Tag: tharun sudheer

  • Exclusive: ‘ಕಾಟೇರ’ ಡೈರೆಕ್ಟರ್‌ಗೆ ದರ್ಶನ್ ಸಾಥ್- ‘ವೀರ ಸಿಂಧೂರ ಲಕ್ಷ್ಮಣ’ ಬರೋದು ಕನ್ಫರ್ಮ್

    Exclusive: ‘ಕಾಟೇರ’ ಡೈರೆಕ್ಟರ್‌ಗೆ ದರ್ಶನ್ ಸಾಥ್- ‘ವೀರ ಸಿಂಧೂರ ಲಕ್ಷ್ಮಣ’ ಬರೋದು ಕನ್ಫರ್ಮ್

    ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ (Darshan) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬಹುಕೋಟಿ ವೆಚ್ಚದ ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾ ಬರೋದು ಪಕ್ಕಾ ಆಗಿದೆ. ದರ್ಶನ್ ನಟನೆಯ 59ನೇ ಚಿತ್ರಕ್ಕೆ ‘ಕಾಟೇರ’ (Kaatera) ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ‘ಕಾಟೇರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಮತ್ತೆ ಅದೇ ಟೀಮ್ ಜೊತೆ ದರ್ಶನ್ ಕೆಲಸ ಮಾಡಲು ಮುಂದಾಗಿದ್ದಾರೆ. ರೈತರ ಸಂಕಷ್ಟದ ಕಥೆ ಜೊತೆ ಮಣ್ಣಿನ ಕಥೆ ಹೇಳಿ ಗೆದ್ದ ತರುಣ್ ಸುಧೀರ್ ಮಗದೊಮ್ಮೆ  ‘ವೀರ ಸಿಂಧೂರ ಲಕ್ಷ್ಮಣ’ ಸಿನಿಮಾಗೆ ನಿರ್ದೇಶನ ಮಾಡೋದು ಪಕ್ಕಾ ಆಗಿದೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಅರ್ಜುನ್ ಸರ್ಜಾ ಪುತ್ರಿ ಮದುವೆ

    ಈಗಾಗಲೇ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾದಂತಹ ಎರಡು ಸೂಪರ್ ಹಿಟ್ ಚಿತ್ರಗಳನ್ನು ದರ್ಶನ್ ಅವರಿಗೆ ನೀಡಿರುವ ಮೀಡಿಯಾ ಹೌಸ್‌ನ ಶೈಲಜಾ ನಾಗ್ ಮತ್ತು ಬಿ.ಸುರೇಶ ಮತ್ತೊಂದು ಕ್ರಾಂತಿಕಾರಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸ್ವಾತಂತ್ರ‍್ಯ ಸಂಗ್ರಾಮದ ಕ್ರಾಂತಿ ಕಿಡಿ ‘ವೀರ ಸಿಂಧೂರ ಲಕ್ಷ್ಮಣ’ನಂಥ (Veera Sindhoora Lakshmana) ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ‘ವೀರ ಸಿಂಧೂರ ಲಕ್ಷ್ಮಣ’ ಅಂದಾಕ್ಷಣ ಥಟ್ಟನೆ ನೆನಪಾಗೋದು ಹಿರಿಯ ನಟ ಸುಧೀರ್. ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ ಮಹಾನ್ ಕಲಾವಿದ ಸುಧೀರ್. ತಮ್ಮ ತಂದೆಯ ಅಭಿನಯದ ಅಪರೂಪದ ಪಾತ್ರವನ್ನು ತೆರೆಗೆ ತರಲು ರೆಡಿಯಾಗುತ್ತಿದ್ದಾರೆ ತರುಣ್ ಸುಧೀರ್. ‘ಕ್ರಾಂತಿ’ ಪುರುಷ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಮುಂದೆ ಸಿನಿಮಾ ಬಗ್ಗೆ ಏನೆಲ್ಲಾ ಅಪ್‌ಡೇಟ್ ಸಿಗಲಿದೆ ಕಾದುನೋಡಬೇಕಿದೆ.

  • ಚಿತ್ರರಂಗಕ್ಕೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿ

    ಚಿತ್ರರಂಗಕ್ಕೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಎಂಟ್ರಿ

    ಡ್ಡೆಹುಡುಗರ ಕನಸಿನ ರಾಣಿಯಾಗಿ ಮಿಂಚಿರುವ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕ ರಾಮು ಅವರ ಸಾಧನೆ ಕೊಡುಗೆ ಅಪಾರ. ಮಾಲಾಶ್ರೀ ಮತ್ತು ರಾಮು ದಂಪತಿ ಸಾಕಷ್ಟು ವರ್ಷಗಳಿಂದ ಕಲಾಸೇವೆ ಮಾಡುತ್ತಲ್ಲೇ ಬಂದವರು. ಇದೀಗ ಈ ಕುಟುಂಬದಿಂದ ಜ್ಯೂ.ಮಾಲಾಶ್ರೀ ರಾಧನಾ ರಾಮ್ ಕೂಡ ಚಿತ್ರರಂಗದಲ್ಲಿ ಮಿಂಚಲು ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ. ಇದನ್ನೂ ಓದಿ:ಪ್ರಾಣಿಗಳಿಗಾಗಿ ಬೆತ್ತಲಾಗುವಂತೆ ರಣವೀರ್ ಸಿಂಗ್ ಗೆ ಮನವಿ ಮಾಡಿದ ಪೇಟಾ

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಬಿಗ್ ಬಜೆಜ್ ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಚಿತ್ರದ ರಾಧನಾ ಲುಕ್ ಕೂಡ ರಿವೀಲ್ ಆಗಿದ್ದು, ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ಮೊದಲ ಚಿತ್ರದಲ್ಲಿಯೇ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಾಯಿ ಮಾಲಾಶ್ರೀ ಅಂತೆಯೇ ನಾಯಕಿಯಾಗಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]