Tag: test

  • ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

    ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

    ಲಂಡನ್: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ ಮಾಡಿದ್ದು, ಟೂರ್ನಿಯಲ್ಲಿ 13 ಕ್ಯಾಚ್ ಪಡೆಯುವ ಮೂಲಕ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ್ದಾರೆ.

    ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ರಾಹುಲ್, ಸ್ಟುವರ್ಟ್ ಬ್ರಾಡ್ (98) ಕ್ಯಾಚ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಈ ಹಿಂದೆ ಟೀಂ ಇಂಡಿಯಾದ ರಾಹುಲ್ ದ್ರಾವಿಡ್ 2004-05 ರಲ್ಲಿ ನಡೆದ ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೂರ್ನಿಯಲ್ಲಿ 13 ಕ್ಯಾಚ್ ಪಡೆದಿದ್ದರು. ಈ ಪಟ್ಟಿಯಲ್ಲಿ ಆಸೀಸ್ ಆಟಗಾರ ಜಾಕ್ ಗ್ರೆಗೊರಿ 1920-21ರಲ್ಲಿ ನಡೆದ ಆಸಿಸ್ ಟೆಸ್ಟ್ ಟೂರ್ನಿಯಲ್ಲಿ 15 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದರು.

    ವಿಶೇಷವಾಗಿ ಇಂಗ್ಲೆಂಡ್ ನೆಲದಲ್ಲಿ ನಡೆದ ಟೂರ್ನಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ಕೆಎಲ್ ರಾಹುಲ್ ಪಡೆದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಜಾನ್ ಇಕಿನ್ 1951 ರಲ್ಲಿ 12 ಕ್ಯಾಚ್ ಪಡೆದಿದ್ದರು. ಉಳಿದಂತೆ ಮೂರನೇ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 7 ಕ್ಯಾಚ್ ಹಿಡಿದಿದ್ದ ಕೆಎಲ್ ರಾಹುಲ್ ಟೆಸ್ಟ್ ನಲ್ಲಿ ವಿಕೆಟ್ ಕೀಪರ್ ಹೊರತು ಪಡಿಸಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು.

    ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟವನ್ನು 198/7 ರನ್‍ಗಳಿಂದ ಮುಂದುವರೆಸಿದ ಇಂಗ್ಲೆಂಡ್ ಬಾಲಂಗೋಚಿಗಳು ಟೀಂ ಇಂಡಿಯಾ ಬೌಲರ್ ಗಳನ್ನು ಕೆಲ ಕಾಲ ಕಾಡಿದರು. ಈ ನಡುವೆ ಅರ್ಧ ಶತಕ ಸಿಡಿದ ಬಟ್ಲರ್ ತಂಡದ ಸ್ಕೋರ್ 300 ಗಡಿ ದಾಟಲು ನೆರವಾದರು. ಬಟ್ಲರ್ ಗೆ ಇತರೇ ಆಟಗಾರರು ಉತ್ತಮ ಬೆಂಬಲ ನೀಡಿದರು. ಈ ವೇಳೆ ಬಿರುಸಿನ ಆಟಕ್ಕೆ ಮುಂದಾದ ಬಟ್ಲರ್ 89 ರನ್ ಗಳಸಿ ವಿಕೆಟ್ ಒಪ್ಪಿಸಿದರು. ಅದಾಗಲೇ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ (332 ರನ್) ಕಲೆಹಾಕಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತಕ್ಕೆ ಯಾವಾಗ ಹೋಗ್ತೀರಿ? ಪ್ರಶ್ನೆಗೆ ಮಲ್ಯ ನೀಡಿದ ಉತ್ತರ ಹೀಗಿತ್ತು

    ಭಾರತಕ್ಕೆ ಯಾವಾಗ ಹೋಗ್ತೀರಿ? ಪ್ರಶ್ನೆಗೆ ಮಲ್ಯ ನೀಡಿದ ಉತ್ತರ ಹೀಗಿತ್ತು

    ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ದೇಶ ತೊರೆದು ವಿದೇಶದಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಓವೆಲ್ ಕ್ರಿಕೆಟ್ ಮ್ಯಾಚ್ ನೋಡಲು ಬಂದಿದ್ದ ವಿಜಯ ಮಲ್ಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇಂಗ್ಲೆಂಡ್ ಮತ್ತು ಭಾರತದ ನಡುವಿನ ಮೊದಲ ಪಂದ್ಯವನ್ನು ನೋಡಲು ಬಂದಿದ್ದ ಮಲ್ಯರಿಗೆ ಸ್ಥಳೀಯ ವ್ಯಕ್ತಿಯೊಬ್ಬ ನೀವು ಭಾರತಕ್ಕೆ ಹೋಗಿ ಅಂತಾ ಹೇಳಿದ್ದಾರೆ.

    ಈ ವೇಳೆ ವ್ಯಕ್ತಿಯ ಪ್ರಶ್ನೆಗೆ ಉತ್ತರಿಸಿದ ಮಲ್ಯ, ನಾನು ಭಾರತಕ್ಕೆ ಹೋಗುವುದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ ಎಂದು ಉತ್ತರ ನೀಡಿದ್ದಾರೆ. ಆದ್ರೆ ಪ್ರಶ್ನೆ ಕೇಳಿದ ವ್ಯಕ್ತಿ ಸುಮ್ಮನಾಗದೇ ನೀವು ಮರಳಿ ಭಾರತಕ್ಕೆ ಹೋಗಿ ಎಂದು ಆಗ್ರಹಿಸಿದ್ದಾನೆ. ವಿಜಯ್ ಮಲ್ಯ ಮುಗಳ್ನಕ್ಕು ಕಾರ್ ಹತ್ತಿ ಹೊರಟಿದ್ದಾರೆ.

    ಭಾರತದ ವಿವಿಧ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೇ ಇಂಗ್ಲೆಂಡ್ ಗೆ ಪಲಾಯನ ಮಾಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೇ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ತಿಳಿಸಿದೆ. ಇನ್ನು ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೆಪ್ಟೆಂಬರ್ 3ರಂದು ಮಲ್ಯರಿಗೆ ನೋಟಿಸ್ ಜಾರಿ ಮಾಡಿ 1 ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

    ಈ ಹಿಂದೆ ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡುವ ಕುರಿತು ಲಂಡನ್ ನ್ಯಾಯಾಲಯ ಮುಂಬೈ ಜೈಲಿನ ಸ್ಥಿತಿ ಕುರಿತು ಮಾಹಿತಿ ಕೋರಿತ್ತು. ನ್ಯಾಯಾಲಯದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಮುಂಬೈ ಆರ್ಥರ್ ರೋಡ್ ಜೈಲಿನ ವೀಡಿಯೋವನ್ನು ಸಲ್ಲಿಸಿದ್ದರು. ಆದರೆ ಮಲ್ಯ ಭಾರತದ ಜೈಲುಗಳು ಅಮಾನವೀಯವಾಗಿದೆ, ಅಲ್ಲಿ ಬೆಳಕು ಇಲ್ಲ ಎಂದು ದೂರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಓವೆಲ್ ಟೆಸ್ಟ್ ವೀಕ್ಷಿಸಲು ಬಂದ ವಿಜಯ್ ಮಲ್ಯ

    ಓವೆಲ್ ಟೆಸ್ಟ್ ವೀಕ್ಷಿಸಲು ಬಂದ ವಿಜಯ್ ಮಲ್ಯ

    ಲಂಡನ್: ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ವೀಕ್ಷಿಸಲು ವಿಜಯ್ ಮಲ್ಯ ಆಗಮಿಸಿದ್ದಾರೆ.

    ಪಂದ್ಯ ನೋಡಲು ಮಲ್ಯ ಕ್ರೀಡಾಂಗಣ ಪ್ರವೇಶ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಲಂಡನ್ ನಲ್ಲಿ ನೆಲೆಸಿರುವ ಮಲ್ಯ ಈ ಹಿಂದೆಯೂ ಕ್ರಿಕೆಟ್ ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

    ಭಾರತದ ವಿವಿಧ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೇ ಇಂಗ್ಲೆಂಡ್ ಗೆ ಪಲಾಯನ ಮಾಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೇ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ತಿಳಿಸಿದೆ. ಇನ್ನು ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೆಪ್ಟೆಂಬರ್ 3ರಂದು ಮಲ್ಯರಿಗೆ ನೋಟಿಸ್ ಜಾರಿ ಮಾಡಿ 1 ವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ.

    ಈ ಹಿಂದೆ ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡುವ ಕುರಿತು ಲಂಡನ್ ನ್ಯಾಯಾಲಯ ಮುಂಬೈ ಜೈಲಿನ ಸ್ಥಿತಿ ಕುರಿತು ಮಾಹಿತಿ ಕೋರಿತ್ತು. ನ್ಯಾಯಾಲಯದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಮುಂಬೈ ಆರ್ಥರ್ ರೋಡ್ ಜೈಲಿನ ವೀಡಿಯೋವನ್ನು ಸಲ್ಲಿಸಿದ್ದರು. ಆದರೆ ಮಲ್ಯ ಭಾರತದ ಜೈಲುಗಳು ಅಮಾನವೀಯವಾಗಿದೆ, ಅಲ್ಲಿ ಬೆಳಕು ಇಲ್ಲ ಎಂದು ದೂರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಧರಿಸಿದ ಹನುಮ ವಿಹಾರಿ

    ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಧರಿಸಿದ ಹನುಮ ವಿಹಾರಿ

    ಲಂಡನ್: ಇಂಗ್ಲೆಂಡ್ ವಿರುದ್ಧ ಓವೆಲ್‍ನಲ್ಲಿ ಆರಂಭವಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಹನುಮ ವಿಹಾರಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ 24 ವರ್ಷದ ಹನುಮ ವಿಹಾರಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆದು ಟೀಂ ಇಂಡಿಯಾ 292ನೇ ಟೆಸ್ಟ್ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

    ಈ ಕುರಿತು ಸಂತಸ ವ್ಯಕ್ತಪಡಿಸಿರುವ ವಿಹಾರಿ, ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಆದರೆ ಒಮ್ಮೆ ತಂಡದಲ್ಲಿ ಸ್ಥಾನ ಲಭಿಸಿದರೆ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಾನು ಈ ಕುರಿತು ಹೆಚ್ಚಿನ ಗಮನ ನೀಡಿದ್ದಾಗಿ ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಪಂದ್ಯಕ್ಕೆ ತಂಡದ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಆಗಿದ್ದು, ಆರ್ ಅಶ್ವಿನ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಪಾಂಡ್ಯ ಸ್ಥಾನದಲ್ಲಿ ಹನುಮ ವಿಹಾರಿಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ 2 ಪಂದ್ಯಗಳಿಗೆ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರನ್ನು ಸಮಿತಿ ಆಯ್ಕೆ ಮಾಡಿತ್ತು.

    ಹನುಮ ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ದಕ್ಷಿಣ ಅಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿದ್ದರು.

    ಹನುಮ ವಿಹಾರಿ ಸಾಧನೆ:
    ಪ್ರಥಮ ದರ್ಜೆ ಕ್ರಿಕೆಟ್ – 63 ಪಂದ್ಯ, 5,142 ರನ್, 59.79 ಸರಾಸರಿ
    ಲಿಸ್ಟ್ ಎ ಕ್ರಿಕೆಟ್- 56 ಪಂದ್ಯ, 2268 ರನ್, 83.90 ಸರಾಸರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 6 ಸಾವಿರ ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಸಚಿನ್ 120 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಗಳಿಸಿದ್ದರೆ ಕೊಹ್ಲಿ 71 ಟೆಸ್ಟ್ ಪಂದ್ಯಗಳ 119 ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಳ ಗಡಿಯನ್ನು ದಾಟಿದ್ದಾರೆ. ಇದರಲ್ಲಿ 23 ಶತಕಗಳು, 18 ಅರ್ಧ ಶತಕಗಳು ಸೇರಿದೆ. ಭಾರತದ ಪರ ಸುನೀಲ್ ಗವಾಸ್ಕರ್ 117 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಪೂರೈಸಿ ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಪಂದ್ಯದ 22ನೇ ಓವರ್ ನ ವೇಳೆ 9 ರನ್ ಗಳಿಸಿದ್ದ ಕೊಹ್ಲಿ 6 ಸಾವಿರ ರನ್ ದಾಟಿದರು. ಈ ಹಿಂದೆ ಟೀಂ ಇಂಡಿಯಾ ಪರ ವೀರೇಂದ್ರ ಸೆಹ್ವಾಗ್ (72 ಟೆಸ್ಟ್, 123 ಇನ್ನಿಂಗ್ಸ್), ರಾಹುಲ್ ದ್ರಾವಿಡ್ (73 ಟೆಸ್ಟ್, 125 ಇನ್ನಿಂಗ್ಸ್), ಮತ್ತು ಸಚಿನ್ ತೆಂಡೂಲ್ಕರ್ (76 ಟೆಸ್ಟ್, 120 ಇನ್ನಿಂಗ್ಸ್) ಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.

    ಕೊಹ್ಲಿ ರನ್ ಸಾಧನೆ:
    27 ಇನ್ನಿಂಗ್ಸ್ 1 ಸಾವಿರ ರನ್
    26 ಇನ್ನಿಂಗ್ಸ್ 1 ರಿಂದ 2 ಸಾವಿರ ರನ್
    20 ಇನ್ನಿಂಗ್ಸ್ 2 ರಿಂದ 3 ಸಾವಿರ ರನ್
    16 ಇನ್ನಿಂಗ್ಸ್ 3 ರಿಂದ 4 ಸಾವಿರ ರನ್
    16 ಇನ್ನಿಂಗ್ಸ್ 4 ರಿಂದ 5 ಸಾವಿರ ರನ್
    14 ಇನ್ನಿಂಗ್ಸ್ 5 ರಿಂದ 6 ಸಾವಿರ ರನ್

    ಕೊಹ್ಲಿ ಈಗಾಗಲೇ 23 ಶತಕ ಸಿಡಿಸಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ದಾಖಲೆ ಮುರಿದಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದ ಕೊಹ್ಲಿ, ಕರ್ರನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4ನೇ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ರೆಕಾರ್ಡ್

    4ನೇ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ರೆಕಾರ್ಡ್

    ಲಂಡನ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಮಿಂಚಿನ ದಾಳಿಗೆ ಇಂಗ್ಲೆಂಡ್ ಬಾಟ್ಸ್ ಮನ್ ಪೆವಿಲಿಯನ್ ಪರೇಡ್ ನಡೆಸಿದ್ದು, ಲಂಚ್ ಬ್ರೇಕ್ ಬಳಿಕ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

    ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ, ಜೋ ರೂಟ್ ವಿಕೆಟ್ ಪಡೆಯುವ ಮೂಲಕ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆ ಶರ್ಮಾ ಪಡೆದಿದ್ದಾರೆ. ಅಲ್ಲದೇ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಜಸ್‍ಪ್ರೀತ್ ಬುಮ್ರಾ ಆರಂಭಿಕ ಕೇಟನ್ ವಿಕೆಟ್ ಪಡೆದು ಅಘಾತ ನೀಡಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಇಶಾಂತ್ ಶರ್ಮಾ 4 ರನ್ ಗಳಿಸಿದ್ದ ರೂಟ್ ರನ್ನು ಎಲ್‍ಬಿ ಬಲೆಗೆ ಕೆಡವಿದರು. ಬಳಿಕ ಬಂದ ಜಾನಿ ಬೈರ್ ಸ್ಟೋವ್ (6) ಕೂಡ ಹೆಚ್ಚು ಸಮಯ ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಈ ಮಧ್ಯೆ ಕುಕ್, ಸ್ಟೋಕ್ಸ್ ಜೋಡಿ 4ನೇ ವಿಕೆಟ್ ಗೆ 33 ರನ್ ಜೊತೆಯಾಟ ನೀಡಿದ್ದ ವೇಳೆ ಕುಕ್ ವಿಕೆಟ್ ಪಡೆದ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 4ನೇ ಟೆಸ್ಟ್‍ಗೆ ಆಯ್ಕೆಯಾಗಿದ್ದ ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಆಲಿ ತಂಡಕ್ಕೆ ಕೆಲ ಕಾಲ ಆಸರೆಯಾದರು. ಆದರೆ 40 ರನ್ ಗಳಿಸಿದ್ದ ಆಲಿ, ಅಶ್ವಿನ್ ಬೌಲಿಂಗ್ ನಲ್ಲಿ ಬುಮ್ರಾಗೆ ಕ್ಯಾಚ್ ನೀಡಿ ಔಟಾದರು.

    ಇಂಗ್ಲೆಂಡ್ 65 ಓವರ್ ಗಳಲ್ಲಿ 178/8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸುವ ಒತ್ತಡಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 100 ಬಾಲ್ ಕ್ರಿಕೆಟ್ ಮಾದರಿ-ಅಸಮಾಧಾನ ಹೊರಹಾಕಿದ ವಿರಾಟ್

    100 ಬಾಲ್ ಕ್ರಿಕೆಟ್ ಮಾದರಿ-ಅಸಮಾಧಾನ ಹೊರಹಾಕಿದ ವಿರಾಟ್

    ಲಂಡನ್: ಸಭ್ಯರ ಆಟ ಎಂದು ಹೆಸರು ಪಡೆದಿರುವ ಕ್ರಿಕೆಟ್ ಅಧುನಿಕತೆ ಪಡೆದಂತೆ ಬದಲಾವಣೆ ಹೊಂದುತ್ತಿದ್ದು, ಈಗಾಗಲೇ ಸಾಂಪ್ರದಾಯಿಕ ಕ್ರಿಕೆಟ್‍ನೊಂದಿಗೆ ಟಿ20 ಮಾದರಿಯನ್ನು ಸ್ವೀಕರಿಸಿದೆ. ಆದರೆ ಸದ್ಯ ಕ್ರಿಕೆಟ್‍ನಲ್ಲಿ 100 ಬಾಲ್ ಮಾದರಿಯ ಪಂದ್ಯಗಳನ್ನು ತರಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಿದ್ಧತೆ ನಡೆಸಿದ್ದು, ಈ ಕುರಿತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ.

    ಹೊಸ ಕ್ರಿಕೆಟ್ ಮಾದರಿಯ ಕುರಿತು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದು, ಕೇವಲ ವಾಣಿಜ್ಯದ ದೃಷ್ಟಿಯಿಂದ ಈ ರೀತಿಯ ಮಾದರಿಯನ್ನು ಪರಿಚಯಿಸುವುದು ಸರಿಯಲ್ಲ. ತಾನು ಈ ಮಾದರಿಯ ಕ್ರಿಕೆಟ್‍ನಲ್ಲಿ ಭಾಗವಹಿಸುವುದಿಲ್ಲ. ಈ ಕುರಿತು ಯೋಚನೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಟಿ20 ಮಾದರಿಯಲ್ಲಿ ನಡೆಯುವ ಟೂರ್ನಿಯ ಕುರಿತು ಸ್ಪಷ್ಟನೆ ನೀಡಿರುವ ಕೊಹ್ಲಿ, ತಾನು ಐಪಿಎಲ್ ನಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ. ಅಲ್ಲದೇ ಬ್ರಿಟಿಷ್ ಬಿಗ್ ಬ್ಯಾಷ್ ಲೀಗ್ (ಬಿಬಿಸಿ) ನೋಡುತ್ತೆನೆ. ಏಕೆಂದರೆ ಈ ಮಾದರಿಯಲ್ಲಿ ನಾವು ಸ್ಪರ್ಧಾತ್ಮಕ ಆಟವನ್ನು ಕಾಣಲು ಸಾಧ್ಯವಿದೆ. ಒಬ್ಬ ಕ್ರಿಕೆಟಿಗನಾಗಿ ಇದನ್ನು ನೋಡಲು ಸಂತಸವಾಗುತ್ತದೆ. ಆದರೆ ಕ್ರಿಕೆಟ್ ನಲ್ಲಿ ಮತ್ತಷ್ಟು ಪ್ರಯೋಗಗಳನ್ನು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.

    ಹಲವು ಹಿರಿಯ ಆಟಗಾರರು ಕ್ರಿಕೆಟ್ ಆಟವನ್ನು ಉತ್ತಮ ಪಡಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ಇದು ಆಟವನ್ನು ಮತ್ತಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅದ್ದರಿಂದ ಸಾಂಪ್ರದಾಯಿಕ ಕ್ರಿಕೆಟ್‍ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳು ಹೆಚ್ಚು ನಡೆಯಬೇಕಿದೆ ಎಂದು ತಿಳಿಸಿದ್ದಾರೆ.

    ಅಂದಹಾಗೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 100 ಎಸೆತ ಕ್ರಿಕೆಟ್ ಮಾದರಿ ನಡೆಸಲು ಸಿದ್ಧತೆ ನಡೆಸಿದ್ದು, 2020ರ ವೇಳೆಗೆ ಇಂತಹ ಟೂರ್ನಿಯಗಳನ್ನು ನಡೆಸುವ ಚಿಂತನೆ ನಡೆಸಿದೆ. ಕೊಹ್ಲಿ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅದರಿಂದ ಇಂಗ್ಲೆಂಡ್ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಸರಣಿ ಕೈವಶ ಮಾಡಿಕೊಳ್ಳಲು ಟೀಂ ಇಂಡಿಯಾ ಆಟಗಾರರು ಶ್ರಮವಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದ್ರಾವಿಡ್ ದಾಖಲೆ ಬ್ರೇಕ್ ಮಾಡ್ತಾರಾ ಕೊಹ್ಲಿ!

    ದ್ರಾವಿಡ್ ದಾಖಲೆ ಬ್ರೇಕ್ ಮಾಡ್ತಾರಾ ಕೊಹ್ಲಿ!

    ಲಂಡನ್: ಇಂಗ್ಲೆಂಡ್ ವಿರುದ್ಧದ ಇನ್ನುಳಿದ 2 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿಯುವ ಅವಕಾಶವಿದೆ.

    ರಾಹುಲ್ ದ್ರಾವಿಡ್ ಇಂಗ್ಲೆಂಡ್ ನೆಲದಲ್ಲಿ ನಡೆದ ಟೂರ್ನಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 2002 ರಲ್ಲಿ ನಡೆದ ಟೂರ್ನಿಯ 4 ಪಂದ್ಯಗಳಲ್ಲಿ ರಾಹುಲ್ ದ್ರಾವಿಡ್ 602 ರನ್ ಸಿಡಿಸಿ ದಾಖಲೆ ಬರೆದಿದ್ದರು. ಸದ್ಯ ವಿರಾಟ್ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ 440 ರನ್ ಗಳಿಸಿದ್ದು, ಇನ್ನುಳಿದ 2 ಪಂದ್ಯಗಳಲ್ಲಿ ದ್ರಾವಿಡ್ ಸಾಧನೆಯನ್ನು ಸರಿಗಟ್ಟುವ ಅವಕಾಶ ಸಿಕ್ಕಿದೆ.

    ಕೊಹ್ಲಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್, ಇಂಗ್ಲೆಂಡ್ ತಂಡದ ಜೋ ರೂಟ್ ಹಾಗೂ ನ್ಯೂಜಿಲೆಂಡ್‍ನ ಕೇನ್ ವಿಲಿಯಮ್ಸ್ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್ 5 ಸ್ಥಾನ ಪಡೆದಿರುವ ಆಟಗಾರರಾಗಿದ್ದು, ಇವರಲ್ಲಿ ಕೊಹ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಟೆಸ್ಟ್ ವೃತ್ತಿ ಜೀವನದಲ್ಲಿ ಕೊಹ್ಲಿ ಒಟ್ಟಾರೆ 5,994 ರನ್ ಗಳಿಸಿದ್ದು, 6 ಸಾವಿರ ರನ್ ಪೂರೈಸಲು ಕೇವಲ 6 ರನ್ ಅಗತ್ಯವಿದೆ. ಮುಂದಿನ ಟೆಸ್ಟ್ ನಲ್ಲಿ 6 ಸಾವಿರ ರನ್ ಗಳಿಸಿದರೆ ಟೀಂ ಇಂಡಿಯಾ ಪರ 6 ಸಾವಿರ ರನ್ ಪೂರೈಸಿದ 10ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ. ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನೀಲ್ ಗವಾಸ್ಕರ್ (10,122), ವಿವಿಎಸ್ ಲಕ್ಷ್ಮಣ್ (8,781), ವಿರೇಂದ್ರ ಸೆಹ್ವಾಗ್ (8,503), ಸೌರವ್ ಗಂಗೂಲಿ (7,212), ದಿಲೀಪ್ ವೆಂಗ್‍ಸರ್ಕರ್ (6,868), ಮೊಹಮ್ಮದ್ ಅಜರುದ್ದೀನ್ (6,215) ಮತ್ತು ಗುಂಡಪ್ಪ ವಿಶ್ವನಾಥ್ (6,080) ರನ್ ಗಳಿಸಿದ ಆಟಗಾರರ ಕ್ಲಬ್‍ನಲ್ಲಿ ಸ್ಥಾನ ಪಡೆದಿದ್ದಾರೆ.

    ಆಸೀಸ್ ಆಟಗಾರ ಸ್ಮಿತ್ 6,199 ರನ್ ಗಳಿಸಿದ್ದು, ಸ್ಮಿತ್ ರನ್ ಹಿಂದಿಕ್ಕಲು ಕೊಹ್ಲಿಗೆ ಕೇವಲ 205 ರನ್‍ಗಳ ಅಗತ್ಯವಿದೆ. ಅಲ್ಲದೆ ರೂಟ್ 6,102 ರನ್ ಗಳಿಸಿದ್ದು, ಕೊಹ್ಲಿ 108 ರನ್ ಗಳಿಂದ ಹಿಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮುಂದಿನ 2 ಪಂದ್ಯದಲ್ಲಿ ಕೊಹ್ಲಿ ತಮ್ಮ ಫಾರ್ಮ್ ಮುಂದುವರಿಸಿದರೆ ಈ ಇಬ್ಬರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಅಲ್ಲದೇ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 23 ಶತಕ ಗಳಿಸಿದ್ದು, ಸ್ಮಿತ್ ಕೂಡ ಅಷ್ಟೇ ಶತಕ ಗಳಿಸಿದ್ದಾರೆ. ಅದ್ದರಿಂದ ಶತಕ ಗಳಿಕೆಯಲ್ಲೂ ಕೊಹ್ಲಿ, ಸ್ಮಿತ್‍ರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯ್ತು!

    ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯ್ತು!

    ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಟೂರ್ನಿಯ ಅಂತಿಮ 2 ಪಂದ್ಯಗಳಿಗೆ 18 ವರ್ಷದ ಯುವ ಆಟಗಾರ ಪೃಥ್ವಿ ಶಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು 10 ವರ್ಷದ ಹಿಂದೆ ಸಚಿನ್ ತೆಂಡೂಲ್ಕರ್ ಹೇಳಿದ ಮಾತು ಇಂದು ನಿಜವಾಗಿದೆ.

    ಶಾ ಭವಿಷ್ಯದ ಕುರಿತು ತನ್ನ ಸ್ನೇಹಿತನಿಗೆ ಹೇಳಿದ್ದ ಮಾತನ್ನು ಸಚಿನ್ ತಮ್ಮ 100MB ಆ್ಯಪ್ ಬಿಡುಗಡೆಯ ವೇಳೆ ರಿವೀಲ್ ಮಾಡಿದ್ದಾರೆ. ಶಾ 8 ವರ್ಷ ಬಾಲಕನಾಗಿದ್ದ ವೇಳೆ ಆತನ ಬ್ಯಾಟಿಂಗ್ ಶೈಲಿ ಕಂಡು ಕೆಲವು ಸಲಹೆ ನೀಡಿದ್ದೆ. ಅಲ್ಲದೇ ಯಾವುದೇ ಕಾರಣಕ್ಕೂ ಈ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳದಂತೆ ಹೇಳಿದ್ದಾಗಿ ತಿಳಿಸಿದ್ದಾರೆ.

    ಹತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಶಾ ಬ್ಯಾಟಿಂಗ್ ಶೈಲಿಯನ್ನು ಗಮನಿಸುವಂತೆ ಹೇಳಿದ್ದ. ಅಲ್ಲದೇ ಆತನ ಬ್ಯಾಟಿಂಗ್ ಶೈಲಿ ಕುರಿತು ವಿಶ್ಲೇಷಣೆ ಮಾಡಿ ಸಲಹೆ ನೀಡಲು ತಿಳಿಸಿದ್ದ. ಈ ವೇಳೆ ಕೆಲವು ಸಲಹೆ ನೀಡಿದ್ದೆ. ಅಲ್ಲದೇ ನನ್ನ ಸ್ನೇಹಿತನಿಗೆ ಮುಂದೊಂದು ದಿನ ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು ಹೇಳಿದ್ದೆ ಅಂದ್ರು.  ಇದನ್ನು ಓದಿ: ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ 

    ಸದ್ಯ ಸಚಿನ್ ಭವಿಷ್ಯದ ಮಾತು ನಿಜವಾಗಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಪಾದಾರ್ಪಣೆ ಮಾಡಲು ಕಾತುರರಾಗಿದ್ದಾರೆ. ಅಂದಹಾಗೇ ಶಾ ಈಗಾಗಲೇ ತಮ್ಮ ಬ್ಯಾಟಿಂಗ್ ಮೂಲಕ ಹಲವು ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. 14 ವಯಸ್ಸಿನಲ್ಲೇ ಪೃಥ್ವಿ ಶಾ ಪಂದ್ಯವೊಂದರಲ್ಲಿ 330 ಎಸೆಗಳಲ್ಲಿ 546 ರನ್ ಗಳಿಸಿ ಮಿಂಚಿದ್ದರು. ಬಳಿಕ ಅಂಡರ್ 19 ತಂಡದ ನಾಯಕತ್ವ ವಹಿಸಿ ವಿಶ್ವಕಪ್ ಗೆದ್ದು ತಂದಿದ್ದರು.

    ಸದ್ಯ ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 14 ಪಂದ್ಯಗಳಿಂದ 56.72 ರ ಸರಾಸರಿಯಲ್ಲಿ 1,418 ರನ್ ಗಳಿಸಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಎ ತಂಡದ ಪರ ಇಂಗ್ಲೆಂಡ್ ನೆಲದಲ್ಲೇ 3 ಶತಕ ಗಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೌರವ್ ಗಂಗೂಲಿ ನಾಯಕತ್ವದ ದಾಖಲೆ ಮುರಿದ ವಿರಾಟ್

    ಸೌರವ್ ಗಂಗೂಲಿ ನಾಯಕತ್ವದ ದಾಖಲೆ ಮುರಿದ ವಿರಾಟ್

    ನವದೆಹಲಿ: ಟೀಂ ಇಂಡಿಯಾ ನಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯಗಳಿಸಿದ್ದು, ಇದರೊಂದಿಗೆ ಕೊಹ್ಲಿ ನಾಯಕತ್ವದಲ್ಲಿ ತಂಡ 22 ಪಂದ್ಯಗಳಲ್ಲಿ ಜಯಗಳಿಸಿದಂತಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿಸಿದ್ದಾರೆ.

    ಕೊಹ್ಲಿ ನಾಯಕತ್ವದಲ್ಲಿ ಇದುವರೆಗೂ 38 ಪಂದ್ಯಗಳನ್ನು ಆಡಿದ್ದು, 22 ಪಂದ್ಯಗಳಲ್ಲಿ ಭಾರತ ಜಯಗಳಿಸಿದೆ. ಗಂಗೂಲಿ ನಾಯಕತ್ವದಲ್ಲಿ ಆಡಿರುವ 49 ಟೆಸ್ಟ್ ಪಂದ್ಯಗಳಲ್ಲಿ 21 ರಲ್ಲಿ ತಂಡ ಜಯಗಳಿತ್ತು. ಇನ್ನು ಎಂಎಸ್ ಧೋನಿ ನಾಯಕತ್ವದಲ್ಲಿ 60 ಟೆಸ್ಟ್ ಪಂದ್ಯಗಳು ನಡೆದಿದ್ದು, 27 ರಲ್ಲಿ ಟೀಂ ಇಂಡಿಯಾ ಜಯಗಳಿಸಿದೆ. ಸೌರವ್ ಗಂಗೂಲಿ ನಾಯಕತ್ವದ ಗೆಲುವಿನ ಸರಾಸರಿ 42.85 ಇದ್ದರೆ, ಧೋನಿ 45 ಹಾಗೂ ಕೊಹ್ಲಿ 57.89 ಸರಾಸರಿ ಹೊಂದಿದ್ದಾರೆ.

    2014 ರಲ್ಲಿ ತಂಡದ ನಾಯಕತ್ವ ವಹಿಸಿದ ಕೊಹ್ಲಿ ಆಸೀಸ್, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್, ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಸದ್ಯ ಟೀ ಇಂಡಿಯಾ ಎರಡರಲ್ಲಿ ಸೋಲುಂಡು 3ನೇ ಪಂದ್ಯದಲ್ಲಿ ಜಯದ ಹಾದಿಗೆ ಮರಳಿದೆ. ಸರಣಿ ಗೆಲುವಿಗೆ ಕೊಹ್ಲಿ ಬಳಗ ಇನ್ನುಳಿದ 2 ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv