Tag: test

  • ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    ಹಾವೇರಿಗೆ ಬಂದಿದ್ದ ವಿಜಯಪುರದ ಕೊರೊನಾ ಸೋಂಕಿತರು

    – 21 ಜನಕ್ಕೆ ಹೋಮ್ ಕ್ವಾರಂಟೈನ್

    ಹಾವೇರಿ: ವಿಜಯಪುರ ಜಿಲ್ಲೆಯ ಕೊರೊನಾ ಸೋಂಕಿತರಿಬ್ಬರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರಿಗೆ ಬಂದು ಹೋಗಿದ್ದಾರೆ ಎಂಬ ವಿಷಯ ಬಹಿರಂಗವಾಗಿದ್ದು, ಗ್ರಾಮದ 21 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಹೋಮ್ ಕ್ವಾರಂಟೈನ್‍ನಲ್ಲಿಡಲಾಗಿದೆ.

    ವಿಜಯಪುರ ಜಿಲ್ಲೆಯ ರೋಗಿ ನಂಬರ್ 306 ಮತ್ತು 308 ಟ್ರಾವೆಲ್ ಹಿಸ್ಟರಿ ಪರಿಶೀಲಿಸಲಾಗಿದ್ದು, ಈ ವೇಳೆ ಆಡೂರಿಗೆ ಭೇಟಿ ನೀಡಿರುವುದು ಬಹಿರಂಗವಾಗಿದೆ. ಏಪ್ರಿಲ್ 5 ರಂದು ಆಡೂರಿನ ತಮ್ಮ ಸಂಬಂಧಿಕರ ಮನೆಗೆ ಬಂದು ಊಟ ಮಾಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ 21 ಜನರನ್ನು ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗಿದೆ.

    ಈ 21 ಜನರಲ್ಲಿ ಯಾರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅಲ್ಲದೆ ಇವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಿದೆ. ಪರೀಕ್ಷೆ ನಂತರ 21 ಜನರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ಲ್ಯಾಬ್ ವರದಿ ಸೋಮವಾರ ಸಂಜೆ ಅಥವಾ ಮಂಗಳವಾರ ಆರೋಗ್ಯ ಇಲಾಖೆಯ ಕೈ ಸೇರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.

  • ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಬ್ರಿಸ್ಬೇನ್: ಅಂಪೈರ್, ಎದುರಾಳಿ ಆಟಗಾರರೊಂದಿಗೆ ಅಸಭ್ಯ ವರ್ತಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ನಿಷೇಧದ ಬರೆ ಬಿದ್ದಿದೆ. ಇದರಿಂದಾಗಿ ಮುಂದಿನ ವಾರ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟಿಗೆ ಜೇಮ್ಸ್ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ದೇಶೀಯ ಪಂದ್ಯದ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ಯಾಟಿನ್ಸನ್ ರನ್ನು ನಿಷೇಧಿಸಲಾಗಿದೆ. ಪ್ಯಾಟಿನ್ಸನ್ ಶೆಫೀಲ್ಡ್  ವಿಕ್ಟೋರಿಯಾ ಪರ ಆಡುವಾಗ ಕ್ವೀನ್ಸ್ ಲ್ಯಾಂಡ್ ಆಟಗಾರ ಮತ್ತು ಅಂಪೈರ್ ಜೊತೆ ಕೆಟ್ಟದಾಗಿ ವರ್ತಿಸಿದರು.

    ಪ್ಯಾಟಿನ್ಸನ್ ಕಳೆದ ವರ್ಷವೂ ನಿಯಮ ಉಲ್ಲಂಘಿಸಿ ಎರಡು ಬಾರಿ ಶಿಕ್ಷೆಗೆ ಗುರಿಯಾಗಿದ್ದರು. ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದ ಪ್ಯಾಟಿನ್ಸನ್, ಕಳೆದ ವಾರ ತವರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ವೀನ್ಸ್ ಲ್ಯಾಂಡ್ ಆಟಗಾರನನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅಂತರಾಷ್ಟ್ರೀಯ ಪಂದ್ಯವೊಂದಕ್ಕೆ ಪ್ಯಾಟಿನ್ಸನ್ ಅವರಿಗೆ ನಿಷೇಧಿಸಲಾಯಿತು. ಈ ಮೂಲಕ ಗಬ್ಬಾದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ಆ ಒಂದು ಕ್ಷಣದಲ್ಲಿ ನಾನು ತಪ್ಪು ಮಾಡಿದ್ದೇನೆ. ಅದನ್ನು ತಕ್ಷಣವೇ ಅರಿತುಕೊಂಡೆ. ಹೀಗಾಗಿ ಅದೇ ಸಮಯದಲ್ಲಿ ಅಂಪೈರ್ ಮತ್ತು ಎದುರಾಳಿ ಆಟಗಾರರಿಗೆ ಕ್ಷಮೆಯಾಚಿಸಿದೆ. ನಾನು ತಪ್ಪು ಮಾಡಿದ್ದೇನೆ. ಇದರಿಂದಾಗಿ ಟೆಸ್ಟ್ ಪಂದ್ಯದಿಂದ ದೂರವಿರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ಯಾಟಿನ್ಸನ್ ತಿಳಿಸಿದ್ದಾರೆ.

    ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಕೂಡ ಜೇಮ್ಸ್ ಪ್ಯಾಟಿನ್ಸನ್ ಅವರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಮೇಲೆ ಒಂದು ವರ್ಷದ ನಿಷೇಧ ಹೇರಿದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ಶಿಸ್ತಿನ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಪ್ಯಾಟಿನ್ಸನ್ ವಿರುದ್ಧದ ಕಠಿಣ ಕ್ರಮವೂ ಇದಕ್ಕೆ ಸಾಕ್ಷಿ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಬ್ರಿಸ್ಬೇನ್‍ನಲ್ಲಿ ಪ್ರಾರಂಭವಾಗಲಿದೆ.

  • ಶಮಿ, ಅಶ್ವಿನ್ ದಾಳಿಗೆ ಬಾಂಗ್ಲಾ ಹುಲಿಗಳು ತತ್ತರ- ಭಾರತಕ್ಕೆ ಇನ್ನಿಂಗ್ಸ್, 130 ರನ್‍ಗಳ ಭರ್ಜರಿ ಜಯ

    ಶಮಿ, ಅಶ್ವಿನ್ ದಾಳಿಗೆ ಬಾಂಗ್ಲಾ ಹುಲಿಗಳು ತತ್ತರ- ಭಾರತಕ್ಕೆ ಇನ್ನಿಂಗ್ಸ್, 130 ರನ್‍ಗಳ ಭರ್ಜರಿ ಜಯ

    ಇಂದೋರ್: ಬೌಲರ್‌ಗಳ ಆಕ್ರಮಣಕಾರಿ ಬೌಲಿಂಗ್, ಬ್ಯಾಟ್ಸ್ ಮನ್‍ಗಳ ಉತ್ತಮ ಬ್ಯಾಟಿಂಗ್‍ನಿಂದಾಗಿ ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 130 ರನ್‍ಗಳಿಂದ ಗೆದ್ದುಕೊಂಡಿದೆ. ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯ ಗೆದ್ದು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾ 150 ರನ್ ಗಳಿಗೆ ಆಲೌಟ್ ಆಗಿದ್ದರೆ ಭಾರತ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತ್ತು. 343 ರನ್‍ಗಳ ಹಿನ್ನಡೆ ಅನುಭವಿಸಿದ್ದ ಬಾಂಗ್ಲಾ ಎರಡನೇ ಇನ್ನಿಂಗ್ಸ್ ನಲ್ಲಿ 69.2 ಓವರ್ ಗಳಲ್ಲಿ 213 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಮೂರೇ ದಿನಕ್ಕೆ ಮೊದಲ ಟೆಸ್ಟ್ ಫಲಿತಾಂಶದೊಂದಿಗೆ ಅಂತ್ಯ ಕಂಡಿದೆ.

    72 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ಬಾಂಗ್ಲಾಗೆ ಮುಷ್ಫಿಕರ್ ರಹೀಮ್, ಲಿಟ್ಟನ್ ದಾಸ್, ಮೆಹ್ದಿ ಹಸನ್ ನೆರವಾದ ಪರಿಣಾಮ 200 ರನ್ ಗಳ ಗಡಿಯನ್ನು ದಾಟಿತು. ಮುಷ್ಫಿಕರ್ ರಹೀಮ್ ಹಾಗೂ ಲಿಟ್ಟನ್ ದಾಸ್ ಜೋಡಿ 6ನೇ ವಿಕೆಟಿಗೆ 68 ರನ್ ಗಳ ಜೊತೆಯಾಟ ನೀಡಿದರೆ ಮುಷ್ಫಿಕರ್ ಮತ್ತು ಮೆಹ್ದಿ ಹಸನ್ 59 ರನ್‍ಗಳ ಜೊತೆಯಾಟವಾಡಿದರು.

    ಲಿಟ್ಟನ್ ದಾಸ್ 35 ರನ್, ಮೆಹ್ದಿ ಹಸನ್ 38 ರನ್ ಹೊಡೆದರೆ ಐದನೆಯವರಾಗಿ ಬಂದ ಮುಷ್ಫಿಕರ್ ರಹೀಮ್ 64 ರನ್(150 ಎಸೆತ,7 ಬೌಂಡರಿ) ಹೊಡೆದು ಒಂಭತ್ತನೇಯವರಾಗಿ ಔಟಾದರು.

    ಮೊದಲ ಇನ್ನಿಂಗ್ಸ್‍ನಲ್ಲಿ ಮೂರು ವಿಕೆಟ್ ಕಿತ್ತಿದ್ದ ಶಮಿ ಎರಡನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಕಿತ್ತರು. ಆರ್ ಅಶ್ವಿನ್ 3 ವಿಕೆಟ್, ಉಮೇಶ್ ಯಾದವ್ 2 ವಿಕೆಟ್ ಪಡೆದರೆ ಇಶಾಂತ್ ಶರ್ಮಾ ಒಂದು ವಿಕೆಟ್ ಕಿತ್ತರು.

    ಮೊದಲ ದಿನದಾಟದ ಅಂತ್ಯಕ್ಕೆ 37 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ 2ನೇ ದಿನದಾಟ ಆರಂಭವಾಗುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 186 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅಗರ್ವಾಲ್ 330 ಎಸೆತಗಳಲ್ಲಿ 243 ರನ್(28 ಬೌಂಡರಿ, 8 ಸಿಕ್ಸ್) ಹೊಡೆದು ವಿಕೆಟ್ ಒಪ್ಪಿಸಿದ್ದರು. ಅಜಿಂಕ್ಯ ರಹಾನೆ 86 ರನ್, ಚೇತೇಶ್ವರ ಪೂಜಾರ 54 ರನ್ ಮತ್ತು ರವೀಂದ್ರ ಜಡೇಜಾ ಅಜೇಯ 60 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

    ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನವೆಂಬರ್ 22ರಿಂದ ಹೊನಲು ಬೆಳಕಿನ (ಡೇ-ನೈಟ್) ಐತಿಹಾಸಿಕ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

  • ನೀವು ಬಯಸಿದ್ದನ್ನು ಪಡೆದಿದ್ದೀರಿ: ಮೈದಾನದಲ್ಲೇ ಕೊಹ್ಲಿಗೆ ಮಯಾಂಕ್ ಸಂದೇಶ

    ನೀವು ಬಯಸಿದ್ದನ್ನು ಪಡೆದಿದ್ದೀರಿ: ಮೈದಾನದಲ್ಲೇ ಕೊಹ್ಲಿಗೆ ಮಯಾಂಕ್ ಸಂದೇಶ

    ಇಂದೋರ್: ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಪಂದ್ಯದ ವೇಳೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಮಯಾಂಕ್ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಸಂಭಾಷಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಯಾಂಕ್ ಅಗರ್ವಾಲ್ ಶುಕ್ರವಾರ ತಮ್ಮ ವೃತ್ತಿಜೀವನದ 8ನೇ ಟೆಸ್ಟ್ ನಲ್ಲಿ ಎರಡನೇ ಬಾರಿಗೆ ದ್ವಿಶತಕ ಸಿಡಿಸಿದ್ದಾರೆ. ಮಯಾಂಕ್ 330 ಎಸೆತಗಳಲ್ಲಿ 243 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 86 ರನ್, ಚೇತೇಶ್ವರ ಪೂಜಾರ 54 ರನ್ ಮತ್ತು ರವೀಂದ್ರ ಜಡೇಜಾ ಅಜೇಯ 60 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ. ಇದನ್ನೂ ಓದಿ: ಆರು ತಿಂಗಳ ಬಳಿಕ ನೆಟ್‍ ಅಭ್ಯಾಸದಲ್ಲಿ ಕಾಣಿಸಿಕೊಂಡ ಧೋನಿ: ವಿಡಿಯೋ

    234 ಎಸೆತಗಳಲ್ಲಿ 150 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್, ಡ್ರೆಸ್ಸಿಂಗ್ ಕೋಣೆಯ ಕಡೆಗೆ ಸನ್ನೆ ಮಾಡಿ ಏನು ಮಾಡಲಿ ಎಂದು ವಿರಾಟ್ ಕೊಹ್ಲಿಗೆ ಕೇಳಿದರು. ಆಗ ಕೊಹ್ಲಿ ಶತಕವನ್ನು ಡಬಲ್ ಸೆಂಚುರಿಯನ್ನಾಗಿ ಪರಿವರ್ತಿಸಿ ಎಂದು ಪ್ರೋತ್ಸಾಹ ನೀಡಿದರು. ನಾಯಕನ ಸಲಹೆಗೆ ಓಕೆ ಎಂದ ಮಯಾಂಕ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು.

    ಮಯಾಂಕ್ 303 ಎಸೆತ ಎದುರಿಸಿ ಸಿಕ್ಸರ್ ಸಿಡಿಸಿ 202 ರನ್ ಗಳಿಸಿದರು. ಈ ವೇಳೆ ಸಂಭ್ರಮದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಕಡೆಗೆ ಕೈ ಸನ್ನೆ ಮಾಡಿದ ಮಯಾಂಕ್, ನೀವು ಬಯಸಿದ್ದನ್ನು ಪಡೆದಿದ್ದೀರಿ ಎಂದು ತಿಳಿಸಿದರು. ಆಗ ಸೂಪರ್ ಎನ್ನುತ್ತ ಕೊಹ್ಲಿ, ತ್ರಿಶತಕಕ್ಕೆ ಪ್ರಯತ್ನಿಸಿ ಎಂದು ಹುರಿದುಂಬಿಸಿದರು.

    https://www.instagram.com/p/B44gR4hgObb/?utm_source=ig_embed

    ಐದು ಇನ್ನಿಂಗ್ಸ್ ಗಳಲ್ಲಿ 2ನೇ ದ್ವಿಶತಕ:
    ಭಾರತದ ಆರಂಭಿಕ ಆಟಗಾರ ಮಾಯಾಂಕ್ ಕಳೆದ ಐದು ಇನ್ನಿಂಗ್ಸ್‍ಗಳಲ್ಲಿ ಎರಡೂ ಡಬಲ್ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ಅಕ್ಟೋಬರ್ ನಲ್ಲಿ ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಯಾಂಕ್ ದ್ವಿಶತಕ ಸಿಡಿಸಿದ್ದರು. ಮಯಾಂಕ್ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಎರಡೂ ದ್ವಿಶತಕಗಳನ್ನು ತವರು ನೆಲದಲ್ಲಿಯೇ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ದಾಖಲೆಯನ್ನು ಮುರಿದಿದ್ದಾರೆ. ಡಾನ್ ಬ್ರಾಡ್ಮನ್ 13 ಇನ್ನಿಂಗ್ಸ್ ಗಳಲ್ಲಿ ಎರಡು ದ್ವಿಶತಕ ಸಾಧನೆ ಮಾಡಿದರೆ, ಮಯಾಂಕ್ 12 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

  • ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಅಮಿತ್ ಶಾ

    ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಅಮಿತ್ ಶಾ

    ನವದೆಹಲಿ: ಟೀಂ ಇಂಡಿಯಾ ಹಾಗೂ ಬಾಂಗ್ಲಾ ದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಕ್ಷಿಯಾಗಲಿದ್ದಾರೆ.

    ನ.22 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಆಡಲಿರುವ ಮೊದಲ ಹೊನಲು ಬೆಳಕಿನ (ಡೇ-ನೈಟ್) ಪಂದ್ಯವಾಗಿದ್ದು, ಬಂಗಾಳ ಕ್ರಿಕೆಟ್ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಆಹ್ವಾನ ನೀಡಿತ್ತು. ಈ ಆಹ್ವಾನಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಪಂದ್ಯಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈಡನ್ ಗಾರ್ಡನ್ಸ್ ಪಂದ್ಯಕ್ಕೆ ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಸೇರಿದಂತೆ ಅಭಿನವ್ ಬಿಂದ್ರಾ, ಬಾಕ್ಸರ್ ಮೇರಿ ಕೋಮ್, ಪಿವಿ ಸಿಂಧು ಕೂಡ ಆಗಮಿಸಲಿದ್ದಾರೆ. ಒಲಂಪಿಕ್ ಪದಕ ಪಡೆದ ಆಟಗಾರರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಿ ವಿಶೇಷ ಗೌರವ ನೀಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

  • ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಗೆಲ್ಲುತ್ತಾ ಬಾಂಗ್ಲಾ? ಬಲಾ ಬಲ ಹೇಗಿದೆ?

    ಬಲಿಷ್ಠ ಟೀಂ ಇಂಡಿಯಾ ವಿರುದ್ಧ ಗೆಲ್ಲುತ್ತಾ ಬಾಂಗ್ಲಾ? ಬಲಾ ಬಲ ಹೇಗಿದೆ?

    ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಿದ್ದ ಟೀ ಇಂಡಿಯಾ ಗುರುವಾರದಿಂದ ಆರಂಭವಾಲಿರುವ ಬಾಂಗ್ಲಾ ವಿರುದ್ಧದ ಸರಣಿಗೆ ಸಿದ್ಧತೆ ಆರಂಭಿಸಿದೆ.

    ಟೀಂ ಇಂಡಿಯಾದ ಉತ್ತಮ ಫಾರ್ಮ್ ನಲ್ಲಿರುವ ಉಮೇಶ್ ಯಾದವ್, ಶಮಿ, ಇಶಾಂತ್ ಶರ್ಮಾ ಹಾಗೂ ಆರ್.ಅಶ್ವಿನ್, ಜಡೇಜಾರನ್ನು ಒಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಬಾಂಗ್ಲಾ ಎದುರಿಸಬೇಕಾಗಿದೆ. 2000ರಲ್ಲಿ ಟೀಂ ಇಂಡಿಯಾ ವಿರುದ್ಧ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆರಂಭಿಸಿದ ಬಾಂಗ್ಲಾ ಇದುವರೆಗೂ ಭಾರತ ವಿರುದ್ಧ ಟೆಸ್ಟ್ ಗೆಲುವು ಪಡೆದಿಲ್ಲ. 19 ವರ್ಷಗಳಿಂದ 9 ಬಾರಿ ಭಾರತ ತಂಡವನ್ನು ಎದುರಿಸಿರುವ ಬಾಂಗ್ಲಾ ಪಡೆ 7 ಬಾರಿ ಸೋಲುಂಡು, 2 ಟೆಸ್ಟ್ ಪಂದ್ಯಗಳು ಡ್ರಾ ಆಗಿದೆ.

    2000 ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರೂ ಭಾರತದಲ್ಲಿ ಟೆಸ್ಟ್ ಪಂದ್ಯವಾಡಲು ಬಾಂಗ್ಲಾ 17 ವರ್ಷ ಕಾಯಬೇಕಾಯಿತು. 2017ರಲ್ಲಿ ಹೈದರಾಬಾದ್‍ನಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದ ಬಾಂಗ್ಲಾ 208 ರನ್ ಗಳಿಂದ ಸೋಲುಂಡಿತ್ತು. ಈ ಬಾರಿ ಬಾಂಗ್ಲಾದೇಶ ಭಾರದಲ್ಲಿ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದೇ ವೇಳೆ ಕ್ರಿಕೆಟ್‍ನಿಂದ ನಿಷೇಧಕ್ಕೆ ಒಳಗಾಗಿ ಪ್ರಮುಖ ಆಟಗಾರ ಶಕೀಬ್ ಅಲ್ ಹಸನ್, ಗಾಯದ ಕಾರಣದಿಂದ ಮುಶ್ರಫೆ ಮೊರ್ತಾಜ ಹಾಗೂ ವೈಯಕ್ತಿಕ ಕಾರಣದಿಂದ ಶಮೀಮ್ ಟೆಸ್ಟ್ ಗೆ ಅಲಭ್ಯರಾಗಿದ್ದು, ಪ್ರಮುಖ ಆಟಗಾರರ ಗೈರಿನಲ್ಲಿ ಬಾಂಗ್ಲಾ ತಂಡ ಹೇಗೆ ಬಲಿಷ್ಠ ಟೀಂ ಇಂಡಿಯಾ ತಂಡವನ್ನು ಎದುರಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಕಳೆದ 19 ವರ್ಷಗಳಲ್ಲಿ 115 ಟೆಸ್ಟ್ ಪಂದ್ಯಗಳನ್ನು ಆಡಿರುವ ಬಾಂಗ್ಲಾ ದೇಶ ಕ್ರಿಕೆಟ್ ತಂಡ 13 ಪಂದ್ಯಗಳಲ್ಲಿ ಗೆಲುವು ಪಡೆದರೆ 86 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದ 16 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

    ಇತ್ತ ಸತತ ಗೆಲುವಿನೊಂದಿಗೆ ಮುನ್ನಡೆಯುತ್ತಿರುವ ಕೊಹ್ಲಿ ಪಡೆ ವಿದೇಶಿ ಪಿಚ್ ಸೇರಿದಂತೆ ತವರಿನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಭಾರತ ತಂಡದ ನಾಯಕತ್ವ ವಹಿಸಿದ್ದ 27 ಆಟಗಾರರ ಪೈಕಿ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಗೆಲುವು ಪಡೆದ ನಾಯಕರ ಸಾಲಿನಲ್ಲಿ 61ರ ಸರಾಸರಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. 2014-15ರಲ್ಲಿ ಆಸೀಸ್ ವಿರುದ್ಧ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿಕೊಂಡಿದ್ದ ಕೊಹ್ಲಿ, ಇದುವರೆಗೂ 14 ಟೆಸ್ಟ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ 40 ಟೆಸ್ಟ್ ಪಂದ್ಯಗಳಿಗೆ ನಾಯಕತ್ವ ವಹಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

    https://twitter.com/BCCI/status/1194237138981642242

  • ಇನ್ನಿಂಗ್ಸ್, 202 ರನ್ ಗೆಲುವಿನೊಂದಿಗೆ ಕ್ಲೀನ್ ಸ್ವೀಪ್ – ಭಾರತಕ್ಕೆ 240 ಅಂಕ, ಕೊಹ್ಲಿ ದಾಖಲೆ

    ಇನ್ನಿಂಗ್ಸ್, 202 ರನ್ ಗೆಲುವಿನೊಂದಿಗೆ ಕ್ಲೀನ್ ಸ್ವೀಪ್ – ಭಾರತಕ್ಕೆ 240 ಅಂಕ, ಕೊಹ್ಲಿ ದಾಖಲೆ

    ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 202 ರನ್‍ಗಳಿಂದ ಗೆದ್ದು ಭಾರತ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

    ಮೂರನೇ ದಿನದಾಟಕ್ಕೆ 46 ಓವರ್ ಗಳಲ್ಲಿ 132 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಈ ಮೊತ್ತಕ್ಕೆ 1.5 ಓವರ್ ಗಳಲ್ಲಿ ಕೇವಲ 1 ರನ್ ಸೇರಿಸಿ ಉಳಿದ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ 240 ಅಂಕಗಳಿಸಿ ಭಾರತ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಶಮಿ 3 ವಿಕೆಟ್ ಪಡೆದರೆ ಉಮೇಶ್ ಯಾದವ್ ಮತ್ತು ನದೀಂ ತಲಾ 2 ವಿಕೆಟ್ ಪಡೆದರು. ಜಡೇಜಾ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕ ಹೇಗೆ ಹಾಕಲಾಗುತ್ತದೆ?

    ಕೊಹ್ಲಿ ದಾಖಲೆ:
    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಾಲೋ ಆನ್ ಹೇರಿ ಭಾರತದ ಪರ ದಾಖಲೆ ಬರೆದಿದ್ದಾರೆ. ಭಾರತದ 497 ರನ್‍ಗಳಿಗೆ ಜವಾಬು ನೀಡಿದ ದಕ್ಷಿಣ ಆಫ್ರಿಕಾ 3ನೇ ದಿನ 162 ರನ್‍ಗಳಿಗೆ ಆಲೌಟ್ ಆಯ್ತು. ಆಲೌಟ್ ಆದ ಕೂಡಲೇ ಕೊಹ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಮೊದಲು ದಕ್ಷಿಣ ಆಫ್ರಿಕಾಗೆ ಫಾಲೋ ಆನ್ ಹೇರಿದರು. ಈ ಮೂಲಕ ಭಾರತದ ಪರ ಅತಿ ಹೆಚ್ಚು ಫಾಲೋ ಆನ್ ಹೇರಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಕೊಹ್ಲಿ 8ನೇ ಬಾರಿ ಫಾಲೋ ಆನ್ ಹೇರಿದ್ದರೆ, ಈ ಹಿಂದೆ ಮೊಹಮ್ಮದ್ ಅಜರುದ್ದೀನ್ 7 ಬಾರಿ, ಮಹೇಂದ್ರ ಸಿಂಗ್ ಧೋನಿ 5 ಬಾರಿ, ಸೌರವ್ ಗಂಗೂಲಿ 4 ಬಾರಿ ಫಾಲೋ ಆನ್ ಹೇರಿದ್ದರು.

  • ಕಳೆದ 2 ವರ್ಷದಿಂದ ಕೊಹ್ಲಿಗೆ ಡಿಆರ್‌ಎಸ್ ಫೀವರ್

    ಕಳೆದ 2 ವರ್ಷದಿಂದ ಕೊಹ್ಲಿಗೆ ಡಿಆರ್‌ಎಸ್ ಫೀವರ್

    ರಾಂಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್)ಯನ್ನು ಸೂಕ್ತ ಸಮಯದಲ್ಲಿ ಬಳಕೆ ಮಾಡಿಕೊಳ್ಳಲು ಕಳೆದ 2 ವರ್ಷಗಳಿಂದ ವಿಫಲರಾಗಿದ್ದು, ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದ ವೇಳೆಯೂ ಡಿಆರ್ ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಕಳೆದ 2 ವರ್ಷಗಳಿಂದ ಇದುವರೆಗೂ ಕೊಹ್ಲಿ ಪಡೆದ ಎಲ್ಲಾ ಡಿಆರ್‌ಎಸ್ ಮನವಿಗಳಲ್ಲಿ ನಿರಾಸೆ ಎದುರಿಸಿದ್ದಾರೆ. 2017 ರಲ್ಲಿ ನಡೆದ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆರಂಭವಾದ ಈ ನಡೆ ಇಂದಿಗೂ ಮುಂದುವರಿದಿದ್ದು, ಸತತ 9 ಬಾರಿ ಕೊಹ್ಲಿ ಡಿಆರ್‌ಎಸ್ ಪಡೆದು ನಿರಾಸೆ ಅನುಭವಿಸಿದ್ದಾರೆ.

    ಇಂದಿನ ಪಂದ್ಯದಲ್ಲಿ ಮಯಾಂಕ್ ಹಾಗೂ ಪೂಜಾರ ಬಹುಬೇಗ ಔಟಾದ ಹಿನ್ನೆಲೆಯಲ್ಲಿ ತಂಡ ಸಂಕಷ್ಟ ಎದುರಿಸಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಕೊಹ್ಲಿ, ಬಿರುಸಿನ 2 ಬೌಂಡರಿ ಸಿಡಿಸಿ ಗಮನ ಸೆಳೆದರು. ಆದರೆ ದಕ್ಷಿಣ ಆಫ್ರಿಕಾ ವೇಗದ ಬೌಲರ್ ಅನ್ರಿಕ್ ನಾಟ್ರ್ಜೆ ಎಸೆದ 16ನೇ ಓವರಿನಲ್ಲಿ ಕೊಹ್ಲಿ ಎಲ್‍ಬಿ ಬಲೆಗೆ ಬಿದ್ದರು. ಇದನ್ನು ಆನ್ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಅಂಪೈರ್ ತೀರ್ಮಾನವನ್ನು ಪ್ರಶ್ನಿಸಿದ ಕೊಹ್ಲಿ ಡಿಆರ್‌ಎಸ್ ಪಡೆದರು.

    ರೋಹಿತ್ ಶರ್ಮಾರ ಸಲಹೆಯೊಂದಿಗೆ ಕೊಹ್ಲಿ ಡಿಆರ್‌ಎಸ್ ಪಡೆದರು ಕೂಡ ಚೆಂಡು ಲೆಗ್ ಸ್ಟಂಪ್‍ಗೆ ತಾಗಿ ಮುಂದೇ ಸಾಗುತ್ತಿರುವಂತೆ ಕಂಡು ಬಂತು ರಿವ್ಯೂನಲ್ಲಿ ಕಂಡು ಬಂತು. ಪರಿಣಾಮ ಥರ್ಡ್ ಅಂಪೈರ್, ಆನ್ ಫೀಲ್ಡ್ ಅಂಪೈರ್ ನಿರ್ಧಾರವನ್ನೇ ಅಂತಿಮಗೊಳಿಸಿದರು. ಇದರೊಂದಿಗೆ ಕೊಹ್ಲಿ 22 ಎಸೆತಗಳಲ್ಲಿ 12 ರನ್ ಗಳಿಸಿ ನಿರ್ಗಮಿಸಿದರು. ಆದರೆ ಕೊಹ್ಲಿ ಔಟಾಗುತ್ತಿದಂತೆ ಅಭಿಮಾನಿಗಳು ಡಿಆರ್‌ಎಸ್ ನಿಮಯಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು, ಅಂಪೈರ್ ತೀರ್ಮಾನವನ್ನು ಅಂತಿಮಗೊಳಿಸುವ ನಿಯಮಗಳನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೂಡ ಕೊಹ್ಲಿ ಡಿಆರ್‌ಎಸ್ ನಿಯಮಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇತ್ತ ತಂಡದ ನಾಯಕರಾಗಿ ಡಿಆರ್‌ಎಸ್ ಪಡೆಯುವಲ್ಲಿ ಕೊಹ್ಲಿ ಸರಿ ಎನಿಸುತ್ತಿದ್ದರು, ಬ್ಯಾಟ್ಸ್ ಮನ್ ಆಗಿ ನಿರಾಸೆ ಅನುಭವಿಸುತ್ತಿದ್ದಾರೆ.

    https://twitter.com/IManish311/status/1185515629492617216

  • ಶತಕದೊಂದಿಗೆ ವಿಶ್ವದಾಖಲೆ ಬರೆದ ‘ಹಿಟ್ ಮ್ಯಾನ್’

    ಶತಕದೊಂದಿಗೆ ವಿಶ್ವದಾಖಲೆ ಬರೆದ ‘ಹಿಟ್ ಮ್ಯಾನ್’

    ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದ ರೋಹಿತ್ ಶರ್ಮಾ ಟೆಸ್ಟ್ ನ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

    ಟೀಂ ಇಂಡಿಯಾಗೆ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ, ಸರಣಿಯಲ್ಲಿ 3ನೇ ಹಾಗೂ ಟೆಸ್ಟ್ ವೃತ್ತಿ ಜೀವನದ 6ನೇ ಶತಕ ಸಿಡಿಸಿದ್ದರು. 130 ಎಸೆತಗಳಲ್ಲೇ ರೋಹಿತ್ ಶತಕ ಸಿಡಿಸಿದ್ದು ವಿಶೇಷವಾಗಿದ್ದು, ಒಟ್ಟಾರೆ 164 ಎಸೆತ ಎದುರಿಸಿ 14 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 117 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಸಿಕ್ಸರ್ ವಿಶ್ವದಾಖಲೆ: ರೋಹಿತ್ ಶರ್ಮಾ ಪಂದ್ಯದ ಮೊದಲ ದಿನದಾಟದ ವೇಳೆ 4 ಶತಕಗಳನ್ನು ಸಿಡಿಸಿದ್ದು, ಆ ಮೂಲಕ ಟೆಸ್ಟ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ವಿಶ್ವದಾಖಲೆ ಬರೆದರು. ಇದುವರೆಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ ರೋಹಿತ್ 17 ಸಿಕ್ಸರ್ ಸಿಡಿಸಿದ್ದಾರೆ. 2018 ಬಾಂಗ್ಲಾ ವಿರುದ್ಧ ಶಿಮ್ರಾನ್ ಹೆಟ್ಮಾಯರ್ 15 ಸಿಕ್ಸರ್ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಉಳಿದಂತೆ ವಾಸೀಂ ರಾಜಾ 1977ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 14 ಸಿಕ್ಸರ್, ಆಂಡ್ರ್ಯೂ ಫ್ಲಿಂಟಾಫ್ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಮ್ಯಾಥ್ಯೂವ್ ಹೇಡನ್ ಜಿಂಬಾಂಬೆ ವಿರುದ್ಧ 14 ಸಿಕ್ಸರ್ ಸಿಡಿಸಿದ್ದರು. ಭಾರತದ ಪರ 2010-11ರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹರ್ಭಜನ್ ಸಿಂಗ್ 14 ಸಿಕ್ಸರ್ ಸಿಡಿಸಿದ್ದರು.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಮಯಾಂಕ್ 10 ರನ್, ಪೂಜಾರಾ ಡಕೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದರು. ಆ ಬಳಿಕ ಬಂದ ನಾಯಕ ಕೊಹ್ಲಿ ಕೂಡ 12 ರನ್ ಗಳಿಸಿ ಔಟಾಗುವುದರೊಂದಿಗೆ ತಂಡ 39 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ಈ ಇಬ್ಬರ ಜೋಡಿ ಮುರಿಯದ 4ನೇ ವಿಕೆಟ್‍ಗೆ 185 ರನ್ ಗಳಿಸಿದೆ. ರಹಾನೆ 135 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ನೊಂದಿಗೆ 83 ರನ್ ಗಳಿಸಿದ್ದಾರೆ.

  • ರಾಂಚಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಧೋನಿ

    ರಾಂಚಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಧೋನಿ

    ರಾಂಚಿ: ವಿಶ್ವಕಪ್ ಟೂರ್ನಿಯ ಬಳಿಕ ಕ್ರಿಕೆಟ್‍ನಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಶನಿವಾರ ರಾಂಚಿಯಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಸದಸ್ಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

    ಧೋನಿ ತವರು ನೆಲ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಪಂದ್ಯಗಳ ಟೂರ್ನಿಯ ಅಂತಿಮ ಪಂದ್ಯ ಶನಿವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಧೋನಿ ಕ್ರೀಡಾಂಗಣಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ ಎಂದು ಧೋನಿ ಬಾಲ್ಯದ ಗೆಳೆಯ, ಮ್ಯಾನೇಜರ್ ಮಿಹಿರ್ ದಿವಾಕರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

    ಜಾರ್ಖಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಫಿಸ್ ಖಾನ್ ಧೋನಿ ಅವರ ಕುಟುಂಬಕ್ಕೆ ವೈಯಕ್ತಿಕ ಆಹ್ವಾನ ನೀಡಿದ್ದು, ಧೋನಿ ತವರಿನ ಕ್ರೀಡಾಂಗಣ ಆಗಿರುವುದರಿಂದ ಅವರಿಗೆ ಆಹ್ವಾನ ನೀಡಲಾಗಿದೆ ಎಂದಿದ್ದಾರೆ. ಧೋನಿ ರಾಂಚಿಯಿಂದ 30 ಕಿಲೋ ಮೀಟರ್ ದೂರ ಇರುವ ನಿವಾಸದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.

    ವಿಶ್ವಕಪ್ ಬಳಿಕ ಧೋನಿ ನಿವೃತ್ತಿಯ ಕುರಿತು ಭಾರೀ ಚರ್ಚೆಗಳು ನಡೆದಿದ್ದು, ಬಿಸಿಸಿಐ ಬಾಂಗ್ಲಾದೇಶದ ಟೂರ್ನಿಗೂ ಅವರನ್ನು ಆಯ್ಕೆ ಮಾಡಿಲ್ಲ. ಪರಿಣಾಮ ಅವರು ಮುಂದಿನ ಅವಧಿಯಲ್ಲಿ ಟೀಂ ಇಂಡಿಯಾ ಪರ ಧೋನಿ ಆಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಧೋನಿ ಆಪ್ತ ವಲಯದಲ್ಲಿರುವ ದಿವಾಕರ್ ಕೂಡ, ನಿವೃತ್ತಿಯ ಬಗ್ಗೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಧೋನಿರ ತೀರ್ಮಾನಗಳ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ. ಅಂದಹಾಗೇ ಧೋನಿ ಟೆಸ್ಟ್ ಕ್ರಿಕೆಟ್‍ಗೆ 2014 ರಲ್ಲಿ ನಿವೃತ್ತಿ ಘೋಷಿಸಿದ್ದು, ಸಮೀತ ಓವರ್ ಗಳ ಕ್ರಿಕೆಟ್‍ನಲ್ಲಿ ಮಾತ್ರ ಮುಂದುವರಿದಿದ್ದರು.

    ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ವಶಕ್ಕೆ ಪಡೆದಿದ್ದು, ರಾಂಚಿ ಪಂದ್ಯವನ್ನು ಗೆಲ್ಲುವ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನಂ.1 ಪಟ್ಟದಲ್ಲಿ ಮುಂದುವರಿಯುವ ಚಿಂತನೆಯಲ್ಲಿದೆ.