Tag: textile shop

  • Kolar | ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಗೆ ಬೆಂಕಿ – 25 ಲಕ್ಷ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

    Kolar | ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಗೆ ಬೆಂಕಿ – 25 ಲಕ್ಷ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

    ಕೋಲಾರ: ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿ (Textile Shop) ಬೆಂಕಿಗೆ ಆಹುತಿಯಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರದ ಎಂ.ಜಿ.ರಸ್ತೆಯಲ್ಲಿರುವ ಬ್ರಾಂಡೆಡ್ ಫ್ಯಾಕ್ಟರಿ ಅಂಗಡಿಗೆ ಬೆಂಕಿ ಬಿದ್ದು ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಬಟ್ಟೆ ವ್ಯಾಪಾರಿ ಹಾಗೂ ಮಾಲೀಕ ಇಕ್ರಂ ಪಾಷಾ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಮಧ್ಯಾಹ್ನ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯಲ್ಲಿದ್ದ 20ರಿಂದ 25 ಲಕ್ಷ ರೂ. ಮೌಲ್ಯದ ಬಟ್ಟೆಗಳು ಹಾಗೂ ಕೆಲ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ

    ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ಧಗಧಗವೆಂದು ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಕಟ್ಟಡಗಳಿಗೆ ಆವರಿಸುವ ಮೂಲಕ ಆತಂಕ ಮನೆಮಾಡಿತ್ತು. ಅಲ್ಲದೆ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಕೆಲ ಕಾಲ ಹರಸಾಹಸ ಪಡಬೇಕಾಗಿತ್ತು. ಇನ್ನು ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸಿಎಂ ಆಗೋಕೆ ಹೆಲಿಕಾಪ್ಟರ್ ಖರೀದಿಸಿದ್ದಾರೆ ಅನ್ನೋದು ತಪ್ಪು ಕಲ್ಪನೆ – ಸತೀಶ್ ಜಾರಕಿಹೊಳಿ ಪರ ಬೋಸರಾಜು ಬ್ಯಾಟಿಂಗ್

  • ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿದೆ ಅಂತ ಮತ್ಸರ – ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದವ ಅರೆಸ್ಟ್

    ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿದೆ ಅಂತ ಮತ್ಸರ – ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದವ ಅರೆಸ್ಟ್

    ಬೆಂಗಳೂರು: ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಮತ್ಸರ ಉಂಟಾಗಿ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು (Bagalgunte Police) ಬಂಧಿಸಿದ್ದಾರೆ.

    ವೇನರಾಮ್ (45) ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿ. ನೇಮರಾಮ್ ಎಂಬ ವ್ಯಕ್ತಿ ಬಾಗಲಗುಂಟೆ ಸಿಡೇದಹಳ್ಳಿ ಬಳಿ ಹ್ಯಾಪಿ ಟೆಕ್ಸ್‌ಟೈಲ್‌ ಅಂಗಡಿ (Textile Shop) ಇಟ್ಟುಕೊಂಡಿದ್ದರು. ಅಂಗಡಿ ಪಕ್ಕದಲ್ಲೇ ವೇನರಾಮ್ ಹೈ ಫ್ಯಾಷನ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ನೇಮರಾಮ್ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತಿತ್ತು. ಅದರಿಂದ ಮತ್ಸರಗೊಂಡ ಆರೋಪಿ ವೇನರಾಮ್ ಆ ಅಂಗಡಿಯಲ್ಲಿ ಬಟ್ಟೆ ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದ. ವೇನರಾಮ್ ಅಂಗಡಿಯಲ್ಲಿದ್ದ ಹುಡುಗನನ್ನ ನೇಮರಾಮ್ ತನ್ನ ಅಂಗಡಿಗೆ ಸೇರಿಸಿಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ವೇನರಾಮ್, ನೇಮರಾಮ್ ಕೊಲೆಗೆ ಸುಪಾರಿ ಕೊಟ್ಟಿದ್ದ. ಇದನ್ನೂ ಓದಿ: ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    ರಾಜಸ್ಥಾನದ ವಿನೋದ್ ಜಾಟ್ ಎಂಬಾತನಿಗೆ ವೇನರಾಮ್ 5 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಅದರಂತೆ ವ್ಯಾಪಾರ ಮುಗಿಸಿ ಹೊರಟಿದ್ದ ನೇಮರಾಮ್ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಎರಡು ಬೈಕ್‌ನಲ್ಲಿ ಬಂದು ವಿನೋದ್ ಟೀಂ ಅಟ್ಯಾಕ್ ಮಾಡಿತ್ತು. ಸದ್ಯ ಸುಪಾರಿ ಸಂಬಂಧ ವೇನರಾಮ್‌ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಪಡೆದ ಆರೋಪಿ ವಿನೋದ್ ಜಾಟ್‌ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ | ಮಾದಕವಸ್ತು ಜಾಲದ ಮೇಲೆ 500 ಪೊಲೀಸರಿಂದ ರೇಡ್ – 63 ಮಂದಿ ಅರೆಸ್ಟ್

  • ಕೇರಳದ ಮಹಿಳಾ ಉದ್ಯಮಿ ಹತ್ಯೆ – ತಲೆಮರೆಸಿಕೊಂಡ ಆರೋಪಿ

    ಕೇರಳದ ಮಹಿಳಾ ಉದ್ಯಮಿ ಹತ್ಯೆ – ತಲೆಮರೆಸಿಕೊಂಡ ಆರೋಪಿ

    ತಿರುವನಂತಪುರಂ: ಮಹಿಳಾ ಉದ್ಯಮಿಯೊಬ್ಬರನ್ನು ಕೊಲೆ ಮಾಡಿ ಆರೋಪಿಯು ತಲೆಮರೆಸಿಕೊಂಡ ಘಟನೆ ಕೇರಳದ ತ್ರಿಶ್ಯೂರ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

    ಮನ್ನಾರ ಪರಂಬು ಗ್ರಾಮದವರಾದ ರಿನ್ಸಿ ನಾಜರ್ (30) ಕೊಲೆಯಾದ ಮಹಿಳೆ. ರಿನ್ಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್ (25) ಕೊಲೆಗೈದ ಆರೋಪಿ. ಮಹಿಳೆಯು ರಾತ್ರಿ ಅಂಗಡಿ ಮುಚ್ಚಿ ತನ್ನ ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಅಂಗಡಿಯಲ್ಲಿಯೇ ಕೆಲಸ ಮಾಡಿದ್ದ ಮಾಜಿ ನೌಕರ ರಿಯಾಜ್‌, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್‍ಡಿಡಿ

    ರಿಯಾಜ್ ತನ್ನ ಬೈಕ್‍ನಲ್ಲಿ ರಿನ್ಸಿಯನ್ನು ಹಿಂಬಾಲಿಸಿ ಅವರ ಸ್ಕೂಟರ್ ಅನ್ನು ಹಿಂದಿಕ್ಕಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಅವರು ಸ್ಕೂಟರ್ ಮೇಲಿಂದ ಬಿದ್ದಿದ್ದಾರೆ. ನಂತರ ಚಾಕು ತೆಗೆದುಕೊಂಡು ಅವರ ಮುಖ ಮತ್ತು ಕೈಯನ್ನು ಕತ್ತರಿಸಿದ್ದಾನೆ. ಅವರ ದೇಹದಿಂದ ಮೂರು ಬೆರಳುಗಳು ಬೇರ್ಪಟ್ಟಿವೆ. ದೇಹದಲ್ಲಿ 30 ಕ್ಕೂ ಹೆಚ್ಚು ಗಾಯಗಳಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

    ಮಕ್ಕಳ ಕೂಗು ಕೇಳಿ ಅಕ್ಕಪಕ್ಕದ ಜನರು ಆಗಮಿಸಿದರು. ಸ್ಥಳಕ್ಕೆ ಧಾವಿಸಿದವರಿಗೆ ರಿಯಾಜ್ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ರಿನ್ಸಿ ನಿವಾಸದ ಮೇಲೆ ದಾಳಿ ಮಾಡಿದ್ದಕ್ಕಾಗಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆರೋಪಿಯು ಜವಳಿ ಅಂಗಡಿಗೆ ಭೇಟಿ ನೀಡಿ ಅಲ್ಲಿಯೂ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.