Tag: thangalaan film

  • ಗೋಲ್ಡನ್ ಆಫರ್ ಕೈಚೆಲ್ಲಿದ ರಶ್ಮಿಕಾ ಮಂದಣ್ಣ

    ಗೋಲ್ಡನ್ ಆಫರ್ ಕೈಚೆಲ್ಲಿದ ರಶ್ಮಿಕಾ ಮಂದಣ್ಣ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕೈತುಂಬಾ ಸಿನಿಮಾಗಳಿರುವ ನಟಿ, ತಮಗೆ ಸಿಕ್ಕ ಗೋಲ್ಡನ್ ಚಾನ್ಸ್ ಅನ್ನು ರಿಜೆಕ್ಟ್ ಮಾಡಿರೋದನ್ನು ತಿಳಿದು ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ.

    ತಮಿಳಿನ ಸೂಪರ್ ಹಿಟ್ ಚಿತ್ರವನ್ನು ರಶ್ಮಿಕಾ ಕೈಬಿಟ್ಟಿದಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಕಮಾಯಿ ಮಾಡುತ್ತಿರುವ ವಿಕ್ರಮ್‌ (Vikram) ನಟನೆಯ ‘ತಂಗಲಾನ್’ (Thangalaan Film) ಸಿನಿಮಾವನ್ನು ಪುಷ್ಪ ನಟಿ ಕೈಬಿಟ್ಟಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

    ನಿರ್ದೇಶಕ ಪಾ ರಂಜಿತ್ ಅವರು ಮಾಳವಿಕಾ ಮೋಹನನ್ ನಟಿಸಿರುವ ನಾಯಕಿ ಪಾತ್ರಕ್ಕೆ ಮೊದಲು ರಶ್ಮಿಕಾರನ್ನು ಸಂಪರ್ಕಿಸಿದ್ದರಂತೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರವನ್ನು ನಟಿ ಕೈಚೆಲ್ಲಿದ್ದರು. ಈಗ ‘ತಂಗಲಾನ್’ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಸಕ್ಸಸ್ ರೇಸ್ ನೋಡಿ ಅಯ್ಯೋ ಶ್ರೀವಲ್ಲಿ ಎಂತಹ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡರು ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ಪುಷ್ಪ 2, ಛಾವಾ, ಅನಿಮಲ್ ಪಾರ್ಕ್, ಕುಬೇರ, ರೈನ್‌ಬೋ ಸಿನಿಮಾ ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳಿವೆ.

  • ‘ತಂಗಲಾನ್’ ಸೀಕ್ವೆಲ್ ಬಗ್ಗೆ ಸಿಹಿಸುದ್ದಿ ಕೊಟ್ಟ ಚಿಯಾನ್ ವಿಕ್ರಮ್

    ‘ತಂಗಲಾನ್’ ಸೀಕ್ವೆಲ್ ಬಗ್ಗೆ ಸಿಹಿಸುದ್ದಿ ಕೊಟ್ಟ ಚಿಯಾನ್ ವಿಕ್ರಮ್

    ಪಾ ರಂಜಿತ್ (Pa Ranjith) ನಿರ್ದೇಶನದಲ್ಲಿ ಮೂಡಿ ಬಂದ ಚಿಯಾನ್ ವಿಕ್ರಮ್ (Chiyaan Vikram) ನಟನೆಯ ‘ತಂಗಲಾನ್’ (Thangalaan) ಸಿನಿಮಾವು ಆ.15ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ಇದರ ನಡುವೆ ಸಿನಿಮಾ ಸಮಾರಂಭವೊಂದರಲ್ಲಿ, ‘ತಂಗಲಾನ್ 2’ ಬರೋದಾಗಿ ಖುದ್ದು ಚಿಯಾನ್ ವಿಕ್ರಮ್ ತಿಳಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್‌ ಮಾಡಿದ ಶ್ರೀಲೀಲಾ

    ಪಾ ರಂಜಿತ್‌ಗೆ ನನ್ನ ಮೇಲೆ ಅಪಾರ ನಂಬಿಕೆ ಇತ್ತು, ಇದರಿಂದಾಗಿ ಈ ಚಿತ್ರ ಸಾಧ್ಯವಾಯಿತು. ‘ತಂಗಲಾನ್’ ಮುಂದಿನ ಭಾಗಕ್ಕೆ ಅರ್ಹವಾಗಿದೆ ಎಂದು ಸೀಕ್ವೆಲ್ ಬರೋದಾಗಿ ತಿಳಿಸಿದ್ದಾರೆ. ನೀವೆಲ್ಲರೂ ತುಂಬಾ ಇಷ್ಟಪಟ್ಟಿದ್ದೀರಿ. ‘ತಂಗಲಾನ್’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ ಎಂದಿದ್ದಾರೆ. ಈ ವೇಳೆ, ‘ಪೊನ್ನಿಯಿನ್ ಸೆಲ್ವನ್’ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಕ್ಕೆ ಖುಷಿ ಇದೆ ಎಂದು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ, ನಟನೆ ವಿಚಾರಕ್ಕೆ ಬಂದರೆ ಚಿಯಾನ್ ವಿಕ್ರಮ್ ನಟ ರಾಕ್ಷಸನೇ ಸರಿ. ‘ತಂಗಲಾನ್’ ಆಗಿ ನಟನ ಲುಕ್, ಗೆಟಪ್ ಹುಬ್ಬೇರಿಸುವಂತಿದೆ. ಡಿಫರೆಂಟ್ ಗೆಟಪ್‌ಗಳಲ್ಲಿ ವಿಕ್ರಮ್ ಕಾಣಿಸಿಕೊಂಡಿದ್ದಾರೆ. ‘ಅನ್ನಿಯನ್’, ‘ಐ’ ಸಿನಿಮಾಗಳ ಅಭಿನಯ ನೆನಪಿಸುವಂತಿದೆ. ಇನ್ನು ಗಂಗಮ್ಮ ಆಗಿ ಪಾರ್ವತಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆರತಿ ಆಗಿ ಮಾಳವಿಕಾ ಮೋಹನನ್ ಆ್ಯಕ್ಷನ್ ಸೀನ್‌ಗಳಲ್ಲಿ ಅಬ್ಬರಿಸಿದ್ದಾರೆ.