Tag: thalvar

  • ಕಾಲೇಜು ಆವರಣದಲ್ಲೇ ತಲ್ವಾರ್ ಹಿಡಿದು ಕೇರಳ-ಕರ್ನಾಟಕ ವಿದ್ಯಾರ್ಥಿಗಳ ದಾಂಧಲೆ

    ಕಾಲೇಜು ಆವರಣದಲ್ಲೇ ತಲ್ವಾರ್ ಹಿಡಿದು ಕೇರಳ-ಕರ್ನಾಟಕ ವಿದ್ಯಾರ್ಥಿಗಳ ದಾಂಧಲೆ

    ಮಂಗಳೂರು: ಕೇರಳ-ಕರ್ನಾಟಕ ವಿದ್ಯಾರ್ಥಿಗಳು ತಲ್ವಾರ್ ಹಿಡಿದು ಪರಸ್ಪರ ದಾಂಧಲೆ ನಡೆಸಿಕೊಂಡಿರುವ ಘಟನೆ ನಗರದ ಶ್ರೀದೇವಿ ಕಾಲೇಜು ಆವರಣದಲ್ಲಿ ನಡೆದಿದೆ.

    ಕೇರಳ-ಕರ್ನಾಟಕ ವಿದ್ಯಾರ್ಥಿಗಳ ನಡುವೆ ಈ ದಾಂಧಲೆ ನಡೆದಿದೆ. ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬನ ಸ್ಕೂಟರ್ ಕೇರಳ ಮೂಲದ ವಿದ್ಯಾರ್ಥಿಗೆ ಗುದ್ದಿರುವ ಹಿನ್ನೆಲೆ ಪರಸ್ಪರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಇದನ್ನೇ ನೆಪವಾಗಿರಿಸಿ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದು ಕರ್ನಾಟಕದ ವಿದ್ಯಾರ್ಥಿಗಳು ಕ್ಯಾಂಪಸ್ ಪ್ರವೇಶಿಸಿದ್ದಾರೆ. ತಲ್ವಾರ್ ಹಿಡಿದ ದೃಶ್ಯವು ಮೊಬೈಲ್‍ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರರ ಜೊತೆ ನಂಟು ಶಂಕೆ – ಮಾಜಿ ಶಾಸಕ ಇದಿನಬ್ಬ ಮಗನ ಮನೆ ಮೇಲೆ ಎನ್‍ಐಎ ದಾಳಿ

    ಈ ಕುರಿತು ಸ್ಥಳೀಯ ವಿದ್ಯಾರ್ಥಿಯು ಠಾಣೆಗೆ ದೂರು ನೀಡಿದ್ದು, ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ

  • ಸುಳ್ಯದಲ್ಲಿ ಹೋರಿಗೆ ತಲವಾರಿನಿಂದ ಕಡಿದು ವಿಕೃತಿ ಮೆರೆದ ದುಷ್ಕರ್ಮಿಗಳು!

    ಸುಳ್ಯದಲ್ಲಿ ಹೋರಿಗೆ ತಲವಾರಿನಿಂದ ಕಡಿದು ವಿಕೃತಿ ಮೆರೆದ ದುಷ್ಕರ್ಮಿಗಳು!

    ಮಂಗಳೂರು: ಮೂಕ ಪ್ರಾಣಿಯೊಂದರ ಕಾಲು ಕಡಿದು ವಿಕೃತಿ ಮೆರೆದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

    ಸುಳ್ಯ ಪೇಟೆಯಾದ್ಯಂತ ತಿರುಗಾಡುತ್ತಾ ಸಿಕ್ಕಿದ ಆಹಾರವನ್ನು ತಿಂದು ಬದುಕುತ್ತಿದ್ದ ಹೋರಿಯನ್ನು ದುಷ್ಕರ್ಮಿಗಳು ಶನಿವಾರ ತಡ ರಾತ್ರಿ ಹಿಡಿದು ಒಯ್ಯಲು ಯತ್ನಿಸಿದ್ದರು. ಆದರೆ ಬಲಿಷ್ಠ ಹೋರಿ ಹೊರಳಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅದರ ಕಾಲು ಮತ್ತು ಬೆನ್ನಿಗೆ ತಲವಾರಿನಲ್ಲಿ ಕಡಿದಿದ್ದಾರೆ. ಬಳಿಕ ಹೋರಿ ಅವರ ಕೈಯಿಂದ ತಪ್ಪಿಸಿಕೊಂಡು ಬಂದಿದೆ ಎನ್ನಲಾಗುತ್ತಿದೆ.

    ಸದ್ಯ ಸುಳ್ಯದ ಹಿಂದು ಸಂಘಟನೆ ಕಾರ್ಯಕರ್ತರು ಹೋರಿಯನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ.