Tag: test

  • ಮೂರನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ಔಟ್: ವಿಡಿಯೋ ನೋಡಿ

    ಮೂರನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ಔಟ್: ವಿಡಿಯೋ ನೋಡಿ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ. ಬಲ ಭುಜಕ್ಕೆ ಗಾಯಗೊಂಡಿರುವ ಕೊಹ್ಲಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಈ ಪಂದ್ಯದಿಂದ ಅಲಭ್ಯರಾಗಲಿದ್ದಾರೆ.

    ಜಡೇಜಾ ಎಸೆದ 40ನೇ ಓವರ್‍ನ ಒಂದನೆ ಎಸೆತವನ್ನು ಹ್ಯಾಂಡ್ಸ್ ಕಾಂಬ್ ಬಲವಾಗಿ ಹೊಡೆದಿದ್ದರು. ವೇಗವಾಗಿ ಓಡಿ ಬಂದು ಬೌಂಡರಿ ಬಳಿ ವಿರಾಟ್ ಕೊಹ್ಲಿ ಬಾಲನ್ನು ತಡೆದು ನಿಲ್ಲಿದ್ದರು. ಆದರೆ ಹಿಡಿಯುವ ರಭಸಕ್ಕೆ ನೆಲಕ್ಕೆ ಬಿದ್ದ ಪರಿಣಾಮ ಬಲ ಭುಜಕ್ಕೆ ಪೆಟ್ಟಾಗಿತ್ತು. ಭುಜದ ನೋವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೊಹ್ಲಿ ಮೈದಾನದಿಂದ ತೆರಳಿದ್ದರು.

    ಇದನ್ನೂ ಓದಿ: ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ಕೊಹ್ಲಿ ಅನುಪಸ್ಥಿತಿಯಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಈಗ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಶುಕ್ರವಾರ ಸ್ಕ್ಯಾನಿಂಗ್ ರಿಪೋರ್ಟ್ ಬರಲಿದ್ದು, ಹೆಚ್ಚಿನ ಗಾಯವಾಗಿದ್ದರೆ ಕೊಹ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.

    ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 333 ರನ್ ಗಳಿಂದ ಸೋತಿದ್ದರೆ, ಬೆಂಗಳೂರು ಟೆಸ್ಟ್ ನಲ್ಲಿ 75 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿತ್ತು.

    ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

     

     

     

     

  • ಲಿಯಾನ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ಪೆವಿಲಿಯನ್ ಪರೇಡ್

    ಲಿಯಾನ್ ಸ್ಪಿನ್ ದಾಳಿಗೆ ಟೀಂ ಇಂಡಿಯಾ ಪೆವಿಲಿಯನ್ ಪರೇಡ್

    ಬೆಂಗಳೂರು: 5 ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನವೇ ನಥನ್ ಲಿಯಾನ್ ಸ್ಪಿನ್‍ಗೆ ತತ್ತರಿಸಿದ ಭಾರತ 71.2 ಓವರ್ ಗಳಿಗೆ 189 ರನ್‍ಗಳಿಗೆ ಆಲೌಟ್ ಆಗಿದೆ.

    ಆರಂಭಿಕ ಆಟಗಾರ ಕೆಎಲ್ ರಾಹುಲ್ 90 ರನ್ (205 ಎಸೆತ, 9 ಬೌಂಡರಿ) ಕರಣ್ ನಾಯರ್ 26 ರನ್ ಹೊಡೆದರು. ಜೀವನ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ ಲಿಯಾನ್ 22.2 ಓವರ್ ಎಸೆದು 50 ರನ್ ನೀಡಿ 8 ವಿಕೆಟ್ ಪಡೆದರು.

    ಅಭಿನವ್ ಮುಕುಂದ್ ಅವರನ್ನು ಸ್ಟ್ರಾಕ್ ಎಲ್‍ಬಿ ಮಾಡಿದ್ರೆ, ಕರಣ್ ನಾಯರ್ ಅವರನ್ನು ಸ್ವೀವ್ ಓ ಕೀಫ್ ಬೌಲಿಂಗ್‍ನಲ್ಲಿ ಮ್ಯಾಥ್ಯೂ ವೇಡ್ ಸ್ಟಂಪ್ ಔಟ್ ಮಾಡಿದರು. ಉಳಿದ ಆಟಗಾರರನ್ನು ಲಿಯನ್ ಪೆವಿಲಿಯನ್‍ಗೆ ಕಳುಹಿಸಿದರು.

    ಇದನ್ನೂ ಓದಿ:ಕೊಹ್ಲಿಗೆ ಧೋನಿಯ ಈ ಒಂದು ದಾಖಲೆ ಮುರಿಯಲು ಸಾಧ್ಯವೇ ಇಲ್ಲ

    ಯಾರು ಎಷ್ಟು ರನ್?
    ಕೆಎಲ್ ರಾಹುಲ್ 90, ಅಭಿನವ್ ಮುಕುಂದ್ 0, ಚೇತೇಶ್ವರ ಪೂಜಾರ 17, ವಿರಾಟ್ ಕೊಹ್ಲಿ 12, ಅಜಿಂಕ್ಯಾ ರೆಹಾನೆ 17, ಕರಣ್ ನಾಯರ್ 26, ಆರ್ ಅಶ್ವಿನ್ 7, ವೃದ್ಧಿಮಾನ್ ಸಹಾ 1, ರವೀಂದ್ರ ಜಡೇಜಾ 3, ಉಮೇಶ್ ಯಾದವ್ ಔಟಾಗದೇ 0, ಇಶಾಂತ್ ಶರ್ಮಾ 0 ರನ್ ಗಳಿಸಿದರು.

    ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿದೆ. ಡೇವಿಡ್ ವಾರ್ನರ್ 23 ರನ್, ಮ್ಯಾಟ್ ರೇನ್‍ಶಾ 15 ರನ್‍ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ನಥನ್ ಲಿಯಾನ್ 2013ರ ಮಾರ್ಚ್ ನಲ್ಲಿ ದೆಹಲಿಯ ಫಿರೋಜಾ ಕೋಟ್ಲಾ ಮೈದಾನದಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ನಲ್ಲಿ 94 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ 333 ರನ್‍ಗಳಿಂದ ಗೆದ್ದುಕೊಂಡಿತ್ತು.

  • ಟೀಂ ಇಂಡಿಯಾಗೆ 333 ರನ್ ಹೀನಾಯ ಸೋಲು!

    ಟೀಂ ಇಂಡಿಯಾಗೆ 333 ರನ್ ಹೀನಾಯ ಸೋಲು!

    ಪುಣೆ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 333 ರನ್‍ಗಳಿಂದ ಹೀನಾಯವಾಗಿ ಸೋತಿದೆ. ಗೆಲ್ಲಲು 441 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ ಕೇವಲ 107 ರನ್‍ಗಳಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್ ಗಿಂತ 2 ರನ್ ಹೆಚ್ಚು ಗಳಿಸಿದ್ದು ಮಾತ್ರ ಟೀಂ ಇಂಡಿಯಾದ ಸಾಧನೆಯಾಯಿತು.

    ಎರಡೂ ಇನ್ನಿಂಗ್ಸ್ ಗಳಲ್ಲಿ ಭಾರತ ತಂಡ 75 ಓವರ್‍ಗಳನ್ನೂ ಬ್ಯಾಟ್ ಮಾಡಲು ಬಳಸಿಲ್ಲ ಎನ್ನುವುದೇ ವಿಶೇಷ. ಟೀಂ ಇಂಡಿಯಾದ ಈ ಸೋಲಿನಿಂದ 19 ಟೆಸ್ಟ್ ಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. 2 ಇನ್ನಿಂಗ್ಸ್ ಗಳಲ್ಲಿ ಒಟ್ಟು 12 ವಿಕೆಟ್ ಗಳಿಸಿದ ಆಸ್ಟ್ರೇಲಿಯಾದ ಸ್ಟೀಫನ್ ಒಕೀಫ್ ಆಸೀಸ್ ಗೆಲುವಿನ ರೂವಾರಿಯಾದರು. ಒಕೀಫ್ 10 ವಿಕೆಟ್ ಪಡೆದಿದ್ದು ಇದೇ ಮೊದಲು. ಆಸೀಸ್ 2ನೇ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ ನಾಯಕ ಸ್ಟೀವನ್ ಸ್ಮಿತ್ ಕೂಡಾ ಆಸೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಯಾರೆಷ್ಟು ರನ್ ಹೊಡೆದ್ರು?: ಭಾರತದ ಪರವಾಗಿ ಮುರಳಿ ವಿಜಯ್ 2, ಕೆ.ಎಲ್.ರಾಹುಲ್ 10, ಚೇತೇಶ್ವರ್ ಪೂಜಾರ 31, ವಿರಾಟ್ ಕೊಹ್ಲಿ 13, ಅಜಿಂಕ್ಯ ರಹಾನೆ 18, ಅಶ್ವಿನ್ 8, ರಿದ್ದಿಮಾನ್ ಸಾಹ 5, ರವೀಂದ್ರ ಜಡೇಜ 3 ರನ್ ಗಳಿಸಿದರು.

    ಮೊದಲ ಇನ್ನಿಂಗ್ಸ್ ನಲ್ಲಿ 260 ರನ್ ಗಳಿಸಿದ್ದ ಆಸೀಸ್ ತಂಡ ಟೀ ಇಂಡಿಯಾವನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 105 ರನ್‍ಗಳಿಗೆ ಕಟ್ಟಿ ಹಾಕಿತು. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 285 ರನ್‍ಗಳಿಗೆ ಆಲೌಟಾಯಿತು. ಇದರಲ್ಲಿ 11 ಬೌಂಡರಿಗಳ ನೆರವಿನಿಂದ ನಾಯಕ ಸ್ಮಿತ್ 109 ರನ್ ಸೇರಿಸಿದ್ದರು. ಭಾರತದ ಪರವಾಗಿ ಅಶ್ವಿನ್ 4, ಜಡೇಜ 3 ಹಾಗೂ ಉಮೇಶ್ ಯಾದವ್ 2 ವಿಕೆಟ್ ಪಡೆದರು.

  • ಭಾರತ-ಆಸೀಸ್ ಟೆಸ್ಟ್ – ಟೀಂ ಇಂಡಿಯಾಗೆ 441 ರನ್‍ಗಳ ಟಾರ್ಗೆಟ್

    ಭಾರತ-ಆಸೀಸ್ ಟೆಸ್ಟ್ – ಟೀಂ ಇಂಡಿಯಾಗೆ 441 ರನ್‍ಗಳ ಟಾರ್ಗೆಟ್

    ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಅಂತಿಮವಾಗಿ 441 ರನ್‍ಗಳ ಟಾರ್ಗೆಟ್ ನೀಡಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ 155 ರನ್‍ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 87 ಓವರ್‍ಗಳಿಗೆ 285 ರನ್ ಕಲೆ ಹಾಕಿ ಆಲ್‍ಔಟ್ ಆಯಿತು. ಆಸೀಸ್ ಪರ ಸ್ಮಿತ್ ಶತಕದಾಟವಾಡಿ ಟೀಂ ಇಂಡಿಯಾ ಬೌಲರ್‍ಗಳ ಬೆವರಿಳಿಸಿದ್ರು. ಸ್ಟೀವನ್ ಸ್ಮಿತ್ 202 ಬಾಲ್‍ಗಳಿಗೆ 11 ಬೌಂಡರಿ ಸೇರಿದಂತೆ 109 ರನ್ ಗಳಿಸಿದ್ರು.

    ಭಾರತದ ಪರ ಆರ್ ಅಶ್ವಿನ್ 4 ವಿಕೆಟ್ ಪಡೆದ್ರೆ, ಜಡೇಜಾ, ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದ್ರು.

     

  • ಒಂದೂವರೆ ದಿನದಲ್ಲಿ 22 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ಟೆಸ್ಟ್

    ಒಂದೂವರೆ ದಿನದಲ್ಲಿ 22 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ಟೆಸ್ಟ್

     

    ಪುಣೆ: ಮೊದಲ ದಿನ ಭಾರತೀಯ ಬೌಲರ್‍ಗಳು ಮೇಲುಗೈ. ಎರಡನೇ ದಿನ ಆಸ್ಟ್ರೇಲಿಯಾ ಬೌಲರ್‍ಗಳ ಮೇಲುಗೈ. ಒಂದೂವರೆ ದಿನದಲ್ಲೇ 22 ವಿಕೆಟ್ ಪತನ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ  ಹೈಲೈಟ್ಸ್.

    ಮೊದಲ ದಿನ ಉಮೇಶ್ ಯಾದವ್ ಮತ್ತು ಜಯಂತ್ ಯಾದವ್ ಅಬ್ಬರಿಸಿದರೆ, ಎರಡನೇ ದಿನ ಸ್ವೀವ್ ಓ ಕೀಫ್ ಬೌಲಿಂಗ್‍ಗೆ ತತ್ತರಿಸಿದ ಭಾರತ 40.1 ಓವರ್‍ಗಳಲ್ಲಿ 105 ರನ್‍ಗಳಿಗೆ ಅಲೌಟ್ ಆಗಿದೆ.

    ಆರಂಭಿಕ ಆಟಗಾರ ಕೆಎಲ್ ರಾಹುಲ್ 64 ರನ್ (97 ಎಸೆತ, 10 ಬೌಂಡರಿ, 1ಸಿಕ್ಸರ್), ಅಜಿಂಕ್ಯಾ ರೆಹಾನೆ 13 ರನ್, ಮುರಳಿ ವಿಜಯ್ 10 ರನ್ ಬಾರಿಸಿದ್ದು ಹೊರತು ಪಡಿಸಿ ಯಾವೊಬ್ಬ ಆಟಗಾರ ಎರಡಂಕಿಯ ಗಡಿಯನ್ನು ದಾಟಲಿಲ್ಲ. 94 ರನ್ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಭಾರತ ಭಾರತ 11 ರನ್‍ಗಳ ಅಂತರಲ್ಲಿ 7 ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ 2 ಬಾಲ್ ಎದುರಿಸಿ ಶೂನ್ಯ ರನ್‍ಗೆ ಔಟ್ ಆದರು.

    ಯಾರು ಎಷ್ಟು ರನ್?
    ಮುರಳಿ ವಿಜಯ್ 10, ಕೆಎಲ್ ರಾಹುಲ್ 64, ಚೇತೇಶ್ವರ ಪೂಜಾರಾ 6, ಕೊಹ್ಲಿ 0, ರಹಾನೆ 13, ಆರ್ ಅಶ್ವಿನ್1, ವೃದ್ಧಿಮಾನ್ ಸಹಾ 0, ರವೀಂದ್ರ ಜಡೇಜಾ 2, ಜಯಂತ್ ಯಾದವ್ 2, ಉಮೇಶ್ ಯಾದವ್ 4, ಇಶಾಂತ್ ಶರ್ಮ ಔಟಾಗದೇ 2ರನ್.

    ಯಾರಿಗೆ ಎಷ್ಟು ವಿಕೆಟ್?
    ಸ್ವೀವ್ ಓ’ ಕೀಫ್ 6 ವಿಕೆಟ್ ಗಳಿಸಿ ಮಿಂಚಿದರೆ, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಗಳಿಸಿದರು. ಜೋಶ್ ಹೇಜಲ್‍ವುಡ್ ಮತ್ತು ನೇಥನ್ ಲಯಾನ್ ತಲಾ ಒಂದು ವಿಕೆಟ್ ಪಡೆದರು.

    ಇತರೇ 1 ರನ್: ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 6 ಲೆಗ್‍ಬೈ, 9 ನೋಬಾಲ್ ಎಸೆಯುವ ಮೂಲಕ 15 ಇತರೇ ರನ್ ನೀಡಿದರೆ, ಆಸ್ಟ್ರೇಲಿಯಾದ ಬೌಲರ್‍ಗಳು ಶಿಸ್ತುಬದ್ಧ ಬೌಲಿಂಗ್ ನಡೆಸಿ ನೋಬಾಲ್ ರೂಪದಲ್ಲಿ 1 ರನ್ ಮಾತ್ರ ನೀಡಿದ್ದಾರೆ.

    ಅರಂಭಿಕ ಕುಸಿತ: 155 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಿಬ್ಬರು ಔಟಾಗಿದ್ದಾರೆ. ಡೇವಿಡ್ ವಾರ್ನರ್ ಮತ್ತು ಸ್ವೀವ್ ಸ್ಮಿತ್ ಅಶ್ವಿನ್ ಬೌಲಿಂಗ್‍ನಲ್ಲಿ ಎಲ್‍ಬಿಗೆ ಬಲಿಯಾಗಿದ್ದಾರೆ. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 16 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 260 ರನ್ (94.5 ಓವರ್)
    ಭಾರತ ಮೊದಲ ಇನ್ನಿಂಗ್ಸ್ 105 ರನ್(40.1 ರನ್)