Tag: Test Championship

  • 1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    1 ಜಯ, 12 ಅಂಕ ಪಡೆದು ಮೂರನೇ ಸ್ಥಾನಕ್ಕೆ ಭಾರತ ಹೈಜಂಪ್‌!

    ಲಂಡನ್‌: ಇಂಗ್ಲೆಂಡ್‌ (England) ವಿರುದ್ಧ ಐದನೇ ಟೆಸ್ಟ್ ಪಂದ್ಯವನ್ನು ಜಯಗಳಿಸುವ ಮೂಲಕ ಭಾರತ (Team India) ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ (ICC World Test Championship) ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ.

    5ನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ 16 ಅಂಕ ಪಡೆದಿದ್ದರೆ ಇಂಗ್ಲೆಂಡ್‌ 26 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿತ್ತು. ಆದರೆ 5ನೇ ಟೆಸ್ಟ್‌ ಪಂದ್ಯವನ್ನು 6 ರನ್‌ಗಳಿಂದ ಜಯಗಳಿಸುವ ಮೂಲಕ ಭಾರತ 28 ಅಂಕ ಪಡೆದು ಮೂರನೇ ಸ್ಥಾನಕ್ಕೆ ಏರಿದರೆ 26 ರನ್‌ನಲ್ಲೇ ಮುಂದುವರಿಯುತ್ತಿರುವ ಇಂಗ್ಲೆಂಡ್‌ ನಾಲ್ಕನೇ ಸ್ಥಾನಕ್ಕೆ ಜಾರಿದೆ.

    5ನೇ ಟೆಸ್ಟ್‌ ಪಂದ್ಯಕ್ಕೂ ಮೊದಲಿದ್ದ ಅಂಕಪಟ್ಟಿ

    ಭಾರತ ಮತ್ತು ಇಂಗ್ಲೆಂಡ್‌ ತಲಾ 5 ಪಂದ್ಯವಾಡಿದ್ದು ಇತ್ತಂಡಗಳು 2 ಜಯ 2 ಸೋಲು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಲಾರ್ಡ್ಸ್‌ ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವನ್ನು ಇಂಗ್ಲೆಂಡ್‌ 22 ರನ್‌ಗಳಿಂದ ಗೆದ್ದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿ  ನಿಧಾನಗತಿಯ ಬೌಲಿಂಗ್‌ ಮಾಡಿದ್ದಕ್ಕೆ   2 ಅಂಕ ಕಡಿತವಾಗಿದ್ದರಿಂದ ಇಂಗ್ಲೆಂಡ್‌ 26 ಅಂಕ ಪಡೆದಿದೆ.

    ಆಡಿರುವ ಮೂರು ಪಂದ್ಯಗಳನ್ನು ಗೆದ್ದು 36 ಅಂಕ ಪಡೆದಿರುವ ಆಸ್ಟ್ರೇಲಿಯಾ  ಮೊದಲ ಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯಗಳ ಪೈಕಿ 1 ಜಯ, 1 ಡ್ರಾ ಮಾಡಿಕೊಂಡಿರುವ ಶ್ರೀಲಂಕಾ 16 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಸಿರಾಜ್‌, ಕೃಷ್ಣ ಮ್ಯಾಜಿಕ್‌ – ಭಾರತಕ್ಕೆ ರೋಚಕ 6 ರನ್‌ಗಳ ಜಯ

    5ನೇ ಟೆಸ್ಟ್‌ ಮುಕ್ತಾಯದ ಬಳಿಕ ಪ್ರಕಟವಾದ ಅಂಕಪಟ್ಟಿ

    ಅಂಕ ಹೇಗೆ ನೀಡಲಾಗುತ್ತೆ?
    ಗೆಲುವಿಗೆ 12 ಅಂಕ, ಟೈ ಆದರೆ 6 ಅಂಕ, ಡ್ರಾಗೆ 4 ಅಂಕ ನೀಡಲಾಗುತ್ತದೆ. ತಂಡಗಳನ್ನು ಗೆದ್ದ ಅಂಕಗಳ ಶೇಕಡಾವಾರು ಲೆಕ್ಕಾಚಾರ ಹಾಕಿ ಅಂಕಪಟ್ಟಿ ನೀಡಲಾಗುತ್ತದೆ. ನಿಧಾನಗತಿಯ ಓವರ್ ಮಾಡಿದರೆ ಅಂಕ ಕಡಿತವಾಗುತ್ತದೆ. 2027 ರಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದೆ.

  • ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

    ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

    ದುಬೈ: ಇಂಗ್ಲೆಂಡ್‌ (England) ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವನ್ನು ಗೆದ್ದ ಬೆನ್ನಲ್ಲೇ ಭಾರತ (India) ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ (ICC World Test Championship) 4ನೇ ಸ್ಥಾನಕ್ಕೆ ಜಿಗಿದಿದೆ.

    2025-27ರ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಪಂದ್ಯವನ್ನು ಸೋತ ಕಾರಣ ಭಾರತ 5ನೇ ಸ್ಥಾನ ಪಡೆದುಕೊಂಡಿತ್ತು. ಈಗ ಭರ್ಜರಿ 336 ರನ್‌ಗಳ ಜಯ ಸಾಧಿಸಿದ್ದರಿಂದ 4ನೇ ಸ್ಥಾನಕ್ಕೆ ಏರಿದೆ. ಭಾರತದಷ್ಟೇ 12 ಅಕ, 50 ಪಿಸಿಟಿ ಪಡೆದಿರುವ ಇಂಗ್ಲೆಂಡ್‌ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕೊಹ್ಲಿ, ರೋಹಿತ್‌, ಇಮ್ರಾನ್‌ ನಿರ್ಮಾಣ ಮಾಡದ ವಿಶಿಷ್ಟ ದಾಖಲೆ ನಿರ್ಮಿಸಿದ ಗಿಲ್‌

    ಆಡಿರುವ ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ ಎರಡು ಪಂದ್ಯವಾಡಿ ಒಂದು ಜಯ, ಒಂದು ಡ್ರಾ ಸಾಧಿಸಿರುವ ಶ್ರೀಲಂಕಾ 16 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿಡಿಕ್ಲೇರ್‌ ವೇಳೆ ಎಡವಟ್ಟು  ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್‌?

    ಎರಡು ಪಂದ್ಯವಾಡಿ ಒಂದು ಪಂದ್ಯ ಗೆದ್ದಿರುವ ಬಾಂಗ್ಲಾ 5ನೇ ಸ್ಥಾನದಲ್ಲಿದ್ದರೆ ಆಡಿದ ಒಂದು ಪಂದ್ಯ ಸೋತಿರುವ ವಿಂಡೀಸ್‌ 6ನೇ ಸ್ಥಾನ ಪಡೆದಿದೆ. ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ 2025-27ರ ಟೂರ್ನಿಯಲ್ಲಿ ಇಲ್ಲಿಯವರೆಗೆ ಯಾವುದೇ ಪಂದ್ಯ ಆಡಿಲ್ಲ.

    ಯಾವ ರೀತಿ ಅಂಕ ನೀಡಲಾಗುತ್ತೆ?
    – ಗೆಲುವಿಗೆ 12 ಅಂಕ
    – ಟೈ ಆದರೆ 6 ಅಂಕ
    – ಡ್ರಾಗೆ 4 ಅಂಕ
    – ತಂಡಗಳನ್ನು ಗೆದ್ದ ಅಂಕಗಳ ಶೇಕಡಾವಾರು ಪ್ರಕಾರ ಶ್ರೇಣೀಕರಿಸಲಾಗುತ್ತದೆ.
    – ನಿಧಾನಗತಿಯ ಓವರ್ ಎಸೆದರೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

  • ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಲಂಡನ್‌: ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ (ICC World Test Championship) ಆಸ್ಟ್ರೇಲಿಯಾ (Australia) ವಿರುದ್ಧ ಭಾರತ (Team India) ಆರಂಭಿಕ ಹಿನ್ನಡೆ ಅನುಭವಿಸಿದೆ. ಎರಡನೇ ದಿನ ಆಸ್ಟ್ರೇಲಿಯಾ 469 ರನ್‌ಗಳಿಗೆ ಆಲೌಟ್‌ ಆಗಿದ್ದರೆ ಭಾರತ 38 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿ 318 ರನ್‌ಗಳ ಹಿನ್ನಡೆಯಲ್ಲಿದೆ.

    ತನ್ನ ಸರದಿ ಆರಂಭಿಸಿದ ಭಾರತ 30 ರನ್‌ಗಳಿಸುವಷ್ಟರಲ್ಲೇ ಆರಂಭಿಕ ಇಬ್ಬರೂ ಆಟಗಾರರನ್ನು ಕಳೆದುಕೊಂಡಿತು. ನಾಯಕ ರೋಹಿತ್‌ ಶರ್ಮಾ 15, ಶುಭಮನ್‌ ಗಿಲ್‌ 13 ರನ್‌ ಗಳಿಸಿ ಔಟಾದರು. ನಂತರ ಬಂದ ಚೇತೇಶ್ವರ ಪೂಜಾರ 14 ರನ್‌, ವಿರಾಟ್‌ ಕೊಹ್ಲಿ 14 ರನ್‌ ಗಳಿಸಿ ಔಟಾದರೆ ರವೀಂದ್ರ ಜಡೇಜಾ 48 ರನ್‌ (51 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಹೊಡೆದರು.

    ಎರಡನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿದೆ. ಅಜಿಂಕ್ಯಾ ರಹಾನೆ ಔಟಾಗದೇ 29 ರನ್‌, ಶ್ರೀಕಾರ್‌ ಭರತ್‌ ಔಟಾಗದೇ 5 ರನ್‌ ಗಳಿಸಿದ್ದಾರೆ. ಮಿಚೆಲ್‌ ಸ್ಟ್ರಾಕ್‌, ಪ್ಯಾಟ್‌ ಕಮ್ಮಿನ್ಸ್‌, ಸ್ಕಾಟ್‌ ಬೊಲಾಂಡ್‌, ಕ್ಯಾಮರೂನ್‌ ಗ್ರೀನ್‌, ನಥನ್‌ ಲಿಯಾನ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.  ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್ ಭೂಮಿಯಲ್ಲಿ ಬಡವರಿಗೆ ಮನೆ ನಿರ್ಮಾಣ – ಶೀಘ್ರವೇ ಹಂಚಲಿದ್ದಾರೆ ಯೋಗಿ

    ಮೊದಲ ದಿನ ದಿನ 3 ವಿಕೆಟ್‌ ನಷ್ಟಕ್ಕೆ 327 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಇಂದು 142 ರನ್‌ ಸೇರಿಸಿ ಅಂತಿಮವಾಗಿ  469 ರನ್‌ಗಳಿಗೆ ಆಲೌಟ್‌ ಆಯ್ತು.

    91 ರನ್‌ಗಳಿಸಿದ್ದ ಸ್ಮಿತ್‌ ಇಂದು 121 ರನ್‌ (268 ಎಸೆತ, 19 ಬೌಂಡರಿ) ಗಳಿಸಿ ಔಟಾದರೆ 146 ರನ್‌ ಗಳಿಸಿದ್ದ ಟ್ರಾವಿಸ್‌ ಹೆಡ್‌ 163 ರನ್‌ (174 ಎಸೆತ, 25 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಅಲೆಕ್ಸ್‌ ಕ್ಯಾರಿ 48 ರನ್‌ (69 ಎಸೆತ, 7 ಬೌಂಡರಿ, 1 ಸಿಕ್ಸರ್‌) ಹೊಡೆದರು.

     

    ಸಿರಾಜ್‌ 4 ವಿಕೆಟ್‌ ಪಡೆದರೆ, ಮೊಹಮ್ಮದ್‌ ಶಮಿ, ಶಾರ್ದೂಲ್‌ ಠಾಕೂರ್‌ ತಲಾ 2 ವಿಕೆಟ್‌ ಕಿತ್ತರು. ರವೀಂದ್ರ ಜಡೇಜಾ 1 ವಿಕೆಟ್‌ ಪಡೆದರು.

  • ಭರತ್‌ ಸ್ಟನ್ನಿಂಗ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ – ಭಾರೀ ಮೊತ್ತದತ್ತ ಆಸ್ಟ್ರೇಲಿಯಾ

    ಭರತ್‌ ಸ್ಟನ್ನಿಂಗ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ – ಭಾರೀ ಮೊತ್ತದತ್ತ ಆಸ್ಟ್ರೇಲಿಯಾ

    ಲಂಡನ್‌: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ (ICC World Test Championship Final) ಪಂದ್ಯದಲ್ಲಿ ಕೀಪರ್‌ ಕೆಎಸ್‌ ಭರತ್‌ (KS Bharat) ಹಿಡಿದ ಕ್ಯಾಚ್‌ ಟೀಂ ಇಂಡಿಯಾದ (Team India) ಅಭಿಮಾನಿಗಳ ಮನಗೆದ್ದಿದೆ.

    ಆಸ್ಟ್ರೇಲಿಯಾ ಇನ್ನಿಂಗ್ಸ್‌ನ ಶಾರ್ದೂಲ್‌ ಠಾಕೂರ್‌ ಎಸೆದ 22ನೇ ಓವರಿನ 4 ಎಸೆತವನ್ನು ಡೇವಿಡ್‌ ವಾರ್ನರ್‌ ಬಲವಾಗಿ ಎಡಗಡೆಗೆ ಹೊಡೆಯಲು ಯತ್ನಿಸಿದರು. ಆದರೆ ಬಾಲ್‌ ಬ್ಯಾಟ್‌ಗೆ ಸವರಿ ಹಿಂದಕ್ಕೆ ಹೋಯಿತು. ಈ ವೇಳೆ ಭರತ್‌ ಜಿಗಿದು ಕ್ಯಾಚ್‌ ಹಿಡಿದರು. ಪರಿಣಾಮ 43 ರನ್‌(60 ಎಸೆತ, 8 ಬೌಂಡರಿ) ಗಳಿಸಿದ್ದ ಡೇವಿಡ್‌ ವಾರ್ನರ್‌ ಔಟಾಗಿ ನಿರಾಸೆಯಿಂದ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ಮೊದಲ ವಿಕೆಟ್‌ ಕಳೆದುಕೊಂಡರೂ ದಿನದ ಅಂತ್ಯಕ್ಕೆ ಉತ್ತಮ ಮೊತ್ತ ಗಳಿಸಿದೆ. 85 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 327 ರನ್‌ ಗಳಿಸಿದೆ.

    ಉಸ್ಮಾನ್‌ ಖವಾಜಾ ಸೊನ್ನೆ ಸುತ್ತಿದರೂ ಎರಡನೇ ವಿಕೆಟಿಗೆ ಡೇವಿಡ್‌ ವಾರ್ನರ್‌ ಮತ್ತು ಮಾರ್ನಸ್ ಲಾಬು ಶೇನ್ 108 ಎಸೆತಗಳಲ್ಲಿ 69 ರನ್‌ ಜೊತೆಯಾಟವಾಡಿದರು. ತಂಡದ ಮೊತ್ತ 71 ಆದಾಗ ಡೇವಿಡ್‌ ವಾರ್ನರ್‌ ಔಟಾದ ಬೆನ್ನಲ್ಲೇ 26 ರನ್‌ಗಳಿಸಿದ್ದ ಲಾಬು ಶೇನ್ ಔಟಾದರು.  ಇದನ್ನೂ ಓದಿ: ಟೆಸ್ಟ್‌ ಚಾಂಪಿಯನ್‌ಶಿಪ್‌ – ಡ್ರಾದಲ್ಲಿ ಅಂತ್ಯಗೊಂಡರೆ, ಮಳೆ ಬಂದರೆ ಏನಾಗುತ್ತೆ?

    3 ವಿಕೆಟ್‌ ನಷ್ಟಕ್ಕೆ 76 ರನ್‌ಗಳಿಸಿದ್ದಾಗ ಸ್ವೀವ್‌ ಸ್ಮಿತ್‌ ಮತ್ತು ಟ್ರಾವಿಸ್‌ ಹೇಡ್‌ ತಂಡಕ್ಕೆ ಆಸರೆಯಾದರು. ಟ್ರಾವಿಸ್‌ ಹೆಡ್‌ ಶತಕ ಹೊಡೆದರೆ ಸ್ಮಿತ್‌ ಶತಕ ಹೊಡೆಯುವತ್ತಾ ಮುನ್ನುಗ್ಗುತ್ತಿದ್ದಾರೆ.

    ಅಂತಿಮವಾಗಿ ಅಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 85 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 327 ರನ್‌ ಹೊಡೆದಿದೆ. ಏಕದಿನ ಪಂದ್ಯದಂತೆ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ ಔಟಾಗದೇ 146 ರನ್‌ 156 ಎಸೆತ, 22 ಬೌಂಡರಿ, 1 ಸಿಕ್ಸರ್‌) ಸ್ವೀವ್‌ ಸ್ಮಿತ್‌ ಔಟಾಗದೇ 95 ರನ್‌(227 ಎಸೆತ, 14 ಬೌಂಡರಿ) ಹೊಡೆದಿದ್ದಾರೆ. ಇವರಿಬ್ಬರೂ ಮುರಿಯದ 4ನೇ ವಿಕೆಟಿಗೆ 370 ಎಸೆತಗಳಲ್ಲಿ 251 ರನ್‌ ಜೊತೆಯಾಟವಾಡಿದ್ದಾರೆ. ಭಾರತದ ಪರ ಶಮಿ, ಸಿರಾಜ್‌, ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.

  • WTC ಫೈನಲ್‌ – ನ್ಯೂಜಿಲೆಂಡ್‌ ಕೈಯಲ್ಲಿ ಭಾರತದ ಭವಿಷ್ಯ

    WTC ಫೈನಲ್‌ – ನ್ಯೂಜಿಲೆಂಡ್‌ ಕೈಯಲ್ಲಿ ಭಾರತದ ಭವಿಷ್ಯ

    ಅಹಮದಾಬಾದ್‌: ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಭಾರತ (India) ಪಾಲ್ಗೊಳ್ಳುತ್ತಾ ಇಲ್ಲವೋ ಎನ್ನುವುದು ಈಗ ಶ್ರೀಲಂಕಾ, ನ್ಯೂಜಿಲೆಂಡ್‌ (Sri Lanka New Zealand) ನಡುವೆ ನಡೆಯುತ್ತಿರುವ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುವ ಸಾಧ್ಯತೆಯಿದೆ.

    ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾದ (Australia) ವಿರುದ್ಧ 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಜಯಗಳಿಸಿದ್ದರೆ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಈ ಪಂದ್ಯ ಡ್ರಾ ಆಗುವ ಸಾಧ್ಯತೆಯೇ ಹೆಚ್ಚಿರುವ ಕಾರಣ ಭಾರತದ ಭವಿಷ್ಯ ಈಗ ನ್ಯೂಜಿಲೆಂಡ್‌ ಕೈಯಲ್ಲಿದೆ. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!

    ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡು ಪಂದ್ಯಗಳನ್ನು ಜಯಿಸಿದರೆ ಶ್ರೀಲಂಕಾ ಫೈನಲ್‌ ಪ್ರವೇಶಿಸಲಿದೆ. ಒಂದು ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಭಾರತ ಫೈನಲ್‌ ಪ್ರವೇಶಿಸಲಿದೆ.

    ಪ್ರಸ್ತುತ 68.52 ಪಿಸಿಟಿ (Percentage Of Points Earned) ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ 60.29 ಪಿಸಿಟಿ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ 53.33 ಪಿಸಿಟಿ ಹೊಂದಿದ್ದು ಮೂರನೇ ಸ್ಥಾನದಲ್ಲಿದೆ.

    ನ್ಯೂಜಿಲೆಂಡ್‌ ವಿರುದ್ಧ ಶ್ರೀಲಂಕಾ ಮೊದಲ ಟೆಸ್ಟ್‌ ಗೆದ್ದರೆ ಪಿಸಿಟಿ 57.58ಕ್ಕೆ ಏರಿಕೆಯಾಗಲಿದೆ. ಎರಡನೇ ಟೆಸ್ಟ್‌ ಪಂದ್ಯ ಗೆದ್ದರೆ ಪಿಸಿಟಿ 61.1ಕ್ಕೆ ಏರಿಕೆಯಾಗಲಿರುವ ಕಾರಣ ಶ್ರೀಲಂಕಾ ಫೈನಲ್‌ಗೆ ಪ್ರವೇಶ ಪಡೆಯಲಿದೆ.

    ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ಗೆಲುವಿಗೆ 285 ರನ್‌ ಬೇಕಿದೆ. ನಾಲ್ಕನೇಯ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್‌ 1 ವಿಕೆಟ್‌ ಕಳೆದುಕೊಂಡು 28 ರನ್‌ ಗಳಿಸಿದ್ದು ಗೆಲುವಿಗೆ 257 ರನ್‌ ಅಗತ್ಯವಿದೆ.

  • ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಖಾತೆ ತೆರೆದ ವೆಸ್ಟ್ ಇಂಡೀಸ್- ಭಾರತ ನಂ.1

    ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಖಾತೆ ತೆರೆದ ವೆಸ್ಟ್ ಇಂಡೀಸ್- ಭಾರತ ನಂ.1

    ಸೌತಾಪ್ಟಂನ್: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಪಟ್ಟಿಯಲ್ಲಿ ಕೊನೆಗೂ ವೆಸ್ಟ್ ಇಂಡೀಸ್ ಖಾತೆ ತೆರೆದಿದೆ. ಸೌತಾಪ್ಟಂನ್‍ನಲ್ಲಿ ಭಾನುವಾರ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ 4 ವಿಕೆಟ್‍ಗಳ ಗೆಲುವು ಪಡೆದಿದ್ದು, ಆ ಮೂಲಕ 40 ಅಂಕಗಳನ್ನು ಪಡೆದುಕೊಂಡಿದೆ.

    ಆಗಸ್ಟ್ 1, 2019ರಿಂದ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿದ್ದು, ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿ 9 ದೇಶಗಳು ಕಣದಲ್ಲಿವೆ. ಪ್ರತಿ ತಂಡ ತವರಿನಲ್ಲಿ ಮತ್ತು ವಿದೇಶಿ ನೆಲದಲ್ಲಿ 3 ಟೆಸ್ಟ್ ಟೂರ್ನಿಗಳನ್ನು ಆಡಲಿವೆ.

    27 ಟೆಸ್ಟ್ ಟೂರ್ನಿಗಳಲ್ಲಿ 71 ಟೆಸ್ಟ್ ಪಂದ್ಯಗಳು ನಡೆಯಲಿದ್ದು, 2 ವರ್ಷಗಳ ಅವಧಿಯಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಮೊದಲ 2 ಸ್ಥಾನ ಪಡೆದಿರುವ ತಂಡಗಳ ನಡುವೆ 2021 ಜೂನ್ ನಲ್ಲಿ ಫೈನಲ್ ನಡೆಯಲಿದೆ. ಫೈನಲ್ ಪಂದ್ಯ ಗೆದ್ದ ತಂಡ ಟೆಸ್ಟ್ ಚಾಂಪಿಯನ್ ಆಗಿ ನಿಲ್ಲಲಿದೆ.

    ಸದ್ಯ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದಿರುವ ಟೀಂ ಇಂಡಿಯಾ 9 ಟೆಸ್ಟ್ ಪಂದ್ಯಗಳಿಂದ 360 ಅಂಕಗಳಿಸಿದೆ. 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ 296 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡ 7 ಟೆಸ್ಟ್ ಪಂದ್ಯಗಳಿಂದ 180 ಅಂಕಗಳನ್ನು ಗಳಿಸಿ 3ನೇ ಸ್ಥಾನ ಪಡೆದಿದೆ. ಉಳಿದಂತೆ 2ನೇ ಟೆಸ್ಟ್ ಟೂರ್ನಿ ಆಡುತ್ತಿರುವ ವೆಸ್ಟ್ ಇಂಡೀಸ್ ಮೊದಲ ಜಯದೊಂದಿಗೆ 40 ಅಂಕ ಪಡೆದು ಖಾತೆ ತೆರೆದಿದೆ. ಇಂಗ್ಲೆಂಡ್ ತಂಡ 146 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ನಲ್ಲಿ ಜುಲೈ 16 ರಿಂದ ಆರಂಭವಾಗಲಿದೆ.

  • ಟೀಂ ಇಂಡಿಯಾಗೆ 300, ಉಳಿದ 7 ತಂಡಗಳಿಗೆ 232 ಅಂಕ

    ಟೀಂ ಇಂಡಿಯಾಗೆ 300, ಉಳಿದ 7 ತಂಡಗಳಿಗೆ 232 ಅಂಕ

    ಇಂದೋರ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ನಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ಸತತ 6ನೇ ಟೆಸ್ಟ್ ಗೆಲುವಿನೊಂದಿಗೆ ಪಟ್ಟಿಯಲ್ಲಿ 300 ಅಂಕ ಪಡೆದು ನಂ.1 ಸ್ಥಾನದಲ್ಲೇ ಮುಂದುವರಿದಿದೆ.

    ಬಾಂಗ್ಲಾದೇಶ ವಿರುದ್ಧ ಇಂದೋರ್ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್, 130 ರನ್ ಗಳ ಅಂತರದಲ್ಲಿಂದ ಗೆಲುವು ಪಡೆದಿದೆ. ಇದರೊಂದಿಗೆ 60 ಅಂಕಗಳನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ ಆಟಗಾರರು 2ನೇ ಇನ್ನಿಂಗ್ಸ್ ನಲ್ಲಿ 213 ರನ್ ಗಳಿಗೆ ಆಲೌಟ್ ಆಯ್ತು. ಇದಕ್ಕೂ ಮುನ್ನ ಟೀಂ ಇಂಡಿಯಾ ತಂಡ ಮಯಾಂಕ್ ಅಗರ್ವಾಲ್ ಅವರ ದ್ವಿಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 493 ರನ್ ಗಳಿಸಿ 343 ರನ್ ಲೀಡ್ ನೊಂದಿಗೆ ಡಿಕ್ಲೇರ್ ಮಾಡಿಕೊಂಡಿತ್ತು.

    ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಇದುವರೆಗೂ 6 ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎಲ್ಲಾ ಪಂದ್ಯಗಳಲ್ಲಿ ಗೆಲುವು ಪಡೆಯುವುದರೊಂದಿಗೆ ಮೊದಲ ಸ್ಥಾನದಲ್ಲಿದೆ. 2 ಪಂದ್ಯಗಳನ್ನು ಆಡಿರುವ ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳು ತಲಾ 60 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‍ಗಳು 5 ಪಂದ್ಯಗಳಲ್ಲಿ 56 ಅಂಕಗಳೊಂದಿಗೆ 4 ಮತ್ತು 5ನೇ ಸ್ಥಾನ ಪಡೆದಿವೆ. ಉಳಿದಂತೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ತಂಡಗಳು ಯಾವುದೇ ಅಂಕಗಳನ್ನು ಪಡೆದುಕೊಂಡಿಲ್ಲ.

    ವಿಶೇಷ ಎಂದರೆ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಆಡುತ್ತಿರುವ 9 ತಂಡಗಳಲ್ಲಿ ಟೀಂ ಇಂಡಿಯಾ 300 ಅಂಕಗಳನ್ನು ಪಡೆದಿದ್ದರೆ, ಉಳಿದ 7 ತಂಡಗಳ ಎಲ್ಲ ಅಂಕಗಳನ್ನು ಸೇರಿಸಿದರೆ 238 ಅಂಕ ಆಗುತ್ತದೆ. ಇತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಯಾವುದೇ ಪಂದ್ಯವನ್ನು ಆಡದ ಕಾರಣ ಪಟ್ಟಿಯಲ್ಲಿ ಶೂನ್ಯ ಅಂಕದೊಂದಿಗೆ ಕೊನೆಯ ಸ್ಥಾನವನ್ನು ಪಡೆದಿದೆ.

    ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿರುವ ಕಾರಣ ವಿಶ್ವದ ಇತರೇ ಕ್ರಿಕೆಟ್ ಆಡುವ ದೇಶಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ವಿದೇಶಿ ಟೂರ್ನಿಗಳಲ್ಲಿ ಮಾತ್ರ ಹೆಚ್ಚು ಭಾಗವಹಿಸಬೇಕಾಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್ ಪ್ರವಾಸ ಕೈಗೊಂಡು ಟಿ20 ಸರಣಿಯನ್ನು ಆಡಿತ್ತು. ಉಳಿದಂತೆ ಡಿಸೆಂಬರಿನಲ್ಲಿ ಪಾಕ್, ಲಂಕಾ ನಡುವಿನ 2 ಟೆಸ್ಟ್ ಪಂದ್ಯಗಳ ಟೂರ್ನಿ ನಡೆಯಲಿದೆ.

    ಅಂಕ ಹೇಗೆ ಹಂಚಲಾಗುತ್ತದೆ?
    ಒಂದು ಟೆಸ್ಟ್ ಸರಣಿಗೆ 120 ಅಂಕಗಳನ್ನು ಐಸಿಸಿ ಈಗಾಗಲೇ ನಿಗದಿ ಮಾಡಿದೆ. ಸರಣಿಯಲ್ಲಿ ತಂಡಗಳು ಎಷ್ಟು ಪಂದ್ಯಗಳನ್ನು ಆಡಲಿದೆಯೋ ಆ ಪಂದ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ವಿಭಾಗಿಸಲಾಗುತ್ತದೆ. ಉದಾಹರಣೆಗೆ ಬಾಂಗ್ಲಾ ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ.

    2 ಪಂದ್ಯಗಳ ಸರಣಿಯಲ್ಲಿ ಪಂದ್ಯ ಗೆದ್ದರೆ 60 ಅಂಕ, ಟೈ ಆದರೆ 30 ಅಂಕ, ಡ್ರಾನಲ್ಲಿ ಅಂತ್ಯಗೊಂಡರೆ 20 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಜಯ ಗಳಿಸಿದ ತಂಡಕ್ಕೆ 40 ಅಂಕ, ಟೈ ಆದರೆ 20, ಯಾವುದೇ ಫಲಿತಾಂಶ ಕಾಣದೇ ಡ್ರಾ ಆದರೆ 13 ಅಂಕಗಳನ್ನು ನೀಡಲಾಗುತ್ತದೆ. 5 ಪಂದ್ಯಗಳ ಸರಣಿಯಲ್ಲಿ ಜಯಗಳಿಸಿದರೆ 24 ಅಂಕ, ಟೈ ಆದರೆ 12, ಡ್ರಾ ಆದಲ್ಲಿ 8 ಅಂಕ ನೀಡಲಾಗುತ್ತದೆ.

    ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಆಡಲಿವೆ. ಒಂದು ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಬೇಕು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನು ಆಡಬೇಕೆಂಬ ನಿಯಮ ಹೇರಲಾಗಿದೆ. ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್ ಪಂದ್ಯ 2021ರ ಜೂನ್‍ನಲ್ಲಿ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಆರಂಭಿಸಿತ್ತು.

    ರನ್ಸ್ ಪರ್ ವಿಕೆಟ್ ಅನುಪಾತ ಲೆಕ್ಕಾಚಾರ ಹೇಗೆ?
    ತಂಡಗಳು ಸಮಾನ ಅಂಕ ಪಡೆದರೆ ಸ್ಥಾನ ಹಂಚಿಕೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಎರಡು ಇನ್ನಿಂಗ್ಸ್ ಗಳಲ್ಲಿ ಕಳೆದುಕೊಂಡ ವಿಕೆಟ್ ಮತ್ತು ಒಟ್ಟು ರನ್ ಗಳ ಲೆಕ್ಕಾಚಾರ ಹಾಕಿ ಅಂಕ ನೀಡಲಾಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಉದಾಹರಣೆಗೆ ತೆಗೆದುಕೊಂಡರೆ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 297 ರನ್‍ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್ ನಲ್ಲಿ 100 ರನ್ ಗಳಿಗೆ ಆಲೌಟ್ ಆಗಿತ್ತು.

    ((297+343)/17)/(222+100)/20)
    =(640/17)/(322/20)
    =37.647/16.1
    =2.338

  • ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಭಾರತಕ್ಕೆ 60 ಅಂಕ, ಇಂಗ್ಲೆಂಡಿಗೆ 24 ಅಂಕ – ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕಾಚಾರ ಹೇಗೆ?

    ಬೆಂಗಳೂರು: ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್  ಆರಂಭಗೊಂಡಿದ್ದು, ಈ ಟೂರ್ನಿಯಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತಕ್ಕೆ 60 ಅಂಕ ಆಸ್ಟ್ರೇಲಿಯಾವನ್ನು ಸೋಲಿಸಿದ ಇಂಗ್ಲೆಂಡಿಗೆ 24 ಅಂಕ ನೀಡಿದ್ದು ಸರಿಯೇ? ಇಂಗ್ಲೆಂಡಿಗೆ ಯಾಕೆ 60 ಅಂಕ ನೀಡಿಲ್ಲ ಎಂದು ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದೆ. ಆದರೆ ಈ ಅಂಕದಲ್ಲಿ ಯಾವುದೇ ಮೋಸ ನಡೆದಿಲ್ಲ. ಐಸಿಸಿ ನಿಯಮದ ಪ್ರಕಾರವೇ ಎಲ್ಲ ತಂಡಗಳಿಗೆ ಅಂಕವನ್ನು ಹಂಚಿಕೆ ಮಾಡಲಾಗುತ್ತಿದೆ.

    ಅಂಕ ಹೇಗೆ ಹಂಚಲಾಗುತ್ತದೆ?
    ಒಂದು ಟೆಸ್ಟ್ ಸರಣಿಗೆ 120 ಅಂಕಗಳನ್ನು ಐಸಿಸಿ ಈಗಾಗಲೇ ನಿಗದಿ ಮಾಡಿದೆ. ಸರಣಿಯಲ್ಲಿ ತಂಡಗಳು ಎಷ್ಟು ಪಂದ್ಯಗಳನ್ನು ಆಡಲಿದೆಯೋ ಆ ಪಂದ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ವಿಭಾಗಿಸಲಾಗುತ್ತದೆ. ಉದಾಹರಣೆಗೆ ವಿಂಡೀಸ್ ಸರಣಿಯಲ್ಲಿ 2 ಪಂದ್ಯಗಳು ನಡೆಯಲಿದ್ದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ. ಅದೇ 5 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೆ ಗೆದ್ದ ತಂಡಕ್ಕೆ 24 ಅಂಕಗಳನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಂದೊಂದು ಪಂದ್ಯ ಗೆದ್ದ ಹಿನ್ನೆಲೆಯಲ್ಲಿ 24 ಅಂಕಗಳನ್ನು ನೀಡಲಾಗಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಎರಡು ತಂಡಗಳಿಗೆ 8 ಅಂಕಗಳನ್ನು ನೀಡಲಾಗಿದೆ.

    2 ಪಂದ್ಯಗಳ ಸರಣಿಯಲ್ಲಿ ಪಂದ್ಯ ಗೆದ್ದರೆ 60 ಅಂಕ, ಟೈ ಆದರೆ 30 ಅಂಕ, ಡ್ರಾನಲ್ಲಿ ಅಂತ್ಯಗೊಂಡರೆ 20 ಅಂಕಗಳನ್ನು ನೀಡಲಾಗುತ್ತದೆ. 3 ಪಂದ್ಯಗಳ ಸರಣಿಯಲ್ಲಿ ಜಯ ಗಳಿಸಿದ ತಂಡಕ್ಕೆ 40 ಅಂಕ, ಟೈ ಆದರೆ 20, ಯಾವುದೇ ಫಲಿತಾಂಶ ಕಾಣದೇ ಡ್ರಾ ಆದರೆ 13 ಅಂಕಗಳನ್ನು ನೀಡಲಾಗುತ್ತದೆ. 5 ಪಂದ್ಯಗಳ ಸರಣಿಯಲ್ಲಿ ಜಯಗಳಿಸಿದರೆ 24 ಅಂಕ, ಟೈ ಆದರೆ 12, ಡ್ರಾ ಆದಲ್ಲಿ 8 ಅಂಕ ನೀಡಲಾಗುತ್ತದೆ.

    ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿವೆ. ಒಂದು ಸರಣಿಯಲ್ಲಿ ಗರಿಷ್ಠ 5, ಕನಿಷ್ಠ 2 ಪಂದ್ಯ ಗಳನ್ನು ಆಡಬೇಕು. ಪ್ರತಿಯೊಂದು ತಂಡ ತವರಿನಲ್ಲಿ 3, ವಿದೇಶಗಳಲ್ಲಿ 3 ಸರಣಿಯನ್ನು ಆಡಬೇಕೆಂಬ ನಿಯಮ ಹೇರಲಾಗಿದೆ. ಅತ್ಯಧಿಕ ಅಂಕ ಸಂಪಾದಿಸಿದ ಅಗ್ರ 2 ತಂಡಗಳ ನಡುವಿನ ಫೈನಲ್ ಪಂದ್ಯ 2021ರ ಜೂನ್‍ನಲ್ಲಿ ನಡೆಯಲಿದೆ. ಭಾರತ ತನ್ನ ಅಭಿಯಾನವನ್ನು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಆರಂಭಿಸಿದೆ.

    ಭಾರತಕ್ಕೆ ಮೊದಲ ಸ್ಥಾನ:
    ಟೆಸ್ಟ್ ಚಾಂಪಿಯನ್‍ಶಿಪ್ ಅಂಕ ಪಟ್ಟಿಯಲ್ಲಿ ಭಾರತ ಈಗ 60 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರಿದೆ. ನ್ಯೂಜಿಲೆಂಡ್, ಶ್ರೀಲಂಕಾ ತಂಡಗಳು 60 ಅಂಕಗಳು ಗಳಿಸಿದರೂ ಅನುಕ್ರಮವಾಗಿ ಎರಡು, ಮೂರನೇ ಸ್ಥಾನ ಪಡೆದಿದೆ. ಭಾರತ 318 ರನ್‍ಗಳ ಭಾರೀ ಅಂತರದಿಂದ ಗೆದ್ದ ಹಿನ್ನೆಲೆಯಲ್ಲಿ 2.338 ರನ್ಸ್ ಪರ್ ವಿಕೆಟ್ ಅನುಪಾತ ಇರುವ ಕಾರಣ ಮೊದಲ ಸ್ಥಾನವನ್ನು ಪಡೆದಿದೆ.

    ರನ್ಸ್ ಪರ್ ವಿಕೆಟ್ ಅನುಪಾತ ಲೆಕ್ಕಾಚಾರ ಹೇಗೆ?
    ತಂಡಗಳು ಸಮಾನ ಅಂಕ ಪಡೆದರೆ ಸ್ಥಾನ ಹಂಚಿಕೆ ಮಾಡುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ ಎರಡು ಇನ್ನಿಂಗ್ಸ್ ಗಳಲ್ಲಿ ಕಳೆದುಕೊಂಡ ವಿಕೆಟ್ ಮತ್ತು ಒಟ್ಟು ರನ್ ಗಳ ಲೆಕ್ಕಾಚಾರ ಹಾಕಿ ಅಂಕ ನೀಡಲಾಗುತ್ತದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಉದಾಹರಣೆಗೆ ತೆಗೆದುಕೊಂಡರೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‍ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ  7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ  222 ರನ್ ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ  100 ರನ್ ಗಳಿಗೆ ಆಲೌಟ್ ಆಗಿತ್ತು.

    ((297+343)/17)÷(222+100)/20)
    =(640/17)÷ (322/20)
    =37.647 ÷ 16.1
    =2.338

  • ಸ್ಲೋ ಓವರ್ ರೇಟ್‍ಗೆ ನಾಯಕರ ಅಮಾನತು ಇಲ್ಲ ಎಂದ ಐಸಿಸಿ

    ಸ್ಲೋ ಓವರ್ ರೇಟ್‍ಗೆ ನಾಯಕರ ಅಮಾನತು ಇಲ್ಲ ಎಂದ ಐಸಿಸಿ

    ಲಂಡನ್: ಐಸಿಸಿ ತನ್ನ ಕ್ರಿಕೆಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದ್ದು, ಇನ್ನು ಮುಂದೇ ಸ್ಲೋ ಓವರ್ ಮಾಡಿದ ತಪ್ಪಿಗೆ ತಂಡದ ನಾಯಕರ ಅಮಾನತು ಇಲ್ಲ ಎಂದು ಹೇಳಿದೆ.

    ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಮಾಡಿದ್ದು, ಹಲವು ಹಿರಿಯ ಅನುಭವಿ ಆಟಗಾರರು ಹಾಗೂ ತಜ್ಞರು ನೀಡಿರುವ ಸಲಹೆಗಳನ್ನು ಸ್ವೀಕರಿಸಿ ಈ ನಿರ್ಧಾರ ಮಾಡಲಾಗಿದೆ.

    ಆಗಸ್ಟ್ 1 ರಿಂದ 2019 ರಿಂದ 2021ರ ಅವಧಿಯಲ್ಲಿ ವಿಶ್ವ ಕ್ರಿಕೆಟ್ ಟೆಸ್ಟ್ ಟೂರ್ನಿ ನಡೆಯಲಿದೆ. ಹಳೆಯ ನಿಯಮದ ಅನ್ವಯ ಪಂದ್ಯದ ವೇಳೆ ನಾಯಕ ಸ್ಲೋ ಓವರ್ ರೇಟಿಂಗ್ ದಾಖಲಾದರೆ ತಂಡದ ನಾಯಕನಿಗೆ, ಆಟಗಾರರಿಗೆ ದಂಡ ವಿಧಿಸಲಾಗುತ್ತಿತ್ತು. ಆದರೆ 2ನೇ ಪಂದ್ಯದಲ್ಲೂ ಇದು ಮುಂದುವರಿದರೆ ನಾಯಕನಿಗೆ 1 ಪಂದ್ಯ ನಿಷೇಧ ಹೇರಲಾಗುತಿತ್ತು.

    ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯದ ಕೊನೆಯಲ್ಲಿ ನಿಗದಿತ ಓವರ್ ರೇಟ್‍ಗಿಂತಲೂ ಹಿಂದಿದ್ದರೆ ಪ್ರತಿ ಓವರಿಗೆ 2 ಕಾಂಪಿಟೇಷನ್ ಅಂಕಗಳನ್ನು ಕಡಿತ ಮಾಡಲಾಗುತ್ತಿತ್ತು. ಆದರೆ ಮುಂದಿನ ಅವಧಿಯಲ್ಲಿ ಈ ನಿಯಮ ಅನ್ವಯ ಆಗುವುದಿಲ್ಲ ಎಂದು ಐಸಿಸಿ ತಿಳಿಸಿದೆ. ಲಂಡನ್ ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಜಿಂಬಾಬ್ವೆ ಕ್ರಿಕೆಟ್ ಸಮಿತಿಯನ್ನು ತಕ್ಷಣದಿಂದ ಅಮಾನತು ಮಾಡಿದೆ.