Tag: Tesla

  • ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    – 13 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನವದೆಹಲಿ: ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರುವಾಗಿದೆ. ಎಲಾನ್‌ ಮಸ್ಕ್‌ ಮತ್ತು ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ನೇಮಕಾತಿ ಆರಂಭವಾಗಿದ್ದು, 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಮಸ್ಕ್ ಅವರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ Inc. ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಟೆಸ್ಲಾ ಸಲಹೆಗಾರ, ಇನ್ಸೈಡ್‌ ಸೇಲ್ ಅಡ್ವೈಸರ್, ಕಸ್ಟಮರ್‌ ಸಪೋರ್ಟ್‌ ಸ್ಪೆಷಲಿಸ್ಟ್‌, ಕನ್ಸ್ಯೂಮರ್‌ ಎಂಗೇಜ್‌ಮೆಂಟ್‌ ಮ್ಯಾನೇಜರ್, ಆರ್ಡರ್‌ ಆಪರೇಷನ್ಸ್‌ ಸ್ಪೆಷಲಿಸ್ಟ್‌, ಸರ್ವೀಸ್‌ ಮ್ಯಾನೇಜರ್, ಬಿಸಿನೆಸ್‌ ಆಪರೇಷನ್ಸ್‌ ಅನಾಲಿಸ್ಟ್‌, ಸ್ಟೋರ್‌ ಮ್ಯಾನೇಜರ್, ಪಾರ್ಟ್ಸ್‌ ಅಡ್ವೈಸರ್, ಸರ್ವೀಸ್‌ ಅಡ್ವೈಸರ್‌, ಡೆಲಿವರಿ ಆಪರೇಷನ್ಸ್‌ ಸ್ಪೆಷಲಿಸ್ಟ್‌ ಮತ್ತು ಕಸ್ಟಮರ್‌ ಸಪೋರ್ಟ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹೆಚ್ಚಿನ ಆಮದು ಸುಂಕದ ಕಳವಳದಿಂದಾಗಿ EV ತಯಾರಕರು ಇಲ್ಲಿಯವರೆಗೆ ಭಾರತದಿಂದ ದೂರ ಉಳಿದಿದ್ದರು.

  • ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಭೇಟಿಯಾದ ಪ್ರಧಾನಿ ಮೋದಿ

    ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಭೇಟಿಯಾದ ಪ್ರಧಾನಿ ಮೋದಿ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಅವರನ್ನು ಭೇಟಿಯಾಗಿದ್ದಾರೆ.

    ವಾಷಿಂಗ್ಟನ್‌ನಲ್ಲಿರುವ ಬ್ಲೇರ್‌ ಹೌಸ್‌ನಲ್ಲಿ ಮಸ್ಕ್‌ ಕುಟುಂಬ ಸಮೇತ ಮಸ್ಕ್‌ ಅವರನ್ನ ಭೇಟಿಯಾಗಿದ್ದಾರೆ. ಇದೇ ವೇಳೆ ವಿಶೇಷ ಉಡುಗೊರೆಯನ್ನೂ ಮೋದಿಗೆ ನೀಡಿ ಮೋದಿಗೆ ಸ್ವಾಗತ ಕೋರಿದ್ದಾರೆ. ಬಳಿಕ ಬ್ಲೇರ್‌ ಹೌಸ್‌ನಲ್ಲೇ ಮಹತ್ವದ ವಿಚಾರಗಳ ಕುರಿತು ಬ್ಲೇರ್‌ ಹೌಸ್‌ನಲ್ಲಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಸಿಮೆಂಟ್ ಲಾರಿ, ಬುಲೆರೋ ಮುಖಾಮುಖಿ ಡಿಕ್ಕಿ – ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನ

    2 ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಫೆ.14ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್‌ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಇದು ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದೆ. ಆಮದು ಸುಂಕಗಳ ಮೇಲಿನ ಕ್ರಮಗಳ ನಡುವೆ ಟ್ರಂಪ್‌ ಅವರ ಭೇಟಿಗಾಗಿ ಮೋದಿ ಅಮೆರಿಕಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆ – ಪ್ರತಿಷ್ಠೆಯ ಕಣದಲ್ಲಿ ಸಂಸದ ಸುಧಾಕರ್ ಬೆಂಬಲಿಗರ ಜಯಭೇರಿ

    ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದರು ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯದ ವಿವಿಧ ಅಂಶಗಳನ್ನು ಚರ್ಚಿಸಿದರು. ಇದನ್ನೂ ಓದಿ: ಇಂದು ರಾತ್ರಿ 11:30ಕ್ಕೆ ಪರಸ್ಪರ ಸುಂಕ ಘೋಷಣೆ; ಕೊನೇ ಕ್ಷಣದಲ್ಲಿ ಕುತೂಹಲ ಹೆಚ್ಚಿಸಿದ ಟ್ರಂಪ್‌-ಮೋದಿ ಭೇಟಿ

  • ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಲಾಸ್‌ ಏಂಜಲೀಸ್‌: ಸ್ಟೀರಿಂಗ್ ವೀಲ್‌, ಪೆಡಲ್‌ ಹೊಂದಿರದ ಸ್ವಯಂ-ಚಾಲನೆ ಮಾಡುವ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಆಧಾರಿತ ಎಲೆಕ್ಟ್ರಿಕ್‌ ರೋಬೋಟ್ಯಾಕ್ಸಿಯನ್ನು (Robotaxi) ಟೆಸ್ಲಾ (Tesla) ಕಂಪನಿ ಬಿಡುಗಡೆ ಮಾಡಿದೆ.

    ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಇಒ ಎಲಾನ್‌ ಮಸ್ಕ್‌ (Elon Musk), ಈ ಕಾರಿನ ಬೆಲೆ 30 ಸಾವಿರ ಡಾಲರ್‌(ಅಂದಾಜು 25 ಲಕ್ಷ ರೂ.) ಅಥವಾ ಅದಕ್ಕಿಂತಲೂ ಕಡಿಮೆ ಇರಲಿದೆ. ವೈರ್‌ಲೆಸ್ ಚಾರ್ಜ್‌ ಮಾಡಬಹುದಾದ ಈ ಕಾರು ಮಾನವ ಚಾಲಿತ ಕಾರುಗಳಿಗಿಂದ 10 ರಿಂದ 20 ಪಟ್ಟು ಸುರಕ್ಷಿತವಾಗಿರಲಿದೆ ಎಂದು ತಿಳಿಸಿದರು.

    ಎರಡು ಆಸನ, ಚಿಟ್ಟೆಯಂತೆ ತೆರೆಯಬಹುದಾದ ಬಾಗಿಲು(Butterfly Doors) ಹೊಂದಿರುವ ಈ ಕಾರಿನ ಉತ್ಪಾದನೆ 2026ರಲ್ಲಿ ಆರಂಭವಾಗಲಿದೆ. ಮಾರಾಟ ಜಾಸ್ತಿಯಾದಂತೆ ಬೆಲೆಯೂ ಕಡಿಮೆಯಾಗಲಿದೆ. 2027ರಲ್ಲಿ ಈ ಕಾರು ಮಾರುಕಟ್ಟೆಯಲ್ಲಿ (Car Market) ಲಭ್ಯವಿರಲಿದೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಸುಮಾರು 10 ವರ್ಷದ ಹಿಂದೆ ಮಸ್ಕ್‌ ಸ್ವಯಂ ಚಾಲನಾ ಸಾಮರ್ಥ್ಯ ಇರುವ ರೋಬೋಟ್ಯಾಕ್ಸಿಯ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ಈ ಕಾರ್ಯಕ್ರಮದಲ್ಲೇ ದಿ ರೋಬೋವನ್ (The Robovan) ಎಂದು ಕರೆಯುವ ಚಾಲಕರ ರಹಿತ ಪ್ರಯಾಣಿಕ ವಾಹನವನ್ನು ಸಹ ಪ್ರದರ್ಶಿಸಲಾಯಿತು. ಈ ವ್ಯಾನಿನಲ್ಲೂ ಸ್ಟೀರಿಂಗ್ ವೀಲ್, ಪೆಡಲ್ ಇಲ್ಲ. ಇದರಲ್ಲಿ ಇದು 20 ಜನರು ಕುಳಿತುಕೊಂಡು ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೇ ಸರಕುಗಳನ್ನು ಸಾಗಿಸುವ ವ್ಯಾನ್‌ ಆಗಿಯೂ ಪರಿವರ್ತಿಸಬಹುದು.

    ಎಲಾನ್‌ ಮಸ್ಕ್‌ ಅವರು ಈ ವ್ಯಾನ್‌ ಉತ್ಪಾದನೆ ಸೇರಿದಂತೆ ಬಿಡುಗಡೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಲಿಲ್ಲ.

  • ಇವಿಎಂ ಹ್ಯಾಕ್ ಮಾಡಬಹುದು – ಭಾರತದಲ್ಲಿ ಕಿಚ್ಚು ಹೊತ್ತಿಸಿದ ಮಸ್ಕ್!

    ಇವಿಎಂ ಹ್ಯಾಕ್ ಮಾಡಬಹುದು – ಭಾರತದಲ್ಲಿ ಕಿಚ್ಚು ಹೊತ್ತಿಸಿದ ಮಸ್ಕ್!

    – ನಿಮಗೆ ಟ್ಯೂಷನ್ ತೆಗೆದುಕೊಳ್ತೇವೆ ಅಂತ ಬಿಜೆಪಿ ತಿರುಗೇಟು

    ನವದೆಹಲಿ: ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ (Elon Musk) ಅನುಮಾನ ವ್ಯಕ್ತಪಡಿಸಿದ್ದಾರೆ. ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂಗಳನ್ನು ಹ್ಯಾಕ್ (Hacking) ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಮಸ್ಕ್ ಹೇಳಿದ್ದಾರೆ.

    ಮಸ್ಕ್ ಹೇಳಿಕೆಗೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿರುಗೇಟು ನೀಡಿದ್ದಾರೆ. ಸುರಕ್ಷಿತವಾಗಿರುವ ಡಿಜಿಟಲ್ ಹಾರ್ಡ್ವೇರ್ ಅನ್ನು ಯಾರೂ ತಯಾರಿಸಲು ಆಗುವುದಿಲ್ಲ. ಇವಿಎಂಗೆ (EVM) ಇಂಟರ್‌ನೆಟ್, ಬ್ಲೂಟೂತ್, ವೈಫೈ ಸಂಪರ್ಕ ಕೂಡ ಇಲ್ಲ. ಹ್ಯಾಕ್ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್ ತೆರೆಯೋಣ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ಮಸ್ಕ್ ಹೇಳಿಕೆಗೆ ದನಿಗೂಡಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ಭಾರತದಲ್ಲಿನ ಇವಿಎಂಗಳು ಕಪ್ಪು ಪೆಟ್ಟಿಗೆಗಳಾಗಿವೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿಯಿಲ್ಲ ಅಂತ ಮುಂಬೈನಲ್ಲಿ 48 ಮತಗಳ ಅಂತರದಿಂದ ಸೋತ ಕಾಂಗ್ರೆಸ್‌ನ ಅಭ್ಯರ್ಥಿ ಉದಾಹರಣೆ ನೀಡಿದ್ದಾರೆ.

    ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಡಿಎಂಕೆ ಪಕ್ಷಗಳು ಕೂಡ ಮಸ್ಕ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿವೆ. ಇವಿಎಂಗಳನ್ನು ತಿದ್ದುವ, ತಿರುಚುವ, ರಿಗ್ಗಿಂಗ್ ಮಾಡುವ ಸಾಧ್ಯತೆ ಇದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

  • ಚೀನಾಗೆ ಮಸ್ಕ್‌ ಭೇಟಿ; ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಬಿಡುಗಡೆ ಆಗುತ್ತಾ? ಚೀನಾ ಆಯ್ಕೆ ಏಕೆ?

    ಚೀನಾಗೆ ಮಸ್ಕ್‌ ಭೇಟಿ; ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಬಿಡುಗಡೆ ಆಗುತ್ತಾ? ಚೀನಾ ಆಯ್ಕೆ ಏಕೆ?

    ದು ಆಟೊಮ್ಯಾಟಿಕ್ ಕಾಲ. ನೀರಿನ ತೊಟ್ಟಿಯ ನೀರು ನಿಯಂತ್ರಣದಿಂದ ಹಿಡಿದು ವಿಮಾನ, ಮೆಟ್ರೋ ರೈಲು ವರೆಗೂ ಎಲ್ಲವೂ ಆಟೊಮ್ಯಾಟಿಕ್ ಆಗುತ್ತಿದೆ. ಆದರೆ ಈಗ ಸೆಲ್ಫ್ ಡ್ರೈವಿಂಗ್ ವಾಹನ ತಂತ್ರಜ್ಞಾನ ಹೆಚ್ಚು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಎಲೋನ್ ಮಸ್ಕ್ (Elon Musk) ಚೀನಾಕ್ಕೆ ಭೇಟಿ ನೀಡಿರುವುದು. ಚೀನಾಗೆ ಅಚ್ಚರಿಯ ಭೇಟಿ ಕೊಟ್ಟಿರುವ ಮಸ್ಕ್, ಅಲ್ಲಿನ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ವಾಹನ ತಂತ್ರಜ್ಞಾನದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಚೀನಾವು ಜಾಗತಿಕ ಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ಇಲ್ಲಿ ಟೆಸ್ಲಾ ಕಂಪನಿಯು ತನ್ನ ಸಂಪೂರ್ಣ ಸ್ವಯಂಚಾಲಿತ ವಾಹನ (Full Self-Driving) ತಂತ್ರಜ್ಞಾನ ಪರಿಚಯಿಸುವ ಸಾಧ್ಯತೆ ಇದೆ. ಅದಕ್ಕಾಗಿ ಮಸ್ಕ್ ಇಲ್ಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ತನ್ನ ಕಂಪನಿ ಮಾರುಕಟ್ಟೆ ವಿಸ್ತರಣೆಗಾಗಿ ಮಸ್ಕ್, ಚೀನಾದ ಪ್ರಧಾನಿ ಲೀ ಕಿಯಾಂಗ್ ಜೊತೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    ಸ್ವಯಂಚಾಲಿತ ವಾಹನ ತಂತ್ರಜ್ಞಾನ ಇಂದು ನಿನ್ನೆಯ ಮಾತಲ್ಲ. ಹತ್ತಾರು ವರ್ಷಗಳಿಂದ ತಂತ್ರಜ್ಞಾನದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ದೈತ್ಯ ಕಂಪನಿಗಳು ಸಾಕಷ್ಟು ಪ್ರಯೋಗಗಳನ್ನೂ ನಡೆಸಿವೆ, ನಡೆಸುತ್ತಿವೆ. ಆ ಸಾಲಿನಲ್ಲಿ ಟೆಸ್ಲಾ ಕಂಪನಿ ಕೂಡ ಇದೆ. ಹಾಗಾದ್ರೆ ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನ ಹಿನ್ನೆಲೆ, ಅಭಿವೃದ್ಧಿ ಮತ್ತು ಸಾಧಕ-ಬಾಧಕಗಳೇನು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

    ಗೂಗಲ್ ಪ್ರಯೋಗ ವಿಫಲ
    ಇದು 12 ವರ್ಷಗಳಷ್ಟು ಹಿಂದಿನ ಮಾತು. ಸ್ಟೀರಿಂಗ್ ಮತ್ತು ಪೆಡಲ್‌ಗಳೇ ಇಲ್ಲದ ಸೆಲ್ಫ್ ಡ್ರೈವಿಂಗ್ ವ್ಯವಸ್ಥೆಯನ್ನು ಗೂಗಲ್ ಅಭಿವೃದ್ಧಿಪಡಿಸಿತ್ತು. ಕಾರೊಂದಕ್ಕೆ ಅದನ್ನು ಅಳವಡಿಸಿ ಅಮೆರಿಕದಲ್ಲಿ ಪ್ರಾಯೋಗಿಕ ಚಾಲನೆ ನಡೆಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಸೆಲ್ಫ್ ಡ್ರೈವಿಂಗ್ ಕಾರು ಬಸ್‌ವೊಂದಕ್ಕೆ ತಾಗಿ ಮುಂದೆ ಸಾಗಿತ್ತು. ಹೀಗಾಗಿ ಪ್ರಯೋಗ ವಿಫಲವಾಯಿತು. ಇದನ್ನೂ ಓದಿ: ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು? 

    ವಿಮಾನ ಅಪಘಾತ
    ಆಟೊಪೈಲಟ್‌ಗೆ ಮಿತಿ ಇದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದಿದೆ. ಬ್ರೆಜಿಲ್‌ನಿಂದ ಫ್ರಾನ್ಸ್‌ಗೆ ಹೊರಟಿದ್ದ ವಿಮಾನ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡಿತ್ತು. ಪತನಕ್ಕೂ ಮುನ್ನ ಆಟೊಪೈಲಟ್ ಮೋಡ್‌ನಲ್ಲಿತ್ತು. ವಿಮಾನ ಆಟೊಪೈಲಟ್ ಮೋಡ್‌ನಲ್ಲಿದ್ದಾಗ ಸಂವೇದಕಗಳು ವೇಗದ ಪ್ರಮಾಣವನ್ನು ತಪ್ಪಾಗಿ ಗ್ರಹಿಸಿದ್ದವು. ವೇಗ ಹೆಚ್ಚಾದಾಗ ಆಟೋ ಪೈಲಟ್ ವ್ಯವಸ್ಥೆ ತಕ್ಷಣವೇ ಬಂದ್ ಆಗುತ್ತದೆ.

    ಟೆಲ್ಸಾ ಕಾರಿಗೆ ಅಪಘಾತ!
    ಇದೇ ಹೊತ್ತಿನಲ್ಲಿ ಅರೆ ಸ್ವಯಂಚಾಲಿತ ಟೆಕ್ನಾಲಜಿ ಇರುವ ಕಾರನ್ನು ಟೆಲ್ಸಾ ಬಿಡುಗಡೆ ಮಾಡಿತ್ತು. ಆಟೊಪೈಲಟ್ ಮೋಡ್‌ನಲ್ಲಿ ಚಲಿಸುತ್ತಿದ್ದ ಟೆಲ್ಸಾ ಕಾರಿನಲ್ಲಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದ. ಇಂತಹ ಕೆಲ ಘಟನೆಗಳು ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನಕ್ಕೆ ಸವಾಲಾಗಿವೆ. ಆದರೂ ಸುಧಾರಿತ ತಂತ್ರಜ್ಞಾನದ ಪ್ರಯೋಗಗಳು ನಡೆಯುತ್ತಲೇ ಇವೆ.

    ಎಫ್‌ಎಸ್‌ಡಿ ಎಂದರೇನು?
    ಡ್ರೈವರ್ ಅಸಿಸ್ಟೆಂಟ್ ವೈಶಿಷ್ಟ್ಯಗಳನ್ನು ಆಟೋಪೈಲಟ್ ಅಥವಾ ಎಫ್‌ಎಸ್‌ಡಿ ಎಂದು ಟೆಸ್ಲಾ ಕರೆಯುತ್ತದೆ. ಆದರೆ ವಾಹನ ಚಲನೆಯಲ್ಲಿ ಸಂಪೂರ್ಣ ಸ್ವಾಯತ್ತವಾಗಿರುವುದಿಲ್ಲ. ಸಕ್ರಿಯ ಚಾಲಕ ಮೇಲ್ವಿಚಾರಣೆಯ ಅಗ್ಯವಿದೆ. ಎಫ್‌ಎಸ್‌ಡಿ ಆಟೋಪೈಲಟ್ ಸಾಫ್ಟ್‌ವೇರ್‌ನ ಅತ್ಯಂತ ಸ್ವಾಯತ್ತ ಆವೃತ್ತಿಯಾಗಿದೆ. ಸ್ವಯಂ ಪಾರ್ಕಿಂಗ್, ಸ್ವಯಂ ಪಥ ಬದಲಾವಣೆ, ಟ್ರಾಫಿಕ್ ನ್ಯಾವಿಗೇಷನ್ ಸೇರಿ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಇದನ್ನೂ ಓದಿ: ಎಲೋನ್‌ ಮಸ್ಕ್‌ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ

    2020 ರಲ್ಲೇ ಚೀನಾದಲ್ಲಿ ಟೆಸ್ಲಾ ಘಟಕ
    ಟೆಸ್ಲಾವು (Tesla) 2020 ರಲ್ಲೇ ಶಾಂಘೈನಲ್ಲಿ 58 ಸಾವಿರ ಕೋಟಿ ವೆಚ್ಚದಲ್ಲಿ ತನ್ನ ಘಟಕ ಸ್ಥಾಪಿಸಿತು. ಬಳಿಕ ಚೀನಾದಲ್ಲಿ ಟೆಸ್ಲಾ ಕಂಪನಿ ಕಾರುಗಳು ಜನಪ್ರಿಯವಾದವು. ಆದರೂ ಸ್ವಯಂಚಾಲಿತ ಪಥ ಬದಲಾವಣೆಯಂತಹ ಕಾರ್ಯಾಚರಣೆಗಳಿಗೆ ಸಿಸ್ಟಮ್ ಅನ್ನು ಟೆಸ್ಲಾ ಸೀಮಿತಗೊಳಿಸಿದೆ.

    ಚೀನಾದಲ್ಲಿ ಎಫ್‌ಎಸ್‌ಡಿ ಲಭ್ಯತೆಯು ಟೆಸ್ಲಾಗೆ ವಿಶ್ವದ ಅತಿದೊಡ್ಡ ಆಟೋ ಮಾರುಕಟ್ಟೆಯಲ್ಲಿ ಸ್ಥಳೀಯ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಅನುವು ಮಾಡಿಕೊಡುತ್ತದೆ. ಟೆಸ್ಲಾ ಇಲ್ಲಿಯವರೆಗೆ ಚೀನಾದಲ್ಲಿ 17 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

    ಟೆಸ್ಲಾ ವಾಹನ ಮಾರಾಟವು ಸುಮಾರು 4 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿತ ಕಂಡಿತು. ಕಂಪನಿಯು ಎರಡನೇ ತ್ರೈಮಾಸಿಕದಲ್ಲಿ ತನ್ನ ಜಾಗತಿಕ ಉದ್ಯೋಗಿಗಳ ಪೈಕಿ ಶೇ.10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತು. ಅಮೆರಿಕ, ಚೀನಾ ಮತ್ತು ಯೂರೋಪ್ ಸೇರಿದಂತೆ ಪ್ರಮುಖ ಮಾರುಕಟ್ಟೆಯಲ್ಲಿ ವಾಹನಗಳ ಬೆಲೆ ಕಡಿತಗೊಳಿಸಿತು. ಇದನ್ನೂ ಓದಿ: ಮಸ್ಕ್‌ನ ಸ್ಪೇಸ್‍ಎಕ್ಸ್ ರಾಕೆಟ್‍ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ

    ಬೀಜಿಂಗ್‌ನಲ್ಲಿ ಆಟೊ ಶೋ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚೀನಾದ ಆಹ್ವಾನದ ಮೇರೆಗೆ ಮಸ್ಕ್ ಚೀನಾಗೆ ಭೇಟಿ ನೀಡಿದ್ದಾರೆ.

    ಚೀನಾ ಆಯ್ಕೆ ಏಕೆ?
    ಟೆಸ್ಲಾ ಕಂಪನಿಯು ನಾಲ್ಕು ವರ್ಷಗಳ ಹಿಂದೆಯೇ ಸಂಪೂರ್ಣ ಸ್ವಯಂ ಚಾಲಿತ (ಎಫ್‌ಎಸ್‌ಡಿ) ಆಟೋಪೈಲಟ್‌ ಸಾಫ್ಟ್‌ವೇರನ್ನು ಹೊರ ತಂದಿದೆ. ಆದರೂ ಚೀನಾದಲ್ಲಿ (China) ಅದನ್ನು ಬಳಕೆಗೆ ಬಿಡುಗಡೆ ಮಾಡಿಲ್ಲ. ಎಫ್‌ಎಸ್‌ಡಿ ಬಿಡುಗಡೆಗೆ ಗ್ರಾಹಕರು ಮಸ್ಕ್‌ ಅವರಲ್ಲಿ ಆಗ್ರಹಿಸಿದ್ದಾರೆ. ಅದಕ್ಕೆ ಮಸ್ಕ್‌ ಸಕಾರಾತ್ಮವಾಗಿಯೇ ಸ್ಪಂದಿಸಿದ್ದರು. ಶಾಂಘೈ ಘಟಕದಲ್ಲಿ ಟೆಸ್ಲಾ ಮಾಡೆಲ್‌ 3 ಮತ್ತು ಮಾಡೆಲ್‌ ವೈ ಸೇರಿ ವರ್ಷಕ್ಕೆ ಒಟ್ಟು 10 ಲಕ್ಷ ಎಲೆಕ್ಟ್ರಿಕ್‌ ಕಾರುಗಳನ್ನು ತಯಾರಿಸುತ್ತಿದೆ. ಸ್ವಯಂ ಚಾಲಿತ ತಂತ್ರಾಂಶಕ್ಕೆ ರಸ್ತೆ, ನಿಯಮಗಳ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಟೆಸ್ಲಾ ಚೀನಾದಲ್ಲಿ 2021ರಿಂದ ಮಾಹಿತಿ ಕಲೆ ಹಾಕಿದೆ. ಅಲ್ಗಾರಿದಮ್‌ನ ತರಬೇತಿಗಾಗಿ ಆ ಮಾಹಿತಿಯನ್ನು ವರ್ಗಾಯಿಸಲು ಸರ್ಕಾರದ ಅನುಮೋದನೆಗಾಗಿ ಮಸ್ಕ್ ಕೋರಿದ್ದಾರೆ.

  • ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು? 

    ಮಸ್ಕ್‌ಗೆ ಭಾರತದ ಮಾರುಕಟ್ಟೆ ಮೇಲೇಕೆ ಕಣ್ಣು? 

    – ಏನಿದು ಹೊಸ ಇವಿ ನೀತಿ?

    ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಹಾಗೂ ಉದ್ಯಮ ಸ್ನೇಹಿ ನೀತಿಗಳಿಂದಾಗಿ ಭಾರತದಲ್ಲಿ ಉದ್ಯಮಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಇನ್ನೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Cars) ಕಂಪನಿ ತೆರೆಯಲು ಎಲೋನ್ ಮಸ್ಕ್‌ (Elon Musk) ಒಡೆತನದ ಟೆಸ್ಲಾ ಸಹ ಮನಸ್ಸು ಮಾಡಿದೆ. ಈ ಬಗ್ಗೆ ಚರ್ಚೆಯಾಗುತ್ತಿದ್ದು, ಭಾರತದ ರಿಲಯನ್ಸ್ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ. ತೆಲಂಗಾಣ, ಗುಜರಾತ್ ಅಥವಾ ತಮಿಳುನಾಡಿನಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಜಾಗ ನೋಡಲು ಟೆಸ್ಲಾ ತಂಡವು ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿತ್ತು. ಇದೀಗ ನಿಗದಿಯಾದ ದಿನಾಂಕ ಮುಂದೆ ಹಾಕಲಾಗಿದೆ.

    ಟೆಸ್ಲಾ (Tesla) ಮಸ್ಕ್ ಅವರ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆಯಾಗಿದ್ದು, ಅಮೆರಿಕ ಮತ್ತು ಚೀನಾದಲ್ಲಿ ಮಾರಾಟದ ನಿಧಾನಗತಿಯ ಮಧ್ಯೆ ಹೊಸ ಮಾರುಕಟ್ಟೆಗಳನ್ನು ಹುಡುಕಾಟದಲ್ಲಿದೆ. ಭಾರತವು ಟೆಸ್ಲಾಗೆ ಸಂಭಾವ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಸ್ಥಳೀಯವಾಗಿ ಹೂಡಿಕೆ ಮಾಡುವ ಕಂಪನಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಎಲೆಕ್ಟ್ರಿಕ್ ಕಾರುಗಳ ಉತ್ಪಾದನ ಘಟಕ ಆರಂಭಿಸಲು ಟೆಸ್ಲಾ ಮುಂದಾಗಿದೆ. 

    ಕೇಂದ್ರ ಸರ್ಕಾರ ಆಮದು ಮಾಡಿಕೊಂಡ ಕಾರುಗಳ ಮೇಲಿನ ತೆರಿಗೆಗಳನ್ನು ಸರ್ಕಾರ ಕಡಿಮೆ ಮಾಡಿದ ನಂತರ ಭಾರತದಲ್ಲಿಕಾರುಗಳ ಮಾರುಕಟ್ಟೆ ಸ್ಥಾಪನೆಗೆ ಟೆಸ್ಲಾ ಯೋಚಿಸಿದೆ. ಇದೇ ಕಾರಣಕ್ಕೆ ಟೆಸ್ಲಾ ಸಂಸ್ಥೆ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಲು ಹವಣಿಸುತ್ತಿದೆ. ಟೆಸ್ಲಾ ಮಾತ್ರವಲ್ಲದೇ ಮಸ್ಕ್ ಒಡೆತನದ ಸ್ಟಾರ್‌ ಲಿಂಕ್ ಕೂಡ ಭಾರತದಲ್ಲಿ ಸೇವೆ ನೀಡಲು ಮುಂದಾಗಿದ್ದು ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ 

    ಭಾರತ ಪ್ರವಾಸ ಮುಂದೂಡಿದ ಮಸ್ಕ್

    ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಎಲೋನ್ ಮಸ್ಕ್ ಇದೀಗ ತಮ್ಮ ಈ ಪ್ರವಾಸವನ್ನು ಮುಂದೂಡಿದ್ದಾರೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡುವ ಕುರಿತು ಖಚಿತ ಪಡಿಸಿದ್ದ ಅವರು, ಇದೀಗ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದೃಢಪಡಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಅವರು ಭಾರತಕ್ಕೆ ಬರುವ ಸಾಧ್ಯತೆ ಇದೆ. ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ 2500 ಕೋಟಿ ರೂ. (2ರಿಂದ 3 ಬಿಲಿಯನ್ ಡಾಲರ್) ಹೂಡಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಮಸ್ಕ್ ಅವರ ಸ್ಯಾಟಲೈಟ್ ಇಂಟರ್‌ನೆಟ್ ಸೇವೆ ಸ್ಟಾರ್‌ಲಿಂಕ್ ಪ್ರವೇಶವನ್ನು ಘೋಷಿಸುವ ಸಾಧ್ಯತೆ ಇದೆ.‌

    ಟೆಸ್ಲಾದಿಂದ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ

    ಟೆಸ್ಲಾ ಹೊಸ ಆವಿಷ್ಕಾರ ಮತ್ತು ಅಭಿವೃದ್ಧಿ ತಂತ್ರಜ್ಞಾನಗಳು ಗುಣಮಟ್ಟಗಳು ಭಾರತೀಯ ಗ್ರಾಹಕರನ್ನು ಸೆಳೆಯಲಿದೆ. ಭವಿಷ್ಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಟೆಸ್ಲಾ ಇವಿ ಲಭ್ಯವಾಗುವ ಸಾಧ್ಯತೆ ಇದೆ. ಜಾಗತಿಕ ಬ್ರ್ಯಾಂಡ್ ಭಾರತಕ್ಕೆ ಪ್ರವೇಶ ಮಾಡುವುದರಿಂದ ಇವಿ ಮಾರುಕಟ್ಟೆ ಮುನ್ನಡೆಸುವ ಜೊತೆಗೆ ವಿಸ್ತರಣೆಗೆ ಕಾರಣವಾಗಲಿದೆ. ಭಾರತದಲ್ಲಿ 2030ರ ಹೊತ್ತಿಗೆ ಮಾರುಕಟ್ಟೆ ಮೌಲ್ಯ 40%ರಷ್ಟು ಹೆಚ್ಚಲಿದೆ. ಇದರಿಂದಾಗಿ ಉತ್ಪಾದನೆ ಮತ್ತು ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಸಹ ಸೃಷ್ಟಿಯಾಗಲಿದೆ.

    ಮೂಲಗಳ ಪ್ರಕಾರ ಮಹಾರಾಷ್ಟ್ರ ಮತ್ತು ಗುಜರಾತ್ ಎರಡೂ ರಾಜ್ಯ ಸರ್ಕಾರಗಳು ಟೆಸ್ಲಾಗೆ ಭೂಮಿ ನೀಡಲು ಮುಂದೆ ಬಂದಿವೆ. ಇದು ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಲ್ಯಾಂಡ್‍ಸ್ಕೇಪ್‍ನಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಪ್ರಸ್ತಾವಿತ ಉತ್ಪಾದನಾ ಘಟಕವು ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದ್ದು, ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳಿಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಕ್ರಮವು ಭಾರತದ ಹೊಸ ಇವಿ ನೀತಿಯೊಂದಿಗೆ ಹೊಂದಿಕೆಯಾಗುತ್ತದೆ. ಇದು ಸುಸ್ಥಿರ ಸಾರಿಗೆ ಉತ್ತೇಜಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಕಾರಿ ಆಗಲಿದೆ. 

    ಏನಿದು ಹೊಸ ಇವಿ ನೀತಿ

    ಸರ್ಕಾರದ ಇವಿ ಯೋಜನೆಯಡಿ ಭಾರತವನ್ನು ಇವಿ ಕಾರು ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವ ಗುರಿಯನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನವನ್ನು ಹೊಂದಿದ ಇವಿಗಳ ಉತ್ಪಾದನಾ ತಾಣವಾಗಿ ಭಾರತ ಹೆಸರು ಮಾಡಲಿದೆ. ಜಾಗತಿಕ ತಯಾರಕರಿಂದ ಹೂಡಿಕೆಗಳನ್ನು ಆಕರ್ಷಿಸುವುದು, ಭಾರತೀಯ ಗ್ರಾಹಕರಲ್ಲಿ ಸುಧಾರಿತ ತಂತ್ರಜ್ಞಾನದ ಅಳವಡಿಕೆ ಹೆಚ್ಚಿಸುವುದು. ದೇಶದ ಮೇಕ್ ಇನ್ ಇಂಡಿಯಾ ಮತ್ತಷ್ಟು ವಿಸ್ತರಿಸುವುದು ಹಾಗೂ ಉತ್ತೇಜಿಸುವುದು ಹೊಸ ಇವಿ ನೀತಿಯ ಉದ್ದೇಶವಾಗಿದೆ. 

    ಹೊಸ ನೀತಿಯಡಿ ಕಂಪನಿಗಳು ದೇಶದಲ್ಲಿ ಕನಿಷ್ಠ 4,150 ಕೋಟಿ ರೂ. ಹೂಡಿಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸ್ಥಳೀಯವಾಗಿ ಕನಿಷ್ಠ 25%ರಷ್ಟು ಬಿಡಿಭಾಗಗಳನ್ನು ಸಂಗ್ರಹಿಸುವುದನ್ನೂ ಕಡ್ಡಾಯ ಮಾಡಲಾಗಿದ್ದು, ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಟೆಸ್ಲಾದ ಮಾರುಕಟ್ಟೆ ಪ್ರವೇಶ ಸುಲಭವಾಗಿದೆ ಎಂದು ವಿಶ್ಲೇಷಿಸಲಾಗಿದೆ.

    ಈ ಅವಶ್ಯಕತೆಗಳನ್ನು ಪೂರೈಸುವ ಕಂಪನಿಗಳು 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳನ್ನು ಕೇವಲ 15%ರಷ್ಟು ಆಮದು ಸುಂಕದಲ್ಲಿ ಆಮದು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ವರ್ಷಕ್ಕೆ 8,000 ಇವಿಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಸದ್ಯ ಭಾರತವು ಆಮದು ಮಾಡಿದ ಕಾರುಗಳ ಮೇಲೆ ಅವುಗಳ ಮೌಲ್ಯವನ್ನು ಅವಲಂಬಿಸಿ 70%ರಿಂದ 100%ರಷ್ಟು ತೆರಿಗೆಯನ್ನು ವಿಧಿಸುತ್ತಿದೆ.

    ಹೊಸ ಇವಿ ನೀತಿಯ ಮುಖ್ಯಂಶಗಳು

    * ಕನಿಷ್ಠ ಹೂಡಿಕೆ: 4,150 ಕೋಟಿ ರೂ., ಗರಿಷ್ಠ ಹೂಡಿಕೆಯ ಮೇಲೆ ಯಾವುದೇ ಮಿತಿಯಿಲ್ಲ.

    * ಉತ್ಪಾದನೆ ಗಡುವು: ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು 3 ವರ್ಷ ಮತ್ತು ಇ-ವಾಹನಗಳ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲು ಹಾಗೂ 50%ರಷ್ಟು ದೇಶೀಯ ಮೌಲ್ಯ ಸೇರ್ಪಡೆ (ಡಿವಿಎ) ಅನ್ನು ಸಾಧಿಸಲು ಗರಿಷ್ಠ 5 ವರ್ಷಗಳು.

    * ಉತ್ಪಾದನೆಯ ಸಮಯದಲ್ಲಿ ದೇಶೀಯ ಮೌಲ್ಯ ಸೇರ್ಪಡೆ (ಡಿವಿಎ): 3ನೇ ವರ್ಷಕ್ಕೆ  25 %ಮತ್ತು 5ನೇ ವರ್ಷದಲ್ಲಿ 50%ರಷ್ಟು ಸ್ಥಳೀಯ ಬಿಡಿಭಾಗಗಳ ಸಂಗ್ರಹವನ್ನು ಸಾಧಿಸಬೇಕು.

    * 15%ರಷ್ಟು ಕಸ್ಟಮ್ಸ್ ಸುಂಕ ವಿನಾಯಿತಿಯು 3ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಾಹನದ ಮೇಲೆ ಒಟ್ಟು 5 ವರ್ಷಗಳ ಅವಧಿಗೆ ಅನ್ವಯವಾಗುತ್ತದೆ. ಇದಕ್ಕಾಗಿ ತಯಾರಕರು 3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಬೇಕಾಗುತ್ತದೆ.

    * 800 ಮಿಲಿಯನ್ ಡಾಲರ್ ಅಂದರೆ 6,630 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಹೂಡಿಕೆ ಮಾಡಿದಲ್ಲಿ ವರ್ಷಕ್ಕೆ ಗರಿಷ್ಠ 8,000ದಂತೆ 40,000 ಇವಿಗಳ ಆಮದಿಗೆ ಅನುಮತಿ ನೀಡಲಾಗುತ್ತದೆ. ಸುಂಕ ವಿನಾಯಿತಿ ಮೊತ್ತವು ಮಾಡಿದ ಹೂಡಿಕೆ ಅಥವಾ 6,484 ಕೋಟಿ ರೂ. (ಪಿಎಲ್‍ಐ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ) ನಡುವೆ ಯಾವುದು ಕಡಿಮೆಯೋ ಅದಕ್ಕೆ ಸೀಮಿತವಾಗಿರುತ್ತದೆ.

    * ಆಮದು ಸುಂಕ ವಿನಾಯಿತಿಗೆ ಬದಲಾಗಿ ಕಂಪನಿಯು ಮಾಡುವ ಹೂಡಿಕೆಯ ಬದ್ಧತೆಗೆ ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ.

    * ಯೋಜನೆಯ ಮಾರ್ಗಸೂಚಿಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಡಿವಿಎ ಮತ್ತು ಕನಿಷ್ಠ ಹೂಡಿಕೆ ಮಾನದಂಡಗಳನ್ನು ಸಾಧಿಸದಿದ್ದಲ್ಲಿ ಬ್ಯಾಂಕ್ ಗ್ಯಾರಂಟಿಯನ್ನು ವಶಕ್ಕೆ ಪಡೆಯಲಾಗುತ್ತದೆ.

    *ಸ್ಥಳೀಯವಾಗಿ ಕನಿಷ್ಠ 25%ರಷ್ಟು ಬಿಡಿಭಾಗಗಳನ್ನು ಸಂಗ್ರಹಿಸುವುದನ್ನೂ ಕಡ್ಡಾಯ ಮಾಡಿದ ಸರ್ಕಾರ

    *ಹೀಗೆ ಮಾಡಿದಲ್ಲಿ ಕೇವಲ 15%ರಷ್ಟು ಆಮದು ಸುಂಕ ನೀಡಿ ಕಾರುಗಳನ್ನು ಆಮದು ಮಾಡಿಕೊಳ್ಳಲು ಅವಕಾಶ 

  • ಎಲೋನ್‌ ಮಸ್ಕ್‌ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ

    ಎಲೋನ್‌ ಮಸ್ಕ್‌ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ

    ನವದೆಹಲಿ: ಕಂಪನಿಯ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿರುವುದರಿಂದ ಭಾರತ ಭೇಟಿ ಮುಂದೂಡಿರುವುದಾಗಿ ಟೆಸ್ಲಾ ಕಂಪನಿಯ ಸಿಇಒ ಎಲೋನ್‌ ಮಸ್ಕ್‌ (Elon Musk) ತಿಳಿಸಿದ್ದಾರೆ.

    ಇದೇ ಏಪ್ರಿಲ್ 21 ಮತ್ತು 22ರಂದು ಎಲೋನ್‌ ಮಸ್ಕ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೇ ಭಾರತದಲ್ಲಿ ಟೆಸ್ಲಾ ಕಂಪನಿಯ ಘಟಕದ ಸ್ಥಾಪನೆ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದ್ರೆ ಎಲಾನ್‌ ಮಸ್ಕ್‌ ಭಾರತದ ಭೇಟಿ ವಿಳಂಬ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ದುರಾದೃಷ್ಟವಶಾತ್, ಕಂಪನಿಯ ಕೆಲಸದಲ್ಲಿ ನಿರತರಾಗಿರುವುದರಿಂದ ಭಾರತಕ್ಕೆ ಭೇಟಿ ನೀಡಲಾಗುತ್ತಿಲ್ಲ. ಆದರೆ ಇದೇ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

    ಸದ್ಯ ಭಾರತದಲ್ಲಿ ಎಲೋನ್‌ ಮಸ್ಕ್‌ ಟೆಸ್ಲಾ ಕಾರು ಉತ್ಪಾದನಾ ಘಟಕ ಸ್ಥಾಪಿಸಲು 2-3 ಶತಕೋಟಿ ಡಾಲರ್‌ ಹೂಡಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. 2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಎಲೋನ್‌ ಮಸ್ಕ್‌ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. ಇದನ್ನೂ ಓದಿ: ಬ್ಲೂ ವೇಲ್‌ ಚಾಲೆಂಜ್‌ಗೆ ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಲಿ

    2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಎಲೋನ್‌ ಮಸ್ಕ್‌ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದ್ದ ಈ ಪ್ರಕ್ರಿಯೆ ಮುಂದೂಡಲಾಗಿತ್ತು. ಇದೀಗ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಾತುಕತೆ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಫಿಲಿಪೈನ್ಸ್‌ಗೆ ಭಾರತದ ಬ್ರಹ್ಮೋಸ್ ರಫ್ತು – ಹಲವು ರಾಷ್ಟ್ರಗಳಿಂದ ಬೇಡಿಕೆ 

  • ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ʼ ಹಾಡಿಗೆ ನೂರಾರು ಟೆಸ್ಲಾ ಕಾರು ಡಾನ್ಸ್

    ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ʼ ಹಾಡಿಗೆ ನೂರಾರು ಟೆಸ್ಲಾ ಕಾರು ಡಾನ್ಸ್

    ವಾಷಿಂಗ್ಟನ್‌: ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ (Ayodhya Ram Mandir) ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ಎಲ್ಲೆಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ (Ram Paths) ಕೇಳಿಬರುತ್ತಿದೆ. ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ.

    ವಿದೇಶಗಳಲ್ಲೂ ಶ್ರೀರಾಮನ ಮಹಿಮೆ ಕಂಡುಬರುತ್ತಿವೆ. ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿವೆ. ಈ ನಡುವೆ ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ (Tesla Car), ಆದಿಪುರುಷ್‌ ಚಿತ್ರದ ʻಜೈ ಶ್ರೀರಾಮ್‌, ಜೈ ಶ್ರೀರಾಮ್‌ ರಾಜಾರಾಮ್‌ʼ ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ (Dance) ಮಾಡಿಸಿದೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣವನ್ನು 74% ಮುಸ್ಲಿಮರು ಸಂಭ್ರಮಿಸ್ತಾರೆ: ಮುಸ್ಲಿಂ ರಾಷ್ಟ್ರೀಯ ಮಂಚ್

    ವಿಶ್ವಹಿಂದೂ ಪರಿಷತ್‌ ಅಮೆರಿಕದ ಘಟಕ ಆಯೋಜಿಸಿದ್ದ ಮ್ಯೂಸಿಕಲ್‌ ಲೈಟ್‌ಶೋ ಕಾರ್ಯಕ್ರಮದಲ್ಲಿ ಟೆಸ್ಲಾ ಕಂಪನಿಯ ಕಾರುಗಳ ಲೈಟ್‍ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಈ ಹಿಂದೆಯೂ ನೂರಾರು ಕಾರುಗಳನ್ನು ಸಾಲು-ಸಾಲಾಗಿ ನಿಲ್ಲಿಸಿ, ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿಗೆ ಇದೇ ರೀತಿ ಡಾನ್ಸ್‌ ಮಾಡಿಸಲಾಗಿತ್ತು. ಇದೀಗ, ದೇಶದೆಲ್ಲೆಡೆ ಶ್ರೀರಾಮನ ಸದ್ದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ನೃತ್ಯದ ಮೂಲಕ ವಿಶೇಷ ಗೌರವವನ್ನು ಟೆಸ್ಲಾ ಕಂಪನಿ ಸಲ್ಲಿಸಿದೆ.

    ಈ ವೀಡಿಯೋವನ್ನು ಟೆಸ್ಲಾ ಕಂಪನಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದೆ. ಇದಕ್ಕೆ ರಾಮಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ 

  • ಗುಜರಾತ್‌ನಲ್ಲಿ ಟೆಸ್ಲಾ ಘಟಕ – ಜನವರಿಯಲ್ಲಿ ಘೋಷಣೆ ಸಾಧ್ಯತೆ

    ಗುಜರಾತ್‌ನಲ್ಲಿ ಟೆಸ್ಲಾ ಘಟಕ – ಜನವರಿಯಲ್ಲಿ ಘೋಷಣೆ ಸಾಧ್ಯತೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ತವರು ರಾಜ್ಯ ಗುಜರಾತ್‌ನಲ್ಲಿ (Gujarat) ಟೆಸ್ಲಾ (Tesla) ಕಂಪನಿ ತನ್ನ ಫ್ಯಾಕ್ಟರಿ ತೆರೆಯುವ ಸಾಧ್ಯತೆಯಿದೆ.

    ಟೆಸ್ಲಾ ಕಂಪನಿ ಭಾರತದಲ್ಲಿ ಘಟಕ ತೆರೆಯಲಿದೆ ಎಂಬ ಸುದ್ದಿ ಕೆಲ ವರ್ಷಗಳಿಂದ ಪ್ರಕಟವಾಗುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಎಲ್ಲಿ ಘಟಕ ತೆರೆಯಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಈಗ ಗುಜರಾತ್‌ನಲ್ಲಿ ಫ್ಯಾಕ್ಟರಿ ತೆರೆಯಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ಮೂಲದ ವೈಭವ್ ತನೇಜಾ ಟೆಸ್ಲಾ CFO – ಬೆಂಗಳೂರಿಗೆ ಇದೆ ಲಿಂಕ್‌

    ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್‌ ಗುಜರಾತ್‌ (Vibrant Gujarat) ಹೂಡಿಕೆ ಸಮಾವೇಶದಲ್ಲಿ ಈ ಬಗ್ಗೆ ಅಂತಿಮ ಘೋಷಣೆಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕಳೆದ ಕೆಲ ವರ್ಷಗಳಿಂದ ಅಟೋಮೊಬೈಲ್‌ ಕ್ಷೇತ್ರಕ್ಕೆ ಗುಜರಾತ್‌ ಉದ್ಯಮ ಸ್ನೇಹಿ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಟೆಸ್ಲಾ ಇಲ್ಲೇ ತನ್ನ ಘಟಕ ತೆರೆಯಲು ಮುಂದಾಗಿದೆ ಎನ್ನಲಾಗುತ್ತಿದೆ. ಸಾನಂದ್, ಬೆಚರಾಜಿ  ಅಥವಾ ಧೋಲೇರಾ ಪೈಕಿ ಒಂದು ಜಾಗದಲ್ಲಿ ಘಟಕ ನಿರ್ಮಾಣವಾಗಲಿದೆ. ಇದನ್ನೂ ಓದಿ: ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

    ಈಗಾಗಲೇ ಗುಜರಾತ್‌ನಲ್ಲಿ ಮಾರುತಿ ಸುಜುಕಿ, ಸಿಇಎಟಿ ಟಯರ್‌, ಫೋರ್ಡ್‌, ಹೋಂಡಾ, ಎಂಜಿ ಮೋಟಾರ್, ಜೆಸಿಬಿ ಕಂಪನಿಗಳು ಉತ್ಪಾದನಾ ಘಟಕವನ್ನು ತೆರೆದಿವೆ.

     

    2015ರಲ್ಲಿ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಟೆಸ್ಲಾ ಘಟಕಕ್ಕೆ ಭೇಟಿ ನೀಡಿ ಭಾರತದಲ್ಲೂ ಕಾರು ಉತ್ಪಾದನೆ ಮಾಡುವಂತೆ ಮಸ್ಕ್ ಬಳಿ ಮನವಿ ಮಾಡಿದ್ದರು. ಇದಾದ ಬಳಿಕ 2016ರಲ್ಲೇ ಟೆಸ್ಲಾ ಭಾರತಕ್ಕೆ ಬರುವುದಾಗಿ ಹೇಳಿತ್ತು. 2020ರ ಅಕ್ಟೋಬರ್‌ನಲ್ಲಿ ಟೆಸ್ಲಾದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕಂಪನಿಯು 2021ಕ್ಕೆ ಭಾರತಕ್ಕೆ ಕಾಲಿಡಲಿದೆ ಎಂದಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಜೊತೆ ತೆರಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದ್ದ ಕಾರಣ ಭಾರತದಲ್ಲಿ ಇನ್ನೂ ಟೆಸ್ಲಾ ಕಾರು ಬಿಡುಗಡೆಯಾಗಿಲ್ಲ.

     

  • Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

    Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

    ಮುಂಬೈ: ಯುಎಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಎಲೋನ್‌ ಮಸ್ಕ್‌ (Elon Musk) ನಡುವಿನ ಭೇಟಿಯ ಒಂದು ತಿಂಗಳ ನಂತರ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟೆಸ್ಲಾ ಕಂಪನಿ ತನ್ನ ಶಾಖೆಯನ್ನ ತೆರೆಯಲು ಜಾಗ ಪಡೆದುಕೊಂಡಿದೆ.

    ಟೆಸ್ಲಾ ಇಂಡಿಯಾ ಮೋಟಾರ್ (Tesla India Motors) ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ (Energy Private Limited) ಪುಣೆಯ ವಿಮಾನ ನಗರದಲ್ಲಿರುವ ಪಂಚಶೀಲ್ ಬ್ಯುಸಿನೆಸ್‌ ಪಾರ್ಕ್‌ನಲ್ಲಿ ಕಚೇರಿಗೆ ತೆರೆಯಲು ಸ್ಥಳವನ್ನ ಗುತ್ತಿಗೆ ಪಡೆದುಕೊಂಡಿದೆ.

    ಇದು ಭಾರತದ ಮಾರುಕಟ್ಟೆಗೆ ಟೆಸ್ಲಾ (Tesla) ಎಲೆಕ್ಟ್ರಿಕ್‌ ವಾಹನ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಾಗಿದೆ. ಈ ಹಿಂದೆ ಟೆಸ್ಲಾದ ಹಿರಿಯ ಅಧಿಕಾರಿಗಳು ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಲು ಇನ್ವೆಸ್ಟ್‌ ಇಂಡಿಯಾದ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿದ್ದರು. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    ಮಾಹಿತಿಗಳ ಪ್ರಕಾರ, ಟೆಸ್ಲಾದ ಭಾರತೀಯ ಅಂಗಸಂಸ್ಥೆಯು ಪಂಚಶೀಲ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಬಿ ವಿಂಗ್‌ನ ಮೊದಲ ಮಹಡಿಯಲ್ಲಿ 5,580 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಟೇಬಲ್‌ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ. ಒಪ್ಪಂದದ ಪ್ರಕಾರ 34.95 ಲಕ್ಷ ಭದ್ರತಾ ಠೇವಣಿಯೊಂದಿಗೆ ಮಾಸಿಕ 11.65 ಲಕ್ಷ ರೂ.ಗಳನ್ನು ಟೆಸ್ಲಾ ಸಂಸ್ಥೆ ಪಾವತಿಸಲಿದೆ. ಇದನ್ನೂ ಓದಿ: ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ಇದೇ 2023ರ ಅಕ್ಟೋಬರ್ 1 ರಿಂದ ಕಚೇರಿ ಸ್ಥಳದ ಬಾಡಿಗೆ ಪ್ರಾರಂಭವಾಗುತ್ತದೆ. ಈ ಲೀಸ್ ಒಪ್ಪಂದ 36 ತಿಂಗಳ ಲಾಕ್​ ಇನ್​ ಅವಧಿ ಹೊಂದಿದ್ದು, ಪ್ರತಿ ವರ್ಷ 5% ರಷ್ಟು ಬಾಡಿಗೆ ಹೆಚ್ಚಳ ಮಾಡುವ ಷರತ್ತಿಗೆ ಎರಡು ಕಂಪನಿಗಳು ಒಳಪಟ್ಟಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]