Tag: the girl friend

  • ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ದಿ ಗರ್ಲ್ಫ್ರೆಂಡ್’. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್ಟೈನ್ಮೆಂಟ್ ಬ್ಯಾನರ್ಗಳು ಜಂಟಿಯಾಗಿ ನಿರ್ಮಿಸುತ್ತಿದ್ದು, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ ಸುಂದರ ಪ್ರೇಮಕಥೆಯ `ದಿ ಗರ್ಲ್ ಫ್ರೆಂಡ್ʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.ಇದನ್ನೂ ಓದಿ:ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

    `ದಿ ಗರ್ಲ್ ಫ್ರೆಂಡ್ʼ ಸ್ವರವೇ ಎಂಬ ಮೊದಲ ಹಾಡು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹೇಶಮ್ ಅಬ್ದುಲ್ ವಹಾಬ್ ಹಾಡಿಗೆ ಅದ್ಭುತ ಮ್ಯೂಸಿಕ್ ನೀಡುವುದರ ಜೊತೆ ಧ್ವನಿಯಾಗಿದ್ದಾರೆ. ನಾಗಾರ್ಜುನ್ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಡಿನ ಮೋಡಿಗೆ ಮತ್ತಷ್ಟು ಮೆರುಗು ನೀಡಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ದಿ ಗರ್ಲ್ಫ್ರೆಂಡ್’ ಶೀಘ್ರದಲ್ಲೇ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

    ರಾಹುಲ್ ರವೀಂದ್ರನ್ ನಿರ್ದೇಶನದ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ದೀಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಟೈಟಲ್ಲೇ ಹೇಳುವಂತೆ ಇದು ಲವ್ ಸ್ಟೋರಿ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ದಿ ಗರ್ಲ್ಫ್ರೆಂಡ್’ ಸಿನಿಮಾ ತೆರೆಗೆ ಬರಲಿದೆ. ಕೃಷ್ಣನ್ ವಸಂತ್ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ.ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

     

  • ರಶ್ಮಿಕಾರನ್ನು ಗರ್ಲ್‌ಫ್ರೆಂಡ್ ಆಗಿ ಪರಿಚಯಿಸಲಿದ್ದಾರೆ ವಿಜಯ್ ದೇವರಕೊಂಡ

    ರಶ್ಮಿಕಾರನ್ನು ಗರ್ಲ್‌ಫ್ರೆಂಡ್ ಆಗಿ ಪರಿಚಯಿಸಲಿದ್ದಾರೆ ವಿಜಯ್ ದೇವರಕೊಂಡ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ 2’ (Pushpa 2) ಸಿನಿಮಾದ ಸಕ್ಸಸ್ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಶ್ಮಿಕಾರನ್ನು ಗರ್ಲ್‌ಫ್ರೆಂಡ್ ಆಗಿ ಪರಿಚಯಿಸಲು ಮುಹೂರ್ತ ಫಿಕ್ಸ್ ಆಗಿದೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ‘ಪುಷ್ಪ 2’ ಬಳಿಕ ರಶ್ಮಿಕಾ ಮಂದಣ್ಣ ನಟನೆಯ ಮುಂದಿನ ಸಿನಿಮಾ ಅಪ್‌ಡೇಟ್‌ವೊಂದು ಸಿಕ್ಕಿದೆ. ರಶ್ಮಿಕಾ ನಟನೆಯ ‘ದಿ ಗರ್ಲ್‌ಫ್ರೆಂಡ್‌’ (The Girlfriend) ಸಿನಿಮಾದ ಟೀಸರ್ ರಿಲೀಸ್ ಅನ್ನು ವಿಜಯ್ ದೇವರಕೊಂಡ (Vijay Devarakonda) ಬಿಡುಗಡೆ ಮಾಡಲಿದ್ದಾರೆ. ಡಿ.9ರಂದು ಬೆಳಗ್ಗೆ 11:07ಕ್ಕೆ ಟೀಸರ್ ಅನ್ನು ವಿಜಯ್ ರಿವೀಲ್ ಮಾಡಲಿದ್ದಾರೆ.

     

    View this post on Instagram

     

    A post shared by Geetha Arts (@geethaarts)

    ನಿರ್ಮಾಪಕ ಅಲ್ಲು ಅರವಿಂದ್ ಅವರು ‘ದಿ ಗರ್ಲ್‌ಫ್ರೆಂಡ್‌’ ಚಿತ್ರವನ್ನು ಬಹುಭಾಷೆಗಳಲ್ಲಿ ನಿರ್ಮಾಣ ಮಾಡಲಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಪವರ್‌ಫುಲ್ ರೋಲ್‌ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ರಶ್ಮಿಕಾ ಮಂದಣ್ಣ ಈಗ ದೀಕ್ಷಿತ್ ಶೆಟ್ಟಿ ‘ಗರ್ಲ್‌ಫ್ರೆಂಡ್‌’

    ರಶ್ಮಿಕಾ ಮಂದಣ್ಣ ಈಗ ದೀಕ್ಷಿತ್ ಶೆಟ್ಟಿ ‘ಗರ್ಲ್‌ಫ್ರೆಂಡ್‌’

    ಬಾಲಿವುಡ್ ಮತ್ತು ಟಾಲಿವುಡ್ ಎಲ್ಲೆಲ್ಲೂ ರಶ್ಮಿಕಾ ಮಂದಣ್ಣ (Rashmika Mandanna) ಹೆಸರು ರಾರಾಜಿಸುತ್ತಿದೆ. ‘ಅನಿಮಲ್’ (Animal Film) ಚಿತ್ರದ ಸಕ್ಸಸ್ ನಂತರ ಹೊಸ ಸಿನಿಮಾದಲ್ಲಿ ನಟಿಸೋಕೆ ರೆಡಿಯಾಗಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿಗೆ ‘ಗರ್ಲ್‌ಫ್ರೆಂಡ್‌’ ಆಗಿ ರಶ್ಮಿಕಾ ಬಣ್ಣ ಹಚ್ತಿದ್ದಾರೆ.

    ‘ಅನಿಮಲ್’ (Animal) ಸಿನಿಮಾ 500 ಕೋಟಿ ರೂ. ಕ್ಲಬ್ ಮಾಡುತ್ತ ಮುನ್ನುಗ್ಗುತ್ತಿದೆ. ಬಾಲಿವುಡ್‌ನಲ್ಲಿ ಅದೃಷ್ಟ ಖುಲಾಯಿಸುತ್ತಿದ್ದಂತೆ ಗರ್ಲ್‌ಫ್ರೆಂಡ್‌ ಆಗೋಕೆ ಸಜ್ಜಾಗಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನ ರೂವಾರಿ ಅಲ್ಲು ಅರವಿಂದ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ ದಿ ಗರ್ಲ್‌ಫ್ರೆಂಡ್‌’ (The Girlfriend) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:Bigg Boss Telugu 7: ಶೋನಲ್ಲಿ ಕನ್ನಡ ಮಾತನಾಡಿದ ಪಟಾಕಿ ಪೋರ

    ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ರಾಹುಲ್ ರವಿಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾಗೆ ಹೀರೋ ಆಗಿ ದೀಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಮೊದಲ ದಿನದ ಶೂಟಿಂಗ್‌ನಲ್ಲಿ ರಶ್ಮಿಕಾ ಜೊತೆ ದೀಕ್ಷಿತ್ ಶೆಟ್ಟಿ ಕೂಡ ಭಾಗಿಯಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಶ್ಮಿಕಾ- ದೀಕ್ಷಿತ್ (Dheekshith Shetty) ಇಬ್ಬರ ಪಾತ್ರಕ್ಕೂ ಬಹಳಷ್ಟು ಪ್ರಾಮುಖ್ಯತೆ ಇದ್ದು, ಈ ಹೊಸ ಜೋಡಿ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದರ ಬಗ್ಗೆ ಈಗಾಗಲೇ ಕೌತುಕ ನಿರ್ಮಾಣ ಮಾಡಿದೆ.

    ರಶ್ಮಿಕಾ ಪಾತ್ರದ ಸುತ್ತ ಸುತ್ತುವ ಈ ಕಥೆಗಾಗಿ ನಟಿ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ. ಚಿತ್ರದಲ್ಲಿ ಅವರಿಗೆ ಫೈಟಿಂಗ್ ಸೀನ್ಸ್ ಕೂಡ ಇದೆ. ಮೊದಲ 20 ದಿನದ ಶೂಟಿಂಗ್‌ನಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳ ಶೂಟ್ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರನ್ನ ಸಾಹಸ ದೃಶ್ಯಗಳಲ್ಲಿಯೂ ಕಣ್ತುಂಬಿಕೊಳ್ಳಬಹುದು. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್‌ ಸಿಗಲಿದೆ.

  • ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಫಸ್ಟ್ ಲುಕ್ ಔಟ್

    ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಫಸ್ಟ್ ಲುಕ್ ಔಟ್

    ತೆಲುಗು- ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ‘ಗರ್ಲ್‌ಫ್ರೆಂಡ್’ ಸ್ಟೋರಿ ಹೇಳೋದಕ್ಕೆ ರೆಡಿಯಾಗಿದ್ದಾರೆ. ತೆಲುಗಿನ ಚಿತ್ರದ ಗರ್ಲ್‌ಫ್ರೆಂಡ್ ಪ್ರೋಮೋಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಇದನ್ನೂ ಓದಿ:ಕಾವೇರಿ ನೀರಿಗಾಗಿ ಸರ್ಕಾರಕ್ಕೆ ನಾವು ಒತ್ತಡ ತರಬೇಕು- ಶಿವಣ್ಣ

    ರಶ್ಮಿಕಾ ಮಂದಣ್ಣ ‘ದಿ ಗರ್ಲ್‌ಫ್ರೆಂಡ್’ (The Girlfriend) ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮಹಿಳಾ ಪ್ರದಾನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಸಣ್ಣ ಪ್ರೋಮೋ ಒಂದು ಈಗಾಗಲೇ ಬಿಡುಗಡೆ ಆಗಿದೆ. ಪ್ರೋಮೋ ಸಹ ಕುತೂಹಲ ಮೂಡಿಸುತ್ತಿದೆ. ನೀರಿನಲ್ಲಿ ಮುಳುಗಿರುವ ರಶ್ಮಿಕಾ ಮಂದಣ್ಣ ನಗುತ್ತಿರುತ್ತಾರೆ, ಆದರೆ ಹಠಾತ್ತನೆ ಬೇಸರದ ಮುಖಚಹರೆ ಪ್ರದರ್ಶಿಸುತ್ತಾರೆ, ಆತ್ಮಹತ್ಯೆಗೆ ಯತ್ನಿಸುತ್ತಿರುವಂತೆ ಕಣ್ಣು ಮುಚ್ಚಿಬಿಡುತ್ತಾರೆ. ರಶ್ಮಿಕಾ ನೀರಿಗೆ ಇಳಿದಿದ್ದು ಏಕೆ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ರಶ್ಮಿಕಾರನ್ನು ಕಾಪಾಡುವವರು ಯಾರು? ಇನ್ನೂ ಹಲವು ಪ್ರಶ್ನೆಗಳನ್ನು ಈ ಪ್ರೋಮೋ ಮೂಡಿಸುತ್ತಿದೆ.

    ಸಿನಿಮಾದ ಪ್ರೋಮೋ ನೋಡಿದರೆ ಇದು ಮಹಿಳಾ ಪ್ರಧಾನ ಸಿನಿಮಾ ಎಂಬುದು ಖಾತ್ರಿ ಆಗುತ್ತಿದೆ. ತಮ್ಮ ಬಾಯ್‌ಫ್ರೆಂಡ್ ಜೊತೆಗಿನ ಪ್ರೇಮ ಸಂಬಂಧದಿಂದ ಗರ್ಲ್‌ಫ್ರೆಂಡ್ ರಶ್ಮಿಕಾ ಮಂದಣ್ಣ ಎದುರಿಸುವ ಭಾವನೆಗಳ ಏರಿಳಿತ, ಸಮಸ್ಯೆಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ರಶ್ಮಿಕಾ ಎಕ್ಸ್‌ಪ್ರೆಶನ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಹುಲ್ ರವೀಂದ್ರನ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಅಲ್ಲು ಅರವಿಂದ್ ಪ್ರೆಸೆಂಟ್ ಮಾಡುತ್ತಿದ್ದು, ವಿದ್ಯಾ ಕೊಪ್ಪಿನೇಡಿ- ಧೀರಜ್ ಮೊಗಿಲಿನೇನಿ ಅವರುಗಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ಹೃದಯಂ’ ಚಿತ್ರದ ಖ್ಯಾತಿಯ ಮಲಯಾಳಂ ಸಂಗೀತ ನಿರ್ದೇಶನ ಹೆಷಾಮ್ ಅಬ್ದುಲ್ ವಹಾಬ್ ಅವರು ಸಂಗೀತ ನೀಡುತ್ತಿದ್ದಾರೆ.

    ಇದೇ ಡಿ.1ಕ್ಕೆ ಅನಿಮಲ್ (Animal) ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ರಣ್‌ಬೀರ್‌ಗೆ ಜೋಡಿಯಾಗಿ ಬರುತ್ತಿದ್ದಾರೆ. ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]