Tag: thandav ram

  • ಕೊಲೆ ಯತ್ನ ಕೇಸ್; ನಟ ತಾಂಡವೇಶ್ವರ್ ಅರೆಸ್ಟ್- ಕಮಿಷನರ್ ದಯಾನಂದ್ ಹೇಳೋದೇನು?

    ಕೊಲೆ ಯತ್ನ ಕೇಸ್; ನಟ ತಾಂಡವೇಶ್ವರ್ ಅರೆಸ್ಟ್- ಕಮಿಷನರ್ ದಯಾನಂದ್ ಹೇಳೋದೇನು?

    ‘ಜೋಡಿಹಕ್ಕಿ’ ಸೀರಿಯಲ್‌ ಖ್ಯಾತಿಯ ನಟ ತಾಂಡವೇಶ್ವರ್ (Thandaveshwar) ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ್ದಕ್ಕೆ ಚಂದ್ರಾಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫೈರಿಂಗ್ ಪ್ರಕರಣದ ಕುರಿತು ಕಮಿಷನರ್ ದಯಾನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಗೊತ್ತಿದ್ದೆ ಏರ್‌ಫೈರ್ ಮಾಡಿರೋದು ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ (B. Dayanand) ತಿಳಿಸಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

    ನಿನ್ನೆ (ನ.18) ಸಂಜೆ ಈ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಆರೋಪಿ ತಾಂಡವ್‌ರನ್ನು ಈಗಾಗಲೇ ಬಂಧಿಸಿದ್ದೇವೆ. ಕೃತ್ಯಕ್ಕೆ ಬಳಸಿದ ಗನ್ ಸೀಜ್ ಮಾಡಲಾಗಿದೆ. ಸಿನಿಮಾಗೆ ಸಂಬಂಧಿಸಿದಂತೆ ಹಣಕಾಸಿನ ವ್ಯವಹಾರದಲ್ಲಿ ತಾಂಡವ್ ಮತ್ತು ನಿರ್ದೇಶಕ ಭರತ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂಬುದು ಪ್ರಾರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗುಂಡು ಹಾರಿಸಬೇಕು ಎಂಬ ದೃಷ್ಟಿಕೋನದಲ್ಲಿ ಹೀಗೆ ಮಾಡಿದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿದ್ದಾರೆ.

    ಅಷ್ಟಕ್ಕೂ ಆಗಿದ್ದೇನು?

    ‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ಹೀರೋ ಆಗಿ ನಟಿಸುತ್ತಿದ್ದರು. ಈ ಚಿತ್ರಕ್ಕೆ ಭರತ್ ನಿರ್ದೇಶನ ಮಾಡುತ್ತಿದ್ದರು. ಕಳೆದ 2 ವರ್ಷಗಳಿಂದ ನಡೆಯುತ್ತಿದ್ದ ಸಿನಿಮಾ ಶೂಟಿಂಗ್, ನಿರ್ಮಾಪಕರು ಸಿಗದ ಹಿನ್ನೆಲೆ ಹಂತ ಹಂತವಾಗಿ ನಟ ತಾಂಡವ್ 6 ಲಕ್ಷ ಚಿತ್ರಕ್ಕೆ ಹೂಡಿಕೆ ಮಾಡಿದರು. ಪ್ರಸ್ತುತ ಹಾಸನದ ಕುಮಾರಸ್ವಾಮಿ ಎಂಬುವವರು ಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ.

    ಬೇರೆ ನಿರ್ಮಾಪಕರು ಸಿಕ್ಕಿದರು ಕೂಡ ಸಿನಿಮಾ ಶೂಟಿಂಗ್ ಅನ್ನು ನಿರ್ದೇಶಕ ಭರತ್ ನಿಲ್ಲಿಸಿದರು. ಈ ಹಿನ್ನೆಲೆ ತಾವು ಕೊಟ್ಟಿದ್ದ 6 ಲಕ್ಷ ರೂ. ತಾಂಡವ್ ವಾಪಸ್ ಕೇಳಿದರು. ಹಣಕಾಸಿನ ವಿಚಾರ ಚರ್ಚಿಸುವ ವೇಳೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನಟ ತಾಂಡವ್ ಗನ್ ಹಿಡಿದು ಭರತ್ ಕಡೆ ಗುಂಡು ಹಾರಿಸಿದ್ದಾರೆ. ಆದರೆ ಆ ಗುಂಡಿನ ದಾಳಿಯಿಂದ ಭರತ್ ತಪ್ಪಿಸಿಕೊಂಡಿದ್ದಾರೆ. ಇದೀಗ ಭರತ್ ದೂರಿನ ಮೇರೆಗೆ ತಾಂಡವ್‌ರನ್ನು ಚಂದ್ರಲೇಔಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಕೊಲೆ ಯತ್ನದ ಕೇಸ್‌ನಲ್ಲಿ ನಟ ತಾಂಡವ್ ರಾಮ್ ಅರೆಸ್ಟ್

    ಕೊಲೆ ಯತ್ನದ ಕೇಸ್‌ನಲ್ಲಿ ನಟ ತಾಂಡವ್ ರಾಮ್ ಅರೆಸ್ಟ್

    ‘ಜೋಡಿಹಕ್ಕಿ’ ಸೀರಿಯಲ್ ಖ್ಯಾತಿಯ ನಟ ತಾಂಡವ್ ರಾಮ್ (Thandav Ram) ಕೊಲೆ ಯತ್ನದ ಕೇಸ್‌ನಲ್ಲಿ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ‘ದೇವನಾಂಪ್ರಿಯ’ ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶಕ ಭರತ್ (Director Bharath) ಮೇಲೆ ತಾಂಡವ್ ಗುಂಡು ಹಾರಿಸಿದ್ದಕ್ಕೆ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಐ ಲೈಕ್ ಯೂ ಎಂದ ಶೋಭಾ ಶೆಟ್ಟಿ

    ‘ದೇವನಾಂಪ್ರಿಯ’ ಸಿನಿಮಾದಲ್ಲಿ ತಾಂಡವ್ ರಾಮ್ ನಾಯಕ ನಟನಾಗಿ ನಟಿಸುತ್ತಿದ್ದರು. ಕಾರಣಾಂತರಗಳಿಂದ ‘ದೇವನಾಂಪ್ರಿಯ’ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆ ಚಂದ್ರಲೇಔಟ್‌ನ ಕಚೇರಿಯಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿತ್ತು. ಆಗ ತಾಂಡವ್‌ಗೂ ಚಿತ್ರದ ನಿರ್ದೇಶಕ ಭರತ್‌ಗೂ ವಾಗ್ವಾದ ನಡೆದಿದೆ. ಈ ವೇಳೆ, ಸಿಟ್ಟಿನಿಂದ ಗನ್ ತೆಗೆದು ಭರತ್ ಮೇಲೆ ತಾಂಡವ್ ಗುಂಡು ಹಾರಿಸಿದ್ದಾರೆ.

    ಅದೃಷ್ಟವಶಾತ್ ಗುಂಡು ಡೈರೆಕ್ಟರ್ ಭರತ್‌ಗೆ ತಗುಲದೆ ಗೋಡೆಗೆ ಬಿದ್ದಿದೆ. ಇದೀಗ ಭರತ್ ದೂರಿನ ಮೇರೆಗೆ ನಟ ತಾಂಡವ್ ಅವರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಅಂದಹಾಗೆ, ಒಂದು ಕಥೆ ಹೇಳ್ಲಾ, ಜೋಡಿಹಕ್ಕಿ ಸೀರಿಯಲ್, ಭೂಮಿಗೆ ಬಂದ ಭಗವಂತ ಸೀರಿಯಲ್‌ನಲ್ಲಿ ತಾಂಡವ್ ರಾಮ್ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದರು.

  • ‘ಜೋಡಿಹಕ್ಕಿ’ ಹೀರೋ ತಾಂಡವ್ ಈಗ ‘ದೇವನಾಂಪ್ರಿಯ’- ಫಸ್ಟ್ ಲುಕ್ ರಿಲೀಸ್

    ‘ಜೋಡಿಹಕ್ಕಿ’ ಹೀರೋ ತಾಂಡವ್ ಈಗ ‘ದೇವನಾಂಪ್ರಿಯ’- ಫಸ್ಟ್ ಲುಕ್ ರಿಲೀಸ್

    ‘ಅಡಚಣೆಗಾಗಿ ಕ್ಷಮಿಸಿ’ ಮತ್ತು ‘ಮುಗಿಲ್ ಪೇಟೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಭರತ್ ಎಸ್. ನಾವುಂದ ಈಗ 3ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜೋಡಿಹಕ್ಕಿ’ (Jodihakki) ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ (Thandav Ram) ಅವರು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ವಿಶೇಷವಾಗಿ ಇಂದು ಬಿಡುಗಡೆ ಮಾಡಲಾಗಿದೆ.

     

    View this post on Instagram

     

    A post shared by Thandav Ram (@thandav_ram)

    ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಭರತ್ ಹಾಗೂ ‘ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿ ಗಳಿಸಿರುವ ತಾಂಡವ್ ರಾಮ್ ಸಿನಿಮಾಗೆ ‘ದೇವನಾಂಪ್ರಿಯ’ ಎಂಬ ಶೀರ್ಷಿಕೆ ಇಡಲಾಗಿದೆ. ‘ದೇವನಾಂಪ್ರಿಯ’ ಅಂದರೆ ದೇವತೆಗಳಿಗೆ ಪ್ರಿಯನಾದವನು ಎಂದು ಕರೆಯಲಾಗುತ್ತದೆ.

    ಫಸ್ಟ್ ಲುಕ್ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದ್ದು, ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಿಂದ ಮಹಿಳೆಯ ಆಕೃತಿ, ಎರಡು ಗ್ರಾಮಗಳು ಹೀಗೆ ನಾನಾ ವಿಷಯಗಳು ಕಾಣಿಸುತ್ತವೆ.

    ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ (Devanampriya) ಸಿನಿಮಾವನ್ನು ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗಲಿದೆ. ಎ ಕ್ಯೂಬ್ ಫಿಲಂಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಮುಂದಿನ ವಾರದಿಂದ ‘ದೇವನಾಂಪ್ರಿಯ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.