Tag: Thambula

  • ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ

    ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ

    ಮಂಗಳೂರು: ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ವಾಜೀದ್ ಅವರು ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಳಲಿ ಮಸೀದಿಯಲ್ಲಿ ಹಿಂದೂ ದೇವರ ಕುರುಹು ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಕಣ್ಣೂರಿನಲ್ಲಿ ನಡೆದ ಎಸ್‍ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿದ ಅವರು, ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟುಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ ಎಂದು ಹೇಳಿದ್ದಾರೆ.

    ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು. ‘ಪೂಜಾ ಸ್ಥಳ ಕಾಯ್ದೆ 1991’ ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆಕ್ಟ್ ಅನ್ನು ಪೊಲೀಸರು ಓದಿಲ್ವೇ?. 2006ರಲ್ಲಿ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ. ಸಂಘಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಸಚಿವ ಶ್ರೀರಾಮುಲು ಧ್ವಂಸಗೊಳಿಸಿದ್ದರಲ್ಲ. ತಾಕತ್ತಿದ್ದರೆ ಜನಾರ್ದನ ರೆಡ್ಡಿ ಮನೆಗೆ ಮಾರ್ಚ್ ಮಾಡಲಿ ಎಂದು ಸವಾಲೆಸೆದರು.

    ಇದೀಗ ವಾಜೀದ್ ಹೇಳಿಕೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಬ್ದುಲ್ ವಾಜೀದ್ ಅವರು ಕೋಮು ಭಾವನೆಯನ್ನು ಕೆರಳಿಸುವಂತೆ ಭಾಷಣ ಮಾಡಿದ್ದಾರೆ. ಮಳಲಿ ಮಸೀದಿ ಬಗ್ಗೆ ಪೂರ್ಣ ಪ್ರಕ್ರಿಯೆ ನಡೆಯಬೇಕಿದೆ ಇಂತಹ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಸರಿಯಲ್ಲ. ಈಗಾಗಲೇ ನಗರದಲ್ಲಿ 144 ಸೆಕ್ಷನ್ ಜಾರಿ ಇದೆ ಕೋಮು ಗಲಭೆ ಸೃಷ್ಟಿಸುವಂತಹ ಹೇಳಿಕೆ ಕೂಡ ನೀಡೋ ಹಾಗಿಲ್ಲ. ಆದರೆ ಅವರ ಭಾಷಣ ಹಿಂದೂಗಳನ್ನು ಪ್ರಚೋದಿಸಿದಂತೆ ಇದೆ.

    ಅವರ ಪ್ರಚೋದನಾಕಾರಿ ಭಾಷಣಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಖಂಡಿಸಿದ್ದಾರೆ. ಹಿಂದೂಗಳ ಆಚಾರ, ವಿಚಾರ ಪೂಜೆ ಪುನಸ್ಕಾರಗಳನ್ನು ಕೆದಕಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಹಿಂದೂಗಳ ನಂಬಿಕೆಗೆ ಧಕ್ಕೆ ಬರುವ ಹಾಗೇ ಭಾಷಣ ಮಾಡಿದ್ದಾರೆ. ತಾಂಬೂಲ ಪ್ರಶ್ನೆ ಅಂತಾ ಬರುವವರನ್ನ ಒದ್ದು ಒಳಗಾಗಬೇಕು ಎನ್ನುವ ಅವರ ವಿವಾದಾತ್ಮಕ ಹೇಳಿಕೆಗೆ ಕಾನೂನು ಹೋರಾಟ ಮಾಡಿ ಇವರಿಗೆ ಪಾಠ ಕಲಿಸಬೇಕು.

    ಮಳಲಿ ಮಸೀದಿಯಲ್ಲಿ ಕೂರುಹು ಪತ್ತೆಯ ಬಗ್ಗೆ ಉತ್ಖನನ ಪ್ರಕ್ರಿಯೆ ನಡೆಯುತ್ತಾ ಇದೆ. ಈ ಸಂದರ್ಭದಲ್ಲಿ ಅವರು ಈ ರೀತಿಯ ಭಾಷಣ ಮಾಡಿರುವುದು ಸರಿಯಲ್ಲ ಎಂದು ಹಿಂದೂ ಸಂಘಟನೆಯವರು ಕಿಡಿಕಾರಿದ್ದಾರೆ.