟೋರಿಯನ್ನು ಈವರೆಗೂ ಯಾರೂ ಕೇಳಿಲ್ಲವೆಂದು ಸ್ವತಃ ಸಿನಿಮಾ ಟೀಮ್ ಹೇಳಿಕೊಂಡಿತ್ತು.

    ಸಿನಿಮಾ ರಿಲೀಸ್ ಆಗಿ ಒಂದೇ ವಾರಕ್ಕೆ, ಕೆಲವು ಸಿನಿಮಾಗಳು ಮೂರ್ನಾಲ್ಕು ವಾರಕ್ಕೆ ಓಟಿಟಿಯಲ್ಲಿ (OTT) ಬಂದಿದ್ದು ಇದೆ. ಈ ಹಿಂದೆ ರಿಲೀಸ್ ಆಗಿರುವ ದಿ ಕಾಶ್ಮೀರ ಫೈಲ್ಸ್ ಕೂಡ ಚಿತ್ರ ಬಿಡುಗಡೆಯಾಗಿ ಹಲವು ವಾರಗಳ ನಂತರ ಓಟಿಟಿಗೆ ಬಂದಿತ್ತು. ಆದರೆ, ಇಂಥದ್ದೊಂದು ಭಾಗ್ಯ ದಿ ಕೇರಳ ಸ್ಟೋರಿಗೆ ಇಲ್ಲ ಎನ್ನುವುದು ಚಿತ್ರತಂಡಕ್ಕೆ ಆಘಾತ ಮೂಡಿಸಿತ್ತು. ಇದೀಗ ಅವರ ನೋವು ನಿವಾರಣೆಯಾಗಿದೆ. ಫೆಬ್ರವರಿ 16ರಿಂದ ಜೀ 5 ಒಟಿಟಿ ವೇದಿಕೆಯಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

    ಈ ನಡುವೆ ಮತ್ತೊಂದು ಸುದ್ದಿ ಮಲಯಾಳಂ (Malayalam) ಸಿನಿಮಾ ರಂಗದಿಂದ ಬಂದಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಎರಡನೇ ಭಾಗವಾಗಿ ಮೂಡಿ ಬರಲಿದೆ ಎನ್ನುವ ಸುದ್ದಿ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ (Sudeepto Sen) ಕೂಡ ಈ ಬಗ್ಗೆ ಮಾತನಾಡಿದ್ದಾರೆ. ದಿ ಕೇರಳ ಸ್ಟೋರಿ 2 (The Kerala Story 2) ಮಾಡುವಂತೆ ಆಫರ್ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

     

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಅವರನ್ನು ಮತಾಂತರಿಸಿ ಉಗ್ರರನ್ನಾಗಿಸುವ ಕಥೆಯನ್ನು ಹೊಂದಿತ್ತು. ಎರಡನೇ ಭಾಗದಲ್ಲಿ ಮುಸ್ಲಿಂ ಮುಗ್ಧ ಹುಡುಗರ ತಲೆಕೆಡಿಸಿ ಉಗ್ರರನ್ನಾಗಿ ಹೇಗೆ ಮಾಡಲಾಗುತ್ತಿದೆ ಎನ್ನುವ ಕಥೆಯನ್ನು ಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ನಿರ್ದೇಶಕರು ಕೆಲ ಸುಳಿವುಗಳನ್ನೂ ನೀಡಿದ್ದಾರೆ. ಆದರೆ, ಅಧಿಕೃತವಾಗಿ ಯಾವಾಗ ಘೋಷಣೆಯಾಗಲಿದೆ ಎನ್ನುವ ಕುರಿತು ಅವರು ತಿಳಿಸಿಲ್ಲ.

  • ಮಹಿಳಾ ಮೀಸಲಾತಿ ಬಗ್ಗೆ ‘ದಿ ಕೇರಳ ಸ್ಟೋರಿ’ ನಟಿ ಅದಾ ಪ್ರತಿಕ್ರಿಯೆ

    ಮಹಿಳಾ ಮೀಸಲಾತಿ ಬಗ್ಗೆ ‘ದಿ ಕೇರಳ ಸ್ಟೋರಿ’ ನಟಿ ಅದಾ ಪ್ರತಿಕ್ರಿಯೆ

    ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation Bill) ಜಾರಿಗೆ ತಂದಿರುವ ಬಗ್ಗೆ ಇದೀಗ ‘ದಿ ಕೇರಳ ಸ್ಟೋರಿ’ (The Kerala Story) ನಟಿ ಅದಾ ಶರ್ಮಾ(Adah Sharma) ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಧ್ವನಿಗೂಡಿಸಲು ಅನುಕೂಲವಾಗಲಿದೆ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

    ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಅದಾ ಶರ್ಮಾ, ಮಹಿಳಾ ಸಬಲೀಕರಣದ ಮೂಲಕ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ಬಂದಿರೋದು ತುಂಬಾ ಖುಷಿಯಾಗಿದೆ. ಈ ಮೂಲಕ ಮಹಿಳೆಯ ಧ್ವನಿ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಲಿದೆ ಎಂದಿದ್ದಾರೆ. ಇದನ್ನೂ ಓದಿ:ರಾಖಿ ಸಾವಂತ್ ಆಸೆ ಈಡೇರಿಸ್ತಾರಾ ರಿಷಬ್ ಶೆಟ್ಟಿ?

    ‘ದಿ ಕೇರಳ ಸ್ಟೋರಿ’ (The Kerala Story) ಸಕ್ಸಸ್ ನಂತರ ಅದಾ ಶರ್ಮಾಗೆ ಬೇಡಿಕೆ ಜಾಸ್ತಿಯಾಗಿದೆ. ಚಿತ್ರದ ಆಯ್ಕೆಯಲ್ಲಿ ಅವರು ಮತ್ತಷ್ಟು ಚ್ಯೂಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಸ್ಟೋರಿ’ ಅದಾ ಶರ್ಮಾಗೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ‘ದಿ ಕೇರಳ ಸ್ಟೋರಿ’ ಅದಾ ಶರ್ಮಾಗೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನ್ನಡದ ‘ರಣವಿಕ್ರಮ’ (Ranavikrama) ಬ್ಯೂಟಿ ಅದಾ ಶರ್ಮಾ (Adah Sharma) ಅವರು ಇತ್ತೀಚಿಗೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದರು. ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದ ನಟಿ ಈಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಅಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ. ಈ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದ ಬೆಡಗಿ ಅದಾಗೆ ಅನಾರೋಗ್ಯ ಕಾಡ್ತಿದೆ. ಫುಡ್ ಅಲರ್ಜಿಯಿಂದ ಆರೋಗ್ಯ ವ್ಯತ್ಯಾಸವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ವೈದ್ಯರು ಈಗ ಆಕೆಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ತರುಣ್ ಸ್ಪಷ್ಟನೆ

    ಅದಾ ಶರ್ಮಾ ನಟನೆಯ ಮುಂಬರುವ ಸಿನಿಮಾ ‘ಕಮಾಂಡೋ’ ಪ್ರಚಾರಕ್ಕಾಗಿ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಭಾವನಾ ರೆಡ್ಡಿ ಎಂಬ ಖಡಕ್ ಪೊಲೀಸ್ ಆಧಿಕಾರಿಯಾಗಿ ಅದಾ ಜೀವ ತುಂಬಿದ್ದರು. ಇನ್ನೇನು ಪ್ರಚಾರ ಕಾರ್ಯ ಶುರು ಮಾಡಬೇಕು. ಈ ಸಂದರ್ಭದಲ್ಲಿ ಅದಾ ಆರೋಗ್ಯ ಕೈಕೊಟ್ಟಿದೆ. ಹಾಗಾಗಿ ಚಿತ್ರದ ಪ್ರಚಾರ ಕಾರ್ಯವನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ. ಆತಂಕದಲ್ಲಿದ್ದ ಅದಾ ಅಭಿಮಾನಿಗಳು, ಆಕೆಯ ಸದ್ಯ ಹೆಲ್ಡ್ ಅಪ್‌ಡೇಟ್ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

    ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಾಯಕಿಯಾಗಿ ಅದಾ ಶರ್ಮಾ ನಟಿಸಿದ್ದರು. ಈ ಚಿತ್ರ ಫ್ಯಾನ್ಸ್‌ಗೆ ಮನರಂಜನೆ ನೀಡಿತ್ತು. ದಿ ಕೇರಳ ಸ್ಟೋರಿ ಬಿಗ್‌ ಬ್ರೇಕ್‌ ನಂತರ ಒಳ್ಳೆಯ ಕಥೆಗಳು ನಟಿಗೆ ಅರಸಿ ಬರುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

    ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

    ಸಾಕಷ್ಟು ಸದ್ದು ಮಾಡಿ, ಬಾಕ್ಸ್ ಆಫೀಸಿನಲ್ಲಿ ದುಡ್ಡೂ ಮಾಡಿರುವ ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ (Adah Sharma)  ಕೆಲ ಸ್ಟಾರ್ ನಟರಿಗೆ ತಮ್ಮ ಮಾತಿನಲ್ಲೇ ತಿವಿದಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ವಿರೋಧಿಸಿ ಮಾತನಾಡಿದ್ದ ಕಮಲ್ ಹಾಸನ್, ನಾಸಿರುದ್ದೀನ್ ಶಾ ಸೇರಿದಂತೆ ಹಲವರಿಗೆ ತಮ್ಮ ಮಾತಿನಲ್ಲೇ ಏಟು ನೀಡಿದ್ದಾರೆ ಅದಾ. ‘ನಮ್ಮ ಸಿನಿಮಾದ ಓಟವನ್ನು ಕಟ್ಟಿ ಹಾಕಲು ಕೆಲವು ನಟರು ಪ್ರಯತ್ನಪಟ್ಟರು. ಆದರೆ, ಅದು ಆಗಲಿಲ್ಲ. ಯಾರ ಸಾಮರ್ಥ್ಯ ಏನು ಅಂತ ಗೊತ್ತಾಗಿದೆ’ ಎಂದು ಮಾತನಾಡಿದ್ದಾರೆ.

    ಈ ಹಿಂದೆ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ (Naseeruddin Shah) ‘ದಿ ಕೇರಳ ಸ್ಟೋರಿಬಗ್ಗೆ ಕಾಮೆಂಟ್ ಮಾಡಿದ್ದರು. ಸಿನಿಮಾವನ್ನು ತಾವು ಯಾವತ್ತೂ ನೋಡುವುದಿಲ್ಲ ಎಂದಿದ್ದ ಅವರು,  ಸಿನಿಮಾ ಗೆದ್ದಿದೆ ಎಂದ ಮಾತ್ರಕ್ಕೆ ಅದು ಒಳ್ಳೆಯ ಗೆಲುವಲ್ಲ. ಅದೊಂದು ಕೆಟ್ಟ ಟ್ರೆಂಡಿನ ಗೆಲುವು ಎಂದು ಪ್ರತಿಕ್ರಿಯಿಸಿದ್ದರು. ದ್ವೇಷವನ್ನು ಹಂಚುತ್ತಿರುವ ಕುರಿತು ಅವರು ಕಳವಳವನ್ನು  ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇನ್ನೆಷ್ಟು ದಿನ ದ್ವೇಷವನ್ನು ಹಂಚುತ್ತೀರಿ ಎಂದು ಪ್ರಶ್ನೆ ಮಾಡಿದ್ದರು.

    ಬಾಕ್ಸ್ ಆಫೀಸಿನಲ್ಲಿ ಇನ್ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ, ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಬಗ್ಗೆ ಹಿಂದೆ ಕಮಲ್ ಹಾಸನ್ (Kamal Haasan) ಕೂಡ ಮಾತನಾಡಿದ್ದರು. ಅದೊಂದು ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದರು. ಸತ್ಯವನ್ನು ಹೇಳದೇ ಅಸತ್ಯವನ್ನೇ ತುಂಬಿರುವಂತಹ ಚಿತ್ರವದು ಎಂದು ಮಾತನಾಡಿದ್ದರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಅಬುಧಾಬಿಯಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಕಮಲ್ ಹಾಸನ್,   ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ನಾನು ದಿ ಕೇರಳ ಸ್ಟೋರಿ ಸಿನಿಮಾವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕಾಗಿ ನನ್ನನ್ನೂ ವಿರೋಧಿಸಿದ್ದಾರೆ. ಸಿನಿಮಾದಲ್ಲಿ ಸತ್ಯ ಘಟನೆ ಆಧರಿಸಿದ ಸಿನಿಮಾ ಎಂದು ಹೇಳಿದರೆ ಸಾಲದು. ಅದರಲ್ಲಿ ಸತ್ಯ ಇರಬೇಕುಎಂದು ಪ್ರತಿಕ್ರಿಯಿಸಿದ್ದರು.

    ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಕಥೆಯೇ ಬೋಗಸ್ ಎಂದು ಹಲವರು ಈಗಾಗಲೇ ಹಲವರು ವಾದ ಮಾಡಿದ್ದಾರೆ. ಅವರು ಹೇಳಿದ ಪ್ರಮಾಣದಲ್ಲಿ ಮಹಿಳೆಯರು ಇಸ್ಲಾಂ ಮೂಲಭೂತವಾದಕ್ಕೆ ಸಿಲುಕಿಲ್ಲ ಎಂದು ಚರ್ಚೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಟೀಮ್ ಮಾಧ್ಯಮಗೋಷ್ಠಿ ನಡೆಸಿ, ಅಲ್ಲಿಗೆ ಸಂತ್ರಸ್ತರನ್ನು ಕರೆತಂದಿದ್ದರು. ಒಬ್ಬೊಬ್ಬರ ಕಥೆಯನ್ನು ಸಿನಿಮಾ ಟೀಮ್ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಸ್ಟೋರಿ’ ಸಕ್ಸಸ್ ಬೆನ್ನಲ್ಲೇ ಮದುಮಗಳಾದ ಅದಾ ಶರ್ಮಾ

    ‘ದಿ ಕೇರಳ ಸ್ಟೋರಿ’ ಸಕ್ಸಸ್ ಬೆನ್ನಲ್ಲೇ ಮದುಮಗಳಾದ ಅದಾ ಶರ್ಮಾ

    ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ಅವರು ‘ದಿ ಕೇರಳ ಸ್ಟೋರಿ’ (The Kerala Story)  ಸಿನಿಮಾ ಸೂಪರ್ ಸಕ್ಸಸ್ ನಂತರ ಕೈ ತುಂಬಾ ಅವಕಾಶಗಳು ಅರಸಿ ಬರುತ್ತಿದೆ. ಈ ನಡುವೆ ಮದುಮಗಳಾಗಿ ನಟಿ ಮಿಂಚ್ತಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದಾ.? ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಅದಾ ಶರ್ಮಾ?

    ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರೋ ಈ ಮುದ್ದು ಮುಖದ ಚೆಲುವೆ ಅದಾ, ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗಿ ನಟಿಸಿದ್ದ ಅದಾ ಶರ್ಮಾ ಇತ್ತೀಚಿಗೆ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ರು. ಮೀನಾಕ್ಷಿ ಎಂಬ ಪಾತ್ರದ ಮೂಲಕ ಮನೆ ಮಾತಾದರು. ಲವ್ ಜಿಹಾದ್ ಕುರಿತ ಈ ಕಥೆಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ರು. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ‘ದಿ ಕೇರಳ ಸ್ಟೋರಿ’ ಸಕ್ಸಸ್ ನಂತರ ಬಂಪರ್ ಆಫರ್ಸ್‌ಗಳು ನಟಿ ಅದಾಗೆ ಅರಸಿ ಬರುತ್ತಿದೆ. ಈ ಚಿತ್ರದ ಯಶಸ್ಸಿನಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಹೀಗಿರುವಾಗ ವೈವಾಹಿಕ ಜೀವನಕ್ಕೆ ಅದಾ ಕಾಲಿಡುವ ತಾಲೀಮು ನಡೆಸುತ್ತಿದ್ದಾರೆ. ಹಸಿರು ಬಣ್ಣದ ಸೀರೆಯುಟ್ಟು ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಮದುಮಗಳಾಗಿ ಬೈಕ್ ಮೇಲೆ ಕುಳಿತು ಪೋಸ್ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಅಯ್ಯೋ.. ಅದಾ ಶರ್ಮಾ ಮದುವೆಯಾಗುತ್ತಿದ್ದಾರಾ.? ಅಂತಾ ಗಾಬರಿಯಾಗಬೇಡಿ. ಜಾಹಿರಾತು ಶೂಟ್‌ವೊಂದಕ್ಕಾಗಿ ನಟಿ ಅದಾ ಮದುಮಗಳ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಮದುಮಗಳ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆ್ಯಡ್ ಶೂಟ್‌ಗೆ ಎಂದು ತಿಳಿದ ಮೇಲೆ ಮೇಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಕ್ಸಲೈಟ್ ಕುರಿತಾದ ಸಿನಿಮಾ ಕೈಗೆತ್ತಿಕೊಂಡ ‘ದಿ ಕೇರಳ ಸ್ಟೋರಿ’ ಡೈರೆಕ್ಟರ್

    ನಕ್ಸಲೈಟ್ ಕುರಿತಾದ ಸಿನಿಮಾ ಕೈಗೆತ್ತಿಕೊಂಡ ‘ದಿ ಕೇರಳ ಸ್ಟೋರಿ’ ಡೈರೆಕ್ಟರ್

    ತ್ತೀಚೆಗಷ್ಟೇ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಿರ್ದೇಶಕ ಸುದೀಪ್ತೊ ಸೇನ್ (Sudipto Sen) ಮತ್ತೊಂದು ಸಿನಿಮಾ ಘೋಷಣೆ (New Movie) ಮಾಡಿದ್ದರು. ಆ ಚಿತ್ರಕ್ಕೆ ಬಸ್ತರ್ ಎಂದೂ ಹೆಸರಿಟ್ಟಿದ್ದರು.  ಈ ಕುರಿತು ಸ್ವತಃ ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದರು. ಆದರೆ, ಈ ಸಿನಿಮಾ ಯಾವುದರ ಕುರಿತು ಎನ್ನುವ ಮಾಹಿತಿ ಸಿಕ್ಕಿರಲಿಲ್ಲ.

    ನಿರ್ದೇಶಕರು ಆಪ್ತರು ಹೇಳುವಂತೆ ಇದೊಂದು ನಕ್ಸಲೈಟ್ ಕುರಿತಾದ ಸಿನಿಮಾವಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಧ್ವಜವನ್ನು ಹಾಕಲಾಗಿದೆ. ಅಲ್ಲದೇ, ನಕ್ಸಲೈಟ್ ಸಿನಿಮಾ ಎನ್ನುವ ಕುರಿತು ಹಲವು ಕುರುಹುಗಳನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ನಕ್ಸಲೈಟ್ ಕುರಿತಾದ ಸಿನಿಮಾ ಇದಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

    ಈಗಾಗಲೇ ಬಸ್ತರ್ (Bastar)  ಸಿನಿಮಾದ ಕೆಲಸಗಳು ಸದ್ದಿಲ್ಲದೇ ಶುರುವಾಗಿವೆ ಎಂದು ಹೇಳಲಾಗಿದ್ದು, ಏಪ್ರಿಲ್ 5, 2024ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದೆ ಚಿತ್ರತಂಡ. ಇದು ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ನಿರ್ದೇಶಕರು ಈ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳಬಹುದು ಎನ್ನುವ ಕುತೂಹಲ ಮೂಡಿದೆ. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು.

     

    ಈಗ ಹೊಸದಾಗಿ ತಯಾರಿಸಲು ಹೊರಟಿರುವ ಬಸ್ತರ್ ಸಿನಿಮಾ ಕೂಡ ಮತ್ತೊಂದು ಕಾರಳ ಮುಖವನ್ನು ಬಿಚ್ಚಿಡಲಿದೆ ಎಂದು ಹೇಳಲಾಗುತ್ತಿದೆ. ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಪೋಸ್ಟರ್ ನಲ್ಲಿಯೇ ಚಿತ್ರತಂಡ ತಿಳಿಸಿದೆ. ಹಾಗಾಗಿ ಯಾವ ಕಥೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ‘ದಿ ಕೇರಳ ಸ್ಟೋರಿ’ ನಂತರ ಮತ್ತೊಂದು ಸಿನಿಮಾ ಘೋಷಿಸಿದ ಟೀಮ್

    ‘ದಿ ಕೇರಳ ಸ್ಟೋರಿ’ ನಂತರ ಮತ್ತೊಂದು ಸಿನಿಮಾ ಘೋಷಿಸಿದ ಟೀಮ್

    ದೇಶದಾದ್ಯಂತ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಿರ್ದೇಶಕ ಸುದೀಪ್ರೋ ಸೇನ್ (Sudeepro Sen) ಇದೀಗ ಮತ್ತೊಂದು ಸಿನಿಮಾ ಘೋಷಣೆ (New Movie) ಮಾಡಿದ್ದಾರೆ. ಆ ಚಿತ್ರಕ್ಕೆ ಅವರು ಬಸ್ತರ್ ಎಂದು ಹೆಸರಿಟ್ಟಿದ್ದಾರೆ.  ಈ ಕುರಿತು ಸ್ವತಃ ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು, ಸನ್ ಸೈನ್ ಪಿಕ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

    ಈಗಾಗಲೇ ಬಸ್ತರ್ (Bastar)  ಸಿನಿಮಾದ ಕೆಲಸಗಳು ಸದ್ದಿಲ್ಲದೇ ಶುರುವಾಗಿವೆ ಎಂದು ಹೇಳಲಾಗಿದ್ದು, ಏಪ್ರಿಲ್ 5, 2024ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದೆ ಚಿತ್ರತಂಡ. ಇದು ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಯಾವ ಘಟನೆ ಎನ್ನುವುದನ್ನು ಚಿತ್ರತಂಡ ಹೇಳಿಕೊಂಡಿಲ್ಲ. ಹಾಗಾಗಿ ನಿರ್ದೇಶಕರು ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿರಬೇಕು ಎನ್ನುವ ಕುತೂಹಲ ಮೂಡಿದೆ.

    ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕಾಶ್ಮೀರ ಫೈಲ್ಸ್ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು.

    ಈಗ ಹೊಸದಾಗಿ ತಯಾರಿಸಲು ಹೊರಟಿರುವ ಬಸ್ತರ್ ಸಿನಿಮಾ ಕೂಡ ಮತ್ತೊಂದು ಕಾರಳ ಮುಖವನ್ನು ಬಿಚ್ಚಿಡಲಿದೆ ಎಂದು ಹೇಳಲಾಗುತ್ತಿದೆ. ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಪೋಸ್ಟರ್ ನಲ್ಲಿಯೇ ಚಿತ್ರತಂಡ ತಿಳಿಸಿದೆ. ಹಾಗಾಗಿ ಯಾವ ಕಥೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]