Tag: the devil film

  • ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್

    ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದ ಡೆವಿಲ್’ (The Devil) ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಸಿಗರೇಟ್ ಹಿಡಿದು ಅಂಬಿ ಕನ್ವರ್ ಲಾಲ್ ಗೆಟಪ್‌ನಲ್ಲಿ ದರ್ಶನ್ (Darshan) ಎಂಟ್ರಿ ಕೊಟ್ಟಿದ್ದಾರೆ. ದರ್ಶನ್‌ ಪಾತ್ರದ ಹೊಸ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಇದನ್ನೂ ಓದಿ:ಹಾಲಿವುಡ್‌ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!

    ‘ದ ಡೆವಿಲ್’ ಸಿನಿಮಾ ಕೆಲಸ ಎಲ್ಲಿಯವರೆಗೆ ಬಂತು ಎಂದು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಈಗ ಅಪ್‌ಡೇಟ್ ಸಿಕ್ಕಿದೆ. ಈ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿರೋದಾಗಿ ತಿಳಿಸಿದೆ. ಅದಷ್ಟೇ ಅಲ್ಲ, ಸಿಗರೇಟ್ ಹಿಡಿದು ಅಂಬಿ ಸ್ಟೈಲ್‌ನಲ್ಲಿ ದರ್ಶನ್ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.


    ‘ಅಂತ’ ಸಿನಿಮಾದಲ್ಲಿ ಕನ್ವರ್ ಲಾಲ್ ಆಗಿ ರೆಬಲ್ ಸ್ಟಾರ್ ಅಂಬರೀಷ್ (Ambareesh) ಮಿಂಚಿದ್ದರು. ಅದೇ ರೀತಿಯ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ನಟನ ಈ ಗೆಟಪ್ ನೋಡಿ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

    ಬೆಂಗಳೂರು, ಮೈಸೂರು, ರಾಜಸ್ಥಾನ ಸೇರಿದಂತೆ ಹಲವೆಡೆ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಉಳಿದ ಭಾಗ ವಿದೇಶದಲ್ಲಿ ಚಿತ್ರೀಕರಣ ಮಾಡಲಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟನೊಂದಿಗೆ ಮದುವೆಗೆ ರೆಡಿಯಾದ್ರಾ ಶ್ರೀಲೀಲಾ?- ಅರಿಶಿಣ ಶಾಸ್ತ್ರದ ಫೋಟೋ ವೈರಲ್

    ಶ್ರೀ ಜೈ ಮಾತಾ ಕಂಬೈನ್ಸ್ ಬ್ಯಾನರ್ ನಿರ್ಮಿಸುತ್ತಿರುವ ‘ದ ಡೆವಿಲ್’ನಲ್ಲಿ ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ‘ತಾರಕ್ ಡೈರೆಕ್ಟರ್’ ಮಿಲನಾ ಪ್ರಕಾಶ್‌ ʻದ ಡೆವಿಲ್’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.

  • ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಆದೇಶವನ್ನು ಕೋರ್ಟ್ ಮೇ 30 ಕ್ಕೆ ಕಾಯ್ದಿರಿಸಿದೆ.

    ಇಂದು ಅರ್ಜಿ ವಿಚಾರಣೆ ನಡೆಸಿದ 64ನೇ ಸಿಸಿಎಚ್ ಕೋರ್ಟ್ ವಾದ-ಪ್ರತಿವಾದ ಆಲಿಸಿ ಮೇ 30ಕ್ಕೆ ಆದೇಶ ಕಾಯ್ದಿರಿಸಿದೆ. ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದುಬೈ ಮತ್ತು ಯೂರೋಪ್‌ಗೆ ತೆರಳಲು ಜೂನ್ 1ರಿಂದ ಜೂನ್ 25ರ ವರೆಗೆ ಅವಕಾಶಕ್ಕಾಗಿ ದರ್ಶನ್ ಮನವಿ ಸಲ್ಲಿಸಿದ್ದರು. ದರ್ಶನ್ ಅರ್ಜಿಗೆ ಎಸ್‌ಎಸ್‌ಪಿ ಆಕ್ಷೇಪಣೆ ಸಲ್ಲಿಸಿದ್ದರು.

    ಸಿಆರ್‌ಪಿಸಿ ಸೆಕ್ಷನ್ 439(1) (b) ಅಡಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.

    ದರ್ಶನ್ ವಿದೇಶಕ್ಕೆ ತೆರಳಿದರೆ ವಾಪಸ್ ಭಾರತಕ್ಕೆ ಬರುವುದು ಅನುಮಾನ. ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ವಿದೇಶಕ್ಕೆ ತೆರಳುವುದಕ್ಕೆ ಅನುಮತಿ ನೀಡದಂತೆ ಎಸ್‌ಪಿಪಿ ಕೋರ್ಟ್ ಮುಂದೆ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಮೇ 30ಕ್ಕೆ ಕಾಯ್ದಿರಿಸಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪವನ್ನು ದರ್ಶನ್ ಎದುರಿಸುತ್ತಿದ್ದಾರೆ. ಹಲವು ತಿಂಗಳುಗಳ ಜೈಲುವಾಸದ ಬಳಿಕ ದರ್ಶನ್‌ಗೆ ಕೋರ್ಟ್ ಜಾಮೀನು ನೀಡಿದೆ.

  • ‘ಡೆವಿಲ್’ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಅಪ್‌ಡೇಟ್ ಕೊಟ್ಟ ಶರ್ಮಿಳಾ ಮಾಂಡ್ರೆ

    ‘ಡೆವಿಲ್’ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಅಪ್‌ಡೇಟ್ ಕೊಟ್ಟ ಶರ್ಮಿಳಾ ಮಾಂಡ್ರೆ

    ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಮತ್ತೆ ದರ್ಶನ್ ಜೊತೆ ತೆರೆಹಂಚಿಕೊಳ್ತಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿ ಅವರು ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ‘ಡೆವಿಲ್’ (Devil Film) ಸಿನಿಮಾದಲ್ಲಿ ಪಾತ್ರ ಹೇಗಿರಲಿದೆ? ಎಂಬುದರ ಬಗ್ಗೆ ನಟಿ ವಿವರಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

    ನಿನ್ನೆ (ಮಾ.16) ‘ಅಪ್ಪು’ ಸಿನಿಮಾ ನೋಡಲು ವೀರೇಶ್ ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ  ‘ದಿ ಡೆವಿಲ್’ ಚಿತ್ರದ ಬಗ್ಗೆ ಮಾಧ್ಯಮಕ್ಕೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಹೌದು ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಏಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ನನ್ನ ಪಾತ್ರದ ಶೂಟಿಂಗ್ 20% ಆಗಿದೆ. ಇನ್ನೂ 80% ಬಾಕಿ ಉಳಿದಿದೆ ಎಂದಿದ್ದಾರೆ. ಈ ವೇಳೆ, ಸೆಟ್‌ನಲ್ಲಿ ದರ್ಶನ್‌ರನ್ನು ಭೇಟಿಯಾಗಿರೋದಾಗಿ ತಿಳಿಸಿದ್ದಾರೆ.

    ಮಿಲನಾ ಪ್ರಕಾಶ್ (Milana Prakash) ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಶರ್ಮಿಳಾ ಅಷ್ಟೇ ಅಲ್ಲ, ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿ ವಿನಯ್ ಗೌಡ ‘ದಿ ಡೆವಿಲ್’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ರು. ‘ಡೆವಿಲ್’ನಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.

    ಇನ್ನೂ ಈ ಹಿಂದೆ ‘ನವಗ್ರಹ’ (Navagraha) ಸಿನಿಮಾದಲ್ಲಿ ದರ್ಶನ್ (Darshan) ಜೊತೆ ಶರ್ಮಿಳಾ ತೆರೆಹಂಚಿಕೊಂಡಿದ್ದರು. ಇದೀಗ 2ನೇ ಬಾರಿ ದರ್ಶನ್ ಜೊತೆ ನಟಿ ಸಿನಿಮಾ ಮಾಡ್ತಿದ್ದಾರೆ.