Tag: Thane

  • ರೈಲ್ವೇ ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

    ರೈಲ್ವೇ ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

    ಮುಂಬೈ: ಥಾಣೆ ರೈಲ್ವೇ ನಿಲ್ದಾಣದಲ್ಲಿ ಇಂದು ಬೆಳಗ್ಗೆ 20 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಪೂಜಾ ಚೌಹ್ಹಾಣ್ ಅವರು ಕೊಂಕಣ್ ಕನ್ಯಾ ಎಕ್ಸ್ ಪ್ರೆಸ್ ನಲ್ಲಿ ಮುಂಬೈಗೆ ತೆರಳುತ್ತಿದ್ದರು. ಹೀಗೆ ಹೋಗುತ್ತಿರಬೇಕಾದರೆ ಇಂದು ಮುಂಜಾನೆ 5.40ರ ಸುಮಾರಿಗೆ ಪೂಜಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದೇ ವೇಳೆ ರೈಲು ಥಾಣೆ ನಿಲ್ದಾಣದಲ್ಲಿ ನಿಲುಗಡೆಯಾಯಿತು. ಈ ವೇಳೆ ನಿಲ್ದಾಣದ ಸಿಬ್ಬಂದಿ ಮಹಿಳೆಯನ್ನು ಅಲ್ಲೇ ಇದ್ದ ಒನ್ ರೂಪಿ ಕ್ಲಿನಿಕ್‍ಗೆ ಕರೆದುಕೊಂಡು ಹೋದರು.

    ಕ್ಲಿನಿಕ್ ಗೆ ಅಡ್ಮಿಟ್ ಆದ ಬಳಿಕ ಮಹಿಳೆ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿದ್ದಾರೆ. ಅಲ್ಲಿ ಮಹಿಳೆ ಕುಳಿತಾಗ ಮಗುವಿನ ತಲೆ ಹೊರಬಂದಿದೆ. ಈ ವಿಚಾರ ತಿಳಿದ ಸಿಬ್ಬಂದಿ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಹೆರಿಗೆ ಮಾಡಿಸಿದ್ದಾರೆ.

    ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಇನ್ ರುಪಿ ಕ್ಲಿನಿಕ್ ಸಿಇಓ ರಾಹುಲ್ ಘುಲೆ ತಿಳಿಸಿದ್ದಾರೆ.

  • ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

    ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

    ಥಾಣೆ: ಪತ್ನಿ ಮಾಡುತ್ತಿರುವ ವೃತ್ತಿಯಿಂದ ಬೇಸತ್ತ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆಗೈದು ಬಳಿಕ ಆಕೆಯ ದೇಹವನ್ನು 8 ಪೀಸ್ ಮಾಡಿ ಬಿಸಾಕಿದ ಅಮಾನವೀಯ ಘಟನೆಯೊಂದು ಥಾಣೆ ಜಿಲ್ಲೆಯ ಬಿವಾಂಡಿ ಪ್ರದೇಶದಲ್ಲಿ ನಡೆದಿದೆ.

    ಪತ್ನಿ ಸಬಿನಾಬಿ ಸರ್ದಾರ್‍ಳನ್ನು ಪತಿ ಹಮೀದ್ ಅನ್ಸಾರಿ ಕೊಲೆ ಮಾಡಿದ್ದಾನೆ. ದಂಪತಿ ಬಿವಾಂಡಿಯ ನರ್ಪೊಲಿ ಪ್ರದೇಶದ ನಿವಾಸಿಗಳಾಗಿದ್ದಾರೆ.

    ಪತ್ನಿ ಸಬಿನಾಬಿ ಡಾನ್ಸ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಆರೋಪಿ ಪತಿ ಬೇಸತ್ತಿದ್ದನು. ಅಲ್ಲದೆ ಪತ್ನಿಯ ಕತ್ತು ಸೀಳಿ ಆಕೆಯ ದೇಹವನ್ನು 8 ಪೀಸ್ ಮಾಡಿ ಪ್ಲಾಸ್ಟಿಕ್ ಡ್ರಮ್ ಗೆ ಹಾಕಿ ಸೋನಾಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಬಂದಿದ್ದಾನೆ.

    ಹೀಗೆ ಬಿಸಾಕಿದ ಡ್ರಮ್ ನಿಂದ ಸ್ಥಳೀಯ ನಿವಾಸಿಗಳಿಗೆ ಕೊಳೆತ ವಾಸನೆ ಬರತೊಡಗಿದೆ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಮಹಿಳೆಯನ್ನು ಕೊಲೆ ಮಾಡಿ ಪೀಸ್ ಮಾಡಿರುವ ಬಗ್ಗೆ ಬೆಳಕಿಗೆ ಬಂತು. ಹೀಗಾಗಿ ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಅಲ್ಲದೆ ಸ್ಥಳೀಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಡ್ರಮ್ ಬಿಸಾಕಿ ಹೋಗಿರುವ ದೃಶ್ಯ ಪೊಲೀಸರ ಗಮನಕ್ಕೆ ಬಂದಿದೆ.

    ಗ್ರಾಮೀಣ ಭಾಗದ ಪೊಲೀಸ್ ಅಧಿಕಾರಿ ಡಾ. ಶಿವಾಜಿ ರಾಥೋರ್ ಹಾಗೂ ಕ್ರೈಂ ಬ್ರ್ಯಾಂಚ್ ಇನ್ಸ್ ಪೆಕ್ಟರ್ ವೆಂಕಟ್ ಅಂಧಾಲೆಯವರ ನೇತೃತ್ವದ ತಂಡ ತನಿಖೆ ನಡೆಸಿತ್ತು. ಈ ವೇಳೆ ಪೀಸ್ ಪೀಸ್ ಆದ ದೇಹವನ್ನು ತುಂಬಿದ್ದ ಪ್ಲಾಸ್ಟಿಕ್ ಡ್ರಮ್ ತಾರಾಪುರದಲ್ಲಿ ತಯಾರಾಗಿದ್ದು, ಅದನ್ನು ಬಿವಾಂಡಿ ಅಂಗಡಿಯಲ್ಲಿ ಮಾರಾಟ ಮಾಡಲಾಗಿತ್ತು. ಈ ಡ್ರಮ್ಮನ್ನು ಆರೋಪಿ ಖರೀದಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಆರೋಪಿಯನ್ನು ಥಾಣೆ ನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

  • ಯುವತಿಗೆ ಲೈಂಗಿಕ ಕಿರುಕುಳ – 61ರ ವೃದ್ಧ ಅರೆಸ್ಟ್

    ಯುವತಿಗೆ ಲೈಂಗಿಕ ಕಿರುಕುಳ – 61ರ ವೃದ್ಧ ಅರೆಸ್ಟ್

    ಥಾಣೆ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ 61 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ.

    ವೃದ್ಧ ಸುಮಾರು ನಾಲ್ಕು ತಿಂಗಳಿನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಯುವತಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವೃದ್ಧ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆತನ ಕಿರುಕುಳ ತಳಲಾರದೇ ನಾನು ಸುಮಾರು ಕೆಲಸ ಬಿಡಬೇಕಾಯಿತು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆತ ನನ್ನ ಬಳಿ ಬಂದು ನನಗೆ ಅಸಭ್ಯವಾಗಿ ಮುಟ್ಟಿದ್ದಾನೆ. ಆಗ ನಾನು ನನ್ನ ಕೈಯಲ್ಲಿದ್ದ ಟಿಫಿನ್ ಬಾಕ್ಸ್ ಹಿಡಿದು ಆತನ ಮೇಲೆ ಹಲ್ಲೆ ಮಾಡಿದೆ ಎಂದು ಯುವತಿ ತಿಳಿಸಿದ್ದಾಳೆ.

    ಯುವತಿ ಹಲ್ಲೆ ಮಾಡಿದ ನಂತರ ವೃದ್ಧ ಸ್ಥಳದಿಂದ ಪರಾರಿ ಆಗಲು ಯತ್ನಿಸಿದ್ದ. ಈ ವೇಳೆ ಸ್ಥಳದಲ್ಲಿದ್ದ ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಕೂಡ ಸ್ಥಳೀಯರ ಜೊತೆ ಪೊಲೀಸ್ ಠಾಣೆಗೆ ಹೋಗಿ ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಮೊದಲು ಮಂದಿರ ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಅಯೋಧ್ಯೆಗೆ ಹೊರಟ ಶಿವ ಸೈನಿಕರು

    ‘ಮೊದಲು ಮಂದಿರ ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಅಯೋಧ್ಯೆಗೆ ಹೊರಟ ಶಿವ ಸೈನಿಕರು

    ಮುಂಬೈ: ಶಿವಸೇನಾ ಮತ್ತು ವಿಶ್ವ ಹಿಂದೂ ಪರಿಷದ್(ವಿಎಚ್‍ಪಿ) ಕಾರ್ಯಕರ್ತರನ್ನು ಒಳಗೊಂಡ ಶಿವ ಸೈನಿಕರು `ಮೊದಲು ಮಂದಿರ-ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ರಾಮಜನ್ಮ ಭೂಮಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.

    ಹೌದು, 2019ರ ಲೋಕಸಭಾ ಚುನಾವಣೆಯ ಪ್ರಮುಖ ಅಸ್ತ್ರವಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಶಿವಸೇನೆ ಹಾಗೂ ವಿಎಚ್‍ಪಿ ಕಾರ್ಯಕರ್ತರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಗುರುವಾರ ಮಧ್ಯಾಹ್ನ ಮಹಾರಾಷ್ಟ್ರದ ಥಾಣೆ ರೈಲ್ವೇ ನಿಲ್ದಾಣದಲ್ಲಿ ಸಿದ್ಧವಾಗಿದ್ದ ವಿಶೇಷ ರೈಲಿನಲ್ಲಿ ಶಿವ ಸೈನಿಕರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಕೇಸರಿ ವಸ್ತ್ರ ಧರಿಸಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಪ್ರವಾಸ ಕೈಗೊಂಡಿದ್ದಾರೆ. ಈ ವಿಶೇಷ ರೈಲಿಗೆ ಆರತಿ ಬೆಳಗುವ ಮೂಲಕ ಥಾಣೆಯ ಮೇಯರ್ ಮೀನಾಕ್ಷಿ ಸಿಂಧೆ ಚಾಲನೆ ನೀಡಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಕಾರ್ಪೋರೇಟರ್ ನರೇಶ್ ಮಸ್ಕೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಭರವಸೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ರಾಮ ಮಂದಿರ ಮಾತ್ರ ನಿರ್ಮಾಣವಾಗಿಲ್ಲ. ಭಗವಾನ್ ಶ್ರೀ ರಾಮನ ಮಂದಿರ ನಿರ್ಮಾಣದ ಕಾರ್ಯಕ್ಕೆ ಈಗ ಸಕಾಲ ಕೂಡಿ ಬಂದಿದೆ ಎಂದು ಹೇಳಿದ್ದಾರೆ.

    ಶುಕ್ರವಾರ ರಾತ್ರಿ ಅಯೋಧ್ಯೆ ತಲುಪಲಿರುವ ಸಾವಿರಾರು ಕಾರ್ಯಕರ್ತರು, ಶನಿವಾರ ಸಂಜೆ ನಯಾ ಘಾಟ್ ನಲ್ಲಿ ಮಹಾ ಸಮಾವೇಶ ಹಾಗೂ ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!

    ಸೋದರಿಯನ್ನು ಪ್ರೀತಿಸ್ತಿದ್ದಾನೆಂದು ಹೊಡೆದು ಕೊಂದೇ ಬಿಟ್ಟ!

    ಥಾಣೆ: ತನ್ನ ಸಹೋದರಿಯನ್ನು ಪ್ರೀತಿಸುತ್ತಿದ್ದಾನೆಂದು ವ್ಯಕ್ತಿಯೊಬ್ಬ 23 ವರ್ಷದ ಆಟೋ ಚಾಲಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ರಾಹುಲ್ ನಾಮ್ಡಿಯೋ ಎಂದು ಗುರುತಿಸಲಾಗಿದ್ದು ಆರೋಪಿಯ ಬಂಧನದ ಬಳಿಕ ತನಿಖೆ ಮುಂದುವರಿದಿದೆ.

    ಆರೋಪಿಯು ಕಳೆದ ಭಾನುವಾರ ನಗರದ ದೇವಸ್ಥಾನವೊಂದರ ಹತ್ತಿರ ವ್ಯಕ್ತಿಯೊಬ್ಬ ಗಾಯಗೊಂಡು ಬಿದ್ದಿರುವುದಾಗಿ ಅಂಬೆರ್ ನಾಥ್ ನಲ್ಲಿರುವ ಶಿವಾಜಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಗಾಯಾಳು ವ್ಯಕ್ತಿ ಮೃತಪಟ್ಟಿದ್ದನು. ಹೀಗಾಗಿ ಆಕಸ್ಮಿಕ ಸಾವು ಅಂತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಲ್ಲಿಂದ ತೆರಳಿದ್ದರು. ಆ ಬಳಿಕ ಪೊಲೀಸರಿಗೆ ಪ್ರಕರಣ ಕುರಿತು ಶಂಕೆ ವ್ಯಕ್ತವಾಗಿದ್ದು, ವ್ಯಕ್ತಿಯ ಸಾವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ರು. ಈ ವೇಳೆ ನಾಮ್ಡಿಯೋಗೆ ಮೃತಪಟ್ಟ ವ್ಯಕ್ತಿಯ ಪರಿಚಯವಿರೋದಾಗಿ ಬೆಳಕಿಗೆ ಬಂದಿದೆ ಅಂತ ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಮೃತ ವ್ಯಕ್ತಿಯನ್ನು 25 ವರ್ಷದ ಬಬ್ಬು ಬಾಗ್ಡಿ ಎಂದು ಗುರುತಿಸಲಾಗಿದ್ದು, ಈತ ನಾಮ್ಡಿಯೋನ 21 ವರ್ಷದ ಸಹೋದರಿ ಜೊತೆ ಸಂಬಂಧ ಹೊಂದಿದ್ದನು. ಇವರಿಬ್ಬರ ಸಂಬಂಧಕ್ಕೆ ನಾಮ್ಡಿಯೋ ವಿರೋಧ ವ್ಯಕ್ತಪಡಿಸಿದ್ದನು. ಆದ್ರೂ ಬಬ್ಬು, ನಾಮ್ಡಿಯೋ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಅಂತ ಅವರು ವಿವರಿಸಿದ್ದಾರೆ.

    ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ನಾಮ್ಡಿಯೋ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಾನೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಬಬ್ಬುವನ್ನು ಪ್ರತ್ಯೇಕ ಸ್ಥಳವೊಂದಕ್ಕೆ ಕರೆದು ಆತನನ್ನು ಹೊಡೆದು ಕೊಲೆ ಮಾಡಿ ಬಳಿಕ ಗಾಯಗೊಂಡು ರಕ್ತದ ಮಡುವಿನಲ್ಲಿ ವ್ಯಕ್ತಿಯೊಬ್ಬ ಬಿದ್ದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಅಂತ ನಾಮ್ಡಿಯೋ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 201(ಪುರಾವೆಗಳ ನಿರ್ಮೂಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ವಕ್ತಾರ ಸುಖಾದ ನರ್ಕಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯ ಕಾಂಪೌಂಡ್‍ನೊಳಗೆ ಆರಾಮಾಗಿ ಓಡಾಡಿದ ಚಿರತೆ- 5 ಗಂಟೆಗಳ ನಂತರ ರಕ್ಷಣೆ

    ಮನೆಯ ಕಾಂಪೌಂಡ್‍ನೊಳಗೆ ಆರಾಮಾಗಿ ಓಡಾಡಿದ ಚಿರತೆ- 5 ಗಂಟೆಗಳ ನಂತರ ರಕ್ಷಣೆ

    ಥಾಣೆ: ಚಿರತೆಯೊಂದು ಜನನಿವಾಸಿ ಕಟ್ಟಡದೊಳಗೆ ನುಗ್ಗಿ ಆರಾಮಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿನ ಉಲ್ಲಾಸ್‍ನಗರ ಪ್ರದೇಶದಲ್ಲಿ ಭಾನುವಾರದಂದು ಚಿರತೆ ಕಾಣಿಸಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಮೊದಲಿಗೆ ಇಲ್ಲಿನ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಚಿರತೆಯನ್ನ ನೋಡಿದ್ದಾರೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ಕಟ್ಟಡದೊಳಗೆ ಓಡಾಡಿರೋ ದೃಶ್ಯಗಳು ಕಂಡುಬಂದಿವೆ. ಕಟ್ಟಡದ ಕಾಂಪೌಂಡ್ ಒಳಗಿನ ಓಣಿಯಲ್ಲಿ ನಡೆದಾಡಿದ ಚಿರತೆ, ಮುಂದಿನ ಗೇಟ್‍ನಿಂದಲೇ ಹೊರಹೋಗಿದೆ.

    ನಾನು ಕಟ್ಟಡದ ಮುಂದೆ ಕುಳಿತಿದ್ದಾಗ ಚಿರತೆ ಗೋಡೆಯ ಬಳಿ ಹಾರಿ ಸೊಸೈಟಿಯೊಳಗೆ ಹೋಗೋದನ್ನ ನೋಡಿದೆ ಎಂದು ಸೆಕ್ಯೂರಿಟಿ ಗಾರ್ಡ್ ಮನೋಜ್ ಪಾಟಿಲ್ ಹೇಳಿದ್ದಾರೆ. ಈ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಅಲ್ಲಿನ ನಿವಾಸಿಗಳನ್ನ ಎಚ್ಚರಿಸೋ ವೇಳೆಗೆ ಚಿರತೆ ಅಲ್ಲಿಂದ ಪರಾರಿಯಾಗಿ ಮತ್ತೊಂದು ಪ್ರದೇಶಕ್ಕೆ ಹೋಗಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಚಿರತೆ ಪ್ರತ್ಯಕ್ಷವಾದ ಬಗ್ಗೆ ಸುದ್ದಿ ಹರಡಿದ ಬಳಿಕ ಇಲ್ಲಿನ ನಿವಾಸಿಗಳು ಆತಂಕಕ್ಕೀಡಾಗಿ ಮನೆ ಲಾಕ್ ಮಾಡಿಕೊಂಡು ಒಳಗಡೆ ಇದ್ದರು. ಉಲ್ಲಾಸ್‍ನಗರದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಇಲ್ಲಿನ ನಿವಾಸಿಯೊಬ್ಬರು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    4-5 ಗಂಟೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ನೀಡಿ ಚಿರತೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    https://www.youtube.com/watch?time_continue=27&v=hZn9oaqlOY8

  • 5 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್

    5 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಥಾಣೆ: ಐದು ವರ್ಷದ ಬಾಲಕಿಯ ಮೇಲೆ ಕಾಮುಕರು ಗ್ಯಾಂಗ್ ರೇಪ್ ಎಸಗಿರೋ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಘಟನೆಯ ಬಳಿಕ ಬಾಲಕಿ ರಸ್ತೆ ಬದಿಯಲ್ಲಿ ಅಳುತ್ತಾ ನಿಂತಿದ್ದನ್ನು ಗಮನಿಸಿದ ದಾರಿಹೋಕರೊಬ್ಬರು ಆಕೆಯನ್ನು ವಿಚಾರಿಸಿ ನಂತರ ಪೊಲೀಸ್ ಠಾಣೆಗೆ ಕರೆದತಂದಿದ್ದಾರೆ.

    ಪೊಲೀಸರು ಬಾಲಕಿಯನ್ನು ವಿಚಾರಿಸಿ ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.

    ಥಾಣೆ ಪೊಲೀಸರು ಭಾನುವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • 70 ಕಲಾವಿದರು ಸೇರಿ 9 ಗಂಟೆಯಲ್ಲಿ 18 ಸಾವಿರ ಚದರ ಅಡಿಯ ಸುಂದರ ರಂಗೋಲಿ ರಚಿಸಿದ್ರು!

    70 ಕಲಾವಿದರು ಸೇರಿ 9 ಗಂಟೆಯಲ್ಲಿ 18 ಸಾವಿರ ಚದರ ಅಡಿಯ ಸುಂದರ ರಂಗೋಲಿ ರಚಿಸಿದ್ರು!

    ಮುಂಬೈ: ಗುಡಿ ಪದ್ವಾ ಹಬ್ಬದ ಅಂಗವಾಗಿ ಮಹಾರಾಷ್ಟ್ರದಲ್ಲಿ 18 ಸಾವಿರ ಚದರ ಅಡಿಯಷ್ಟು ದೊಡ್ಡದಾದ ಸುಂದರವಾದ ರಂಗೋಲಿಯನ್ನ ರಚಿಸಲಾಗಿದೆ.

    ಥಾಣೆಯ ಗಾವೋದೇವಿ ಮೈದಾನ್ ನಲ್ಲಿ 900 ಕೆಜಿ ರಂಗೋಲಿ ಪುಡಿಯನ್ನ ಬಳಸಿ ಈ ಸುಂದರವಾದ ರಂಗೋಲಿ ಹಾಕಲಾಗಿದೆ. ಸುಮಾರು 70 ಕಲಾವಿದರು ಸೇರಿ 9 ಗಂಟೆಗಳ ಕಾಲ ಶ್ರಮಿಸಿ ವರ್ಣರಂಜಿತವಾದ ರಂಗೋಲಿಯನ್ನ ಚಿತ್ರಿಸಿದ್ದಾರೆ.

    ಭಾರತದಲ್ಲಿ ಹೊಸ ವರ್ಷವನ್ನ ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಯುಗಾದಿ ಹಬ್ಬ ಆಚರಿಸಿದಂತೆ ಮಹಾರಾಷ್ಟ್ರದಲ್ಲಿ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಮೊದಲ ದಿನವನ್ನ ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಇದಕ್ಕೆ ಗುಡಿ ಪದ್ವಾ ಎಂದು ಕರೆಯುತ್ತಾರೆ. ಕೊಂಕಣಿ ಸಮುದಾಯದವರು ಈ ದಿನವನ್ನ ಸಂವತ್ಸರ ಎಂದು ಕರೆಯುತ್ತಾರೆ.

  • 1 ರೂಪಾಯಿಗಾಗಿ ವ್ಯಕ್ತಿಯನ್ನು ಕಾಲಿನಿಂದಲೇ ಒದ್ದು ಕೊಂದ್ರು!

    1 ರೂಪಾಯಿಗಾಗಿ ವ್ಯಕ್ತಿಯನ್ನು ಕಾಲಿನಿಂದಲೇ ಒದ್ದು ಕೊಂದ್ರು!

    ಥಾಣೆ: ಕೇವಲ ಒಂದು ರೂಪಾಯಿಗಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿಯನ್ನು 54 ವರ್ಷದ ಮನೋಹರ ಗಾಮ್ನೆ ಎಂದು ಗುರುತಿಸಲಾಗಿದ್ದು, ಈ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಮ್ನೆ ಮನೆ ಸಮೀಪದ ಅಂಗಡಿಯಲ್ಲಿ ಮೊಟ್ಟೆ ಖರೀದಿಸಲು ಹೋಗಿದ್ದಾರೆ. ಅಂಗಡಿಯಲ್ಲಿ ತಾನು ಖರೀದಿಸಿದ ಮೊಟ್ಟೆಗೆ ಒಂದು ರೂಪಾಯಿ ಕಡಿಮೆ ಕೊಟ್ಟಿದ್ದಾರೆ. ಇದರಿಂದ ಅಂಗಡಿಯ ಮಾಲೀಕ ವ್ಯಕ್ತಿಯ ಜೊತೆ ಜಗಳ ಮಾಡಿದ್ದಾನೆ.

    ಜಗಳ ವಿಕೋಪಕ್ಕೆ ಹೋಗಿ ಅಂಗಡಿಯ ಮಾಲೀಕ ಗಾಮ್ನೆಗೆ ಕಾಲಿನಿಂದ ಒದ್ದು, ಕೈಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮವಾಗಿ ಗಾಮ್ನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಥಾಣೆ ಪೊಲೀಸ್ ಪಿಆರ್ ಒ ಸುಖದಾ ನಾರ್ಕರ್ ತಿಳಿಸಿದ್ದಾರೆ.

    ಈ ಘಟನೆ ಸಂಬಂಧ ಆರೋಪಿ ಅಂಗಡಿ ಮಾಲೀಕ ಸುಧಾಕರ್ ಪ್ರಭು (45) ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

  • ಮಹಿಳೆ, ಪ್ರಿಯಕರ, ಇಬ್ಬರು ಸ್ನೇಹಿತರು ಸೇರಿ 1 ವರ್ಷದ ಮಗುವನ್ನ ಕೊಂದ್ರು

    ಮಹಿಳೆ, ಪ್ರಿಯಕರ, ಇಬ್ಬರು ಸ್ನೇಹಿತರು ಸೇರಿ 1 ವರ್ಷದ ಮಗುವನ್ನ ಕೊಂದ್ರು

    ಥಾಣೆ: ತನ್ನ ಒಂದು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಹೂತಿಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಥಾಣೆ ಪೊಲೀಸರು ಮಹಿಳೆ ಹಾಗೂ ಇತರೆ ಮೂವರನ್ನು ಇಲ್ಲಿನ ಭಿವಾಂಡಿಯಲ್ಲಿ ಬಂಧಿಸಿದ್ದಾರೆ.

    ಆರೋಪಿಯಾದ 21 ವರ್ಷದ ಮಹಿಳೆ 2016ರ ಮಾರ್ಚ್‍ನಲ್ಲಿ ಮದುವೆಯಾಗಿದ್ದು, ಒಬ್ಬ ಮಗನಿದ್ದ. ಆದ್ರೆ ಗಂಡ ಹೆಂಡತಿ ನಡುವೆ ಜಗಳಗಳಾಗಿ 4 ತಿಂಗಳಿನಿಂದ ಪ್ರತ್ಯೇಕವಾಗಿ ವಾಸವಿದ್ದರು. ನಂತರ ಮಹಿಳೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದು, ಮಗುವಿನಿಂದ ಮುಕ್ತಿ ಪಡೆಯಬೇಕು ಎಂದುಕೊಂಡಿದ್ದಳು. ಹೀಗಾಗಿ ಮಂಗಳವಾರ ರಾತ್ರಿ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಂಕೋಲಿ ಗ್ರಾಮದ ಕೈಗಾರಿಕಾ ಕಾಂಪೌಂಡ್‍ನಲ್ಲಿ ಮೃತದೇಹವನ್ನ ಹೂತಿದ್ದಾರೆ ಎಂದು ನಾರ್ಪೊಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ ಪೆಕ್ಟರ್ ಎಸ್‍ಡಿ ಜಾಧವ್ ಹೇಳಿದ್ದಾರೆ.

    ಮಹಿಳೆಯ ಗಂಡನಿಗೆ ಸಂಶಯ ಮೂಡಿ ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರರಣೆ ನಡೆಸಿದ ಪೊಲೀಸರು ಬುಧವಾರದಂದು ಬಾಲಕನ ಮೃತದೇಹವನ್ನ ಪತ್ತೆಹಚ್ಚಿದ್ದಾರೆ. ಸ್ಥಳೀಯ ತಹಶಿಲ್ದಾರ್ ಹಾಗೂ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಮೃತದೇಹವನ್ನ ವಶಪಡಿಸಿಕೊಂಡಿದ್ದು, ಭಿವಾಂಡಿಯ ಐಜಿಎಮ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಜಾಧವ್ ಹೇಳಿದ್ದಾರೆ.

    ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201 ಹಾಗೂ 34 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    Black woman in handcuffs