Tag: test

  • ಶಮಿ, ಇಶಾಂತ್ ಸೂಪರ್ ಸ್ಪೆಲ್  – ಭಾರತಕ್ಕೆ ಅಲ್ಪ ಮುನ್ನಡೆ

    ಶಮಿ, ಇಶಾಂತ್ ಸೂಪರ್ ಸ್ಪೆಲ್ – ಭಾರತಕ್ಕೆ ಅಲ್ಪ ಮುನ್ನಡೆ

    ಸೌಂಥಾಪ್ಟನ್: ಭಾರತ ತಂಡದ ವೇಗಿಗಳಾದ ಮೊಹಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರ ಸೂಪರ್ ಸ್ಪೆಲ್ ನಿಂದಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್‍ನ 5ನೇ ದಿನ ನ್ಯೂಜಿಲ್ಯಾಂಡ್ ತಂಡವನ್ನು ಮೊದಲ ಇನ್ನಿಂಗ್ ನಲ್ಲಿ 249ರನ್‍ಗೆ ಆಲೌಟ್ ಮಾಡಿದೆ. ಆದರು ಕಿವೀಸ್ 32ರನ್‍ಗಳ ಅಲ್ಪ ಮುನ್ನಡೆ ಸಾಧಿಸಿದೆ.

    ನಾಲ್ಕನೇ ದಿನ ಮಳೆಯಿಂದಾಗಿ ದಿನದಾಟ ರದ್ದಾಗಿತ್ತು. ಬಳಿಕ ಐದನೇ ದಿನ ಪಂದ್ಯ ಸರಾಗವಾಗಿ ನಡೆಯಿತು. 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದ್ದ  ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮುಂದುವರಿಸಿ 249ಕ್ಕೆ ಆಲೌಟ್ ಆಯಿತು. ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ವೇಗಿಗಳಾದ ಶಮಿ 26 ಓವರ್ ಎಸೆದು 4 ವಿಕೆಟ್ ಪಡೆದರೆ, ಇಶಾಂತ್ 25 ಓವರ್ ಎಸೆದು 3 ವಿಕೆಟ್ ಕಿತ್ತು ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇದನ್ನೂ ಓದಿ: ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ ಶುಭನ್ ಗಿಲ್ ಮತ್ತೆ ನಿರಾಸೆ ಮೂಡಿಸಿದರು ಕೇವಲ 8 ರನ್(55 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಇನ್ನೋರ್ವ ಓಪನರ್ ರೋಹಿತ್ ಶರ್ಮಾ 30 ರನ್(81 ಎಸೆತ, 2 ಬೌಂಡರಿ) ಸಿಡಿಸಿ ಉತ್ತಮವಾಗಿ ಆಡುತ್ತಿದ್ದಾಗ ದಾಳಿಗಿಳಿದ ಸೌಥಿ, ಎಲ್‍ಬಿ ಬಲೆಗೆ ಬಿಳಿಸಿ ವಿಕೆಟ್ ಕಿತ್ತರು. ಬಳಿಕ ದಿನದಾಟದ ಅಂತ್ಯಕ್ಕೆ ಭಾರತ 64 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು 32ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೀಸಲು ದಿನವನ್ನು ಬಳಕೆ ಮಾಡಲು ಐಸಿಸಿ ನಿರ್ಧರಿಸಿರುವ ಕಾರಣ ಭಾರತ ಪರ ಚೇತೇಶ್ವರ ಪೂಜಾರ 12 ರನ್(55 ಎಸೆತ, 2 ಬೌಂಡರಿ) ಮತ್ತು ವಿರಾಟ್ ಕೊಹ್ಲಿ 8ರನ್ (12 ಎಸೆತ) ಮಾಡಿ 6ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಆರನೇ ದಿನದಾಟ ಭಾರೀ ಕುತೂಹಲ ಮೂಡಿಸಿದ್ದು, ಭಾರತ ಬೃಹತ್ ಮೊತ್ತ ಪೇರಿಸಿ ಕಿವೀಸ್‍ಗೆ ಒತ್ತಡ ಹಾಕಲು ಎದುರು ನೋಡುತ್ತಿದ್ದರೆ, ನ್ಯೂಜಿಲೆಂಡ್ ಭಾರತವನ್ನು ಆದಷ್ಟು ಬೇಗ ಆಲೌಟ್ ಮಾಡಿ ಗೆಲುವಿನ ಸಂಭ್ರಮ ಆಚರಿಸಲು ಹಾತೊರೆಯುತ್ತಿದೆ. ಈ ನಡುವೆ ಪಂದ್ಯ ಡ್ರಾ ಆಗುವ ಸಾಧ್ಯತೆಯು ಹೆಚ್ಚಿದೆ. ಹಾಗಾಗಿ ಅಭಿಮಾನಿಗಳಲ್ಲಿ ಕ್ಲೈಮ್ಯಾಕ್ಸ್ ಕುತೂಹಲ ಮೂಡಿಸಿದೆ.

    ಮೊದಲ ಇನ್ನಿಂಗ್ಸ್ ಕುಸಿದ ಕೀವಿಸ್:
    ಐದನೇ ದಿನದಾಟ ಆರಂಭಿಸಿದ ಕಿವೀಸ್ ದಿನದ ಮೊದಲ ಅವಧಿಯಲ್ಲಿ 23 ಓವರ್‍ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 34 ರನ್‍ಗಳಿಸಿತು. ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದ ಕೇನ್ ವಿಲಿಯಮ್ಸನ್ ಒಂದು ಕಡೆ ನಿಧಾನವಾಗಿ ರನ್ ಗಳಿಸಲು ಆರಂಭಿಸಿದರು ಆದರೆ ಇವರಿಗೆ ಮಧ್ಯಮ ಕ್ರಮಾಂಕದ ಆಟಗಾರ ಬೆಂಬಲ ಸಿಗಲಿಲ್ಲ. ರಾಸ್ ಟೇಲರ್ 11ರನ್(37 ಎಸೆತ, 2 ಬೌಂಡರಿ), ಬಿಜೆ ವಾಟ್ಲಿಂಗ್ 1ರನ್, ಡಿ ಗ್ರ್ಯಾಂಡ್‍ಹೋಮ್ 13ರನ್(30 ಎಸೆತ,1 ಬೌಂಡರಿ) ಕೈಲ್ ಜೇಮಿಸನ್ 21 ರನ್ (16 ಎಸೆತ 1ಸಿಕ್ಸ್), ಬಾರಿಸಿ ಔಟ್ ಆದರು ಇವರೊಂದಿಗೆ ವಿಲಿಯಮ್ಸನ್ 49 ರನ್(177 ಎಸೆತ,6 ಬೌಂಡರಿ) ಸಿಡಿಸಿ ಪೇವಿಲಿಯನ್ ಸೇರಿಕೊಂಡರು. ಬಳಿಕ ಟಿಮ್ ಸೌಥಿ 30ರನ್ (46 ಎಸೆತ, 1ಬೌಂಡರಿ, 1 ಸಿಕ್ಸ್) ಸಿಡಿಸಿ ಕಿವೀಸ್‍ಗೆ ಮುನ್ನಡೆ ತಂದು ಕೊಟ್ಟರು.

  • WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

    WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

    ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ನಡೆಯುತ್ತಿದೆ. ಫೈನಲ್‍ನಲ್ಲಿ ಭಾರತ ತಂಡ ಗೆದ್ದರೆ ನಾನು ಬೆತ್ತಲಾಗುವುದಾಗಿ ನಟಿ ಪೂನಂ ಪಾಂಡೆ ಕೊಹ್ಲಿ ಪಡೆಗೆ ಬಿಗ್ ಆಫರ್ ಒಂದನ್ನು ನೀಡಿದ್ದಾರೆ.

    2011ರ ಏಕದಿನ ವಿಶ್ವಕಪ್ ವೇಳೆ ಎಂಎಸ್ ಧೋನಿ ಬಳಗ ಗೆದ್ದರೆ ನಾನು ಬೆತ್ತಲಾಗುವುದಾಗಿ ಹೇಳಿಕೊಂಡಿದ್ದ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಇದೀಗ ಕೊಹ್ಲಿ ಸೈನ್ಯಕ್ಕೆ ಇದೇ ರೀತಿಯ ಆಫರ್ ನೀಡಿದ್ದಾರೆ. ಇದನ್ನೂ ಓದಿ: ಜೇಮಿಸನ್ ಬಿಗುವಿನ ದಾಳಿ – ಭಾರತ 217ರನ್‍ಗೆ ಆಲೌಟ್

    ಕೊಹ್ಲಿ ಪಡೆ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕೀವಿಸ್ ವಿರುದ್ಧ ಸೆಣಸಾಡುತ್ತಿರುವ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಂ ಪಾಂಡೆ, ಕ್ರಿಕೆಟ್ ಚಾಲು ಹೈ, ಲೋಗ್ ಕ್ರಿಕೆಟ್ ಖೇಲ್ ರಹೇ ಹೈ. ಈ ಬಾರಿ ಮತ್ತೆ ಹೇಳುತ್ತಿದ್ದೇನೆ ಭಾರತ ತಂಡ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಗೆದ್ದರೆ ಮತ್ತೆ ಬೆತ್ತಲಾಗಿ ವಿವಾದ ಎದುರಿಸಲು ಸಿದ್ಧ ಎಂದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    2011ರಲ್ಲಿ ಈ ರೀತಿ ಭಾರತ ತಂಡಕ್ಕೆ ಆಫರ್ ನೀಡಿ ಬಳಿಕ ಪೂನಂ ಪಾಂಡೆ ತನ್ನ ಕೆಲವು ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಇದೀಗ ಮತ್ತೆ ಬೆತ್ತಲಾಗುದಾಗಿ ಹೇಳಿ ಪಡ್ಡೆ ಹುಡುಗರಿಗೆ ಮೈ ಬಿಸಿಯಾಗುವಂತೆ ಮಾಡಿದ್ದಾರೆ.

  • ಜೇಮಿಸನ್ ಬಿಗುವಿನ ದಾಳಿ – ಭಾರತ 217ರನ್‍ಗೆ ಆಲೌಟ್

    ಜೇಮಿಸನ್ ಬಿಗುವಿನ ದಾಳಿ – ಭಾರತ 217ರನ್‍ಗೆ ಆಲೌಟ್

    ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್ ಶಿಪ್ ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್‍ನ ವೇಗದ ಬೌಲರ್ ಕೈಲ್ ಜೇಮಿಸನ್ ದಾಳಿಗೆ ಭಾರತ ತತ್ತರಿಸಿ 217 ರನ್‍ಗೆ ಆಲೌಟ್ ಆಗಿದೆ. ದಿನದಾಟದ ಅಂತ್ಯಕ್ಕೆ ಕೀವಿಸ್ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿ 116ರನ್ ಹಿನ್ನಡೆ ಅನುಭವಿಸಿದೆ.

    2ನೇ ದಿನ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 146 ರನ್ ಪೇರಿಸಿದ್ದ ಭಾರತ 3ನೇ ದಿನ ಈ ಮೊತ್ತಕ್ಕೆ ಕೇವಲ 71ರನ್ ಸೇರಿಸಿ 7 ವಿಕೆಟ್ ಕಳೆದುಕೊಂಡು 217ರನ್‍ಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಜೇಮಿಸನ್ 5 ವಿಕೆಟ್ ಕಿತ್ತು ಭಾರತವನ್ನು ಕಾಡಿದರು.  ಇದನ್ನೂ ಓದಿ : ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    2ನೇ ದಿನದಾಟದ ಅಂತ್ಯಕ್ಕೆ 44 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಆ ಮೊತ್ತಕ್ಕೆ ಒಂದೇ ಒಂದು ರನ್ ಸೇರಿಸಲಾಗದೆ ಜೇಮಿಸನ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ ಕೇವಲ 4 ರನ್(22 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಉತ್ತಮವಾಗಿ ಅಡುತ್ತಿದ್ದ ಅಜಿಂಕ್ಯ ರಹಾನೆ ಅರ್ಧಶತಕ ಹೊಸ್ತಿಲಲ್ಲಿ ಎಡವಿದರೂ 49ರನ್(117 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಭಾರತಕ್ಕೆ ಮಧ್ಯಮಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ನೆರವಾಗಲಿಲ್ಲ.

    ರವೀಂದ್ರ ಜಡೇಜಾ 15ರನ್(53 ಎಸೆತ, 2 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 22ರನ್(27 ಎಸೆತ,3 ಬೌಂಡರಿ) ಬಾರಿಸಿ ಭಾರತದ ರನ್ 200 ರನ್ ಗಡಿದಾಟುವಂತೆ ಮಾಡಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಭಾರತ 92.1 ಓವರ್‍ ಗಳಲ್ಲಿ 217ರನ್‍ಗೆ ಇನ್ನಿಂಗ್ಸ್ ಕೊನೆಗೊಳಿಸಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಮತ್ತು ನೆಲಿ ವ್ಯಾಗ್ನರ್ ತಲಾ 2 ವಿಕೆಟ್ ಕಿತ್ತರೆ, ಟಿಮ್ ಸೌಥಿ 1 ವಿಕೆಟ್ ಪಡೆದರು. ಇದನ್ನೂ ಓದಿ : 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?

    ಕೀವಿಸ್ ಎಚ್ಚರಿಕೆಯ ಆರಂಭ:
    ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಟಾಮ್ ಲೇಥಮ್ ಮತ್ತು ಡೆವೂನ್ ಕಾನ್‍ವೇ ಎಚ್ಚರಿಕೆಯ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 70 ರನ್(206 ಎಸೆತ) ಕಲೆಹಾಕಿತು. ಈ ವೇಳೆ ದಾಳಿಗಿಳಿದ ಅಶ್ವಿನ್ 30ರನ್(104 ಎಸೆತ, 3 ಬೌಂಡರಿ) ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಲೇಥಮ್ ಅವರ ವಿಕೆಟ್ ಪಡೆದರು. ಆ ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜೊತೆ ಸೇರಿಕೊಂಡ ಕಾನ್‍ವೇ ಅರ್ಧಶತಕ ಬಾರಿಸಿ 54ರನ್(153 ಎಸೆತ, 6ಬೌಂಡರಿ) ಬಾರಿಸಿ ಔಟ್ ಆದರು. ಭಾರತದ ಪರ ಇಶಾಂತ್ ಶರ್ಮಾ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.

    ಕೀವಿಸ್ ಪರ ಕೇನ್ ವಿಲಿಯಮ್ಸನ್ 12 ರನ್(37 ಎಸೆತ, 1 ಬೌಂಡರಿ) ಮತ್ತು ರಾಸ್ ಟೇಲರ್ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕ್ಯಾಪ್ಟನ್‍ಶಿಪ್ ನಿರ್ವಹಿಸುವ ಮೂಲಕ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತನಗೆ ನಾಯಕತ್ವದ ಪಾಠ ಹೇಳಿಕೊಟ್ಟ ಗುರುವಿನ ದಾಖಲೆ ಮುರಿದಿದ್ದಾರೆ.

    ವಿರಾಟ್ ಕೊಹ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಟಾಸ್ ಆದ ಬೆನ್ನಲ್ಲೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ದಾಖಲೆಯನ್ನು ಮುರಿದಿದ್ದಾರೆ. ಧೋನಿ ಇವರೆಗೆ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ 61ನೇ ಪಂದ್ಯದಲ್ಲಿ ನಾಯಕತ್ವ ವಹಿಸುವ ಮೂಲಕ ತನ್ನ ನಾಯಕತ್ವದ ಗುರುವಿನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ದಾಖಲೆ ಬರೆದ ವಿರಾಟ್ ಕೊಹ್ಲಿ

    ಧೋನಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿ 27 ಪಂದ್ಯದಲ್ಲಿ ಜಯ, 18 ಪಂದ್ಯ ಸೋಲು ಮತ್ತು 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ವಿರಾಟ್ ಒಟ್ಟು 61 ಪಂದ್ಯ 36 ಪಂದ್ಯ ಜಯ, 14 ಪಂದ್ಯ ಸೋಲು, 10 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. 2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದ ಚುಕ್ಕಾನಿ ಹಿಡಿದಿದ್ದರು. ಬಳಿಕ ತಂಡವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಂ 1 ಸ್ಥಾನಕ್ಕೇರಿಸಿ, ಇದೀಗ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಏರಿಸಿದ ಕೀರ್ತಿ ವಿರಾಟ್‍ಗೆ ಸಲ್ಲುತ್ತದೆ. ಇದನ್ನೂ ಓದಿ: WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    ಕೊಹ್ಲಿ ನಾಯಕತ್ವ ಮಾತ್ರವಲ್ಲದೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 7500ಕ್ಕೂ ಅಧಿಕ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ 144 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದರೆ, ಬಳಿಕ ಸುನಿಲ್ ಗಾವಸ್ಕರ್ 154 ಟೆಸ್ಟ್ ಪಂದ್ಯಗಳಿಂದ 7500ರನ್ ಸಿಡಿಸಿದ್ದರು. ಇದೀಗ ಕೊಹ್ಲಿ 92 ಟೆಸ್ಟ್ ಪಂದ್ಯದಿಂದ 7500 ರನ್ ಸಿಡಿಸಿ ಮಿಂಚಿದ್ದಾರೆ.

  • WTC ಫೈನಲ್ ಟಾಸ್ ಗೆದ್ದ ಕೇನ್ ವಿಲಿಯಮ್ಸನ್-ಬ್ಯಾಟಿಂಗ್‍ ಆರಂಭಿಸಿದ ಭಾರತ

    WTC ಫೈನಲ್ ಟಾಸ್ ಗೆದ್ದ ಕೇನ್ ವಿಲಿಯಮ್ಸನ್-ಬ್ಯಾಟಿಂಗ್‍ ಆರಂಭಿಸಿದ ಭಾರತ

    ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐತಿಹಾಸಿಕ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

    ಇಂಗ್ಲೆಂಡ್‍ನ ಸೌಥಂಪ್ಟನ್‍ನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಶುಕ್ರವಾರ ಮಳೆ ಅಡ್ಡಿಯಾಗಿತ್ತು. ಹಾಗಾಗಿ ಇಂದಿನಿಂದ ಪಂದ್ಯ ಆರಂಭವಾಗಿದೆ. ಇಂದು ಟಾಸ್ ಪ್ರಕ್ರಿಯೆ ನಡೆದು ಕೇನ್ ವಿಲಿಯಮ್ಸನ್ ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದ್ದಾರೆ. ಭಾರತ ಪರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?

    ಶುಕ್ರವಾರ ಪಂದ್ಯ ಆರಂಭವಾಗಬೇಕಿತ್ತು ಅದರೆ ಮಳೆಯಿಂದ ಟಾಸ್ಕ್ ಪ್ರಕ್ರಿಯೆ ನಡೆಸಲು ಸಾಧ್ಯವಾಗಿರಲಿಲ್ಲ. ಬಳಿಕ ಮಳೆ ಬಿಟ್ಟರು ಕೂಡ ಮೈದಾನ ಒದ್ದೆಯಾಗಿದ್ದರಿಂದಾಗಿ ಪಂದ್ಯವನ್ನು ಇಂದಿಗೆ ಮುಂದೂಡಲ್ಪಟ್ಟಿತ್ತು. ಇದೀಗ ವಿಶ್ವದ ಎರಡು ಬಲಾಢ್ಯ ತಂಡಗಳು ಟೆಸ್ಟ್ ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡುತ್ತಿವೆ.

  • WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಎರಡು ತಂಡಗಳು ಸಿದ್ಧಗೊಂಡು ಮೈದಾನಕ್ಕಿಳಿಯಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ಇಂಗ್ಲೆಂಡ್‍ನಲ್ಲಿ ಪಂದ್ಯ ನಡೆಯುವ ಕಾರಣ ಅಲ್ಲಿನ ಪಿಚ್ ವೇಗಿಗಳಿಗೆ ನೆರವು ನೀಡಲಿದೆ. ಹಾಗಾಗಿ ಎರಡು ತಂಡಗಳಲ್ಲೂ ಘಟಾನುಘಟಿ ವೇಗಿಗಳಿದ್ದು ಇವರ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಿಂತಿದೆ.

    ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಕೂಡ ಬಲಿಷ್ಠವಾಗಿದ್ದು, ಯಾವ ತಂಡ ಕೂಡ ಅಷ್ಟು ಬೇಗ ಸೋಲೊಪ್ಪಿಕೊಳ್ಳುವ ತಂಡವಲ್ಲ, ಈ ತಂಡಗಳು ಇಂಗ್ಲೆಂಡ್‍ನ ಸೌತಾಂಪ್ಟನ್‍ನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವಾಡುತ್ತಿದೆ. ಇಲ್ಲಿನ ಬಹುತೇಕ ಪಿಚ್ ಪೇಸ್ ಮತ್ತು ಬೌನ್ಸಿ ಪಿಚ್ ಆಗಿರುವುದರಿಂದಾಗಿ ವೇಗಿಗಳಿಗೆ ನೆರವು ನೀಡುತ್ತದೆ. ಹಾಗಾಗಿ ಎರಡು ತಂಡಗಳಲ್ಲಿರುವ ವೇಗಿಗಳು ತಂಡಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಭಾರತ ಹಾಗೂ ನ್ಯೂಜಿಲೆಂಡ್ ತಂಡದಲ್ಲಿ ಕೂಡ ವಿಶ್ವ ಶ್ರೇಷ್ಠ ವೇಗಿಗಳ ದಂಡೇ ಇದೆ. ಭಾರತದ ಪಾಲಯದಲ್ಲಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್ ಇದ್ದಾರೆ. ಇತ್ತ ನ್ಯೂಜಿಲೆಂಡ್ ತಂಡದಲ್ಲಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವೇಗ್‍ನರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಕೈಲ್ ಜೇಮಿಸನ್ ಮತ್ತು ಹೆನ್ರಿ ಅವರನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಈ ಎರಡು ತಂಡಗಳ ವೇಗಿಗಳ ಈವರೆಗಿನ ಬಲಾಬಲ ಗಮನಿಸಿದಾಗ ಭಾರತ ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್ ಈವರೆಗೆ ಒಟ್ಟು 223 ಟೆಸ್ಟ್ ಪಂದ್ಯವಾಡಿ 730 ವಿಕೆಟ್ ಕಬಳಿಸಿದ್ದಾರೆ. 29.53 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಭಾರತ ವೇಗಿಗಳು 25 ಬಾರಿ 5 ವಿಕೆಟ್ ಗೊಂಚಲು ಪಡೆದರೆ 10 ವಿಕೆಟ್‍ಗಳನ್ನು 2 ಬಾರಿ ಪಡೆದಿದ್ದಾರೆ.  ಇದನ್ನೂ ಓದಿ:ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

    ನ್ಯೂಜಿಲೆಂಡ್ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವೇಗ್‍ನರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಕೈಲ್ ಜೇಮಿಸನ್ ಮತ್ತು ಹೆನ್ರಿ ಈವರೆಗೆ ಒಟ್ಟು 249 ಟೆಸ್ಟ್ ಪಂದ್ಯವಾಡಿ 945 ವಿಕೆಟ್ ಪಡೆದಿದ್ದಾರೆ. 28.08 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 34 ಬಾರಿ 5 ವಿಕೆಟ್ ಗೊಂಚಲು ಪಡೆದರೆ 3 ಬಾರಿ 10 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?

    ಈ ರೆಕಾರ್ಡ್‍ಗಳನ್ನು ಗಮನಿಸಿದಾಗ ಎರಡು ತಂಡದ ವೇಗದ ಬೌಲಿಂಗ್ ವಿಭಾಗ ತಂಡದ ಪ್ರಮುಖ ಅಸ್ತ್ರವಾಗಿದೆ. ಹಾಗಾಗಿ ವಿಶ್ವದ ಈ ಎರಡು ಬಲಾಢ್ಯ ತಂಡಗಳ ಕಾದಾಟ ಎಲ್ಲರ ಗಮನಸೆಳೆಯುತ್ತಿದೆ.

  • ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?

    ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?

    ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದರೆ ನ್ಯೂಜಿಲೆಂಡ್ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ. ಇವರಿಬ್ಬರು ಕೂಡ ನಾಯಕತ್ವದಲ್ಲಿ ಮತ್ತು ವೈಯಕ್ತಿಕವಾಗಿ ತಮ್ಮ ತಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಆಯ್ಕೆಗೊಳ್ಳುವ ಮೊದಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿ 36 ಪಂದ್ಯಗಳನ್ನು ಗೆದ್ದು, 14 ಪಂದ್ಯಗಳಲ್ಲಿ ಸೋತು 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

    ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್, ಒಟ್ಟು 36 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 21 ಪಂದ್ಯ ಜಯ, 8 ಪಂದ್ಯ ಸೋಲು ಮತ್ತು 7 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಲಂಕಾ ಪ್ರವಾಸಕ್ಕೆ ಶಿಖರ್ ಧವನ್ ನಾಯಕ-ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

    ವಿರಾಟ್ ಭಾರತ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾದರೆ, ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಪ್ರಮುಖ ಶಕ್ತಿ. ಇವರಿಬ್ಬರು ನಾಯಕತ್ವದೊಂದಿಗೆ ತಮ್ಮ ವೈಯಕ್ತಿಕ ದಾಖಲೆಯನ್ನು ಬರೆದುಕೊಂಡಿದ್ದಾರೆ. ಭಾರತವನ್ನು ಮುನ್ನಡೆಸಿದ 60 ಟೆಸ್ಟ್ ಪಂದ್ಯದಲ್ಲಿ ವಿರಾಟ್ ಒಟ್ಟು 5,392 ರನ್ ಗಳಿಸಿದ್ದು ಇದರಲ್ಲಿ 20 ಶತಕಗಳು ದಾಖಲಾಗಿದೆ. ಸೌತ್ ಆಫ್ರಿಕಾ ವಿರುದ್ಧ 2019ರಲ್ಲಿ ಸಿಡಿಸಿದ 254 ರನ್ ವೈಯಕ್ತಿಕ ಅಧಿಕ ಮೊತ್ತವಾಗಿದೆ. ಇತ್ತ ವಿಲಿಯಮ್ಸನ್ ಒಟ್ಟು 36 ಟೆಸ್ಟ್ ಪಂದ್ಯಗಳಿಂದ 3092 ರನ್ ಕಳೆಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸಿಡಿಸಿದ 251 ರನ್ ವಿಲಿಯಮ್ಸನ್ ಅವರ ವೈಯಕ್ತಿಕ ಅಧಿಕ ರನ್ ಆಗಿದೆ.

    ಈ ಇಬ್ಬರು ನಾಯಕರು ಕೂಡ ಗೆಲುವಿನ ಪಂದ್ಯದಲ್ಲಿ ಮತ್ತು ಪರಸ್ಪರ ಎದುರಾಳಿಯಾಗಿ ಕೂಡ ದಾಖಲೆ ಹೊಂದಿದ್ದು, ವಿರಾಟ್ ಕೊಹ್ಲಿ ಭಾರತ ಗೆದ್ದಂತಹ 36 ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 20 ಶತಕ ಸಹಿತ 3328 ರನ್ ಸಿಡಿಸಿದ್ದಾರೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಿ 3 ಪಂದ್ಯ ಗೆದ್ದು 2 ಪಂದ್ಯ ಸೋತಿದ್ದಾರೆ.  ಇದನ್ನೂ ಓದಿ: ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ವಿಲಿಯಮ್ಸನ್ ನ್ಯೂಜಿಲೆಂಡ್ ಗೆದ್ದಂತಹ 21 ಪಂದ್ಯಗಳಲ್ಲಿ 2,210 ರನ್ ಹೊಡೆದಿದ್ದಾರೆ. ಭಾರತ ವಿರುದ್ಧ ಈವರೆಗೆ ಒಟ್ಟು 4 ಪಂದ್ಯಗಳಲ್ಲಿ ನಾಯಕತ್ವ ನಿರ್ವಹಿಸಿ 2 ಪಂದ್ಯ ಗೆದ್ದು 2 ಪಂದ್ಯ ಸೋತಿದ್ದಾರೆ.  ಇದನ್ನೂ ಓದಿ:ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

    ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದಾಗ ಇಬ್ಬರು ನಾಯಕರು ಕೂಡ ಅವರವರ ತಂಡಕ್ಕೆ ಪ್ರಮುಖ ಅಸ್ತ್ರವಾಗಿ ಗೋಚರಿಸುತ್ತಿದ್ದು, ಯಾರು ಈ ಬಾರಿ ನಾಯಕತ್ವದಲ್ಲಿ ಯಶಸ್ಸು ಕಂಡು ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

  • ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

    ಲಂಡನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಮ್ಮೆ ಕ್ರೀಸ್‍ಗೆ ಅಂಟಿ ನಿಂತರೆ ಎದುರಾಳಿಗಳನ್ನು ಚೆಂಡಾಡುತ್ತಾರೆ. ಅದರೆ ಇದೀಗ ಮುಂದಿನ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ವಿರಾಟ್‍ಗೆ ನ್ಯೂಜಿಲೆಂಡಿನ ಒಬ್ಬ ಬೌಲರ್‌ನಿಂದ ಕಂಟಕವಿದೆ ಎಂದು ಅವರ ಬಾಲ್ಯದ ಕೋಚ್ ರಾಜ್‍ಕುಮಾರ್ ಶರ್ಮಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

    ವಿಶ್ವದ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಇನ್ನೂ ಕೆಲವೇ ದಿನ ಬಾಕಿ ಉಳಿದುಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಕೊಹ್ಲಿಯ ಬಾಲ್ಯದ ಕೋಚ್ ಅವರ ವೀಕ್ನೆಸ್ ಒಂದನ್ನು ಬಿಚ್ಚಿಟ್ಟಿದ್ದು, ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ವೇಗಿ ಟೀಮ್ ಸೌಥಿ ಅವರ ಬೌಲಿಂಗ್‍ನ್ನು ಎದುರಿಸಲು ಪರದಾಡುತ್ತಾರೆ ಎಂದಿದ್ದಾರೆ.

    ರಾಜ್‍ಕುಮಾರ್ ಶರ್ಮಾ, ವಿರಾಟ್ ಬಗ್ಗೆ ಈ ರೀತಿ ಹೇಳಲು ಕಾರಣವಿದೆ. ವಿರಾಟ್ ಕೊಹ್ಲಿ ಮತ್ತು ಟಿಮ್ ಸೌಥಿ ಪರಸ್ಪರ ಎದುರಾಳಿಗಳಾಗಿ ಆಡಿದಾಗ ಸೌಥಿ ಅವರ ಬೌಲಿಂಗ್‍ನ್ನು ಸರಿಯಾಗಿ ಎದುರಿಸಲಾಗದೆ ಕೊಹ್ಲಿ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೊಹ್ಲಿಯನ್ನು ಸೌಥಿ 10 ಬಾರಿ ಔಟ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‍ನಲ್ಲಿ 3 ಬಾರಿ ಕೊಹ್ಲಿ ವಿಕೆಟ್ ಕಿತ್ತಿರುವ ಸೌಥಿ ಟೆಸ್ಟ್ ಕ್ರಿಕೆಟ್‍ನ ಡೆಡ್ಲಿ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.  ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಈಗಾಗಲೇ ಟೆಸ್ಟ್ ಕ್ರಿಕೆಟ್‍ನಲ್ಲಿ ಸೌಥಿ ಅವರ 214 ಎಸೆತವನ್ನು ಎದುರಿಸಿರುವ ವಿರಾಟ್ 109 ರನ್‍ಗಳಿಸಿ, 3 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇದಲ್ಲದೇ ಸೌಥಿ ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳನ್ನು ಕಾಡಿದ್ದಾರೆ. ಹಾಗಾಗಿ ಸೌಥಿ ಬಗ್ಗೆ ಎಚ್ಚರ ತಪ್ಪಿದರೆ ಭಾರತದ ಬ್ಯಾಟಿಂಗ್ ಲೈನ್‍ಅಪ್‍ಗೆ ಸೌಥಿ ಮುಳುವಾಗುವುದರಲ್ಲಿ ಸಂಶಯವಿಲ್ಲ. ಇದನ್ನೂ ಓದಿ:ಆರ್​ಸಿಬಿ ಬಿಟ್ಟರೆ ಈ ತಂಡದಲ್ಲಿ ಆಡುವ ಬಯಕೆ ಇದೆ ಎಂದ ಚಹಲ್

    ಸದ್ಯ ಜಗತ್ತಿನ ಎರಡು ಬಲಾಢ್ಯ ತಂಡಗಳ ನಡುವಿನ ಕಾದಾಟಕ್ಕೆ ವಿಶ್ವದ ಅಪಾರ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತ್ತಿದ್ದು, ಯಾರು ಚೊಚ್ಚಲ ಟೆಸ್ಟ್ ಚಾಂಪಿಯನ್‍ಶಿಪ್‍ನ ವಿಜಯಿಯಾಗುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಜೂನ್ 18ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್‍ನ ಸೌಥಾಂಪ್ಟನ್‍ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಮುಂಬೈ: ಟೀಂ ಇಂಡಿಯಾ ಆಟಗಾರರು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಧರಿಸುವ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ. ಈ ಜೆರ್ಸಿ ರೆಟ್ರೋ ಶೈಲಿಯಲ್ಲಿದ್ದು, ಆಟಗಾರರು ಒಬ್ಬೊಬ್ಬರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಾಕ್ಕಾಗಿ ಟೀಂ ಇಂಡಿಯಾ ರೆಟ್ರೋ ಶೈಲಿಯ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇದೀಗ ಈ ರೆಟ್ರೋ ಶೈಲಿಯ ಜೆರ್ಸಿಯನ್ನು ತೊಟ್ಟು ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿರುವ ಚೇತೇಶ್ವರ ಪೂಜಾರ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ನಾನು ಈ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಇಳಿಯಲು ಕಾತರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್

     

    View this post on Instagram

     

    A post shared by Ravindra jadeja (@ravindra.jadeja)

    ಕಳೆದ ದಿನ ಭಾರತ ತಂಡದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ, ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ತೊಡುವ ರೆಟ್ರೋ ಜಂಪರ್ ಶೈಲಿಯ ಸ್ವೆಟರ್ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಇದೀಗ ಟೀಂ ಇಂಡಿಯಾ ಆಟಗಾರರು ತೊಟ್ಟಿರುವ ರೆಟ್ರೋ ಶೈಲಿಯ ಜೆರ್ಸಿ ಮತ್ತು ಸ್ವೆಟರ್‍ನಲ್ಲಿ ಯಾವುದೇ ಕಂಪನಿಯ ಲಾಂಛನವನ್ನು ಜೆರ್ಸಿಯ ಮುಂಭಾಗದಲ್ಲಿ ಬಳಸಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಆಯೋಜಿಸುತ್ತಿರುವ ಪಂದ್ಯವಾಗಿರುವುದರಿಂದ ಕೇವಲ ಬಿಸಿಸಿಐ ಹಾಗೂ ಐಸಿಸಿ ಲೋಗೋ ಮಾತ್ರ ಬಳಸಿಕೊಳ್ಳಲಾಗಿದೆ. ಪ್ರಯೋಜಕರಾದ ಬೈಜುಸ್ ಮತ್ತು ಎಂಪಿಎಲ್ ಲೋಗೋ ಸ್ವೆಟರ್ ಮೇಲೆ ಹಾಕಿಲ್ಲ. ಆದರೆ ಜೆರ್ಸಿಯ ಕೈ ತೋಳಿನ ಭಾಗದಲ್ಲಿ ಬೈಜುಸ್‍ನ ಲೋಗೋ ಹಾಕಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಾಟ ಜೂನ್ 18 ರಿಂದ ಇಂಗ್ಲೆಂಡ್‍ನ ಸೌಥಾಂಪ್ಟನ್‍ನಲ್ಲಿ ನಡೆಯಲಿದೆ.

  • ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ 4 ವಿಕೆಟ್ ಪಡೆದರೆ ಅಶ್ವಿನ್ ನೂತನ ದಾಖಲೆ

    ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ 4 ವಿಕೆಟ್ ಪಡೆದರೆ ಅಶ್ವಿನ್ ನೂತನ ದಾಖಲೆ

    ಮುಂಬೈ: ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ 4 ವಿಕೆಟ್ ಪಡೆದರೆ ನೂತನ ದಾಖಲೆ ಮಾಡಲಿದ್ದಾರೆ.

    ಡಬ್ಲ್ಯುಟಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಈಗಾಗಲೇ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ 14 ಪಂದ್ಯಗಳಿಂದ 70 ವಿಕೆಟ್ ಕಬಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಮುರಿಯಲು ಇದೀಗ ರವಿಚಂದ್ರನ್ ಅಶ್ವಿನ್‍ಗೆ ಕೇವಲ 4 ವಿಕೆಟ್‍ಗಳ ಅಗತ್ಯವಿದೆ. ಈಗಾಗಲೇ ಅಶ್ವಿನ್ 13 ಪಂದ್ಯಗಳಿಂದ 67 ವಿಕೆಟ್ ಕಬಳಿಸಿದ್ದಾರೆ. ಇನ್ನು 4 ವಿಕೆಟ್ ಪಡೆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯುವ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡುವ ಇನ್ನೊಬ್ಬ ಬೌಲರ್ ಟಿಮ್ ಸೌಥಿ 10 ಪಂದ್ಯಗಳಿಂದ 51 ವಿಕೆಟ್ ಪಡೆದಿದ್ದಾರೆ. ಆದರೆ ಅವರಿಗೆ ಈ ದಾಖಲೆ ಬರೆಯಲು ಇನ್ನೂ 20 ವಿಕೆಟ್ ಅವಶ್ಯಕತೆ ಇದೆ ಹಾಗಾಗಿ ಸೌಥಿ ದಾಖಲೆ ನಿರ್ಮಿಸುವುದು ಕಷ್ಟದ ಮಾತಾಗಿದೆ.

    ಆದರೆ ಅಶ್ವಿನ್ ಉತ್ತಮ ಅವಕಾಶವಿರುವುದರಿಂದಾಗಿ ಈ ದಾಖಲೆಯ ಒಡೆಯನಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಆದರೆ ಇಂಗ್ಲೆಂಡ್‍ನಲ್ಲಿ ನಡೆಯುವ ಡಬ್ಲ್ಯುಟಿಸಿ ಫೈನಲ್ ಪಂದ್ಯ ಸೌಥಾಂಪ್ಟನ್ ನಡೆಯಲಿದೆ. ಈ ಪಿಚ್ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಭಾರತ ತಂಡ ಕೇವಲ ಓರ್ವ ಸ್ಪಿನ್ ಬೌಲರ್‍ ನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ತಂಡದಲ್ಲಿ ಈಗಾಗಲೇ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ ಅಶ್ವಿನ್‍ಗೆ ತಂಡದಲ್ಲಿ ಸ್ಥಾನ ಸಿಕ್ಕರೆ ಮಾತ್ರ ಈ ದಾಖಲೆ ನಿರ್ಮಿಸಲು ಅವಕಾಶವಿದೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಜೂನ್ 18ರಿಂದ 22 ವರೆಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯಾಟ ನಡೆಯಲಿದೆ. ಈಗಾಗಲೇ ಬಿಸಿಸಿಐ 20 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಆಟಗಾರರೂ ಕೂಡ ಈಗಾಗಲೇ ಮುಂಬೈನಲ್ಲಿ ಕಠಿಣ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.