Tag: Textile Industry

  • ಚೀನಾ ಉದ್ಯಮಿಯಿಂದ 100 ಕೋಟಿ ರೂ. ಬಂಡವಾಳ ಹೂಡಿಕೆ

    ಚೀನಾ ಉದ್ಯಮಿಯಿಂದ 100 ಕೋಟಿ ರೂ. ಬಂಡವಾಳ ಹೂಡಿಕೆ

    ಬೆಂಗಳೂರು: ಚೀನಾದ ಜವಳಿ ಉದ್ಯಮಿ ಪಾಲ್ ಪು ಅವರು ರಾಜ್ಯದಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ.

    ಇಲ್ಲಿನ ಕರ್ನಾಟಕ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivananda Patil) ಅವರನ್ನು ಭೇಟಿ ಮಾಡಿ ಚರ್ಚಿಸಿದ ಪಾಲ್ ಪು ಅವರು ಸೆಪ್ಟೆಂಬರ್‌ವರೆಗೆ ಕರ್ನಾಟಕದಲ್ಲೇ ಇದ್ದು, ಯೋಜನಾ ಸ್ಥಳ ಫೈನಲ್ ಮಾಡುವ ಉದ್ದೇಶವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೂಡಲೇ ಒಳಮೀಸಲಾತಿ ಜಾರಿ ಮಾಡದಿದ್ರೆ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ: ಎ.ನಾರಾಯಣಸ್ವಾಮಿ

    ಉತ್ತರ ಕರ್ನಾಟಕದಲ್ಲಿ (Uttara Kannada) ತಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಇರುವ ಭೂಮಿ ಲಭ್ಯವಿದೆ. ವರ್ಷದಲ್ಲಿ 365 ದಿನ ನೀರು, ಸಮರ್ಪಕ ವಿದ್ಯುತ್, ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಸೌಲಭ್ಯ ಇರುವ ಕಡೆ ಅಗತ್ಯ ಪ್ರಮಾಣದ ಭೂಮಿ ಒದಗಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ್ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌| ಬೆಂಗಳೂರಿನ ಎಫ್‌ಎಸ್‌ಎಲ್‌ಗೆ 25 ಮೂಳೆ ರವಾನೆ

    ಸಚಿವರ ಸಲಹೆಗೆ ಸಮ್ಮತಿಸಿದ ಉದ್ಯಮಿ, ಮೊದಲ ಹಂತದಲ್ಲಿ ಹಳೆಯ ಮೈಸೂರು ಭಾಗದಲ್ಲಿ, ಎರಡನೆಯ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲೂ ಉದ್ಯಮ ಸ್ಥಾಪನೆ ನಿಶ್ಚಿತ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪಾಕ್‌ ಬೆಂಬಲಿಸಿದ ಟರ್ಕಿಗೆ ಶಾಕ್‌ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ

    ಮೊದಲ ಹಂತದ ಯೋಜನೆಯಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, 5,000 ಜನರಿಗೆ ಉದ್ಯೋಗ ನೀಡಲಾಗುವುದು. ತಕ್ಷಣವೇ ಬಂಡವಾಳ ಹೂಡಲು ಸಿದ್ಧರಿದ್ದು, 20 ಎಕ್ರೆ ಭೂಮಿಯ ಅಗತ್ಯವಿದ್ದು, ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಕಾರ ನಿರೀಕ್ಷೆ ಹೊಂದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಅನಾವಶ್ಯಕ ಕಾಮೆಂಟ್ ಮಾಡೋರು ಹುಚ್ಚರು, ಸ್ಟಾರ್‌ಗಳು ಸಪೋರ್ಟ್ ಮಾಡ್ತಾರೆ ಅನ್ಸುತ್ತೆ – ಅದಿತಿ ಪ್ರಭುದೇವ ಸ್ಟ್ರೈಟ್ ಹಿಟ್

    ಉದ್ಯಮ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಪಾಲ್ ಪು ಅವರಿಗೆ ತೋರಿಸಿ, ಅವರಿಗೆ ಸೂಕ್ತ ಎನಿಸಿದ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

    ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಆಯುಕ್ತೆ ಜ್ಯೋತಿ ಹಾಗೂ ಇತರ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ನಾಳೆಯಿಂದಲೇ ಉದ್ಯಮ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಪಾಲ್ ಪು ಅವರಿಗೆ ತೋರಿಸಿ ಎಂದು ಸೂಚನೆ ನೀಡಿದ್ದಾರೆ.

  • ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬೆಂಗಳೂರು: ದಕ್ಷಿಣ ಭಾರತದ ಜವಳಿ ಮಾರಾಟ ಸಂಸ್ಥೆ ಪೋತಿಸ್ ಸಂಸ್ಥೆ ನಗರದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ.

    ಪೋತಿಸ್ ಮಳಿಗೆಯನ್ನು ಕೆಂಪು ಮತ್ತು ಹಳದಿ ಬಣ್ಣದಿಂದ ಶೃಂಗರಿಸಿ ಬಟ್ಟೆ ಖರೀದಿಗೆ ಆಗಮಿಸಿದ ಎಲ್ಲ ಗ್ರಾಹಕರಿಗೆ ಸಿಹಿ ನೀಡಿ ಸಂಂಭ್ರಮಾಚರಣೆ ಮಾಡಿದೆ. ಅಷ್ಟೇ ಅಲ್ಲದೇ ಮಧ್ಯಾಹ್ನ 1,500 ಮಂದಿಗೆ ಅನ್ನದಾನ ಸಹ ನಡೆಸಿ ವಿಶಿಷ್ಟವಾಗಿ ರಾಜೋತ್ಸವ ಆಚರಿಸಿದೆ. ಮಳಿಗೆಗೆ ಆಗಮಿಸಿದ ಗ್ರಾಹಕರಿಗೆ ಒಂದು ಸ್ವೀಟ್ ಬಾಕ್ಸ್ ಉಡುಗೊರೆ ನೀಡಿದ್ದು, ಇಡೀ ದಿನ ಮಳಿಗೆಯಲ್ಲಿ ಕನ್ನಡದ ಹಾಡುಗಳನ್ನು ಹಾಕುವ ಮೂಲಕ ಕನ್ನಡ ವಾತಾವರಣವನ್ನು ಸೃಷ್ಟಿಮಾಡಿತ್ತು.

    2018ರ ಫೆಬ್ರವರಿಯಲ್ಲಿ ಕೆಂಪೇಗೌಡ ರಸ್ತೆಯಲ್ಲಿ ಮಳಿಗೆ ಉದ್ಘಾಟನೆ ಮಾಡಿತ್ತು. ಅಲ್ಲದೇ ಸಂಸ್ಥೆಯ ರಾಯಭಾರಿಯಾಗಿ ನಟ ಪುನೀತ್ ರಾಜ್‍ಕುಮಾರ್ ಹಾಗೂ ನಟಿ ತಮನ್ನಾ ಅವರನ್ನ ನೇಮಕ ಮಾಡಿತ್ತು. 95 ವರ್ಷಗಳಿಂದ ಜವಳಿ ಉದ್ಯಮದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೋತಿಸ್, ಮಯೂರಿ, ವಸುಂಧರ, ಪರಂಪರಾ, ವಸ್ತ್ರಕಲಾ ಹಾಗೂ ಕಲಾಕ್ಷೇತ್ರದಂತಹ ಬ್ರ್ಯಾಂಡೆಡ್ ರೇಷ್ಮೆ ವಸ್ತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೇ ಕಾಂಚೀಪುರಂ, ಧರ್ಮವರಂ, ಬನಾರಸ್ ರೇಷ್ಮೆ ಉಡುಪುಗಳು, ಫ್ಯಾನ್ಸಿ ಹಾಗೂ ಡಿಸೈನರ್ ಸೀರೆಗಳು ಸೇರಿದಂತೆ ಸಿದ್ದ ಉಡುಪುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾ ವಿಶ್ವಾಸಗಳಿಸಿದೆ.

    ಪೋತಿಸ್ ಶಾಖೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ಕಡೆ ಉಡುಪುಗಳನ್ನು ಖರೀದಿಬಹುದಾಗಿದ್ದ ಮಳಿಗೆಯಾಗಿದ್ದು, ಎಲ್ಲಾ ಸಮಾರಂಭಗಳಿಗೂ ಸೂಕ್ತ ಎನಿಸುವಂಥ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಸ್ತ್ರಗಳನ್ನು ಒಳಗೊಂಡಿದೆ.

    ಕೆಂಪೇಗೌಡ ರಸ್ತೆಯಲ್ಲಿರುವ ಮಳಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹಾಗೂ ಎಂಟು ಅಂತಸ್ತಿನ ಕಟ್ಟದಲ್ಲಿ ನಿರ್ಮಾಣವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರಿಗೂ ಬೇಕಾದ ವಸ್ತ್ರಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೇ ತಮ್ಮ ಮಾರಾಟ ಮಳಿಗೆಗೆ ಬರುವ ಗ್ರಾಹಕರಿಗೆ ಶುಲ್ಕ ರಹಿತ ವಾಹನ ಪಾರ್ಕಿಂಕ್ ವ್ಯವಸ್ಥೆಯನ್ನು ಮಾಡಿದ್ದು, ರಾಷ್ಟ್ರೀಯ ಹಬ್ಬಗಳು ಸೇರಿ ವಿವಿಧ ವಿಶೇಷ ಸನ್ನಿವೇಶದಲ್ಲಿ ರಿಯಾಯಿತಿ ಮಾರಾಟವನ್ನು ಏರ್ಪಡಿಸುತ್ತಾ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv