Tag: textbooks

  • ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ನವದೆಹಲಿ: ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗಳ (Gujarat Riots And Babri Masjid) ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿರಲಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿರ್ದೇಶಕ ದಿನೇಶ್‌ ಪ್ರಸಾದ್‌ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ.

    ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಅವರು, ನಾವು ನಮ್ಮ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಗಳನ್ನಾಗಿ ಮಾಡಬೇಕೇ? ಸಮಾಜದಲ್ಲಿ ದ್ವೇಷ ಬಿತ್ತಬೇಕೆ? ದ್ವೇಷಕ್ಕೆ ಮಕ್ಕಳು ಬಲಿಯಾಗಬೇಕೇ? ಇದು ಶಿಕ್ಷಣದ ಉದ್ದೇಶವೇ? ಅಂತಹ ಚಿಕ್ಕ ಮಕ್ಕಳಿಗೆ ನಾವು ಗಲಭೆಗಳ ಬಗ್ಗೆ ಕಲಿಸಬೇಕೇ? ಪ್ರಶ್ನೆಗಳ ಮಳೆ ಸುರಿಸಿದರಲ್ಲದೇ ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದ್ದು, ವಿವಾದ ಎಬ್ಬಿಸುವಂತಹ ವಿಷಯವೇ ಇದಲ್ಲ ಎಂದಿದ್ದಾರೆ.

    ಎನ್‌ಸಿಇಆರ್‌ಟಿ 12ನೇ ತರಗತಿ ರಾಜ್ಯಶಾಸ್ತ್ರ ಪುಸ್ತಕದಲ್ಲಿ ಅಯೋಧ್ಯೆ ಪಠ್ಯ ವಿಭಾಗವನ್ನು 2 ಪುಟಗಳಿಗೆ ಇಳಿಸಲಾಗಿದೆ. ಗಲಭೆಗಳ ಕುರಿತ ಬೋಧನೆಯು ಆವೇಶಭರಿತ ಮತ್ತು ಖಿನ್ನತೆಯಿಂದ ಬಳಲುವ ನಾಗರಿಕರನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ, ಗುಜರಾತ್ ಗಲಭೆಗಳು, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ. ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದಾಗ ಅದರ ಬಗ್ಗೆ ಕಲಿಯಬಹುದು ಶಾಲೆಯ ಪಠ್ಯಪುಸ್ತಕಗಳು ಏಕೆ? ಅವರು ಬೆಳೆದಾಗ ಏನಾಯಿತು ಮತ್ತು ಏಕೆ ಸಂಭವಿಸಿತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದು ಅವರು ಪ್ರತಿಪಾದಿಸಿದ್ದಾರೆ.

    ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪವನ್ನು ತಳ್ಳಿಹಾಕಿರುವ ಅವರು, ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಪ್ರವೃತ್ತಿಯ, ಖಿನ್ನತೆಗೆ ಒಳಗಾದ ನಾಗರಿಕರನ್ನು ಸೃಷ್ಟಿಸುವುದಲ್ಲ. ದ್ವೇಷ ಮತ್ತು ಹಿಂಸೆ ಬೋಧನೆಯ ವಿಷಯಗಳಲ್ಲ. ಅವು ನಮ್ಮ ಪಠ್ಯಪುಸ್ತಕಗಳ ಕೇಂದ್ರಬಿಂದುವಾಗಿರಬಾರದು ಎಂದು ಸಕ್ಲಾನಿ ಹೇಳಿದ್ದಾರೆ.

  • ಮೊಘಲ್ ಸಾಮ್ರಾಜ್ಯದ ಪಠ್ಯಗಳಿಗೆ ಕತ್ತರಿ ಹಾಕಿದ ಯೋಗಿ ಸರ್ಕಾರ

    ಮೊಘಲ್ ಸಾಮ್ರಾಜ್ಯದ ಪಠ್ಯಗಳಿಗೆ ಕತ್ತರಿ ಹಾಕಿದ ಯೋಗಿ ಸರ್ಕಾರ

    ಲಕ್ನೋ: ಮೊಘಲ್ ಸಾಮ್ರಾಜ್ಯದ (Mughal empire) ಕುರಿತಾದ ಅಧ್ಯಾಯಗಳನ್ನು ಸಿಬಿಎಸ್‍ಸಿ (CBSE) ಹಾಗೂ 12ನೇ ತರಗತಿಯ ಬೋರ್ಡ್ ಪಠ್ಯದಿಂದ ಉತ್ತರ ಪ್ರದೇಶ ಸರ್ಕಾರ ತೆಗೆದುಹಾಕಿದೆ.

    ಶಾಲಾ ಶಿಕ್ಷಣದ ಕೇಂದ್ರ ಮತ್ತು ರಾಜ್ಯದ ಉನ್ನತ ಸಲಹಾ ಸಂಸ್ಥೆಯಾದ ಎನ್‌ಸಿಇಆರ್‌ಟಿ (NCERT) ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ನೂತನ ಪಠ್ಯ ಪುಸ್ತಕದಲ್ಲಿ 12ನೇ ತರಗತಿಯ ಮಧ್ಯಕಾಲೀನ ಇತಿಹಾಸ ಪಠ್ಯಪುಸ್ತಕಗಳಿಂದ (Textbooks) ಕಿಂಗ್ಸ್ ಮತ್ತು ಕ್ರಾನಿಕಲ್ಸ್ ಹಾಗೂ ದಿ ಮೊಘಲ್ ಕೋರ್ಟ್ಸ್ (Mughal Courts) ಅಧ್ಯಾಯಗಳನ್ನು ಕೈಬಿಟ್ಟಿದೆ. ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಹೊಸ 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಲಿವೆ. ಅದರಲ್ಲಿ ಮೊಘಲ್ ಇತಿಹಾಸದ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಿಸಿಲು

    ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನಾವು ನಮ್ಮ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಬಳಸಿ ಕಲಿಸುತ್ತೇವೆ. ಪರಿಷ್ಕೃತ ಆವೃತ್ತಿಯಲ್ಲಿ ಏನಿದೆಯೋ ಅದನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

    ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಪಠ್ಯ ಪರಿಷ್ಕರಣೆ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. 12ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳನ್ನೂ ಪರಿಷ್ಕರಿಸಲಾಗಿದೆ. ಪ್ರಮುಖ ಚಳುವಳಿಗಳ ಉದಯ, ಭಾರತದಲ್ಲಿ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಪಕ್ಷಗಳ ಉದಯ, ಏಕಪಕ್ಷದ ಪ್ರಾಬಲ್ಯದ ಯುಗ, ಸ್ವಾತಂತ್ರ್ಯ ನಂತರದ ಯುಗದಲ್ಲಿ ಕಾಂಗ್ರೆಸ್ ಆಡಳಿತದ ಪಠ್ಯಗಳಿನ್ನು ತೆಗೆಯಲಾಗಿದೆ. ಪರಿಷ್ಕೃತ ಆವೃತ್ತಿಯಲ್ಲಿ ಲಭ್ಯವಿರುವ ಪಠ್ಯವನ್ನು 2023-24 ರಿಂದ ರಾಜ್ಯದ ಶಾಲೆಗಳಲ್ಲಿ ಬೋಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    10 ಮತ್ತು 11ನೇ ತರಗತಿಯ ಪಠ್ಯಪುಸ್ತಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. 10ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಗಳಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ (Democracy and Diversity), ಪ್ರಮುಖ ಹೋರಾಟಗಳು ಮತ್ತು ಚಳುವಳಿಗಳು ಎಂಬ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಸೆಂಟ್ರಲ್ ಇಸ್ಲಾಮಿಕ್ ನೆಲೆಗಳು ಮತ್ತು ಸಂಸ್ಕೃತಿಗಳ ಮುಖಾಮುಖಿ ಎಂಬ ಅಧ್ಯಾಯಗಳನ್ನು 11ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

  • ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ಭೋಪಾಲ್: ಅಂದುಕೊಂಡಂತೆ ದೇಶದಲ್ಲಿ ಹಿಂದಿ ಶಿಕ್ಷಣ (Hindi Education) ಜಾರಿಯಾಗುತ್ತಿದ್ದು ಭಾನುವಾರ (ಅ.16 ರಂದು) 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ (Medical College) ಭಾಷಾಂತರಿಸಿದ ಎಂಬಿಬಿಎಸ್ (MBBS) ಪ್ರಥಮ ವರ್ಷದ ಹಿಂದಿ ಪುಸ್ತಕಗಳನ್ನು (Hindi TextBooks) ಬಿಡುಗಡೆಗೊಳಿಸಲಾಗುತ್ತಿದೆ.

    ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ಎಂಬಿಬಿಎಸ್ (MBBS) ವಿಷಯಗಳಾದ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರ ಹಿಂದಿ ಪುಸ್ತಕಗಳನ್ನು ಭೋಪಾಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಹಿಂದಿ ವೈದ್ಯಕೀಯ ಶಿಕ್ಷಣ ಆರಂಭವಾಗಲಿದೆ. ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ

    ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan), ವೈದ್ಯಕೀಯ ಕೋರ್ಸ್ (Medical Course) ಅನ್ನು ಹಿಂದಿಯಲ್ಲಿ ಆರಂಭಿಸುವ ಮೂಲಕ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ಹಿಂದಿಯಲ್ಲಿ (Hindi Language) ಕಲಿಯಲು ಹಾಗೂ ಕಲಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳನಂತೆ ಬಂದು ಅಂಗಡಿಯಲ್ಲಿದ್ದ ಬಲ್ಬ್ ಕದ್ದ ಪೊಲೀಸ್- ವೀಡಿಯೋ ವೈರಲ್

    ಹಿಂದಿ ಮಾಧ್ಯಮದ ಶಿಕ್ಷಣದಿಂದಲೂ ಜೀವನದಲ್ಲಿ ಮುನ್ನಡೆಯಬಹುದು ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕು ಎಂಬುದು ಪ್ರಧಾನಿ ಮೋದಿ (Naredra Modi) ಅವರ ಸಂಕಲ್ಪ. ಅಂತೆಯೇ ಈ ವರ್ಷ ಸಂಘಟಿತವಾಗಿ ಹಿಂದಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ತಜ್ಞರ ಕಾರ್ಯಪಡೆ, 97 ವೈದ್ಯಕೀಯ ಕಾಲೇಜು ಶಿಕ್ಷಕರು ಹಾಗೂ ತಜ್ಞರು 5,568 ಗಂಟೆಗಳಿಗೂ ಅಧಿಕ ಕಾಲ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಇಂಗ್ಲಿಷ್ ಪುಸ್ತಕಗಳ ಜೊತೆಗೆ ಹಿಂದಿ ಪುಸ್ತಕಗಳೂ ಕಾಲೇಜಿನಲ್ಲಿ ಲಭ್ಯವಿರುತ್ತವೆ. ಆದರೆ ತಾಂತ್ರಿಕ ಪದಗಳು ಇಂಗ್ಲಿಷ್‌ನಲ್ಲೇ ಉಳಿಯುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಲಿದೆ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಪ್ರಾರಂಭವಾಗಲಿದೆ. ಪ್ರಸಕ್ತ ವರ್ಷದಿಂದಲೇ ಹಿಂದಿಯಲ್ಲಿ ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಶ್ರೀಲಂಕಾಗೆ (Srilanka) 2023ನೇ ಸಾಲಿನ ಶಾಲಾ (School) ಮಕ್ಕಳಿಗೆ ಪಠ್ಯಪುಸ್ತಕಗಳ ಮುದ್ರಣಕ್ಕೆ ಅಗತ್ಯ ನೆರವು ನೀಡಲು ಭಾರತ ಮುಂದಾಗಿದ್ದು, 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ.

    ಭಾರತೀಯ ಸಾಲ ಯೋಜನೆ ಅಡಿಯಲ್ಲಿ ಪಠ್ಯಪುಸ್ತಕ (Text Book) ಮುದ್ರಣಕ್ಕೆ ಅಗತ್ಯವಿರುವ ಕಾಗದ, ಶಾಯಿ ಸೇರಿದಂತೆ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುಸಿಲ್ ಪ್ರೇಮೇಜನಾಥ ತಿಳಿಸಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    SRILANKA (1)

    ಡಾಲರ್ ಕೊರತೆ ಇರುವುದರಿಂದ ಪಠ್ಯಪುಸ್ತಕಗಳ ಮುದ್ರಣಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದ ಕಚ್ಚಾವಸ್ತುಗಳ ಖರೀದಿಗೂ ಶ್ರೀಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಮಾರ್ಚ್ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಲು ಕಾಗದದ ಕೊರತೆ ಉಂಟಾಗಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲಾಗಿತ್ತು.

    ಉಚಿತ ಶಿಕ್ಷಣ ಯೋಜನೆಯಡಿ ಶ್ರೀಲಂಕಾವು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಒದಗಿಸುತ್ತದೆ. 2023ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಸುಮಾರು 44 ಮಿಲಿಯನ್ ಡಾಲರ್ ಖರ್ಚಾಗಲಿದೆ ಎಂದು ಅಂದಾಜಿಸಿದೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ

    ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(IMF) ಆರ್ಥಿಕ ಬಿಕ್ಕಟ್ಟಿನಿಂದ ಲಂಕಾವನ್ನು ರಕ್ಷಿಸಲು ವಿವಿಧ ಷರತ್ತುಗಳೊಂದಿಗೆ 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ. ಇದರಿಂದ 2022ರಲ್ಲಿ ಭಾರತ ದೇಶವೊಂದರಿಂದಲೇ ಲಂಕಾಕ್ಕೆ 4 ಶತಕೋಟಿ ಡಾಲರ್ ನೆರವು ಒದಗಿಸಿದಂತಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಗೆದ್ದಿದ್ದು ಕಂಚಿನ ಪದಕವಂತೆ!- ರಾಜ್ಯ ಪಠ್ಯಪುಸ್ತಕಗಳಲ್ಲಿ ತಪ್ಪುಗಳ ಸರಮಾಲೆ

    ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧು ಗೆದ್ದಿದ್ದು ಕಂಚಿನ ಪದಕವಂತೆ!- ರಾಜ್ಯ ಪಠ್ಯಪುಸ್ತಕಗಳಲ್ಲಿ ತಪ್ಪುಗಳ ಸರಮಾಲೆ

    – 144 ಕೋಟಿ ರೂ. ನೀರಲ್ಲಿ ಹೋಮ

    ಬೆಂಗಳೂರು: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜಾಗದಲ್ಲಿ ಸೈನಾ ನೆಹ್ವಾಲ್, ಷಟ್ಲರ್ ಸೈನಾ ನೆಹ್ವಾಲ್ ಜಾಗದಲ್ಲಿ ಸಾನಿಯಾ ಮಿರ್ಜಾ. ಷಟ್ಲರ್ ಪಿ.ವಿ.ಸಿಂಧು ಒಲಿಂಪಿಕ್ಸ್‍ನಲ್ಲಿ ಗೆದ್ದಿದ್ದು ಕಂಚಿನ ಪದಕವಂತೆ. ಇವು ಶಾಲಾ ಪಠ್ಯದಲ್ಲಿ ಕಂಡು ಬಂದ ತಪ್ಪುಗಳು. ಇವು ಸ್ಯಾಂಪಲ್ ಅಷ್ಟೇ. ಹುಡುಕುತ್ತಾ ಹೋದ್ರೆ ನೂರೆಂಟು ತಪ್ಪುಗಳು ಕಂಡುಬರುತ್ತೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಕಲಿಯುತ್ತಿರುವುದು ಇದನ್ನೇ.

    ಹೌದು. ಸರ್ಕಾರ 144 ಕೋಟಿ ರೂ. ಖರ್ಚು ಮಾಡಿ 6 ಕೋಟಿ ಪಠ್ಯಪುಸ್ತಕ ಪ್ರಿಂಟ್ ಮಾಡಿದೆ. ಬರೋಬ್ಬರಿ 2 ವರ್ಷ, 185 ಪರಿಣಿತರು, 45 ಲಕ್ಷ ರೂ. ಖರ್ಚು- ಇಷ್ಟೆಲ್ಲಾ ಟೈಂ ಕೊಟ್ಟು ಇಷ್ಟೆಲ್ಲಾ ಮ್ಯಾನ್ ಪವರ್ ಕೊಟ್ಟು ಇಷ್ಟೆಲ್ಲಾ ಖರ್ಚು ಮಾಡಿಯೂ ಶಾಲಾ ಪಠ್ಯಪುಸ್ತಕದಲ್ಲಿ ತಪ್ಪುಗಳ ಸರಮಾಲೆಯೇ ಇದೆ. ನೂರೆಂಟು ತಪ್ಪುಗಳ ಜೊತೆಗೆ ಕಾಗದದ ಗುಣಮಟ್ಟವೂ ಕಳಪೆಯಾಗಿದೆ.

    ಪಠ್ಯ ಪುಸ್ತಕದಲ್ಲಿ ಇರುವ ಲೋಪದೋಷಗಳು
    1. ಒಲಿಂಪಿಕ್ಸ್ ನಲ್ಲಿ ಪಿ.ವಿ ಸಿಂಧು ಗೆದ್ದಿರೋದು ಬೆಳ್ಳಿ ಪದಕ, ಆದ್ರೆ ಪುಸ್ತಕದಲ್ಲಿ ಕಂಚಿನ ಪದಕ ಅಂತ ತಪ್ಪು ಮಾಹಿತಿ ನೀಡಲಾಗಿದೆ.
    2. ಇಂಗ್ಲಿಷ್ ವಿಷಯದಲ್ಲಿ ಪಠ್ಯಗಳು ಇರೋದೆ 24, ರಾಷ್ಟ್ರಗೀತೆಯ ಬಗ್ಗೆ ಮಾಹಿತಿ ನೀಡಿರೋ ಪಠ್ಯವನ್ನ 25ನೇ ಪಠ್ಯ ಅಂತ ಮುದ್ರಿಸಲಾಗಿದೆ.
    4. ಪಠ್ಯಪುಸ್ತಕದ ಹಾಳೆಯ ಗುಣಮಟ್ಟ ಕಳಪೆ ಮಟ್ಟದ್ದು.
    5. ಕನ್ನಡ ಪಠ್ಯಪುಸ್ತಕದಲ್ಲಿ ಒಂದೇ ಅಧ್ಯಾಯದ ಹೆಸರು ಎರಡು ಬಾರಿ ಮುದ್ರಣವಾಗಿದೆ.
    6. ಗಣಿತ ಪಠ್ಯ ಪುಸ್ತಕದಲ್ಲಿ ಸಮಸ್ಯೆಗಳಿವೆ, ಆದರೆ ಅದಕ್ಕೆ ಉತ್ತರಗಳು ಸರಿ ಇಲ್ಲ.
    7. ಪಠ್ಯ ಪುಸ್ತಕದಲ್ಲಿ ವ್ಯಾಕರಣಗಳು ತಪ್ಪು, ಇಂಗ್ಲಿಷ್‍ನ ಪಠ್ಯದಲ್ಲಿ ಗ್ರಾಮರ್‍ಗಳು ತಪ್ಪಾಗಿದೆ.
    8. ಅಭ್ಯಾಸ ಚಿತ್ರಗಳನ್ನ ಪಠ್ಯದಲ್ಲಿ ಉಲ್ಟಾ ಪಲ್ಟಾ ನೀಡಲಾಗಿದೆ.
    9. ಕೆಲ ಪುಸ್ತಕದಲ್ಲಿ ಪೇಜ್ ಮುದ್ರಣವಾಗಿಲ್ಲ. ಖಾಲಿ ಖಾಲಿ ಹಾಗೇ ಇದೆ.

    ರಾಜ್ಯ ಪಠ್ಯ ಪುಸ್ತಕದಲ್ಲಿ ಲೋಪದೋಷವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದ್ದು, ಲೋಪದೋಷವಾಗಿರೋ ಪಠ್ಯ ಪುಸ್ತಕವನ್ನ ಕೂಡಲೇ ವಾಪಸ್ ಪಡೆಯಬೇಕು ಎಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ. ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಮುದ್ರಣ ಲೋಪವಿದ್ದು, ತಪ್ಪು ಮಾಹಿತಿಗಳನ್ನ ನೀಡಲಾಗಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತೆ. ಕೂಡಲೇ ಲೋಪವಾಗಿರೋ ಪುಸ್ತಕಗಳನ್ನ ವಾಪಸ್ ಪಡೆದು ಸರಿಯಾದ ಪುಸ್ತಕ ನೀಡಬೇಕು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ರಾಜೀನಾಮೆಯನ್ನ ಕೂಡಲೇ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಬಗ್ಗೆ ಪರಿಷತ್ ಸದಸ್ಯ ಅರುಣ್ ಶಹಾಪುರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪಠ್ಯ ಪುಸ್ತಕ ಲೋಪದೋಷಕ್ಕೆ ಸಿಎಂ ಸಿದ್ದರಾಮಯ್ಯ ನೇರ ಹೊಣೆ. ಪರಿಷ್ಕರಣ ಸಮಿತಿಯ ಸಭೆಯಲ್ಲಿ ಲೋಪದೋಷಗಳು ಇವೆ ಅಂತ ಸ್ವತಃ ಶಿಕ್ಷಣ ಸಚಿವರು, ಅಧಿಕಾರಿಗಳು ಹೇಳಿದ್ರು. ಹೀಗಿದ್ರೂ ಸಿಎಂ ಸಿದ್ದರಾಮಯ್ಯ ಮುದ್ರಣ ಮಾಡುವಂತೆ ಸೂಚಿಸಿದ್ರು. ಹೀಗಾಗಿ ಇಷ್ಟು ದೊಡ್ಡ ಲೋಪಗಳು ಆಗಿದೆ. ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಈ ಕುರಿತು ಅಧ್ಯಾಯನ ಪೂರ್ವಕವಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ನಿರ್ಧಾರ ಮಾಡ್ತೀವಿ ಅಂದ್ರು.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಈ ಬಗ್ಗೆ ಸಮರ್ಥನೆ ನೀಡಿದ್ದು, ಪಠ್ಯ ಪುಸ್ತಕದಲ್ಲಿ ದೊಡ್ಡಮಟ್ಟದ ಲೋಪ ಆಗಿಲ್ಲ. ಪ್ರಿಂಟಿಂಗ್ ಮಿಸ್ಟೇಕ್ ಆಗಿರೋದು ಲೋಪ ದೋಷಕ್ಕೆ ಕಾರಣ. ಈಗಾಗಲೇ ಲೋಪ ದೋಷ ಕುರಿತು ವರದಿ ನೀಡಲು ಸೂಚಿಸಿದ್ದೇನೆ. ಕೆಲಸದ ಒತ್ತಡದಿಂದ ಕೆಲ ಪ್ರಮಾಣದ ತಪ್ಪು ಆಗಿರಬಹುದು. ಲೋಪವಾಗಿರುವ ಪಠ್ಯ ಪುಸ್ತಕ ಸರಿ ಮಾಡಿ ಹೊಸ ಪುಸ್ತಕ ನೀಡುತ್ತೇವೆ. ಪಠ್ಯ ಪುಸ್ತಕದಲ್ಲಿ ಆದ ಲೋಪ ದೋಷಗಳು ದೊಡ್ಡ ಮಟ್ಟದಲ್ಲ ಎಂದಿದ್ದಾರೆ.