Tag: The Delhi Files

  • ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ಅವರು ‘ದಿ ಡೆಲ್ಲಿ ಫೈಲ್ಸ್’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಮಹಾರಾಷ್ಟ್ರ  ಸಿಖ್ ಅಸೋಷಿಯೇಷನ್ ನಿರ್ದೇಶಕರ ವಿರುದ್ಧ ಕಿಡಿಕಾರಿದೆ. ಇಂತಹ ದ್ವೇಷದ ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರು ದುಡ್ಡು ಮಾಡುತ್ತಿದ್ದಾರೆ. ಸಮಾಜದಲ್ಲಿ ಮತ್ತಷ್ಟು ದ್ವೇಷ ಬಿತ್ತುತ್ತಿದ್ದಾರೆ ಎಂದು ಅಸೋಷಿಯೇಷನ್ ಆಪಾದನೆ ಮಾಡಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳುತ್ತಿದ್ದಾರೆ ಎಂದು ಈವರೆಗೂ ಬಹಿರಂಗ ಪಡಿಸಲಿಲ್ಲ. ಆದರೆ, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಡೆಲ್ಲಿಗೂ ಚೆನ್ನೈಗೂ ನಂಟಿದೆ ಎಂದು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿಖ್‍ ನರಮೇಧದ ಕಥೆ ಎಂದು ಊಹಿಸಲಾಗುತ್ತಿದೆ. ಹೀಗಾಗಿಯೇ ಸಿಖ್ ಸಂಘ ಈ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್

    ಸಮಾಜದಲ್ಲಿ ಈಗಾಗಲೇ ಧರ್ಮ ಧರ್ಮಗಳ ನಡುವೆ ದ್ವೇಷದ ಭಾವನೆಗಳನ್ನು ಹಂಚಲಾಗುತ್ತಿದೆ. ಧ್ರುವೀಕರಣದಲ್ಲಿ ಕೆಲಸಗಳು ಮಾನ ಸಂಬಂಧಗಳನ್ನೇ ಹಾಳು ಮಾಡುತ್ತಿವೆ. ಶಾಂತಿಯನ್ನು ಸ್ಥಾಪಿಸಬೇಕಾದ ಇಂತಹ ಸಮಯದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ದುಡ್ಡಿಗಾಗಿ ಜನರ ನಡುವೆ ದ್ವೇಷದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ಮನಸ್ಸುಗಳು ಹಾಳಾಗುತ್ತವೆ. ಹಾಗಾಗಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾವನ್ನು ವಿರೋಧಿಸುವುದಾಗಿ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    ಈಗಾಗಲೇ ವಿವೇಕ್ ಅಗ್ನಿಹೋತ್ರಿ ಅವರು ‘ದಿ ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಮೂಲಕ ಜನಾಂಗದ ಮಧ್ಯೆ ಮನಸ್ತಾಪಗಳನ್ನು ತಂದಿಟ್ಟಿದ್ದಾರೆ. ಆದ ಘಟನೆಗಳನ್ನು ನೆನಪಿಸುವುದಕ್ಕಿಂತ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವಂತಹ ಸಿನಿಮಾಗಳನ್ನು ಮಾಡಲಿ. ಸೃಜನಶೀಲ ಮಾಧ್ಯಮ ದುರಂತಗಳಿಗೆ ಬಳಕೆ ಆಗಬಾರದು. ದುಡ್ಡು ಮಾಡುವುದಕ್ಕಾಗಿ ಈ ರೀತಿಯ ಸಿನಿಮಾಗಳನ್ನು ಮಾಡಬಾರದು ಎಂದು ಪತ್ರದಲ್ಲಿ ಬರೆದಿದೆ ಸಿಖ್ ಅಸೋಷಿಯೇನ್.

  • ‘ದಿ ಡೆಲ್ಲಿ ಫೈಲ್ಸ್’ : 1984ರ ಗಲಭೆಯೇ ಕಥಾವಸ್ತು ಎಂದ ವಿವೇಕ್ ಅಗ್ನಿಹೋತ್ರಿ

    ‘ದಿ ಡೆಲ್ಲಿ ಫೈಲ್ಸ್’ : 1984ರ ಗಲಭೆಯೇ ಕಥಾವಸ್ತು ಎಂದ ವಿವೇಕ್ ಅಗ್ನಿಹೋತ್ರಿ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವ ಸುದ್ದಿಯನ್ನು ಪಬ್ಲಿಕ್ ಟಿವಿ ಡಿಜಿಟಲ್ ಈ ಹಿಂದೆಯೇ ಪ್ರಕಟಿಸಿದೆ. ಈ ಬಾರಿ ನಿರ್ದೇಶಕರು ಯಾವ ರೀತಿಯ ಕಥೆಯನ್ನು ಹೇಳಿದ್ದಾರೆ ಎನ್ನುವ ಸಣ್ಣ ಸುಳಿವನ್ನೂ ವರದಿ ಮಾಡಿತ್ತು. ಅದೀಗ ನಿಜವಾಗಿದೆ. ಸ್ವತಃ ವಿವೇಕ್ ಅಗ್ನಿಹೋತ್ರಿ ಅವರೇ ತಾವು ಆಯ್ಕೆ ಮಾಡಿಕೊಂಡಿರುವ ಕಥೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ : ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ಈ ಬಾರಿ ಆಯ್ಕೆ ಮಾಡಿಕೊಂಡ ವಿಷಯವು 1984ರಲ್ಲಿ ನಡೆದ ನೈಜ ಘಟನೆಯನ್ನೇ ಆಧರಿಸಿದೆಯಂತೆ. ಆ ಸಮಯದ ಸತ್ಯವೇ ಬೇರೆಯಿದೆ. ಅದನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ದೆಹಲಿಯಷ್ಟೇ ಅಲ್ಲ, ತಮಿಳು ನಾಡಿಗೆ ಸಂಬಂಧಿಸಿದ ಒಂದಷ್ಟು ಸತ್ಯಗಳನ್ನೂ ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ. ಇದನ್ನೂ ಓದಿ : ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

    kashmir

    ನಾವು ಸತ್ಯವನ್ನು ಮಾತನಾಡಿದಾಗ ಎಲ್ಲರೂ ಅದನ್ನು ಒಪ್ಪಿಕೊಳ್ಳುತ್ತಾರೆ. ಸರಕಾರಗಳು ಕೂಡ ತಲೆಬಾಗುತ್ತವೆ. ಈಗ ಮತ್ತೊಂದು ಸತ್ಯ ದರ್ಶನಕ್ಕಾಗಿ ಸಿನಿಮಾ ಮಾಡುತ್ತಿರುವೆ. ಇಷ್ಟು ವರ್ಷಗಳಿಂದ ದೆಹಲಿ ಭಾರತವನ್ನು ಹೇಗೆ ನಾಶ ಮಾಡುತ್ತಿದೆ ಎನ್ನುವ ಕುತೂಹಲದ ಅಂಶಗಳು ಕೂಡ ಇವೆ ಎಂದು ಮಾಧ್ಯಮಗಳ ಜತೆ ಮಾತನಾಡಿದ್ದಾರೆ ವಿವೇಕ್ ಅಗ್ನಿಹೋತ್ರಿ. ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ದೆಹಲಿಯನ್ನು ಯಾರೆಲ್ಲ ಆಳಿದರು, ಏನೆಲ್ಲ ಮಾಡಿದರು. ದೆಹಲಿ ಚರಿತ್ರೆಯಲ್ಲಿ ಉಳಿದುಕೊಂಡಿರುವ ಕಪ್ಪು ಚುಕ್ಕೆಯನ್ನೇ ಈ ಬಾರಿ ಬೆಳ್ಳಿ ಪರದೆಯ ಮೇಲೆ ತೋರಿಸುವ ಪ್ರಯತ್ನ ನಡೆಯಲಿದೆಯಂತೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು ಅತೀ ಶೀಘ್ರದಲ್ಲೇ ತಾರಾಗಣವನ್ನೂ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

    ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾಗಳನ್ನೇ ಮಾಡುತ್ತಿರುವ ವಿವೇಕ್ ಅಗ್ನಿಹೋತ್ರಿಗೆ ಜೀವ ಬೆದರಿಕೆಯಿದೆ ಅಂತೆ. ಹಾಗಾಗಿ ಹೆಚ್ಚಿನ ಭದ್ರತೆಯನ್ನು ಅವರಿಗೆ ನೀಡಲಾಗಿದೆ. ಅವರ ಚಲನವಲನಗಳ ಮೇಲೆ ಖಾಕಿ ಪಡೆ ಕಣ್ಣಿಟ್ಟು ಕಾಪಾಡುತ್ತಿದೆ.

  • ‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೈಯಲ್ಲಿ ‘ಡೆಲ್ಲಿ ಫೈಲ್ಸ್’

    ‘ದಿ ಕಾಶ್ಮೀರ್ ಫೈಲ್ಸ್’ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೈಯಲ್ಲಿ ‘ಡೆಲ್ಲಿ ಫೈಲ್ಸ್’

    ಗಾಗಲೇ ತಾಷ್ಕೆಂಟ್ ಫೈಲ್ಸ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳ ಮೂಲಕ ಜಗತ್ತಿಗೆ ಸತ್ಯದ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ಮತ್ತೊಂದು ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಘೋಷಣೆ ಮಾಡಿದಂತೆ ಅವರು ‘ಡೆಲ್ಲಿ ಫೈಲ್ಸ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ‘ತಾಷ್ಕೆಂಟ್ ಫೈಲ್ಸ್’ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಾವಿನ ರಹಸ್ಯವನ್ನು ಬೇಧಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಕಾಶ್ಮೀರ ಪಂಡಿತರ ನರಮೇಧದ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದರು. ಇದೀಗ ‘ಡೆಲ್ಲಿ ಫೈಲ್ಸ್’ ಮೂಲಕ ಬದುಕುವ ಹಕ್ಕಿನ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇದು ಯಾವ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಈವರೆಗೂ ಅವರು ಹೇಳಿಕೊಂಡಿಲ್ಲ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ತಮ್ಮ ಡೆಲ್ಲಿ ಫೈಲ್ಸ್ ಸಿನಿಮಾಗೆ ‘ರೈಟ್ ಟು ಲೈಫ್‍’ ಎಂದು ಟ್ಯಾಗ್ ಲೈನ್ ನೀಡಿದ್ದು, ಜೀವಿಸುವ ಹಕ್ಕಿನ ಕಥೆಯನ್ನು ಇದು ಹೇಳಲಿದೆ ಎಂದು ಊಹಿಸಿಕೊಳ್ಳಬಹುದು. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಅತೀ ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಲಿದ್ದಾರೆ. ಇದು ಹಿಂದಿ ಮತ್ತು ಪಂಜಾಬಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿತ್ತು. ಭಾರತ ಸರಕಾರವೇ ಈ ಸಿನಿಮಾದ ಪರ ನಿಂತುಕೊಂಡಿತು. ಅನೇಕ ರಾಜ್ಯಗಳು ಮನರಂಜನಾ ತೆರೆಗೆ ಮನ್ನಾ ಮಾಡಿದವು. ಅಲ್ಲದೇ, ಅನೇಕ ಕಡೆ ಸ್ವಯಂ ಪ್ರೇರಿತರಾಗಿ ಹಲವರು ಸಿನಿಮಾ ತೋರಿಸಿದರು. ಹೀಗಾಗಿ ಡೆಲ್ಲಿ ಫೈಲ್ಸ್ ಮೇಲೆಯೂ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ.