ಚೆನ್ನೈ: ಮದುವೆಗೆ ನಿರಾಕರಿಸಿದ್ದಕ್ಕಾಗಿ ದುಷ್ಕರ್ಮಿಯೊಬ್ಬ ಶಾಲೆಯಲ್ಲೇ (School) ಶಿಕ್ಷಕಿಯ (Teacher) ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ (Thanjavur) ನಡೆದಿದೆ.
ಕೊಲೆಯಾದ ಶಿಕ್ಷಕಿಯನ್ನು ರಮಣಿ (26) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮದನ್ (30) ಎಂದು ಗುರುತಿಸಲಾಗಿದೆ. ಆತ ರಮಣಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ರಮಣಿಯವರು ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಣಂ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ರಮಣಿ ಹಾಗೂ ಮದನ್ ಕುಟುಂಬ ಭೇಟಿಯಾಗಿ ಮದುವೆಯ ವಿಚಾರ ಚರ್ಚಿಸಿದ್ದರು. ಈ ವೇಳೆ ಮದುವೆ ಪ್ರಸ್ತಾಪವನ್ನು ರಮಣಿಯವರು ತಿರಸ್ಕರಿಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮಿಳಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳಿಗೆ (Students) ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಶಾಲೆಯ ಭೇಟಿಗೆ ತೆರಳಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
ಶಿಕ್ಷಕರ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಹಲ್ಲೆಕೋರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚೆನ್ನೈ: ಭಾರತದ ಸಂವಿಧಾನ ಹಾಗೂ ನ್ಯಾಯಾಂಗ ಇಸ್ಲಾಂಗೆ ವಿರುದ್ಧವಾಗಿದೆ ಎಂದು ಬಿಂಬಿಸಿ ರಹಸ್ಯ ತರಗತಿಗಳ ಮೂಲಕ ಯುವಕರಿಗೆ ಬೋಧಿಸುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ತಮಿಳುನಾಡಿನ ತಂಜಾವೂರ್‌ನಲ್ಲಿ (Thanjavur) ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ರೆಹಮಾನ್ ಮತ್ತು ಮುಜಿಬುರ್ ರೆಹಮಾನ್ ಅಲ್ತಮ್ ಸಾಹಿಬ್ ಎಂದು ಗುರುತಿಸಲಾಗಿದೆ. ಇಬ್ಬರು ಹಿಜ್ಬ್-ಉತ್-ತಹ್ರೀರ್ ಹಾಗೂ ಅಂತರರಾಷ್ಟ್ರೀಯ ಪ್ಯಾನ್-ಇಸ್ಲಾಮಿಸ್ಟೇಟ್‌ನ ಮೂಲಭೂತವಾದಿ ಗುಂಪಿನ ಸದಸ್ಯರಾಗಿದ್ದಾರೆ. ಈ ಸಂಘಟನೆ ಇಸ್ಲಾಮಿಕ್ ಕ್ಯಾಲಿಫೇಟ್‍ನ್ನು ಮರುಸ್ಥಾಪಿಸಲು ಮತ್ತು ಹಿಜ್ಬ್-ಉತ್-ತಹ್ರಿರ್ನ ಸಂಸ್ಥಾಪಕ ತಕಿ ಅಲ್-ದಿನ್ ಅಲ್-ನಭಾನಿ ಬರೆದ ಸಂವಿಧಾನವನ್ನು ಜಾರಿಗೊಳಿಸಲು ಕೆಲಸ ಮಾಡುತ್ತಿದೆ ಎಂದು ಎನ್‍ಐಎ ತಿಳಿಸಿದೆ. ಇದನ್ನೂ ಓದಿ: ಅಂಬುಲೆನ್ಸ್, ಬೈಕ್ ಮಧ್ಯೆ ಅಪಘಾತ – ಮೂವರು ಸವಾರರು ದುರ್ಮರಣ
ತಮಿಳುನಾಡಿನ (Tamil Nadu) ಐದು ಜಿಲ್ಲೆಗಳ 10 ಸ್ಥಳಗಳಲ್ಲಿ ವ್ಯಾಪಕ ಶೋಧದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಇಬ್ಬರನ್ನು ಬಂಧಿಸಿದೆ. ಬಂಧಿತರು ಯುವಕರಿಗೆ ಉಗ್ರಗಾಮಿ ಸಿದ್ಧಾಂತಗಳ ಬಗ್ಗೆ ರಹಸ್ಯ ತರಗತಿಗಳಲ್ಲಿ ಬೋಧನೆ ಮಾಡುತ್ತಿದ್ದರು. ತರಗತಿಯಲ್ಲಿ ಭಾರತೀಯ ಸಂವಿಧಾನ, ಕಾನೂನು ಮತ್ತು ನ್ಯಾಯಾಂಗವನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್, ಸಿಮ್ ಮತ್ತು ಮೆಮೊರಿ ಕಾರ್ಡ್‍ಗಳು ಮತ್ತು ಹಿಜ್ಬ್-ಉತ್-ತಹ್ರೀರ್, ಖಿಲಾಫಾ, ಇಸ್ಲಾಮಿಕ್ ಸ್ಟೇಟ್‍ನ ಸಿದ್ಧಾಂತವನ್ನು ಒಳಗೊಂಡಿರುವ ಪುಸ್ತಕಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ತನಿಖೆ ಮುಂದುವರಿದ್ದು, ಉಗ್ರ ಸಂಘಟನೆಯ ಜಾಲದ ಬಗ್ಗೆ ಎನ್‍ಐಎ ಮಾಹಿತಿ ಕಲೆಹಾಕುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜು.1 ರಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿ – ಹೇಗಿದೆ ಸಿದ್ಧತೆ?
ಚೆನ್ನೈ: ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ರೈತರೊಬ್ಬರು (Farmer) ತಮ್ಮ ಮೇಕೆಗಳಿಗೆ (Goats) ತಿರುಗಾಡಿ ಮೇಯಿಸಲು ತೊಂದರೆ ಆಗಬಾರದು ಎಂದು ತಾತ್ಕಾಲಿಕ ರೈನ್‍ಕೋಟ್‍ಗಳನ್ನು ರಚಿಸಿದ್ದಾರೆ.
ತಮಿಳುನಾಡಿನ (Tamil Nadu) ತಂಜಾವೂರಿನ (Thanjavur) ಕುಲಮಂಗಲಂ ಗ್ರಾಮದ ಗಣೇಶನ್ (70) ಎಂಬವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಮೀನಿನಲ್ಲಿ ಕುರಿಗಳು, ಹಸುಗಳು, ಕೋಳೀಗಳನ್ನು ಸಹ ಸಾಕುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.
ಮೊದಲಿಗೆ ಅಲ್ಲಿನ ಗ್ರಾಮಸ್ಥರು ಗಣೇಶನ್ ಅವರ ಈ ಕೆಲಸದಿಂದ ಆಶ್ಚರ್ಯಕ್ಕೊಳಗಾದರೂ, ಆನಂತರದಲ್ಲಿ ಗಣೇಶನ್ ಅವರಿಗೆ ಮೇಕೆಗಳ ಮೇಲಿರುವ ಕಾಳಜಿಯ ಕುರಿತು ಶ್ಲಾಘಿಸಿದರು. ಇದನ್ನೂ ಓದಿ:ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚಾಯ್ತು ಫೈಟ್
Live Tv
[brid partner=56869869 player=32851 video=960834 autoplay=true]
ತಂಜಾವೂರು: ನರೇಂದ್ರ ಮೋದಿಯಿಂದಾಗಿ ದೇಶದ ಜನತೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಹೇಳಿದ್ದಾರೆ.
ಪಕ್ಷದ ತಮಿಳುನಾಡು ರಾಜ್ಯ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆಂದು ಕೇಳಿದರೆ ಜನರು ಭಯಭೀತರಾಗಿ ತಮ್ಮ, ತಮ್ಮ ದೇವರನ್ನು ಕರೆದು ಮುಂಬರುವ ಅನಾಹುತಗಳಿಂದ ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಜಗತ್ತಿನಲ್ಲಿ ಎಲ್ಲಿಯೂ ಇಂತಹ ಪರಿಸ್ಥಿತಿಯಿಲ್ಲ. ದೇಶದ ಸಾರ್ವಜನಿಕ ಕ್ಷೇತ್ರಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಸಂಘ ಪರಿವಾರ ಮುಸ್ಲಿಮರನ್ನು ಮಾತ್ರ ಹೆದರಿಸುತ್ತಿದ್ದರೆ, ಇಂದು ಪರಿಸ್ಥಿತಿ ಬದಲಾಗಿದೆ. ಕ್ರೈಸ್ತರು, ದಲಿತರು, ಮಹಿಳೆಯರು ಮತ್ತು ರೈತರು ಎಲ್ಲರೂ ಇಂದು ಭಯದಲ್ಲಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಲಹೀನ ಗೊಳಿಸಿದ್ದಾರೆ. ರಾಜ್ಯಗಳು ಯಾವುದೇ ಅಧಿಕಾರವನ್ನು ಹೊಂದಿರದ ರೀತಿಯಲ್ಲಿ ಪ್ರತಿಯೊಂದು ಶಾಸನ ನಿಯಮಗಳನ್ನು ರೂಪಿಸಲಾಗುತ್ತಿದೆ. ಇಡೀ ದೇಶವನ್ನು ತಮ್ಮ ಪೊಲೀಸ್ ಪಡೆಗಳ ಅಧೀನಕ್ಕೆ ತರಲು ಪ್ರಯತ್ನಿಸುತ್ತಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಮುಂತಾದವರಿಗೆ ಸಮಸ್ಯೆ ಸೃಷ್ಟಿಸಲು ಬಿಎಸ್‍ಎಫ್‍ಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅದೆಷ್ಟೋ ಏಜೆನ್ಸಿಗಳು ಜನರನ್ನು ಹೆದರಿಸಲಿಕ್ಕಾಗಿಯೇ ಮುಂದೆ ಬರುತ್ತಿದೆ.
ದೇಶವು ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹಾಗೂ ಇತರ ಪಕ್ಷಗಳ ನಿಲುವು ಶೋಚನೀಯವಾಗಿದೆ. ಎಲ್ಲರೂ ಬಿಜೆಪಿ ಹೇಳುವುದರ ಜೊತೆಗೆ ನಿಲ್ಲುತ್ತಿದ್ದಾರೆ. ಬಿಜೆಪಿಯು ಅತೀ ದೊಡ್ಡ ಶ್ರೀರಾಮನ ಪ್ರತಿಮೆಯನ್ನು ನಿರ್ಮಿಸಲು ಮುಂದಾಗುತ್ತಿದ್ದರೆ, ಅಖಿಲೇಶ್ ಪರಶುರಾಮನ ಅತಿ ದೊಡ್ಡ ಪ್ರತಿಮೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾರೂ ಸಾರ್ವಜನಿಕ ಆಸ್ಪತ್ರೆಗಳು ಅಥವಾ ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿಲ್ಲ. ದೇಶದ ನಿರ್ಣಾಯಕರಾದ ಮುಸ್ಲಿಮರು, ಆದಿವಾಸಿಗಳು ಅಥವಾ ದಲಿತರನ್ನು ಯಾವ ಪಕ್ಷಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ
ಇಂದು ದೇಶದಲ್ಲಿ ಬಿಜೆಪಿಯನ್ನು ನೇರವಾಗಿ ಎದುರಿಸುತ್ತಿರುವ ಏಕೈಕ ರಾಜಕೀಯ ಪಕ್ಷ ಎಸ್‍ಡಿಪಿಐ ಮಾತ್ರವಾಗಿದೆ. ದೇಶದ ಸುರಕ್ಷತೆಯನ್ನು ಬಯಸುವವರಿಗೆ ಎಸ್‍ಡಿಪಿಐ ಜೊತೆಗೆ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ಧಾರ್ಮಿಕ ಮುಖಂಡರು ಸೇರಿದಂತೆ ಅನೇಕರು ಮೌನವಾಗಿದ್ದಾರೆ. ಯಾಕೆಂದರೆ ಅವರು ಮೋದಿ, ಅಮಿತ್ ಶಾ, ಯೋಗಿಗೆ ಹೆದರಿದ್ದು, ಈ ಪರಿಸ್ಥಿತಿ ಬದಲಾಗಲಿದ್ದು, ನಿರ್ಭೀತಿಯ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕಾಗಿಯೇ ಎಸ್.ಡಿ.ಪಿ.ಐ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್, ಬ್ರದರ್ ಅಂತ ಕತ್ತು ಕೊಯ್ಯೋದು: ಜಮೀರ್ ಅಹ್ಮದ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ನೆಲ್ಲಯ್ ಮುಬಾರಕ್ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು, ರಾಷ್ಟ್ರೀಯ ಉಪಾಧ್ಯಕ್ಷ ದಹ್ಲಾನ್ ಬಾಖವಿ, ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಬ್ದುಲ್ ಮಜೀದ್ ಫೈಝಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR