Tag: Tharun Sonal Wedding

  • Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    ಸಿನಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಎರಡೂ ಕೈಗಳಲ್ಲಿ ತಾಳಿ ಹಿಡಿದುಕೊಂಡಿದ್ದ ತರುಣ್‌ ಸುಧೀರ್‌ ಒಂದು ಸುತ್ತು ಸುತ್ತುತ್ತಾ ಗಣ್ಯರಿಗೆ ತಾಳಿ ಪ್ರದರ್ಶಿಸಿದರು. ಬಳಿಕ ಸೋನಲ್‌ ಕೊರಳಿಗೆ ಕಟ್ಟಿದರು. ಈ ಶುಭವೇಳೆ ನಟಿ ಸೋನಲ್ ಕಣ್ಣಲ್ಲಿ ನೀರು ತುಂಬಿಕೊಂಟು ಭಾವುಕರಾದರು.  ಈ ಕುರಿತ ಅದ್ಭುತ ವೀಡಿಯೋ ಇಲ್ಲಿದೆ…

  • Tharun Sonal Wedding: ತಾರಾ ಜೋಡಿ ಮದುವೆ – ತಾಳಿ ಕಟ್ಟೋ ವೇಳೆ ಭಾವುಕರಾದ ಸೋನಲ್‌

    Tharun Sonal Wedding: ತಾರಾ ಜೋಡಿ ಮದುವೆ – ತಾಳಿ ಕಟ್ಟೋ ವೇಳೆ ಭಾವುಕರಾದ ಸೋನಲ್‌

    ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tharun Sudheer) ಮತ್ತು ನಟಿ ಸೋನಲ್ (Sonal Monteiro) ಮದುವೆ ಇಂದು (ಭಾನುವಾರ) ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಪೂರ್ಣಿಮಾ ಪಾಲೇಸ್‍ ನಲ್ಲಿ ನಡೆಯಿತು.

    ಚಿತ್ರರಂಗದ ಅನೇಕ ಗಣ್ಯರು ಮತ್ತು ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು. ತಾಳಿ ಕಟ್ಟೋ ವೇಳೆ ನಟಿ ಸೋನಲ್ ಭಾವುಕರಾಗಿದ್ದರು. ಇದನ್ನೂ ಓದಿ: ತರುಣ್‌-ಸೋನಲ್‌ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ವಿಶ್‌

    ತರುಣ್ -ಸೋನಲ್ ಮದುವೆಗೆ ಅದ್ದೂರಿ ಧಾರೆ ಮಂಟಪ ಸೆಟ್ ಹಾಕಲಾಗಿದೆ. ದಕ್ಷಿಣ ಭಾರತ ಶೈಲಿಯಲ್ಲಿ ಕಲ್ಯಾಣ ಮಂಟಪದ ಅಲಂಕಾರ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ಅಲಂಕಾರ ಮಾಡಲಾಗಿತ್ತು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

    ವಿಷ್ಣುವಿನ ದಶಾವತಾರಗಳ ಮಧ್ಯೆ ಕಮಲ ಮಂಟಪದ ಸಿದ್ದತೆ ಮಾಡಿದ್ದು ವಿಶೇಷವಾಗಿತ್ತು. ನಟ ಶರಣ್‍, ನೆನಪಿರಲಿ ಪ್ರೇಮ್‍, ಶ್ರುತಿ, ಮಾಲಾಶ್ರೀ, ಸುಧಾರಾಣಿ, ಅವಿನಾಶ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವರು ಗಣ್ಯರು ಮದುವೆಗೆ ಸಾಕ್ಷಿಯಾದರು. ನಿನ್ನೆ ಸಂಜೆ ನಡೆದ ತರುಣ್ ಮತ್ತು ಸೋನಾಲ್ ಆರತಕ್ಷತೆಯಲ್ಲೂ ಚಿತ್ರರಂಗ, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ನೂತನ ಜೋಡಿಗೆ ಶುಭ ಹಾರೈಸಿದರು.

  • ತರುಣ್‌-ಸೋನಲ್‌ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ವಿಶ್‌

    ತರುಣ್‌-ಸೋನಲ್‌ ಆರತಕ್ಷತೆ; ನವಜೋಡಿಗೆ ಸ್ಯಾಂಡಲ್‌ವುಡ್‌ ತಾರೆಯರು, ಗಣ್ಯರಿಂದ ವಿಶ್‌

    ಸ್ಯಾಂಡಲ್‌ವುಡ್‌ ಮತ್ತೊಂದು ಮದುವೆ ಸಂಭ್ರಮ ಮನೆ ಮಾಡಿದೆ. ತಾರಾ ಜೋಡಿಯಾದ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ (Tharun-Sonal Wedding) ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ತಾರಾ ಬಳಗದ ದಂಡೇ ಆಗಮಿಸುತ್ತಿದ್ದು, ನವಜೋಡಿಗೆ ವಿಶ್‌ ಮಾಡಿದೆ.

    ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್‌-ಸೋನಲ್‌ ಆರತಕ್ಷತೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿ ತಾರಾಗಣವೇ ಆಗಮಿಸಿ ಜೋಡಿಗೆ ಶುಭಹಾರೈಸಿದೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಆಗಮಿಸಿ ನವಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

    ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸಂತೋಶ್ ಆನಂದ್ ರಾಮ್, ವಿಜಯ್‌ ರಾಘವೇಂದ್ರ, ನೆನಪಿರಲಿ ಪ್ರೇಮ್‌, ಸಿಂಗರ್‌ ಅರ್ಚನಾ ಉಡುಪ, ನಟಿಯರಾದ, ರಾಗಿಣಿ ಅಮೃತಾ ಅಯ್ಯಂಗಾರ್ ಹಾಗೂ ನಿಶ್ವಿಕಾ ನಾಯ್ಡು, ಅಮೂಲ್ಯ ಮೊದಲಾದವರು ರಿಷಪ್ಷನ್‌ಗೆ ಆಗಮಿಸಿ ತರುಣ್‌ ಮತ್ತು ಸೋನಲ್‌ಗೆ ವಿಶ್‌ ಮಾಡಿದರು.

    ನಟಿ ಶೃತಿ ಕುಟುಂಬ, ನಟಿ ಮಾಲಾಶ್ರೀ ಮತ್ತು ಆರಾಧನಾ, ನಟಿ ಹರ್ಷಿಕಾ ಪೂಣಚ್ಚಾ, ಕಾರುಣ್ಯ ರಾಮ್, ನಟರಾದ ಉಪೇಂದ್ರ, ಡಾಲಿ ಧನಂಜಯ್‌, ಸೃಜನ್‌ ಲೋಕೇಶ್‌, ವಿ.ರವಿಚಂದ್ರನ್‌, ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿ ಬಂದು ತಾರಾ ಜೋಡಿಗೆ ಶುಭಹಾರೈಸಿದರು. ಇದನ್ನೂ ಓದಿ: Tharun Sonal Wedding Reception: ಅವಾರ್ಡ್‌ ಫಂಕ್ಷನ್‌ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ

    ನಟಿ ಹಾಗೂ ಮಾಜಿ ಸಂಸದೆ ಸುಮಲತಾ, ಪುತ್ರ ಅಭಿಷೇಕ್‌ ಅಂಬರೀಶ್‌ ಹಾಗೂ ಅನುರಾಧಾ ಭಟ್, ಅನುಪಮ ಭಟ್ ಸಹೋದರಿಯರು ಆರತಕ್ಷತೆಗೆ ಆಗಮಿಸಿದ್ದರು. ನಟ ದುನಿಯಾ ವಿಜಯ್‌, ನಿರ್ದೇಶಕ ಯೋಗರಾಜ್‌ ಭಟ್‌, ಟಾಕ್ಸಿಕ್‌ ಸಿನಿಮಾ ನಿರ್ಮಾಪಕ ವೆಂಕಟ್‌ ನಾರಾಯಣ್‌, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 10 ಸಾವಿರ ಜನರು ಆರತಕ್ಷತೆ ಹಾಗೂ ಮದುವೆಗೆ ಆಗಮಿಸುವ ನಿರೀಕ್ಷೆಯಿದೆ.

  • ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

    ಕಾಟೇರ ಸಿನೆಮಾ ಹಾಡಿಗೆ Tharun-Sonal ಗ್ರ್ಯಾಂಡ್ ಎಂಟ್ರಿ

    ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ (Tharun – Sonal) ತಮ್ಮ ಪ್ರೀತಿಗೆ ನೀರೆರೆದು ಪೋಷಿಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಆರತಕ್ಷತೆ ಸಂಭ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.

    ಆರತಕ್ಷತೆ ಆಗಮಿಸಿದ ನವಜೋಡಿ ತರುಣ್‌ ಹಾಗೂ ಸೋನಲ್‌ ಅವರನ್ನು ಮ್ಯೂಸಿಕ್‌ ಬ್ಯಾಂಡ್‌ ಕಾಟೇರ ಸಿನಿಮಾದ ʼಯಾವ ಜನುಮದ ಗೆಳತಿʼ ಹಾಡನ್ನು ನುಡಿಸುವ ಮೂಲಕ‌ ಅದ್ಧೂರಿಯಾಗಿ ಸ್ವಾಗತಿಸಿತು.

    ಬ್ಲ್ಯಾಕ್ ಕಲರ್ ಗೋಲ್ಡ್ ಎಂಬ್ರಾಯ್ಡರಿ ಕಾಂಬಿನೇಷನ್ ಶೆರ್ವಾನಿಯಲ್ಲಿ ತರುಣ್ ಸುಧೀರ್ ಮಿಂಚುತ್ತಿದ್ದರೆ, ಗೋಲ್ಡ್ ಕಲರ್ ಲೆಹಂಗದಲ್ಲಿ ವಧು ಸೋನಲ್ ಕಂಗೊಳಿಸುತ್ತಿದ್ದಾರೆ.

    ದರ್ಶನ್‌ (Darshan) ಅವರಿಂದಲೇ ನಮ್ಮ ಪ್ರೀತಿ ಶುರುವಾಯಿತು ಎಂದು ಸೋನಲ್‌ ಹಾಗೂ ತರುಣ್‌ ಅವರು ಹೇಳಿಕೊಂಡಿದ್ದರು.

    ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ ಸಭಾಂಗಣದಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯುತ್ತಿದೆ. ಅವಾರ್ಡ್‌ ಫಂಕ್ಷನ್‌ (Award ceremony) ಥೀಮ್‌ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಮದುವೆ ಹಾಲ್ ಮಿಂಚುತ್ತಿದೆ. ಕೆಂಪು ಹೂವುಗಳು, ಕೆಂಪು ಕಾರ್ಪೆಟ್, ಕೆಂಪು ದೀಪಗಳನ್ನು ಅಲಂಕಾರಕ್ಕೆ ಬಳಕೆ ಮಾಡಿದ್ದು, ಪ್ರೀತಿಸಿ ಮದುವೆಯಾಗುತ್ತಿರುವ ತಾರಾಜೋಡಿಗೆ ಜೋಡಿಗೆ ರೆಡ್ ಥೀಮ್ ವೇದಿಕೆ ಸಿದ್ಧಪಡಿಸಲಾಗಿದೆ.

  • Tharun Sonal Wedding Reception: ಅವಾರ್ಡ್‌ ಫಂಕ್ಷನ್‌ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ

    Tharun Sonal Wedding Reception: ಅವಾರ್ಡ್‌ ಫಂಕ್ಷನ್‌ ಥೀಮ್‌ನಲ್ಲಿದೆ ವಿವಾಹ ಆರತಕ್ಷತೆ ವೇದಿಕೆ

    ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಆರತಕ್ಷತೆಗೆ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಸಭಾಂಗಣ ಸಂಪೂರ್ಣ ಸಜ್ಜಾಗಿದೆ. ಅವಾರ್ಡ್‌ ಫಂಕ್ಷನ್‌ (Award ceremony) ಥೀಮ್‌ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ.

    ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಮದುವೆ ಹಾಲ್ ಮಿಂಚುತ್ತಿದೆ. ಕೆಂಪು ಹೂವುಗಳು, ಕೆಂಪು ಕಾರ್ಪೆಟ್, ಕೆಂಪು ದೀಪಗಳು ಅಲಂಕಾರಕ್ಕೆ ಬಳಕೆ ಮಾಡಿದ್ದು, ಪ್ರೀತಿಸಿ ಮದುವೆಯಾಗುತ್ತಿರುವ ತಾರಾಜೋಡಿಗೆ ಜೋಡಿಗೆ ರೆಡ್ ಥೀಮ್ ವೇದಿಕೆ ಸಿದ್ಧವಾಗಿದೆ.

    ತರುಣ್ ಅವರು ಸಿನಿಮಾ ಕ್ಷೇತ್ರದಲ್ಲಿ ಇರೋದ್ರಿಂದ ಅವಾರ್ಡ್ ಸೆರ್ಮನಿ ಥೀಮ್ ಮಾಡೋಕೆ ಹೇಳಿದ್ದರು. ತರುಣ್ ಹಾಗೂ ಸೋನಲ್ ಡಿಸ್ಕಸ್ ಮಾಡಿ ತೀರ್ಮಾನ ತೆಗೆದುಕೊಂಡಿದ್ದರು. ಕಂಪ್ಲೀಟ್ ರೆಡ್ ಥೀಮ್ ನಲ್ಲೇ ಇದೆ. ಅತಿಥಿಗಳ ಆಸನದ ವ್ಯವಸ್ಥೆಯಲ್ಲೂ ಅವಾರ್ಡ್ ಸಮಾರಂಭದಲ್ಲಿ ಕುಳಿತಂತೆ ರೌಂಡ್ ಟೇಬಲ್ ಇರುತ್ತೆ. ಎಲ್ಲಾ ರೀತಿಯ ಕೆಂಪು ಹೂಗಳನ್ನ ಬಳಸಿದ್ದೇವೆ. ಇಂಡೋ ವೆಸ್ಟರ್ನ್ ಶೈಲಿಯಲ್ಲಿ ವೇದಿಕೆ ಇದೆ ಎಂದು ಇವೆಂಟ್‌ ಮ್ಯಾನೇಜರ್‌ ಕಿರಣ್‌ ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ್ದಾರೆ. ಸುಧೀರ್ ಕುಟುಂಬದ ಮದುವೆ ಆಗಿರೋದ್ರಿಂದ ಅವರ ನೆನಪು ಹೇಳುವ ಫೋಟೋಗಳನ್ನೂ ಹಾಕಿದೀವಿ ಎಂದು ಕಿರಣ್‌ ಹೇಳಿದ್ದಾರೆ.

  • Tharun Sonal Wedding: ಸೋನಲ್‌ಗೆ ಹಲಸಿನ ಹಲ್ವಾ, ತರುಣ್‌ಗೆ ಸ್ಪೈಸಿ ಐಟಂ – ಆರತಕ್ಷತೆ ಮೆನುವಿನಲ್ಲಿ ಏನಿದೆ ಸ್ಪೆಷಲ್..?

    Tharun Sonal Wedding: ಸೋನಲ್‌ಗೆ ಹಲಸಿನ ಹಲ್ವಾ, ತರುಣ್‌ಗೆ ಸ್ಪೈಸಿ ಐಟಂ – ಆರತಕ್ಷತೆ ಮೆನುವಿನಲ್ಲಿ ಏನಿದೆ ಸ್ಪೆಷಲ್..?

    ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್‌ ಸುಧೀರ್‌ – ಸೋನಲ್‌ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಬೆಂಗಳೂರಿನಲ್ಲಿ ನಡೆಯತ್ತಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯುತ್ತಿದ್ದು, ರಿಸೆಪ್ಷನ್‌ಗೆ ಬಂದವರಿಗೆ ಅದ್ಧೂರಿ ಭೋಜನ ಏರ್ಪಡಿಸಲಾಗಿದೆ.

    ಮದುವೆ ಹಾಗೂ ಆರತಕ್ಷತೆಗೆ 10 ಸಾವಿರಕ್ಕೂ ಹೆಚ್ಚು ಮಂದಿ‌ ಆಗಮಿಸುವ ನಿರೀಕ್ಷೆಯಿದ್ದು, ಬಾಣಸಿಗರು 4 ಕಿಚನ್‌ಗಳಲ್ಲಿ ಅಡುಗೆ ಸಿದ್ಧ ಮಾಡುತ್ತಿದ್ದಾರೆ.

    ರಿಸೆಪ್ಷನ್ ಸ್ಪೆಷಲ್ ಮೆನು ಏನೇನು?
    20ಕ್ಕೂ ಅಧಿಕ ಬಗೆಯ ಸ್ವೀಟ್‌ಗಳು, ತರಹೇವಾರಿ ದೋಸೆಗಳು, ರೊಟ್ಟಿಗಳು, ಶ್ಯಾವಿಗೆ ಸೇರಿದಂತೆ ವಿವಿಧ ಖಾದ್ಯಗಳು ಸಿದ್ಧವಾಗಿದೆ. ಮಂಗಳೂರು- ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಫುಡ್, ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನಲ್ಲಿದೆ. (Tharun Sonal Wedding Recepton Menu)

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತರುಣ್ ಮದುವೆ ರಿಸೆಪ್ಷನ್ ಕ್ಯಾಟರಿಂಗ್ ಮುಖ್ಯಸ್ಥ ಸುಭಾಷ್, ನಾವು ಈ ಅಡುಗೆ ವಹಿಸಿಕೊಂಡಿದ್ದಕ್ಕೆ ಸಂತೋಷವಿದೆ. ತರುಣ್ ಸರ್ ಹಾಗೂ ಸೋನಲ್ ಮೇಡಂ ಈ ಹಿಂದೆ ನಮ್ಮ ಕ್ಯಾಟರಿಂಗ್ ಅಡುಗೆ ರುಚಿ ನೋಡಿದ್ದಾರೆ. ಸೋನಲ್ ಮೇಡಮ್‌ಗಾಗಿಯೇ ಹಲಸಿನ ಹಲ್ವಾ, ತರುಣ್ ಗೋಸ್ಕರ ಒಂದು ಸ್ಪೆಷಲ್ ಸ್ಪೈಸಿ ಐಟಂ ಮಾಡ್ತಿದೀವಿ. ಎಷ್ಟು ಜನ ಬಂದ್ರೂ ಮ್ಯಾನೇಜ್ ಮಾಡ್ತೀವಿ. ಯಾರಿಗೂ ಊಟ ಕಡಿಮೆ ಆಗಬಾರದು ಎಂಬ ಹಾಗೆ ಪ್ರಿಪೇರ್ ಮಾಡ್ತಿದ್ದೇವೆ ಎಂದರು.

    ಮಂಗಳೂರು – ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಆಹಾರ, ಸೌತ್‌ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನ ಸ್ಪೆಷಲ್‌ ಐಟಂಗಳು ಎಂದು ಸ್ಪೆಷಲ್‌ ಮೆನು ಬಗ್ಗೆ‌ ಸುಭಾಷ್ ವಿವರಿಸಿದ್ದಾರೆ.

  • Tharun Sonal Wedding: ತರುಣ್‌ ಲವ್‌ ಬಗ್ಗೆ ಹೇಳ್ಲಿಲ್ಲ, ಮದುವೆ ಮಾಡಿಸಿದ್ದು ಬಾಸ್‌ ದರ್ಶನ್‌ ಅಂದ್ರು ತರುಣ್‌ ತಾಯಿ

    Tharun Sonal Wedding: ತರುಣ್‌ ಲವ್‌ ಬಗ್ಗೆ ಹೇಳ್ಲಿಲ್ಲ, ಮದುವೆ ಮಾಡಿಸಿದ್ದು ಬಾಸ್‌ ದರ್ಶನ್‌ ಅಂದ್ರು ತರುಣ್‌ ತಾಯಿ

    ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ತಾರಾ ಜೋಡಿ ಮದುವೆ ಸಂಭ್ರಮದಲ್ಲಿದೆ. ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಇಂದು ನಡೆಯುತ್ತಿದೆ. ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ ನವಜೋಡಿಯ ಆರತಕ್ಷತೆಗೆ ಸಿದ್ಧವಾಗಿದೆ.

    ಮಗನ ಮದುವೆ ಸಂಭ್ರಮದ ಬಗ್ಗೆ ತರುಣ್‌ ಸುಧೀರ್‌ ತಾಯಿ ಮಾಲತಿ ಸುಧೀರ್‌ ‘ಪಬ್ಲಿಕ್‌ ಟಿವಿ’ ಜೊತೆ ಮಾತನಾಡಿದ್ದಾರೆ. ಮಗನ ಮದುವೆಯನ್ನ ಬಾಸ್ ಮಾಡಿಸಿದ್ದು. ಎಲ್ಲವೂ ಅವರದ್ದೇ ತಯಾರಿ ಆಗಿತ್ತು ಎಂದು ಮದುವೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕಾರಣ ಎಂದು ಹೇಳಿದ ಅವರು, ಸೊಸೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಮುಂದೆ ಚೆನ್ನಾಗಿ ನೋಡಿಕೊಳ್ತೀನಿ. ನಮಗೆ ಹೆಣ್ಣುಮಗಳಿಲ್ಲ. ಅವಳೇ ಮಗಳ ಥರ ಎಂದರು. ಇದನ್ನೂ ಓದಿ: ಸೋನಲ್‌ ಜೊತೆ ತರುಣ್‌ ರೊಮ್ಯಾಂಟಿಕ್‌ ಫೋಟೋಶೂಟ್‌- ಮದುವೆ ಬಗ್ಗೆ ಕೊಟ್ರು ಗುಡ್‌ ನ್ಯೂಸ್

    ನನ್ನ ಮಗ ಮದುವೆಯಾಗ್ತಿರೋದು ತುಂಬಾ ಖುಷಿಯಾಗ್ತಿದೆ. ಆದರೆ ಈಗ ಯಜಮಾನ್ರಿಲ್ಲ ಅನ್ನೋದೇ ಬೇಸರ. ಅವರು ಅಲ್ಲಿಂದಲೇ ನೋಡಿ ಖುಷಿ ಪಟ್ಟಿರ್ತಾರೆ ಎಂದು ಮಾಲತಿ ಸುಧೀರ್‌ ಅವರು ಹೇಳಿದ್ದಾರೆ. ಮಗ ಡೈರೆಕ್ಟರ್ ಅಲ್ವೇ.. ಹಾಗಾಗಿ ಕ್ರಿಯೇಟಿವ್ ಆಗಿ ಹೀಗೆ ಪ್ಲ್ಯಾನ್ ಮಾಡಿದಾನೆ ಎಂದು ಸಂಭ್ರಮಿಸಿದ್ದಾರೆ.

    ತರುಣ್‌ ಫ್ರೆಂಡ್‌ ಲ್ಯಾಪ್‌ಟಾಪಲ್ಲಿ ಫೋಟೋ ತೋರಿಸ್ದ!: ತರುಣ್ ಬಂದು ನನಗೆ ಸೋನಲ್‌ ಜೊತೆಗಿನ ಪ್ರೀತಿ ಬಗ್ಗೆ ಹೇಳಿಲ್ಲ. ಅವನ ಸ್ನೇಹಿತ ಬಂದು ಲ್ಯಾಪ್‌ಟಾಪ್‌ನಲ್ಲಿ ತೋರಿಸ್ದ. ನೋಡಿ ಅಮ್ಮ ಇವರೇ ತರುಣ್ ಮದುವೆ ಆಗ್ತಿರೋ ಹುಡುಗಿ ಅಂದ. ಹೌದಾ, ಕೊನೆಗೂ ಮದುವೆಗೆ ಒಪ್ಪಿಕೊಂಡ ಅಂತ ನನಗೆ ಖುಷಿ ಆಯ್ತು ಎಂದು ಮಾಲತಿ ಹೇಳಿದರು. ಇದನ್ನೂ ಓದಿ: ಗುಡ್‌ನ್ಯೂಸ್‌ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್‌ ಸುಧೀರ್‌ – ಸೋನಲ್‌ ಮದುವೆ ಡೇಟ್‌ ಫಿಕ್ಸ್‌