Tag: The Kashmir Files

  • ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಮುಚ್ಚುಮರೆ ಇಲ್ಲದೇ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುವ ನಟಿ ಕಂಗನಾ ರಣಾವತ್, ತನ್ನದೇ ಸಿನಿಮಾ ರಂಗದ ಮೇಲೆ ಕಿಡಿಕಾರಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ನಟ, ನಟಿಯರು ಮತ್ತು ನಿರ್ದೇಶಕರು ಮೌನ ತಾಳಿದ್ದಕ್ಕೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

    ದೇಶಕ್ಕೆ ದೇಶವೇ ಸಿನಿಮಾವನ್ನು ಕೊಂಡಾಡುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಿದೆ. ಕೊರೋನಾ ನಂತರದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾವಿದು ಎನ್ನುವ ಹೆಗ್ಗಳಿಕೆಗೂ ಚಿತ್ರ ಪಾತ್ರವಾಗಿದೆ. ಆದರೂ, ಬಾಲಿವುಡ್ ಮೌನ ತಾಳಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಲಿವುಡ್ ಕೆಲವರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಇಂತಹ ಚಿತ್ರಗಳ ಬಗ್ಗೆ ಅವರಿಗೆ ಯಾವಾಗಲೂ ತಾತ್ಸಾರ ಎಂದೂ ಅವರು ಹೇಳಿಕೊಂಡಿದ್ದಾರೆ. ಇಂತಹ ಚಿತ್ರಗಳನ್ನು ಎಲ್ಲರಿಗೂ ತಲುಪಿಸಲು ಬಾಲಿವುಡ್ ಏಕೆ ಯೋಚಿಸುತ್ತಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ಈ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕೆಂದು ಕೆಲ ರಾಜ್ಯಗಳು ತೆರಿಗೆ ವಿನಾಯತಿ ಕೊಟ್ಟಿವೆ. ಕೆಲ ಶಾಸಕರು ಉಚಿತವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಿನಿಮಾ ತೋರಿಸುತ್ತಿದ್ದಾರೆ. ನೆನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಚಿತ್ರ ನೋಡಿದ್ದಾರೆ. ಇದನ್ನೂ ಓದಿ : exclusive photos – ಗರಡಿಗಾಗಿ ಬಣ್ಣ ಹಚ್ಚಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಾಶ್ಮೀರ ಪಂಡಿತರ ಹತ್ಯ ಮತ್ತು ಅವರ ವಲಸೆ ಕುರಿತಾದ ಸಿನಿಮಾ. ಕನ್ನಡದ ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ, ಕೆಲ ಕಡೆ ವಿರೋಧವೂ ‍ವ್ಯಕ್ತವಾಗಿದೆ.

  • ಒಳ ಉಡುಪಿನಲ್ಲೇ ಬರ್ತ್‍ಡೆ ಗಿಫ್ಟ್ ಕೊಟ್ಟ ಅನುಪಮ್ ಖೇರ್

    ಒಳ ಉಡುಪಿನಲ್ಲೇ ಬರ್ತ್‍ಡೆ ಗಿಫ್ಟ್ ಕೊಟ್ಟ ಅನುಪಮ್ ಖೇರ್

    ಮುಂಬೈ: ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ಸೋಮವಾರ ತಮ್ಮ 67ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಹುಟ್ಟುಹಬ್ಬಕ್ಕೆ ಒಂದಿಲ್ಲೊಂದು ವಿಶೇಷ ಉಡುಗೊರೆಯನ್ನು ಅಭಿಮಾನಿಗಳಿಗೆ ನೀಡುವ ಈ ಹಿರಿಯ ನಟ, ತಮ್ಮ 67ನೇ ವಯಸ್ಸಿನಲ್ಲಿ ದೇಹ ಹುರಿಗೊಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಆ ದೇಹಸಿರಿ ತೋರಿಸಲೆಂದೇ ಅವರು ಒಳ ಉಡುಪಿನಲ್ಲೇ ಫೋಟೋಶೂಟ್ ಮಾಡಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

    ಹುಟ್ಟು ಹಬ್ಬದ ಪ್ರಯುಕ್ತ ಅನುಪಮ್ ಖೇರ್, ತಮ್ಮ ದೈಹಿಕ ರೂಪಾಂತರ ಮಾಡಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದೇ ತಡ, ಅಭಿಮಾನಿಗಳು ಕೂಡ ಕ್ರೇಜಿಯಾಗಿಯೇ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ. ಒಳ ಉಡುಪಿನ ಮೇಲೆ ಕುಳಿತ, ಅನುಪಮ್ ಖೇರ್ ತಮ್ಮ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ್ದಕ್ಕೆ ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    “ಅಭಿಮಾನಿಗಳೇ 37 ವರ್ಷಗಳ ಹಿಂದೆ ನೀವು ಅತ್ಯಂತ ಅಸಾಂಪ್ರದಾಯಿಕ ರೀತಿಯಲ್ಲಿ ಪಾದಾರ್ಪಣೆ ಮಾಡಿದ ಮತ್ತು 65 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ ಯುವ ನಟನನ್ನು ಭೇಟಿಯಾಗಿದ್ದಿರಿ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಪ್ರದರ್ಶಕನಾಗಿ ಪ್ರತಿಯೊಂದು ಮಾರ್ಗವನ್ನೂ ಅನ್ವೇಷಿಸಲು ಪ್ರಯತ್ನಿಸಿದೆ. ಆದರೆ ನನ್ನೊಳಗೆ ಯಾವಾಗಲೂ ಒಂದು ಕನಸು ಇದೆ. ಅದನ್ನು ನನಸಾಗಿಸಲು ಎಂದಿಗೂ ಏನನ್ನೂ ಮಾಡಲಿಲ್ಲ. ಹೀಗಾಗಿ 2022ರಲ್ಲಿ ನಾನು ನನ್ನ ಫಿಟ್‍ನೆಸ್ ಅನ್ನು ಗಂಭೀರವಾಗಿ ಪರಿಗಣಿಸಿ ದೇಹವನ್ನು ಸಧೃಡವಾಗಿ ಇಟ್ಟುಕೊಳ್ಳಲು ಇಚ್ಚಿಸಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, “ನನ್ನ ಜೀವನದಲ್ಲಿ ನಡೆದ ಕೆಲ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದೂ ಅವರು ಹೇಳಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    ಅನುಪಮ್ ಅವರ ಜನ್ಮದಿನಕ್ಕಾಗಿ ಹಲವು ಬಾಲಿವುಡ್ ತಾರೆಯರು ಅಭಿನಂದಿಸಿದ್ದು, ಅವರ ದೈಹಿಕ ರೂಪಾಂತರದ ಈ ಪೋಸ್ಟ್‍ಗೆ ಕಾಮೆಂಟ್ ಮೂಲಕ ಶ್ಲಾಘಿಸಿದ್ದಾರೆ. ಅನುಪಮ್ ಪುತ್ರ ಸಿಕಂದರ್ ಖೇರ್ ಕೂಡ ಶುಭಾಶಯ ಕೋರಿ, ಅಪ್ಪನ ಸಾಧನೆ ಕೊಂಡಿದ್ದಾನೆ. ಅನುಪಮ್ ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ.