Tag: thali

  • ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ಚಿತ್ರದುರ್ಗ: ಹೆಣ್ಣು ನೋಡುವಲ್ಲಿಂದ ಹಿಡಿದು ಇನ್ನೇನು ತಾಳಿ ಕಟ್ಟುವವರೆಗಿನ ಎಲ್ಲಾ ಶಾಸ್ತ್ರ, ಸಿದ್ಧತೆಗಳು ನಡೆದ ಬಳಿಕ ಮಂಟಪದಲ್ಲಿಯೇ ಕೆಲವೊಂದು ಮದುವೆಗಳು ಮುರಿದುಬಿದ್ದ ಪ್ರಸಂಗಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಅಂಥದ್ದೇ ಘಟನೆಯೊಂದು ನಡೆದಿದೆ.

    ಹೌದು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ (Marriage Cancel) ಆಗಿದೆ. ವರ ತಾಳಿಕಟ್ಟುವಾಗ ವಧು ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ನಡೆದಿದ್ದೇನು..?: ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ. ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: 4 ಲಕ್ಷ ರೂ.ಗೆ ತಾಯಿಯಿಂದ್ಲೇ ಮಗಳ ಮಾರಾಟ – ಖರೀದಿಸಿ ಮದ್ವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ

    ಈ ವೇಳೆ ಎರಡು ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ರು ಕೂಡ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ. ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.

    ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 20ರ ಹುಡ್ಗಿ ಬೇಕುಂತ ಕಿಡ್ನ್ಯಾಪ್ ಮಾಡಿ ಮಧ್ಯರಾತ್ರಿ ತಾಳಿ ಕಟ್ಟಿ ರೇಪ್ ಮಾಡ್ದ!

    20ರ ಹುಡ್ಗಿ ಬೇಕುಂತ ಕಿಡ್ನ್ಯಾಪ್ ಮಾಡಿ ಮಧ್ಯರಾತ್ರಿ ತಾಳಿ ಕಟ್ಟಿ ರೇಪ್ ಮಾಡ್ದ!

    ಬೆಂಗಳೂರು: ನಡು ವಯಸ್ಸಿನ ವ್ಯಕ್ತಿಯೊಬ್ಬನಿಗೆ 20 ರ ಹರೆಯದ ಹುಡುಗಿ ಬೇಕಿತ್ತು. ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಅಂತಾ ದಿನಾಲೂ ದುಂಬಾಲು ಬೀಳುತ್ತಿದ್ದ. ನಿನಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಹುಡುಗಿಯನ್ನ ಹೊತ್ತೊಯ್ದು ನಡು ರಾತ್ರಿಯಲ್ಲಿ ತಾಳಿ ಕಟ್ಟಿ ಅತ್ಯಾಚಾರವೆಸಗಿದ್ದಾನೆ.

    ಹೌದು. ಬೆಂಗಳೂರಿನ ದಾಸರಹಳ್ಳಿಯ ನಿವಾಸಿ ಸಂತೋಷ್ ಎಂಬಾತನಿಗೆ 20ರ ಹರೆಯದ ಹುಡುಗಿ ಬೇಕಂತೆ. ಹೀಗಾಗಿ ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಅಂತಾ ತನ್ನ ಎದುರು ಮನೆಯವರ ಬೆನ್ನು ಬಿದ್ದಿದ್ದ. ಈಗಾಗಲೇ ಮದುವೆಯಾಗಿ ಹೆಂಡ್ತಿ ಮಕ್ಕಳಿದ್ದು, ಅವರಿಂದ ದೂರವಿರೋ ಇವನಿಗೆ ನೆರೆಮನೆಯವರು ಈ ವಿಚಾರವನ್ನು ನಿರಾಕರಿಸಿದ್ದರು. ಯಾವ ಪೋಷಕರು ಕೂಡ ಆ ಕೆಲಸ ಮಾಡಲ್ಲ. ಹೀಗಾಗಿ ಸಂತೋಷನ ಕೀಚಕನ ಆಸೆಗೆ ತಣ್ಣೀರು ಬಿದ್ದಿತ್ತು.

    ಆದ್ರೆ ಮೂರು ದಿನಗಳ ಹಿಂದೆ ಅಂದ್ರೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಹುಡುಗಿ ಎಂದಿನಂತೆ ತನ್ನ ಅಜ್ಜಿಯ ಮನೆಗೆ ಮಲಗಲು ಹೋಗುತ್ತಿದ್ದಳು. ಈ ವೇಳೆ ಸಂತೋಷ ಹುಡುಗಿಯನ್ನ ತನ್ನ ಮನೆಗೆ ಹೊತ್ತೊಯ್ದು ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಬಳಿಕ ಬಲವಂತವಾಗಿಯೇ ಅತ್ಯಾಚಾರ ಕೂಡ ಎಸಗಿದ್ದಾನೆ. ಇತ್ತ ಅಜ್ಜಿ ಮನೆಗೆ ಮಗಳು ಹೋಗಿಲ್ಲ..? ಎಲ್ಲಿಗೆ ಹೋದ್ಲು..? ಅಂತಾ ಹುಡುಕಾಡಿದಾಗ ಮಾರನೇ ದಿನ ಮಧ್ಯಾಹ್ನದ ವೇಳೆಗೆ ಸಂತೋಷನ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದು ಬೆಳಕಿಗೆ ಬಂದಿದೆ.

    ಆರೋಪಿ ಸಂತೋಷ್ ವಿರುದ್ಧ ಕಿಡ್ನ್ಯಾಪ್ ಮಾಡಿ ಅಕ್ರಮವಾಗಿ ಕೂಡಿಟ್ಟು ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಸಂತೋಷನನ್ನ ಪೊಲೀಸರು ಜೈಲಿಗಟ್ಟಿದ್ದಾರೆ.