Tag: testing center

  • ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್

    ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್

    ಜೈಪುರ: ಭಾನುವಾರ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ವೇಳೆ ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್ ಹೇಳಿಕೊಟ್ಟ ಹಿನ್ನೆಲೆ ವಿದ್ಯಾರ್ಥಿನಿ ಸೇರಿ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ರಿಚಾ ತೋಮರ್, ನೀಟ್ ಪರೀಕ್ಷೆ ಭಾನುವಾರ ನಡೆದಿದ್ದು, ನೀಟ್ ಪರೀಕ್ಷೆ ಪೇಪರ್ ಸೋರಿಕೆಯಾಗಿದೆ. ಈ ಹಿನ್ನೆಲೆ 18 ವರ್ಷದ ವಿದ್ಯಾರ್ಥಿನಿ ದಿನೇಶ್ವರಿ ಕುಮಾರಿ ಮತ್ತು ಪರೀಕ್ಷಾ ಕೇಂದ್ರ ಸಿಬ್ಬಂದಿ ರಾಮ್ ಸಿಂಗ್, ಪರೀಕ್ಷಾ ಕೊಠಡಿಯ ಸಿಬ್ಬಂದಿ, ಆಡಳಿತ ಘಟಕದ ಉಸ್ತುವಾರಿ ಮುಖೇಶ್, ದಿನೇಶ್ವರಿ ಚಿಕ್ಕಪ್ಪ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಂತಾಮಣಿ ಬಳಿ ಭೀಕರ ಅಪಘಾತ – ಆಸ್ಪತ್ರೆಗೆ ಭೇಟಿ ನೀಡಿದ ಕೋಲಾರ ಎಸ್‍ಪಿ 

    ಪರೀಕ್ಷೆ ಪ್ರಾರಂಭವಾದ ಬಳಿಕ ಆರೋಪಿ ರಾಮ್ ಸಿಂಗ್ ಮತ್ತು ಮುಖೇಶ್ ಪರೀಕ್ಷೆ ಪತ್ರಿಕೆಯ ಫೋಟೋಗಳನ್ನು ಜೈಪುರ ಚಿತ್ರಕೂಟ್ ಪ್ರದೇಶದ ಅಪಾರ್ಟ್‍ಮೆಂಟ್‍ನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಆ ವ್ಯಕ್ತಿಗಳು ಕೀ ಆನ್ಸರ್ ಅನ್ನು ಮುಖೇಶ್ ಅವರಿಗೆ ಕಳುಹಿಸಿದ್ದಾರೆ. ನಂತರ ರಾಮ್ ಸಿಂಗ್ ದಿನೇಶ್ವರಿ ಅವರು ಪ್ರೆಶ್ನೆಗಳಿಗೆ ಉತ್ತರ ಬರೆಯಲು ಸಹಾಯ ಮಾಡಿದ್ದಾರೆ. ದಿನೇಶ್ವರಿ ಚಿಕ್ಕಪ್ಪ ಪರೀಕ್ಷಾ ಕೇಂದ್ರದ ಹೊರಗೆ 10 ಲಕ್ಷ ರೂ. ಹಿಡಿದುಕೊಂಡು ಸಿಬ್ಬಂದಿಗೆ ಕೊಡಲು ಕಾಯುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ:  ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?

    ಅದು ಅಲ್ಲದೇ ಇ-ಮಿತ್ರ ಕೇಂದ್ರದ ಮಾಲೀಕ ಅನಿಲ್ ಮತ್ತು ಕೋಚಿಂಗ್ ಸೆಂಟರ್ ಮಾಲೀಕ ಅಲ್ವಾರ್ ಅವರನ್ನು ಬಂಧಿಸಲಾಗಿದೆ. ಅವರು 30 ಲಕ್ಷಕ್ಕೆ ಈ ಡೀಲ್ ಮುಗಿಸಿ ನಂತರ ಸಿಕಾರ್ ನಲ್ಲಿ ಕೀ ಆನ್ಸರ್ ಗಳನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿನಿಗೆ ತಲುಪಿಸುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ:  ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

  • ಕಾರ್ಮಿಕರು ಆತುರಪಡ್ಬೇಡಿ, ನಿಮ್ಮನ್ನ ಕಳಿಸಿಕೊಡೋದು ನಮ್ಮ ಜವಾಬ್ದಾರಿ: ಸುಧಾಕರ್

    ಕಾರ್ಮಿಕರು ಆತುರಪಡ್ಬೇಡಿ, ನಿಮ್ಮನ್ನ ಕಳಿಸಿಕೊಡೋದು ನಮ್ಮ ಜವಾಬ್ದಾರಿ: ಸುಧಾಕರ್

    – ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭ

    ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಕೊರೊನಾ ವೈರಸ್ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರದಲ್ಲಿ ಎರಡು ಯಂತ್ರಗಳಿದ್ದು, ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಪ್ರತಿದಿನ 80 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುಹುದಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲು ಅಗತ್ಯವಾದ ಕ್ರಮಗಳನ್ನ ಕೈಗೊಳ್ಳುವುದಾಗಿ ತಿಳಿಸಿದರು.

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಹ ಆಗಿದ್ದಾರೆ. 06 ಸಕ್ರಿಯ ಪ್ರಕರಣಗಳಿದ್ದು ಅವರಲ್ಲಿ ಇಂದು ಸಹ ಇಬ್ಬರು ಡಿಸ್ಚಾರ್ಜ್ ಆಗಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೇವಲ 4 ಆ್ಯಕ್ಟೀವ್ ಪ್ರಕರಣಗಳಿರಲಿವೆ ಅಂತ ಸಚಿವ ಸುಧಾಕರ್ ಮಾಹಿತಿ ನೀಡಿದರು.

    ಕೊರೊನಾ ಪರೀಕ್ಷೆಗಳನ್ನ ಮಾಡಿರುವುದರಲ್ಲಿ ಇಡೀ ದೇಶದಲ್ಲಿ ಚಿಕ್ಕಬಳ್ಳಾಪುರ ನಂಬರ್ 1 ಮೊದಲ ಸ್ಥಾನದಲ್ಲಿದೆ. ಕಾರಣ ಜಿಲ್ಲೆಯಲ್ಲಿ ಇದುವರೆಗೂ 6,239 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 24 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸರಾಸರಿ ಆಧಾರದ ಮೇರೆಗೆ 243 ಮಾದರಿ ಪರೀಕ್ಷೆಗಳಿಗೆ ಒಬ್ಬ ಸೋಂಕಿತರಾಗಿದ್ದಾರೆ. ಹೀಗಾಗಿ ಅತಿ ಹೆಚ್ಚಿನ ಟೆಸ್ಟ್ ಗಳನ್ನ ಮಾಡುವ ಮೂಲಕ ದೇಶದಲ್ಲಿ ಚಿಕ್ಕಬಳ್ಳಾಪುರ ಮಾದರಿಯಾಗಿದೆ ಎಂದರು.

    ಈ ಕಷ್ಟಕಾಲದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜನ ಅರ್ಥಿಕವಾಗಿ ಪುನಶ್ಚೇತನವಾಗಬೇಕು ಅಂತ ಸರ್ಕಾರ ಹಲವು ಪ್ಯಾಕೇಜ್ ಗಳನ್ನ ಘೋಷಣೆ ಮಾಡಿದೆ. ಇದರ ಜೊತೆ ಜೊತೆ ಎಲ್ಲರ ಜೀವವನ್ನು ಉಳಿಸುವ ಕೆಲಸವನ್ನು ಹೆಲ್ತ್ ವಾರಿಯರ್ಸ್ ಹಾಗೂ ಆಶಾಕಾರ್ಯಕರ್ತೆಯರು, ವೈದ್ಯರು, ಅನೇಕ ಇಲಾಖೆಯ ಆಧಿಕಾರಿಗಳು ಕೊರೊನಾ ನಿಗ್ರಹ ಮಾಡಲು ಭಾಗಿಯಾಗಿದ್ದು ಅವರಿಗೆಲ್ಲಾ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ತಿಳಿಸಿದರು.

    ಹೂ, ಹಣ್ಣು, ತರಕಾರಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಿದೆ. ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ ರೈತನಿಗೆ 5,000 ಪ್ರೋತ್ಸಾಹ ಧನ. ಆಶಾಕಾಯಕರ್ತೆಯರಿಗೆ 3,000 ಪ್ರೋತ್ಸಾಹ ಧನ ನೀಡಲಾಗುವುದು. ಕೊರೊನಾ ವಾರಿಯರ್ಸ್ ಗೆ ಆರೋಗ್ಯ ವಿಮೆ ಮಾಡಿಸಲಾಗಿದೆ. ಕೊರೊನಾ ಸೋಂಕಿತರು ಹೆಚ್ಚಾಗುತ್ತಾರೆ ಅದಕ್ಕಾಗಿ ಆತಂಕ ಬೇಡ. ಇವತ್ತು ಲಾಕ್‍ಡೌನ್ ಸಡಿಲಿಕೆ ಮಾಡಿರುವುದರಿಂದ ವಿದೇಶದಿಂದ ಕನ್ನಡಿಗರು ಆಗಮಿಸುತ್ತಿದ್ದಾರೆ. ಇತರೆ ರಾಜ್ಯಗಳಿಂದಲೂ ನಮ್ಮ ರಾಜ್ಯದವರು ಆಗಮಿಸುತ್ತಿದ್ದಾರೆ. ಹೀಗಾಗಿ ಅವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿ ಪ್ರಕರಣಗಳ ವರದಿ ಹೆಚ್ಚಾಗುತ್ತಿದೆ. ಉದಾಹರಣೆಗೆ ಹೇಳೋದಾದರೆ ನಿನ್ನೆ ದುಬೈ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಅತೀ ಹೆಚ್ಚಿನ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸಮುದಾಯಕ್ಕೆ ಹರಡದಂತೆ ಜನ ಕೂಡ ಎಚ್ಚರ ವಹಿಸಬೇಕು ಎಂದರು.

    ವಲಸೆ ಕಾರ್ಮಿಕರು ವಿಚಾರದಲ್ಲಿ ಕ್ರಮ ಕೈಗೊಳುತ್ತಿದ್ದೇವೆ. ಆದರೆ ಲಾಕ್‍ಡೌನ್ ಸಡಿಲಿಕೆ ಮಾಡಿದ ಕೂಡಲೇ ಒಮ್ಮೆಲೆ ಲಕ್ಷಾಂತರ ಮಂದಿ ಕಾರ್ಮಿಕರನ್ನು ಕಳುಹಿಸಬೇಕಾದರೆ ಸಮಸ್ಯೆ ಆಗುತ್ತದೆ. ಹೀಗಾಗಿ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸುವುದು. ನಮ್ಮ ಜವಾಬ್ದಾರಿ, ಹಂತ ಹಂತವಾಗಿ ನಾವು ಕಳುಹಿಸಿಕೊಡುತ್ತೇವೆ. ಅಲ್ಲಿಯವರೆಗೂ ವಲಸೆ ಕಾರ್ಮಿಕರು ಆತುರ ಪಡಬೇಡಿ. ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರನ್ನ ಕರೆತರುವುದು ನಮ್ಮ ಕರ್ತವ್ಯ ನಾವು ಅದನ್ನ ಮಾಡ್ತೇವೆ ಎಂದರು.

  • ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಳಗಾವಿ ಜಿಲ್ಲಾಡಳಿತ

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಳಗಾವಿ ಜಿಲ್ಲಾಡಳಿತ

    – ಮಹಾರಾಷ್ಟ್ರ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ

    ಬೆಳಗಾವಿ/ಚಿಕ್ಕೋಡಿ: ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡು ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಿದೆ.

    ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೂಗನೊಳ್ಳಿ ಚೆಕ್ ಪೋಸ್ಟ್ ಬಳಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮಹಾರಾಷ್ಟ್ರದಿಂದ ಬರುವ ಎಲ್ಲ ವಾಹನಗಳ ಪ್ರಯಾಣಿಕರನ್ನು ಥರ್ಮಲ್ ಯಂತ್ರದ ಮೂಲಕ ಸ್ಕ್ರೀನಿಂಗ್ ನಡೆಸಿ ತಪಾಸಣೆ ನಡೆಸಲಾಗುತ್ತಿದೆ.

    ಥರ್ಮಲ್ ಸ್ಕ್ರೀನಿಂಗ್ ಅಲ್ಲಿ ಜ್ವರ ಕಂಡು ಬಂದಲ್ಲಿ ಅಂಥವರಿಗೆ ಸಮೀಪದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಪ್ರಯಾಣಿಕರ ಕೊರೊನಾ ತಪಾಸಣೆ ನಡೆಯಲಿದೆ.

    ಮಹಾರಾಷ್ಟ್ರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮಂಗಳವಾರ ಗಡಿಯಲ್ಲಿ ಕೊರೊನಾ ವೈರಸ್ ತಪಾಸಣೆ ಇಲ್ಲ ಎಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿ ಹಿನ್ನೆಲೆಯಲ್ಲಿ ಇಂದು ಗಡಿಯಲ್ಲಿ ಕೊರೊನಾ ತಪಾಸಣಾ ಕೇಂದ್ರ ಸ್ಥಾಪನೆ ಮಾಡಲಾಗಿದೆ.