Tag: test

  • ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

    ದಿಢೀರ್‌ ಮನೆಗೆ ತೆರಳಿದ ಅಶ್ವಿನ್‌ – 10 ಮಂದಿಯೊಂದಿಗೆ ಕಣಕ್ಕೆ ಇಳಿಯಲಿದೆ ಭಾರತ

    ರಾಜ್‌ಕೋಟ್‌: ಸ್ಪಿನ್ನರ್‌ ಆರ್‌ ಅಶ್ವಿನ್‌ ( R Ashwin) ಈಗ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಿಂದ (Test Match) ದಿಢೀರ್‌ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಇಂಗ್ಲೆಂಡ್‌ (England) ವಿರುದ್ಧದ ಪಂದ್ಯದಲ್ಲಿ 10 ಆಟಗಾರರೊಂದಿಗೆ ಭಾರತ (Team India) ಪಂದ್ಯ ಆಡುತ್ತಿದೆ.

    ಅಶ್ವಿನ್‌ ಬದಲು ಫೀಲ್ಡಿಂಗ್‌ನಲ್ಲಿ ಬದಲಿ ಆಟಗಾರನನ್ನು ಮಾತ್ರವೇ ಭಾರತ ಆಡಿಸಲು ಅವಕಾಶವಿದೆ. ಇಂಗ್ಲೆಂಡ್‌ ವಿರುದ್ಧ ನಡೆಯತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮುಂದಿನ ಭಾಗದಲ್ಲಿ ಅಶ್ವಿನ್‌ ಅವರ ಸೇವೆ ತಂಡಕ್ಕೆ ಸಿಗುವುದಿಲ್ಲ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದ ಕಾರಣಕ್ಕೆ ಅವರು ತಂಡವನ್ನು ತೊರೆದಿದ್ದಾರೆ ಬಿಸಿಸಿಐ (BCCI) ಹೇಳಿಕೆ ನೀಡಿದೆ.  ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ – ಇತಿಹಾಸ ಬರೆದ ಸ್ಪಿನ್‌ ಮಾಂತ್ರಿಕ ಅಶ್ವಿನ್‌

    ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕಾರಣ ತಿಳಿಸಿದ್ದಾರೆ. ಅಶ್ವಿನ್‌ ಅವರ ತಾಯಿ (Mother) ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರು ರಾಜ್‌ಕೋಟ್‌ ತೊರೆದು ಶೀಘ್ರವೇ ತಾಯಿಯನ್ನು ನೋಡಲು ಚೆನ್ನೈಗೆ ತೆರಳಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್‌ ದಂಡ!

    ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ಅಗತ್ಯ ಬೆಂಬಲ ನೀಡುತ್ತದೆ. ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಅಶ್ವಿನ್ ಮತ್ತು ಅವರ ಕುಟುಂಬದವರು ಈ ಸವಾಲಿನ ಸಮಯದಲ್ಲಿ ಅವರ ಖಾಸಗಿತನವನ್ನು ಮಂಡಳಿ ಗೌರವಿಸುತ್ತದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 445 ರನ್‌ಗಳಿಗೆ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ನಷ್ಟಕ್ಕೆ 207 ರನ್‌ ಹೊಡೆದಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 37 ರನ್ ಹೊಡೆದಿದ್ದರೆ ಬೌಲಿಂಗ್‌ನಲ್ಲಿ 7 ಓವರ್‌ ಎಸೆದು 37 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು.

  • ಶತಕ ಸಿಡಿಸಿ ಎಲೈಟ್‌ ಲಿಸ್ಟ್‌ ಸೇರಿದ ಎಲ್ಗರ್‌ – ಆಫ್ರಿಕಾಗೆ 11 ರನ್‌ ಮುನ್ನಡೆ

    ಶತಕ ಸಿಡಿಸಿ ಎಲೈಟ್‌ ಲಿಸ್ಟ್‌ ಸೇರಿದ ಎಲ್ಗರ್‌ – ಆಫ್ರಿಕಾಗೆ 11 ರನ್‌ ಮುನ್ನಡೆ

    ಸೆಂಚೂರಿಯನ್‌: ಭಾರತದ (Team India) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನ ದಕ್ಷಿಣ ಆಫ್ರಿಕಾ (South Africa) ಮೇಲುಗೈ ಸಾಧಿಸಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್‌ ಮುನ್ನಡೆ ಸಾಧಿಸಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 245 ರನ್‌ಗಳಿಗೆ ಆಲೌಟ್‌ ಆದರೆ ದಕ್ಷಿಣ ಆಫ್ರಿಕಾ 5 ವಿಕೆಟ್‌ ನಷ್ಟಕ್ಕೆ 256 ರನ್‌ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದೆ. ವಿದಾಯ ಟೆಸ್ಟ್‌ ಸರಣಿಯಲ್ಲಿ ಡೀನ್ ಎಲ್ಗರ್ (Dean Elgar) ಶತಕ ಸಿಡಿಸಿ ದಿಗ್ಗಜರನ್ನೊಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ್ದಾರೆ. ಇದನ್ನೂ ಓದಿ: ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್‌ ನಿಲ್ಲಿಸಿ – ಯುಜಿಸಿ

    ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಎಲ್ಗರ್‌ ಔಟಾಗದೇ 140 ರನ್‌ (211 ಎಸೆತ, 23 ಬೌಂಡರಿ). ಈ ಶತಕದ ಮೂಲಕ ಡೀನ್‌ ಎಲ್ಗರ್‌ ಅವರು ದಿಗ್ಗಜರಾದ ಗ್ಯಾರಿ ಕರ್ಸ್ಟನ್ ಮತ್ತು ಹರ್ಷಲ್ ಗಿಬ್ಸ್ ಬಳಿಕ ತವರಿನಲ್ಲಿ ಭಾರತದ ವಿರುದ್ಧ ಟೆಸ್ಟ್ ಶತಕ ಬಾರಿಸಿದ ಮೂರನೇ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಡೇವಿಡ್ ಬೆಡಿಂಗ್ಹ್ಯಾಮ್ 56 ರನ್‌ ಹೊಡೆದರೆ ಟೋನಿ ಡಿ ಜೋರ್ಜಿ 28 ರನ್‌ ಹೊಡೆದು ಔಟಾದರು. ಮಂದ ಬೆಳಕಿನ ಕಾರಣ ಇಂದು ದಕ್ಷಿಣ ಆಫ್ರಿಕಾ 66 ಓವರ್‌ ಮಾತ್ರ ಎದುರಿಸಿತು. ಬುಮ್ರಾ ಮತ್ತು ಸಿರಾಜ್‌ ತಲಾ 2 ವಿಕೆಟ್‌ ಪಡೆದರೆ ಪ್ರಸಿದ್ಧ್‌ ಕೃಷ್ಣ 1 ವಿಕೆಟ್‌ ಪಡೆದರು. ಇದನ್ನೂ ಓದಿ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ಮೊದಲ ದಿನ 59 ಓವರ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿದ್ದ ಭಾರತ ಇಂದು 37 ರನ್‌ ಸೇರಿಸಿ ಆಲೌಟ್‌ ಆಯ್ತು. 70 ರನ್‌ ಗಳಿಸಿದ್ದ ಕೆಎಲ್‌ ರಾಹುಲ್‌ (KL Rahul) ಇಂದು 31 ರನ್‌ ಸೇರಿಸಿ ಶತಕ ಹೊಡೆದು ಅಂತಿಮವಾಗಿ 101 ರನ್‌ (137 ಎಸೆತ, 14 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು.

  • ಭಾರತಕ್ಕೆ ರಾಹುಲ್‌ ಬಲ – ಆಫ್ರಿಕಾಗೆ ಮೊದಲ ದಿನದ ಗೌರವ

    ಭಾರತಕ್ಕೆ ರಾಹುಲ್‌ ಬಲ – ಆಫ್ರಿಕಾಗೆ ಮೊದಲ ದಿನದ ಗೌರವ

    – ಮೊದಲ ದಿನ ಮಳೆ ಅಡ್ಡಿ

    ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ (First Test) ಮೊದಲ ದಿನವೇ ಭಾರತ (Team India) 8 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿದೆ.

    ವೇಗಿ ರಬಾಡ ಮಾರಕ ಬೌಲಿಂಗ್‌ ದಾಳಿಗೆ ಭಾರತ ತತ್ತರಿಸಿದೆ. 24 ರನ್‌ ಗಳಿಸುವಷ್ಟರಲ್ಲೇ ಭಾರತ ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಅವರ ವಿಕೆಟ್‌ ಕಳೆದುಕೊಂಡಿತ್ತು.

    ಈ ಹಂತದಲ್ಲಿ ವಿರಾಟ್‌ ಕೊಹ್ಲಿ (Virat kohli) ಮತ್ತು ಶ್ರೇಯಸ್‌ ಅಯ್ಯರ್‌ ನಾಲ್ಕನೇ ವಿಕೆಟಿಗೆ 68 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಕೊಹ್ಲಿ 38 ರನ್‌, ಶ್ರೇಯಸ್‌ ಅಯ್ಯರ್‌ 31 ರನ್‌ ಗಳಿಸಿ ಔಟಾದರು.  ಇದನ್ನೂ ಓದಿ: ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

    ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಕೆಎಲ್‌ ರಾಹುಲ್‌ (KL Rahul) ತಾಳ್ಮೆಯ ಆಟವಾಡಿ ಔಟಾಗದೇ 70 ರನ್‌ ಹೊಡೆದರೆ, ಶಾರ್ದೂಲ್‌ ಠಾಕೂರ್‌ 24 ರನ್‌ ಹೊಡೆದು ಸಾಥ್‌ ನೀಡಿದರು. ಸದ್ಯ ಮೊಹಮ್ಮದ್‌ ಸಿರಾಜ್‌ 0 ರನ್‌ ಹೊಡೆದು ಬುಧವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

    ರಾಹುಲ್‌ ಕ್ರೀಸ್‌ಗ ಬರುವಾಗ ತಂಡದ ಮೊತ್ತ 4ವಿಕೆಟ್‌ ನಷ್ಟಕ್ಕೆ 92 ಆಗಿತ್ತು. ನಂತರ ಭಾರತ 116 ರನ್‌ ಸೇರಿಸಿದ್ದು ಈ ಪೈಕಿ ರಾಹುಲ್‌ ಒಬ್ಬರೇ 70 ರನ್‌ ಹೊಡೆದಿರುವುದು ವಿಶೇಷ.

    ಇಂದು ಮಳೆಯಿಂದಾಗಿ ಕೇವಲ 59 ಓವರ್‌ ಮಾತ್ರ ಎಸೆಯಲಾಗಿತ್ತು. ರಬಡಾ 44 ರನ್‌ ನೀಡಿ 5 ವಿಕೆಟ್‌ ಕಿತ್ತರೆ, ಬರ್ಜರ್‌ 2 ವಿಕೆಟ್‌, ಮಾಕ್ರೋ ಜನ್‌ಸೆನ್‌ 1 ವಿಕೆಟ್‌ ಪಡೆದರು. ಇತರ ರೂಪದಲ್ಲಿ 12 ರನ್‌ ಬಂದಿದೆ.

     

  • Bigg Boss Kannada 10 : ಸ್ಪರ್ಧಿಗಳ ಆಯ್ಕೆಗೆ ಯಾವೆಲ್ಲ ಟೆಸ್ಟ್ ಇರುತ್ತೆ ಗೊತ್ತಾ? ಬಹಿರಂಗ ಪಡಿಸಿದ ಕಿಚ್ಚ

    Bigg Boss Kannada 10 : ಸ್ಪರ್ಧಿಗಳ ಆಯ್ಕೆಗೆ ಯಾವೆಲ್ಲ ಟೆಸ್ಟ್ ಇರುತ್ತೆ ಗೊತ್ತಾ? ಬಹಿರಂಗ ಪಡಿಸಿದ ಕಿಚ್ಚ

    ಬಿಗ್ ಬಾಸ್  (Bigg Boss Kannada) ಸ್ಪರ್ಧಿಗಳನ್ನು ಆಯ್ಕೆ ಮಾಡುವುದು ಸುಲಭವಲ್ಲ.  ಅವರ ಹಿನ್ನೆಲೆ, ವ್ಯಕ್ತಿತ್ವ ಮತ್ತು ಜನಪ್ರಿಯತೆಯನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇನ್ನೂ ಹಲವಾರು ಟೆಸ್ಟ್ ಗಳನ್ನು ಮಾಡಿಯೇ ದೊಡ್ಮನೆ ಒಳಗೆ ಜನರನ್ನು ಕಳುಹಿಸಲಾಗುತ್ತಿದೆ ಎನ್ನುವ ವಿಚಾರವನ್ನು ಈಗ ಬಹಿರಂಗ ಪಡಿಸಿದ್ದಾರೆ ಕಿಚ್ಚ ಸುದೀಪ್.

    ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿಕೊಳ್ಳಬಾರದು, ಅವಮಾನಿಸಬಾರದು, ದೈಹಿಕ ಹಿಂಸೆಯನ್ನು ಮಾಡಬಾರದು ಎಂದೆಲ್ಲ ರೂಲ್ಸ್ ಇವೆ. ಅಹಿತಕರ ಘಟನೆಗಳು ಮನೆಯಲ್ಲಿ ಆಗಬಾರದು ಎನ್ನುವ ಕಾರಣಕ್ಕಾಗಿಯೇ  ಸೈಕಿಯಾಟಿಸ್ಟ್ ಟೆಸ್ಟ್, ಮೆಡಿಕಲ್ ಟೆಸ್ಟ್ (Test) ಮಾಡಿಸಿಯೇ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಕಿಚ್ಚ ಸುದೀಪ್  (Kiccha Sudeep)ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿಯನ್ನು ಹೊರ ಹಾಕಿದರು.

    ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ದಾಖಲೆ ಏನು?

    ಕನ್ನಡದ ಬಿಗ್ ಬಾಸ್ ನಾನಾ ಕಾರಣಗಳಿಂದಾಗಿ ವಿಶೇಷ ಮತ್ತು ಹೊಸತು ಅನಿಸುತ್ತದೆ. ಇಂತಹ ಶೋ ಮೂಲಕ ಕಿಚ್ಚ ಸುದೀಪ್ ದಾಖಲೆಯೊಂದನ್ನು ಬರೆದಿದ್ದಾರೆ. ಆ ದಾಖಲೆಯನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯೇ ಇಂದು ಬಹಿರಂಗ ಪಡಿಸಿದೆ. ಈ ಮೂಲಕ ಸುದೀಪ್‍ ವೃತ್ತಿ ಬದುಕಿಗೆ ಇದೊಂದು ಗೌರವದ ಸಂಗತಿಯೂ ಆಗಿದೆ.

    ಭಾರತದಾದ್ಯಂತ ಬಿಗ್ ಬಾಸ್ ಶೋಗಳು ಆಯೋಜನೆಯಾಗಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಕಡೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಎಲ್ಲ ಶೋಗಳಲ್ಲೂ ನಿರೂಪಕರು ಬದಲಾಗಿದ್ದಾರೆ. ಆದರೆ, ಮೊದಲ ಸೀಸನ್ ನಿಂದ ಈವರೆಗೂ ಕನ್ನಡದಲ್ಲಿ ನಿರೂಪಕರು ಬದಲಾಗಿಲ್ಲ. ಸುದೀಪ್ ಅವರೇ ಹತ್ತೂ ಸೀಸನ್ ಗಳನ್ನು ನಡೆಸಿಕೊಂಡು ಬಂದು ದಾಖಲೆ ಬರೆದಿದ್ದಾರೆ. ಇಂತಹ ದಾಖಲೆಯನ್ನು ಬೇರೆ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದು ವಿಶೇಷ.

     

    ಕೇವಲ ಟಿವಿಯಲ್ಲಿ ಪ್ರಸಾರವಾಗುವ ಶೋ ಮಾತ್ರವಲ್ಲ, ಓಟಿಟಿಗಾಗಿ ಬಿಗ್ ಬಾಸ್ ಆಯೋಜನೆ ಮಾಡಿದ್ದರೂ, ಅದನ್ನೂ ಸುದೀಪ್ ಅವರೇ ನಡೆಸಿಕೊಂಡು ಬಂದಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಅಡುಗೆ ರೀತಿಯ ಕಾರ್ಯಕ್ರಮವನ್ನೂ ಅವರು ಆಯೋಜನೆ ಮಾಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಸುದೀಪ್ ವಿಶೇಷ ಅನಿಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಲಂಡನ್‌: ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ (ICC World Test Championship) ಆಸ್ಟ್ರೇಲಿಯಾ (Australia) ವಿರುದ್ಧ ಭಾರತ (Team India) ಆರಂಭಿಕ ಹಿನ್ನಡೆ ಅನುಭವಿಸಿದೆ. ಎರಡನೇ ದಿನ ಆಸ್ಟ್ರೇಲಿಯಾ 469 ರನ್‌ಗಳಿಗೆ ಆಲೌಟ್‌ ಆಗಿದ್ದರೆ ಭಾರತ 38 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿ 318 ರನ್‌ಗಳ ಹಿನ್ನಡೆಯಲ್ಲಿದೆ.

    ತನ್ನ ಸರದಿ ಆರಂಭಿಸಿದ ಭಾರತ 30 ರನ್‌ಗಳಿಸುವಷ್ಟರಲ್ಲೇ ಆರಂಭಿಕ ಇಬ್ಬರೂ ಆಟಗಾರರನ್ನು ಕಳೆದುಕೊಂಡಿತು. ನಾಯಕ ರೋಹಿತ್‌ ಶರ್ಮಾ 15, ಶುಭಮನ್‌ ಗಿಲ್‌ 13 ರನ್‌ ಗಳಿಸಿ ಔಟಾದರು. ನಂತರ ಬಂದ ಚೇತೇಶ್ವರ ಪೂಜಾರ 14 ರನ್‌, ವಿರಾಟ್‌ ಕೊಹ್ಲಿ 14 ರನ್‌ ಗಳಿಸಿ ಔಟಾದರೆ ರವೀಂದ್ರ ಜಡೇಜಾ 48 ರನ್‌ (51 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಹೊಡೆದರು.

    ಎರಡನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್‌ ನಷ್ಟಕ್ಕೆ 151 ರನ್‌ಗಳಿಸಿದೆ. ಅಜಿಂಕ್ಯಾ ರಹಾನೆ ಔಟಾಗದೇ 29 ರನ್‌, ಶ್ರೀಕಾರ್‌ ಭರತ್‌ ಔಟಾಗದೇ 5 ರನ್‌ ಗಳಿಸಿದ್ದಾರೆ. ಮಿಚೆಲ್‌ ಸ್ಟ್ರಾಕ್‌, ಪ್ಯಾಟ್‌ ಕಮ್ಮಿನ್ಸ್‌, ಸ್ಕಾಟ್‌ ಬೊಲಾಂಡ್‌, ಕ್ಯಾಮರೂನ್‌ ಗ್ರೀನ್‌, ನಥನ್‌ ಲಿಯಾನ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.  ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್ ಭೂಮಿಯಲ್ಲಿ ಬಡವರಿಗೆ ಮನೆ ನಿರ್ಮಾಣ – ಶೀಘ್ರವೇ ಹಂಚಲಿದ್ದಾರೆ ಯೋಗಿ

    ಮೊದಲ ದಿನ ದಿನ 3 ವಿಕೆಟ್‌ ನಷ್ಟಕ್ಕೆ 327 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಇಂದು 142 ರನ್‌ ಸೇರಿಸಿ ಅಂತಿಮವಾಗಿ  469 ರನ್‌ಗಳಿಗೆ ಆಲೌಟ್‌ ಆಯ್ತು.

    91 ರನ್‌ಗಳಿಸಿದ್ದ ಸ್ಮಿತ್‌ ಇಂದು 121 ರನ್‌ (268 ಎಸೆತ, 19 ಬೌಂಡರಿ) ಗಳಿಸಿ ಔಟಾದರೆ 146 ರನ್‌ ಗಳಿಸಿದ್ದ ಟ್ರಾವಿಸ್‌ ಹೆಡ್‌ 163 ರನ್‌ (174 ಎಸೆತ, 25 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರು. ಅಲೆಕ್ಸ್‌ ಕ್ಯಾರಿ 48 ರನ್‌ (69 ಎಸೆತ, 7 ಬೌಂಡರಿ, 1 ಸಿಕ್ಸರ್‌) ಹೊಡೆದರು.

     

    ಸಿರಾಜ್‌ 4 ವಿಕೆಟ್‌ ಪಡೆದರೆ, ಮೊಹಮ್ಮದ್‌ ಶಮಿ, ಶಾರ್ದೂಲ್‌ ಠಾಕೂರ್‌ ತಲಾ 2 ವಿಕೆಟ್‌ ಕಿತ್ತರು. ರವೀಂದ್ರ ಜಡೇಜಾ 1 ವಿಕೆಟ್‌ ಪಡೆದರು.

  • ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್

    ಮುಂಬೈ: ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಿಷಭ್ ಪಂತ್ (Rishabh Pant) ಕಾರು ಅಪಘಾತಗೊಂಡು (Car Accident) ಗಾಯಗೊಂಡಿರುವ ಹಿನ್ನೆಲೆ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ (Test) ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಪಂತ್ ಸ್ಥಾನ ತುಂಬಲು ಮೂವರು ಆಟಗಾರರ ನಡುವೆ ಪೈಪೋಟಿ ಕಂಡುಬಂದಿದೆ.

    ಪಂತ್ ಕಾರು ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಮುಂದಿನ 6 ತಿಂಗಳು ಸಂಪೂರ್ಣ ವಿಶ್ರಾಂತಿ ಬೇಕಾಗಬಹುದೆಂದು ಈಗಾಗಲೇ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಪಂತ್ ಟೀಂ ಇಂಡಿಯಾದಿಂದ ಸದ್ಯ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ಆಡಲು ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಮುಕ್ತ ಅವಕಾಶ ಸಿಕ್ಕಿದೆ. ಇದನ್ನೂ ಓದಿ: ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ

    ಹಾಗಾಗಿ ಈಗಾಗಲೇ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿದ್ದ ಕೆ.ಭರತ್ (K Bharat) ಮತ್ತು ಏಕದಿನ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿ ಮಿಂಚಿರುವ ಇಶಾನ್ ಕಿಶನ್ (Ishan Kishan) ನಡುವೆ ಪೈಪೋಟಿ ಇದೆ. ಈ ನಡುವೆ ಅಚ್ಚರಿಯ ಹೆಸರೊಂದು ಇವರೊಂದಿಗೆ ಕಾಣಿಸಿಕೊಂಡಿದೆ. ಇದೀಗ ರೇಸ್‍ನಲ್ಲಿ ಉಪೇಂದ್ರ ಯಾದವ್ (Upendra Yadav) ಸೇರಿಕೊಂಡಿದ್ದಾರೆ.

    ಉಪೇಂದ್ರ ಯಾದವ್ ಉತ್ತರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಈಗಾಗಲೇ ಇಂಡಿಯಾ ಎ ತಂಡದ ಪರ ಆಡಿದ್ದಾರೆ. ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್‍ನಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ ಹಾಗಾಗಿ ಪಂತ್ ಸ್ಥಾನ ತುಂಬಲು ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ

    ಇದೀಗ ಸದ್ಯ ಕೆ.ಭರತ್ ಟೆಸ್ಟ್‌ನಲ್ಲಿ ಮೊದಲ ಆಯ್ಕೆಯ ಕೀಪರ್ ಆದರೆ, ಇಶಾನ್ ಕಿಶನ್ ಜೊತೆ ಸಂಜು ಸ್ಯಾಮ್ಸನ್ ಕೂಡ ರೇಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ತವರಿನಲ್ಲಿ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿ ಆಡಲಿದೆ. ಈ ವೇಳೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮ್ಯಾನ್‌ ಆಗಿ ಬಿಸಿಸಿಐ (BCCI) ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಿಲ್ ಚೊಚ್ಚಲ 100, ಪೂಜಾರ ವೇಗದ ಶತಕ – ಬಾಂಗ್ಲಾಗೆ ಬೃಹತ್ ಟಾರ್ಗೆಟ್

    ಗಿಲ್ ಚೊಚ್ಚಲ 100, ಪೂಜಾರ ವೇಗದ ಶತಕ – ಬಾಂಗ್ಲಾಗೆ ಬೃಹತ್ ಟಾರ್ಗೆಟ್

    ಢಾಕಾ: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲೂ ಭಾರತ ಮೇಲುಗೈ ಸಾಧಿಸಿದೆ. ಭಾರತ ಪರ ಶುಭಮನ್ ಗಿಲ್ ಚೊಚ್ಚಲ ಶತಕ ಸಿಡಿಸಿದರೆ, ಚೇತೇಶ್ವರ ಪೂಜಾರ ತಮ್ಮ ಟೆಸ್ಟ್ ವೃತ್ತಿಜೀವನದ ವೇಗದ ಶತಕ ಸಿಡಿಸಿ ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.

    ಬಾಂಗ್ಲಾ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲೂ ಭಾರತದ ಬ್ಯಾಟ್ಸ್‌ಮ್ಯಾನ್‌ ತಮ್ಮ ಉತ್ತಮ ಲಯ ಮುಂದುವರಿಸಿದರು. ಭಾರತ ಪರ ಶುಭಮನ್ ಗಿಲ್ 110 ರನ್ (152 ಎಸೆತ, 10 ಬೌಂಡರಿ, 3 ಸಿಕ್ಸ್) ಚಚ್ಚಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಇನ್ನೊಂದೆಡೆ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿ 102 ರನ್ (130 ಎಸೆತ, 13 ಬೌಂಡರಿ) ಬಾರಿಸಿ ಶತಕ ಪೂರೈಸಿಕೊಂಡರು. ಇದು ಪೂಜಾರ ಅವರ ಟೆಸ್ಟ್ ವೃತ್ತಿ ಜೀವನದ ವೇಗದ ಶತಕವಾಗಿದೆ. ಪೂಜಾರ ಶತಕ ಸಿಡಿಸುತ್ತಿದ್ದಂತೆ 61.4 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 258 ರನ್ ಬಾರಿಸಿದ್ದಾಗ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದನ್ನೂ ಓದಿ: ಕಿವೀಸ್ ಟೆಸ್ಟ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್‌ಬೈ

    ಭಾರತ ನೀಡಿದ 513 ರನ್‍ಗಳ ಬೃಹತ್ ಟಾರ್ಗೆಟ್‍ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಸಿಡಿಸಿದೆ. ಇನ್ನೆರಡು ದಿನ ಬಾಕಿ ಉಳಿದಿದ್ದು, ಬಾಂಗ್ಲಾ ಗೆಲುವಿಗೆ 471 ರನ್ ಬೇಕಾಗಿದೆ. ಭಾರತದ ಗೆಲುವಿಗೆ 10 ವಿಕೆಟ್ ಉದುರಿಸಬೇಕಾಗಿದೆ. ಇನ್ನೆರಡು ದಿನ ಬಾಕಿ ಉಳಿದಿರುವುದರಿಂದ ಸ್ಪಷ್ಟ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ: ಕುಲ್‍ದೀಪ್ ಯಾದವ್ ಆಲ್‍ರೌಂಡರ್ ಆಟ – ಭಾರತದ ಬಿಗಿ ಹಿಡಿತದಲ್ಲಿ ಬಾಂಗ್ಲಾ ಒದ್ದಾಟ

    2ನೇ ದಿನದಾಟದ ಅಂತ್ಯಕ್ಕೆ 44 ಓವರ್‌ಗಳಲ್ಲಿ ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿತ್ತು. ಮೂರನೇ ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾ ನಿನ್ನೆಯ ಮೊತ್ತಕ್ಕೆ ಕೇವಲ 17 ರನ್ ಒಟ್ಟುಗೂಡಿಸಿ 55.5 ಓವರ್‌ಗಳ ಅಂತ್ಯಕ್ಕೆ 150 ರನ್‍ಗಳಿಗೆ ಆಲೌಟ್ ಆಯಿತು.

    Live Tv
    [brid partner=56869869 player=32851 video=960834 autoplay=true]

  • ಕುಲ್‍ದೀಪ್ ಯಾದವ್ ಆಲ್‍ರೌಂಡರ್ ಆಟ – ಭಾರತದ ಬಿಗಿ ಹಿಡಿತದಲ್ಲಿ ಬಾಂಗ್ಲಾ ಒದ್ದಾಟ

    ಕುಲ್‍ದೀಪ್ ಯಾದವ್ ಆಲ್‍ರೌಂಡರ್ ಆಟ – ಭಾರತದ ಬಿಗಿ ಹಿಡಿತದಲ್ಲಿ ಬಾಂಗ್ಲಾ ಒದ್ದಾಟ

    ಢಾಕಾ: ಟೀಂ ಇಂಡಿಯಾದ (Team India) ಸ್ಪಿನ್ನರ್ ಕುಲ್‍ದೀಪ್ ಯಾದವ್ (Kuldeep Yadav) ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಕಮಾಲ್ ಮಾಡಿದ ಪರಿಣಾಮ ಮೊದಲ ಟೆಸ್ಟ್‌ನ (Test) 2ನೇ ದಿನದಾಟದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ.

    ಭಾರತ 404 ರನ್‍ಗಳಿಗೆ ಸರ್ವಪತನ ಕಾಣುತ್ತಿದ್ದಂತೆ ಬ್ಯಾಟಿಂಗ್‍ಗೆ ಆಗಮಿಸಿದ ಬಾಂಗ್ಲಾಕ್ಕೆ ಆರಂಭದಿಂದಲೇ ಭಾರತ ಬೌಲರ್‌ಗಳು ಕಾಡ ತೊಡಗಿದರು. ಆರಂಭದಲ್ಲಿ ವೇಗಿಗಳಾದ ಮೊಹಮ್ಮದ್ ಸಿರಾಜ್ (Siraj) ಮತ್ತು ಉಮೇಶ್ ಯಾದವ್ (Umesh Yadav) ಕಾಟ ಕೊಟ್ಟರೆ, ಬಳಿಕ ಕುಲ್‍ದೀಪ್ ಯಾದವ್ (Kuldeep Yadav) ಸ್ಪಿನ್ ಜಾದೂ ಮಾಡಿದರು. ಈ ಮೂವರ ಜುಗಲ್ ಬಂದಿಗೆ ಬಾಂಗ್ಲಾ ಬ್ಯಾಟ್ಸ್‌ಮ್ಯಾನ್‌ಗಳು ತಡಬಡಿಸಿದರು. ಬಾಂಗ್ಲಾ ಸರದಿಯಲ್ಲಿ ಜಾಕಿರ್ ಹಸನ್ 20 ರನ್ (45 ಎಸೆತ, 3 ಬೌಂಡರಿ), ಲಿಟ್ಟನ್ ದಾಸ್ 24 ರನ್ (30 ಎಸೆತ, 5 ಬೌಂಡರಿ) ಮತ್ತು ಮುಶ್ಫಿಕರ್ ರಹೀಮ್ ಸಿಡಿಸಿದ 28 ರನ್ (58 ಎಸೆತ, 3 ಬೌಂಡರಿ) ಹೆಚ್ಚಿನ ಗಳಿಕೆಯಾಗಿ ಕಂಡಿತು. ಇದನ್ನೂ ಓದಿ: ಕಿವೀಸ್ ಟೆಸ್ಟ್ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ಗುಡ್‌ಬೈ

    2ನೇ ದಿನದಾಟದ ಅಂತ್ಯಕ್ಕೆ 44 ಓವರ್‌ಗಳಲ್ಲಿ ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 271 ರನ್‍ಗಳ ಹಿನ್ನಡೆಯಲ್ಲಿದೆ. ಮೆಹಿದಿ ಹಸನ್ ಮಿರಾಜ್ ಅಜೇಯ 16 ರನ್ (35 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಎಬಾಡೋಟ್ ಹೊಸೈನ್ 13 ರನ್ (27 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಈ ಮೊದಲು ಮೊದಲ ದಿನದಾಟದಲ್ಲಿ 278 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ 2ನೇ ದಿನದಾಟ ಆರಂಭಿಸಿ. ಮೊದಲ ದಿನದ ಹೀರೋ ಶ್ರೇಯಸ್ ಅಯ್ಯರ್ ಹಿಂದಿನ ದಿನದ ಮೊತ್ತಕ್ಕೆ 4 ರನ್ ಸೇರಿಸಿ ಒಟ್ಟು 86 ರನ್ (192 ಎಸೆತ, 10 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಒಂದಾದ ಅಶ್ವಿನ್ ಮತ್ತು ಕುಲ್‍ದೀಪ್ ಭರ್ಜರಿ ಬ್ಯಾಟ್ ಬೀಸಿದರು. ಇದನ್ನೂ ಓದಿ: ಶತಕ ಸಿಡಿಸಿ ಅಪ್ಪನಂತೆ ಸಂಭ್ರಮಿಸಿದ ಅರ್ಜುನ್ ತೆಂಡೂಲ್ಕರ್

    ಅಶ್ವಿನ್-ಕುಲ್‍ದೀಪ್ ಕಮಾಲ್:
    ಬಾಂಗ್ಲಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ 8ನೇ ವಿಕೆಟ್‍ಗೆ 87 ರನ್ (200 ಎಸೆತ) ಜೊತೆಯಾಟವಾಡಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಶ್ವಿನ್ ಅರ್ಧಶತಕ 58 ರನ್ (113 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರೆ, ಕುಲ್‍ದೀಪ್ ಆಟ 40 ರನ್‌ಗೆ (114 ಎಸೆತ, 5 ಬೌಂಡರಿ) ಅಂತ್ಯ ಕಂಡಿತು. ಅಂತಿಮವಾಗಿ ಉಮೇಶ್ ಯಾದವ್ ಅವರ ಬಿರುಸಿನ 15 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ 113.5 ಓವರ್‌ಗಳ ಅಂತ್ಯಕ್ಕೆ 404 ರನ್‍ಗಳಿಗೆ ಆಲೌಟ್ ಆಯಿತು.

    Live Tv
    [brid partner=56869869 player=32851 video=960834 autoplay=true]

  • ಮೊದಲ ಟೆಸ್ಟ್‌ನಿಂದ ರೋಹಿತ್ ಹೊರಕ್ಕೆ – ಕನ್ನಡಿಗ ಕ್ಯಾಪ್ಟನ್

    ಮೊದಲ ಟೆಸ್ಟ್‌ನಿಂದ ರೋಹಿತ್ ಹೊರಕ್ಕೆ – ಕನ್ನಡಿಗ ಕ್ಯಾಪ್ಟನ್

    ಢಾಕಾ: ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಮೊದಲ ಟೆಸ್ಟ್ (Test) ಪಂದ್ಯದಿಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಕನ್ನಡಿಗ ಕೆ.ಎಲ್ ರಾಹುಲ್ (KL Rahul)  ಮುನ್ನಡೆಸಲಿದ್ದಾರೆ.

    ರೋಹಿತ್ ಶರ್ಮಾ ಎರಡನೇ ಏಕದಿನ ಪಂದ್ಯದ ವೇಳೆ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆ ಬಳಿಕ ಮೂರನೇ ಏಕದಿನ ಪಂದ್ಯ ಆಡಿರಲಿಲ್ಲ. ಇದೀಗ ಗಾಯದಿಂದ ಚೇತರಿಕೆ ಕಾಣದ ಹಿನ್ನೆಲೆ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ಇಶಾನ್ ಕಿಶನ್ ಒಂದೇ ದ್ವಿಶತಕಕ್ಕೆ ಹಲವು ದಾಖಲೆಗಳು ಉಡೀಸ್ – ಕೊಹ್ಲಿಗೆ ಥ್ಯಾಂಕ್ಸ್

    ಟೆಸ್ಟ್ ಸರಣಿ ಡಿ.14 ರಿಂದ ಆರಂಭವಾಗಲಿದೆ. ರೋಹಿತ್ ಬದಲಿಗೆ ಅಭಿಮನ್ಯು ಈಶ್ವರನ್ ತಂಡ ಸೇರಿಕೊಂಡಿದ್ದಾರೆ. ಈ ನಡುವೆ ಗಾಯದಿಂದ ಚೇತರಿಕೆ ಕಾಣದಿದ್ದಲ್ಲಿ 2ನೇ ಟೆಸ್ಟ್ ಪಂದ್ಯದಿಂದಲೂ ರೋಹಿತ್ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

    ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಭಾರತ ಸರಣಿ ಸೋಲು ಕಂಡಿತ್ತು. ಇದೀಗ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿದ್ದು, ಈಗಾಗಲೇ ಗಾಯದಿಂದಾಗಿ ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಬದಲು ನವದೀಪ್ ಸೈನಿ, ಸೌರಭ್ ಕುಮಾರ್ ಮತ್ತು ಜೈದೇವ್ ಉನದ್ಕತ್ ಅವರನ್ನು ಹೆಚ್ಚುವರಿಯಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸೂಪರ್‌ ಓವರ್‌ನಲ್ಲಿ ಸಿಕ್ಸರ್‌, ಬೌಂಡರಿ – ಆಸೀಸ್‌ ವಿರುದ್ಧ ಭಾರತಕ್ಕೆ 4 ರನ್‌ ರೋಚಕ ಜಯ

    ಟೀಂ ಇಂಡಿಯಾ:
    ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಸಿರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಸೌರಭ್ ಕುಮಾರ್, ಜಯದೇವ್ ಉನದ್ಕತ್.

    Live Tv
    [brid partner=56869869 player=32851 video=960834 autoplay=true]

  • ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ಪರ್ತ್: ಆಸ್ಟ್ರೇಲಿಯಾ ತಂಡದ ಲೆಜೆಂಡ್ ಕ್ರಿಕೆಟರ್ ರಿಕಿ ಪಾಂಟಿಂಗ್ (Ricky Ponting) ಕಾಮೆಂಟರಿ ಮಾಡುತ್ತಿರುವಾಗ ಆರೋಗ್ಯದಲ್ಲಿ ಏರುಪೇರು (Health Scare) ಕಂಡು ಬಂದು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ.

     

    ಆಸ್ಟ್ರೇಲಿಯಾ (Australia) ಹಾಗೂ ವೆಸ್ಟ್ ಇಂಡೀಸ್ (West Indies) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಖಾಸಗಿ ಮಾಧ್ಯಮದ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಪಾಂಟಿಂಗ್‍ಗೆ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮೆಂಟರಿ ಮಾಡುತ್ತಿರುವಾಗಲೇ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ತಕ್ಷಣ ವೈದ್ಯರು ಹೆಚ್ಚಿನ ನಿಗಾ ವಹಿಸಿದ್ದಾರೆ. ಮುಂದಿನ ಎರಡು ದಿನ ಕಾಮೆಂಟರಿ ಸೆಕ್ಷನ್‍ನಲ್ಲಿ ಪಾಂಟಿಂಗ್ ಇರಲ್ಲ ಎಂದು ಖಾಸಗಿ ಮಾಧ್ಯಮ ತಿಳಿಸಿದೆ. ಇದನ್ನೂ ಓದಿ: ದೇವರ ನಾಡಲ್ಲಿ ಐಪಿಎಲ್ ಮಿನಿ ಹರಾಜು – ಭಾರತದ 714 ಸೇರಿ ಒಟ್ಟು 991 ಆಟಗಾರರು ನೋಂದಣಿ

    ವೈದ್ಯರು ಪಾಂಟಿಂಗ್ ಅವರ ಹೃದಯದ ತಪಾಸಣೆ ನಡೆಸಿದ್ದು, ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ. ರಿಕಿ ಪಾಟಿಂಗ್ ಐಪಿಎಲ್‍ನಲ್ಲಿ ಡೆಲ್ಲಿ ಕಾಪಿಟಲ್ಸ್ ತಂಡದ ಕೋಚ್ ಆಗಿದ್ದು, ಮಿನಿ ಹರಾಜಿಗೂ ಮುನ್ನ ತಂಡ ಸೇರಿಕೊಳ್ಳುವ ಸಾಧ್ಯತೆ ಇತ್ತು. ಡಿ.23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಇದನ್ನೂ ಓದಿ: ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್

    Live Tv
    [brid partner=56869869 player=32851 video=960834 autoplay=true]