Tag: Thanked

  • ತಾಯ್ನಾಡಿಗೆ ಕರೆತಂದ ಮೋದಿಗೆ ಹಾಡಿನ ಧನ್ಯವಾದ ತಿಳಿಸಿದ ಸಿಖ್ಖರು

    ತಾಯ್ನಾಡಿಗೆ ಕರೆತಂದ ಮೋದಿಗೆ ಹಾಡಿನ ಧನ್ಯವಾದ ತಿಳಿಸಿದ ಸಿಖ್ಖರು

    ನವದೆಹಲಿ: ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಕರೆತಂದಿದ್ದಕ್ಕೆ ಸಿಖ್ಖರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಡಿನ ಮೂಲಕವಾಗಿ ಧನ್ಯವಾದವನ್ನು ತಿಳಿಸಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ನೆಲಸಿರುವ ಕೆಲಸ ಮಾಡುತ್ತಿರುವ ನಮ್ಮ ದೇಶದ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರ ಹಲವು ವಿಮಾನಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಪ್ರಜೆಗಳನ್ನು ವಾಪಾಸ್ ಕರೆಸಿಕೊಳ್ಳುತ್ತಿದೆ. ಇದನ್ನೂ ಓದಿ: ಐಟಿ ಕಂಪನಿ ಉದ್ಯಮಿ ಅನುಮಾನಾಸ್ಪದ ಸಾವು

    ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಅಥವಾ ಕೆಲಸ ಮಾಡುತ್ತಿದ್ದ ಸಿಖ್ ಸಮುದಾದ ನೂರಾರು ಜನರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ. ಇದರಿಂದ ಸಂತಸಗೊಂಡ ಸಿಖ್ ಸಮುದಾಯದ ತಮ್ಮನ್ನು ಸುರಕ್ಷಿತವಾಗಿ ತಾಯ್ನೆಲಕ್ಕೆ ಕರೆಸಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. ತಮ್ಮದೇ ಭಾಷೆಯಲ್ಲಿ ಹಾಡು ಹೇಳುವ ಮೂಲಕವಾಗಿ ಮೋದಿಯವರ ಬ್ಯಾನರ್ ಮುಂದೆ ನಿಂತು ಹತ್ತಾರು ಮಂದಿ ಮೋದಿಯವರಿಗೆ ಧನ್ಯವಾದ ಎಂದು ಹಾಡಿದ್ದಾರೆ. ಇದನ್ನೂ ಓದಿ: ದೇಶ ಬಿಟ್ಟು ತೆರಳಬೇಡಿ- ತಾಲಿಬಾನ್ ಬೆದರಿಕೆ

    ಅಫ್ಘಾನಿಸ್ತಾನಲ್ಲಿ ಸಿಲುಕಿಕೊಂಡಿದ್ದ ಸಿಖ್ ಸಹೋದರನ್ನು ಒಳಗೊಂಡಂತೆ ಹಲವರನ್ನು ನೀವು ಅಲ್ಲಿಂದ ಇಲ್ಲಿಗೆ ಕರೆತರುವ ವ್ಯವಸ್ಥೆಯನ್ನು ಮಾಡಿದ್ದೀರ. ಪ್ರಧಾನಿ ಮೋದಿ ಮತ್ತು ಸರ್ಕಾರಕ್ಕೆ ನಾವು ಧನ್ಯವಾದವನ್ನು ಹೇಳುತ್ತೇವೆ ಎಂದು ಸಿಖ್ಖರು ಹೇಳಿದ್ದಾರೆ. ಇದನ್ನೂ ಓದಿ: ಸೊಸೆ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

    ಅಫ್ಘಾನ್ ನಾಗರಿಕರು ದೇಶ ಬಿಟ್ಟು ತೆರಳದಂತೆ ತಾಲಿಬಾನ್ ಉಗ್ರರು ಕಟ್ಟಪ್ಪಣೆ ಹೊರಡಿಸಿದ್ದಾರೆ. ಈನಿಟ್ಟಿನಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ತಡೆಯೊಡ್ಡುತ್ತಿರುವುದರಿಂದ ಅಫ್ಘಾನ್ ನಾಗರಿಕರು ಕಂಗಾಲಾಗಿದ್ದಾರೆ.  ಅಗಸ್ಟ್ 31ರ ಬಳಿಕ ಜನರ ಸ್ಥಳಾಂತರಕ್ಕೆ ನಾವು ಅವಕಾಶ ನೀಡುವುದಿಲ್ಲ. ವೈದ್ಯರು, ತಂತ್ರಜ್ಞರು ದೇಶದಲ್ಲಿಯೇ ಇದ್ದು ತಮ್ಮ ಕೆಲಸವನ್ನು ಮುಂದುವರಿಸಬೇಕು ಎಂದು ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ.

  • ಮಂಗಳವಾರ ಗುರು ತಿಥಿ ಕಾರ್ಯ – ನಾಡಿನ ಜನತೆಗೆ ಧನ್ಯವಾದ ತಿಳಿಸಿ ಭಾವುಕರಾದ ಕಲಾವತಿ

    ಮಂಗಳವಾರ ಗುರು ತಿಥಿ ಕಾರ್ಯ – ನಾಡಿನ ಜನತೆಗೆ ಧನ್ಯವಾದ ತಿಳಿಸಿ ಭಾವುಕರಾದ ಕಲಾವತಿ

    ಮಂಡ್ಯ: ಹುತಾತ್ಮ ಯೋಧ ಮಂಡ್ಯದ ಗುಡಿಗೆರೆ ಗ್ರಾಮದ ಗುರು ಅವರ ತಿಥಿ ಕಾರ್ಯ ಮಂಗಳವಾರ ನಡೆಯಲಿದ್ದು, ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ, ಏನೇ ತೊಂದರೆ ಆದರೂ ನಾವು ಸಹಾಯ ಮಾಡುತ್ತೇವೆ ಎಂದು ಧೈರ್ಯ ತುಂಬಿದ ಕನ್ನಡ ನಾಡಿನ ಜನತೆಗೆ ಗುರು ಅವರ ಪತ್ನಿ ಕಲಾವತಿ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.

    ಹುತಾತ್ಮ ಯೋಧ ಗುರು ಅವರನ್ನು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲೇ ಮಂಗಳವಾರ ತಿಥಿ ಕಾರ್ಯ ನಡೆಸಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ತಿಥಿ ಕಾರ್ಯದ ಸಂಪೂರ್ಣ ವೆಚ್ಚವನ್ನು ಮದ್ದೂರು ಕ್ಷೇತ್ರದ ಶಾಸಕ, ಸಾರಿಗೆ ಸಚಿವ ಡಿಸಿ ತಮ್ಮಣ್ಣ ವಹಿಸಿಕೊಂಡಿದ್ದಾರೆ.

    ಗುರು ಅವರು ಹುತಾತ್ಮರಾದ ನಂತರ ಅವರ ಕುಟುಂಬ ತೀವ್ರ ಸಂಕಟದಿಂದ ಕಂಗಾಲಾಗಿತ್ತು. ಈ ವೇಳೆ ಅವರ ಬೆಂಬಲಕ್ಕೆ ನಿಂತ ದೇಶದ ವಿವಿಧ ಭಾಗದ ಜನರು ನೆರವಿನ ಹಸ್ತ ಚಾಚಿದರು. ಅವರ ಸಹಾಯವನ್ನು ನೆನೆದ ಗುರು ಅವರ ಕುಟುಂಬದವರು ಎಲ್ಲರಿಗೂ ಧನ್ಯವಾದ ತಿಳಿಸುತ್ತ ಭಾವುಕರಾಗಿದ್ದಾರೆ. ಗುರು ಅವರ ತಿಥಿ ಕಾರ್ಯಕ್ಕೆ ಪಾಲ್ಗೊಂಡು ಅವರ ಆತ್ಮಕ್ಕೆ ಶಾಂತಿ ಕೋರುವಂತೆ ಮನವಿ ಮಾಡಿದ್ದಾರೆ.

    ಈ ಹಿಂದೆ ಡಿ.ಸಿ ತಮ್ಮಣ್ಣ ಅವರು ಮಾತನಾಡಿ, “ಗುರು ನಮ್ಮ ಊರಿನ ಯೋಧ ಆಗಿರುವುದರಿಂದ ನಾನೇ ಖರ್ಚು ಭರಿಸುತ್ತೇನೆ. ನಮ್ಮ ಬೆಂಬಲಿಗರು ಕೂಡ ಎಲ್ಲ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ. ಪುಣ್ಯಕಾರ್ಯದಂದು ಸುಮಾರು 4 ರಿಂದ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸಂಪ್ರದಾಯದಂತೆ ಏನೆಲ್ಲಾ ಊಟ ಮಾಡಬೇಕೆಂದು ನಿಗದಿ ಆಗಿಂದೆಯೋ ಎಲ್ಲವನ್ನೂ ಮಾಡುತ್ತೇವೆ. ಸದ್ಯದಲ್ಲೇ ಹುತಾತ್ಮ ಯೋಧ ಗುರು ಸ್ಮಾರಕ ಕೂಡ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv