Tag: The Kashmir Files

  • ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

    ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

    ಬಾಲಿವುಡ್ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ರಿಲೀಸ್ ಬೆನ್ನಲ್ಲೇ, ಈ ಚಿತ್ರವನ್ನು ವಿರೋಧಿಸಿದ್ದ ಕೆಲವರು ‘ದಿ ಗುಜರಾತ್ ಫೈಲ್ಸ್’ (Gujarath Files) ಸಿನಿಮಾ ಯಾವಾಗ? ಎಂದು ಪ್ರಶ್ನೆ ಮಾಡಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿರುವ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ (Vinod Kaapri)“ನಾನು ಗುಜರಾತ್ ಫೈಲ್ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದೇನೆ. ಈ ಕುರಿತು ನಿರ್ಮಾಪಕರ ಜತೆ ಮಾತುಕತೆ ಕೂಡ ಆಗಿದೆ. ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಅವರ ಪಾತ್ರವು ವಿವರವಾಗಿ ಇರಲಿದೆ. ಈ ಚಿತ್ರವನ್ನು ತಾವು ತಡೆಯುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆ ಮಾಡಿದ್ದಾರೆ.

    ಅಲ್ಲದೇ, “ದಿ ಗುಜರಾತ್ ಫೈಲ್ಸ್ ಸತ್ಯ ಘಟನೆಯನ್ನೇ ಆಧರಿಸಿದ್ದು ಆಗಿರುತ್ತದೆ. ಅದಕ್ಕಾಗಿ ನಾನೂ ಕೂಡ ಸಂಶೋಧನೆ ಮಾಡಿದ್ದೇನೆ. ಸತ್ಯ ಮತ್ತು ಪ್ರಾಮಾಣಿಕವಾಗಿ ಈ ಸಿನಿಮಾ ಮಾಡುವೆ. ಪ್ರಧಾನಿ ಅವರು ಹೇಳುವಂತೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವು ನನಗೂ ಬೇಕು. ಅದನ್ನು ಪ್ರಧಾನಿಗಳು ನಮ್ಮ ಚಿತ್ರಕ್ಕೂ ಕೊಟ್ಟರೆ ಅತೀ ಶೀಘ್ರದಲ್ಲೇ ಈ ಸಿನಿಮಾ ಶುರು ಮಾಡುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. ನಿರ್ದೇಶಕ ವಿನೋದ್ ಕಾಪ್ರಿ ಮಾಡಿರುವ ಈ ಟ್ವೀಟ್ ಭಾರೀ ವೈರಲ್ ಆಗಿದೆ. ಅಲ್ಲದೇ, ಅವರು ಕೇಳಿರುವ ಪ್ರಶ್ನೆಯನ್ನು ವಿನೋದ್ ಬೆಂಬಲಿಗರು ಕೇಳಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪರ ವಿರೋಧ ಚರ್ಚೆಗಳ ನಡುವೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಲವು ರಾಜಕೀಯ ನಾಯಕರು ಈ ಸಿನಿಮಾ ವೀಕ್ಷಣೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವುದರ ಜೊತೆಗೆ, ಚಿತ್ರ ವೀಕ್ಷಣೆಗೆ ಉಚಿತ ಪ್ರವೇಶದ ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದಾರೆ. ಈ ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದ ಬಾಲಿವುಡ್ ನಿರ್ದೇಶಕ ವಿನೋದ್ ಈ ಹೊಸ ಆಲೋಚನೆ ಹೊರ ಹಾಕಿದ್ದಾರೆ.

  • ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು

    ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು

    ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರದಿಂದ ದಕ್ಷಿಣಕ್ಕೆ ಮಹಾ ವಲಸೆ ಬಂದ ಕಾಶ್ಮೀರಿ ಪಂಡಿತರ ಕಥೆ ಹೇಳುತ್ತದೆ. ಸಿನಿಮಾದಲ್ಲಿರುವ ಕಥೆ ಪ್ರತಿಯೊಬ್ಬರ ರಕ್ತ ಕುದಿಯುವಂತೆ ಮಾಡುತ್ತದೆ. ಇದೀಗ ಕಾಶ್ಮೀರದಿಂದ ವಲಸೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆ ಹಾಗೂ ನೆನಪನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕಾಶ್ಮೀರದಿಂದ ವಲಸೆ ಬಂದಿದ್ದ ಮಹಿಳೆ ಬೆಲಾ ಝೂಷಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕೇವಲ ಡೆಮೋ ತೋರಿಸಿದೆ. ಕಾಶ್ಮೀರಿ ಪಂಡಿತರ ಮೇಲಾಗಿದ್ದ ದೌರ್ಜನ್ಯ ಊಹೆಗೂ ಮೀರಿದಷ್ಟು ಕ್ರೂರವಾಗಿತ್ತು ಎಂದು ವಿವರಿಸಿದರು.

    ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಓಡಿಸಲು ಭಯಾನಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದರು. ಅವಮಾನ, ಹಿಂಸೆ, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ, ಬೆದರಿಕೆ ಹೀಗೆ ಅಂದಿನ ದಿನಗಳು ಅತ್ಯಂತ ಕ್ರೂರವಾಗಿತ್ತು ಎಂದು ತಮ್ಮ ನೆನಪನ್ನು ತಿಳಿಸಿದರು. ಇದನ್ನೂ ಓದಿ: ಕಡಿಮೆ ಅಂತರದಲ್ಲಿ ಸೋಲು – ಬೂತ್‌ ಮಟ್ಟದಲ್ಲಿ ವಿಶ್ಲೇಷಣೆಗೆ ಮುಂದಾದ ಯುಪಿ ಬಿಜೆಪಿ

    ನನ್ನ ಸ್ನೇಹಿತನ ಪತ್ನಿ ಗಿರಿಜಾ ಎಂಬ ಮಹಿಳೆಯ ನಿಜ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಮಾಡಿ, ಮರವನ್ನು ಕತ್ತರಿಸುವ ಯಂತ್ರದಲ್ಲಿ ಹಾಕಿ ದೇಹವನ್ನು ತುಂಡು ತುಂಡು ಮಾಡಿ ರಸ್ತೆಯಲ್ಲಿ ಎಸೆದಿರುವ ಘಟನೆ ನಿಜವಾಗಿಯೂ ನಡೆದಿದೆ ಎಂದು ಭಯಾನಕ ವಿಚಾರವನ್ನು ತಿಳಿಸಿದರು.

    ಜನರು ಮಾತು ಎತ್ತಿದರೂ ಅವರನ್ನು ಶೂಟ್ ಮಾಡಿ ಕೊಲ್ಲಲಾಗುತ್ತಿತ್ತು. ಭಯೋತ್ಪಾದಕರ ಗುರಿ ಕಾಶ್ಮೀರಿ ಪಂಡಿತ ಕುಟುಂಬದ ಗಂಡಸರನ್ನು ಓಡಿಸುವುದೇ ಆಗಿತ್ತು. ಕುಟುಂಬದ ಆಧಾರವಾಗಿರುವ ಗಂಡಸರನ್ನು ಓಡಿಸಿ ಅಥವಾ ಕೊಲೆ ಮಾಡಿ ಮಹಿಳೆ, ಮಕ್ಕಳನ್ನು ಅನಾಥರನ್ನಾಗಿ ಮಾಡಿ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರು.

    ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಲ್ಲದೇ ಅದೆಷ್ಟೋ ಮಕ್ಕಳ ತಲೆಗೆ ಶೂಟ್ ಮಾಡಿ ಕೊಂದಿದ್ದಾರೆ. 70 ಸಾವಿರಕ್ಕೂ ಹೆಚ್ಚು ಜನರನ್ನು ರಾತ್ರೋರಾತ್ರಿ ಕಾಶ್ಮೀರದಿಂದ ಓಡಿಸಿದ್ದಾರೆ. ಅಲ್ಲಿ ಕಾಶ್ಮೀರಿ ಪಂಡಿತರು ಬದುಕಬೇಕೆಂದಿದ್ದರೆ ಮತಾಂತರವಾಗಬೇಕು ಎಂಬ ಆಯ್ಕೆ ನೀಡಿದ್ದರು. ಇದು ಬಿಟ್ಟು ಒಂದೋ ಸಾಯುವುದು ಇಲ್ಲವೇ ಕಾಶ್ಮೀರ ಬಿಟ್ಟು ಓಡಿಹೋಗುವುದು ಎಂಬ ಆಯ್ಕೆ ನೀಡಿದ್ದರು. ನಮ್ಮನ್ನು ಕಾಪಾಡಲು ಆ ಸಮಯದಲ್ಲಿ ಯಾರೂ ಇರಲಿಲ್ಲ. ಪೊಲೀಸರು, ಅಧಿಕಾರಿಗಳು ಎಲ್ಲರೂ ಕೈ ಚೆಲ್ಲಿ ಕೂತಿದ್ದರು. ಕೇವಲ ಭಯೋತ್ಪಾದಕರ ಅಟ್ಟಹಾಸ ಮಾತ್ರ ನಡಿಯುತ್ತಿತ್ತು. ಭಾರತೀಯ ನಾಯಿಗಳು ಕಾಶ್ಮೀರ ಬಿಟ್ಟು ತೊಲಗಿ ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದರು. ಇದನ್ನೂ ಓದಿ: ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆ

    ಇದೀಗ ಕಾಶ್ಮೀರದಿಂದ ವಲಸೆ ಬಂದಿರುವ ಪಂಡಿತ ಕುಟುಂಬ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಇಡೀ ದೇಶದಲ್ಲಿ ಹರಡಿದ್ದಾರೆ. ಕರ್ನಾಟಕದಲ್ಲಿ ವಲಸೆ ಬಂದಿರುವ ಸುಮಾರು 500 ಕುಟುಂಬಗಳಿವೆ. ದೆಹಲಿಯಲ್ಲಿ ಸಾವಿರ ಕುಟುಂಬಗಳಿವೆ. ಜಮ್ಮುವಿನಲ್ಲಿ 2 ಸಾವಿರ ಕುಟುಂಬಗಳಿವೆ ಎಂದು ತಿಳಿಸಿದರು.

    ನಮ್ಮ ಎಲ್ಲಾ ಧಾರ್ಮಿಕ ಆಚರಣೆಗಳು ಕಾಶ್ಮೀರದಲ್ಲೇ ನಡಿಯುತ್ತಿದ್ದವು. ಆದರೆ ನಾವು ಇಲ್ಲಿ ಬಂದ ಬಳಿಕ ಅದೆಲ್ಲವನ್ನೂ ಉಗ್ರರು ಸುಟ್ಟು ಸರ್ವನಾಶ ಮಾಡಿದ್ದಾರೆ. ನಮಗೆ ನಾವು ಹುಟ್ಟಿರುವ ಕಾಶ್ಮೀರಕ್ಕೆ ಹೋಗಲು ಇಂದಿಗೂ ಆಸೆ ಇದೆ. ಆದರೆ ಅಲ್ಲಿಯವರು ಎಲ್ಲಿ ನಮ್ಮನ್ನು ಸಾಯಿಸಿ ಬಿಡುತ್ತಾರೆ ಎನ್ನುವ ಭಯ ಇದೆ. ಸದ್ಯ ನನ್ನ ಕುಟುಂಬದಲ್ಲಿ ಹಿರಿಯರು ಹಾಗೂ ಹೆಚ್ಚಿನವರು ವಿದ್ಯಾವಂತರು ಇದ್ದರು. ಹೀಗಾಗಿ ನಾವು ಎಲ್ಲಿ ಬೇಕಾದರೂ ಹೋಗಿ ಬದುಕಲು ಸಾಧ್ಯವಾಯಿತು. ಇಲ್ಲವೆಂದರೆ ನಾವೂ ಅವರಂತೆ ಅಲ್ಲಿ ಸಾಯಬೇಕಿತ್ತು. ಇಲ್ಲವೇ ಬೇರೆಡೆಗೆ ವಲಸೆ ಹೋಗಿ ಭಿಕ್ಷೆ ಬೇಡಬೇಕಿತ್ತು ಎಂದರು.

    ಅಲ್ಲಿಂದ ಮಹಾವಲಸೆ ಕೈಗೊಂಡಿದ್ದ ಅದೆಷ್ಟೋ ಜನರಿಗೆ ಸರಿಯಾಗಿ ಊಟ, ವಸತಿ ಸಿಕ್ಕಿರಲಿಲ್ಲ. ಎಲ್ಲರೂ ಟೆಂಟ್ ಹಾಕಿಕೊಂಡು ಕಷ್ಟದ ದಿನಗಳನ್ನು ಕಳೆದಿದ್ದಾರೆ. ಸಿನಿಮಾದಲ್ಲಿ ಎಲ್ಲವನ್ನೂ ನಿಜವೇ ತೋರಿಸಿದ್ದಾರೆ ಆದರೆ ಅಲ್ಲಿನ ಕ್ರೌರ್ಯ ಇದಕ್ಕಿಂತಲೂ ಭಯಾನಕವಾಗಿತ್ತು.

  • ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಒಮರ್ ಅಬ್ದುಲ್ಲಾ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಒಮರ್ ಅಬ್ದುಲ್ಲಾ

    ಶ್ರೀನಗರ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‍ಸಿ) ಕಾರ್ಯಾಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ.

    ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆಸಿದ ರ್‍ಯಾಲಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಡಾಕ್ಯುಮೆಂಟರಿ ಸಿನಿಮಾವೋ ಅಥವಾ ಚಲನಚಿತ್ರವೋ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಸಿನಿಮಾವು ನೈಜಕತೆಯನ್ನು ಆಧರಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿ ಹಲವು ಸುಳ್ಳುಗಳನ್ನು ಬಿಂಬಿಸಲಾಗಿದೆ ಎನ್ನುವುದಂತು ಸತ್ಯ. ಎನ್‍ಸಿ ಸರ್ಕಾರ ಇತ್ತು ಎಂಬುದು ದೊಡ್ಡ ಸುಳ್ಳು. ಕಾಶ್ಮೀರಿ ಪಂಡಿತರು ತೊರೆದಾಗ 1990ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಇತ್ತು. ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಬಿಜೆಪಿ ಬೆಂಬಲಿತ ಸರ್ಕಾರವಿತ್ತು ಎಂದು ತಿಳಿಸಿದ್ದಾರೆ.

    ಕಾಶ್ಮೀರಿ ಪಂಡಿತರು ವಲಸೆ ಹೋಗಬೇಕಾದರೆ ಅವರನ್ನು ಮಾತ್ರವಲ್ಲ. ಮುಸ್ಲಿಮರು ಮತ್ತು ಸಿಖ್ಖರನ್ನು ಸಹ ಕೊಲ್ಲಲಾಗಿದೆ. ಕಾಶ್ಮೀರದಿಂದ ವಲಸೆ ಹೋದವರು ಇನ್ನೂ ಕೂಡ ಹಿಂತಿರುಗಿಲ್ಲ. ಆದರೆ ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಕರೆತರಲು ಎನ್‍ಸಿ ಪ್ರಮುಖ ಪಾತ್ರವಹಿಸಿದೆ ಮತ್ತು ಅದನ್ನು ತನ್ನ ಪ್ರಯತ್ನವನ್ನು ಮುಂದುವರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಆಸೆ ತೋರಿಸಿ ವಂಚನೆ!

  • ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

    ಹಳೆಯ ಘಟನೆ ರಿವೀಲ್ – ಬೆಂಗಳೂರಿನಲ್ಲಿ ಕಾಶ್ಮೀರ ಭವನಕ್ಕೆ ಬೆಂಕಿ ಹಚ್ಚಿ ಅಡ್ಡಿ

    ಬೆಂಗಳೂರು: ಮತಾಂಧರ ಭಯಕ್ಕೆ ನಲುಗಿ ಹೋಗಿದ್ದ ಕಾಶ್ಮೀರ ಪಂಡಿತರು ಪ್ರಾಣ ರಕ್ಷಣೆಗಾಗಿ ಒಂದೊಂದು ರಾಜ್ಯಕ್ಕೆ ತೆರಳಿದ್ದರು. ಹೀಗೆ ತೆರಳಿದ್ದ ಪಂಡಿತರು ಬೆಂಗಳೂರಿಗೂ ಆಗಮಿಸಿದ್ದರು.

    1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಬೆಂಗಳೂರಿಗೆ ಬಂದಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಗಲಭೆಯ ಬಳಿಕ ಕಾಶ್ಮೀರಿ ಪಂಡಿತರು ಬೆಂಗಳೂರಿಗೆ ಬಂದಿದ್ದರು. ಅವರಿಗಾಗಿ ಕಾಶ್ಮೀರ್ ಭವನ ಸಹ ಬೆಂಗಳೂರಿನಲ್ಲಿ ನಿರ್ಮಾಣವಾಗಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

    ವಲಸೆ ಬಂದಿದ್ದ ಪಂಡಿತರು 2000ನೇ ಇಸ್ವಿಯಲ್ಲಿ ಕಾಶ್ಮೀರಿ ಭವನ ನಿರ್ಮಾಣಕ್ಕೆ ದಿ.ಅನಂತ್ ಕುಮಾರ್‍ಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಸ್ವೀಕರಿಸಿದ ಅನಂತ್ ಕುಮಾರ್ ಅವರು ಎಸ್.ಎಂ.ಕೃಷ್ಣ ಅವರಿಗೆ ಮನವಿ ಮಾಡಿದ್ರು. 2003ರಲ್ಲಿ ಬೆಂಗಳೂರಿನ ತಿಲಕನಗರದಲ್ಲಿ ಛಿದ್ರವಾಗಿದ್ದ ಕಾಶ್ಮೀರ ಪಂಡಿತರಿಗಾಗಿ ಕಾಶ್ಮೀರ ಭವನಕ್ಕಾಗಿ ನಿವೇಶನ ಮಾಡಲಾಯಿತು ಎಂದು ತಿಳಿಸಿದರು.

    ನಿವೇಶನ ಕೊಟ್ಟಿದ್ದೇ ಶುರುವಾಯ್ತು ಕಲಹ
    ಕಾಶ್ಮೀರ ಭವನಕ್ಕೆ ಇಪ್ಪತ್ತುಸಾವಿರ ಅಡಿ ಜಾಗ ಕೊಡುತ್ತಿದ್ದಂತೆ ದೊಡ್ಡ ಗಲಭೆ ಸಂಭವಿಸಿತು. ಸ್ಥಳೀಯ ಕೆಲ ಮುಸ್ಲಿಂ ಸಂಘಟನೆಗಳು ಪ್ರತಿ ಮನೆ ಮನೆಗೂ ತೆರಳಿ ಇವರ ಭವನ ನಿರ್ಮಾಣಕ್ಕೆ ಅಡ್ಡಿಪಡಿಸುವಂತೆ ಹೇಳಿದ್ರು. ಕಾಶ್ಮೀರದಲ್ಲಿ ಪಂಡಿತರು ಮಿಲಿಟರಿ ಜೊತೆ ಗಲಾಟೆ ಮಾಡಿದ್ದಾರೆ. ಇಲ್ಲಿ ಬಂದರೆ ಬೆಂಗಳೂರು ಅವರದ್ದೇ ಆಗುತ್ತೆ ಎಂದು ತಪ್ಪು ಸಂದೇಶ ಹರಡಿಸಿದ್ದರು. ಕೊನೆಗೆ ಕೋರ್ಟ್ ಮೊರೆಯೂ ಹೋದ್ರು. ಆದರೆ ಹೈಕೋರ್ಟ್ ಸುಪ್ರೀಂಕೋರ್ಟ್‍ನಲ್ಲೂ ತೀರ್ಪು ಕಾಶ್ಮೀರ ಪಂಡಿತರ ಪರವೇ ಬಂತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

    ಕೋರ್ಟ್‍ನಲ್ಲಿ ತೀರ್ಪು ಉಲ್ಟಾ ಆಗುತ್ತಿದ್ದಂತೆ, ಕಾಶ್ಮೀರ ಭವನ ನಿರ್ಮಾಣದ ಹಂತದಲ್ಲಿ ಇರುವಾಗಲೇ ಬೆಂಕಿ ಹಚ್ಚಲಾಯ್ತು. ಬಳಿಕ ಇದೆಲ್ಲವನ್ನು ನಾನು ಸೇರಿದಂತೆ ದಿ.ಅನಂತ್ ಕುಮಾರ್, ಅಂದಿನ ದಿ.ವಿಜಯ್ ಕುಮಾರ್ ಅಲ್ಲಿ ಸ್ಥಳೀಯರ ಮನವೊಲಿಸಲಾಯಿತು. ಕೊನೆಗೆ ಅನಂತ್ ಕುಮಾರ್ 2003ರಲ್ಲಿ ಕಾಶ್ಮೀರ ಭವನವನ್ನು ಉದ್ಘಾಟನೆ ಮಾಡಿದ್ರು ಎಂದು ನೋವಿನ ಕಥೆಯನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟರು.

  • ಕನ್ನಡದಲ್ಲೂ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ಕನ್ನಡದಲ್ಲೂ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ವಿವಾದಿತ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕನ್ನಡಕ್ಕೆ ಡಬ್ ಮಾಡುವ ಪ್ಲ್ಯಾನ್ ನಡೆಯುತ್ತಿದೆ. ಈ ಕುರಿತು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಕನ್ನಡ ಅವತರಣಿಕೆಯನ್ನು ರೆಡಿ ಮಾಡಿಸಿ, ಜನರಿಗೆ ತೋರಿಸುವ ಪ್ಲ್ಯಾನ್ ಕುರಿತು ಸಿ.ಎಂ ಬಸವರಾಜ ಬೊಮ್ಮಾಯಿ ಆಪ್ತ ಸಚಿವರ ಜತೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಸಿನಿಮಾ ಮಾಡಿರುವ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ಸದಸ್ಯರಿಗೂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು. ಅಲ್ಲದೇ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡುವಂತೆ ಮನವಿ ಕೂಡ ಮಾಡಿಕೊಳ್ಳಲಾಗಿತ್ತು. ಇದೀಗ ಕರ್ನಾಟಕದ ಜನತೆಗೆ ಆ ಸಿನಿಮಾವನ್ನು ತೋರಿಸುವುದಕ್ಕಾಗಿ ಡಬ್ ಮಾಡುವ ಆಲೋಚನೆ ಮಾಡಿದೆಯಂತೆ ಕರ್ನಾಟಕದ ಭಾರತೀಯ ಜನತಾ ಪಕ್ಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಕರ್ನಾಟಕ ಸರಕಾರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಮನರಂಜನಾ ತೆರಿಗೆಯನ್ನು ತಗೆದುಕೊಳ್ಳುತ್ತಿಲ್ಲ. ಅಲ್ಲದೇ, ಸಿನಿಮಾ ನೋಡುವಂತೆ ಪ್ರೇರೇಪಿಸುವ ಮಾತುಗಳನ್ನೂ ಆಡುತ್ತಿದೆ. ಕೆಲ ಸಚಿವರು ಮತ್ತು ಜನಪ್ರತಿನಿಧಿಗಳು ಆಯಾ ಕ್ಷೇತ್ರದಲ್ಲಿ ಈ ಸಿನಿಮಾವನ್ನು ಉಚಿತವಾಗಿ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಸಿನಿಮಾ ನೋಡಬೇಕು ಎನ್ನುವ ಉದ್ದೇಶ ಬಿಜೆಪಿಯದ್ದು ಎನ್ನಲಾಗುತ್ತಿದೆ.

  • ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಜೀವ ಬೆದರಿಕೆ ‘ವೈ’ ಶ್ರೇಣಿ ಭದ್ರತೆ

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಜೀವ ಬೆದರಿಕೆ ‘ವೈ’ ಶ್ರೇಣಿ ಭದ್ರತೆ

    ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಭಾರತದ ಸರಕಾರ ‘ವೈ’ ಕೆಟಗರಿ ಭದ್ರತೆ ನೀಡಲಾಗುತ್ತಿದೆ ಎಂದು ವರದಿ ಆಗಿದೆ. ಈ ಸಿನಿಮಾ ಭಾರೀ ವಿವಾದ ಎಬ್ಬಿಸಿದ್ದು, ಇದರಿಂದಾಗಿ ನಿರ್ದೇಶಕರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವೆಯಂತೆ. ಈ ಹಿನ್ನೆಲೆಯಲ್ಲಿ ಭದ್ರತೆ ಕೊಡಲು ಸರಕಾರ ತೀರ್ಮಾನಿಸಿದೆ ಎಂದು ಸುದ್ದಿ ಸಂಸ್ಥೆ ಟ್ವಿಟ್ ಮಾಡಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ದಿ ಕಾಶ್ಮೀರ್ ಫೈಲ್ಸ್ ‍ಸಿನಿಮಾದ ಕಥೆಯು ಸತ್ಯಕ್ಕೆ ದೂರವಾಗಿದೆ ಎಂದು ಕೆಲವರು ವಾದ ಮಾಡಿದರೆ, ನೈಜ ಘಟನೆಯನ್ನೂ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಹಲವು ತಿಂಗಳ ಕಾಲ ಸಂಶೋಧನೆ ಮಾಡಿ, ಮಾಹಿತಿ ಕಲೆ ಹಾಕಿ ಚಿತ್ರಕಥೆ ಬರೆದಿದ್ದೇನೆ. ಇದರಲ್ಲಿ ಯಾವ ಅಂಶವೂ ಕಲ್ಪನೆಯಿಂದ ಮೂಡಿದ್ದಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಕೆಲವು ಕಡೆ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಇಂತಹ ಚಿತ್ರಗಳಿಂದ ಕೋಮಗಲಭೆ ಆಗುವ ಸಾಧ್ಯತೆ ಇದೆ. ಅಲ್ಲದೇ, ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನವನ್ನು ಈ ಸಿನಿಮಾ ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಕಾಶ್ಮೀರಿ ಪಂಡಿತರ ಸಾವಿನ ಲೆಕ್ಕಾಚಾರದಲ್ಲೂ ಚರ್ಚೆ ನಡೆಯುತ್ತಿದೆ. ಗತಿಸಿರುವ ಕಾಲಕ್ಕೆ ಮತ್ತೆ ಗುದ್ದಲಿ ಹಾಕಿ, ಉತ್ಕನನ ಮಾಡುವಂತಹ ಕೆಲಸಗಳೂ ನಡೆಯುತ್ತಿವೆ. ಹೀಗಾಗಿ ನಿರ್ದೇಶಕರಿಗೆ ಭದ್ರತೆ ನೀಡಬೇಕು ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ‘ವೈ’ ಶ್ರೇಣಿ ಭದ್ರತೆ ನೀಡಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.

  • ‘ದಿ ಕಾಶ್ಮೀರ್ ಫೈಲ್ಸ್’ ತಯಾರಕರು ಭಯೋತ್ಪಾದಕರ ಸಂಪರ್ಕ ಹೊಂದಿದ್ದಾರೆ: ಜಿತನ್ ರಾಮ್ ಮಾಂಝಿ ಆರೋಪ

    ‘ದಿ ಕಾಶ್ಮೀರ್ ಫೈಲ್ಸ್’ ತಯಾರಕರು ಭಯೋತ್ಪಾದಕರ ಸಂಪರ್ಕ ಹೊಂದಿದ್ದಾರೆ: ಜಿತನ್ ರಾಮ್ ಮಾಂಝಿ ಆರೋಪ

    ಪಾಟ್ನಾ: ಎನ್‍ಡಿಎ ಸರ್ಕಾರವು ಬಿಹಾರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದೆ. ಈ ಬೆನ್ನೆಲ್ಲೇ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳದಂತೆ ಅವರಲ್ಲಿ ಭಯದ ಭಾವನೆ ಹುಟ್ಟಿಸಲು ಭಯೋತ್ಪಾದಕ ಸಂಘಟನೆಗಳು ಮಾಡಿರುವ ಪಿತೂರಿಯಾಗಿರಬಹುದು ಎಂದು ಆರೋಪಿಸಿದ್ದಾರೆ.

    1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತಂತೆ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಚಿತ್ರದ ನಿರ್ಮಾಪಕ ಮತ್ತು ಭಯೋತ್ಪಾದಕ ಸಂಘಟನೆಗಳು ಸಂಪರ್ಕ ಹೊಂದಿರಬಹುದು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಾಶ್ಮೀರಿ ಬ್ರಾಹ್ಮಣರಲ್ಲಿ ಭಯದ ವಾತಾವರಣ ಸೃಷ್ಟಿಸಲು ಭಯೋತ್ಪದಕರು ಮಾಡಿರುವ ಪಿತೂರಿಯಾಗಿರಬಹುದು. ಇದರಿಂದಾಗಿ ಅವರು ಕಾಶ್ಮೀರಕ್ಕೆ ಮತ್ತೆ ಬರಬಾರದು ಎಂದು ಪ್ರಯತ್ನಿಸಿದ್ದಾರೆ. ಹಾಗಾಗಿ “ದಿ ಕಾಶ್ಮೀರ್ ಫೈಲ್ಸ್ ಚಿತ್ರತಂಡ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ:  ಮಸಾಜ್ ಮಾಡೋ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

    ಈ ಚಿತ್ರಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸಿನಿಮಾ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

  • ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

    ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಚಿತ್ರಮಂದಿರಕ್ಕೆ ಬಂದಾಗಿನಿಂದ ಇದರ ಬಗ್ಗೆ ಒಂದಲ್ಲ ಒಂದು ವಿವಾದ, ಸುದ್ದಿ ಕೇಳಿ ಬರುತ್ತಲೇ ಇದೆ. ಕಾಶ್ಮೀರದಲ್ಲಿ 1990ರ ಅವಧಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಖ್ಯಾತ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

    ಸುದರ್ಶನ್ ಟ್ವಿಟ್ಟರ್‌ನಲ್ಲಿ, ಪುರಿ ಬೀಚ್‍ನಲ್ಲಿ ನನ್ನ ಸ್ಯಾಂಡ್ಆರ್ಟ್ ಎಂದು ಬರೆದು ‘ದಿ ಕಾಶ್ಮೀರ್ ಫೈಲ್ಸ್’ 30 ವರ್ಷಗಳ ನಂತರ ಎಂದು ಟ್ವೀಟ್ ಮಾಡಿದ್ದಾರೆ. ಸುದರ್ಶನ್ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ, ಕಾಶ್ಮೀರ ಮ್ಯಾಪ್‌ಗೆ ಕೆಂಪು ಬಣ್ಣ ಹಾಕಿದ್ದು, ‘ದಿ ಕಾಶ್ಮೀರ್ ಫೈಲ್ಸ್’ 30 ವರ್ಷಗಳ ನಂತರ ಎಂದು ಬರೆದಿದ್ದಾರೆ. ಅಲ್ಲದೇ ಮ್ಯಾಪ್ ಅಕ್ಕ-ಪಕ್ಕದಲ್ಲಿ ಕಾಶ್ಮೀರಿ ಹೋರಾಟದಲ್ಲಿ ಪ್ರಾಣ ಕೊಟ್ಟವರ ಭಾವಚಿತ್ರವನ್ನು ಬಿಡಿಸಿದ್ದಾರೆ. ಇದನ್ನೂ ಓದಿ: ಹೆಂಡತಿ, ಮೊಮ್ಮಗನ ಮುತ್ತಿಗೆ ಉಬ್ಬಿಹೋದ ಜಗ್ಗೇಶ್

    ಈ ಸ್ಯಾಂಡ್ ಆರ್ಟ್ ಮೂಲಕ ಸುದರ್ಶನ್ 30 ವರ್ಷಗಳ ಹಿಂದೆ ಗತಿಸಿದ್ದ ಕರಾಳದಿನವನ್ನು ನೆನಪಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ‘ದಿ ಕಾಶ್ಮೀರ್ ಫೈಲ್ಸ್’ ಮೂವೀ ಜನರಲ್ಲಿ ಎಷ್ಟುರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಸಿನಿಮಾವನ್ನು ಭಾರತೀಯರು ಕಡ್ಡಾಯವಾಗಿ ನೋಡಬೇಕು ಎಂದು ಸೆಲೆಬ್ರಿಟಿಗಳು ಸೇರಿ ರಾಜಕೀಯ ಮುಖಂಡರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಾಶ್ಮೀರಿ ಪಂಡಿತರು ಹೇಗೆ ತಮ್ಮ ತನವನ್ನು ಉಳಿಸಿಕೊಳ್ಳಲು ಹೋರಾಡಿದರು. ಸಮುದಾಯವೊಂದು ಕಾಶ್ಮೀರಿ ಪಂಡಿತರನ್ನು ಹೇಗೆ ಅಮಾನೀಯವಾಗಿ ಕೊಲ್ಲುತ್ತಿದ್ದರು ಎಂಬುದನ್ನು ಸೂಕ್ಷ್ಮವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಕೆಲವರು ಈ ಸಿನಿಮಾ ನೋಡಿ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದು ನಿಜವೆಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

  • ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

    ದಿ ಕಾಶ್ಮೀರ್ ಫೈಲ್ಸ್ – ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ: ಸೋಮಣ್ಣ

    – ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ

    ಚಾಮರಾಜನಗರ: ದೇಶಾದ್ಯಂತ ಸಂಚಲನ ಮೂಡಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಎಲ್ಲ ರಾಜಕೀಯ ಮುಖಂಡರು ನೋಡುತ್ತಿದ್ದು, ಸಿನಿಮಾ ನೋಡಬೇಕೆಂದು ಜನರಿಗೆ, ನೌಕರರಿಗೆ ಉತ್ತೇಜನವನ್ನು ಕೊಡುತ್ತಿದ್ದಾರೆ. ಅಂತೆಯೇ ಇದೀಗ ಸಚಿವ ವಿ. ಸೋಮಣ್ಣ ಕೂಡ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಚ್ಚಿ ಹೋಗಿರುವ ಇತಿಹಾಸವನ್ನು ಜನರಿಗೆ ತಿಳಿಸಿಕೊಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅಂತಹ ಘಟನೆಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ಚಿತ್ರ ತಯಾರಾಗಿದೆ. ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

    ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾನೊಬ್ಬ ಎಲ್ ಬೋರ್ಡ್. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಪಠ್ಯ ಪುಸ್ತಕ ರಚನೆಗೆ ಸಮಿತಿಯಿದೆ. ಸಮಿತಿ ಅವರು ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.

    ವಂಶ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಪ್ರಧಾನಿ ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ನನ್ನ ಮಗನಿಗೆ ಅದೃಷ್ಟ ಇದ್ರೆ ಶಾಸಕನಾಗುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..? 

  • ದಿ ಕಾಶ್ಮೀರ್ ಫೈಲ್ಸ್ ನನ್ನದೇ ಕುಟುಂಬದ ಕಥೆಯಂತಿತ್ತು: ಸತ್ಯ ಘಟನೆ ಹಂಚಿಕೊಂಡ ಬಾಲಿವುಡ್ ನಟಿ

    ದಿ ಕಾಶ್ಮೀರ್ ಫೈಲ್ಸ್ ನನ್ನದೇ ಕುಟುಂಬದ ಕಥೆಯಂತಿತ್ತು: ಸತ್ಯ ಘಟನೆ ಹಂಚಿಕೊಂಡ ಬಾಲಿವುಡ್ ನಟಿ

    ದಿ ಕಾಶೀರ್ ಫೈಲ್ಸ್ ಸಿನಿಮಾ ಬಂದ ನಂತರ ಕಾಶ್ಮೀರಿ ಕಣಿವೆಯ ಒಂದೊಂದೇ ದುರಂತ ಕಥೆಗಳು ಆಚೆ ಬರುತ್ತಿವೆ. ಕಾಶ್ಮೀರ ಪಂಡಿತರ ವಲಸೆ ಮತ್ತು ಮಾರಣಹೋಮದ ಕಥೆಗಳನ್ನು ಸಾಮಾನ್ಯರಲ್ಲ, ಸಿಲೆಬ್ರಿಟಿಗಳು ಕೂಡ ಹೇಳಿಕೊಳ್ಳುತ್ತಿದ್ದಾರೆ. ಅದೂ, ತಮ್ಮ ಕುಟುಂಬದಲ್ಲಿ ನಡೆದ ಘಟನೆಗಳನ್ನು ಎನ್ನುವುದು ವಿಶೇಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ನಾಲ್ಕು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಕುಟುಂಬಕ್ಕೆ ಆದ ದೌರ್ಜನ್ಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಮತ್ತೋರ್ವ ಬಾಲಿವುಡ್ ನಟಿ ಸಂದೀಪ ಧರ್ ಕೂಡ ತಮ್ಮ ಜೀವನದಲ್ಲಿ ನಡೆದ ಆ ದುರಂತದ ಕಥೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಗುಲಾಬಿ ಹೂವನ್ನು ನಾನು ಕೇಳಿದೆ

    ಎಲ್ಲಿ ನಿನ್ನ ಪರಿಮಳ ಎಂದು

    ಅದು ವಸಂತ ಮಾಸದತ್ತ ಬೆಟ್ಟು ಮಾಡಿತು…

    ನಾನು ಮತ್ತೆ ವಸಂತಕ್ಕೆ ಪ್ರಶ್ನೆ ಮಾಡಿದೆ

    ನಿನ್ನ ಹಣೆ ಮೇಲೇಕೆ ಗೆರೆಗಳು ಮೂಡಿದ್ದು? ಎಂದು

    ಅದು ದುಃಖಿಸುತ್ತಲೇ ಹೇಳಿತು

    ನನ್ನ ಗಾಯಗಳಿಗೆ ಉಪ್ಪು ಹಾಕಲಾಗಿದೆ ಎಂದು

    ನಾನು ಆ ಅರಳಿದ ತೋಟವನ್ನು ಹಾಗೆಯೇ ಬಿಟ್ಟುಬಿಟ್ಟೆ

    ಈಗ ಗುರಿ ಇಲ್ಲದೇ ಅಲೆದಾಡುತ್ತಿದ್ದೇನೆ

    ಹೀಗೆ ಭಾವನಾತ್ಮಕವಾಗಿ ಕವಿತೆಯ ಸಾಲುಗಳನ್ನು ಬರೆದುಕೊಂಡಿರುವ ಸಂದೀಪ ಧರ್, ತನ್ನ ಕುಟುಂಬಕ್ಕಾದ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ, ತೊಂಬತ್ತರ ದಶಕದಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ತಮ್ಮ ಮನೆ ಹೇಗಿತ್ತೆಂದು ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    “ಅವರು ಹೇಳಿದರು, ಕುಟುಂಬದ ಸಮೇತ ಕಾಶ್ಮೀರ ತೊರೆಯಬೇಕೆಂದು. ರಾತ್ರೋರಾತ್ರಿ ಹೋಗುವುದು ಎಲ್ಲಿಗೆ? ಅದೂ ನಮ್ಮದೇ ನೆಲೆಬಿಟ್ಟು. ಹಿಂಸೆಗೆ ಹೊರಡಲೇಬೇಕಿತ್ತು. ಅದಕ್ಕಾಗಿ ಅಪ್ಪ ಟ್ರಕ್ ವೊಂದರ ಸಹಾಯ ಪಡೆದು. ಟ್ರಕ್ ನಲ್ಲಿ ಬಚ್ಚಿಟ್ಟುಕೊಂಡೇ ಹೋಗುವುದು ಅನಿವಾರ್ಯವಾಗಿತ್ತು. ನನ್ನ ತಂಗಿಯನ್ನು ಕಾಪಾಡಿಕೊಳ್ಳಲು ನನ್ನ ತಂದೆ ಟ್ರಕ್ ಸೀಟ್ ಕೆಳಗೆ ಬಚ್ಚಿಟ್ಟಿದ್ದರು. ಮಧ್ಯೆ ರಾತ್ರಿ ಹೀಗೆ ಹೋಗುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಬಲ್ಲೆ.  ದಿ ಕಾಶ್ಮೀರ್ ಫೈಲ್ಸ್ ನಲ್ಲೂ ಇಂತಹ ದೃಶ್ಯಗಳಿವೆ. ಅದನ್ನು ನೋಡಿ ನನಗೆ ಜೀವವೇ ಹೋದಂತಾಯಿತು. ತನ್ನ ತವರು ಮನೆ ಬಗ್ಗೆ ಸದಾ ನೆನಪಿಸಿಕೊಳ್ಳುತ್ತಿದ್ದ ನನ್ನ ಅಜ್ಜಿ ತೀರಿಹೋದರು. ಅದೊಂದು ನರಕಸದೃಶ್ಯ ಬದುಕು” ಎಂದು ಸಂದೀಪ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ಚಿತ್ರವನ್ನು ಮಾಡಿ, ಜಗತ್ತಿಗೆ ಸತ್ಯವನ್ನು ತೋರಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾಗಳನ್ನೂ ಅವರು ತಿಳಿಸಿದ್ದಾರೆ.