Tag: The Great Khali

  • ಟೋಲ್‌ ಸಿಬ್ಬಂದಿ ಜೊತೆ WWE ಖ್ಯಾತಿಯ ಗ್ರೇಟ್‌ ಖಲಿ ಗಲಾಟೆ – ವೀಡಿಯೋ ವೈರಲ್‌

    ಟೋಲ್‌ ಸಿಬ್ಬಂದಿ ಜೊತೆ WWE ಖ್ಯಾತಿಯ ಗ್ರೇಟ್‌ ಖಲಿ ಗಲಾಟೆ – ವೀಡಿಯೋ ವೈರಲ್‌

    ಛತ್ತೀಸಗಢ: ಪಂಜಾಬ್‌ನ ಲುಧಿಯಾನದ ಟೋಲ್ ಪ್ಲಾಜಾದ ಸಿಬ್ಬಂದಿಯೊಂದಿಗೆ ‘ದಿ ಗ್ರೇಟ್ ಖಲಿ’ ಎಂದೇ ಜನಪ್ರಿಯವಾಗಿರುವ WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಖಲಿ ತನ್ನ ಕಾರಿನಲ್ಲಿ ಲುಧಿಯಾನ ಮೂಲಕ ಕರ್ನಾಲ್‌ಗೆ ಪ್ರಯಾಣಿಸುತ್ತಿದ್ದಾಗ ಪಾಣಿಪತ್-ಜಲಂಧರ್ ರಾಷ್ಟ್ರೀಯ ಹೆದ್ದಾರಿಯ ಲಾಧೋವಲ್‌ನಲ್ಲಿ ಈ ಘಟನೆ ನಡೆದಿದೆ. ಐಡಿ ಕಾರ್ಡ್‌ ತೋರಿಸುವಂತೆ ಕೇಳಿದಾಗ ತಮ್ಮ ಸಹೋದ್ಯೋಗಿಯೊಬ್ಬರಿಗೆ ಕುಸ್ತಿಪಟು ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೋಲ್ ಪ್ಲಾಜಾ ಸಿಬ್ಬಂದಿ ಆರೋಪಿಸಿದ್ದಾರೆ. ಇದನ್ನೂ ಓದಿ: ಸಿಎಂಗೆ ಕಳಪೆ ಗುಣಮಟ್ಟದ ಟೀ ನೀಡಿದ್ದ ಅಧಿಕಾರಿಗೆ ಶೋಕಾಸ್ ನೋಟಿಸ್

    ನಮ್ಮ ಸಿಬ್ಬಂದಿ ಕ್ಯಾಮೆರಾದಲ್ಲಿ ಘಟನೆಯನ್ನು ರೆಕಾರ್ಡ್ ಮಾಡುವಾಗ, ಖಲಿ ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಖಲಿ ಅವರು ಟೋಲ್‌ನ ಗೇಟ್‌ ತೆಗೆಯುವಂತೆ ಧಮ್ಕಿ ಹಾಕಿದ್ದಾರೆ. ನಮ್ಮ ಸಿಬ್ಬಂದಿಗೆ ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ ಎಂದು ದೂರಿದ್ದಾರೆ. ಗಲಾಟೆ ಸಂಬಂಧದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಆರೋಪ ಕುರಿತು ಪ್ರತಿಕ್ರಿಯಿಸಿರುವ ಖಲಿ, ಪಂಜಾಬ್‌ನ ಫಿಲ್ಲೌರ್‌ನ ಟೋಲ್ ಸಿಬ್ಬಂದಿ ನನ್ನ ಕಾರನ್ನು ನಿಲ್ಲಿಸಿ ಸೆಲ್ಫಿಗಾಗಿ ಅನುಚಿತವಾಗಿ ವರ್ತಿಸಿದರು. ನಾನು ಸೆಲ್ಫಿಯನ್ನು ನಿರಾಕರಿಸಿದಾಗ ಅವರು ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನರೇಟರ್ ಆಫ್ ಆಗಿದ್ದಕ್ಕೆ ಮದುವೆನೇ ಕ್ಯಾನ್ಸಲ್ ಮಾಡಿದ್ಲು

    ನಾನೊಬ್ಬ ಸೆಲಿಬ್ರಿಟಿ. ಸೆಲಿಬ್ರಿಟಿ ಯಾರಿಗಾದರೂ ಕಪಾಳಮೋಕ್ಷ ಮಾಡಬಹುದೇ? ನಾನು ಅದರ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಅವರು ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ ನಂತರವೇ ನಾನು ಕಾರಿನಿಂದ ಇಳಿದು ಗೇಟ್‌ ತೆಗೆಯುವಂತೆ ಹೇಳಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ದಿ ಗ್ರೇಟ್ ಖಲಿ’ ಆಗಲು ಹೊರಟ್ಟಿದ್ದಾರೆ ಸುಶಾಂತ್ ಸಿಂಗ್ ರಜಪೂತ್

    ‘ದಿ ಗ್ರೇಟ್ ಖಲಿ’ ಆಗಲು ಹೊರಟ್ಟಿದ್ದಾರೆ ಸುಶಾಂತ್ ಸಿಂಗ್ ರಜಪೂತ್

    ಮುಂಬೈ: ಬಾಲಿವುಡ್‍ನಲ್ಲಿ ಕ್ರೀಡಾತಾರೆಗಳ ಆತ್ಮಚರಿತ್ರೆಗಳನ್ನು ಸಿನಿಮಾವನ್ನಾಗಿ ಮಾಡೋದು ಟ್ರೆಂಡ್ ಆಗಿದೆ. ಎಂ.ಎಸ್ ಧೋನಿ ಅವರ ಆತ್ಮಚರಿತ್ರೆಯಲ್ಲಿ ನಟಿಸಿದ ನಂತರ ಸುಶಾಂತ್ ಸಿಂಗ್ ರಾಜ್‍ಪುತ್ ‘ದಿ ಗ್ರೇಟ್ ಖಲಿ’ಯಾಗಿ ಕಾಣಿಸಿಕೊಳ್ಳಲಿದ್ದಾರೆ.

    ವರದಿಗಳ ಪ್ರಕಾರ ಸುಶಾಂತ್ ಸಿಂಗ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕುಸ್ತಿಪಟು ಆದ ದಲೀಪ್ ಸಿಂಗ್ ರಾಣಾ (ದಿ ಗ್ರೇಟ್ ಖಲಿ) ಅವರು ತಮ್ಮ ಆತ್ಮಚರಿತ್ರೆಯನ್ನು ಸಿನಿಮಾವನ್ನಾಗಿ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ಖಲಿ 7.1 ಅಡಿ ಉದ್ದವಿದ್ದು 157 ಕೆ.ಜಿ ತೂಕವನ್ನು ಹೊಂದಿದ್ದಾರೆ. ಸುಶಾಂತ್‍ಗೆ ಹೇಗೆ ಅವರನ್ನು ಹೋಲುತ್ತಾರೆ ಎಂದು ಎಲ್ಲರಿಗೂ ಅನುಮಾನ ಶುರುವಾಗಿದೆ.

    ಎಂ.ಎಸ್ ಧೋನಿ ಚಿತ್ರದಲ್ಲಿ ಸುಶಾಂತ್ ಲುಕ್, ವಾಕಿಂಗ್ ಸ್ಟೈಲ್ ಎಲ್ಲಾ ಧೋನಿ ರೀತಿಯಲ್ಲೇ ಮಾಡಿದ್ದರು. ಸುಶಾಂತ್ ಮತ್ತು ಖಲಿ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಖಲಿ ಅವರ ಹಾಗೆ ಉದ್ದ ಹಾಗೂ ದಪ್ಪ ಕಾಣಲು ವಿಎಫ್‍ಎಕ್ಸ್ ಬಳಸಲು ಚಿತ್ರ ತಂಡ ಮುಂದಾಗಿದೆ. ಸುಶಾಂತ್ ರಜಪುತ್ ಬಿಟ್ಟರೆ ಖಲಿ ಪಾತ್ರವನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಸಿನಿ ಮಾರುಕಟ್ಟೆಯ ತಜ್ಞರೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

    ಸುಶಾಂತ್ ಈ ಚಿತ್ರ ಒಪ್ಪಿಕೊಂಡ ನಂತರ ಇದು ಅವರ ಮೂರನೇ ಆತ್ಮಚರಿತ್ರೆಯ ಚಿತ್ರವಾಗುತ್ತದೆ. ಮೊದಲು ಧೋನಿ ಚಿತ್ರ ಬಿಡುಗಡೆ ಆಗಿತ್ತು. ಈಗ ಪ್ಯಾರಾ ಒಲಿಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದ ಮುರಳಿಕಾಂತ್ ಪೇಟ್‍ಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಂತರ ಖಲಿ ಚಿತ್ರ ಅವರ ಮೂರನೇ ಆತ್ಮಚರಿತ್ರೆಯ ಸಿನಿಮಾವಾಗಿರುತ್ತದೆ.

    ಈ ಮೊದಲು ಬಾಗ್ ಮಿಲ್ಕಾ ಬಾಗ್, ಮೇರಿ ಕೋಮ್, ಎಂ.ಎಸ್ ಧೋನಿ: ದಿ ಅನ್‍ಟೋಲ್ಡ್ ಸ್ಟೋರಿ, ದಂಗಲ್ ಮತ್ತು ಸಚಿನ್-ಎ ಬಿಲಿಯನ್ ಡ್ರೀಮ್ಸ್ ಚಿತ್ರದಲ್ಲಿ ಕ್ರೀಡಾಪಟುಗಳ ಆತ್ಮಚರಿತ್ರೆ ಸಿನಿಮಾವಾಗಿ ಹೊರ ಬಂದಿತ್ತು.