Tag: Tesla Car

  • ಕೆಂಪು ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

    ಕೆಂಪು ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಎಲಾನ್ ಮಸ್ಕ್ ‌(Elon Musk) ಕಂಪನಿಯ ಕೆಂಪು ಬಣ್ಣದ ಟೆಸ್ಲಾ ಕಾರನ್ನು (Tesla Car) ಖರೀದಿಸಿದ್ದಾರೆ. ಟ್ರಂಪ್ ಅವರು ಟೆಸ್ಲಾ ಮಾಡೆಲ್ S ಪ್ಲೈಡ್ ಕಾರಿನಲ್ಲಿ ಕುಳಿತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವೈರಲ್‌ ಆಗಿರುವ ವೀಡಿಯೊದಲ್ಲಿ ಮಸ್ಕ್ ಅವರು ಕಾರಿನ ವೈಶಿಷ್ಟ್ಯಗಳನ್ನು ಟ್ರಂಪ್‌ಗೆ ವಿವರಿಸಿದ್ದಾರೆ. ಇನ್ನೂ ಕಾರಿನ ಚಾಲಕನ ಸೀಟ್‌ನಲ್ಲಿ ಟ್ರಂಪ್‌ ಕುಳಿತಿದ್ದು, ಪಕ್ಕದ ಸೀಟ್‌ನಲ್ಲಿ ಮಸ್ಕ್‌ ಕುಳಿತಿದ್ದಾರೆ. ಆದರೆ ಟ್ರಂಪ್‌ ವಾಹನವನ್ನು ಚಾಲನೆ ಮಾಡಿ ಪರೀಕ್ಷಿಸಿಲ್ಲ.

    ಮಂಗಳವಾರ ಮಸ್ಕ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದ ಟ್ರಂಪ್, ನನಗೆ ಕಾರನ್ನು ಓಡಿಸಲು ಇಷ್ಟ. ಆದರೆ ಕಾರನ್ನು ಓಡಿಸಲು ಅನುಮತಿ ಇಲ್ಲ. ನಾನು ಬಹಳ ಸಮಯದಿಂದ ಕಾರು ಓಡಿಸಿಲ್ಲ. ಆದರೆ ಕಾರನ್ನು ಶ್ವೇತಭವನದಲ್ಲಿ ಇರಿಸುತ್ತೇನೆ. ನನ್ನ ಸಿಬ್ಬಂದಿಗೆ ಅದನ್ನು ಬಳಸಲು ಬಿಡುತ್ತೇನೆ ಎಂದಿದ್ದರು. ಇನ್ನೂ ಟೆಸ್ಲಾ ವಿರುದ್ಧ ಪ್ರತಿಭಟಿಸುವ ಜನರನ್ನು ದೇಶೀಯ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಬೇಕು ಎಂದು ಇದೇ ವೇಳೆ ಹೇಳಿದ್ದರು.

    ಟ್ರಂಪ್‌ಗೆ ವಾಹನ ಚಲಾಯಿಸಲು ಏಕೆ ಅವಕಾಶವಿಲ್ಲ?
    ಅಮೆರಿಕದಲ್ಲಿ ಹಾಲಿ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ. ಭದ್ರತಾ ಕಾರಣಗಳಿಗಾಗಿ ಮತ್ತು ರಾಷ್ಟ್ರದ ಉನ್ನತ ಅಧಿಕಾರಿಗಳನ್ನು ರಕ್ಷಿಸುವ ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾದ ಯುಎಸ್ ಸೀಕ್ರೆಟ್ ಸರ್ವಿಸ್‌ನಿಂದ ಈ ನಿಯಮ ಜಾರಿಗೊಳಿಸಲಾಗಿದೆ.

    1963 ರಲ್ಲಿ ಜಾನ್ ಎಫ್ ಕೆನಡಿಯವರ ಹತ್ಯೆಯು ಅಧ್ಯಕ್ಷೀಯ ಭದ್ರತೆಯಲ್ಲಿ ಒಂದು ಮಹತ್ವದ ತಿರುವು ನೀಡಿತು. ಇನ್ನೂ ಲಿಂಡನ್ ಜಾನ್ಸನ್ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸಿದ ಅಮೆರಿಕದ ಕೊನೆಯ ಅಧ್ಯಕ್ಷರಾಗಿದ್ದಾರೆ.

  • ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

    ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

    ಒಟ್ಟಾವಾ: ಕೆನಡಾದ (Canada) ಟೊರೊಂಟೊ ಬಳಿ ಡಿವೈಡರ್‌ಗೆ ಟೆಸ್ಲಾ ಕಾರು (Tesla Car) ಡಿಕ್ಕಿ (Accident) ಹೊಡೆದು ಬೆಂಕಿ ಹೊತ್ತಿ ಉರಿದ ಪರಿಣಾಮ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ಟೆಸ್ಲಾ ಸ್ವಯಂ ಚಾಲನಾ ಮಾದರಿಯದ್ದೇ ಎಂಬುದು ತಿಳಿದು ಬಂದಿಲ್ಲ.

    ಮೃತಪಟ್ಟವರನ್ನು ಗುಜರಾತ್‌ನ (Gujarat) ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇವರ ಇಬ್ಬರು ಸ್ನೇಹಿತರು ಸಹ ಸಾವಿಗೀಡಾಗಿದ್ದಾರೆ. ಕಾರಿನಲಿದ್ದ ಓರ್ವ ಮಹಿಳೆಯನ್ನು ಬೇರೆ ವಾಹನದಲ್ಲಿದ್ದ ಪ್ರಯಾಣಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ದಾವಣಗೆರೆ | ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಹೋಗಿದ್ದ ವ್ಯಕ್ತಿ ನೀರು ಪಾಲು

    ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸಲು ಹಲವಾರು ಜನ ತಮ್ಮ ಕಾರುಗಳು ನಿಲ್ಲಿಸಿ ಅಪಘಾತಕ್ಕೀಡಾದ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಅಷ್ಟರಲ್ಲಾಗಲೇ ನಾಲ್ವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಈ ವರ್ಷದ ಜುಲೈನಲ್ಲಿ ಕೆನಡಾದಲ್ಲಿ ಪಂಜಾಬ್‌ನ ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯಿಂದ ಆಚೆಗೆ ಪಲ್ಟಿಯಾಗಿ ಸಾವನ್ನಪ್ಪಿದರು. ಇದನ್ನೂ ಓದಿ: ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್

  • ಕರ್ನಾಟಕಕ್ಕೆ ಬರಲ್ವಾ ಟೆಸ್ಲಾ ಉತ್ಪಾದನಾ ಘಟಕ..?

    ಕರ್ನಾಟಕಕ್ಕೆ ಬರಲ್ವಾ ಟೆಸ್ಲಾ ಉತ್ಪಾದನಾ ಘಟಕ..?

    ಬೆಂಗಳೂರು: ಮತ್ತೊಂದು ಪ್ರತಿಷ್ಠಿತ ಉದ್ದಿಮೆ ರಾಜ್ಯದ ಕೈಜಾರುವ ಸಂಭವ ಇದೆ.

    ಅಮೆರಿಕಾದ ಟೆಸ್ಲಾ ಕಂಪನಿ (Tesla Company) ಆರಂಭದಲ್ಲಿ ಕರ್ನಾಟಕದಲ್ಲಿ ತಮ್ಮ ಉತ್ಪಾದನೆ ಆರಂಭಿಸಲು ಉತ್ಸುಕತೆ ತೋರಿತ್ತು. ಕರ್ನಾಟಕದಲ್ಲಿಯೇ ಮೊದಲ ಉತ್ಪಾದನಾ ಘಟಕ ಹೊಂದಲು ಟೆಸ್ಲಾ ಪ್ಲಾನ್ ಮಾಡಿದೆ ಎಂದು 2021ರ ಫೆಬ್ರವರಿ 14ರಂದು ವರದಿಯಾಗಿತ್ತು. ಆದ್ರೆ ದಿಢೀರ್ ಬೆಳವಣಿಗೆಯಲ್ಲಿ ಟೆಸ್ಲಾ ಕಂಪನಿ ಮಹಾರಾಷ್ಟ್ರ, ತಮಿಳುನಾಡು ಜೊತೆಗೆ ಗುಜರಾತ್‍ನಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ ಎಂದು ಬ್ಲೂಮ್‍ಬರ್ಗ್ ವರದಿ ಮಾಡಿದೆ.

    ಅಂದ ಹಾಗೇ ಟೆಸ್ಲಾ ಸಂಸ್ಥೆಯ ಯೋಜನೆಗಳು ಇನ್ನೂ ಅಂತಿಮಗೊಂಡಿಲ್ಲ. ಭವಿಷ್ಯದಲ್ಲಿ ಈ ಪ್ಲಾನ್ ಬದಲಾಗಬಹುದು ಎಂದು ಹೇಳಲಾಗಿದೆ. ಮುಂದಿನ ಜನವರಿಯಲ್ಲಿ ಅಹಮದಾಬಾದ್‍ನಲ್ಲಿ ನಡೆಯುವ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಈ ಬಗ್ಗೆ ಅಂತಿಮ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ. ಟೆಸ್ಲಾ ಕಂಪನಿ ಮತ್ತು ಮೋದಿ (Narendra Modi) ಸರ್ಕಾರದ ನಡುವೆ ಒಪ್ಪಂದ ಸಂಬಂಧ ಚರ್ಚೆಗಳು ನಡೀತಿವೆ. ಇದನ್ನೂ ಓದಿ: ಆಸ್ಟ್ರೇಲಿಯಾಗೆ ಬಂದಿಳಿದ ಚಾಂಪಿಯನ್ ಪ್ಯಾಟ್ ಕಮ್ಮಿನ್ಸ್- ಸ್ವಾಗತಿಸಲು ಜನವೇ ಇಲ್ಲ

  • ‘ನಾಟು ನಾಟು’ ಹಾಡಿಗೆ ಸಾವಿರಾರು ಟೆಸ್ಲಾ ಕಾರು ಡಾನ್ಸ್

    ‘ನಾಟು ನಾಟು’ ಹಾಡಿಗೆ ಸಾವಿರಾರು ಟೆಸ್ಲಾ ಕಾರು ಡಾನ್ಸ್

    ವಿಶ್ವದ ಪ್ರತಿಷ್ಠಿತ ಕಾರು ಕಂಪೆನಿ ಟೆಸ್ಲಾ (Tesla Car) ‘ನಾಟು ನಾಟು’ (Natu Natu) ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ (Dance)ಮಾಡಿಸಿದೆ. ನಾಟು ನಾಟು ಹಾಡಿಗೆ ಕಾರುಗಳ ಲೈಟ್‍ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಸಾವಿರಾರು ಕಾರುಗಳನ್ನು ಸಾಲು ಸಾಲಾಗಿ ನಿಲ್ಲಿಸಿ, ನಾಟು ನಾಟು ಹಾಡನ್ನು ಪ್ಲೇ ಮಾಡಲಾಗುತ್ತದೆ. ಕಾರಿನ ವಿಶೇಷ ಲೈಟ್‍ ಗಳು ಮ್ಯೂಸಿಕ್ ಗೆ ತಕ್ಕಂತೆ ಆಫ್ ಮತ್ತು ಆನ್ ಆಗುತ್ತವೆ. ಅದೊಂದು ರೀತಿಯಲ್ಲಿ ನೋಡುವುದಕ್ಕೆ ಹಬ್ಬದಂತೆ ಕಾಣುತ್ತದೆ. ಮ್ಯೂಸಿಕ್  ತಾಳಕ್ಕೆ ಸಖತ್ತಾಗಿಯೇ ಕಾರುಗಳು ಡಾನ್ಸ್ ಮಾಡುತ್ತವೆ.

    ಈ ವಿಡಿಯೋವನ್ನು ಆರ್.ಆರ್.ಆರ್ ಟ್ವಿಟ್ಟರ್ ಖಾತೆಯಿಂದ ಶೇರ್ ಮಾಡಲಾಗಿದ್ದು, ಟೆಸ್ಲಾ ಕಂಪೆನಿಯ ಒಡೆಯ ಎಲನ್ ಮಸ್ಕ್ ಈ ವಿಡಿಯೋವನ್ನು ಮೆಚ್ಚಿದ್ದಾರೆ. ಹಾರ್ಟ್ ಸಿಂಬಲ್ ಹಾಕಿದ್ದಾರೆ. ಅಲ್ಲದೇ, ನಾಟು ನಾಟು ಹಾಡಿನ ಬಗ್ಗೆಯೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದು ಆಸ್ಕರ್ ಪ್ರಶಸ್ತಿಗಾಗಿ ನೀಡಿದ ಗೌರವ ಎಂದು ಹೇಳಿಕೊಂಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ‘ಆರ್.ಆರ್.ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ಟೆಸ್ಲಾ ಕಂಪೆನಿ ಸಖತ್ ಐಡ್ಯಾ ಮಾಡಿದೆ. ಕುಣಿಯುವ ಲೈಟ್ ಮೂಲಕ ಗೌರವವನ್ನು ಸೂಚಿಸಿದೆ. ಈ ವಿಡಿಯೋಗೆ ಭಾರೀ ಲೈಕ್ಸ್ ಮತ್ತು ಕಾಮೆಂಟ್ ಕೂಡ ಬರುತ್ತಿವೆ.