Tag: Thavar Chand Gehlot

  • ಬೈರತಿ ಸುರೇಶ್ ಪುತ್ರನೊಂದಿಗೆ ಎಸ್ ವಿಶ್ವನಾಥ್ ಪುತ್ರಿ ನಿಶ್ಚಿತಾರ್ಥ -ಊಟದಲ್ಲಿ ಜೊತೆಯಾದ ಡಿಕೆಶಿ, ಗೆಹ್ಲೋಟ್

    ಬೈರತಿ ಸುರೇಶ್ ಪುತ್ರನೊಂದಿಗೆ ಎಸ್ ವಿಶ್ವನಾಥ್ ಪುತ್ರಿ ನಿಶ್ಚಿತಾರ್ಥ -ಊಟದಲ್ಲಿ ಜೊತೆಯಾದ ಡಿಕೆಶಿ, ಗೆಹ್ಲೋಟ್

    ಬೆಂಗಳೂರು: ಸಚಿವ ಬೈರತಿ ಸುರೇಶ್ (Byrati Suresh) ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ (SR Vishwanath) ಅವರ ಪುತ್ರಿ ಅಪೂರ್ವ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ (Hotel) ಬುಧವಾರ ನಡೆದಿದೆ.

    ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ (DK Shivakumar) ಹಾಗೂ ಅವರ ಪತ್ನಿ ಉಷಾ ಅವರು ಪಾಲ್ಗೊಂಡಿದ್ದರು. ಸಚಿವ ಡಾ ಎಂ ಸಿ ಸುಧಾಕರ್ (Dr MC Sudhakar), ಶಾಸಕ ಶರತ್ ಬಚ್ಚೇಗೌಡ (Sharath Kumar Bache Gowda) ಉಪಸ್ಥಿತರಿದ್ದರು. ಇದನ್ನೂ ಓದಿ : ಸೆ.9ವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ – ಇಂದೇ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಶಿಫ್ಟ್‌

    ಇದೇ ಸಂದರ್ಭದಲ್ಲಿ ಡಿಸಿಎಂ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜೊತೆಯಲ್ಲಿ ಕುಳಿತು ಊಟ ಸವಿದಿದ್ದಾರೆ. ಇದನ್ನೂ ಓದಿ : ಖರ್ಗೆ ಒಂದೇ ವಿಳಾಸಕ್ಕೆ ಮೂರು ಸೈಟು, ಸರ್ಕಾರಕ್ಕೆ 500 ಕೋಟಿ ನಷ್ಟ: ನಾರಾಯಣಸ್ವಾಮಿ

  • ರಾಜ್ಯಪಾಲರಿಂದ ರಾಷ್ಟ್ರಪತಿಯವರ ಪದಕ ಪ್ರದಾನ

    ರಾಜ್ಯಪಾಲರಿಂದ ರಾಷ್ಟ್ರಪತಿಯವರ ಪದಕ ಪ್ರದಾನ

    ಬೆಂಗಳೂರು: ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ತೊಡಗಿರುವ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್ ಡಿಆರ್ ಎಫ್ ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಹೇಳಿದರು.

    ನಗರದ ರಾಜಭವನ (Rajabhavana) ದ ಗಾಜಿನಮನೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪತಿಯವರ ಪದಕ ಪ್ರಧಾನ-2022 ಸಮಾರಂಭದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

    ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಮತ್ತು ನೈಸರ್ಗಿಕ ಮತ್ತು ಮಾನವೀಯತೆಯಿಂದ ಜನರಿಗೆ ಸೇವೆ ಸಲ್ಲಿಸುವಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಇಲಾಖೆಯ ಯೋಧರು ಮತ್ತು ಅಧಿಕಾರಿಗಳು ನಿರ್ವಹಿಸುತ್ತಿರುವ ಕಾರ್ಯ ಪ್ರಶಂಸನೀಯ ಎಂದರು.

    ಕಷ್ಟದ ಪರಿಸ್ಥಿತಿಯಲ್ಲಿ ದೇಶವಾಸಿಗಳ ರಕ್ಷಣೆಗಾಗಿ ಹಾಗೂ ತ್ಯಾಗ ಮತ್ತು ಸಮರ್ಪಣೆಗಾಗಿ ಮತ್ತು ಅವರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಅವರ ವಿಶಿಷ್ಟ ಸೇವೆಗಳಿಗಾಗಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್‍ಡಿಆರ್‍ಎಫ್‍ನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ “ರಾಷ್ಟ್ರಪತಿ ಪದಕ”ವನ್ನು ಪ್ರದಾನ ಮಾಡಿರುವುದು ಸಂತಸ ತಂದಿದೆ. ಅದಮ್ಯ ಧೈರ್ಯ, ಸಂಕಲ್ಪ, ನಿಸ್ವಾರ್ಥ ಮತ್ತು ತ್ಯಾಗ ಶ್ಲಾಘನೀಯ. ಉತ್ಕೃಷ್ಟತೆಯ ಎತ್ತರವನ್ನು ಸಾಧಿಸಲು ನಿಮ್ಮ ಕಾರ್ಯಗಳು ಎಲ್ಲರಿಗೂ ಮಾದರಿಯಾಗುತ್ತವೆ ಎಂದು ತಿಳಿಸಿದರು.

    ಕೋವಿಡ್ (COVID 19), ಪ್ರವಾಹ (Flood), ಕಟ್ಟಡಗಳಲ್ಲಿ ಬೆಂಕಿ, ರಸ್ತೆ, ರೈಲು ಮತ್ತು ವಾಯು ಅಪಘಾತಗಳು ಮತ್ತು ನೈಸರ್ಗಿಕ ವಿಕೋಪಗಳು – ಭೂಕಂಪ ಮತ್ತು ಭೂಕುಸಿತ ಮುಂತಾದ ವಿವಿಧ ಸಂದರ್ಭಗಳಲ್ಲಿ ಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ನೇತೃತ್ವದಲ್ಲಿ ನಾಗರಿಕ ರಕ್ಷಣಾ ಇಲಾಖೆಯು ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ತಿಳಿಸಿದರು.

    ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಹೊರತುಪಡಿಸಿ, ಅಗ್ನಿಶಾಮಕ ಸೇವೆಗಳು, ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್‍ಗಳು ಯಾವುದೇ ರೀತಿಯ ವಿಪತ್ತಿನ ಸಂದರ್ಭದಲ್ಲಿ ಸಮುದಾಯದ ಸುರಕ್ಷತೆಗೆ ಪ್ರಾಥಮಿಕವಾಗಿ ಅತ್ಯಗತ್ಯ. ಅಪಘಾತ ಅಥವಾ ನೈಸರ್ಗಿಕ ವಿಕೋಪದ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಸಂವಹನಗಳನ್ನು ಒದಗಿಸಲು ಪ್ರಾಥಮಿಕ ಪ್ರತಿಸ್ಪಂದಕರಾಗಿ, ವಿಪತ್ತು ನಿರ್ವಹಣೆಗಾಗಿ ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಸಾಮಥ್ರ್ಯವನ್ನು ನಿರ್ಮಿಸಲು ಈ ಸಂಸ್ಥೆಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದು ಪ್ರಶಂಸಿದರು.

    ಹವಾಮಾನ ಬದಲಾವಣೆಯಿಂದಾಗಿ, ಪ್ರವಾಹಗಳು, ಬರಗಳು, ಶಾಖದ ಅಲೆಗಳು ಮತ್ತು ಚಂಡಮಾರುತಗಳಂತಹ ಪರಿಸ್ಥಿತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬುದು ಅನೇಕ ಸಂಶೋಧನಾ ಕಾರ್ಯಗಳಿಂದ ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನೈಸರ್ಗಿಕ ವಿಕೋಪಗಳ ಆವರ್ತನ ಮತ್ತು ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ : ಶ್ರೀರಾಮಸೇನೆ

    ಬೆಂಗಳೂರಿನ ರಾಸಾಯನಿಕ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ರಾಸಾಯನಿಕ ಬೆಂಕಿಯ ಸಂದರ್ಭದಲ್ಲಿ, ಅಗ್ನಿಶಾಮಕ ಸೇವೆಗಳು ಜೀವ ಮತ್ತು ಆಸ್ತಿಗಳನ್ನು ಉಳಿಸುವ ಉನ್ನತ ಮಟ್ಟದ ಸಾಮಥ್ರ್ಯವನ್ನು ಪ್ರದರ್ಶಿಸಿದವು. ಇದು ಎಲ್ಲಾ ಹಂತಗಳಲ್ಲಿ ಮೆಚ್ಚುಗೆ ಪಡೆದಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಕರ್ನಾಟಕದ ನಾಗರಿಕ ರಕ್ಷಣಾ ಇಲಾಖೆಯನ್ನು ದೇಶದ ಅತ್ಯುತ್ತಮ ನಾಗರಿಕ ರಕ್ಷಣಾ ಸೇವಾ ಪೂರೈಕೆದಾರ ಎಂದು ಗುರುತಿಸಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಒಟ್ಟು 58 ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು. ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರಕ್ಷಕ ಮಹಾನಿರ್ದೇಶಕರಾದ ಡಾ.ಅಮರ್ ಕುಮಾರ್ ಪಾಂಡೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾಗಿಯಾಗಿ: ರಾಜ್ಯಪಾಲ ಕರೆ

    ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾಗಿಯಾಗಿ: ರಾಜ್ಯಪಾಲ ಕರೆ

    ತುಮಕೂರು: ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟಪ್ ಮತ್ತು ಸ್ಟ್ಯಾಂಡ್ ಅಪ್, ವೆಂಚರ್ ಕ್ಯಾಪಿಟಲ್ ಫಂಡ್ ಯೋಜನೆಗಳನ್ನು ಬಳಸಿಕೊಂಡು ನೀವು ಶ್ರೇಷ್ಠ ಭಾರತ, ನವ ಭಾರತ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಿ, ಉದ್ಯೋಗ ಸೃಷ್ಟಿಸುವಂತವರಾಗಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

    ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ತುಮಕೂರು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತುಮಕೂರು ವಿಶ್ವವಿದ್ಯಾನಿಲಯವು ನಮ್ಮ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ವಿಶ್ವವಿದ್ಯಾನಿಲಯವು ತನ್ನ ಪ್ರಾರಂಭದಿಂದಲೂ ಶಿಸ್ತಿನೊಂದಿಗೆ ತಂತ್ರಜ್ಞಾನ-ಶಕ್ತಗೊಂಡ ಶಿಕ್ಷಣವನ್ನು ಬಲಪಡಿಸುವ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ ಮತ್ತು ವಿವಿಧ ಚಟುವಟಿಕೆಗಳಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ ಶ್ಲಾಘನೀಯ ಎಂದರು.

    ದೇಶವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಆಚರಿಸುತ್ತಿದೆ. ಸ್ವಾತಂತ್ರ್ಯ ಚಳವಳಿಯ ಇತಿಹಾಸದಂತೆಯೇ 75 ವರ್ಷಗಳ ಪಯಣವು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ, ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ. ಇಂದು ಭಾರತದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ವಿಶ್ವದ ಆಕರ್ಷಣೆಯ ಕೇಂದ್ರವಾಗಿದೆ. ಭಾರತದ ಸಾಮಥ್ರ್ಯ ಮತ್ತು ಪ್ರತಿಭೆ ಪ್ರಪಂಚದ ಪ್ರತಿಯೊಂದು ಹಂತದಲ್ಲೂ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು.

    ರಾಷ್ಟ್ರೀಯ ಶಿಕ್ಷಣ ನೀತಿ-2020, 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ, ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುತ್ತದೆ, ಇದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಇಡೀ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸುವುದರೊಂದಿಗೆ, ಕ್ರೀಡೆಯನ್ನು ಸಹ ಪಠ್ಯಕ್ರಮದ ಭಾಗವಾಗಿ ಮಾಡಿರುವುದು ಪ್ರಶಸಂನೀಯ.

    ಭಾರತದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸಿದೆ. ಇಂದಿನ ಯುವ ಪೀಳಿಗೆ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ, ಶಾಂತಿ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ರಾಜ್ಯಪಾಲರು

    ನವದೆಹಲಿಯ ಇಂದಿರಾಗಾಂಧೀ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಸಹ ಕುಲಪತಿ ಪ್ರೊ.ಸುಷ್ಮಾ ಯಾದವ್ ಅವರು ಮುಖ್ಯ ಅತಿಥಿಗಳ ಭಾಷಣ ಮಾಡಿದರು. ಕರ್ನಾಟಕದ ಪ್ರಖ್ಯಾತ ಕೊಳಲು ವಾದಕರಾದ ಪ್ರವೀಣ್ ಗೋಡ್ಕಿಂಡಿ, ಛತ್ತೀಸ್ ಗಢದ ಮಹಾತ್ಮ ಗಾಂಧಿ ಯೂನಿವರ್ಸಿಟಿ ಆಫ್ ಹಾರ್ಟಿಕಲ್ಚರ್ ಮತ್ತು ಫಾರೆಸ್ಟ್ರಿ ಡ್ರಗ್ ಇದರ ಕುಲಪತಿ ಡಾ.ರಾಮಶಂಕರ್ ಕುರೀಲ್ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.

    ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಕೇಶವ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಯುವಜನತೆ ಜಗತ್ತಿನಲ್ಲಿ ಶಾಂತಿ ವಿಸ್ತರಿಸುವ ಕೆಲಸ ಮಾಡಲಿ: ರಾಜ್ಯಪಾಲ

    ಯುವಜನತೆ ಜಗತ್ತಿನಲ್ಲಿ ಶಾಂತಿ ವಿಸ್ತರಿಸುವ ಕೆಲಸ ಮಾಡಲಿ: ರಾಜ್ಯಪಾಲ

    ಬೆಂಗಳೂರು: ಭಾರತೀಯ ಸಂಸ್ಕೃತಿಯು “ಸರ್ವ ಧರ್ಮ ಸಂಭವ” ಮತ್ತು “ವಸುಧೈವ ಕುಟುಂಬಕಂ” ಎಂಬ ಮನೋಭಾವದಿಂದ ಪ್ರೇರಿತವಾಗಿದೆ. ಯಾವಾಗಲೂ ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

    ಇಸ್ಕಾನ್ ಶೇಷಾದ್ರಿಪುರಂ ವತಿಯಿಂದ ನಗರದ ಶೇಷಾದ್ರಿಪುರಂನಲ್ಲಿ ನಿರ್ಮಾಣವಾಗಿರುವ ಜಗನ್ನಾಥ ದೇವಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ತತ್ವಶಾಸ್ತ್ರ, ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿ ಬಹಳ ಪುರಾತನವಾಗಿದ್ದು ಇಂದಿಗೂ ಪ್ರಸ್ತುತವಾಗಿವೆ. ಇದರ ಅನುಕರಣೆಯಿಂದ ಲೋಕಕಲ್ಯಾಣ ಮತ್ತು ಶಾಂತಿಯ ದಿಶೆಯಲ್ಲಿ ಪಾಲುದಾರರಾಗಬೇಕು ಎಂದು ಕರೆ ನೀಡಿದರು.  ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

    ಇಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಅವಶ್ಯಕತೆಯಿದೆ. ಅದರ ಜವಾಬ್ದಾರಿ ನಮ್ಮ ಯುವ ಪೀಳಿಗೆಯ ಮೇಲಿದೆ. ಯುವಕರು ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಜಗತ್ತಿನಲ್ಲಿ ಶಾಂತಿ ವಿಸ್ತರಿಸುವ ಕೆಲಸವನ್ನು ಮಾಡಲಿ ಎಂದರು.

    ಪರಮಪೂಜ್ಯ ಜಯಪತಾಕ ಸ್ವಾಮಿ ಮಹಾರಾಜ್, ಪರಮಪೂಜ್ಯ ಭಾನು ಸ್ವಾಮಿ ಮಹಾರಾಜ್, ದಕ್ಷಿಣ ಭಾರತದಲ್ಲಿ ಕೃಷ್ಣ ಭಕ್ತಿಯ ಪ್ರಚಾರಕ ವಿನೋದ ಸ್ವಾಮಿ, ಇಸ್ಕಾನ್ ಶೇಷಾದ್ರಿಪುರಂ ದೇವಾಲಯದ ವ್ಯವಸ್ಥಾಪಕರು, ಗೌರವಾನ್ವಿತ ಅನುಕೂಲ್ ಕೇಶವ್ ಉಪಸ್ಥಿತರಿದ್ದರು.

    Live Tv

  • ಹೊಯ್ಸಳ ವಾಸ್ತುಶಿಲ್ಪ ಶೈಲಿ ಕಂಡು ವಿಸ್ಮಿತರಾದ ರಾಜ್ಯಪಾಲ ಗೆಹ್ಲೋಟ್

    ಹೊಯ್ಸಳ ವಾಸ್ತುಶಿಲ್ಪ ಶೈಲಿ ಕಂಡು ವಿಸ್ಮಿತರಾದ ರಾಜ್ಯಪಾಲ ಗೆಹ್ಲೋಟ್

    ಹಾಸನ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಹೊಯ್ಸಳ ಅರಸರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೆಬೀಡು ದೇವಾಲಯಗಳಿಗೆ ಭೇಟಿ ನೀಡಿದರು.

    ಐತಿಹಾಸಿಕ ವಿಶೇಷತೆಯ, ಒಂದು ಕಾಲದಲ್ಲಿ ಹೊಯ್ಸಳ ವಾಸ್ತು ಶಿಲ್ಪ ಶೈಲಿಯ ಕಂಡು ವಿಸ್ಮಿತರಾದರು. ಗೈಡ್ ಅಸ್ಲಾಮ್ ಷರಿಫ್ ಅವರು ಬೇಲೂರು, ಹಳೇಬೀಡು ಶಿಲ್ಪ ಶೈಲಿ ಕುರಿತು ರಾಜ್ಯಪಾಲರಿಗೆ ವಿವರಿಸಿದರು. ನಂತರ ಚೇನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಗಳ ಅರ್ಚಕರು ರಾಜ್ಯಪಾಲರನ್ನು ಸನ್ಮಾನಿಸಿದರು. ಇದನ್ನೂ ಓದಿ: ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ಈ ಸಂದರ್ಭದಲ್ಲಿ ಶಾಸಕರಾದ ಲಿಂಗೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎನ್ ನಂದಿನಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್ ಭಯಲ್, ತಹಸೀಲ್ದಾರ್ ಮೋಹನ್, ಚೆನ್ನಕೇಶವ ದೇವಾಲಯದ ಆಡಳಿತ ಅಧಿಕಾರಿ ವಿಧ್ಯುಲ್ಲತಾ, ಚೆನ್ನಕೇಶವ ದೇವಾಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಾ. ನಾರಾಯಣಸ್ವಾಮಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Live Tv

  • ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ

    ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ

    ಬೆಂಗಳೂರು: ಕೆಪಿಎಸ್‍ಸಿ ಗೆ ಸದಸ್ಯರ ನೇಮಕ ಬಿ.ವಿ.ಗೀತಾ ಅವರನ್ನು ಕೆಪಿಎಸ್‍ಸಿ ಸದಸ್ಯರಾಗಿ ನೇಮಿಸಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

    ಗೀತಾ ಅವರನ್ನು ವರ್ಷಗಳ ಹಿಂದೆ ಮಾಹಿತಿ ಆಯೋಗದ ಆಯುಕ್ತರಾಗಿ ಬೆಳಗಾವಿ ಪೀಠಕ್ಕೆ ನೇಮಕ ಮಾಡಲಾಗಿತ್ತು. ಅವರನ್ನೇ ಈಗ ಕೆಪಿಎಸ್‍ಸಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಗೀತಾ ಅವರು ಹೈಕೋರ್ಟ್ ನ್ಯಾಯವಾದಿಯಾಗಿಯೂ ಕೂಡಾ ಕೆಲಸ ಮಾಡಿದ್ದರು. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

  • ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ

    ಮಾರ್ಚ್ 3 ರಿಂದ ಏಳು ದಿನಗಳ ಕಾಲ ನಡೆದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಏಳು ದಿನಗಳ ಕಾಲ ಬೆಂಗಳೂರಿನ ಒರಾಯನ್ ಮಾಲ್, ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಚಿತ್ರ ಪ್ರದರ್ಶನಗಳು ನಡೆದವು. ಸಿನಿಮಾ ಸಂವಾದ, ಕಲಾವಿದರು ಮತ್ತು ತಂತ್ರಜ್ಞರ ಜತೆಗಿನ ಮಾತು, ಸಿನಿಮಾ ಸಂಬಂಧ ಮಾಸ್ಟರ್ ಕ್ಲಾಸ್ ಸೇರಿದಂತೆ ಹತ್ತು ಹಲವು ಚಟುವಟಿಕೆಗಳನ್ನು ಚಿತ್ರೋತ್ಸವದ ಅಡಿಯಲ್ಲಿ ಸಂಯೋಜಿಸಲಾಗಿತ್ತು. ಇದನ್ನೂ ಓದಿ : ಮಾ.13ಕ್ಕೆ ಅರಮನೆ ಮೈದಾನದಲ್ಲಿ ಜೇಮ್ಸ್ ಪ್ರೀ ಇವೆಂಟ್, ಹೊಸಪೇಟೆಯಲ್ಲಿ ಸಕ್ಸಸ್ ಸಂಭ್ರಮ

    ಇಂದು ಸಂಜೆ 5.45ಕ್ಕೆ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸುವ ಮೂಲಕ ಅಂತಿಮ ತೆರೆ ಬೀಳಲಿದೆ. ಈ ಕಾರ್ಯಕ್ರಮವು ಬೆಂಗಳೂರಿನ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ನಡೆಯಲಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅಥಿಗಳಾ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್, ಲೋಕಸಭಾ ಸದಸ್ಯರಾದ ಡಿ.ವಿ.ಸದಾನಂದ ಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜೈರಾಜ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ಬೆಂಗಳೂರಿನಿಂದ ಗಡಿಭಾಗಕ್ಕೆ ಆರ್.ಆರ್.ಆರ್ ಅದ್ಧೂರಿ ಕಾರ್ಯಕ್ರಮ ಶಿಫ್ಟ್

    ಈ ಸಂದರ್ಭದಲ್ಲಿ ಚಿತ್ರೋತ್ಸವದಲ್ಲಿ ಭಾಗಿಯಾಗಿ, ನಾನಾ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಸಮಾರಂಭಕ್ಕೂ ಮುನ್ನ ಸುಮ ಸುಧೀಂದ್ರ ಮತ್ತು ತಂಡದವರಿಂದ ವೀಣಾ ಫ್ಯೂಜನ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದೆ ಕರ್ನಾಟಕ ಚಲನಚಿತ್ರ ಅಕಾಡಮಿ.