Tag: Text Revision

  • ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ

    ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ

    ಮೈಸೂರು: ಈ ಬಾರಿ ಶಾಲಾ ಪಠ್ಯ ಪರಿಷ್ಕರಣೆ (School Text Revision) ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa)  ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮೈಸೂರಿನಲ್ಲಿ (Mysuru) ಮಾತನಾಡಿದ ಅವರು, ಕಳೆದ ಬಾರಿಯೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ತಪ್ಪಿದ್ದ ಪದಗಳನ್ನು ಸರಿ ಮಾಡಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಾಜಪೇಯಿ ಜೊತೆ ಸಹಿ ಹಾಕಿದ್ದ ಒಪ್ಪಂದವನ್ನು ನಾವು ಉಲ್ಲಂಘನೆ ಮಾಡಿದ್ದೆವು: ತಪ್ಪೊಪ್ಪಿಕೊಂಡ ನವಾಜ್‌ ಷರೀಫ್‌

    ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಾಳೆಯಿಂದ ಪುನಾರಂಭಗೊಳ್ಳುತ್ತಿದ್ದು, ಮೊದಲ ದಿನ ಮಕ್ಕಳನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಸಿಹಿಯೂಟ ನೀಡಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹೆಸರುಬೇಳೆ ಪಾಯಸ, ಕೇಸರಿಬಾತ್ ಇಲ್ಲವೇ ಯಾವುದಾದರೊಂದು ಸಿಹಿಯನ್ನು ನೀಡಲಾಗುತ್ತದೆ. ಅಲ್ಲದೇ, ಮೊದಲ ದಿನವೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆ ನಡೆಸಿದೆ. ಇದನ್ನೂ ಓದಿ: ಪೆನ್‍ಡ್ರೈವ್ ಪ್ರಕರಣದಿಂದ ಸೈಡ್ ಎಫೆಕ್ಟ್- ಫೋಟೋಗ್ರಾಫರ್‌ಗಳಿಗೆ ತಟ್ಟಿದ ಬಿಸಿ!

  • ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

    ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದೆ.

    text book bjp

    ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯ ಬಿಡುಗಡೆ ಮಾಡಲಾಗಿದೆ. 6,7,9ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು 4ನೇ ತರಗತಿಯ ಪರಿಸರ ಅಧ್ಯಯನ ಒಂದು ಪಠ್ಯ ಪರಿಷ್ಕರಣೆ ಮಾಡಲಾಗಿದೆ.

    ನಮ್ಮ ಸಂವಿಧಾನ, ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ, ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ಮೈಸೂರು ಮತ್ತು ಇತರ ಸಂಸ್ಥಾನಗಳು, ಭಾರತದ ಮತ ಪ್ರವರ್ತಕರು, ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು, ಪ್ರತಿಯೊಬ್ಬರ ವಿಶಿಷ್ಟ, ಗೊಂಬೆ ಕಲಿಸುವ ನೀತಿ ಪಠ್ಯಗಳನ್ನು ಪರಿಷ್ಕರಣೆ ಮಾಡಲಾಗಿದೆ. ಶೀಘ್ರವೇ ಶಾಲೆಗಳಿಗೆ ಹೊಸ ಪರಿಷ್ಕರಣೆ ಪಠ್ಯ ರವಾನೆ ಮಾಡಲಾಗುತ್ತದೆ. ಹೊಸ ಪರಿಷ್ಕೃತ ಪಠ್ಯವನ್ನೇ ಬೋಧನೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ.

    ಏನೇನು ಪರಿಷ್ಕರಣೆ ಆಗಿದೆ?
    ನಮ್ಮ ಸಂವಿಧಾನ (9ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅನ್ನೋ ವಾಕ್ಯ ಮರು ಸೇರ್ಪಡೆ ಮಾಡಲಾಗಿದೆ.

    ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ (7ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಈ ಪಠ್ಯ ಇರಲಿಲ್ಲ. ಹೊಸದಾಗಿ ಪರಿಷ್ಕರಣೆ ಮಾಡಿರುವ ಪಠ್ಯದಲ್ಲಿ ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ.
    * ಅಕ್ಕಮಹಾದೇವಿ, ಕನಕದಾಸ, ಪುರಂದರದಾಸರು ಶರೀಫರು ಸೇರಿದಂತೆ ಅನೇಕ ದಾರ್ಶನಿಕರು ವಿಚಾರಧಾರೆಗಳು ಇರುವ ಪಠ್ಯ ಸೇರ್ಪಡೆ.

    ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (6ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸಿದ್ದಗಂಗಾ ಮಠವೂ ಸಾವಿರಾರು ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ಮಾಡುತ್ತಿದೆ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಆ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.

    ಮೈಸೂರು ಮತ್ತು ಇತರ ಸಂಸ್ಥಾನಗಳು (7ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಿಷ್ಕರಣೆಯಲ್ಲಿ ಸುರಪುರದ ನಾಯಕರ ಇತಿಹಾಸ ಕೈ ಬಿಡಲಾಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸುರಪುರ ನಾಯಕರ ಇತಿಹಾಸ ಪಠ್ಯ ಸೇರ್ಪಡೆ ಮಾಡಲಾಗಿದೆ.

    ಭಾರತದ ಮತ ಪ್ರವರ್ತಕರು (9ನೇ ತರಗತಿ ಸಮಾಜ ವಿಜ್ಞಾನ)
    * 2022ರ ಪರಷ್ಕರಣೆಯಲ್ಲಿ ಬಸವಣ್ಣರ ಕುರಿತಾದ ಪಠ್ಯ ಭಾರೀ ವಿರೋಧಕ್ಕೆ ಕಾರಣವಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಬಸವಣ್ಣನವರ ವಿವಾದಿತ ಪಠ್ಯ ತೆಗೆದು ಹೊಸ ಪಠ್ಯವನ್ನ ಸೇರ್ಪಡೆ ಮಾಡಲಾಗಿದೆ.

    ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿವಿವಾದಗಳು (7ನೇ ತರಗತಿ ಸಮಾಜ ವಿಜ್ಞಾನ)
    * 2022 ರ ಪರಿಷ್ಕರಣೆಯಲ್ಲಿ ಆಲೂರು ವೆಂಕಟರಾಯರು, ರಾಷ್ಟ್ರಕವಿ ಗೋವಿಂದ ಪೈ ಭಾವ ಚಿತ್ರ ಮಾತ್ರ ನೀಡಲಾಗಿತ್ತು. ಕುವೆಂಪು ಭಾವ ಚಿತ್ರ ಕೈ ಬಿಡಲಾಗಿದೆ ಅಂತ ಆರೋಪ ಇತ್ತು.
    * ಹೊಸ ಪರಿಷ್ಕರಣೆಯಲ್ಲಿ ಕುವೆಂಪು, ಹುಯಿಲಗೋಳ ನಾರಾಯಣರಾವ್‍ರ ಭಾವಚಿತ್ರ ಸೇರ್ಪಡೆ ಮಾಡಲಾಗಿದೆ.

    ಪ್ರತಿಯೊಬ್ಬರು ವಿಶಿಷ್ಟ (4ನೇ ತರಗತಿ ಪರಿಸರ ಅಧ್ಯಯನ)
    * ಕಾಂಗ್ರೆಸ್ ಸರ್ಕಾರದ ಪರಿಷ್ಕರಣೆಯಲ್ಲಿ ಅನೇಕರ ಪ್ರೋತ್ಸಾಹದಿಂದ ಕುವೆಂಪು ಪ್ರಖ್ಯಾತ ಕವಿ ಎನಿಸಿಕೊಂಡಿದ್ದರು ಎಂಬ ವಿವಾದಿತ ಅಂಶ ಸೇರ್ಪಡೆ ಮಾಡಲಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಈ ವಿವಾದಿತ ಅಂಶವನ್ನು ಕೈ ಬಿಡಲಾಗಿದೆ.

    ಗೊಂಬೆ ಕಲಿಸುವ ನೀತಿ (7ನೇ ತರಗತಿ ಕನ್ನಡ ಭಾಷೆ)
    * 2022ರ ಪರಿಷ್ಕರಣೆಯಲ್ಲಿ ಆಡಿಸಿ ನೋಡಿ ಬೀಳಿಸಿ ನೋಡು ಪದ್ಯದ ಸಾಹಿತ್ಯ ಬರೆದವರು ಆರ್.ಎನ್. ಜಯಗೋಪಾಲ್ ಅಂತ ತಪ್ಪಾಗಿ ಮುದ್ರಣ ಮಾಡಲಾಗಿತ್ತು.
    * ಹೊಸ ಪರಿಷ್ಕರಣೆಯಲ್ಲಿ ಅದನ್ನು ಸರಿ ಮಾಡಿ ಸಾಹಿತಿ ಚಿ.ಉದಯ್ ಶಂಕರ್ ಅವರ ಪರಿಚಯ ಸೇರ್ಪಡೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

    30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

    – ನಮ್ಮ ಕವನ ಬೇಡಾ ಎಂದವರಿಗೆ ನಾಚಿಕೆಯಾಗಬೇಕು
    – ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ

    ಬೆಳಗಾವಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ. ಕಾನೂನುಬದ್ಧವಾಗಿ ಹೋರಾಟ ಮಾಡಿ ವಾಪಸ್ ಪಡೆಯುತ್ತೇವೆ. ನಾವು, ನೀವು ಒಟ್ಟಾಗಿ ಇರಬೇಕು ಅದ್ರೆ ವಾಪಸ್ ಕೊಡಬೇಕು. ದೇವಾಲಯ ಅಂತ ಗೊತ್ತಾದ ಮೇಲೆ ಬಿಟ್ಟು ಕೊಡಬೇಕು. ಶಾಸಕ ಅಭಯ್ ಪಾಟೀಲ್‍ಗೂ ನಮ್ಮ ಬೆಂಬಲ ಇದೆ. ಮಾಜಿ ಶಾಸಕ ಫಿರೋಜ್ ಸೇಠ್ ಅಕ್ರಮವಾಗಿ ಜಾಗ ಕಬಳಿಕೆ ಮಾಡಿದ್ದಾರೆ. ಮೊದಲು ಅದನ್ನು ವಾಪಸ್ ಕೊಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

    ರೋಹಿತ್ ಚಕ್ರತೀರ್ಥ ಅವರನ್ನ ಪಠ್ಯ ಪರಿಷ್ಕರಣಾ ಸಮಿತಿಯಿಂದ ತೆಗೆದ ವಿಚಾರವಾಗಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ನಿಜವಾದ ರಾಷ್ಟ್ರೀಯತೆ, ದೇಶಭಕ್ತಿಯ ಪಠ್ಯದಲ್ಲಿ ಹಾಕಿದ್ರೆ ಇವರಿಗೆ ಯಾಕೆ ಉರಿಯುತ್ತಿದೆ. ಕೆಲವು ಲೇಖಕರು ನಮ್ಮ ಕವನ ಪಠ್ಯದಲ್ಲಿ ಬೇಡಾ ಎಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.

    ಹೆಡ್ಗೆವಾರ್ ಅವರ ಭಾಷಣ ಪಠ್ಯದಲ್ಲಿ ಹಾಕಿದ್ದೆ ಇವರಿಗೆ ಉರಿ. ಆರ್‌ಎಸ್‍ಎಸ್ ಸಂಸ್ಥಾಪಕನ ಹೆಸರು ಹಾಕಿದ್ರೇ ಕೋಮುವಾದ, ಜಾತಿವಾದ ಅಂತಾರೆ. ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ. ಇದನ್ನ ಕೆಟ್ಟದ್ದು ಅಂತಾ ಬೆಂಬಲಿಸುವ ಬುದ್ಧಿ ಜೀವಿಗಳನ್ನ, ಕಾಂಗ್ರೆಸ್ ಅವರನ್ನ ಧಿಕ್ಕರಿಸಬೇಕು. ಬರಗೂರ ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಲೋಪಗಳಿದ್ದರೂ ಬಾಯಿ ಮುಚ್ಚಿಕೊಂಡಿದ್ರು. ನೂರು ಸಲ ಸುಳ್ಳನ್ನು ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಟೀಕಿಸಿದರು.

    ಕೆಲವು ಸ್ವಾಮೀಜಿಗಳು ಇವರಿಗೆ ಸಾಥ್ ಕೊಡುವ ಕೆಲಸ ಮಾಡ್ತಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಚರ್ಚೆ ಮಾಡೋಣ ಬನ್ನಿ ಅದ್ರೆ ಯಾರು ಬರಲಿಲ್ಲ. ಪಠ್ಯದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ. ಇದರಲ್ಲಿ ಕೋಮುವಾದವಿಲ್ಲ, ರಾಷ್ಟ್ರೀಯವಾದ ದೇಶಭಕ್ತಿ ಇದೆ. ಮುಸ್ಲಿಂ ದಾಳಿಕೋರರನ್ನ ಪಠ್ಯದಲ್ಲಿ ಕಾಂಗ್ರೆಸ್‍ನವರು ವೈಭವೀಕರಣ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಕಾಂಗ್ರೆಸ್ ಅವರಿಗೆ ಪಠ್ಯಪುಸ್ತಕದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ. ದೇಶಭಕ್ತಿ, ಹಿಂದುತ್ವವನ್ನ, ಆರ್‌ಎಸ್‍ಎಸ್ ನ ಕಾಂಗ್ರೆಸ್ ವಿರೋಧ ಮಾಡ್ತಿದೆ. ಹೋರಾಟ ಮಾಡುವ ಸ್ವಾಮೀಜಿಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ನಾವೆಲ್ಲಾ ಒಟ್ಟಾಗಿ ದೇಶ ಉಳಿಸಬೇಕಿದೆ ಎಂದು ಕರೆ ಕೊಟ್ಟರು.